ಆದಿ ಪರ್ವ: ಪೌಲೋಮ ಪರ್ವ
೧೦
ಡುಂಡುಭವು ತನ್ನ ಜನ್ಮವೃತ್ತಾಂತವನ್ನು ಹೇಳಲು ರುರುವು ಅದನ್ನು ಕೊಲ್ಲದೇ ಉಳಿಸುವುದು (೧-೮).
01010001 ರುರುರುವಾಚ|
01010001a ಮಮ ಪ್ರಾಣಸಮಾ ಭಾರ್ಯಾ ದಷ್ಟಾಸೀದ್ಭುಜಗೇನ ಹ|
01010001c ತತ್ರ ಮೇ ಸಮಯೋ ಘೋರ ಆತ್ಮನೋರಗ ವೈ ಕೃತಃ||
01010002a ಹನ್ಯಾಂ ಸದೈವ ಭುಜಗಂ ಯಂ ಯಂ ಪಶ್ಯೇಯಮಿತ್ಯುತ|
01010002c ತತೋಽಹಂ ತ್ವಾಂ ಜಿಘಾಂಸಾಮಿ ಜೀವಿತೇನ ವಿಮೋಕ್ಷ್ಯಸೇ||
ರುರುವು ಹೇಳಿದನು: “ನನ್ನ ಪ್ರಾಣಸಮ ಪತ್ನಿಯನ್ನು ಹಿಂದೆ ಒಂದು ಸರ್ಪವು ಕಚ್ಚಿತ್ತು. ಆ ಸಮಯದಲ್ಲಿ ನಾನು ನೋಡಿದ ಸರ್ಪಗಳನ್ನೆಲ್ಲ ಕೊಲ್ಲುತ್ತೇನೆಂಬ ಘೋರ ನಿಶ್ಚಯವೊಂದನ್ನು ಕೈಗೊಂಡಿದ್ದೆ. ಆದುದರಿಂದ ನಿನ್ನನ್ನು ಕೊಂದು ಜೀವನ ಮುಕ್ತಿಯನ್ನು ಕೊಡುತ್ತಿದ್ದೇನೆ.”
01010003 ಡುಂಡುಭ ಉವಾಚ|
01010003a ಅನ್ಯೇ ತೇ ಭುಜಗಾ ವಿಪ್ರ ಯೇ ದಶಂತೀಹ ಮಾನವಾನ್|
01010003c ಡುಂಡುಭಾನಹಿಗಂಧೇನ ನ ತ್ವಂ ಹಿಂಸಿತುಮರ್ಹಸಿ||
ಡುಂಡುಭವು ಹೇಳಿತು: “ವಿಪ್ರ! ಮಾನವರನ್ನು ಕಚ್ಚುವ ಸರ್ಪಗಳೇ ಬೇರೆ. ಆದುದರಿಂದ ನೀನು ಡುಂಡುಭಗಳನ್ನು ಹಿಂಸಿಸುವುದು ಸರಿಯಲ್ಲ.
01010004a ಏಕಾನರ್ಥಾನ್ಪೃಥಗರ್ಥಾನೇಕದುಃಖಾನ್ಪೃಥಕ್ಸುಖಾನ್|
01010004c ಡುಂಡುಭಾನ್ಧರ್ಮವಿದ್ಭೂತ್ವಾ ನ ತ್ವಂ ಹಿಂಸಿತುಮರ್ಹಸಿ||
ಡುಂಡುಭ ಮತ್ತು ಹಾವುಗಳು ಒಂದೇ ಎಂದು ಭಾವಿಸಿದರೂ ಸುಖವನ್ನು ಅನುಭವಿಸುವಾಗ ಅವುಗಳು ಬೇರೆ ಬೇರೆಯೇ. ಡುಂಡುಭ ಮತ್ತು ಹಾವುಗಳು ಸ್ವಭಾವದಲ್ಲಿ ಬೇರೆ ಬೇರೆಯಾಗಿದ್ದರೂ ದುಃಖವನ್ನು ಅನುಭವಿಸುವಾಗ ಒಂದೇ ಎಂದು ಪರಿಗಣಿಸಲ್ಪಡುತ್ತವೆ. ನೀನು ಧರ್ಮವನ್ನು ತಿಳಿದಿದ್ದೀಯೆ. ಡುಂಡುಭಗಳನ್ನು ಹಿಂಸಿಸುವುದು ನಿನಗೆ ಸರಿಯಲ್ಲ.””
01010005 ಸೂತ ಉವಾಚ|
01010005a ಇತಿ ಶ್ರುತ್ವಾ ವಚಸ್ತಸ್ಯ ಭುಜಗಸ್ಯ ರುರುಸ್ತದಾ|
01010005c ನಾವಧೀದ್ಭಯಸಂವಿಗ್ನ ಋಷಿಂ ಮತ್ವಾಥ ಡುಂಡುಭಂ||
ಸೂತನು ಹೇಳಿದನು: “ಸರ್ಪದ ಈ ಮಾತುಗಳನ್ನು ಕೇಳಿ ಋಷಿ ರುರುವು ಭಯಸಂವಿಘ್ನನಾದ ಡುಂಡುಭನನ್ನು ಕೊಲ್ಲಲಿಲ್ಲ.
01010006a ಉವಾಚ ಚೈನಂ ಭಗವಾನ್ರುರುಃ ಸಂಶಮಯನ್ನಿವ|
01010006c ಕಾಮಯಾ ಭುಜಗ ಬ್ರೂಹಿ ಕೋಽಸೀಮಾಂ ವಿಕ್ರಿಯಾಂ ಗತಃ||
ಅವನನ್ನು ಶಾಂತಗೊಳಿಸುತ್ತಾ ಭಗವಾನ್ ರುರುವು ಕೇಳಿದನು: “ಭುಜಗ! ನೀನು ಯಾರು ಮತ್ತು ಹೇಗೆ ಈ ರೂಪವನ್ನು ಹೊಂದಿದೆ ಎನ್ನುವುದನ್ನು ನನಗೆ ಹೇಳು.”
01010007 ಡುಂಡುಭ ಉವಾಚ|
01010007a ಅಹಂ ಪುರಾ ರುರೋ ನಾಮ್ನಾ ಋಷಿರಸಂ ಸಹಸ್ರಪಾತ್|
01010007c ಸೋಽಹಂ ಶಾಪೇನ ವಿಪ್ರಸ್ಯ ಭುಜಗತ್ವಮುಪಾಗತಃ||
ಡುಂಡುಭವು ಹೇಳಿತು: “ರುರು! ಹಿಂದೆ ನಾನು ಸಹಸ್ರಪಾದ ಎಂಬ ಹೆಸರಿನ ಋಷಿಯಾಗಿದ್ದೆ. ಒಬ್ಬ ವಿಪ್ರನ ಶಾಪದಿಂದ ಭುಜಗತ್ವವನ್ನು ಹೊಂದಿದೆನು.”
01010008 ರುರುರುವಾಚ|
01010008a ಕಿಮರ್ಥಂ ಶಪ್ತವಾನ್ಕ್ರುದ್ಧೋ ದ್ವಿಜಸ್ತ್ವಾಂ ಭುಜಗೋತ್ತಮ|
01010008c ಕಿಯಂತಂ ಚೈವ ಕಾಲಂ ತೇ ವಪುರೇತದ್ಭವಿಷ್ಯತಿ||
ರುರುವು ಹೇಳಿದನು: “ಭುಜಗೋತ್ತಮ! ಯಾವ ಕಾರಣಕಾಗಿ ಕೃದ್ಧ ದ್ವಿಜನಿಂದ ನೀನು ಶಪಿಸಲ್ಪಟ್ಟೆ? ಎಷ್ಟು ಕಾಲದವರೆಗೆ ನೀನು ಈ ರೀತಿ ಇರಬೇಕಾಗುತ್ತದೆ?”
ಇತಿ ಶ್ರೀ ಮಹಾಭಾರತೇ ಆದಿ ಪರ್ವಣಿ ಪೌಲೋಮ ಪರ್ವಣಿ ರುರುಡುಂಡುಭಸಂವಾದೋ ನಾಮ ದಶಮೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಆದಿ ಪರ್ವದಲ್ಲಿ ಪೌಲೋಮ ಪರ್ವದಲ್ಲಿ ರುರುಡುಂಡುಭಸಂವಾದವೆಂಬ ಹತ್ತನೆಯ ಅಧ್ಯಾಯವು.