ಕುರುಕ್ಷೇತ್ರ ಮಹಾತ್ಮೆ

Related image

ಈ ಕಥೆಯನ್ನು ವೈಶಂಪಾಯನನು ಜನಮೇಜಯನಿಗೆ ಶಲ್ಯ ಪರ್ವದ ಸಾರಸ್ವತಪರ್ವದ ಅಧ್ಯಾಯ 52ರಲ್ಲಿ ಹೇಳುತ್ತಾನೆ.

ಸನಾತನ ಸಮಂತಪಂಚಕವನ್ನು ಪ್ರಜಾಪತಿಯ ಉತ್ತರವೇದಿಯೆಂದು ಕರೆಯುತ್ತಾರೆ. ಮಹಾವರಪ್ರದ ದಿವೌಕಸರೇ ಹಿಂದೆ ಇಲ್ಲಿ ಶ್ರೇಷ್ಠ ಸತ್ರಗಳನ್ನು ಯಾಜಿಸಿದ್ದರು. ಹಿಂದೆ ರಾಜರ್ಷಿಶ್ರೇಷ್ಠ ಧೀಮತ ಅಮಿತ ತೇಜಸ್ವಿ ಮಹಾತ್ಮ ಕುರುವು ಅನೇಕ ವರ್ಷಗಳು ಹೂಳುತ್ತಿದ್ದುದರಿಂದ ಪ್ರದೇಶವು ಕುರುಕ್ಷೇತ್ರವೆಂದು ಪ್ರಸಿದ್ಧವಾಯಿತು.

ಹಿಂದೆ ಸತತವೂ ನಿಂತು ಉಳುತ್ತಿದ್ದ ಕುರುವನ್ನು ಶಕ್ರನು ತ್ರಿದಿವದಿಂದ ಬಂದು ಭೇಟಿಮಾಡಿ ಇದರ ಕಾರಣವನ್ನು ಕೇಳಿದ್ದನು:ರಾಜನ್! ಯಾವ ಕಾರಣದಿಂದ ಮಹಾಪ್ರಯತ್ನವನ್ನು ಮಾಡುತ್ತಿದ್ದೀಯೆ? ಭೂಮಿಯನ್ನು ಸತತವಾಗಿ ಳುತ್ತಿರುವ ಉದ್ದೇಶವಾದರೂ ಏನು?”

ಕುರುವು ಹೇಳಿದನು: “ಶತಕ್ರತೋ! ಕ್ಷೇತ್ರದಲ್ಲಿ ಯಾರು ಮರಣಹೊಂದುತ್ತಾರೋ ಅವರು ಪಾಪಗಳನ್ನು ಕಳೆದುಕೊಂಡು ಸುಕೃತ ಲೋಕಗಳಿಗೆ ಹೋಗುತ್ತಾರೆ.”

ಆಗ ಪ್ರಭು ಶಕ್ರನು ಅಪಹಾಸ್ಯಮಾಡಿ ತ್ರಿದಿವಕ್ಕೆ ತೆರಳಿದನು. ರಾಜರ್ಷಿಯಾದರೋ ಸ್ವಲ್ಪವೂ ನಿರ್ವಿಣ್ಣನಾಗದೇ ಭೂಮಿಯನ್ನು ಉಳುತ್ತಲೇ ಇದ್ದನು. ಶತಕ್ರತುವು ಪುನಃ ಪುನಃ ಬಂದು ಅವನನ್ನು ಅಪಹಾಸ್ಯಮಾಡಿ ಕೇಳುತ್ತಿದ್ದನು. ಅವನು ನಿರ್ವಿಣ್ಣನಾಗದೇ ಮತ್ತೆ ಮತ್ತೆ ಅದೇ ಉತ್ತರವನ್ನು ನೀಡುತ್ತಿದ್ದನು. ನೃಪನಾದರೋ ಉಗ್ರ ತಪಸ್ಸಿನಂತೆ ಭೂಮಿಯನ್ನು ಳುತ್ತಿದ್ದನು. ಆಗ ಶಕ್ರವು ರಾಜರ್ಷಿಯ ಉದ್ದೇಶವನ್ನು ದೇವತೆಗಳಿಗೆ ತಿಳಿಸಿದನು. ಅದನ್ನು ಕೇಳಿ ದೇವತೆಗಳು ಸಹಸ್ರಾಕ್ಷನಿಗೆ ಮಾತನ್ನಾಡಿದರು: “ಶಕ್ರ! ಸಾಧ್ಯವಾದರೆ ರಾಜರ್ಷಿಗೆ ವರದಾನವನ್ನಿತ್ತು ಅವನನ್ನು ಒಲಿಸಿಕೋ! ಒಂದುವೇಳೆ ಮಾನವರು ಇಲ್ಲಿ ಮರಣಹೊಂದಿ ಸ್ವರ್ಗಕ್ಕೆ ಹೋಗುತ್ತಾರೆಂದಾದರೆ ನಮಗೆ ಕ್ರತುಗಳಲ್ಲಿ ಭಾಗವು ದೊರೆಯದಂತಾಗುತ್ತದೆ.”

ಆಗ ಶಕ್ರನು ರಾಜರ್ಷಿಯಲ್ಲಿಗೆ ಬಂದು ಹೇಳಿದನು: “ಇನ್ನು ನೀನು ಕಷ್ಟಪಡಬೇಡ! ನನ್ನ ಮಾತಿನಂತೆ ಮಾಡು! ನೃಪ! ಇಲ್ಲಿ ಮಾನವರು ನಿರಾಹಾರರಾಗಿ ಅತಂದ್ರಿತರಾಗಿ ದೇಹತ್ಯಾಗಮಾಡುತ್ತಾರೋ ಅಥವಾ ಯುದ್ಧದಲ್ಲಿ ಹತರಾಗುತ್ತಾರೋ ಅವರೆಲ್ಲರೂ ಸ್ವರ್ಗಕ್ಕೆ ಹೋಗುತ್ತಾರೆ. ಅವರೆಲ್ಲರೂ ಸ್ವರ್ಗಕ್ಕೆ ಭಾಗಿಗಳಾಗುತ್ತಾರೆ.”

ಅನಂತರ ಹಾಗೆಯೇ ಆಗಲೆಂದು ರಾಜ ಕುರುವು ಕ್ರನಿಗೆ ಹೇಳಿದನು. ಆಗ ಅವನಿಂದ ಅನುಮತಿಯನ್ನು ಪಡೆದು ಒಳಗಿಂದೊಳಗೇ ಪ್ರಹೃಷ್ಟನಾಗಿ ಬಲನಿಷೂದನನು ಬೇಗನೆ ತ್ರಿದಿವಕ್ಕೆ ತೆರಳಿದನು. ಹೀಗೆ ಹಿಂದೆ ಳುತ್ತಿದ್ದ ರಾಜರ್ಷಿಯು ಶಕ್ರನಿಂದ ಅನುಜ್ಞಾತನಾಗಿ ಪುಣ್ಯ ಪ್ರಾಣಗಳನ್ನು ತೊರೆದನು. ಕುರುಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ್ವಯಂ ಸುರಾಧಿಪನೇ ಹಾಡಿದ ಶ್ಲೋಕಗಳಿವೆ!

ಗಾಳಿಯಿಂದ ತೂರಿಕೊಂಡೊಯ್ಯಲ್ಪಟ್ಟ ಕುರುಕ್ಷೇತ್ರದ ಧೂಳು ಕೂಡ ದುಷ್ಕರ್ಮಿಗಳಾಗಿದ್ದವರನ್ನು ಪರಮ ಗತಿಗೆ ಕೊಂಡೊಯ್ಯುತ್ತದೆ. ನರಸಿಂಹರಾದ ಬ್ರಾಹ್ಮಣಸತ್ತಮರೂ ಮತ್ತು ನೃಗಾದಿ ನರದೇವಮುಖ್ಯರೂ ಮಹಾವೆಚ್ಚದ ಇಷ್ಟಿ ಕ್ರತುಗಳನ್ನು ಮಾಡಿ ದೇಹಗಳನ್ನು ತೊರೆದು ಸರ್ಗವನ್ನು ಪಡೆದರು. ತರಂತುಕ, ಕಾರಂತುಕ, ರಾಮಹ್ರದ ಮತ್ತು ಮಚಕ್ರುಕಗಳ ಮಧ್ಯದಲ್ಲಿರುವ ಇದೇ ಕುರುಕ್ಷೇತ್ರ ಸಮಂತಪಂಚಕವನ್ನು ಪ್ರಜಾಪತಿಯ ಉತ್ತರವೇದಿ ಎಂದು ಕರೆಯಲ್ಪಡುತ್ತದೆ. ಮಹಾಪುಣ್ಯವೂ ಮಂಗಳಕರವೂ ಆಗಿರುವ ಇದು ಸ್ವರ್ಗದ ಗುಣಗಳನ್ನು ಹೊಂದಿದ್ದು ದಿವೌಕಸರಿಗೆ ಸುಸಮ್ಮತವಾಗಿದೆ. ಆದುದರಿಂದ ಅಲ್ಲಿ ಹತರಾದ ಸರ್ವ ರಾಜರೂ ಮಹಾತ್ಮರ ಗತಿಯನ್ನು ಹೊಂದುತ್ತಾರೆ.”

Related image

The other stories:

  1. ಆರುಣಿ ಉದ್ದಾಲಕ
  2. ಉಪಮನ್ಯು
  3. ಸಮುದ್ರಮಥನ
  4. ಗರುಡೋತ್ಪತ್ತಿ; ಅಮೃತಹರಣ
  5. ಶೇಷ
  6. ಶಕುಂತಲೋಪಾಽಖ್ಯಾನ
  7. ಯಯಾತಿ
  8. ಸಂವರಣ-ತಪತಿ
  9. ವಸಿಷ್ಠೋಪಾಽಖ್ಯಾನ
  10. ಔರ್ವೋಪಾಽಖ್ಯಾನ
  11. ಸುಂದೋಪಸುಂದೋಪಾಽಖ್ಯಾನ
  12. ಸಾರಂಗಗಳು
  13. ಸೌಭವಧೋಪಾಽಖ್ಯಾನ
  14. ನಲೋಪಾಽಖ್ಯಾನ
  15. ಅಗಸ್ತ್ಯೋಪಾಽಖ್ಯಾನ
  16. ಭಗೀರಥ
  17. ಋಷ್ಯಶೃಂಗ
  18. ಪರಶುರಾಮ
  19. ಚ್ಯವನ
  20. ಮಾಂಧಾತ
  21. ಸೋಮಕ-ಜಂತು
  22. ಗಿಡುಗ-ಪಾರಿವಾಳ
  23. ಅಷ್ಟಾವಕ್ರ
  24. ರೈಭ್ಯ-ಯವಕ್ರೀತ
  25. ತಾರ್ಕ್ಷ್ಯ ಅರಿಷ್ಠನೇಮಿ
  26. ಅತ್ರಿ
  27. ವೈವಸ್ವತ ಮನು
  28. ಮಂಡೂಕ-ವಾಮದೇವ
  29. ಧುಂಧುಮಾರ
  30. ಮಧು-ಕೈಟಭ ವಧೆ
  31. ಕಾರ್ತಿಕೇಯನ ಜನ್ಮ
  32. ಮುದ್ಗಲ
  33. ರಾಮೋಪಾಽಖ್ಯಾನ: ರಾಮಕಥೆ
  34. ಪತಿವ್ರತಾಮಹಾತ್ಮೆ: ಸಾವಿತ್ರಿ-ಸತ್ಯವಾನರ ಕಥೆ
  35. ಇಂದ್ರವಿಜಯೋಪಾಽಖ್ಯಾನ
  36. ದಂಬೋದ್ಭವ
  37. ಮಾತಲಿವರಾನ್ವೇಷಣೆ
  38. ಗಾಲವ ಚರಿತೆ
  39. ವಿದುಲೋಪಾಽಖ್ಯಾನ
  40. ತ್ರಿಪುರವಧೋಪಾಽಖ್ಯಾನ
  41. ಪರಶುರಾಮನು ಅಸ್ತ್ರಗಳನ್ನು ಪಡೆದುದು
  42. ಪ್ರಭಾಸಕ್ಷೇತ್ರ ಮಹಾತ್ಮೆ
  43. ತ್ರಿತಾಖ್ಯಾನ
  44. ಸಾರಸ್ವತೋಪಾಽಖ್ಯಾನ
  45. ವಿಶ್ವಾಮಿತ್ರ
  46. ವಸಿಷ್ಠಾಪವಾಹ ಚರಿತ್ರೆ
  47. ಬಕ ದಾಲ್ಭ್ಯನ ಚರಿತ್ರೆ
  48. ಕಪಾಲಮೋಚನತೀರ್ಥ ಮಹಾತ್ಮೆ
  49. ಮಂಕಣಕ
  50. ವೃದ್ಧಕನ್ಯೆ
  51. ಬದರಿಪಾಚನ ತೀರ್ಥ
  52. ಕುಮಾರನ ಪ್ರಭಾವ-ಅಭಿಷೇಕ
  53. ಅಸಿತದೇವಲ-ಜೇಗೀಷವ್ಯರ ಕಥೆ
  54. ಮಹರ್ಷಿ ದಧೀಚಿ ಮತ್ತು ಸಾರಸ್ವತ ಮುನಿ
  55. ಕುರುಕ್ಷೇತ್ರ ಮಹಾತ್ಮೆ
  56. ಶಂಖಲಿಖಿತೋಪಾಽಖ್ಯಾನ
  57. ಜಾಮದಗ್ನೇಯೋಪಾಽಖ್ಯಾನ
  58. ಷೋಡಶರಾಜಕೀಯೋಪಾಽಖ್ಯಾನ

Leave a Reply

Your email address will not be published. Required fields are marked *