|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆದಿ ಪರ್ವ: ಚೈತ್ರರಥ ಪರ್ವ
೧೫೩
ಧೃಷ್ಟದ್ಯುಮ್ನ-ದ್ರೌಪದಿಯರ ಜನನ ವೃತ್ತಾಂತ
ಏಕಚಕ್ರನಗರಕ್ಕೆ ಬಂದಿದ್ದ ಬ್ರಾಹ್ಮಣನು ವಿಚಿತ್ರ ಕಥೆಗಳನ್ನು ಹೇಳುತ್ತಾ ದ್ರೌಪದಿ-ಧೃಷ್ಟದ್ಯುಮ್ನರ ಜನನದ ಕಥೆಯನ್ನು ಪ್ರಾರಂಭಿಸುವುದು (೧-೧೨).
01153001 ಜನಮೇಜಯ ಉವಾಚ|
01153001a ತೇ ತಥಾ ಪುರುಷವ್ಯಾಘ್ರಾ ನಿಹತ್ಯ ಬಕರಾಕ್ಷಸಂ|
01153001c ಅತ ಊರ್ಧ್ವಂ ತತೋ ಬ್ರಹ್ಮನ್ಕಿಮಕುರ್ವತ ಪಾಂಡವಾಃ||
ಜನಮೇಜಯನು ಹೇಳಿದನು: “ಆ ಪುರುಷವ್ಯಾಘ್ರ ಪಾಂಡವರು ಬಕ ರಾಕ್ಷಸನನ್ನು ಕೊಂದ ನಂತರ ಏನು ಮಾಡಿದರು ಹೇಳು ಬ್ರಹ್ಮನ್!”
01153002 ವೈಶಂಪಾಯನ ಉವಾಚ|
01153002a ತತ್ರೈವ ನ್ಯವಸನ್ರಾಜನ್ನಿಹತ್ಯ ಬಕರಾಕ್ಷಸಂ|
01153002c ಅಧೀಯಾನಾಃ ಪರಂ ಬ್ರಹ್ಮ ಬ್ರಾಹ್ಮಣಸ್ಯ ನಿವೇಶನೇ||
ವೈಶಂಪಾಯನನು ಹೇಳಿದನು: “ರಾಜನ್! ಬಕರಾಕ್ಷಸನನ್ನು ಕೊಂದ ಬಳಿಕ ಅವರು ಆ ಬ್ರಾಹ್ಮಣನ ಮನೆಯಲ್ಲಿಯೇ ಶ್ರೇಷ್ಠ ಬ್ರಹ್ಮಾಧ್ಯಯನ ನಿರತರಾಗಿ ವಾಸಿಸುತ್ತಿದ್ದರು.
01153003a ತತಃ ಕತಿಪಯಾಹಸ್ಯ ಬ್ರಾಹ್ಮಣಃ ಸಂಶಿತವ್ರತಃ|
01153003c ಪ್ರತಿಶ್ರಯಾರ್ಥಂ ತದ್ವೇಶ್ಮ ಬ್ರಾಹ್ಮಣಸ್ಯಾಜಗಾಮ ಹ||
ಕೆಲವು ದಿನಗಳ ನಂತರ ಸಂಶಿತವ್ರತ ಬ್ರಾಹ್ಮಣನೋರ್ವನು ಆಶ್ರಯ ಹುಡುಕಿಕೊಂಡು ಆ ಬ್ರಾಹ್ಮಣನ ಮನೆಗೆ ಬಂದನು.
01153004a ಸ ಸಮ್ಯಕ್ಪೂಜಯಿತ್ವಾ ತಂ ವಿದ್ವಾನ್ವಿಪ್ರರ್ಷಭಸ್ತದಾ|
01153004c ದದೌ ಪ್ರತಿಶ್ರಯಂ ತಸ್ಮೈ ಸದಾ ಸರ್ವಾತಿಥಿವ್ರತೀ||
ಸದಾ ಸರ್ವ ಅತಿಥಿವ್ರತ ಆ ವಿದ್ವಾನ್ ವಿಪ್ರರ್ಷಭನು ಅವನನ್ನು ಆಹ್ವಾನಿಸಿ ಚೆನ್ನಾಗಿ ಸತ್ಕರಿಸಿ ಆಶ್ರಯವನ್ನಿತ್ತನು.
01153005a ತತಸ್ತೇ ಪಾಂಡವಾಃ ಸರ್ವೇ ಸಹ ಕುಂತ್ಯಾ ನರರ್ಷಭಾಃ|
01153005c ಉಪಾಸಾಂ ಚಕ್ರಿರೇ ವಿಪ್ರಂ ಕಥಯಾನಂ ಕಥಾಸ್ತದಾ||
ಆಗ ಕುಂತಿಯ ಸಹಿತ ನರರ್ಷಭ ಸರ್ವ ಪಾಂಡವರೂ ಕಥೆಗಳನ್ನು ಹೇಳುವುದರಲ್ಲಿ ಕುಶಲನಾಗಿದ್ದ ಆ ವಿಪ್ರನನ್ನು ಸುತ್ತುವರೆದರು.
01153006a ಕಥಯಾಮಾಸ ದೇಶಾನ್ಸ ತೀರ್ಥಾನಿ ವಿವಿಧಾನಿ ಚ|
01153006c ರಾಜ್ಞಾಂ ಚ ವಿವಿಧಾಶ್ಚರ್ಯಾಃ ಪುರಾಣಿ ವಿವಿಧಾನಿ ಚ||
ಅವನು ಅವರಿಗೆ ವಿವಿಧ ದೇಶ-ತೀರ್ಥ, ವಿವಿಧ ರಾಜರ, ಮತ್ತು ವಿವಿಧ ಪುರಗಳ ಆಶ್ಚರ್ಯಕರ ಕಥೆಗಳನ್ನು ಹೇಳಿದನು.
01153007a ಸ ತತ್ರಾಕಥಯದ್ವಿಪ್ರಃ ಕಥಾಂತೇ ಜನಮೇಜಯ|
01153007c ಪಾಂಚಾಲೇಷ್ವದ್ಭುತಾಕಾರಮ್ಯಾಜ್ಞಸೇನ್ಯಾಃ ಸ್ವಯಂವರಂ||
01153008a ಧೃಷ್ಟದ್ಯುಮ್ನಸ್ಯ ಚೋತ್ಪತ್ತಿಮುತ್ಪತ್ತಿಂ ಚ ಶಿಖಂಡಿನಃ|
01153008c ಅಯೋನಿಜತ್ವಂ ಕೃಷ್ಣಾಯಾ ದ್ರುಪದಸ್ಯ ಮಹಾಮಖೇ||
ಜನಮೇಜಯ! ಆ ವಿಪ್ರನು ಕಥೆಗಳ ಅಂತ್ಯದಲ್ಲಿ ಪಾಂಚಾಲದೇಶದಲ್ಲಿ ನಡೆಯುವ ಯಾಜ್ಞಸೇನಿಯ ಅದ್ಭುತ ಸ್ವಯಂವರ, ಧೃಷ್ಟಧ್ಯುಮ್ನನ ಉತ್ಪತ್ತಿ, ಶಿಖಂಡಿಯ ಉತ್ಪತ್ತಿ, ದೃಪದನ ಮಹಾಮಖದಲ್ಲಿ ಅಯೋನಿಜೆ ಕೃಷ್ಣೆಯ ಜನನ - ಇವುಗಳ ಕುರಿತು ಹೇಳಿದನು.
01153009a ತದದ್ಭುತತಮಂ ಶ್ರುತ್ವಾ ಲೋಕೇ ತಸ್ಯ ಮಹಾತ್ಮನಃ|
01153009c ವಿಸ್ತರೇಣೈವ ಪಪ್ರಚ್ಛುಃ ಕಥಾಂ ತಾಂ ಪುರುಷರ್ಷಭಾಃ||
ಲೋಕದಲ್ಲಿ ನಡೆದಿದ್ದ ಆ ಅದ್ಭುತ ಘಟನೆಗಳನ್ನು ಕೇಳಿದ ಆ ಪುರುಷರ್ಷಭರು ಕಥೆಯನ್ನು ವಿಸ್ತಾರವಾಗಿ ಹೇಳಬೇಕೆಂದು ಮಹಾತ್ಮನಿಗೆ ಕೇಳಿಕೊಂಡರು.
01153010a ಕಥಂ ದ್ರುಪದಪುತ್ರಸ್ಯ ಧೃಷ್ಟದ್ಯುಮ್ನಸ್ಯ ಪಾವಕಾತ್|
01153010c ವೇದಿಮಧ್ಯಾಚ್ಚ ಕೃಷ್ಣಾಯಾಃ ಸಂಭವಃ ಕಥಮದ್ಭುತಃ||
“ವೇದಿಮಧ್ಯದ ಪಾವಕನಿಂದ ದ್ರುಪದಪುತ್ರ ಧೃಷ್ಟಧ್ಯುಮ್ನನ ಮತ್ತು ಕೃಷ್ಣೆಯ ಅದ್ಭುತ ಜನ್ಮವು ಹೇಗೆ ಆಯಿತು?
01153011a ಕಥಂ ದ್ರೋಣಾನ್ಮಹೇಷ್ವಾಸಾತ್ಸರ್ವಾಣ್ಯಸ್ತ್ರಾಣ್ಯಶಿಕ್ಷತ|
01153011c ಕಥಂ ಪ್ರಿಯಸಖಾಯೌ ತೌ ಭಿನ್ನೌ ಕಸ್ಯ ಕೃತೇನ ಚ||
ಹೇಗೆ ಆ ಮಹೇಷ್ವಾಸನು ದ್ರೋಣನಿಂದ ಸರ್ವ ಅಣ್ಯಸ್ತ್ರಗಳನ್ನು ಕಲಿತುಕೊಂಡನು? ಮತ್ತು ಪ್ರಿಯಸಖರಾಗಿದ್ದ ಅವರೀರ್ವರಲ್ಲಿ ಭಿನ್ನತ್ವವು ಹೇಗೆ ಉಂಟಾಯಿತು?”
01153012a ಏವಂ ತೈಶ್ಚೋದಿತೋ ರಾಜನ್ಸ ವಿಪ್ರಃ ಪುರುಷರ್ಷಭೈಃ|
01153012c ಕಥಯಾಮಾಸ ತತ್ಸರ್ವಂ ದ್ರೌಪದೀಸಂಭವಂ ತದಾ||
ರಾಜನ್! ಈ ರೀತಿ ಪುರುಷರ್ಷಭರು ಒತ್ತಾಯಿಸಲಾಗಿ ಆ ವಿಪ್ರನು ದ್ರೌಪದಿಯ ಹುಟ್ಟಿನ ಕಥೆಯನ್ನು ಸಂಪೂರ್ಣವಾಗಿ ಹೇಳಿದನು.
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ದ್ರೌಪದೀಸಂಭವೇ ತ್ರಿಪಂಚಾಶದಧಿಕಶತತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ದ್ರೌಪದೀಸಂಭವದಲ್ಲಿ ನೂರಾಐವತ್ತ್ಮೂರನೆಯ ಅಧ್ಯಾಯವು.