Adi Parva: Chapter 22

ಆದಿ ಪರ್ವ: ಆಸ್ತೀಕ ಪರ್ವ

೨೨

ಇಂದ್ರನು ಮಳೆಸುರಿಸಿ ಸರ್ಪಗಳನ್ನು ಪುನಃಶ್ಚೇತರಿಸಿದುದು (೧-೫).

01022001 ಸೂತ ಉವಾಚ|

01022001a ಏವಂ ಸ್ತುತಸ್ತದಾ ಕದ್ರ್ವಾ ಭಗವಾನ್ ಹರಿವಾಹನಃ|

01022001c ನೀಲಜೀಮೂತಸಂಘಾತೈರ್ವ್ಯೋಮ ಸರ್ವಂ ಸಮಾವೃಣೋತ್||

ಸೂತನು ಹೇಳಿದನು: “ಈ ರೀತಿ ಕದ್ರುವಿನಿಂದ ಸ್ತುತಿಸಲ್ಪಟ್ಟ ಭಗವಾನ್ ಹರಿವಾಹನನು ಆಕಾಶವನ್ನು ಕಪ್ಪು ಮೋಡಗಳಿಂದ ತುಂಬಿದನು.

01022002a ತೇ ಮೇಘಾ ಮುಮುಚುಸ್ತೋಯಂ ಪ್ರಭೂತಂ ವಿದ್ಯುದುಜ್ಜ್ವಲಾಃ|

01022002c ಪರಸ್ಪರಮಿವಾತ್ಯರ್ಥಂ ಗರ್ಜಂತಃ ಸತತಂ ದಿವಿ||

“ಮಳೆ ಸುರಿಸಿ” ಎಂದು ಅಜ್ಞಾಪಿಸಲು ಆ ಮೇಘಗಳು ಆಕಾಶದಲ್ಲಿ ಸತತವಾಗಿ ಪರಸ್ಪರರನ್ನು ತಾಗಿ ಮಿಂಚಿನಿಂದ ಬೆಳಗಿ ಗುಡುಗಿದವು.

01022003a ಸಂಘಾತಿತಮಿವಾಕಾಶಂ ಜಲದೈಃ ಸುಮಹಾದ್ಭುತೈಃ|

01022003c ಸೃಜದ್ಭಿರತುಲಂ ತೋಯಮಜಸ್ರಂ ಸುಮಹಾರವೈಃ||

ಹೊಡೆದಾಡುತ್ತಿವೆಯೋ ಎನ್ನುವಹಾಗೆ ಸುಮಹಾದ್ಭುತ ಅತುಲ ನೀರನ್ನು ಮಳೆಯನ್ನಾಗಿ ಸುರಿಸಿದವು.

01022004a ಸಂಪ್ರನೃತ್ತಮಿವಾಕಾಶಂ ಧಾರೋರ್ಮಿಭಿರನೇಕಶಃ|

01022004c ಮೇಘಸ್ತನಿತನಿರ್ಘೋಷಮಂಬರಂ ಸಮಪದ್ಯತ||

ಅನೇಕ ಮಿಂಚು ಗುಡುಗುಗಳಿಂದ ಮಳೆಯನ್ನು ಸುರಿಸುತ್ತಿರಲು ಅಂಬರವು ಹುಚ್ಚಾಗಿ ಕುಣಿಯುತ್ತಿರುವಂತೆ ತೋರುತ್ತಿತ್ತು.

01022005a ನಾಗಾನಾಮುತ್ತಮೋ ಹರ್ಶಸ್ತದಾ ವರ್ಷತಿ ವಾಸವೇ|

01022005c ಆಪೂರ್ಯತ ಮಹೀ ಚಾಪಿ ಸಲಿಲೇನ ಸಮಂತತಃ||

ವಾಸವನು ಮಳೆ ಸುರಿಸುತ್ತಿದ್ದಂತೆ ನಾಗಗಳು ತುಂಬಾ ಹರ್ಷಿತಗೊಂಡವು ಮತ್ತು ಮಹಿಯೂ ಕೂಡ ಶೀತಲ ಶುದ್ಧ ನೀರಿನಿಂದ ತುಂಬಿಕೊಂಡಿತು.”

ಇತಿ ಶ್ರೀ ಮಹಾಭಾರತೇ ಆದಿ ಪರ್ವಣಿ ಆಸ್ತೀಕ ಪರ್ವಣಿ ಸೌಪರ್ಣೇ ದ್ವಾವಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆದಿ ಪರ್ವದಲ್ಲಿ ಆಸ್ತೀಕ ಪರ್ವದಲ್ಲಿ ಸೌಪರ್ಣದಲ್ಲಿ ಇಪ್ಪತ್ತೆರಡನೆಯ ಅಧ್ಯಾಯವು.

Leave a Reply

Your email address will not be published. Required fields are marked *