Anushasana Parva: Chapter 148

ಅನುಶಾಸನ ಪರ್ವ: ದಾನಧರ್ಮ ಪರ್ವ

೧೪೮

13148001 ಯುಧಿಷ್ಠಿರ ಉವಾಚ|

13148001a ಯೇ ಚ ಧರ್ಮಮಸೂಯಂತಿ ಯೇ ಚೈನಂ ಪರ್ಯುಪಾಸತೇ|

13148001c ಬ್ರವೀತು ಭಗವಾನೇತತ್ಕ್ವ ತೇ ಗಚ್ಚಂತಿ ತಾದೃಶಾಃ||

ಯುಧಿಷ್ಠಿರನು ಹೇಳಿದನು: “ಧರ್ಮವನ್ನು ನಿಂದಿಸುವವರು ಯಾವ ಲೋಕಕ್ಕೆ ಹೋಗುತ್ತಾರೆ ಮತ್ತು ಧರ್ಮವನ್ನು ಆಚರಿಸುವವರು ಯಾವ ಲೋಕಕ್ಕೆ ಹೋಗುತ್ತಾರೆ ಎನ್ನುವುದನ್ನು ಹೇಳಬೇಕು.”

13148002 ಭೀಷ್ಮ ಉವಾಚ|

13148002a ರಜಸಾ ತಮಸಾ ಚೈವ ಸಮವಸ್ತೀರ್ಣಚೇತಸಃ|

13148002c ನರಕಂ ಪ್ರತಿಪದ್ಯಂತೇ ಧರ್ಮವಿದ್ವೇಷಿಣೋ ನರಾಃ||

ಭೀಷ್ಮನು ಹೇಳಿದನು: “ರಜೋಗುಣ ತಮೋಗುಣಗಳಿಂದ ಕೂಡಿದ ಮಲಿನ ಮನಸ್ಸಿನ ಧರ್ಮ ದ್ವೇಷೀ ನರರು ನರಕಕ್ಕೆ ಹೋಗುತ್ತಾರೆ.

13148003a ಯೇ ತು ಧರ್ಮಂ ಮಹಾರಾಜ ಸತತಂ ಪರ್ಯುಪಾಸತೇ|

13148003c ಸತ್ಯಾರ್ಜವಪರಾಃ ಸಂತಸ್ತೇ ವೈ ಸ್ವರ್ಗಭುಜೋ ನರಾಃ||

ಮಹಾರಾಜ! ಸತತವೂ ಧರ್ಮವನ್ನು ಉಪಾಸಿಸುವ ಸತ್ಯ-ಸರಳತೆಯಿಂದಿರುವ ಸಂತ ನರರು ಸ್ವರ್ಗವನ್ನು ಭೋಗಿಸುತ್ತಾರೆ.

13148004a ಧರ್ಮ ಏವ ರತಿಸ್ತೇಷಾಮಾಚಾರ್ಯೋಪಾಸನಾದ್ಭವೇತ್|

13148004c ದೇವಲೋಕಂ ಪ್ರಪದ್ಯಂತೇ ಯೇ ಧರ್ಮಂ ಪರ್ಯುಪಾಸತೇ||

ಆಚಾರ್ಯರ ಉಪಾಸನೆಯಿಂದ ಧರ್ಮದಲ್ಲಿಯೇ ಅಭಿರುಚಿಯುಂಟಾಗುತ್ತದೆ. ಧರ್ಮವನ್ನು ಉಪಾಸಿಸುವವರು ದೇವಲೋಕವನ್ನು ಪಡೆಯುತ್ತಾರೆ.

13148005a ಮನುಷ್ಯಾ ಯದಿ ವಾ ದೇವಾಃ ಶರೀರಮುಪತಾಪ್ಯ ವೈ|

13148005c ಧರ್ಮಿಣಃ ಸುಖಮೇಧಂತೇ ಲೋಭದ್ವೇಷವಿವರ್ಜಿತಾಃ||

ಮನುಷ್ಯರಾಗಲೀ ದೇವತೆಗಳಾಗಲೀ ಶರೀರವನ್ನು ಪರಿತಾಪಗೊಳಿಸುವುದರಿಂದ ಧರ್ಮಿಗಳಾಗುತ್ತಾರೆ. ಲೋಭದ್ವೇಷಗಳನ್ನು ವರ್ಜಿಸಿದವರು ಸುಖವನ್ನು ಹೊಂದುತ್ತಾರೆ.

13148006a ಪ್ರಥಮಂ ಬ್ರಹ್ಮಣಃ ಪುತ್ರಂ ಧರ್ಮಮಾಹುರ್ಮನೀಷಿಣಃ|

13148006c ಧರ್ಮಿಣಃ ಪರ್ಯುಪಾಸಂತೇ ಫಲಂ ಪಕ್ವಮಿವಾಶಯಃ||

ಧರ್ಮನು ಬ್ರಹ್ಮನ ಹಿರಿಯ ಪುತ್ರನೆಂದು ಮನೀಷಿಣರು ಹೇಳುತ್ತಾರೆ. ಪಕ್ವವಾದ ಹಣ್ಣನ್ನೇ ತಿನ್ನಲು ಬಯಸುವಂತೆ ಧರ್ಮವನ್ನೇ ಉಪಾಸಿಸಬೇಕು.”

13148007 ಯುಧಿಷ್ಠಿರ ಉವಾಚ|

13148007a ಅಸತಾಂ ಕೀದೃಶಂ ರೂಪಂ ಸಾಧವಃ ಕಿಂ ಚ ಕುರ್ವತೇ|

13148007c ಬ್ರವೀತು ಮೇ ಭವಾನೇತತ್ಸಂತೋಽಸಂತಶ್ಚ ಕೀದೃಶಾಃ||

ಯುಧಿಷ್ಠಿರನು ಹೇಳಿದನು: “ಅಸತ್ಪುರುಷರ ರೂಪವು ಹೇಗಿರುತ್ತದೆ? ಸತ್ಪುರುಷರು ಏನು ಮಾಡುತ್ತಾರೆ? ಸತ್ಪುರುಷರು ಮತ್ತು ಅಸತ್ಪುರುಷರು ಹೇಗಿರುತ್ತಾರೆ? ಇದನ್ನು ನನಗೆ ಹೇಳಬೇಕು.”

13148008 ಭೀಷ್ಮ ಉವಾಚ|

13148008a ದುರಾಚಾರಾಶ್ಚ ದುರ್ಧರ್ಷಾ ದುರ್ಮುಖಾಶ್ಚಾಪ್ಯಸಾಧವಃ|

13148008c ಸಾಧವಃ ಶೀಲಸಂಪನ್ನಾಃ ಶಿಷ್ಟಾಚಾರಸ್ಯ ಲಕ್ಷಣಮ್||

ಭೀಷ್ಮನು ಹೇಳಿದನು: “ಅಸತ್ಪುರುಷರು ದುರಾಚಾರಿಗಳು, ದುರ್ಧರ್ಷರು ಮತ್ತು ದುರ್ಮುಖರು. ಸತ್ಪುರುಷರು ಶೀಲಸಂಪನ್ನರು. ಶಿಷ್ಟಾಚಾರವು ಅವರ ಲಕ್ಷಣ.

13148009a ರಾಜಮಾರ್ಗೇ ಗವಾಂ ಮಧ್ಯೇ ಗೋಷ್ಠ[1]ಮಧ್ಯೇ ಚ ಧರ್ಮಿಣಃ|

13148009c ನೋಪಸೇವಂತಿ ರಾಜೇಂದ್ರ ಸರ್ಗಂ ಮೂತ್ರಪುರೀಷಯೋಃ||

ರಾಜೇಂದ್ರ! ಧಾರ್ಮಿಕರು ರಾಜಮಾರ್ಗದಲ್ಲಿ, ಗೋವುಗಳ ಮಧ್ಯದಲ್ಲಿ, ಮತ್ತು ಗೋವಿನ ಕೊಟ್ಟಿಗೆಯಲ್ಲಿ ಮಲ-ಮೂತ್ರಗಳನ್ನು ವಿಸರ್ಜಿಸುವುದಿಲ್ಲ.

13148010a ಪಂಚಾನಾಮಶನಂ ದತ್ತ್ವಾ ಶೇಷಮಶ್ನಂತಿ ಸಾಧವಃ|

13148010c ನ ಜಲ್ಪಂತಿ ಚ ಭುಂಜಾನಾ ನ ನಿದ್ರಾಂತ್ಯಾರ್ದ್ರಪಾಣಯಃ||

ಸತ್ಪುರುಷರು ಐವರಿಗೆ[2] ಅನ್ನವನ್ನು ನೀಡಿ ಉಳಿದುದನ್ನು ತಿನ್ನುತ್ತಾರೆ. ಊಟಮಾಡುವಾಗ ಹರಟುವುದಿಲ್ಲ ಮತ್ತು ಕೈಗಳು ಒದ್ದೆಯಾಗಿರುವಾಗ ಮಲಗುವುದಿಲ್ಲ.

13148011a ಚಿತ್ರಭಾನುಮನಡ್ವಾಹಂ ದೇವಂ ಗೋಷ್ಠಂ ಚತುಷ್ಪಥಮ್|

13148011c ಬ್ರಾಹ್ಮಣಂ ಧಾರ್ಮಿಕಂ ಚೈತ್ಯಂ ತೇ ಕುರ್ವಂತಿ ಪ್ರದಕ್ಷಿಣಮ್||

ಅವರು ಅಗ್ನಿಯನ್ನೂ, ಎತ್ತನ್ನೂ, ದೇವತೆಯನ್ನೂ, ಕೊಟ್ಟಿಗೆಯನ್ನೂ, ನಾಲ್ಕು ಹಾದಿಗಳು ಸೇರುವ ಚೌಕವನ್ನೂ, ಬ್ರಾಹ್ಮಣನನ್ನೂ, ಧಾರ್ಮಿಕನನ್ನೂ ಪ್ರದಕ್ಷಿಣೆ ಮಾಡಿ ಹೋಗುತ್ತಾರೆ.

13148012a ವೃದ್ಧಾನಾಂ ಭಾರತಪ್ತಾನಾಂ ಸ್ತ್ರೀಣಾಂ ಬಾಲಾತುರಸ್ಯ[3] ಚ|

13148012c ಬ್ರಾಹ್ಮಣಾನಾಂ ಗವಾಂ ರಾಜ್ಞಾಂ ಪಂಥಾನಂ ದದತೇ ಚ ತೇ||

ಅವರು ವೃದ್ಧರಿಗೂ, ಭಾರವನ್ನು ಹೊತ್ತವರಿಗೂ, ಸ್ತ್ರೀಯರಿಗೂ, ಆತುರರಾಗಿರುವ ಬಾಲಕರಿಗೂ, ಬ್ರಾಹ್ಮಣರಿಗೂ, ಗೋವುಗಳಿಗೂ ಮತ್ತು ರಾಜರಿಗೂ ದಾರಿನೀಡುತ್ತಾರೆ.

13148013a ಅತಿಥೀನಾಂ ಚ ಸರ್ವೇಷಾಂ ಪ್ರೇಷ್ಯಾಣಾಂ ಸ್ವಜನಸ್ಯ ಚ|

13148013c ತಥಾ ಶರಣಕಾಮಾನಾಂ ಗೋಪ್ತಾ ಸ್ಯಾತ್ಸ್ವಾಗತಪ್ರದಃ||

ಸತ್ಪುರುಷನು ಸರ್ವ ಅತಿಥಿಗಳಿಗೂ, ಸೇವಕರಿಗೂ, ಸ್ವಜನರಿಗೂ ಮತ್ತು ಶರಣುಬಂದವರಿಗೂ ರಕ್ಷಕನೂ ಸ್ವಾಗತ ಕೋರುವವನೂ ಆಗಿರುತ್ತಾನೆ.

13148014a ಸಾಯಂ ಪ್ರಾತರ್ಮನುಷ್ಯಾಣಾಮಶನಂ ದೇವನಿರ್ಮಿತಮ್|

13148014c ನಾಂತರಾ ಭೋಜನಂ ದೃಷ್ಟಮುಪವಾಸವಿಧಿರ್ಹಿ ಸಃ||

ಮನುಷ್ಯರು ಸಾಯಂಕಾಲ ಮತ್ತು ಪ್ರಾತಃಕಾಲ ಭೋಜನ ಮಾಡಬೇಕೆನ್ನುವುದು ದೇವನಿರ್ಮಿತ ನಿಯಮವು. ಈ ಎರಡು ಭೋಜನಗಳ ಮಧ್ಯೆ ಉಟಮಾಡಬಾರದು. ಇದನ್ನೇ ಉಪವಾಸವಿಧಿಯೆಂದೂ ಹೇಳುತ್ತಾರೆ.

13148015a ಹೋಮಕಾಲೇ ಯಥಾ ವಹ್ನಿಃ ಕಾಲಮೇವ ಪ್ರತೀಕ್ಷತೇ|

13148015c ಋತುಕಾಲೇ ತಥಾ ನಾರೀ ಋತುಮೇವ ಪ್ರತೀಕ್ಷತೇ|

13148015e ನ ಚಾನ್ಯಾಂ ಗಚ್ಚತೇ ಯಸ್ತು ಬ್ರಹ್ಮಚರ್ಯಂ ಹಿ ತತ್ ಸ್ಮೃತಮ್||

ಹೋಮಕಾಲವು ಪ್ರಾಪ್ತವಾದೊಡನೆಯೇ ಅಗ್ನಿಯು ಹೇಗೆ ಹೋಮವನ್ನು ಪ್ರತೀಕ್ಷಿಸುತ್ತಾನೋ ಹಾಗೆ ಋತುಕಾಲದಲ್ಲಿ ನಾರಿಯು ಪತಿಸಮಾಗಮವನ್ನು ನಿರೀಕ್ಷಿಸುತ್ತಾಳೆ. ಅನ್ಯ ಕಾಲದಲ್ಲಿ ಪತ್ನಿಯೊಂದಿಗೆ ಕೂಡದೇ ಇದ್ದರೆ ಅದೇ ಬ್ರಹ್ಮಚರ್ಯವೆಂದು ಹೇಳುತ್ತಾರೆ.

13148016a ಅಮೃತಂ ಬ್ರಾಹ್ಮಣಾ ಗಾವ ಇತ್ಯೇತತ್ತ್ರಯಮೇಕತಃ|

13148016c ತಸ್ಮಾದ್ಗೋಬ್ರಾಹ್ಮಣಂ ನಿತ್ಯಮರ್ಚಯೇತ ಯಥಾವಿಧಿ||

ಅಮೃತ, ಬ್ರಾಹ್ಮಣರು ಮತ್ತು ಗೋವುಗಳು ಈ ಮೂರೂ ಒಂದೇ. ಆದುದರಿಂದ ಗೋ-ಬ್ರಾಹ್ಮಣರನ್ನು ನಿತ್ಯವೂ ಯಥಾವಿಧಿಯಾಗಿ ಅರ್ಚಿಸಬೇಕು.

13148017a ಯಜುಷಾ ಸಂಸ್ಕೃತಂ ಮಾಂಸಮುಪಭುಂಜನ್ನ ದುಷ್ಯತಿ|

13148017c ಪೃಷ್ಠಮಾಂಸಂ ವೃಥಾಮಾಂಸಂ ಪುತ್ರಮಾಂಸಂ ಚ ತತ್ಸಮಮ್||

ಯಜುಸ್ಸಿನಿಂದ ಸಂಸ್ಕೃತವಾದ ಮಾಂಸವನ್ನು ಸೇವಿಸುವುದರಿಂದ ದೋಷವುಂಟಾಗುವುದಿಲ್ಲ.

13148018a ಸ್ವದೇಶೇ ಪರದೇಶೇ ವಾಪ್ಯತಿಥಿಂ ನೋಪವಾಸಯೇತ್|

13148018c ಕರ್ಮ ವೈ ಸಫಲಂ ಕೃತ್ವಾ ಗುರೂಣಾಂ ಪ್ರತಿಪಾದಯೇತ್||

ಸ್ವದೇಶದಲ್ಲಿಯಾಗಲೀ ಪರದೇಶದಲ್ಲಿಯಾಗಲೀ ಅತಿಥಿಯನ್ನು ಉಪವಾಸಕೆಡಿಸಬಾರದು. ಗುರುಗಳು ಹೇಳಿದ ಕಾರ್ಯವನ್ನು ಸಫಲವಾಗಿ ಮಾಡಿ ಅವರಿಗೆ ತಿಳಿಸಬೇಕು.

13148019a ಗುರುಭ್ಯ ಆಸನಂ ದೇಯಮಭಿವಾದ್ಯಾಭಿಪೂಜ್ಯ ಚ|

13148019c ಗುರೂನಭ್ಯರ್ಚ್ಯ ವರ್ಧಂತೇ ಆಯುಷಾ ಯಶಸಾ ಶ್ರಿಯಾ||

ಗುರುವನ್ನು ನಮಸ್ಕರಿಸಿ ಪೂಜಿಸಿ ಆಸನವನ್ನು ನೀಡಬೇಕು. ಗುರುಜನರನ್ನು ಅರ್ಚಿಸುವುದರಿಂದ ಆಯುಸ್ಸು, ಯಶಸ್ಸು ಮತ್ತು ಸಂಪತ್ತುಗಳು ವರ್ಧಿಸುತ್ತವೆ.

13148020a ವೃದ್ಧಾನ್ನಾತಿವದೇಜ್ಜಾತು ನ ಚ ಸಂಪ್ರೇಷಯೇದಪಿ|

13148020c ನಾಸೀನಃ ಸ್ಯಾತ್ ಸ್ಥಿತೇಷ್ವೇವಮಾಯುರಸ್ಯ ನ ರಿಷ್ಯತೇ||

ವೃದ್ಧರನ್ನು ಯಾವಾಗಲೂ ತಿರಸ್ಕರಿಸಬಾರದು. ಅವರನ್ನು ಕೆಲಸಕ್ಕೆ ಕಳುಹಿಸಬಾರದು. ಅವರು ನಿಂತಿರುವಾಗ ತಾನು ಕುಳಿತುಕೊಳ್ಳಬಾರದು. ಹೀಗೆ ಮಾಡುವವನ ಆಯುಸ್ಸು ಕ್ಷೀಣಿಸುವುದಿಲ್ಲ.

13148021a ನ ನಗ್ನಾಮೀಕ್ಷತೇ ನಾರೀಂ ನ ವಿದ್ವಾನ್ಪುರುಷಾನಪಿ[4]|

13148021c ಮೈಥುನಂ ಸತತಂ ಗುಪ್ತಮಾಹಾರಂ ಚ ಸಮಾಚರೇತ್||

ಬೆತ್ತಲೆಯಾಗಿರುವ ನಾರಿಯ ಕಡೆ ನೋಡಬಾರದು. ನಗ್ನರಾದ ಪುರುಷರನ್ನೂ ನೋಡಬಾರದು. ಮೈಥುನವನ್ನಾಗಲೀ ಭೋಜನವನ್ನಾಗಲೀ ಏಕಾಂತದಲ್ಲಿ ಮಾಡಬೇಕು.

13148022a ತೀರ್ಥಾನಾಂ ಗುರವಸ್ತೀರ್ಥಂ ಶುಚೀನಾಂ ಹೃದಯಂ ಶುಚಿ|

13148022c ದರ್ಶನಾನಾಂ ಪರಂ ಜ್ಞಾನಂ ಸಂತೋಷಃ ಪರಮಂ ಸುಖಮ್||

ತೀರ್ಥಗಳಲೆಲ್ಲಾ ಗುರುವೇ ಸರ್ವೋತ್ತಮ ತೀರ್ಥವು. ಶುಚಿಯಾದವರಲ್ಲಿ ಹೃದಯಶುದ್ಧವಿರುವವರೇ ಸರ್ವೋತ್ತಮ ಶುಚಿಗಳು. ದರ್ಶನಗಳಲ್ಲಿ ಜ್ಞಾನವೇ ಶ್ರೇಷ್ಠವಾದುದು ಮತ್ತು ಸಂತೋಷವೇ ಪರಮ ಸುಖವು.

13148023a ಸಾಯಂ ಪ್ರಾತಶ್ಚ ವೃದ್ಧಾನಾಂ ಶೃಣುಯಾತ್ಪುಷ್ಕಲಾ ಗಿರಃ|

13148023c ಶ್ರುತಮಾಪ್ನೋತಿ ಹಿ ನರಃ ಸತತಂ ವೃದ್ಧಸೇವಯಾ||

ಸಾಯಂಕಾಲ ಮತ್ತು ಪ್ರಾತಃಕಾಲ ವೃದ್ಧರ ಪುಷ್ಕಲ ಮಾತುಗಳನ್ನು ಕೇಳುತ್ತಿರಬೇಕು. ಸತತವೂ ವೃದ್ಧಸೇವೆಯಲ್ಲಿರುವ ನರನು ಶಾಸ್ತ್ರಜ್ಞಾನವನ್ನು ಪಡೆದುಕೊಳ್ಳುತ್ತಾನೆ.

13148024a ಸ್ವಾಧ್ಯಾಯೇ ಭೋಜನೇ ಚೈವ ದಕ್ಷಿಣಂ ಪಾಣಿಮುದ್ಧರೇತ್|

13148024c ಯಚ್ಚೇದ್ವಾಙ್ಮನಸೀ ನಿತ್ಯಮಿಂದ್ರಿಯಾಣಾಂ ಚ ವಿಭ್ರಮಮ್||

ಸ್ವಾಧ್ಯಾಯದಲ್ಲಿ ಮತ್ತು ಭೋಜನದಲ್ಲಿ ಬಲಗೈಯನ್ನೇ ಉಪಯೋಗಿಸಬೇಕು. ಮಾತನ್ನೂ, ಮನಸ್ಸನ್ನೂ, ಇಂದ್ರಿಯಗಳನ್ನೂ ನಿತ್ಯವೂ ಸ್ವಚ್ಛಂದವಾಗಿರಲು ಬಿಡಬಾರದು.

13148025a ಸಂಸ್ಕೃತಂ ಪಾಯಸಂ ನಿತ್ಯಂ ಯವಾಗೂಂ ಕೃಸರಂ ಹವಿಃ|

13148025c ಅಷ್ಟಕಾಃ ಪಿತೃದೈವತ್ಯಾ ವೃದ್ಧಾನಾಮಭಿಪೂಜನಮ್[5]||

ಚೆನ್ನಾಗಿ ಮಾಡಿದ ಪಾಯಸ, ಗಂಜಿ, ತಿಲಾನ್ನ, ಮತ್ತು ಹವಿಸ್ಸನ್ನು ಅಷ್ಟಕಾ ಶ್ರಾದ್ಧಗಳಲ್ಲಿ[6] ಪಿತೃದೇವತೆಗಳಿಗೆ ಅರ್ಪಿಸಬೇಕು. ವೃದ್ಧರನ್ನು ಪೂಜಿಸಬೇಕು.

13148026a ಶ್ಮಶ್ರುಕರ್ಮಣಿ ಮಂಗಲ್ಯಂ ಕ್ಷುತಾನಾಮಭಿನಂದನಮ್|

13148026c ವ್ಯಾಧಿತಾನಾಂ ಚ ಸರ್ವೇಷಾಮಾಯುಷಃ ಪ್ರತಿನಂದನಮ್||

ಕ್ಷೌರಕರ್ಮವು ನಡೆಯುವಾಗ ಮಂಗಳಕರ ಶಬ್ದಗಳನ್ನು ಕೇಳಬೇಕು. ಸೀನಿದಾಗ ಆಶೀರ್ವದಿಸಬೇಕು. ವ್ಯಾಧಿಗ್ರಸ್ತರಾಗಿರುವ ಎಲ್ಲರನ್ನೂ ದೀರ್ಘಾಯುಗಳಾಗಲೆಂದು ಹರಸಬೇಕು.

13148027a ನ ಜಾತು ತ್ವಮಿತಿ ಬ್ರೂಯಾದಾಪನ್ನೋಽಪಿ ಮಹತ್ತರಮ್|

13148027c ತ್ವಂಕಾರೋ ವಾ ವಧೋ ವೇತಿ ವಿದ್ವತ್ಸು ನ ವಿಶಿಷ್ಯತೇ|

13148027e ಅವರಾಣಾಂ ಸಮಾನಾನಾಂ ಶಿಷ್ಯಾಣಾಂ ಚ ಸಮಾಚರೇತ್||

ಯಾವುದೇ ಮಹಾಕಷ್ಟದಲ್ಲಿದ್ದರೂ ಗುರುಜನರ ವಿಷಯದಲ್ಲಿ ನೀನು ಎಂಬ ಶಬ್ದವನ್ನು ಪ್ರಯೋಗಿಸಬಾರದು. ನೀನು ಎಂದು ಏಕವಚನದಲ್ಲಿ ಮಾತನಾಡುವುದು ಮತ್ತು ವಧೆ ಇವೆರಡರಲ್ಲಿ ಭೇದವಿಲ್ಲವೆಂದು ಹೇಳುತ್ತಾರೆ. ತನಗೆ ಸಮನಾದವರ, ಕಿರಿಯರ ಮತ್ತು ಶಿಷ್ಯರ ವಿಷಯದಲ್ಲಿ ನೀನು ಎಂಬ ಶಬ್ದವನ್ನು ಉಪಯೋಗಿಸಬಹುದು.

13148028a ಪಾಪಮಾಚಕ್ಷತೇ ನಿತ್ಯಂ ಹೃದಯಂ ಪಾಪಕರ್ಮಿಣಾಮ್|

[7]13148028c ಜ್ಞಾನಪೂರ್ವಂ ವಿನಶ್ಯಂತಿ ಗೂಹಮಾನಾ ಮಹಾಜನೇ||

ಪಾಪಕರ್ಮಿಗಳ ಹೃದಯವು ನಿತ್ಯವೂ ಪಾಪಕರ್ಮಗಳ ಕುರಿತು ಹೇಳುತ್ತಿರುತ್ತದೆ. ಜ್ಞಾನಪೂರ್ವಕವಾಗಿ ಮಾಡಿದ ಪಾಪವನ್ನು ಮಹಾಜನರಿಂದ ಬಚ್ಚಿಡುವವನು ವಿನಾಶಹೊಂದುತ್ತಾನೆ.

13148029a ಜ್ಞಾನಪೂರ್ವಂ ಕೃತಂ ಕರ್ಮ ಚ್ಚಾದಯಂತೇ ಹ್ಯಸಾಧವಃ|

13148029c ನ ಮಾಂ ಮನುಷ್ಯಾಃ ಪಶ್ಯಂತಿ ನ ಮಾಂ ಪಶ್ಯಂತಿ ದೇವತಾಃ|

13148029e ಪಾಪೇನಾಭಿಹತಃ ಪಾಪಃ ಪಾಪಮೇವಾಭಿಜಾಯತೇ||

ದುಷ್ಟರು ಜ್ಞಾನಪೂರ್ವಕವಾಗಿ ಮಾಡಿದ ಕರ್ಮಗಳನ್ನು ಮುಚ್ಚಿಡುತ್ತಾರೆ. “ನನ್ನನ್ನು ಬೇರೆ ಯಾವ ಮನುಷ್ಯನೂ ನೋಡುವುದಿಲ್ಲ. ನನ್ನನ್ನು ದೇವತೆಗಳೂ ನೋಡುವುದಿಲ್ಲ” ಎಂದು ಭಾವಿಸಿಕೊಂಡು ಪಾಪದಿಂದ ಮುಚ್ಚಿಹೋಗಿರುವವನು ಪುನಃ ಪುನಃ ಪಾಪಕರ್ಮಗಳನ್ನೇ ಮಾಡುತ್ತಿರುತ್ತಾನೆ.

13148030a ಯಥಾ ವಾರ್ಧುಷಿಕೋ ವೃದ್ಧಿಂ ದೇಹಭೇದೇ ಪ್ರತೀಕ್ಷತೇ|

13148030c ಧರ್ಮೇಣಾಪಿಹಿತಂ ಪಾಪಂ ಧರ್ಮಮೇವಾಭಿವರ್ಧಯೇತ್||

ಬಡ್ಡಿಹಣದಿಂದ ಜೀವಿಸುವವನು ದಿನವುರುಳುತ್ತಲೇ ತನ್ನ ಬಡ್ಡಿಯ ಹಣವು ಹೆಚ್ಚಾಗುವುದನ್ನು ಹೇಗೆ ನಿರೀಕ್ಷಿಸುತ್ತಿರುತ್ತಾನೋ ಹಾಗೆ ಧರ್ಮಕಾರ್ಯಗಳನ್ನೇ ಹೆಚ್ಚು ಹೆಚ್ಚು ಮಾಡುತ್ತಿದ್ದರೆ ಅದರಿಂದ ಪಾಪವು ಮುಚ್ಚಲ್ಪಟ್ಟು ಧರ್ಮವೇ ಹೆಚ್ಚಾಗುತ್ತಾ ಹೋಗುತ್ತದೆ.

13148031a ಯಥಾ ಲವಣಮಂಭೋಭಿರಾಪ್ಲುತಂ ಪ್ರವಿಲೀಯತೇ|

13148031c ಪ್ರಾಯಶ್ಚಿತ್ತಹತಂ ಪಾಪಂ ತಥಾ ಸದ್ಯಃ ಪ್ರಣಶ್ಯತಿ||

ನೀರಿನಲ್ಲಿ ಹಾಕಿದ ಉಪ್ಪು ಕೂಡಲೇ ಕರಗಿಹೋಗುವಂತೆ ಪ್ರಾಯಶ್ಚಿತ್ತದಿಂದ ಹತಗೊಂಡ ಪಾಪವು ಕೂಡಲೇ ನಾಶವಾಗುತ್ತದೆ.

13148032a ತಸ್ಮಾತ್ಪಾಪಂ ನ ಗೂಹೇತ ಗೂಹಮಾನಂ ವಿವರ್ಧತೇ|

13148032c ಕೃತ್ವಾ ತು ಸಾಧುಷ್ವಾಖ್ಯೇಯಂ ತೇ ತತ್ ಪ್ರಶಮಯಂತ್ಯುತ||

ಆದುದರಿಂದ ಪಾಪವನ್ನು ಗುಟ್ಟಾಗಿಡಬಾರದು. ಗುಟ್ಟಾಗಿಟ್ಟರೆ ಪಾಪವು ವರ್ಧಿಸುತ್ತದೆ. ಮಾಡಿದ ಪಾಪಕರ್ಮಗಳನ್ನು ಸತ್ಪುರುಷರಲ್ಲಿ ಹೇಳಿಕೊಳ್ಳಬೇಕು. ಅವರು ಅದನ್ನು ಪ್ರಶಮನಗೊಳಿಸುತ್ತಾರೆ.

13148033a ಆಶಯಾ ಸಂಚಿತಂ ದ್ರವ್ಯಂ ಯತ್ಕಾಲೇ ನೋಪಭುಜ್ಯತೇ|

13148033c ಅನ್ಯೇ ಚೈತತ್ ಪ್ರಪದ್ಯಂತೇ ವಿಯೋಗೇ ತಸ್ಯ ದೇಹಿನಃ||

ಆಸೆಯಿಂದ ಕೂಡಿಟ್ಟ ಧನವನ್ನು ಒಂದೇ ಸಮಯದಲ್ಲಿ ಭೋಗಿಸಲು ಸಾಧ್ಯವಿಲ್ಲ. ಆದರೆ ಅದಕ್ಕೆ ಮೊದಲೇ ದೇಹದ ವಿಯೋಗವಾದರೆ ಆ ಧನವನ್ನು ಇತರರು ಬಳಸುತ್ತಾರೆ.

13148034a ಮಾನಸಂ ಸರ್ವಭೂತಾನಾಂ ಧರ್ಮಮಾಹುರ್ಮನೀಷಿಣಃ|

13148034c ತಸ್ಮಾತ್ಸರ್ವಾಣಿ ಭೂತಾನಿ ಧರ್ಮಮೇವ ಸಮಾಸತೇ||

ಸರ್ವಭೂತಗಳ ಧರ್ಮವೂ ಮನಸ್ಸೇ ಎಂದು ಮನೀಷಿಣರು ಹೇಳುತ್ತಾರೆ. ಆದುದರಿಂದ ಸರ್ವ ಭೂತಗಳೂ ಧರ್ಮವನ್ನೇ ಅವಲಂಬಿಸಿವೆ.

13148035a ಏಕ ಏವ ಚರೇದ್ಧರ್ಮಂ ನ ಧರ್ಮಧ್ವಜಿಕೋ ಭವೇತ್|

13148035c ಧರ್ಮವಾಣಿಜಕಾ ಹ್ಯೇತೇ ಯೇ ಧರ್ಮಮುಪಭುಂಜತೇ||

ಮನುಷ್ಯನು ಏಕಾಕಿಯಾಗಿಯೇ ಧರ್ಮವನ್ನು ಆಚರಿಸಬೇಕು. ಧರ್ಮಧ್ವಜಿಯಾಗಬಾರದು. ಧರ್ಮಕಾರ್ಯಗಳ ಮೂಲಕ ಜೀವಿಸುವವರು ಧರ್ಮದ ವ್ಯಾಪಾರಿಗಳಾಗುತ್ತಾರೆ.

13148036a ಅರ್ಚೇದ್ದೇವಾನದಂಭೇನ ಸೇವೇತಾಮಾಯಯಾ ಗುರೂನ್|

13148036c ನಿಧಿಂ ನಿದಧ್ಯಾತ್ಪಾರತ್ರ್ಯಂ ಯಾತ್ರಾರ್ಥಂ ದಾನಶಬ್ದಿತಮ್||

ದಾಂಭಿಕತೆಯಿಲ್ಲದೇ ದೇವತೆಗಳನ್ನು ಪೂಜಿಸಬೇಕು. ಕಪಟವಿಲ್ಲದೇ ಗುರುಜನರ ಸೇವೆಯನ್ನು ಮಾಡಬೇಕು. ಪರಲೋಕದ ಯಾತ್ರೆಗಾಗಿ ದಾನವೆಂಬ ನಿಧಿಯನ್ನು ಸಂಗ್ರಹಿಸಿಕೊಳ್ಳಬೇಕು.”

ಇತಿ ಶ್ರೀಮಹಾಭಾರತೇ ಅನುಶಾಸನ ಪರ್ವಣಿ ದಾನಧರ್ಮ ಪರ್ವಣಿ ಧರ್ಮಪ್ರಮಾಣಕಥನೇ ಅಷ್ಟಚತ್ವಾರಿಂಶತ್ಯಧಿಕಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅನುಶಾಸನ ಪರ್ವದಲ್ಲಿ ದಾನಧರ್ಮ ಪರ್ವದಲ್ಲಿ ಧರ್ಮಪ್ರಮಾಣಕಥನ ಎನ್ನುವ ನೂರಾನಲ್ವತ್ತೆಂಟನೇ ಅಧ್ಯಾಯವು.

[1] ಧಾನ್ಯ (ಭಾರತ ದರ್ಶನ).

[2] ದೇವತೆಗಳು, ಪಿತೃಗಳು, ಋಷಿಗಳು, ಅತಿಥಿಗಳು ಮತ್ತು ಭೂತಗಳು (ಭಾರತ ದರ್ಶನ).

[3] ಚಕ್ರಧರಸ್ಯ (ಭಾರತ ದರ್ಶನ).

[4] ನಗ್ನಾನ್ಪುರುಷಾನಪಿ| (ಭಾರತ ದರ್ಶನ).

[5] ಗ್ರಹಾಣಾಮಭಿಪೂಜನಮ್ (ಭಾರತ ದರ್ಶನ).

[6] ಮಾರ್ಗಶೀರ್ಷದ ಮೊದಲ ನಾಲ್ಕು ತಿಂಗಳುಗಳ (ಮಾರ್ಗಶೀರ್ಷ, ಪುಷ್ಯ, ಮಾಘ ಮತ್ತು ಫಾಲ್ಗುಣ) ಕೃಷ್ಣಪಕ್ಷದ ಸಪ್ತಮೀ, ಅಷ್ಟಮೀ ಮತ್ತು ನವಮೀ ಈ ಮೂರು ತಿಥಿಗಳಲ್ಲಿ ಮಾಡುವ ಶ್ರಾದ್ಧಕ್ಕೆ ಅಷ್ಟಕಾ ಶ್ರಾದ್ಧವೆಂದು ಹೆಸರು (ಭಾರತ ದರ್ಶನ).

[7] ಇದಕ್ಕೆ ಮೊದಲು ಈ ಒಂದು ಅಧಿಕ ಶ್ಲೋಕಾರ್ಧವಿದೆ: ಜ್ಞಾನಪೂರ್ವಕೃತಂ ಕರ್ಮ ಚ್ಛಾದಯಂತೇ ಹ್ಯಸಾಧವಃ| (ಭಾರತ ದರ್ಶನ).

Comments are closed.