ಆದಿ ಪರ್ವ: ಚೈತ್ರರಥ ಪರ್ವ
೧೭೪
ಧೌಮ್ಯ
ಅನುರೂಪ ಪುರೋಹಿತರ್ಯಾರಿದ್ದಾರೆ ಎಂದು ಕೇಳಲು ಚಿತ್ರರಥನು ದೇವಲನ ಕಿರಿಯ ತಮ್ಮ ಧೌಮ್ಯನ ಕುರಿತು ಹೇಳಿ, ಪಾಂಡವರನ್ನು ಬೀಳ್ಕೊಳ್ಳುವುದು (೧-೫). ಉತ್ಕೋಚಕ ತೀರ್ಥದಲ್ಲಿದ್ದ ಧೌಮ್ಯನನ್ನು ಪುರೋಹಿತನನ್ನಾಗಿಸಿಕೊಂಡು, ದ್ರೌಪದಿಯ ಸ್ವಯಂವರಕ್ಕೆ ಪಾಂಡವರು ಮುಂದುವರೆದುದು (೬-೧೨).
01174001 ಅರ್ಜುನ ಉವಾಚ|
01174001a ಅಸ್ಮಾಕಮನುರೂಪೋ ವೈ ಯಃ ಸ್ಯಾದ್ಗಂಧರ್ವ ವೇದವಿತ್|
01174001c ಪುರೋಹಿತಸ್ತಮಾಚಕ್ಷ್ವ ಸರ್ವಂ ಹಿ ವಿದಿತಂ ತವ||
ಅರ್ಜುನನು ಹೇಳಿದನು: “ಗಂಧರ್ವ! ನಮ್ಮ ಅನುರೂಪ ಪುರೋಹಿತನಾಗಬಲ್ಲ ವೇದವಿದರು ಯಾರಾದರೂ ಇದ್ದಾರೆಯೇ? ನಿನಗೆ ಎಲ್ಲವೂ ತಿಳಿದಿದೆ.”
01174002 ಗಂಧರ್ವ ಉವಾಚ|
01174002a ಯವೀಯಾನ್ದೇವಲಸ್ಯೈಷ ವನೇ ಭ್ರಾತಾ ತಪಸ್ಯತಿ|
01174002c ಧೌಮ್ಯ ಉತ್ಕೋಚಕೇ ತೀರ್ಥೇ ತಂ ವೃಣುಧ್ವಂ ಯದೀಚ್ಛಥ||
ಗಂಧರ್ವನು ಹೇಳಿದನು: “ದೇವಲನ ಕಿರಿಯ ತಮ್ಮನು ಉತ್ಕೋಚಕ ತೀರ್ಥದ ವನದಲ್ಲಿ ತಪಸ್ಸನ್ನಾಚರಿಸುತ್ತಿದ್ದಾನೆ. ನಿಮಗಿಷ್ಟವಾದರೆ ಅವನನ್ನು ಆರಿಸಿಕೊಳ್ಳಿ.””
01174003 ವೈಶಂಪಾಯನ ಉವಾಚ|
01174003a ತತೋಽರ್ಜುನೋಽಸ್ತ್ರಮಾಗ್ನೇಯಂ ಪ್ರದದೌ ತದ್ಯಥಾವಿಧಿ|
01174003c ಗಂಧರ್ವಾಯ ತದಾ ಪ್ರೀತೋ ವಚನಂ ಚೇದಮಬ್ರವೀತ್||
ವೈಶಂಪಾಯನನು ಹೇಳಿದನು: “ನಂತರ ಅರ್ಜುನನು ಗಂಧರ್ವನಿಗೆ ಯಥಾವಿಧಿ ಆಗ್ನೇಯಾಸ್ತ್ರವನ್ನು ನೀಡಿ, ಪ್ರೀತಿಯಿಂದ ಹೇಳಿದನು:
01174004a ತ್ವಯ್ಯೇವ ತಾವತ್ತಿಷ್ಠಂತು ಹಯಾ ಗಂಧರ್ವಸತ್ತಮ|
01174004c ಕರ್ಮಕಾಲೇ ಗ್ರಹೀಷ್ಯಾಮಿ ಸ್ವಸ್ತಿ ತೇಽಸ್ತ್ವಿತಿ ಚಾಬ್ರವೀತ್||
“ಗಂಧರ್ವಸತ್ತಮ! ಕುದುರೆಗಳನ್ನು ಸದ್ಯ ನಿನ್ನಲ್ಲಿಯೇ ಇಟ್ಟುಕೋ. ನಮಗೆ ಬೇಕಾದಾಗ ಅವುಗಳನ್ನು ತೆಗೆದುಕೊಳ್ಳುತ್ತೇವೆ. ನಿನಗೆ ಮಂಗಳವಾಗಲಿ!”
01174005a ತೇಽನ್ಯೋನ್ಯಮಭಿಸಂಪೂಜ್ಯ ಗಂಧರ್ವಃ ಪಾಂಡವಾಶ್ಚ ಹ|
01174005c ರಮ್ಯಾದ್ಭಾಗೀರಥೀಕಚ್ಛಾದ್ಯಥಾಕಾಮಂ ಪ್ರತಸ್ಥಿರೇ||
ಗಂಧರ್ವ ಮತ್ತು ಪಾಂಡವರು ಅನ್ಯೋನ್ಯರಿಂದ ಬೀಳ್ಕೊಂಡು ರಮ್ಯ ಭಾಗೀರಥಿಯನ್ನು ದಾಟಿ ಮುಂದೆ ಹೊರಟರು.
01174006a ತತ ಉತ್ಕೋಚಕಂ ತೀರ್ಥಂ ಗತ್ವಾ ಧೌಮ್ಯಾಶ್ರಮಂ ತು ತೇ|
01174006c ತಂ ವವ್ರುಃ ಪಾಂಡವಾ ಧೌಮ್ಯಂ ಪೌರೋಹಿತ್ಯಾಯ ಭಾರತ||
ಭಾರತ! ನಂತರ ಅವರು ಉತ್ಕೋಚಕ ತೀರ್ಥದಲ್ಲಿ ಧೌಮ್ಯಾಶ್ರಮಕ್ಕೆ ಹೋಗಿ ಧೌಮ್ಯನನ್ನು ತಮ್ಮ ಪುರೋಹಿತನನ್ನಾಗಿ ಆರಿಸಿಕೊಂಡರು.
01174007a ತಾನ್ಧೌಮ್ಯಃ ಪ್ರತಿಜಗ್ರಾಹ ಸರ್ವವೇದವಿದಾಂ ವರಃ|
01174007c ಪಾದ್ಯೇನ ಫಲಮೂಲೇನ ಪೌರೋಹಿತ್ಯೇನ ಚೈವ ಹ||
ಸರ್ವವೇದವಿದರಲ್ಲಿ ಶ್ರೇಷ್ಠ ಧೌಮ್ಯನು ಅವರನ್ನು ಪಾದ್ಯ, ಫಲಮೂಲ ಮತ್ತು ಪೌರೋಹಿತ್ಯದಿಂದ ಸ್ವೀಕರಿಸಿದನು.
01174008a ತೇ ತದಾಶಂಸಿರೇ ಲಬ್ಧಾಂ ಶ್ರಿಯಂ ರಾಜ್ಯಂ ಚ ಪಾಂಡವಾಃ|
01174008c ತಂ ಬ್ರಾಹ್ಮಣಂ ಪುರಸ್ಕೃತ್ಯ ಪಾಂಚಾಲ್ಯಾಶ್ಚ ಸ್ವಯಂವರಂ||
ಬ್ರಾಹ್ಮಣನನ್ನು ಮುಂದಿಟ್ಟುಕೊಂಡ ಪಾಂಡವರಿಗೆ ಈಗ ಸಂಪತ್ತು, ರಾಜ್ಯ ಮತ್ತು ಸ್ವಯಂವರವನ್ನು ಗೆಲ್ಲುವ ಭರವಸೆ ಉಂಟಾಯಿತು.
01174009a ಮಾತೃಷಷ್ಠಾಸ್ತು ತೇ ತೇನ ಗುರುಣಾ ಸಂಗತಾಸ್ತದಾ|
01174009c ನಾಥವಂತಮಿವಾತ್ಮಾನಂ ಮೇನಿರೇ ಭರತರ್ಷಭಾಃ||
ಆರನೆಯವಳಾಗಿ ತಾಯಿಯನ್ನು ಹೊಂದಿದ್ದ ಆ ಭರತರ್ಷಭರು ಸಂಗಡ ಗುರುವಿರುವುದರಿಂದ ತಮ್ಮನ್ನು ತಾವೇ ನಾಥವಂತರೆಂದು ಭಾವಿಸಿದರು.
01174010a ಸ ಹಿ ವೇದಾರ್ಥತತ್ತ್ವಜ್ಞಸ್ತೇಷಾಂ ಗುರುರುದಾರಧೀಃ|
01174010c ತೇನ ಧರ್ಮವಿದಾ ಪಾರ್ಥಾ ಯಾಜ್ಯಾಃ ಸರ್ವವಿದಾ ಕೃತಾಃ||
ಉದಾರಮನಸ್ಕ ಗುರುವು ವೇದಾರ್ಥತತ್ವಜ್ಞಾನಿಯಾಗಿದ್ದನು. ಅವನಿಂದಾಗಿಯೇ ಧರ್ಮವಿದ ಸರ್ವವಿದ ಪಾರ್ಥರು ಯಾಗಗಳನ್ನು ಮಾಡಿದರು.
01174011a ವೀರಾಂಸ್ತು ಸ ಹಿ ತಾನ್ಮೇನೇ ಪ್ರಾಪ್ತರಾಜ್ಯಾನ್ಸ್ವಧರ್ಮತಃ|
01174011c ಬುದ್ಧಿವೀರ್ಯಬಲೋತ್ಸಾಹೈರ್ಯುಕ್ತಾನ್ದೇವಾನಿವಾಪರಾನ್||
ಅವನು ಬುದ್ಧಿವೀರ್ಯಬಲೋತ್ಸಾಹಗಳಿಂದ ಕೂಡಿದ್ದ ದೇವತೆಗಳಂತೆ ಆ ವೀರರು ಸ್ವಧರ್ಮದಿಂದಲೇ ರಾಜ್ಯವನ್ನು ಹೊಂದುತ್ತಾರೆ ಎಂದು ತಿಳಿದನು.
01174012a ಕೃತಸ್ವಸ್ತ್ಯಯನಾಸ್ತೇನ ತತಸ್ತೇ ಮನುಜಾಧಿಪಾಃ|
01174012c ಮೇನಿರೇ ಸಹಿತಾ ಗಂತುಂ ಪಾಂಚಾಲ್ಯಾಸ್ತಂ ಸ್ವಯಂವರಂ||
ಅವರ ಮಾರ್ಗವು ಮಂಗಳಕರವಾಗಲಿ ಎಂದು ಹರಸಿದನು. ನಂತರ ಆ ಮನುಜಾಧಿಪರು ಒಟ್ಟಿಗೇ ಪಾಂಚಾಲಿಯ ಸ್ವಯಂವರಕ್ಕೆ ಹೋಗಲು ನಿರ್ಧರಿಸಿದರು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ಧೌಮ್ಯಪುರೋಹಿತಕರಣೇ ಚತುಃಸಪ್ತತ್ಯಧಿಕಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ಧೌಮ್ಯಪುರೋಹಿತಕರಣದಲ್ಲಿ ನೂರಾಎಪ್ಪತ್ತ್ನಾಲ್ಕನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-೦/೧೮, ಉಪಪರ್ವಗಳು-೧೧/೧೦೦, ಅಧ್ಯಾಯಗಳು-೧೭೪/೧೯೯೫, ಶ್ಲೋಕಗಳು-೫೭೮೮/೭೩೭೮೪