ಆದಿ ಪರ್ವ: ಆಸ್ತೀಕ ಪರ್ವ
೩೦
ಗರುಡನು ಇಂದ್ರನ ಮಿತ್ರತ್ವವನ್ನು ಸ್ವೀಕರಿಸಿದುದು (೧-೫). ಗರುಡನಿಗೆ ಇಂದ್ರನ ವರದಾನ (೬-೧೦). ಗರುಡನು ಅಮೃತವನ್ನು ಸರ್ಪಗಳಿಗೆ ಒಪ್ಪಿಸುವುದು, ಇಂದ್ರನು ಅದನ್ನು ಅಪಹರಿಸುವುದು (೧೧-೨೦).
01030001 ಗರುಡ ಉವಾಚ
01030001a ಸಖ್ಯಂ ಮೇಽಸ್ತು ತ್ವಯಾ ದೇವ ಯಥೇಚ್ಛಸಿ ಪುರಂದರ|
01030001c ಬಲಂ ತು ಮಮ ಜಾನೀಹಿ ಮಹಚ್ಚಾಸಹ್ಯಮೇವ ಚ||
ಗರುಡನು ಹೇಳಿದನು: “ಪುರಂದರ! ನಿನ್ನ ಬಯಕೆಯಂತೆ ನಮ್ಮೀರ್ವರಲ್ಲಿ ಸಖ್ಯವಿರಲಿ. ನನ್ನ ಬಲವು ಮಹತ್ತರ ಮತ್ತು ಅಸಹನೀಯ ಎಂದು ತಿಳಿ.
01030002a ಕಾಮಂ ನೈತತ್ಪ್ರಶಂಸಂತಿ ಸಂತಃ ಸ್ವಬಲಸಂಸ್ತವಂ|
01030002c ಗುಣಸಂಕೀರ್ತನಂ ಚಾಪಿ ಸ್ವಯಮೇವ ಶತಕ್ರತೋ||
ಶತಕ್ರತು! ತನ್ನನ್ನು ತಾನೇ ಹೊಗಳಿಕೊಳ್ಳುವುದನ್ನು ಮತ್ತು ತನ್ನ ಬಲವನ್ನು ತಾನೇ ಪ್ರಶಂಸೆ ಮಾಡುವುದನ್ನು ಸಂತರು ಒಪ್ಪಿಕೊಳ್ಳುವುದಿಲ್ಲ.
01030003a ಸಖೇತಿ ಕೃತ್ವಾ ತು ಸಖೇ ಪೃಷ್ಟೋ ವಕ್ಷ್ಯಾಮ್ಯಹಂ ತ್ವಯಾ|
01030003c ನ ಹ್ಯಾತ್ಮಸ್ತವಸಮ್ಯುಕ್ತಂ ವಕ್ತವ್ಯಮನಿಮಿತ್ತತಃ||
ಸಖ! ನಾವೀರ್ವರೂ ಈಗ ಸ್ನೇಹಿತರಾದುದರಿಂದ ನೀನು ಕೇಳಿದೆಯೆಂದು ಸ್ವ ಸ್ತುತಿಯು ಒಳ್ಳೆಯದಲ್ಲದಿದ್ದರೂ ಹೇಳುತ್ತಿದ್ದೇನೆ.
01030004a ಸಪರ್ವತವನಾಮುರ್ವೀಂ ಸಸಾಗರವನಾಮಿಮಾಂ|
01030004c ಪಕ್ಷನಾಡ್ಯೈಕಯಾ ಶಕ್ರ ತ್ವಾಂ ಚೈವಾತ್ರಾವಲಂಬಿನಂ||
ಶಕ್ರ! ನಾನು ಪರ್ವತ, ಸಮುದ್ರ, ವನ ಮತ್ತು ನಿನ್ನನ್ನೂ ಸೇರಿ ಈ ಭೂಮಿಯನ್ನು ನನ್ನ ರೆಕ್ಕೆಯ ಒಂದು ಪುಕ್ಕದ ಮೇಲೆ ಹೊರಬಲ್ಲೆ.
01030005a ಸರ್ವಾನ್ಸಂಪಿಂಡಿತಾನ್ವಾಪಿ ಲೋಕಾನ್ಸಸ್ಥಾಣುಜಂಗಮಾನ್|
01030005c ವಹೇಯಮಪರಿಶ್ರಾಂತೋ ವಿದ್ಧೀದಂ ಮೇ ಮಹದ್ಬಲಂ||
ಸರ್ವ ಲೋಕಗಳನ್ನೂ ಅವುಗಳಲ್ಲಿರುವ ಸ್ಥಾಣು ಜಂಗಮಗಳನ್ನೂ ಸೇರಿ ಆಯಾಸವಿಲ್ಲದೇ ಹೊರಬಲ್ಲೆ. ಇದು ನನ್ನ ಮಹಾ ಬಲವೆಂದು ತಿಳಿ.””
01030006 ಸೂತ ಉವಾಚ
01030006a ಇತ್ಯುಕ್ತವಚನಂ ವೀರಂ ಕಿರಿಟೀ ಶ್ರೀಮತಾಂ ವರಃ|
01030006c ಆಹ ಶೌನಕ ದೇವೇಂದ್ರಃ ಸರ್ವಭೂತಹಿತಃ ಪ್ರಭುಃ||
ಸೂತನು ಹೇಳಿದನು: “ಶೌನಕ! ವೀರನ ಈ ಮಾತುಗಳಿಗೆ ಶ್ರೀಮಂತ ಶ್ರೇಷ್ಠ ವೀರ ಕಿರೀಟೀ ಸರ್ವಭೂತಹಿತ ಪ್ರಭು ದೇವೇಂದ್ರನು ಉತ್ತರಿಸಿದನು:
01030007a ಪ್ರತಿಗೃಹ್ಯತಾಮಿದಾನೀಂ ಮೇ ಸಖ್ಯಮಾನಂತ್ಯಮುತ್ತಮಂ|
01030007c ನ ಕಾರ್ಯಂ ತವ ಸೋಮೇನ ಮಮ ಸೋಮಃ ಪ್ರದೀಯತಾಂ|
01030007e ಅಸ್ಮಾಂಸ್ತೇ ಹಿ ಪ್ರಬಾಧೇಯುರ್ಯೇಭ್ಯೋ ದದ್ಯಾದ್ಭವಾನಿಮಂ||
“ನಿರಂತರವೂ ಉತ್ತಮವೂ ಆದ ನನ್ನ ಈ ಸಖ್ಯವನ್ನು ಪ್ರತಿಗ್ರಹಿಸು. ನಿನಗೆ ಸೋಮವು ಯಾವ ಪ್ರಯೋಜನಕ್ಕೂ ಬಾರದಿದ್ದರೆ ಸೋಮವನ್ನು ನನಗೆ ಹಿಂದಿರುಗಿಸು. ನೀನು ಇದನ್ನು ಯಾರಿಗೆ ಕೊಡುತ್ತೀಯೋ ಅವರು ನಮ್ಮ ಜೊತೆ ಯಾವಾಗಲೂ ಹೊಡೆದಾಡುತ್ತಾರೆ.”
01030008 ಗರುಡ ಉವಾಚ
01030008a ಕಿಂಚಿತ್ಕಾರಣಮುದ್ದಿಶ್ಯ ಸೋಮೋಽಯಂ ನೀಯತೇ ಮಯಾ|
01030008c ನ ದಾಸ್ಯಾಮಿ ಸಮಾದಾತುಂ ಸೋಮಂ ಕಸ್ಮೈ ಚಿದಪ್ಯಹಂ||
ಗರುಡನು ಹೇಳಿದನು: “ಯಾವುದೋ ಒಂದು ಉದ್ದೇಶದಿಂದ ನಾನು ಈ ಸೋಮವನ್ನು ಒಯ್ಯುತ್ತಿದ್ದೇನೆ. ಈ ಸೋಮವನ್ನು ನಾನು ಯಾರಿಗೂ ಕುಡಿಯಲು ಕೊಡುವುದಿಲ್ಲ.
01030009a ಯತ್ರೇಮಂ ತು ಸಹಸ್ರಾಕ್ಷ ನಿಕ್ಷಿಪೇಯಮಹಂ ಸ್ವಯಂ|
01030009c ತ್ವಮಾದಾಯ ತತಸ್ತೂರ್ಣಂ ಹರೇಥಾಸ್ತ್ರಿದಶೇಶ್ವರ||
ಸಹಸ್ರಾಕ್ಷ! ತ್ರಿದಶೇಶ್ವರ! ನಾನು ಇದನ್ನು ಕೆಳಗೆ ಇಟ್ಟಕೂಡಲೇ ಅದನ್ನು ನೀನು ಸ್ವತಃ ಅಪಹರಿಸಿ ತೆಗೆದುಕೊಂಡು ಹೋಗು.”
01030010 ಶಕ್ರ ಉವಾಚ
01030010a ವಾಕ್ಯೇನಾನೇನ ತುಷ್ಟೋಽಹಂ ಯತ್ತ್ವಯೋಕ್ತಮಿಹಾಂಡಜ|
01030010c ಯದಿಚ್ಛಸಿ ವರಂ ಮತ್ತಸ್ತದ್ಗೃಹಾಣ ಖಗೋತ್ತಮ||
ಶಕ್ರನು ಹೇಳಿದನು: “ಅಂಡಜ! ನಿನ್ನ ಈ ಮಾತುಗಳಿಂದ ನಾನು ಸಂತುಷ್ಟನಾಗಿದ್ದೇನೆ. ಖಗೋತ್ತಮ! ನನ್ನಿಂದ ನಿನಗಿಷ್ಟವಾದ ವರವನ್ನು ಪಡೆದುಕೋ.””
01030011 ಸೂತ ಉವಾಚ
01030011a ಇತ್ಯುಕ್ತಃ ಪ್ರತ್ಯುವಾಚೇದಂ ಕದ್ರೂಪುತ್ರಾನನುಸ್ಮರನ್|
01030011c ಸ್ಮೃತ್ವಾ ಚೈವೋಪಧಿಕೃತಂ ಮಾತುರ್ದಾಸ್ಯನಿಮಿತ್ತತಃ||
ಸೂತನು ಹೇಳಿದನು: “ಈ ರೀತಿ ಕೇಳಲ್ಪಟ್ಟಾಗ ಅವನು ಕದ್ರುವಿನ ಮಕ್ಕಳನ್ನೂ ಮತ್ತು ಅವರ ಮೋಸದಿಂದ ತನ್ನ ತಾಯಿಗಾದ ದಾಸತ್ವವನ್ನೂ ನೆನೆಸಿಕೊಂಡು ಹೇಳಿದನು:
01030012a ಈಶೋಽಹಮಪಿ ಸರ್ವಸ್ಯ ಕರಿಷ್ಯಾಮಿ ತು ತೇಽರ್ಥಿತಾಂ|
01030012c ಭವೇಯುರ್ಭುಜಗಾಃ ಶಕ್ರ ಮಮ ಭಕ್ಷ್ಯಾ ಮಹಾಬಲಾಃ||
“ಶಕ್ರ! ನಾನು ಎಲ್ಲವನ್ನು ಮಾಡಲು ಶಕ್ಯನಿದ್ದರೂ ನೀನು ಹೇಳಿದೆಯೆಂದು ಕೇಳುತ್ತಿದ್ದೇನೆ. ಮಹಾಬಲ ನಾಗಗಳು ನನ್ನ ಆಹಾರವಾಗಲಿ.”
01030013a ತಥೇತ್ಯುಕ್ತ್ವಾನ್ವಗಚ್ಛತ್ತಂ ತತೋ ದಾನವಸೂದನಃ|
01030013c ಹರಿಷ್ಯಾಮಿ ವಿನಿಕ್ಷಿಪ್ತಂ ಸೋಮಮಿತ್ಯನುಭಾಷ್ಯ ತಂ||
“ಹಾಗೆಯೇ ಆಗಲಿ. ನೀನು ಸೋಮವನ್ನು ಕೆಳಗಿಟ್ಟಕೂಡಲೇ ನಾನು ಅಪಹರಿಸುತ್ತೇನೆ!”ಎಂದು ಹೇಳಿ ಆ ದಾನವ ಸೂದನನು ಹೊರಟುಹೋದನು.
01030014a ಆಜಗಾಮ ತತಸ್ತೂರ್ಣಂ ಸುಪರ್ಣೋ ಮಾತುರಂತಿಕಂ|
01030014c ಅಥ ಸರ್ಪಾನುವಾಚೇದಂ ಸರ್ವಾನ್ಪರಮಹೃಷ್ಟವತ್||
ತಕ್ಷಣವೇ ಸುಪರ್ಣನು ವೇಗವಾಗಿ ತನ್ನ ತಾಯಿಯ ಬಳಿ ಬಂದು ಪರಮ ಹರ್ಷಿತನಾಗಿ ಸರ್ವ ಸರ್ಪಗಳಿಗೂ ಹೇಳಿದನು:
01030015a ಇದಮಾನೀತಮಮೃತಂ ನಿಕ್ಷೇಪ್ಸ್ಯಾಮಿ ಕುಶೇಷು ವಃ|
01030015c ಸ್ನಾತಾ ಮಂಗಲಸಮ್ಯುಕ್ತಾಸ್ತತಃ ಪ್ರಾಶ್ನೀತ ಪನ್ನಗಾಃ||
“ಇಗೋ ನಾನು ಅಮೃತವನ್ನು ತಂದಿದ್ದೇನೆ. ಕುಶಗಳ ಮಧ್ಯೆ ಇಡುತ್ತಿದ್ದೇನೆ. ಪನ್ನಗಗಳೇ! ಮಂಗಳ ಸ್ನಾನವನ್ನು ಮಾಡಿ ಇದನ್ನು ಕುಡಿಯಿರಿ.
01030016a ಅದಾಸೀ ಚೈವ ಮಾತೇಯಮದ್ಯಪ್ರಭೃತಿ ಚಾಸ್ತು ಮೇ|
01030016c ಯಥೋಕ್ತಂ ಭವತಾಮೇತದ್ವಚೋ ಮೇ ಪ್ರತಿಪಾದಿತಂ||
ನೀವು ನನಗೆ ಹೇಳಿದುದನ್ನು ನಾನು ಮಾಡಿದ್ದೇನೆ. ನೀವು ಮಾತುಕೊಟ್ಟಹಾಗೆ ಇಂದಿನಿಂದ ನನ್ನ ತಾಯಿಯು ಅದಾಸಿಯಾಗುತ್ತಾಳೆ.”
01030017a ತತಃ ಸ್ನಾತುಂ ಗತಾಃ ಸರ್ಪಾಃ ಪ್ರತ್ಯುಕ್ತ್ವಾ ತಂ ತಥೇತ್ಯುತ|
01030017c ಶಕ್ರೋಽಪ್ಯಮೃತಮಾಕ್ಷಿಪ್ಯ ಜಗಾಮ ತ್ರಿದಿವಂ ಪುನಃ||
“ಹಾಗೆಯೇ ಆಗಲಿ!” ಎಂದು ಸರ್ಪಗಳು ಸ್ನಾನಕ್ಕೆಂದು ಹೋದವು. ಆಗ ಶಕ್ರನು ಅಮೃತವನ್ನು ಎತ್ತಿಕೊಂಡು ಪುನಃ ಸ್ವರ್ಗಕ್ಕೆ ಕೊಂಡೊಯ್ದನು.
01030018a ಅಥಾಗತಾಸ್ತಮುದ್ದೇಶಂ ಸರ್ಪಾಃ ಸೋಮಾರ್ಥಿನಸ್ತದಾ|
01030018c ಸ್ನಾತಾಶ್ಚ ಕೃತಜಪ್ಯಾಶ್ಚ ಪ್ರಹೃಷ್ಟಾಃ ಕೃತಮಂಗಲಾಃ||
ಸ್ನಾನ, ಜಪ ಮತ್ತು ಮಂಗಲ ಕಾರ್ಯಗಳನ್ನು ಮುಗಿಸಿ ಪ್ರಹೃಷ್ಟರಾಗಿ ಸೋಮಾರ್ಥಿ ಸರ್ಪಗಳು ಆ ಸ್ಥಳಕ್ಕೆ ಹಿಂದಿರುಗಿದರು.
01030019a ತದ್ವಿಜ್ಞಾಯ ಹೃತಂ ಸರ್ಪಾಃ ಪ್ರತಿಮಾಯಾಕೃತಂ ಚ ತತ್|
01030019c ಸೋಮಸ್ಥಾನಮಿದಂ ಚೇತಿ ದರ್ಭಾಂಸ್ತೇ ಲಿಲಿಹುಸ್ತದಾ||
ಸೋಮವನ್ನು ಇರಿಸಿದ್ದ ದರ್ಭೆಗಳು ಖಾಲಿಯಾಗಿದ್ದುದನ್ನು ಸರ್ಪಗಳು ಕಂಡು ಮೋಸದಿಂದ ಅದನ್ನು ಕೊಂಡೊಯ್ಯಲಾಗಿದೆ ಎಂದು ತಿಳಿದರು.
01030020a ತತೋ ದ್ವೈಧೀಕೃತಾ ಜಿಹ್ವಾ ಸರ್ಪಾಣಾಂ ತೇನ ಕರ್ಮಣಾ|
01030020c ಅಭವಂಶ್ಚಾಮೃತಸ್ಪರ್ಶಾದ್ದರ್ಭಾಸ್ತೇಽಥ ಪವಿತ್ರಿಣಃ||
ಆಗ ಅವರು ಅಮೃತವನ್ನು ಇಟ್ಟಿದ್ದ ದರ್ಭೆಗಳನ್ನು ನೆಕ್ಕ ತೊಡಗಿದರು ಮತ್ತು ಇದರಿಂದ ಅವುಗಳ ನಾಲಿಗೆಗಳು ಸೀಳಿಹೋದವು. ಇದೇ ಕಾರಣದಿಂದಲೇ ದರ್ಭೆಗಳು ಪವಿತ್ರವೆನಿಸಿಕೊಂಡವು.
01030021a ತತಃ ಸುಪರ್ಣಃ ಪರಮಪ್ರಹೃಷ್ಟವಾನ್
ವಿಹೃತ್ಯ ಮಾತ್ರಾ ಸಹ ತತ್ರ ಕಾನನೇ|
01030021c ಭುಜಂಗಭಕ್ಷಃ ಪರಮಾರ್ಚಿತಃ ಖಗೈಃ
ಅಹೀನಕೀರ್ತಿರ್ವಿನತಾಮನಂದಯತ್||
ನಂತರ ಸುಪರ್ಣನು ಪರಮ ಹರ್ಷಿತನಾಗಿ ತನ್ನ ತಾಯಿಯೊಂದಿಗೆ ಆ ಕಾನನದಲ್ಲಿ ವಾಸಿಸಿದನು. ಸರ್ಪಗಳನ್ನು ಭಕ್ಷಿಸುವುದರ ಮೂಲಕ ಮತ್ತು ಇನ್ನೂ ಇತರ ಮಹಾಕಾರ್ಯಗಳನ್ನು ಎಸಗುವುದರ ಮೂಲಕ ಎಲ್ಲ ಪಕ್ಷಿಗಳಿಂದ ಪೂಜಿಸಲ್ಪಟ್ಟ ಗರುಡನು ತನ್ನ ತಾಯಿಯನ್ನು ಸಂತಸಗೊಳಿಸಿದನು.
01030022a ಇಮಾಂ ಕಥಾಂ ಯಃ ಶೃಣುಯಾನ್ನರಃ ಸದಾ
ಪಥೇತ ವಾ ದ್ವಿಜಜನಮುಖ್ಯಸಂಸದಿ|
01030022c ಅಸಂಶಯಂ ತ್ರಿದಿವಮಿಯಾತ್ಸ ಪುಣ್ಯಭಾಗ್
ಮಹಾತ್ಮನಃ ಪತಗಪತೇಃ ಪ್ರಕೀರ್ತನಾತ್||
ಈ ಕಥೆಯನ್ನು ಯಾವ ನರನು ಕೇಳುತ್ತಾನೋ ಅಥವಾ ಮುಖ್ಯ ದ್ವಿಜನರ ಸನ್ನಿದಿಯಲ್ಲಿ ಸದಾ ಓದುತ್ತಾನೋ ಅವನು ಗರುಡನ ಸಂಕೀರ್ತನೆಯಿಂದ ನಿಸ್ಸಂಶಯವಾಗಿ ಪುಣ್ಯವಂತನಾಗಿ ಸ್ವರ್ಗವನ್ನು ಸೇರುತ್ತಾನೆ.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಸುಪರ್ಣೇ ತ್ರಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದ ಆದಿಪರ್ವದಲ್ಲಿ ಆಸ್ತೀಕಪರ್ವದಲ್ಲಿ ಸುಪರ್ಣದಲ್ಲಿ ಮೂವತ್ತನೆಯ ಅಧ್ಯಾಯವು.