ಆದಿ ಪರ್ವ: ಪೌಲೋಮ ಪರ್ವ
೧೧
ಡುಂಡುಭನ ಕಥೆ (೧-೧೦). ಡುಂಡುಭನು ರುರುವಿಗೆ ಸರ್ಪಗಳನ್ನು ಕೊಲ್ಲಬಾರದೆಂದು ಸಲಹೆ ನೀಡುವುದು (೧೦-೧೫).
01011001 ಡುಂಡುಭ ಉವಾಚ
01011001a ಸಖಾ ಬಭೂವ ಮೇ ಪೂರ್ವಂ ಖಗಮೋ ನಾಮ ವೈ ದ್ವಿಜಃ|
01011001c ಭೃಶಂ ಸಂಶಿತವಾಕ್ತಾತ ತಪೋಬಲಸಮನ್ವಿತಃ||
ಡುಂಡುಭವು ಹೇಳಿತು: “ಹಿಂದೆ ಖಗಮ ಎಂಬ ಹೆಸರಿನ, ಸದಾ ಸತ್ಯವನ್ನೇ ನುಡಿಯುವ ತಪೋಬಲಸಮನ್ವಿತ ದ್ವಿಜನೋರ್ವನು ನನ್ನ ಸಖನಾಗಿದ್ದನು.
01011002a ಸ ಮಯಾ ಕ್ರೀಡತಾ ಬಾಲ್ಯೇ ಕೃತ್ವಾ ತಾರ್ಣಮಥೋರಗಂ|
01011002c ಅಗ್ನಿಹೋತ್ರೇ ಪ್ರಸಕ್ತಃ ಸನ್ಭೀಷಿತಃ ಪ್ರಮುಮೋಹ ವೈ||
ಬಾಲ್ಯದಲ್ಲಿ ಆಡುತ್ತಿರುವಾಗ ನಾನು ಒಂದು ಹುಲ್ಲುಕಡ್ಡಿಯನ್ನು ಹಾವನ್ನಾಗಿ ಮಾಡಿ ಅಗ್ನಿಹೋತ್ರದಲ್ಲಿ ಪ್ರಸಕ್ತನಾಗಿದ್ದ ಅವನನ್ನು ಹೆದರಿಸಿದಾಗ ಅದನ್ನು ನೋಡಿದ ಅವನು ಮೂರ್ಛಿತನಾದನು.
01011003a ಲಬ್ಧ್ವಾ ಚ ಸ ಪುನಃ ಸಂಜ್ಞಾಂ ಮಾಮುವಾಚ ತಪೋಧನಃ|
01011003c ನಿರ್ದಹನ್ನಿವ ಕೋಪೇನ ಸತ್ಯವಾಕ್ಸಂಶಿತವ್ರತಃ||
ಪುನಃ ಪ್ರಜ್ಞೆಬಂದ ನಂತರ ಆ ಸತ್ಯವಾದಿ ಸಂಶಿತವ್ರತ ತಪೋಧನನು ಕೋಪದಿಂದ ನಿಹೃದಯಿಯಾಗಿ ಹೇಳಿದನು:
01011004a ಯಥಾವೀರ್ಯಸ್ತ್ವಯಾ ಸರ್ಪಃ ಕೃತೋಽಯಂ ಮದ್ಬಿಭೀಷಯಾ|
01011004c ತಥಾವೀರ್ಯೋ ಭುಜಂಗಸ್ತ್ವಂ ಮಮ ಕೋಪಾದ್ಭವಿಷ್ಯಸಿ||
“ಜೀವವಿಲ್ಲದ ಸರ್ಪದಿಂದ ನನ್ನನು ಹೇಗೆ ಹೆದರಿಸಿದೆಯೋ ಹಾಗೆ ನೀನು ನನ್ನ ಕೋಪದಿಂದಾಗಿ ಹಾನಿಕಾರಕವಲ್ಲದ ಸರ್ಪವಾಗುತ್ತೀಯೆ.”
01011005a ತಸ್ಯಾಹಂ ತಪಸೋ ವೀರ್ಯಂ ಜಾನಮಾನಸ್ತಪೋಧನ|
01011005c ಭೃಶಂ ಉದ್ವಿಗ್ನಹೃದಯಸ್ತಮವೋಚಂ ವನೌಕಸಂ||
01011006a ಪ್ರಯತಃ ಸಂಭ್ರಮಾಚ್ಚೈವ ಪ್ರಾಂಜಲಿಃ ಪ್ರಣತಃ ಸ್ಥಿತಃ|
ಆ ತಪೋಧನನ ತಪಃಶಕ್ತಿಯನ್ನು ಅರಿತ ನಾನು ಉದ್ವಿಗ್ನ ಹೃದಯನಾಗಿ ದುಃಖದಿಂದ ತಲೆಬಾಗಿ ಪ್ರಾಂಜಲೀ ಬದ್ಧನಾಗಿ ನಮಸ್ಕರಿಸಿ ಹೇಳಿದೆನು:
01011006c ಸಖೇತಿ ಹಸತೇದಂ ತೇ ನರ್ಮಾರ್ಥಂ ವೈ ಕೃತಂ ಮಯಾ||
01011007a ಕ್ಷಂತುಮರ್ಹಸಿ ಮೇ ಬ್ರಹ್ಮಂ ಶಾಪೋಽಯಂ ವಿನಿವರ್ತ್ಯತಾಂ|
“ಸಖನನ್ನು ಮೋಡಿಮಾಡಲೆಂದು ನಾನು ಹೀಗೆಲ್ಲ ಮಾಡಿದೆ. ಬ್ರಾಹ್ಮಣ! ಆದ್ದರಿಂದ ನನ್ನನ್ನು ಕ್ಷಮಿಸಿ ಈ ಶಾಪವನ್ನು ಹಿಂತೆಗೆದುಕೊಳ್ಳಬೇಕು.”
01011007c ಸೋಽಥ ಮಾಮಬ್ರವೀದ್ದೃಷ್ಠ್ವಾ ಭೃಶಮುದ್ವಿಗ್ನಚೇತಸಂ||
01011008a ಮುಹುರುಷ್ಣಂ ವಿನಿಃಶ್ವಸ್ಯ ಸುಸಂಭ್ರಾಂತಸ್ತಪೋಧನಃ|
ದುಃಖಿತ ಮತ್ತು ಉದ್ವಿಗ್ನಚೇತಸ ನನ್ನನ್ನು ನೋಡಿದ ಆ ತಪೋಧನನು ಅನುಕಂಪಗೊಂಡು ಬಿಸಿಯುಸಿರು ಬಿಡುತ್ತಾ ಹೇಳಿದನು:
01011008c ನಾನೃತಂ ವೈ ಮಯಾ ಪ್ರೋಕ್ತಂ ಭವಿತೇದಂ ಕಥಂ ಚನ||
01011009a ಯತ್ತು ವಕ್ಷ್ಯಾಮಿ ತೇ ವಾಕ್ಯಂ ಶೃಣು ತನ್ಮೇ ಧೃತವ್ರತ|
01011009c ಶ್ರುತ್ವಾ ಚ ಹೃದಿ ತೇ ವಾಕ್ಯಮಿದಮಸ್ತು ತಪೋಧನ||
01011010a ಉತ್ಪತ್ಸ್ಯತಿ ರುರುರ್ನಾಮ ಪ್ರಮತೇರಾತ್ಮಜಃ ಶುಚಿಃ|
01011010c ತಂ ದೃಷ್ಟ್ವಾ ಶಾಪಮೋಕ್ಷಸ್ತೇ ಭವಿತಾ ನಚಿರಾದಿವ||
“ನಾನು ಹೇಳಿದ್ದುದು ಸುಳ್ಳಾಗುವುದಿಲ್ಲ. ಹೇಗಾದರೂ ಅದು ಆಗಿಯೇ ಆಗುತ್ತದೆ. ಧೃತವ್ರತ! ತಪೋಧನ! ಈಗ ನಾನಾಡುವ ಮಾತನ್ನು ಸರಿಯಾಗಿ ಕೇಳಿ ಇದನ್ನು ನಿನ್ನ ಹೃದಯದಲ್ಲಿ ಇರಿಸಿಕೋ. ರುರು ಎಂಬ ಹೆಸರಿನ ಶುಚಿ ಪ್ರಮತಿಯ ಮಗನನ್ನು ನೀನು ನೋಡಿದಾಗ ಶಾಪವಿಮುಕ್ತನಾಗುತ್ತೀಯೆ.”
01011011a ಸ ತ್ವಂ ರುರುರಿತಿ ಖ್ಯಾತಃ ಪ್ರಮತೇರಾತ್ಮಜಃ ಶುಚಿಃ|
01011011c ಸ್ವರೂಪಂ ಪ್ರತಿಲಭ್ಯಾಹಮದ್ಯ ವಕ್ಷ್ಯಾಮಿ ತೇ ಹಿತಂ||
ಆ ಖ್ಯಾತ ಶುಚಿ ಪ್ರಮತಿಯ ಮಗನಾದ ರುರುವೇ ನೀನು. ಈಗ ನಾನು ನನ್ನ ಮೊದಲಿನ ರೂಪವನ್ನು ಪಡೆದಿದ್ದೇನೆಯಾದ್ದರಿಂದ ನಿನ್ನ ಹಿತಕ್ಕಾಗಿ ನಾನು ಹೇಳುತ್ತಿದ್ದೇನೆ.
01011012a ಅಹಿಂಸಾ ಪರಮೋ ಧರ್ಮಃ ಸರ್ವಪ್ರಾಣಭೃತಾಂ ಸ್ಮೃತಃ|
01011012c ತಸ್ಮಾತ್ಪ್ರಾಣಭೃತಃ ಸರ್ವಾನ್ನ ಹಿಂಸ್ಯಾದ್ಬ್ರಾಹ್ಮಣಃ ಕ್ವಚಿತ್||
ಅಹಿಂಸೆಯೇ ಪರಮ ಧರ್ಮ. ಯಾವುದೇ ಜೀವಿಯ ಪ್ರಾಣಾಪಹರಣ ಮಾಡಬಾರದು. ಆದ್ದರಿಂದ ಬ್ರಾಹ್ಮಣನಾದವನು ಎಂದೂ ಇತರರ ಪ್ರಾಣವನ್ನು ಕೊನೆಗೊಳಿಸಬಾರದು ಮತ್ತು ಹಿಂಸಿಸಬಾರದು ಎನ್ನುತ್ತಾರೆ.
01011013a ಬ್ರಾಹ್ಮಣಃ ಸೌಮ್ಯ ಏವೇಹ ಜಾಯತೇತಿ ಪರಾ ಶ್ರುತಿಃ|
01011013c ವೇದವೇದಾಂಗವಿತ್ತಾತ ಸರ್ವಭೂತಾಭಯಪ್ರದಃ||
ಒಂದು ಶ್ರುತಿಯ ಪ್ರಕಾರ ಬ್ರಾಹ್ಮಣನು ಸದಾ ಸೌಮ್ಯನಾಗಿರಬೇಕು. ವೇದವೇದಾಂಗಗಳನ್ನು ತಿಳಿದ ಅವನು ಸರ್ವಭೂತಗಳಿಗೆ ಅಭಯವನ್ನು ನೀಡುವಂಥವನಾಗಿರಬೇಕು.
01011014a ಅಹಿಂಸಾ ಸತ್ಯವಚನಂ ಕ್ಷಮಾ ಚೇತಿ ವಿನಿಶ್ಚಿತಂ|
01011014c ಬ್ರಾಹ್ಮಣಸ್ಯ ಪರೋ ಧರ್ಮೋ ವೇದಾನಾಂ ಧರಣಾದಪಿ||
ಅಹಿಂಸೆ, ಸತ್ಯ ವಚನ, ಕ್ಷಮೆ ಮತ್ತು ವೇದಗಳನ್ನು ಅನುಸರಿಸುವುದು ಇವೆಲ್ಲವೂ ನಿಶ್ಚಯವಾಗಿ ಬ್ರಾಹ್ಮಣನ ಪರಮ ಧರ್ಮ.
01011015a ಕ್ಷತ್ರಿಯಸ್ಯ ತು ಯೋ ಧರ್ಮಃ ಸ ನೇಹೇಷ್ಯತಿ ವೈ ತವ|
01011015c ದಂಡಧಾರಣಮುಗ್ರತ್ವಂ ಪ್ರಜಾನಾಂ ಪರಿಪಾಲನಂ||
01011016a ತದಿದಂ ಕ್ಷತ್ರಿಯಸ್ಯಾಸೀತ್ಕರ್ಮ ವೈ ಶೃಣು ಮೇ ರುರೋ|
ನೀನು ಈಗ ಅನುಸರಿಸುತ್ತಿರುವ ಧರ್ಮವು ನಿನ್ನದಲ್ಲ. ಅದು ಕ್ಷತ್ರಿಯನ ಧರ್ಮ. ದಂಡಧಾರಣ ಮಾಡುವುದು, ಕ್ರೂರಿಯಾಗಿರುವುದು ಮತ್ತು ಪ್ರಜೆಗಳನ್ನು ಪರಿಪಾಲಿಸುವುದು ಇವೆಲ್ಲವೂ ಕ್ಷತ್ರಿಯನ ಕರ್ಮಗಳು.
01011016c ಜನಮೇಜಯಸ್ಯ ಧರ್ಮಾತ್ಮನ್ಸರ್ಪಾಣಾಂ ಹಿಂಸನಂ ಪುರಾ||
01011017a ಪರಿತ್ರಾಣಂ ಚ ಭೀತಾನಾಂ ಸರ್ಪಾಣಾಂ ಬ್ರಾಹ್ಮಣಾದಪಿ|
01011017c ತಪೋವೀರ್ಯಬಲೋಪೇತಾದ್ವೇದವೇದಾಂಗಪಾರಗಾತ್|
01011017e ಆಸ್ತೀಕಾದ್ದ್ವಿಜಮುಖ್ಯಾದ್ವೈ ವೈ ಸರ್ಪಸತ್ರೇ ದ್ವಿಜೋತ್ತಮ||
ಹಿಂದೆ ಧರ್ಮಾತ್ಮ ಜನಮೇಜಯನು ಸರ್ಪಗಳನ್ನು ಹಿಂಸಿಸಿದುದರ ಕುರಿತು ನನ್ನನ್ನು ಕೇಳು. ರುರು! ದ್ವಿಜೋತ್ತಮ! ಸರ್ಪಸತ್ರದಲ್ಲಿ ಭೀತಿಗೊಂಡ ಸರ್ಪಗಳನ್ನು ತಪೋವೀರ್ಯಬಲೋಪೇತ, ವೇದವೇದಾಂಗ ಪಾರಂಗತ, ದ್ವಿಜಮುಖ್ಯ ಆಸ್ತೀಕನೆಂಬ ಬ್ರಾಹ್ಮಣನು ರಕ್ಷಿಸಿದನು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಪೌಲೋಮಪರ್ವಣಿ ಡುಂಡುಭಶಾಪಮೋಕ್ಷೋ ನಾಮ ಏಕಾದಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಪೌಲೋಮಪರ್ವದಲ್ಲಿ ಡುಂಡುಭಶಾಪಮೋಕ್ಷ ಎನ್ನುವ ಹನ್ನೊಂದನೆಯ ಅಧ್ಯಾಯವು.