Adi Parva: Chapter 31

ಆದಿ ಪರ್ವ: ಆಸ್ತೀಕ ಪರ್ವ

೩೧

ಪ್ರಮುಖ ಪನ್ನಗಗಳ ಹೆಸರುಗಳು (೧-೧೮).

01031001 ಶೌನಕ ಉವಾಚ

01031001a ಭುಜಂಗಮಾನಾಂ ಶಾಪಸ್ಯ ಮಾತ್ರಾ ಚೈವ ಸುತೇನ ಚ|

01031001c ವಿನತಾಯಾಸ್ತ್ವಯಾ ಪ್ರೋಕ್ತಂ ಕಾರಣಂ ಸೂತನಂದನ||

ಶೌನಕನು ಹೇಳಿದನು: “ಸೂತನಂದನ! ನಾಗಗಳು ಅವರ ತಾಯಿಯಿಂದ ಶಪಿಸಲ್ಪಟ್ಟ ಮತ್ತು ವಿನತೆಯು ತನ್ನ ಮಗನಿಂದ ಶಪಿಸಲ್ಪಟ್ಟ ಕಾರಣವನ್ನು ಹೇಳಿದೆ.

01031002a ವರಪ್ರದಾನಂ ಭರ್ತ್ರಾ ಚ ಕದ್ರೂವಿನತಯೋಸ್ತಥಾ|

01031002c ನಾಮನೀ ಚೈವ ತೇ ಪ್ರೋಕ್ತೇ ಪಕ್ಷಿಣೋರ್ವೈನತೇಯಯೋಃ||

ಕದ್ರು ಮತ್ತು ವಿನತೆಯರಿಗೆ ಅವರ ಪತಿಯ ವರಪ್ರದಾನ ಮತ್ತು ವಿನತೆಯ ಈರ್ವರು ಪಕ್ಷಿಪುತ್ರರ ಹೆಸರುಗಳನ್ನೂ ಹೇಳಿದ್ದೀಯೆ.

01031003a ಪನ್ನಗಾನಾಂ ತು ನಾಮಾನಿ ನ ಕೀರ್ತಯಸಿ ಸೂತಜ|

01031003c ಪ್ರಾಧಾನ್ಯೇನಾಪಿ ನಾಮಾನಿ ಶ್ರೋತುಮಿಚ್ಛಾಮಹೇ ವಯಂ||

ಸೂತಜ! ನಾಗಗಳ ಹೆಸರುಗಳನ್ನು ಹೇಳಲಿಲ್ಲ. ಪ್ರಧಾನ ನಾಗಗಳ ಹೆಸರುಗಳನ್ನಾದರೂ ಕೇಳ ಬಯಸುತ್ತೇನೆ.”

01031004 ಸೂತ ಉವಾಚ

01031004a ಬಹುತ್ವಾನ್ನಾಮಧೇಯಾನಿ ಭುಜಗಾನಾಂ ತಪೋಧನ|

01031004c ನ ಕೀರ್ತಯಿಷ್ಯೇ ಸರ್ವೇಷಾಂ ಪ್ರಾಧಾನ್ಯೇನ ತು ಮೇ ಶೃಣು||

ಸೂತನು ಹೇಳಿದನು: “ತಪೋಧನ! ನಾಗಗಳಿಗೆ ಹಲವಾರು  ನಾಮಧೇಯಗಳಿವೆ. ಎಲ್ಲ ಹೆಸರುಗಳನ್ನೂ ಹೇಳುವುದಿಲ್ಲ. ಪ್ರಧಾನವಾದವುಗಳ ಹೆಸರುಗಳನ್ನು ಹೇಳುತ್ತೇನೆ. ಕೇಳು.

01031005a ಶೇಷಃ ಪ್ರಥಮತೋ ಜಾತೋ ವಾಸುಕಿಸ್ತದನಂತರಂ|

01031005c ಐರಾವತಸ್ತಕ್ಷಕಶ್ಚ ಕರ್ಕೋಟಕಧನಂಜಯೌ||

01031006a ಕಾಲಿಯೋ ಮಣಿನಾಗಶ್ಚ ನಾಗಶ್ಚಾಪೂರಣಸ್ತಥಾ|

01031006c ನಾಗಸ್ತಥಾ ಪಿಂಜರಕ ಏಲಾಪತ್ರೋಽಥ ವಾಮನಃ||

01031007a ನೀಲಾನೀಲೌ ತಥಾ ನಾಗೌ ಕಲ್ಮಾಷಶಬಲೌ ತಥಾ|

01031007c ಆರ್ಯಕಶ್ಚಾದಿಕಶ್ಚೈವ ನಾಗಶ್ಚ ಶಲಪೋತಕಃ||

01031008a ಸುಮನೋಮುಖೋ ದಧಿಮುಖಸ್ತಥಾ ವಿಮಲಪಿಂಡಕಃ|

01031008c ಆಪ್ತಃ ಕೋಟನಕಶ್ಚೈವ ಶಂಖೋ ವಾಲಶಿಖಸ್ತಥಾ||

01031009a ನಿಷ್ಠ್ಯೂನಕೋ ಹೇಮಗುಹೋ ನಹುಷಃ ಪಿಂಗಲಸ್ತಥಾ|

01031009c ಬಾಹ್ಯಕರ್ಣೋ ಹಸ್ತಿಪದಸ್ತಥಾ ಮುದ್ಗರಪಿಂಡಕಃ||

01031010a ಕಂಬಲಾಶ್ವತರೌ ಚಾಪಿ ನಾಗಃ ಕಾಲೀಯಕಸ್ತಥಾ|

01031010c ವೃತ್ತಸಂವರ್ತಕೌ ನಾಗೌ ದ್ವೌ ಚ ಪದ್ಮಾವಿತಿ ಶ್ರುತೌ||

01031011a ನಾಗಃ ಶಂಖನಕಶ್ಚೈವ ತಥಾ ಚ ಸ್ಫಂಡಕೋಽಪರಃ|

01031011c ಕ್ಷೇಮಕಶ್ಚ ಮಹಾನಾಗೋ ನಾಗಃ ಪಿಂಡಾರಕಸ್ತಥಾ||

01031012a ಕರವೀರಃ ಪುಷ್ಪದಂಷ್ಟ್ರ ಏಳಕೋ ಬಿಲ್ವಪಾಂಡುಕಃ|

01031012c ಮೂಷಕಾದಃ ಶಂಖಶಿರಾಃ ಪೂರ್ಣದಂಷ್ಟ್ರೋ ಹರಿದ್ರಕಃ||

01031013a ಅಪರಾಜಿತೋ ಜ್ಯೋತಿಕಶ್ಚ ಪನ್ನಗಃ ಶ್ರೀವಹಸ್ತಥಾ|

01031013c ಕೌರವ್ಯೋ ಧೃತರಾಷ್ಟ್ರಶ್ಚ ಪುಷ್ಕರಃ ಶಲ್ಯಕಸ್ತಥಾ||

01031014a ವಿರಜಾಶ್ಚ ಸುಬಾಹುಶ್ಚ ಶಾಲಿಪಿಂಡಶ್ಚ ವೀರ್ಯವಾನ್|

01031014c ಹಸ್ತಿಭದ್ರಃ ಪಿಟರಕೋ ಮುಖರಃ ಕೋಣವಾಸನಃ||

01031015a ಕುಂಜರಃ ಕುರರಶ್ಚೈವ ತಥಾ ನಾಗಃ ಪ್ರಭಾಕರಃ|

01031015c ಕುಮುದಃ ಕುಮುದಾಕ್ಷಶ್ಚ ತಿತ್ತಿರಿರ್ಹಲಿಕಸ್ತಥಾ|

01031015e ಕರ್ಕರಾಕರ್ಕರೌ ಚೋಭೌ ಕುಂಡೋದರಮಹೋದರೌ||

() ಶೇಷ (೨) ವಾಸುಕಿ (೩) ಐರಾವತ (೪) ತಕ್ಷಕ (೫) ಕಾರ್ಕೋಟಕ (೬) ಧನಂಜಯ (೭) ಕಾಲಿಯ (೮) ಮಣಿ (೯) ಪೂರಣ (೧೦) ಪಿಂಜರಕ (೧೧) ಏಲಾಪತ್ರ (೧೨) ವಾಮನ (೧೩) ನೀಲ (೧೪) ಅನಿಲ (೧೫) ಕಲ್ಮಾಶ (೧೬) ಬಲ (೧೭) ಆರ್ಯಕ (೧೮) ಅದಿಕ (೧೯) ಶಲಪೋತಕ (೨೦) ಸುಮನೋಮುಖ (೨೧) ದಧಿಮುಖ (೨೨) ವಿಮಲಪಿಂಡಕ (೨೩) ಆಪ್ತ (೨೪) ಕೋಟನಕ (೨೫) ಶಂಖ (೨೬) ವಾಲಶಿಖ (೨೭) ನಿಷ್ಠೂನಕ (೨೮) ಹೇಮಗುಹ (೨೯) ನಹುಷ (೩೦) ಪಿಂಗಲ (೩೧) ಬಾಹ್ಯಕರ್ಣ (೩೨) ಹಸ್ತಿಪದ (೩೩) ಮುದ್ಗರಪಿಂಡಕ (೩೪) ಕಂಬಲ (೩೫) ಅಶ್ವತರ (೩೬) ಕಾಲೀಯಕ (೩೭) ವೃತ್ತ (೩೮) ಸಂವರ್ತಕ (೩೯) ಪದ್ಮ (೪೦) ಅವಿತಿ (೪೧) ಶಂಖನಕ (೪೨) ಸ್ಪಂಡಕ (೪೩) ಅಪರ (೪೪) ಕ್ಷೇಮಕಕ್ಷ (೪೫) ಪಿಂಡಾರಕ (೪೬) ಕರವೀರ (೪೭) ಪುಷ್ಪದಂಷ್ಟ್ರ (೪೮) ಏಳಕ (೪೯) ಬಿಲ್ವಪಾಂಡುಕ (೫೦) ಮೂಷಕಾದ (೫೧) ಶಂಖಶಿರ (೫೨) ಪೂರ್ಣದಂಷ್ಟ್ರ (೫೩) ಹರಿದ್ರಕ (೫೪) ಅಪರಾಜಿತ (೫೫) ಜ್ಯೋತಿಕ (೫೬) ಪನ್ನಗ (೫೭) ಶ್ರೀವಹ (೫೮) ಕೌರವ್ಯ (೫೯) ಧೃತರಾಷ್ಟ್ರ (೬೦) ಪುಷ್ಕರ (೬೧) ಶಲ್ಯಕ (೬೨) ವಿರಜ (೬೩) ಸುಬಾಹು (೬೪) ಶಾಲಿಪಿಂಡ (೬೫) ಹಸ್ತಿಭದ್ರ (೬೬) ಪಿಠರಕ (೬೭) ಮುಖರ (೬೮) ಕೋಣವಾಸನ (೬೯) ಕುಂಜರ (೭೦) ಕುರರ (೭೧) ಪ್ರಭಾಕರ (೭೨) ಕುಮುದ (೭೩) ಕುಮುದಾಕ್ಷ (೭೪) ತಿತ್ತಿರಿ (೭೫) ಹಲಿಕ (೭೬) ಕರ್ಕರ (೭೭) ಅಕರ್ಕರ (೭೮) ಕುಂಡೋದರ (೭೯) ಮಹೋದರ

01031016a ಏತೇ ಪ್ರಾಧಾನ್ಯತೋ ನಾಗಾಃ ಕೀರ್ತಿತಾ ದ್ವಿಜಸತ್ತಮ|

01031016c ಬಹುತ್ವಾನ್ನಾಮಧೇಯಾನಾಮಿತರೇ ನ ಪ್ರಕೀರ್ತಿತಾಃ||

ದ್ವಿಜಸತ್ತಮ! ಇವುಗಳು ಪ್ರಧಾನ ನಾಗಗಳ ಹೆಸರುಗಳು. ಇನ್ನೂ ಇತರ ಬಹಳಷ್ಟು ನಾಗಗಳ ನಾಮದೇಯಗಳನ್ನು ಹೇಳಿಲ್ಲ.

01031017a ಏತೇಷಾಂ ಪ್ರಸವೋ ಯಶ್ಚ ಪ್ರಸವಸ್ಯ ಚ ಸಂತತಿಃ|

01031017c ಅಸಂಖ್ಯೇಯೇತಿ ಮತ್ವಾ ತಾನ್ನ ಬ್ರವೀಮಿ ದ್ವಿಜೋತ್ತಮ||

ಇವರ ಮಕ್ಕಳು ಮೊಮ್ಮಕ್ಕಳ ಸಂತತಿ ಅಸಂಖ್ಯ. ಆದುದರಿಂದ ದ್ವಿಜೋತ್ತಮ! ಅವುಗಳನ್ನು ಹೇಳುವುದಿಲ್ಲ.

01031018a ಬಹೂನೀಹ ಸಹಸ್ರಾಣಿ ಪ್ರಯುತಾನ್ಯರ್ಬುದಾನಿ ಚ|

01031018c ಅಶಕ್ಯಾನ್ಯೇವ ಸಂಖ್ಯಾತುಂ ಭುಜಗಾನಾಂ ತಪೋಧನ||

ತಪೋಧನ! ನಾಗಗಳು ಬಹಳ ಸಹಸ್ರ ಸಂಖ್ಯೆಗಳಲ್ಲಿವೆ. ಅವುಗಳನ್ನು ಎಣಿಸಲೂ ಅಶಕ್ಯ.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಸರ್ಪನಾಮಕಥನೋ ನಾಮ ಏಕತ್ರಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಸರ್ಪನಾಮಕಥನ ಎನ್ನುವ ಮೂವತ್ತೊಂದನೇ ಅಧ್ಯಾಯವು.

Leave a Reply

Your email address will not be published. Required fields are marked *