ಆದಿ ಪರ್ವ: ಚೈತ್ರರಥ ಪರ್ವ
೧೬೧
ತನ್ನ ತಂದೆ ಸೂರ್ಯನು ಅವಳನ್ನು ಸಂವರಣನಿಗೆ ಕೊಡಲು ಒಪ್ಪಿದರೆ ಅಭ್ಯಂತರವಿಲ್ಲವೆಂದು ತಪತಿಯು ಹೇಳುವುದು (೧-೨೦).
01161001 ಗಂಧರ್ವ ಉವಾಚ|
01161001a ಅಥ ತಸ್ಯಾಮದೃಶ್ಯಾಯಾಂ ನೃಪತಿಃ ಕಾಮಮೋಹಿತಃ|
01161001c ಪಾತನಃ ಶತ್ರುಸಂಘಾನಾಂ ಪಪಾತ ಧರಣೀತಲೇ||
ಗಂಧರ್ವನು ಹೇಳಿದನು: “ಅವಳು ಅದೃಶ್ಯಳಾದ ನಂತರ ಶತ್ರುಸಂಘಗಳನ್ನು ಕೆಳಗುರುಳಿಸಬಲ್ಲ ನೃಪತಿಯು ಕಾಮಮೋಹಿತನಾಗಿ ಧರಣೀತಲದಲ್ಲಿ ಬಿದ್ದನು.
01161002a ತಸ್ಮಿನ್ನಿಪತಿತೇ ಭೂಮಾವಥ ಸಾ ಚಾರುಹಾಸಿನೀ|
01161002c ಪುನಃ ಪೀನಾಯತಶ್ರೋಣೀ ದರ್ಶಯಾಮಾಸ ತಂ ನೃಪಂ||
01161003a ಅಥಾಬಭಾಷೇ ಕಲ್ಯಾಣೀ ವಾಚಾ ಮಧುರಯಾ ನೃಪಂ|
01161003c ತಂ ಕುರೂಣಾಂ ಕುಲಕರಂ ಕಾಮಾಭಿಹತಚೇತಸಂ||
ಅವನು ಆ ರೀತಿ ಭೂಮಿಯ ಮೇಲೆ ಬೀಳಲು ಆ ಚಾರುಹಾಸಿನೀ ಪೀನಾಯತಶ್ರೋಣಿಯು ಪುನಃ ನೃಪತಿಗೆ ಕಾಣಿಸಿಕೊಂಡಳು. ಆ ಕಲ್ಯಾಣಿಯು ತನ್ನ ಮಧುರ ಮಾತುಗಳಿಂದ ಕಾಮಾಭಿಹತಚೇತನ ಆ ಕುರುಕುಲಕರ ನೃಪತಿಯನ್ನುದ್ದೇಶಿಸಿ ಹೇಳಿದಳು.
01161004a ಉತ್ತಿಷ್ಠೋತ್ತಿಷ್ಠ ಭದ್ರಂ ತೇ ನ ತ್ವಮರ್ಹಸ್ಯರಿಂದಮ|
01161004c ಮೋಹಂ ನೃಪತಿಶಾರ್ದೂಲ ಗಂತುಮಾವಿಷ್ಕೃತಃ ಕ್ಷಿತೌ||
“ಎದ್ದೇಳು! ಅರಿಂದಮ! ನಿನಗೆ ಮಂಗಳವಾಗಲಿ! ನೃಪತಿಶಾರ್ದೂಲ! ಮೋಹ ಆವಿಷ್ಕೃತನಾಗಿ ಈ ರೀತಿ ಭೂಮಿಯ ಮೇಲೆ ಬೀಳುವುದು ನಿನಗೆ ಅರ್ಹವಾದುದಲ್ಲ.”
01161005a ಏವಮುಕ್ತೋಽಥ ನೃಪತಿರ್ವಾಚಾ ಮಧುರಯಾ ತದಾ|
01161005c ದದರ್ಶ ವಿಪುಲಶ್ರೋಣೀಂ ತಾಮೇವಾಭಿಮುಖೇ ಸ್ಥಿತಾಂ||
ಈ ಮಧುರ ಮಾತುಗಳನ್ನು ಕೇಳಿದ ನೃಪತಿಯು ಮೇಲೆ ನೋಡಲು ತನ್ನ ಎದುರೇ ನಿಂತಿದ್ದ ಆ ವಿಪುಲಶ್ರೋಣಿಯನ್ನು ಕಂಡನು.
01161006a ಅಥ ತಾಮಸಿತಾಪಾಂಗೀಮಾಬಭಾಷೇ ನರಾಧಿಪಃ|
01161006c ಮನ್ಮಥಾಗ್ನಿಪರೀತಾತ್ಮಾ ಸಂದಿಗ್ಧಾಕ್ಷರಯಾ ಗಿರಾ||
ಆಗ ಮನ್ಮಥಾಗ್ನಿ ಪರೀತಾತ್ಮ ಆ ನರಾಧಿಪನು ತಾಮಸಿತಾ ಅಪಾಂಗಿಗೆ ಸಂದಿಗ್ಧಾಕ್ಷರಗಳನ್ನೊಡಗೂಡಿದ ಮಾತಿನಿಂದ ಉತ್ತರಿಸಿದನು.
01161007a ಸಾಧು ಮಾಮಸಿತಾಪಾಂಗೇ ಕಾಮಾರ್ತಂ ಮತ್ತಕಾಶಿನಿ|
01161007c ಭಜಸ್ವ ಭಜಮಾನಂ ಮಾಂ ಪ್ರಾಣಾ ಹಿ ಪ್ರಜಹಂತಿ ಮಾಂ||
“ಮತ್ತಕಾಶಿನೀ! ಅಸಿತಾಪಾಂಗೇ! ಕಾಮಾರ್ತನಾದ ನನ್ನನ್ನು ಪ್ರೀತಿಸು. ಬಯಸುತ್ತಿರುವ ನನ್ನನ್ನು ಬಯಸು. ನನ್ನ ಪ್ರಾಣವೇ ನನ್ನನ್ನು ತೊರೆಯುತ್ತಿದೆ.
01161008a ತ್ವದರ್ಥಂ ಹಿ ವಿಶಾಲಾಕ್ಷಿ ಮಾಮಯಂ ನಿಶಿತೈಃ ಶರೈಃ|
01161008c ಕಾಮಃ ಕಮಲಗರ್ಭಾಭೇ ಪ್ರತಿವಿಧ್ಯನ್ನ ಶಾಮ್ಯತಿ||
01161009a ಗ್ರಸ್ತಮೇವಮನಾಕ್ರಂದೇ ಭದ್ರೇ ಕಾಮಮಹಾಹಿನಾ|
01161009c ಸಾ ತ್ವಂ ಪೀನಾಯತಶ್ರೋಣಿ ಪರ್ಯಾಪ್ನುಹಿ ಶುಭಾನನೇ||
ವಿಶಾಲಾಕ್ಷಿ! ಕಮಲಗರ್ಭಾಭೇ! ಕಾಮದ ಈ ನಿಶಿತ ಶರಗಳು ನಿನ್ನಿಂದಾಗಿ ನನ್ನನ್ನು ಚುಚ್ಚುವುದನ್ನು ನಿಲ್ಲಿಸುತ್ತಲೇ ಇಲ್ಲ. ಭದ್ರೇ! ಕಾಮದ ವಿಷದಿಂದ ಗ್ರಸ್ತನಾಗಿದ್ದೇನೆ. ಪೀನಾಯತಶ್ರೋಣಿ! ಶುಭಾನನೇ! ನನ್ನನ್ನು ತೃಪ್ತಿಗೊಳಿಸು.
01161010a ತ್ವಯ್ಯಧೀನಾ ಹಿ ಮೇ ಪ್ರಾಣಾಃ ಕಿನ್ನರೋದ್ಗೀತಭಾಷಿಣಿ|
01161010c ಚಾರುಸರ್ವಾನವದ್ಯಾಂಗಿ ಪದ್ಮೇಂದುಸದೃಶಾನನೇ||
ಚಾರು! ಸರ್ವಾನವದ್ಯಾಂಗೀ! ಪದ್ಮೇಂದುಸದೃಶಾನನೇ! ನನ್ನ ಈ ಪ್ರಾಣವು ಕಿನ್ನರರ ಗೀತಭಾಷಿಣಿ ನಿನ್ನ ಅಧೀನವಾಗಿದೆ.
01161011a ನ ಹ್ಯಹಂ ತ್ವದೃತೇ ಭೀರು ಶಕ್ಷ್ಯೇ ಜೀವಿತುಮಾತ್ಮನಾ|
01161011c ತಸ್ಮಾತ್ಕುರು ವಿಶಾಲಾಕ್ಷಿ ಮಯ್ಯನುಕ್ರೋಶಮಂಗನೇ||
01161012a ಭಕ್ತಂ ಮಾಮಸಿತಾಪಾಂಗೇ ನ ಪರಿತ್ಯಕ್ತುಮರ್ಹಸಿ|
01161012c ತ್ವಂ ಹಿ ಮಾಂ ಪ್ರೀತಿಯೋಗೇನ ತ್ರಾತುಮರ್ಹಸಿ ಭಾಮಿನಿ||
ಭೀರು! ನಿನ್ನ ಹೊರತಾಗಿ ನಾನು ನಾನೇ ಜೀವಿತವಿರಲು ಶಕ್ಯನಿಲ್ಲ. ಆದುದರಿಂದ ವಿಶಾಲಾಕ್ಷಿ! ಅಂಗನೇ! ನನ್ನ ಮೇಲೆ ಅನುಕ್ರೋಶವನ್ನು ತೋರು. ಅಸಿತಾಪಾಂಗೇ! ಭಕ್ತನಾದ ನನ್ನನ್ನು ತ್ಯಜಿಸಬೇಡ. ಭಾಮಿನೀ! ನೀನೇ ನನ್ನನ್ನು ಪ್ರೀತಿಯೋಗದಿಂದ ಉದ್ಧಾರ ಮಾಡಬಹುದು.
01161013a ಗಾಂಧರ್ವೇಣ ಚ ಮಾಂ ಭೀರು ವಿವಾಹೇನೈಹಿ ಸುಂದರಿ|
01161013c ವಿವಾಹಾನಾಂ ಹಿ ರಂಭೋರು ಗಾಂಧರ್ವಃ ಶ್ರೇಷ್ಠ ಉಚ್ಯತೇ||
ಭೀರು! ಸುಂದರಿ! ಗಾಂಧರ್ವ ವಿವಾಹದಿಂದಲೇ ನನ್ನವಳಾಗು. ರಂಭೋರು! ವಿವಾಹಗಳಲ್ಲಿಯೇ ಗಂಧರ್ವ ವಿವಾಹವು ಶ್ರೇಷ್ಠವೆಂದು ಹೇಳುತ್ತಾರೆ.”
01161014 ತಪತ್ಯುವಾಚ|
01161014a ನಾಹಮೀಶಾತ್ಮನೋ ರಾಜನ್ಕನ್ಯಾ ಪಿತೃಮತೀ ಹ್ಯಹಂ|
01161014c ಮಯಿ ಚೇದಸ್ತಿ ತೇ ಪ್ರೀತಿರ್ಯಾಚಸ್ವ ಪಿತರಂ ಮಮ||
ತಪತಿಯು ಹೇಳಿದಳು: “ರಾಜನ್! ನನ್ನ ಒಡತಿ ನಾನಲ್ಲ. ನನ್ನ ತಂದೆಯು ಇದ್ದಾನೆ. ನನ್ನಲ್ಲಿ ನಿನ್ನ ಪ್ರೀತಿಯಿದ್ದರೆ ನನ್ನ ತಂದೆಯಲ್ಲಿ ಕೇಳಿಕೋ.
01161015a ಯಥಾ ಹಿ ತೇ ಮಯಾ ಪ್ರಾಣಾಃ ಸಂಗೃಹೀತಾ ನರೇಶ್ವರ|
01161015c ದರ್ಶನಾದೇವ ಭೂಯಸ್ತ್ವಂ ತಥಾ ಪ್ರಾಣಾನ್ಮಮಾಹರಃ||
ನರೇಶ್ವರ! ನಿನ್ನ ಪ್ರಾಣವು ಹೇಗೆ ನನ್ನಿಂದ ಬಂಧಿಸಲ್ಪಟ್ಟಿದೆಯೋ ಅದೇರೀತಿ ನಿನ್ನನ್ನು ನೋಡಿದ ಕ್ಷಣದಿಂದ ನನ್ನ ಪ್ರಾಣವನ್ನೂ ನೀನು ಅಪಹರಿಸಿದ್ದೀಯೆ.
01161016a ನ ಚಾಹಮೀಶಾ ದೇಹಸ್ಯ ತಸ್ಮಾನ್ನೃಪತಿಸತ್ತಮ|
01161016c ಸಮೀಪಂ ನೋಪಗಚ್ಛಾಮಿ ನ ಸ್ವತಂತ್ರಾ ಹಿ ಯೋಷಿತಃ||
ನಾನು ನನ್ನ ಈ ದೇಹದ ಒಡತಿಯಲ್ಲ. ಆದುದರಿಂದ ನೃಪತಿಸತ್ತಮ! ನಿನ್ನ ಸಮೀಪ ಬರಲಾರೆನು. ಕನ್ಯೆಯು ಸ್ವತಂತ್ರಳಲ್ಲ.
01161017a ಕಾ ಹಿ ಸರ್ವೇಷು ಲೋಕೇಷು ವಿಶ್ರುತಾಭಿಜನಂ ನೃಪಂ|
01161017c ಕನ್ಯಾ ನಾಭಿಲಷೇನ್ನಾಥಂ ಭರ್ತಾರಂ ಭಕ್ತವತ್ಸಲಂ||
ಆದರೆ ಯಾವ ಕನ್ಯೆಯು ತಾನೆ ಸರ್ವ ಲೋಕಗಳಲ್ಲಿಯೂ ವಿಶ್ರುತ ಕುಲದಲ್ಲಿ ಜನಿಸಿದ ನೃಪನನ್ನು ತನ್ನ ನಾಥ, ಭಕ್ತವತ್ಸಲ ಭರ್ತಾರನನ್ನಾಗಿ ಅಭಿಲಾಷಿಸುವುದಿಲ್ಲ?
01161018a ತಸ್ಮಾದೇವಂಗತೇ ಕಾಲೇ ಯಾಚಸ್ವ ಪಿತರಂ ಮಮ|
01161018c ಆದಿತ್ಯಂ ಪ್ರಣಿಪಾತೇನ ತಪಸಾ ನಿಯಮೇನ ಚ||
ಆದುದರಿಂದ ಈಗ ಸಮಯ ಬಂದಿರುವುದರಿಂದ ನನ್ನ ತಂದೆ ಆದಿತ್ಯನಲ್ಲಿ ಪ್ರಣಿಪಾತ, ತಪಸ್ಸು ಮತ್ತು ನಿಯಮಗಳಿಂದ ಬೇಡಿಕೋ.
01161019a ಸ ಚೇತ್ಕಾಮಯತೇ ದಾತುಂ ತವ ಮಾಮರಿಮರ್ದನ|
01161019c ಭವಿಷ್ಯಾಮ್ಯಥ ತೇ ರಾಜನ್ಸತತಂ ವಶವರ್ತಿನೀ||
ಅರಿಮರ್ದನ! ರಾಜನ್! ಒಂದು ವೇಳೆ ಅವನು ನನ್ನನ್ನು ನಿನಗೆ ಕೊಡಲು ಬಯಸಿದರೆ ಸತತವಾಗಿಯೂ ನಿನ್ನ ವಶವರ್ತಿನಿಯಾಗಿರುತ್ತೇನೆ.
01161020a ಅಹಂ ಹಿ ತಪತೀ ನಾಮ ಸಾವಿತ್ರ್ಯವರಜಾ ಸುತಾ|
01161020c ಅಸ್ಯ ಲೋಕಪ್ರದೀಪಸ್ಯ ಸವಿತುಃ ಕ್ಷತ್ರಿಯರ್ಷಭ||
ಕ್ಷತ್ರಿಯರ್ಷಭ! ನಾನು ಈ ಲೋಕಪ್ರದೀಪ ಸವಿತುವಿನ ಮಗಳು, ಸಾವಿತ್ರಿಯ ತಂಗಿ. ನನ್ನ ಹೆಸರು ತಪತೀ.””
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ತಪತ್ಯುಪಾಖ್ಯಾನೇ ಏಕಷಷ್ಟ್ಯಧಿಕಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ತಪತ್ಯುಪಾಖ್ಯಾನದಲ್ಲಿ ನೂರಾಅರವತ್ತೊಂದನೆಯ ಅಧ್ಯಾಯವು.