Adi Parva: Chapter 23

ಆದಿ ಪರ್ವ: ಆಸ್ತೀಕ ಪರ್ವ

೨೩

ಗರುಡನು ಸರ್ಪಗಳನ್ನು ದ್ವೀಪವೊಂದಕ್ಕೆ ಕೊಂಡೊಯ್ದುದು (೧-೫). ತಮ್ಮ ದಾಸತ್ವದ ಕಾರಣವನ್ನು ಗರುಡನಿಗೆ ವಿನತೆಯು ವಿವರಿಸಿದುದು (೬-೧೦). ದಾಸತ್ವದ ಮುಕ್ತಿಗೆ ಬದಲಾಗಿ ಸರ್ಪಗಳು ಗರುಡನಲ್ಲಿ ಅಮೃತವನ್ನು ಕೇಳಿದುದು (೧೧-೧೨).

01023001 ಸೂತ ಉವಾಚ|

01023001a ಸುಪರ್ಣೇನೋಹ್ಯಮಾನಾಸ್ತೇ ಜಗ್ಮುಸ್ತಂ ದೇಶಮಾಶು ವೈ|

01023001c ಸಾಗರಾಂಬುಪರಿಕ್ಷಿಪ್ತಂ ಪಕ್ಷಿಸಂಘನಿನಾದಿತಂ||

ಸೂತನು ಹೇಳಿದನು: “ಸುಪರ್ಣನಿಂದ ಕರೆದೊಯ್ಯಲ್ಪಟ್ಟ ನಾಗಗಳು ಸಾಗರದ ನೀರನ್ನು ದಾಟಿ ಪಕ್ಷಿಯೊಡನೆ ಸಂತೋಷದಿಂದ ಆ ದ್ವೀಪವನ್ನು ತಲುಪಿದವು.

01023002a ವಿಚಿತ್ರಫಲಪುಷ್ಪಾಭಿರ್ವನರಾಜಿಭಿರಾವೃತಂ|

01023002c ಭವನೈರಾವೃತಂ ರಮ್ಯೈಸ್ತಥಾ ಪದ್ಮಾಕರೈರಪಿ||

ಅದು ವಿಚಿತ್ರ ಫಲ ಪುಷ್ಪಗಳನ್ನು ಹೊತ್ತ ವನರಾಶಿಯಿಂದ ತುಂಬಿಕೊಂಡಿತ್ತು ಹಾಗೂ ರಮ್ಯ ಭವನ ಪದ್ಮಾಕರಗಳನ್ನು ಹೊಂದಿತ್ತು.

01023003a ಪ್ರಸನ್ನಸಲಿಲೈಶ್ಚಾಪಿ ಹ್ರದೈಶ್ಚಿತ್ರೈರ್ವಿಭೂಷಿತಂ|

01023003c ದಿವ್ಯಗಂಧವಹೈಃ ಪುಣ್ಯೈರ್ಮಾರುತೈರುಪವೀಜಿತಂ||

ಅದು ಪ್ರಸನ್ನ ಜಲದಿಂದೊಡಗೂಡಿದ ಸುಂದರ ಸರೋವರಗಳಿಂದ ಅಲಂಕರಿಸಲ್ಪಟ್ಟಿತ್ತು ಮತ್ತು ದಿವ್ಯಗಂಧವನ್ನು ಸೂಸುವ ಪುಣ್ಯ ಮಾರುತದಿಂದ ಪುನರ್ಜೀವನಗೊಂಡಿತ್ತು.

01023004a ಉಪಜಿಘ್ರದ್ಭಿರಾಕಾಶಂ ವೃಕ್ಷೈರ್ಮಲಯಜೈರಪಿ|

01023004c ಶೋಭಿತಂ ಪುಷ್ಪವರ್ಷಾಣಿ ಮುಂಚದ್ಭಿರ್ಮಾರುತೋದ್ಧುತೈಃ||

ಮಲಯದಲ್ಲಿ ಹುಟ್ಟಿ ಬೀಸುವ ಗಾಳಿಯು ಆಕಾಶವನ್ನು  ಮುತ್ತಿಡುವಂತಿರುವ ಸುಂದರ ವೃಕ್ಷಗಳಿಂದ ಪುಷ್ಪವೃಷ್ಟಿಯನ್ನು ಸುರಿಸುತ್ತಿತ್ತು.

01023005a ಕಿರದ್ಭಿರಿವ ತತ್ರಸ್ಥಾನ್ನಾಗಾನ್ಪುಷ್ಪಾಂಬುವೃಷ್ಟಿಭಿಃ|

01023005c ಮನಃಸಂಹರ್ಷಣಂ ಪುಣ್ಯಂ ಗಂಧರ್ವಾಪ್ಸರಸಾಂ ಪ್ರಿಯಂ|

01023005e ನಾನಾಪಕ್ಷಿರುತಂ ರಮ್ಯಂ ಕದ್ರೂಪುತ್ರಪ್ರಹರ್ಷಣಂ||

ಅಲ್ಲಿರುವ ವೃಕ್ಷಗಳು ಪುಷ್ಪಗಳನ್ನೇ ನೀರಿನಂತೆ ಸುರಿಸಿ ಸ್ನಾನಮಾಡಿಸುತ್ತಿರುವಂತೆ ತೋರುತ್ತಿದ್ದವು. ಮನಸ್ಸಿಗೆ ಆನಂದವನ್ನು ನೀಡುವ, ಪುಣ್ಯಪ್ರದ, ಗಂಧರ್ವ ಅಪ್ಸರೆಯರಿಗೆ ಪ್ರಿಯಕರ, ನಾನಾ ಪಕ್ಷಿಗಳ ಕಲರವಗಳಿಂದ ಪ್ರತಿಧ್ವನಿಸುತ್ತಿದ್ದ ಆ ಪ್ರದೇಶವು ಕದ್ರು ಪುತ್ರರನ್ನು ಹರ್ಷಗೊಳಿಸಿತು.

01023006a ತತ್ತೇ ವನಂ ಸಮಾಸಾದ್ಯ ವಿಜಹ್ರುಃ ಪನ್ನಗಾ ಮುದಾ|

01023006c ಅಬ್ರುವಂಶ್ಚ ಮಹಾವೀರ್ಯಂ ಸುಪರ್ಣಂ ಪತಗೋತ್ತಮಂ||

ಆ ವನವನ್ನು ಸೇರಿದ ನಾಗಗಳು ಸಾಕಷ್ಟು ಮುದಿತರಾದರು ಮತ್ತು ಪತಗೋತ್ತಮ ಮಹಾವೀರ ಸುಪರ್ಣನಿಗೆ ಹೇಳಿದರು:

01023007a ವಹಾಸ್ಮಾನಪರಂ ದ್ವೀಪಂ ಸುರಮ್ಯಂ ವಿಪುಲೋದಕಂ|

01023007c ತ್ವಂ ಹಿ ದೇಶಾನ್ಬಹೂನ್ರಮ್ಯಾನ್ಪತನ್ಪಶ್ಯಸಿ ಖೇಚರ||

“ಇದಕ್ಕಿಂತಲೂ ವಿಪುಲವಾಗಿ ನೀರಿರುವ ಸುರಮ್ಯ ದ್ವೀಪಕ್ಕೆ ನಮ್ಮನ್ನು ಕರೆದೊಯ್ಯಿ. ನೀನು ಆಕಾಶದಲ್ಲಿ ಹಾರಿ ಬರುವಾಗ ಬಹಳಷ್ಟು ರಮ್ಯ ಪ್ರದೇಶಗಳನ್ನು ನೋಡಿರಬಹುದು.”

01023008a ಸ ವಿಚಿಂತ್ಯಾಬ್ರವೀತ್ಪಕ್ಷೀ ಮಾತರಂ ವಿನತಾಂ ತದಾ|

01023008c ಕಿಂ ಕಾರಣಂ ಮಯಾ ಮಾತಃ ಕರ್ತವ್ಯಂ ಸರ್ಪಭಾಷಿತಂ||

ಸ್ವಲ್ಪಹೊತ್ತು ಯೋಚಿಸಿ ಆ ಪಕ್ಷಿಯು ಮಾತೆ ವಿನತೆಯನ್ನು ಕೇಳಿದನು: “ಮಾತೆ! ಈ ಸರ್ಪಗಳು ಹೇಳಿದ ಕೆಲಸಗಳನ್ನೆಲ್ಲ ನಾನು ಏಕೆ ಮಾಡಬೇಕು?”

01023009 ವಿನತೋವಾಚ|

01023009a ದಾಸೀಭೂತಾಸ್ಮ್ಯನಾರ್ಯಾಯಾ ಭಗಿನ್ಯಾಃ ಪತಗೋತ್ತಮ|

01023009c ಪಣಂ ವಿತಥಮಾಸ್ಥಾಯ ಸರ್ಪೈರುಪಧಿನಾ ಕೃತಂ||

ವಿನತೆಯು ಹೇಳಿದಳು: “ಪತಗೋತ್ತಮ! ಸರ್ಪಗಳ ಮೋಸದಿಂದ ನಾನು ಪಣವನ್ನು ಸೋತು ನನ್ನ ಪತಿಯ ಎರಡನೇ ಪತ್ನಿ ನನ್ನ ಸಹೋದರಿಯ ದಾಸಿಯಾಗಿದ್ದೇನೆ.””

01023010 ಸೂತ ಉವಾಚ|

01023010a ತಸ್ಮಿಂಸ್ತು ಕಥಿತೇ ಮಾತ್ರಾ ಕಾರಣೇ ಗಗನೇಚರಃ|

01023010c ಉವಾಚ ವಚನಂ ಸರ್ಪಾಂಸ್ತೇನ ದುಃಖೇನ ದುಃಖಿತಃ||

ಸೂತನು ಹೇಳಿದನು: “ತಾಯಿಯಿಂದ ಕಾರಣವನ್ನು ತಿಳಿದ ಗಗನೇಚರನು ದುಃಖಿತನಾಗಿ ಸರ್ಪಗಳಿಗೆ ಹೇಳಿದನು:

01023011a ಕಿಮಾಹೃತ್ಯ ವಿದಿತ್ವಾ ವಾ ಕಿಂ ವಾ ಕೃತ್ವೇಹ ಪೌರುಷಂ|

01023011c ದಾಸ್ಯಾದ್ವೋ ವಿಪ್ರಮುಚ್ಯೇಯಂ ಸತ್ಯಂ ಶಂಸತ ಲೇಲಿಹಾಃ||

“ಸರ್ಪಗಳೇ! ಏನನ್ನು ತಂದುಕೊಡುವುದರಿಂದ, ಅಥವಾ ಏನನ್ನು ಹೇಳಿಕೊಡುವುದರಿಂದ, ಅಥವಾ ಎಂಥಹ ಪೌರುಷ ಕೆಲಸವನ್ನು ಮಾಡುವುದರಿಂದ ನಾವು ಈ ದಾಸತ್ವದಿಂದ ಬಿಡುಗಡೆ ಹೊಂದಬಹುದು ಹೇಳಿ.”

01023012a ಶ್ರುತ್ವಾ ತಮಬ್ರುವನ್ಸರ್ಪಾ ಆಹರಾಮೃತಮೋಜಸಾ|

01023012c ತತೋ ದಾಸ್ಯಾದ್ವಿಪ್ರಮೋಕ್ಷೋ ಭವಿತಾ ತವ ಖೇಚರ||

ಅವನು ಹೇಳಿದ್ದುದನ್ನು ಕೇಳಿದ ಸರ್ಪಗಳು “ಖೇಚರ! ಬಲವನ್ನುಪಯೋಗಿಸಿ ಅಮೃತವನ್ನು ತೆಗೆದುಕೊಂಡು ಬಾ. ಆಗ ನೀವು ದಾಸತ್ವದಿಂದ ಮುಕ್ತರಾಗುವಿರಿ” ಎಂದವು.”

ಇತಿ ಶ್ರೀ ಮಹಾಭಾರತೇ ಆದಿ ಪರ್ವಣಿ ಆಸ್ತೀಕ ಪರ್ವಣಿ ಸೌಪರ್ಣೇ ತ್ರಯೋವಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆದಿ ಪರ್ವದಲ್ಲಿ ಆಸ್ತೀಕ ಪರ್ವದಲ್ಲಿ ಸೌಪರ್ಣದಲ್ಲಿ ಇಪ್ಪತ್ಮೂರನೇ ಅಧ್ಯಾಯವು.

Leave a Reply

Your email address will not be published. Required fields are marked *