ಆದಿ ಪರ್ವ: ಆಸ್ತೀಕ ಪರ್ವ
೨೬
ವಾಲಖಿಲ್ಯರಿರುವ ಮರದ ರೆಂಬೆಯನ್ನೂ ಹಿಡಿದು ಗರುಡನು ಹಾರಿದುದು (೧-೧೫). ಮರದ ರೆಂಬೆಯನ್ನು ಪರ್ವತದ ಮೇಲಿರಿಸಿ ಗರುಡನು ಆನೆ-ಕಚ್ಛಪರನ್ನು ಭಕ್ಷಿಸುವುದು (೧೬-೨೫). ದೇವತೆಗಳಿಗೆ ಅಪಶಕುನಗಳು ಕಂಡುಬರುವುದು, ದೇವತೆಗಳು ಆಯುಧಗಳನ್ನು ಧರಿಸಿದುದು (೨೬-೪೫).
01026001 ಸೂತ ಉವಾಚ
01026001a ಸ್ಪೃಷ್ಟಮಾತ್ರಾ ತು ಪದ್ಭ್ಯಾಂ ಸಾ ಗರುಡೇನ ಬಲೀಯಸಾ|
01026001c ಅಭಜ್ಯತ ತರೋಃ ಶಾಖಾ ಭಗ್ನಾಂ ಚೈನಾಮಧಾರಯತ್||
ಸೂತನು ಹೇಳಿದನು: “ಮಹಾಬಲಿ ಗರುಡನು ತನ್ನ ಪಂಜುಗಳಿಂದ ಆ ರೆಂಬೆಯನ್ನು ಮುಟ್ಟಿದಾಕ್ಷಣವೇ ಅದು ಮುರಿಯಲು ಅವನು ಆ ತುಂಡಾದ ರೆಂಬೆಯನ್ನೂ ಹಿಡಿದುಕೊಂಡನು.
01026002a ತಾಂ ಭಗ್ನಾಂ ಸ ಮಹಾಶಾಖಾಂ ಸ್ಮಯನ್ಸಮವಲೋಕಯನ್|
01026002c ಅಥಾತ್ರ ಲಂಬತೋಽಪಶ್ಯದ್ವಾಲಖಿಲ್ಯಾನಧೋಮುಖಾನ್||
ತುಂಡಾದ ಆ ಮಹಾಶಾಖೆಯನ್ನು ಮುಗುಳ್ನಗುತ್ತಾ ನೋಡುತ್ತಿರಲು ಅಲ್ಲಿ ಅಧೋಮುಖರಾಗಿ ನೇಲುತ್ತಿದ್ದ ವಾಲಖಿಲ್ಯರನ್ನು ಕಂಡನು.
01026003a ಸ ತದ್ವಿನಾಶಸಂತ್ರಾಸಾದನುಪತ್ಯ ಖಗಾಧಿಪಃ|
01026003c ಶಾಖಾಮಾಸ್ಯೇನ ಜಗ್ರಾಹ ತೇಷಾಮೇವಾನ್ವವೇಕ್ಷಯಾ|
01026003e ಶನೈಃ ಪರ್ಯಪತತ್ಪಕ್ಷೀ ಪರ್ವತಾನ್ಪ್ರವಿಶಾತಯನ್||
ಅವರ ನಾಶದ ಭಯಪಟ್ಟ ಖಗಾಧಿಪನು ಅವರನ್ನು ಉಳಿಸುವ ಅಪೇಕ್ಷೆಯಿಂದ ಆ ರೆಂಬೆಯನ್ನು ತನ್ನ ಕೊಕ್ಕಿನಲ್ಲಿ ಹಿಡಿದು, ಪರ್ವತವನ್ನೇ ನಡುಗಿಸುತ್ತಾ ನಿಧಾನವಾಗಿ ಮೇಲೇರಿದನು.
01026004a ಏವಂ ಸೋಽಭ್ಯಪತದ್ದೇಶಾನ್ಬಹೂನ್ಸಗಜಕಚ್ಛಪಃ|
01026004c ದಯಾರ್ಥಂ ವಾಲಖಿಲ್ಯಾನಾಂ ನ ಚ ಸ್ಥಾನಮವಿಂದತ||
ಈ ರೀತಿ ಆನೆ-ಕಚ್ಛಪ-ವಾಲಖಿಲ್ಯರನ್ನು ಹಿಡಿದು ಹಾರುತ್ತಿದ್ದ ಅವನು ಬಹಳಷ್ಟು ದೇಶಗಳನ್ನು ನೋಡಿದರೂ ಇಳಿಯಲು ಯೋಗ್ಯವಾದ ಯಾವ ಪ್ರದೇಶವನ್ನೂ ಕಾಣಲಿಲ್ಲ.
01026005a ಸ ಗತ್ವಾ ಪರ್ವತಶ್ರೇಷ್ಠಂ ಗಂಧಮಾದನಮವ್ಯಯಂ|
01026005c ದದರ್ಶ ಕಶ್ಯಪಂ ತತ್ರ ಪಿತರಂ ತಪಸಿ ಸ್ಥಿತಂ||
ಆಗ ಅವ್ಯಯ ಪರ್ವತಶ್ರೇಷ್ಠ ಗಂಧಮಾದನಕ್ಕೆ ಹೋಗಿ ಅಲ್ಲಿ ತಪಸ್ಸಿನಲ್ಲಿ ನಿರತನಾಗಿದ್ದ ತಂದೆ ಕಶ್ಯಪನನ್ನು ಕಂಡನು.
01026006a ದದರ್ಶ ತಂ ಪಿತಾ ಚಾಪಿ ದಿವ್ಯರೂಪಂ ವಿಹಂಗಮಂ|
01026006c ತೇಜೋವೀರ್ಯಬಲೋಪೇತಂ ಮನೋಮಾರುತರಂಹಸಂ||
01026007a ಶೈಲಶೃಂಗಪ್ರತೀಕಾಶಂ ಬ್ರಹ್ಮದಂಡಮಿವೋದ್ಯತಂ|
01026007c ಅಚಿಂತ್ಯಮನಭಿಜ್ಞೇಯಂ ಸರ್ವಭೂತಭಯಂಕರಂ||
01026008a ಮಾಯಾವೀರ್ಯಧರಂ ಸಾಕ್ಷಾದಗ್ನಿಮಿದ್ಧಮಿವೋದ್ಯತಂ|
01026008c ಅಪ್ರಧೃಷ್ಯಮಜೇಯಂ ಚ ದೇವದಾನವರಾಕ್ಷಸೈಃ||
01026009a ಭೇತ್ತಾರಂ ಗಿರಿಶೃಂಗಾಣಾಂ ನದೀಜಲವಿಶೋಷಣಂ|
01026009c ಲೋಕಸಂಲೋಡನಂ ಘೋರಂ ಕೃತಾಂತಸಮದರ್ಶನಂ||
01026010a ತಮಾಗತಮಭಿಪ್ರೇಕ್ಷ್ಯ ಭಗವಾನ್ಕಶ್ಯಪಸ್ತದಾ|
01026010c ವಿದಿತ್ವಾ ಚಾಸ್ಯ ಸಂಕಲ್ಪಮಿದಂ ವಚನಮಬ್ರವೀತ್||
ತೇಜಸ್ಸು ಮತ್ತು ಬಲದಿಂದೊಡಗೂಡಿದ, ಮನೋಮಾರುತದ ವೇಗವುಳ್ಳ, ಶೈಲಶೃಂಗದಂತೆ ಮಹಾಕಾಯನಾದ, ಬ್ರಾಹ್ಮಣನ ಶಾಪದಂತೆ ತೀಕ್ಷ್ಣನಾದ, ಅಚಿಂತ್ಯನೂ ಅನಭಿಜ್ಞೇಯನೂ ಆದ, ಸರ್ವಭೂತಭಯಂಕರ, ಮಹಾವೀರ್ಯಧರ, ಸಾಕ್ಷಾತ್ ಅಗ್ನಿಯಂತೆ ದೇದೀಪ್ಯಮಾನನಾದ, ದೇವದಾನವರಾಕ್ಷಸರಿಂದ ಅಜೇಯನಾದ, ಗಿರಿಶೃಂಗಗಳನ್ನು ಪುಡಿಪುಡಿಮಾಡಬಲ್ಲ, ಸಾಗರದ ನೀರನ್ನೆಲ್ಲ ಹೀರಬಲ್ಲ, ಲೋಕಗಳನ್ನೆಲ್ಲ ನಾಶಪಡಿಸಬಲ್ಲ, ಕೃತಾಂತ ಸದೃಶ, ಆ ದಿವ್ಯರೂಪೀ ವಿಹಂಗಮನನ್ನು ನೋಡಿದ ಅವನ ತಂದೆ ಭಗವಾನ್ ಕಶ್ಯಪನು ಅವನ ಸಂಕಲ್ಪವೇನೆಂದು ತಿಳಿದು ಅವನನ್ನುದ್ದೇಶಿಸಿ ಹೇಳಿದನು:
01026011a ಪುತ್ರ ಮಾ ಸಾಹಸಂ ಕಾರ್ಷೀರ್ಮಾ ಸದ್ಯೋ ಲಪ್ಸ್ಯಸೇ ವ್ಯಥಾಂ|
01026011c ಮಾ ತ್ವಾ ದಹೇಯುಃ ಸಂಕ್ರುದ್ಧಾ ವಾಲಖಿಲ್ಯಾ ಮರೀಚಿಪಾಃ||
“ಪುತ್ರ! ಮುಂದೆ ನೋವನ್ನು ಅನುಭವಿಸಬೇಕಾಗಿ ಬರುವಂಥಹ ಯಾವ ಸಾಹಸವನ್ನೂ ಮಾಡಬೇಡ. ಸೂರ್ಯನ ಕಿರಣಗಳಿಂದ ಜೀವಿಸುತ್ತಿರುವ ವಾಲಖಿಲ್ಯರು ಕುಪಿತರಾದರೆ ನಿನ್ನನ್ನು ಸುಟ್ಟುಬಿಡಬಲ್ಲರು.”
01026012a ಪ್ರಸಾದಯಾಮಾಸ ಸ ತಾನ್ಕಶ್ಯಪಃ ಪುತ್ರಕಾರಣಾತ್|
01026012c ವಾಲಖಿಲ್ಯಾಂಸ್ತಪಃ ಸಿದ್ಧಾನಿದಮುದ್ದಿಶ್ಯ ಕಾರಣಂ||
01026013a ಪ್ರಜಾಹಿತಾರ್ಥಮಾರಂಭೋ ಗರುಡಸ್ಯ ತಪೋಧನಾಃ|
01026013c ಚಿಕೀರ್ಷತಿ ಮಹತ್ಕರ್ಮ ತದನುಜ್ಞಾತುಮರ್ಹಥ||
ತನ್ನ ಪುತ್ರನ ಸಲುವಾಗಿ ಕಶ್ಯಪನು ತಪಃಸಿದ್ಧ ವಾಲಖಿಲ್ಯರನ್ನು ಸಂತುಷ್ಟಗೊಳಿಸಲೋಸುಗ ಈ ರೀತಿ ಹೇಳಿದನು: “ತಪೋಧನರೇ! ಪ್ರಜಾಹಿತಾರ್ಥಕ್ಕಾಗಿಯೇ ಗರುಡನ ಉದ್ಭವವಾಗಿದೆ. ಒಂದು ಮಹತ್ತರ ಕರ್ಯವನ್ನು ಕೈಗೊಂಡಿದ್ದಾನೆ. ಅದಕ್ಕೆ ನಿಮ್ಮ ಅನುಜ್ಞೆಯನ್ನು ನೀಡಬೇಕು.”
01026014a ಏವಮುಕ್ತಾ ಭಗವತಾ ಮುನಯಸ್ತೇ ಸಮಭ್ಯಯುಃ|
01026014c ಮುಕ್ತ್ವಾ ಶಾಖಾಂ ಗಿರಿಂ ಪುಣ್ಯಂ ಹಿಮವಂತಂ ತಪೋರ್ಥಿನಃ||
ಭಗವಾನ್ ಮುನಿಯ ಮಾತುಗಳನ್ನು ಕೇಳಿದ ತಪಾರ್ಥಿ ಮುನಿಗಳು ಆ ರೆಂಬೆಯನ್ನು ಬಿಟ್ಟು ಪುಣ್ಯಕರ ಹಿಮವತ್ ಗಿರಿಗೆ ತೆರಳಿದರು.
01026015a ತತಸ್ತೇಷ್ವಪಯಾತೇಷು ಪಿತರಂ ವಿನತಾತ್ಮಜಃ|
01026015c ಶಾಖಾವ್ಯಾಕ್ಷಿಪ್ತವದನಃ ಪರ್ಯಪೃಚ್ಛತ ಕಶ್ಯಪಂ||
ಅವರು ಹೊರಟುಹೋದ ನಂತರ ವಿನತಾತ್ಮಜನು ರೆಂಬೆಯನ್ನು ಕಚ್ಚಿಹಿಡಿದ ಬಾಯಿಯಿಂದಲೇ ತನ್ನ ತಂದೆ ಕಶ್ಯಪನನ್ನು ಕೇಳಿದನು:
01026016a ಭಗವನ್ಕ್ವ ವಿಮುಂಚಾಮಿ ತರುಶಾಖಾಮಿಮಾಮಹಂ|
01026016c ವರ್ಜಿತಂ ಬ್ರಾಹ್ಮಣೈರ್ದೇಶಮಾಖ್ಯಾತು ಭಗವಾನ್ಮಮ||
“ಭಗವನ್! ಈ ಮುಹಾವೃಕ್ಷದ ಶಾಖೆಯನ್ನು ಎಲ್ಲಿ ಇಳಿಸಲಿ? ಭಗವನ್! ಬ್ರಾಹ್ಮಣರಿಲ್ಲದಿರುವ ಒಂದು ಪ್ರದೇಶವನ್ನು ನನಗೆ ತೋರಿಸಿಕೊಡು.”
01026017a ತತೋ ನಿಷ್ಪುರುಷಂ ಶೈಲಂ ಹಿಮಸಂರುದ್ಧಕಂದರಂ|
01026017c ಅಗಮ್ಯಂ ಮನಸಾಪ್ಯನ್ಯೈಸ್ತಸ್ಯಾಚಖ್ಯೌ ಸ ಕಶ್ಯಪಃ||
ಆಗ ಕಶ್ಯಪನು ಬ್ರಾಹ್ಮಣರು ಇಲ್ಲದೇ ಇರುವ ಹಿಮಸಂವೃದ್ಧ ಕಂದರಗಳಿರುವ, ಸಾಧಾರಣ ಮನುಷ್ಯರ ಯೋಚನೆಗೂ ನಿಲುಕದ ಪರ್ವತವೊಂದನ್ನು ತೋರಿಸಿದನು.
01026018a ತಂ ಪರ್ವತಮಹಾಕುಕ್ಷಿಮಾವಿಶ್ಯ ಮನಸಾ ಖಗಃ|
01026018c ಜವೇನಾಭ್ಯಪತತ್ತಾರ್ಕ್ಷ್ಯಃ ಸಶಾಖಾಗಜಕಚ್ಛಪಃ||
ಆ ಮಹಾಕಂದರವನ್ನು ಮನಸ್ಸಿನಲ್ಲಿಯೇ ಕಂಡ ಪಕ್ಷಿ ತಾರ್ಕ್ಷನು ರೆಂಬೆ, ಆಮೆ ಮತ್ತು ಆನೆಗಳನ್ನು ಹಿಡಿದು ಅದರೆಡೆಗೆ ಅತ್ಯಂತ ವೇಗದಿಂದ ಹೊರಟನು.
01026019a ನ ತಾಂ ವಧ್ರಃ ಪರಿಣಹೇತ್ ಶತಚರ್ಮಾ ಮಹಾನಣುಃ|
01026019c ಶಾಖಿನೋ ಮಹತೀಂ ಶಾಖಾಂ ಯಾಂ ಪ್ರಗೃಹ್ಯ ಯಯೌ ಖಗಃ||
ಆ ಪಕ್ಷಿಯು ಕಚ್ಚಿ ಹಾರುತ್ತಿದ್ದ ಮಹಾಶಾಖೆಯನ್ನು ಒಂದು ನೂರು ಮಹಾಮೃಗಗಳ ಚರ್ಮದಿಂದ ತಯಾರಿಸಿದ ತೆಳು ವಸ್ತ್ರದಿಂದಲೂ ಸುತ್ತಲು ಸಾಧ್ಯವಾಗುತ್ತಿರಲಿಲ್ಲ.
01026020a ತತಃ ಸ ಶತಸಾಹಸ್ರಂ ಯೋಜನಾಂತರಮಾಗತಃ|
01026020c ಕಾಲೇನ ನಾತಿಮಹತಾ ಗರುಡಃ ಪತತಾಂ ವರಃ||
ಪಕ್ಷಿಶ್ರೇಷ್ಠ ಗರುಡನು ಸ್ವಲ್ಪವೇ ಸಮಯದಲ್ಲಿ ನೂರು ಸಾವಿರ ಯೋಜನೆಗಳನ್ನು ದಾಟಿದನು.
01026021a ಸ ತಂ ಗತ್ವಾ ಕ್ಷಣೇನೈವ ಪರ್ವತಂ ವಚನಾತ್ಪಿತುಃ|
01026021c ಅಮುಂಚನ್ಮಹತೀಂ ಶಾಖಾಂ ಸಸ್ವನಾಂ ತತ್ರ ಖೇಚರಃ||
ಆ ಖೇಚರನು ಕ್ಷಣಮಾತ್ರದಲ್ಲಿ ತಂದೆಯು ಹೇಳಿದ ಪರ್ವತವನ್ನು ತಲುಪಿ ಮಹಾಶಾಖೆಯನ್ನು ಬಿಡುಗಡೆ ಮಾಡಿದಾಗ ಅದು ಅಬ್ಬರದಿಂದ ಕೆಳಗುರುಳಿತು.
01026022a ಪಕ್ಷಾನಿಲಹತಶ್ಚಾಸ್ಯ ಪ್ರಾಕಂಪತ ಸ ಶೈಲರಾಟ್|
01026022c ಮುಮೋಚ ಪುಷ್ಪವರ್ಷಂ ಚ ಸಮಾಗಲಿತಪಾದಪಃ||
ಅವನ ರೆಕ್ಕೆಗಳಿಂದ ಎಬ್ಬಿಸಲ್ಪಟ್ಟ ಭಿರುಗಾಳಿಯಿಂದ ಶೈಲರಾಜನು ತತ್ತರಿಸಿದನು ಮತ್ತು ಅಲ್ಲಿರುವ ಮರಗಳು ಕೆಳಗುರುಳಿ ಬೀಳುವಾಗ ಪುಷ್ಪವರ್ಷವೇ ಆಯಿತು.
01026023a ಶೃಂಗಾಣಿ ಚ ವ್ಯಶೀರ್ಯಂತ ಗಿರೇಸ್ತಸ್ಯ ಸಮಂತತಃ|
01026023c ಮಣಿಕಾಂಚನಚಿತ್ರಾಣಿ ಶೋಭಯಂತಿ ಮಹಾಗಿರಿಂ||
ಆ ಮಹಾಗಿರಿಯ ಶಿಖರಗಳನ್ನು ಅಲಂಕರಿಸಿದ್ದ ಮಣಿ-ಕಾಂಚನಗಳು ಸಡಿಲವಾಗಿ ಪರ್ವತದ ಎಲ್ಲ ಕಡೆಗಳಿಂದ ಉದುರಿದವು.
01026024a ಶಾಖಿನೋ ಬಹವಶ್ಚಾಪಿ ಶಾಖಯಾಭಿಹತಾಸ್ತಯಾ|
01026024c ಕಾಂಚನೈಃ ಕುಸುಮೈರ್ಭಾಂತಿ ವಿದ್ಯುತ್ವಂತ ಇವಾಂಬುದಾಃ||
ಕಾಂಚನ ಕುಸುಮಗಳ ಹಲವಾರು ರೆಂಬೆಗಳ ಮೇಲೆ ಈ ರೆಂಬೆಯು ಬಿದ್ದಾಗ ಅವು ಮಿಂಚುಬಡಿದ ಕಪ್ಪು ಮೋಡಗಳಂತೆ ಕಂಡವು.
01026025a ತೇ ಹೇಮವಿಕಚಾ ಭೂಯೋ ಯುಕ್ತಾಃ ಪರ್ವತಧಾತುಭಿಃ|
01026025c ವ್ಯರಾಜನ್ ಶಾಖಿನಸ್ತತ್ರ ಸೂರ್ಯಾಂಶುಪ್ರತಿರಂಜಿತಾಃ||
ಪರ್ವತ ಖನಿಜಗಳನ್ನೊಡಗೂಡಿ ಕೆಳಗೆ ಉರುಳುತ್ತಿದ್ದ ಬಂಗಾರದ ಹೊಳಪಿನ ರೆಂಬೆಗಳು ಸೂರ್ಯನ ಕಿರಣಗಳನ್ನು ಪ್ರತಿಬಿಂಬಿಸುತ್ತಿದ್ದವು.
01026026a ತತಸ್ತಸ್ಯ ಗಿರೇಃ ಶೃಂಗಮಾಸ್ಥಾಯ ಸ ಖಗೋತ್ತಮಃ|
01026026c ಭಕ್ಷಯಾಮಾಸ ಗರುಡಸ್ತಾವುಭೌ ಗಜಕಚ್ಛಪೌ||
ಆಗ ಆ ಖಗೋತ್ತಮ ಗರುಡನು ಗಿರಿಶಿಖರದ ಮೇಲೇರಿ ಆನೆ-ಆಮೆಗಳೆರಡನ್ನೂ ಭಕ್ಷಿಸಿದನು.
01026027a ತತಃ ಪರ್ವತಕೂಟಾಗ್ರಾದುತ್ಪಪಾತ ಮನೋಜವಃ|
01026027c ಪ್ರಾವರ್ತಂತಾಥ ದೇವಾನಾಮುತ್ಪಾತಾ ಭಯವೇದಿನಃ||
ಮನಸ್ಸಿನಷ್ಟೇ ವೇಗವಾಗಿ ಅವನು ಆ ಪರ್ವತ ಶಿಖರದಿಂದ ಮೇಲೇರುತ್ತಿದ್ದಂತೆ ದೇವತೆಗಳಿಗೆ ಭಯ-ನೋವುಗಳನ್ನು ಸೂಚಿಸುವ ಅಪಶಕುನಗಳು ಕಾಣಿಸಿಕೊಂಡವು.
01026028a ಇಂದ್ರಸ್ಯ ವಜ್ರಂ ದಯಿತಂ ಪ್ರಜಜ್ವಾಲ ವ್ಯಥಾನ್ವಿತಂ|
01026028c ಸಧೂಮಾ ಚಾಪತತ್ಸಾರ್ಚಿರ್ದಿವೋಲ್ಕಾ ನಭಸಶ್ಚ್ಯುತಾ||
ಇಂದ್ರನ ಪ್ರಿಯ ವಜ್ರವು ಭಯದಿಂದ ಪ್ರಜ್ವಲಗೊಂಡಿತು. ಹಗಲಿನಲ್ಲಿಯೂ ನಭದಿಂದ ಹೊಗೆ-ಬೆಂಕಿಗಳನ್ನೊಡಗೂಡಿದ ಉಲ್ಕೆಗಳು ಬೀಳತೊಡಗಿದವು.
01026029a ತಥಾ ವಸೂನಾಂ ರುದ್ರಾಣಾಮಾದಿತ್ಯಾನಾಂ ಚ ಸರ್ವಶಃ|
01026029c ಸಾಧ್ಯಾನಾಂ ಮರುತಾಂ ಚೈವ ಯೇ ಚಾನ್ಯೇ ದೇವತಾಗಣಾಃ|
01026029e ಸ್ವಂ ಸ್ವಂ ಪ್ರಹರಣಂ ತೇಷಾಂ ಪರಸ್ಪರಮುಪಾದ್ರವತ್||
ವಸು, ರುದ್ರ, ಆದಿತ್ಯ, ಸಾಧ್ಯ, ಮರುತ ಮತ್ತು ಅನ್ಯ ದೇವಗಣಗಳ ಆಯುಧಗಳೆಲ್ಲವೂ ಪರಸ್ಪರ ಹೊಡೆದಾಡಲು ಪ್ರಾರಂಭಿಸಿದವು.
01026030a ಅಭೂತಪೂರ್ವಂ ಸಂಗ್ರಾಮೇ ತದಾ ದೇವಾಸುರೇಽಪಿ ಚ|
01026030c ವವುರ್ವಾತಾಃ ಸನಿರ್ಘಾತಾಃ ಪೇತುರುಲ್ಕಾಃ ಸಮಂತತಃ||
ಇದಕ್ಕೆ ಮೊದಲು ಎಂದೂ - ದೇವಾಸುರ ಸಂಗ್ರಾಮದ ಸಮಯದಲ್ಲಿಯೂ - ಹೀಗೆ ಆಗಿರಲಿಲ್ಲ. ಗುಡುಗಿನೊಂದಿಗೆ ಭಿರುಗಾಳಿ ಬೀಸುತ್ತಾ ಒಂದೇ ಸಮನೆ ಉಲ್ಕೆಗಳು ತೂರತೊಡಗಿದವು.
01026031a ನಿರಭ್ರಮಪಿ ಚಾಕಾಶಂ ಪ್ರಜಗರ್ಜ ಮಹಾಸ್ವನಂ|
01026031c ದೇವಾನಾಮಪಿ ಯೋ ದೇವಃ ಸೋಽಪ್ಯವರ್ಷದಸೃಕ್ತದಾ||
ಮೋಡಗಳಿಲ್ಲದಿದ್ದರೂ ಆಕಾಶವು ಜೋರಾಗಿ ಗರ್ಜಿಸಿತು. ದೇವತೆಗಳ ದೇವನು ರಕ್ತದ ಮಳೆಯನ್ನು ಸುರಿಸಿದನು.
01026032a ಮಮ್ಲುರ್ಮಾಲ್ಯಾನಿ ದೇವಾನಾಂ ಶೇಮುಸ್ತೇಜಾಂಸಿ ಚೈವ ಹಿ|
01026032c ಉತ್ಪಾತಮೇಘಾ ರೌದ್ರಾಶ್ಚ ವವರ್ಷುಃ ಶೋಣಿತಂ ಬಹು|
01026032e ರಜಾಂಸಿ ಮುಕುಟಾನ್ಯೇಷಾಮುತ್ಥಿತಾನಿ ವ್ಯಧರ್ಷಯನ್||
ದೇವತೆಗಳ ಮಾಲೆಗಳು ಮಾಸಿದವು. ಅವರ ತೇಜಸ್ಸು ಕುಂದಿತು. ಮೋಡಗಳು ಮೇಲೆದ್ದು ರೌದ್ರಾಕಾರವಾಗಿ ಗರ್ಜಿಸುತ್ತಾ ಅತಿಯಾಗಿ ರಕ್ತದ ಮಳೆಯನ್ನು ಸುರಿಸಿದವು. ಮೇಲೆದ್ದ ಧೂಳಿನ ಭಿರುಗಾಳಿಯು ದೇವತೆಗಳ ಕಿರೀಟಗಳನ್ನು ಮರೆಮಾಡಿತು.
01026033a ತತಸ್ತ್ರಾಸಸಮುದ್ವಿಗ್ನಃ ಸಹ ದೇವೈಃ ಶತಕ್ರತುಃ|
01026033c ಉತ್ಪಾತಾನ್ದಾರುಣಾನ್ಪಶ್ಯನ್ನಿತ್ಯುವಾಚ ಬೃಹಸ್ಪತಿಂ||
ಈ ದಾರುಣ ಉತ್ಪಾತಗಳನ್ನು ಕಂಡು ಉದ್ವಿಗ್ನನಾದ ಶತಕ್ರತುವು ಇತರ ದೇವತೆಗಳೊಡಗೂಡಿ ಬೃಹಸ್ಪತಿಯನ್ನು ಕೇಳಿದನು:
01026034a ಕಿಮರ್ಥಂ ಭಗವನ್ ಘೋರಾ ಮಹೋತ್ಪಾತಾಃ ಸಮುತ್ಥಿತಾಃ|
01026034c ನ ಚ ಶತ್ರುಂ ಪ್ರಪಶ್ಯಾಮಿ ಯುಧಿ ಯೋ ನಃ ಪ್ರಧರ್ಷಯೇತ್||
“ಭಗವನ್! ಈ ಘೋರ ಮಹೋತ್ಪಾತಗಳು ಏಕೆ ಕಾಣಿಸಿಕೊಳ್ಳುತ್ತಿವೆ? ಯುದ್ಧದಲ್ಲಿ ನಮ್ಮ ಮೇಲೆ ಜಯಗಳಿಸುವ ಶತ್ರು ಯಾರೂ ಕಾಣಬರುತ್ತಿಲ್ಲವಲ್ಲ?”
01026035 ಬೃಹಸ್ಪತಿರುವಾಚ
01026035a ತವಾಪರಾಧಾದ್ದೇವೇಂದ್ರ ಪ್ರಮಾದಾಚ್ಚ ಶತಕ್ರತೋ|
01026035c ತಪಸಾ ವಾಲಖಿಲ್ಯಾನಾಂ ಭೂತಮುತ್ಪನ್ನಮದ್ಭುತಂ||
01026036a ಕಶ್ಯಪಸ್ಯ ಮುನೇಃ ಪುತ್ರೋ ವಿನತಾಯಾಶ್ಚ ಖೇಚರಃ|
01026036c ಹರ್ತುಂ ಸೋಮಮನುಪ್ರಾಪ್ತೋ ಬಲವಾನ್ಕಾಮರೂಪವಾನ್||
ಬೃಹಸ್ಪತಿಯು ಹೇಳಿದನು: “ಶತಕ್ರತು ದೇವೇಂದ್ರ! ನಿನ್ನದೇ ಅಪರಾಧದಿಂದ ಮತ್ತು ವಾಲಖಿಲ್ಯರ ತಪಸ್ಸಿನಿಂದ ಅದ್ಭುತ ಜೀವಿಯೊಂದು ಮುನಿ ಕಶ್ಯಪ ಮತ್ತು ವಿನತೆಯರ ಪುತ್ರನಾಗಿ ಉತ್ಪನ್ನನಾಗಿದ್ದಾನೆ. ಇಷ್ಟಬಂದ ರೂಪ ಧರಿಸಬಲ್ಲ ಆ ಬಲಶಾಲಿ ಪಕ್ಷಿಯು ಅಮೃತವನ್ನು ಎತ್ತಿಕೊಂಡು ಹೋಗಲು ಬರುತ್ತಿದ್ದಾನೆ.
01026037a ಸಮರ್ಥೋ ಬಲಿನಾಂ ಶ್ರೇಷ್ಠೋ ಹರ್ತುಂ ಸೋಮಂ ವಿಹಂಗಮಃ|
01026037c ಸರ್ವಂ ಸಂಭಾವಯಾಮ್ಯಸ್ಮಿನ್ನಸಾಧ್ಯಮಪಿ ಸಾಧಯೇತ್||
ಬಲಶಾಲಿಗಳಲ್ಲೇ ಶ್ರೇಷ್ಠ ಆ ಪಕ್ಷಿಯು ಸೋಮವನ್ನು ತೆಗೆದುಕೊಂಡು ಹೋಗಲು ಸಮರ್ಥನಾಗಿದ್ದಾನೆ. ಅವನಿಗೆ ಎಲ್ಲ ಅಸಾಧ್ಯಗಳೂ ಸಾಧ್ಯವಾಗುತ್ತವೆ.””
01026038 ಸೂತ ಉವಾಚ
01026038a ಶ್ರುತ್ವೈತದ್ವಚನಂ ಶಕ್ರಃ ಪ್ರೋವಾಚಾಮೃತರಕ್ಷಿಣಃ|
01026038c ಮಹಾವೀರ್ಯಬಲಃ ಪಕ್ಷೀ ಹರ್ತುಂ ಸೋಮಮಿಹೋದ್ಯತಃ||
ಸೂತನು ಹೇಳಿದನು: “ಈ ವಚನವನ್ನು ಕೇಳಿದ ಶಕ್ರನು ಅಮೃತ ರಕ್ಷಕರಿಗೆ ಹೇಳಿದನು: “ಮಹಾ ವೀರ ಬಲಶಾಲಿ ಪಕ್ಷಿಯೋರ್ವನು ಸೋಮವನ್ನು ಅಪಹರಿಸಲು ನಿಶ್ಚಯಿಸಿದ್ದಾನೆ.
01026039a ಯುಷ್ಮಾನ್ಸಂಬೋಧಯಾಮ್ಯೇಷ ಯಥಾ ಸ ನ ಹರೇದ್ಬಲಾತ್|
01026039c ಅತುಲಂ ಹಿ ಬಲಂ ತಸ್ಯ ಬೃಹಸ್ಪತಿರುವಾಚ ಮೇ||
ಅವನು ಬಲಾತ್ಕಾರವಾಗಿ ಅದನ್ನು ಎತ್ತಿಕೊಂಡು ಹೋಗಬಾರದೆಂದು ನಾನು ನಿಮಗೆ ಮೊದಲೇ ಚೇತಾಗ್ನಿಯನ್ನು ನೀಡುತ್ತಿದ್ದೇನೆ. ಬೃಹಸ್ಪತಿಯ ಮಾತಿನಂತೆ ಬಲದಲ್ಲಿ ಅವನ ಸರಿಸಾಟಿ ಯಾರೂ ಇಲ್ಲ.”
01026040a ತತ್ ಶೃತ್ವಾ ವಿಬುಧಾ ವಾಕ್ಯಂ ವಿಸ್ಮಿತಾ ಯತ್ನಮಾಸ್ಥಿತಾಃ|
01026040c ಪರಿವಾರ್ಯಾಮೃತಂ ತಸ್ಥುರ್ವಜ್ರೀ ಚೇಂದ್ರಃ ಶತಕ್ರತುಃ||
ಈ ಮಾತನ್ನು ಕೇಳಿ ವಿಸ್ಮಿತರಾದ ದೇವತೆಗಳು ವಜ್ರಧಾರಿ ಶತಕ್ರತು ಇಂದ್ರನ ಜೊತೆಗೂಡಿ ಅಮೃತದ ಸುತ್ತಲೂ ಕಾವಲು ನಿಂತರು.
01026041a ಧಾರಯಂತೋ ಮಹಾರ್ಹಾಣಿ ಕವಚಾನಿ ಮನಸ್ವಿನಃ|
01026041c ಕಾಂಚನಾನಿ ವಿಚಿತ್ರಾಣಿ ವೈಢೂರ್ಯವಿಕೃತಾನಿ ಚ||
ಅವರು ಮನಸೂಸುವ, ಬೆಲೆಬಾಳುವ, ಕಾಂಚನ ಮತ್ತು ವಿಚಿತ್ರ ವೈಢೂರ್ಯಗಳಿಂದ ತಯಾರಿಸಿದ ಕವಚಗಳನ್ನು ಧರಿಸಿದ್ದರು.
01026042a ವಿವಿಧಾನಿ ಚ ಶಸ್ತ್ರಾಣಿ ಘೋರರೂಪಾಣ್ಯನೇಕಶಃ|
01026042c ಶಿತತೀಕ್ಷ್ಣಾಗ್ರಧಾರಾಣಿ ಸಮುದ್ಯಮ್ಯ ಸಹಸ್ರಶಃ||
ಸಹಸ್ರ ಸಂಖ್ಯೆಗಳಲ್ಲಿದ್ದ ಅವರು ಮೊನಚಾಗಿ ಮಸೆದ ಅನೇಕ ಘೋರರೂಪೀ ಆಯುಧಗಳನ್ನು ಧರಿಸಿದ್ದರು.
01026043a ಸವಿಸ್ಫುಲಿಂಗಜ್ವಾಲಾನಿ ಸಧೂಮಾನಿ ಚ ಸರ್ವಶಃ|
01026043c ಚಕ್ರಾಣಿ ಪರಿಘಾಂಶ್ಚೈವ ತ್ರಿಶೂಲಾನಿ ಪರಶ್ವಧಾನ್||
01026044a ಶಕ್ತೀಶ್ಚ ವಿವಿಧಾಸ್ತೀಕ್ಷ್ಣಾಃ ಕರವಾಲಾಂಶ್ಚ ನಿರ್ಮಲಾನ್|
01026044c ಸ್ವದೇಹರೂಪಾಣ್ಯಾದಾಯ ಗದಾಶ್ಚೋಗ್ರಪ್ರದರ್ಶನಾಃ||
ಎಲ್ಲರೂ ತಮ್ಮ ತಮ್ಮ ದೇಹಗಳಿಗೆ ತಕ್ಕಂತೆ ಧೂಮ-ಜ್ವಾಲೆಗಳನ್ನು ಹೊರಚೆಲ್ಲುತ್ತಿದ್ದ ಚಕ್ರ, ಪರಿಘ, ತ್ರಿಶೂಲ, ಪರಶು, ವಿವಿಧ ಶಕ್ತಿ, ತೀಕ್ಷ್ಣ ಕರವಾಲಗಳು ಮತ್ತು ಉಗ್ರ ಗದೆಗಳನ್ನು ಧರಿಸಿದ್ದರು.
01026045a ತೈಃ ಶಸ್ತ್ರೈರ್ಭಾನುಮದ್ಭಿಸ್ತೇ ದಿವ್ಯಾಭರಣಭೂಷಿತಾಃ|
01026045c ಭಾನುಮಂತಃ ಸುರಗಣಾಸ್ತಸ್ಥುರ್ವಿಗತಕಲ್ಮಷಾಃ||
ದಿವ್ಯಾಭರಣ ಭೂಷಿತ ಸುರಗಣವು ಶಸ್ತ್ರಗಳ ಕಾಂತಿಯಿಂದ ಬೆಳಗುತ್ತಾ ನಿರ್ಭಯವಾಗಿ ಅಲ್ಲಿ ನಿಂತಿತು.
01026046a ಅನುಪಮಬಲವೀರ್ಯತೇಜಸೋ
ಧೃತಮನಸಃ ಪರಿರಕ್ಷಣೇಽಮೃತಸ್ಯ|
01026046c ಅಸುರಪುರವಿದಾರಣಾಃ ಸುರಾ
ಜ್ವಲನಸಮಿದ್ಧವಪುಹ್ಪ್ರಕಾಶಿನಃ||
ಅನುಪಮ ಬಲವೀರ್ಯ ತೇಜಸರೂ, ಅಸುರಪುರಗಳನ್ನು ಪುಡಿಮಾಡಬಲ್ಲ, ಜ್ವಾಲೆಯಂತೆ ಪ್ರಕಾಶಿಸುತ್ತಿರುವ ಸುರರೆಲ್ಲರೂ ಧೃಢಮನಸ್ಕರಾಗಿ ಅಮೃತಕ್ಕೆ ಕಾವಲು ನಿಂತರು.
01026047a ಇತಿ ಸಮರವರಂ ಸುರಾಸ್ಥಿತಂ
ಪರಿಘಸಹಸ್ರಶತೈಃ ಸಮಾಕುಲಂ|
01026047c ವಿಗಲಿತಮಿವ ಚಾಂಬರಾಂತರೇ
ತಪನಮರೀಚಿವಿಭಾಸಿತಂ ಬಭೌ||
ನೂರಾರು ಸಹಸ್ರಾರು ಪರಿಘಗಳನ್ನು ಹಿಡಿದು ನಿಂತ ಸುರರಿಂದಾಗಿ ಆ ಸಮರಭೂಮಿಯು ಆಕಾಶದಲ್ಲಿ ಸೂರ್ಯನ ಬಿಸಿಲಿನಿಂದ ಸುಡುತ್ತಿರುವ ಒಲೆಯಂತೆ ಕಂಡುಬಂದಿತು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಆಸ್ತೀಕಪರ್ವಣಿ ಸೌಪರ್ಣೇ ಷಷ್ಠವಿಂಶೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವಣಿ ಆಸ್ತೀಕಪರ್ವದಲ್ಲಿ ಸೌಪರ್ಣದಲ್ಲಿ ಇಪ್ಪತ್ತಾರನೇ ಅಧ್ಯಾಯವು.