ವೈಶಂಪಾಯನ

ವೈಶಂಪಾಯನನು ವ್ಯಾಸನ ಶಿಷ್ಯರಲ್ಲಿ ಓರ್ವನು. ಜನಮೇಜಯನ ಸರ್ಪಸತ್ರದಲ್ಲಿ ವ್ಯಾಸನ ಅನುಗ್ರಹದಿಂದ ಇವನು ಮಹಾಭಾರತ ಕಥೆಯನ್ನು ಮೊಟ್ಟಮೊದಲನೆಯ ಬಾರಿ ಮನುಷ್ಯಲೋಕದಲ್ಲಿ ಹೇಳಿದನು. ವೈಶಂಪಾಯನನು ಹೇಳಿದ ಮಹಾಭಾರತ ಕಥೆಯನ್ನೇ ಸೂತ ಪೌರಾಣಿಕ ಉಗ್ರಶ್ರವನು ನೈಮಿಷಾರಣ್ಯದಲ್ಲಿ ಶೌನಕಾದಿ ಮುನಿಗಳಿಗೆ ಹೇಳಿದನು. 

Comments are closed.