ಆದಿ ಪರ್ವ: ಚೈತ್ರರಥ ಪರ್ವ
೧೬೨
ಸಂವರಣನು ಸೂರ್ಯನ ಕುರಿತು ತಪಸ್ಸನ್ನಾಚರಿಸಿದ್ದುದು (೧-೧೧). ಅವನ ಪ್ರಾರ್ಥನೆಯಂತೆ ಋಷಿ ವಸಿಷ್ಠನು ಸೂರ್ಯನಲ್ಲಿಗೆ ತಪತಿಯನ್ನು ಸಂವರಣನಿಗಾಗಿ ಕೇಳಲು ಹೋದುದು (೧೨-೧೮).
01162001 ಗಂಧರ್ವ ಉವಾಚ|
01162001a ಏವಮುಕ್ತ್ವಾ ತತಸ್ತೂರ್ಣಂ ಜಗಾಮೋರ್ಧ್ವಮನಿಂದಿತಾ|
01162001c ಸ ತು ರಾಜಾ ಪುನರ್ಭೂಮೌ ತತ್ರೈವ ನಿಪಪಾತ ಹ||
ಗಂಧರ್ವನು ಹೇಳಿದನು: “ಹೀಗೆ ಹೇಳಿದ ತಕ್ಷಣವೇ ಆ ಅನಿಂದಿತೆಯು ಮೇಲೆ ಹೋದಳು ಮತ್ತು ರಾಜನು ಪುನಃ ಅಲ್ಲಿಯೇ ಭೂಮಿಯ ಮೇಲೆ ಬಿದ್ದನು.
01162002a ಅಮಾತ್ಯಃ ಸಾನುಯಾತ್ರಸ್ತು ತಂ ದದರ್ಶ ಮಹಾವನೇ|
01162002c ಕ್ಷಿತೌ ನಿಪತಿತಂ ಕಾಲೇ ಶಕ್ರಧ್ವಜಮಿವೋಚ್ಛ್ರಿತಂ||
ಅವನ ಅಮಾತ್ಯ ಮತ್ತು ಅನುಯಾಯಿಗಳು ಆ ಮಹಾವನದಲ್ಲಿ ಕಾಲದಲ್ಲಿ ಶಕ್ರಧ್ವಜವು ಬಿದ್ದಂತೆ ಭೂಮಿಯ ಮೇಲೆ ಮೂರ್ಛಿತನಾಗಿ ಬಿದ್ದಿದ್ದ ಅವನನ್ನು ಕಂಡರು.
01162003a ತಂ ಹಿ ದೃಷ್ಟ್ವಾ ಮಹೇಷ್ವಾಸಂ ನಿರಶ್ವಂ ಪತಿತಂ ಕ್ಷಿತೌ|
01162003c ಬಭೂವ ಸೋಽಸ್ಯ ಸಚಿವಃ ಸಂಪ್ರದೀಪ್ತ ಇವಾಗ್ನಿನಾ||
ಬೆಳಗುತ್ತಿರುವ ಅಗ್ನಿಯಂತೆ ನಿರಶ್ವನಾಗಿ ಕ್ಷಿತಿಯಲ್ಲಿ ಬಿದ್ದಿರುವ ಮಹೇಷ್ವಾಸನನ್ನು ನೋಡಿದ ಅವನನ್ನು ಅವನ ಸಚಿವನು ನೋಡಿದನು.
01162004a ತ್ವರಯಾ ಚೋಪಸಂಗಮ್ಯ ಸ್ನೇಹಾದಾಗತಸಂಭ್ರಮಃ|
01162004c ತಂ ಸಮುತ್ಥಾಪಯಾಮಾಸ ನೃಪತಿಂ ಕಾಮಮೋಹಿತಂ||
01162005a ಭೂತಲಾದ್ಭೂಮಿಪಾಲೇಶಂ ಪಿತೇವ ಪತಿತಂ ಸುತಂ|
01162005c ಪ್ರಜ್ಞಯಾ ವಯಸಾ ಚೈವ ವೃದ್ಧಃ ಕೀರ್ತ್ಯಾ ದಮೇನ ಚ||
ತ್ವರೆಮಾಡಿ ಅವನ ಬಳಿ ಹೋಗಿ ಸ್ನೇಹಭಾವದಿಂದ ಸಂಭ್ರಮಗೊಂಡು ಪ್ರಜ್ಞೆ, ವಯಸ್ಸು, ಕೀರ್ತಿ ಮತ್ತು ದಮದಲ್ಲಿ ವೃದ್ಧನಾಗಿದ್ದ ಅವನು ಕಾಮಮೋಹಿತ ನೃಪತಿಯನ್ನು ಭೂಮಿಯ ಮೇಲೆ ಬಿದ್ದಿರುವ ಸುತನನ್ನು ತಂದೆಯು ಹೇಗೋ ಹಾಗೆ ಭೂಮಿಯಿಂದ ಮೇಲೆತ್ತಿದನು.
01162006a ಅಮಾತ್ಯಸ್ತಂ ಸಮುತ್ಥಾಪ್ಯ ಬಭೂವ ವಿಗತಜ್ವರಃ|
01162006c ಉವಾಚ ಚೈನಂ ಕಲ್ಯಾಣ್ಯಾ ವಾಚಾ ಮಧುರಯೋತ್ಥಿತಂ|
01162006e ಮಾ ಭೈರ್ಮನುಜಶಾರ್ದೂಲ ಭದ್ರಂ ಚಾಸ್ತು ತವಾನಘ||
ಅವನನ್ನು ಮೇಲಕ್ಕೆತ್ತಿದ ಅಮಾತ್ಯನು ಉದ್ವೇಗವು ಹೊರಟುಹೋಗಿ ಎದ್ದುನಿಂತಿರುವ ಕಲ್ಯಾಣಕರನಿಗೆ ಈ ರೀತಿಯ ಮಧುರ ಮಾತುಗಳನ್ನಾಡಿದನು: “ಮನುಜಶಾರ್ದೂಲ! ಅನಘ! ಭಯಪಡಬೇಡ! ಎಲ್ಲವೂ ಮಂಗಳಕರವಾಗುತ್ತದೆ.”
01162007a ಕ್ಷುತ್ಪಿಪಾಸಾಪರಿಶ್ರಾಂತಂ ತರ್ಕಯಾಮಾಸ ತಂ ನೃಪಂ|
01162007c ಪತಿತಂ ಪಾತನಂ ಸಂಖ್ಯೇ ಶಾತ್ರವಾಣಾಂ ಮಹೀತಲೇ||
ಹಲವಾರು ಶತ್ರುಗಳನ್ನು ರಣರಂಗದಲ್ಲಿ ಬೀಳಿಸುವ ನೃಪನು ಹಸಿವು ಬಾಯಾರಿಕೆಗಳಿಂದ ಬಳಲಿ ಮಹೀತಲದಲ್ಲಿ ಬಿದ್ದಿದ್ದಾನೆ ಎಂದು ಅವನು ಯೋಚಿಸಿದನು.
01162008a ವಾರಿಣಾಥ ಸುಶೀತೇನ ಶಿರಸ್ತಸ್ಯಾಭ್ಯಷೇಚಯತ್|
01162008c ಅಸ್ಪೃಶನ್ಮುಕುಟಂ ರಾಜ್ಞಃ ಪುಂಡರೀಕಸುಗಂಧಿನಾ||
ರಾಜನ ಮುಕುಟವನ್ನು ಮುಟ್ಟದೆಯೇ ಅವನು ಪುಂಡರೀಕಸುಗಂಧಿತ ತಣ್ಣನೆಯ ನೀರನ್ನು ಅವನ ತಲೆಯ ಮೇಲೆ ಸಿಂಚಿಸಿದನು.
01162009a ತತಃ ಪ್ರತ್ಯಾಗತಪ್ರಾಣಸ್ತದ್ಬಲಂ ಬಲವಾನ್ನೃಪಃ|
01162009c ಸರ್ವಂ ವಿಸರ್ಜಯಾಮಾಸ ತಮೇಕಂ ಸಚಿವಂ ವಿನಾ||
ಪುನಃ ಚೇತರಿಸಿಕೊಂಡ ಬಲವಾನ್ ನೃಪನು ತನ್ನ ಸಚಿವ ಮಾತ್ರನನ್ನು ಬಿಟ್ಟು ಉಳಿದ ಎಲ್ಲ ಬಲವನ್ನೂ ವಿಸರ್ಜಿಸಿದನು.
01162010a ತತಸ್ತಸ್ಯಾಜ್ಞಯಾ ರಾಜ್ಞೋ ವಿಪ್ರತಸ್ಥೇ ಮಹದ್ಬಲಂ|
01162010c ಸ ತು ರಾಜಾ ಗಿರಿಪ್ರಸ್ಥೇ ತಸ್ಮಿನ್ಪುನರುಪಾವಿಶತ್||
ರಾಜನ ಆಜ್ಞೆಯಂತೆ ಆ ಮಹಾಬಲವು ಹೊರಟುಹೋದ ನಂತರ ರಾಜನು ಪುನಃ ಗಿರಿಪ್ರಸ್ಥದಲ್ಲಿ ಕುಳಿತುಕೊಂಡನು.
01162011a ತತಸ್ತಸ್ಮಿನ್ಗಿರಿವರೇ ಶುಚಿರ್ಭೂತ್ವಾ ಕೃತಾಂಜಲಿಃ|
01162011c ಆರಿರಾಧಯಿಷುಃ ಸೂರ್ಯಂ ತಸ್ಥಾವೂರ್ಧ್ವಭುಜಃ ಕ್ಷಿತೌ||
ಆಗ ಆ ಗಿರಿವರದಲ್ಲಿ ಅವನು ಶುಚಿರ್ಭೂತನಾಗಿ ಅಂಜಲೀಬದ್ಧನಾಗಿ ಭುಜಗಳನ್ನು ಮೇಲಕ್ಕೆತ್ತಿ ಸೂರ್ಯನನ್ನು ಆರಾಧಿಸುತ್ತಾ ನಿಂತುಕೊಂಡನು.
01162012a ಜಗಾಮ ಮನಸಾ ಚೈವ ವಸಿಷ್ಠಂ ಋಷಿಸತ್ತಮಂ|
01162012c ಪುರೋಹಿತಮಮಿತ್ರಘ್ನಸ್ತದಾ ಸಂವರಣೋ ನೃಪಃ||
ಆಗ ಆ ಅಮಿತ್ರಘ್ನ ನೃಪ ಸಂವರಣನು ತನ್ನ ಪುರೋಹಿತ ಋಷಿಸತ್ತಮ ವಸಿಷ್ಠನನ್ನು ಮನಸ್ಸಿನಲ್ಲಿಯೇ ನೆನೆಸಿಕೊಂಡನು.
01162013a ನಕ್ತಂದಿನಮಥೈಕಸ್ಥೇ ಸ್ಥಿತೇ ತಸ್ಮಿಂಜನಾಧಿಪೇ|
01162013c ಅಥಾಜಗಾಮ ವಿಪ್ರರ್ಷಿಸ್ತದಾ ದ್ವಾದಶಮೇಽಹನಿ||
ಹನ್ನೆರಡು ದಿನಗಳ ಪರ್ಯಂತ ಆ ಜನಾಧಿಪನು ಅದೇ ಸ್ಥಳದಲ್ಲಿ ನಿಂತುಕೊಂಡಿದ್ದನು. ಹನ್ನೆರಡನೆಯ ದಿನ ಆ ವಿಪ್ರರ್ಷಿಯು ಅಲ್ಲಿಗೆ ಬಂದನು.
01162014a ಸ ವಿದಿತ್ವೈವ ನೃಪತಿಂ ತಪತ್ಯಾ ಹೃತಮಾನಸಂ|
01162014c ದಿವ್ಯೇನ ವಿಧಿನಾ ಜ್ಞಾತ್ವಾ ಭಾವಿತಾತ್ಮಾ ಮಹಾನೃಷಿಃ||
01162015a ತಥಾ ತು ನಿಯತಾತ್ಮಾನಂ ಸ ತಂ ನೃಪತಿಸತ್ತಮಂ|
01162015c ಆಬಭಾಷೇ ಸ ಧರ್ಮಾತ್ಮಾ ತಸ್ಯೈವಾರ್ಥಚಿಕೀರ್ಷಯಾ||
ನೃಪತಿಯು ತಪತಿಯಲ್ಲಿ ಮನಸ್ಸನ್ನು ಕಳೆದುಕೊಂಡಿದ್ದಾನೆ ಎಂದು ದಿವ್ಯ ವಿಧಿಯಿಂದ ಆ ಭಾವಿತಾತ್ಮ ಮಹಾನೃಷಿಯು ತಿಳಿದುಕೊಂಡನು. ಆಗ ಅವನಿಗೆ ಒಳ್ಳೆಯದನ್ನೇ ಮಾಡಬೇಕೆಂದು ಬಯಸಿದ ಆ ಧರ್ಮಾತ್ಮನು ನಿಯತಾತ್ಮ ನೃಪತಿಸತ್ತಮನಲ್ಲಿ ಮಾತನಾಡಿದನು.
01162016a ಸ ತಸ್ಯ ಮನುಜೇಂದ್ರಸ್ಯ ಪಶ್ಯತೋ ಭಗವಾನೃಷಿಃ|
01162016c ಊರ್ಧ್ವಮಾಚಕ್ರಮೇ ದ್ರಷ್ಟುಂ ಭಾಸ್ಕರಂ ಭಾಸ್ಕರದ್ಯುತಿಃ||
ಆ ಮನುಜೇಂದ್ರನು ನೋಡುತ್ತಿದ್ದಂತೆಯೇ ಭಗವಾನೃಷಿಯು ಭಾಸ್ಕರದ್ಯುತಿ ಭಾಸ್ಕರನನ್ನು ನೋಡಲು ಮೇಲೆ ಹೋದನು.
01162017a ಸಹಸ್ರಾಂಶುಂ ತತೋ ವಿಪ್ರಃ ಕೃತಾಂಜಲಿರುಪಸ್ಥಿತಃ|
01162017c ವಸಿಷ್ಠೋಽಹಮಿತಿ ಪ್ರೀತ್ಯಾ ಸ ಚಾತ್ಮಾನಂ ನ್ಯವೇದಯತ್||
ಆಗ ಸಹಸ್ರಾಂಶುವಲ್ಲಿ ಕೃತಾಂಜಲಿಯಾಗಿ ನಿಂತು ವಿಪ್ರನು “ನಾನು ವಸಿಷ್ಠ!” ಎಂದು ತನ್ನನ್ನು ತಾನೇ ನಿವೇದಿಸಿಕೊಂಡನು.
01162018a ತಮುವಾಚ ಮಹಾತೇಜಾ ವಿವಸ್ವಾನ್ಮುನಿಸತ್ತಮಂ|
01162018c ಮಹರ್ಷೇ ಸ್ವಾಗತಂ ತೇಽಸ್ತು ಕಥಯಸ್ವ ಯಥೇಚ್ಛಸಿ||
ಆಗ ಮಹಾತೇಜಸ್ವಿ ವಿವಸ್ವತನು ಆ ಮುನಿಸತ್ತಮನಿಗೆ “ಮಹರ್ಷೇ! ನಿನಗೆ ಸ್ವಾಗತವು! ಏನನ್ನು ಇಚ್ಛಿಸಿ ಬಂದೆ ಹೇಳು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ತಪತ್ಯುಪಾಖ್ಯಾನೇ ದ್ವಿಷಷ್ಟ್ಯಧಿಕಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ತಪತ್ಯುಪಾಖ್ಯಾನದಲ್ಲಿ ನೂರಾಅರವತ್ತೆರಡನೆಯ ಅಧ್ಯಾಯವು.