Adi Parva: Chapter 172

ಆದಿ ಪರ್ವ: ಚೈತ್ರರಥ ಪರ್ವ

೧೭೨

ಪರಾಶರನು ರಾಕ್ಷಸರನ್ನು ನಾಶಪಡಿಸುವ ರಾಕ್ಷಸಸತ್ರವನ್ನು ಕೈಗೊಂಡಿದುದು (೧-೮). ಋಷಿ ಪುಲಸ್ತ್ಯನು ಆ ಕ್ರತುವಿಗೆ ಬಂದು ಸತ್ರವನ್ನು ನಿಲ್ಲಿಸಿದುದು, ಅಗ್ನಿಯನ್ನು ವಿಸರ್ಜಿಸಿದುದು (೯-೧೭).

01172001 ಗಂಧರ್ವ ಉವಾಚ|

01172001a ಏವಮುಕ್ತಃ ಸ ವಿಪ್ರರ್ಷಿರ್ವಸಿಷ್ಠೇನ ಮಹಾತ್ಮನಾ|

01172001c ನ್ಯಯಚ್ಛದಾತ್ಮನಃ ಕೋಪಂ ಸರ್ವಲೋಕಪರಾಭವಾತ್||

ಗಂಧರ್ವನು ಹೇಳಿದನು: “ಮಹಾತ್ಮ ವಸಿಷ್ಠನಿಂದ ಇದನ್ನು ಕೇಳಿದ ಆ ವಿಪ್ರರ್ಷಿಯು ಸರ್ವಲೋಕವನ್ನೂ ಪರಾಭವಗೊಳಿಸುವ ತನ್ನ ಕೋಪವನ್ನು ತಡೆಹಿಡಿದಿಟ್ಟುಕೊಂಡನು.

01172002a ಈಜೇ ಚ ಸ ಮಹಾತೇಜಾಃ ಸರ್ವವೇದವಿದಾಂ ವರಃ|

01172002c ಋಷೀ ರಾಕ್ಷಸಸತ್ರೇಣ ಶಾಕ್ತೇಯೋಽಥ ಪರಾಶರ||

ಆ ಮಹಾತೇಜಸ್ವಿ, ಸರ್ವವೇದವಿದರಲ್ಲಿ ಶ್ರೇಷ್ಠ ಶಾಕ್ತೇಯ ಪರಾಶರ ಋಷಿಯು ರಾಕ್ಷಸಸತ್ರವನ್ನು ನಡೆಸಿದನು.

01172003a ತತೋ ವೃದ್ಧಾಂಶ್ಚ ಬಾಲಾಂಶ್ಚ ರಾಕ್ಷಸಾನ್ಸ ಮಹಾಮುನಿಃ|

01172003c ದದಾಹ ವಿತತೇ ಯಜ್ಞೇ ಶಕ್ತೇರ್ವಧಮನುಸ್ಮರನ್||

ಶಕ್ತಿಯ ವಧೆಯ ನೆನಪಿನಲ್ಲಿ ಮಹಾಮುನಿಯು ಆ ಯಜ್ಞದಲ್ಲಿ ವೃದ್ಧ, ಬಾಲಕ ರಾಕ್ಷಸರನ್ನು ಸುಟ್ಟುಹಾಕಿದನು.

01172004a ನ ಹಿ ತಂ ವಾರಯಾಮಾಸ ವಸಿಷ್ಠೋ ರಕ್ಷಸಾಂ ವಧಾತ್|

01172004c ದ್ವಿತೀಯಾಮಸ್ಯ ಮಾ ಭಾಂಕ್ಷಂ ಪ್ರತಿಜ್ಞಾಮಿತಿ ನಿಶ್ಚಯಾತ್||

ಅವನ ಎರಡನೆಯ ಪ್ರತಿಜ್ಞೆಯನ್ನು ಭಂಗಗೊಳಿಸಬಾರದೆಂದು ನಿಶ್ಚಯಿಸಿ ವಸಿಷ್ಠನೂ ಕೂಡ ಆ ರಾಕ್ಷಸರ ವಧೆಯನ್ನು ನಿಲ್ಲಿಸಲಿಲ್ಲ.

01172005a ತ್ರಯಾಣಾಂ ಪಾವಕಾನಾಂ ಸ ಸತ್ರೇ ತಸ್ಮಿನ್ಮಹಾಮುನಿಃ|

01172005c ಆಸೀತ್ಪುರಸ್ತಾದ್ದೀಪ್ತಾನಾಂ ಚತುರ್ಥ ಇವ ಪಾವಕಃ||

ಆ ಸತ್ರದಲ್ಲಿ ಮೂರು ಪಾವಕಗಳ ಜೊತೆ ಕುಳಿತಿದ್ದ ಆ ಮಹಾಮುನಿಯು ನಾಲ್ಕನೆಯ ಪಾವಕನೋ ಎನ್ನುವಂತೆ ಬೆಳಗುತ್ತಿದ್ದನು.

01172006a ತೇನ ಯಜ್ಞೇನ ಶುಭ್ರೇಣ ಹೂಯಮಾನೇನ ಯುಕ್ತಿತಃ|

01172006c ತದ್ವಿದೀಪಿತಮಾಕಾಶಂ ಸೂರ್ಯೇಣೇವ ಘನಾತ್ಯಯೇ||

ಆ ಶುಭ್ರ ಯಜ್ಞದಲ್ಲಿ ಶಾಸ್ತ್ರೋಕ್ತವಾಗಿ ಹಾಕಿದ ಹವಿಸ್ಸುಗಳಿಂದ ಬೆಂಕಿಯು ಮಳೆಗಾಲದ ಅಂತ್ಯದಲ್ಲಿ ಆಕಾಶದಲ್ಲಿ ಸೂರ್ಯನು ಹೇಗೋ ಹಾಗೆ ಪ್ರಜ್ವಲಿಸುತ್ತಿತ್ತು.

01172007a ತಂ ವಸಿಷ್ಠಾದಯಃ ಸರ್ವೇ ಮುನಯಸ್ತತ್ರ ಮೇನಿರೇ|

01172007c ತೇಜಸಾ ದಿವಿ ದೀಪ್ಯಂತಂ ದ್ವಿತೀಯಮಿವ ಭಾಸ್ಕರಂ||

ವಸಿಷ್ಠರೇ ಮೊದಲಾದ ಎಲ್ಲ ಮುನಿಗಳೂ ಅವನು ತೇಜಸ್ಸಿನಿಂದ ದಿವಿಯಲ್ಲಿ ದೇದೀಪ್ಯಮಾನನಾದ ಎರಡನೆಯ ಭಾಸ್ಕರನೆಂದು ಅಭಿಪ್ರಾಯಪಟ್ಟರು.

01172008a ತತಃ ಪರಮದುಷ್ಪ್ರಾಪಮನ್ಯೈರೃಷಿರುದಾರಧೀಃ|

01172008c ಸಮಾಪಿಪಯಿಷುಃ ಸತ್ರಂ ತಮತ್ರಿಃ ಸಮುಪಾಗಮತ್||

ಅನ್ಯರಿಂದ ಪರಮ ದುರ್ಲಭ ಆ ಸತ್ರದ ಬಳಿಗೆ ಉದಾರ ಮನಸ್ಕ ಅತ್ರಿಯು ಬಂದು ಅದನ್ನು ನಿಲ್ಲಿಸಲು ಪ್ರಯತ್ನಿಸಿದನು.

01172009a ತಥಾ ಪುಲಸ್ತ್ಯಃ ಪುಲಹಃ ಕ್ರತುಶ್ಚೈವ ಮಹಾಕ್ರತುಂ|

01172009c ಉಪಾಜಗ್ಮುರಮಿತ್ರಘ್ನ ರಕ್ಷಸಾಂ ಜೀವಿತೇಪ್ಸಯಾ||

ಅಮಿತ್ರಘ್ನ! ಅದೇ ರೀತಿ ರಾಕ್ಷಸರು ಜೀವಂತವಿರಬೇಕೆಂದು ಬಯಸಿದ ಪುಲಸ್ತ್ಯ, ಪುಲಹ ಮತ್ತು ಕ್ರತು ಆ ಮಹಾಕ್ರತುವಿಗೆ ಬಂದರು.

01172010a ಪುಲಸ್ತ್ಯಸ್ತು ವಧಾತ್ತೇಷಾಂ ರಕ್ಷಸಾಂ ಭರತರ್ಷಭ|

01172010c ಉವಾಚೇದಂ ವಚಃ ಪಾರ್ಥ ಪರಾಶರಮರಿಂದಮಂ||

ಭರತರ್ಷಭ! ಪಾರ್ಥ! ಆ ರಾಕ್ಷಸರ ವಧೆಯ ಕುರಿತು ಅರಿಂದಮ ಪರಾಶರನಲ್ಲಿ ಪುಲಸ್ತ್ಯನು ಈ ಮಾತುಗಳನ್ನಾಡಿದನು:

01172011a ಕಚ್ಚಿತ್ತಾತಾಪವಿಘ್ನಂ ತೇ ಕಚ್ಚಿನ್ನಂದಸಿ ಪುತ್ರಕ|

01172011c ಅಜಾನತಾಮದೋಷಾಣಾಂ ಸರ್ವೇಷಾಂ ರಕ್ಷಸಾಂ ವಧಾತ್|

“ಪುತ್ರಕ! ನಿನ್ನನ್ನು ಯಾವುದೂ ತಡೆಹಿಡಿಯುವುದಿಲ್ಲವೇ? ಅಜಾನತ ಅದೋಷಣ ಸರ್ವ ರಾಕ್ಷಸರ ವಧೆಗೈಯುವುದರಲ್ಲಿ ನಿನಗೆ ಯಾವರೀತಿಯ ಆನಂದವು ದೊರೆಯುತ್ತದೆ?

01172012a ಪ್ರಜೋಚ್ಛೇದಮಿಮಂ ಮಹ್ಯಂ ಸರ್ವಂ ಸೋಮಪಸತ್ತಮ|

01172012c ಅಧರ್ಮಿಷ್ಠಂ ವರಿಷ್ಠಃ ಸನ್ಕುರುಷೇ ತ್ವಂ ಪರಾಶರ|

ಪರಾಶರ! ಸೋಮಪಸತ್ತಮ! ನನ್ನ ಕುಲದ ಸರ್ವರನ್ನೂ ಕೊಲ್ಲುವುದರಿಂದ ನೀನು ಅತಿ ದೊಡ್ಡ ಅಧರ್ಮವನ್ನು ಎಸಗುತ್ತಿರುವೆ.

01172012e ರಾಜಾ ಕಲ್ಮಾಷಪಾದಶ್ಚ ದಿವಮಾರೋಢುಮಿಚ್ಛತಿ||

01172013a ಯೇ ಚ ಶಕ್ತ್ಯವರಾಃ ಪುತ್ರಾ ವಸಿಷ್ಠಸ್ಯ ಮಹಾಮುನೇಃ|

01172013c ತೇ ಚ ಸರ್ವೇ ಮುದಾ ಯುಕ್ತಾ ಮೋದಂತೇ ಸಹಿತಾಃ ಸುರೈಃ|

01172013e ಸರ್ವಮೇತದ್ವಸಿಷ್ಠಸ್ಯ ವಿದಿತಂ ವೈ ಮಹಾಮುನೇ||

01172014a ರಕ್ಷಸಾಂ ಚ ಸಮುಚ್ಛೇದ ಏಷ ತಾತ ತಪಸ್ವಿನಾಂ|

01172014c ನಿಮಿತ್ತಭೂತಸ್ತ್ವಂ ಚಾತ್ರ ಕ್ರತೌ ವಾಸಿಷ್ಠನಂದನ|

01172014e ಸ ಸತ್ರಂ ಮುಂಚ ಭದ್ರಂ ತೇ ಸಮಾಪ್ತಮಿದಮಸ್ತು ತೇ||

ರಾಜ ಕಲ್ಮಾಷಪಾದನು ಸ್ವರ್ಗವನ್ನು ಸೇರುತ್ತಾನೆ. ಮಹಾಮುನಿ ವಸಿಷ್ಠನ ಪುತ್ರರು ಶಕ್ತಿ ಮತ್ತು ಇತರ ಸರ್ವರೂ ಸಂತೋಷದಿಂದ ಸುರರ ಸಹಿತ ವಿನೋದದಿಂದಿದ್ದಾರೆ. ಮಹಾಮುನಿ! ಮಗು! ಇದೆಲ್ಲವೂ ಮತ್ತು ಕಾಡಿಸುವ ರಾಕ್ಷಸರ ಸಮುಚ್ಛೇದವೂ ವಸಿಷ್ಠನಿಗೆ ತಿಳಿದಿದ್ದುದೇ ಆಗಿದೆ. ವಸಿಷ್ಠ ನಂದನ! ನೀನು ಈ ಕ್ರತುವಿನ ನಿಮಿತ್ತನಾಗಿದ್ದೀಯೆ. ಈ ಸತ್ರವನ್ನು ಮುಗಿಸು. ನಿನಗೆ ಮಂಗಳವಾಗಲಿ. ನಿನ್ನಿಂದಲೇ ಇದು ಸಮಾಪ್ತಿಯಾಗಲಿ.”

01172015a ಏವಮುಕ್ತಃ ಪುಲಸ್ತ್ಯೇನ ವಸಿಷ್ಠೇನ ಚ ಧೀಮತಾ|

01172015c ತದಾ ಸಮಾಪಯಾಮಾಸ ಸತ್ರಂ ಶಾಕ್ತಿಃ ಪರಾಶರಃ||

ಪುಲಸ್ತ್ಯ ಮತ್ತು ವಸಿಷ್ಠರಿಂದ ಇದನ್ನು ಕೇಳಿದ ಧೀಮಂತ ಶಾಕ್ತಿ ಪರಾಶರನು ಆ ಸತ್ರವನ್ನು ಅಲ್ಲಿಯೇ ನಿಲ್ಲಿಸಿದನು.

01172016a ಸರ್ವರಾಕ್ಷಸಸತ್ರಾಯ ಸಂಭೃತಂ ಪಾವಕಂ ಮುನಿಃ|

01172016c ಉತ್ತರೇ ಹಿಮವತ್ಪಾರ್ಶ್ವೇ ಉತ್ಸಸರ್ಜ ಮಹಾವನೇ||

ಸರ್ವ ರಾಕ್ಷಸಸತ್ರಕ್ಕಾಗಿ ಸಂಭೃತಗೊಂಡ ಪಾವಕನನ್ನು ಮುನಿಯು ಹಿಮವತ್ ಪರ್ವತದ ಉತ್ತರ ಭಾಗದಲ್ಲಿರುವ ಮಹಾವನದಲ್ಲಿ ವಿಸರ್ಜಿಸಿದನು.

01172017a ಸ ತತ್ರಾದ್ಯಾಪಿ ರಕ್ಷಾಂಸಿ ವೃಕ್ಷಾನಶ್ಮಾನ ಏವ ಚ|

01172017c ಭಕ್ಷಯನ್ದೃಶ್ಯತೇ ವಹ್ನಿಃ ಸದಾ ಪರ್ವಣಿ ಪರ್ವಣಿ||

ರಾಕ್ಷಸರನ್ನು, ವೃಕ್ಷಗಳನ್ನು ಮತ್ತು ಶಿಲೆಬಂಡೆಗಳನ್ನು ಭಕ್ಷಿಸುತ್ತಿರುವ ಆ ವಹ್ನಿಯು ಈಗಲೂ ಕೂಡ ಪರ್ವ ಪರ್ವಗಳಲ್ಲಿ ಕಾಣಿಸಿಕೊಳ್ಳುತ್ತದೆ.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ಔರ್ವೋಪಾಖ್ಯಾನೇ ದ್ವಿಸಪ್ತತ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ಔರ್ವೋಪಾಖ್ಯಾನದಲ್ಲಿ ನೂರಾಎಪ್ಪತ್ತೆರಡನೆಯ ಅಧ್ಯಾಯವು.

Related image

Comments are closed.