ಶಾಂತಿ ಪರ್ವ: ಆಪದ್ಧರ್ಮ ಪರ್ವ
೧೪೩
ವ್ಯಾಧನ ವೈರಾಗ್ಯ (1-10).
12143001 ಭೀಷ್ಮ ಉವಾಚ|
12143001a ತತಸ್ತಂ ಲುಬ್ಧಕಃ ಪಶ್ಯನ್ ಕೃಪಯಾಭಿಪರಿಪ್ಲುತಃ|
12143001c ಕಪೋತಮಗ್ನೌ ಪತಿತಂ ವಾಕ್ಯಂ ಪುನರುವಾಚ ಹ||
ಭೀಷ್ಮನು ಹೇಳಿದನು: “ಕೃಪೆಯಿಂದ ವ್ಯಾಕುಲನಾದ ವ್ಯಾಧನು ಅಗ್ನಿಯಲ್ಲಿ ಬಿದ್ದ ಪಾರಿವಾಳವನ್ನು ನೋಡಿ ಪುನಃ ಈ ಮಾತನ್ನಾಡಿದನು:
12143002a ಕಿಮೀದೃಶಂ ನೃಶಂಸೇನ ಮಯಾ ಕೃತಮಬುದ್ಧಿನಾ|
12143002c ಭವಿಷ್ಯತಿ ಹಿ ಮೇ ನಿತ್ಯಂ ಪಾತಕಂ ಹೃದಿ ಜೀವತಃ[1]||
“ಅಯ್ಯೋ! ಕ್ರೂರಿಯೂ ಮೂಢನೂ ಆದ ನಾನು ಇದೇನು ಮಾಡಿಬಿಟ್ಟೆ! ಏಕೆಂದರೆ ನಿತ್ಯವೂ ಪಾಪವು ನನ್ನ ಹೃದಯದಲ್ಲಿ ಜೀವಿಸಿದೆ.
12143003a ಸ ವಿನಿಂದನ್ನಥಾತ್ಮಾನಂ ಪುನಃ ಪುನರುವಾಚ ಹ|
12143003c ಧಿಘ್ಮಾಮಸ್ತು[2] ಸುದುರ್ಬುದ್ಧಿಂ ಸದಾ ನಿಕೃತಿನಿಶ್ಚಯಮ್|
ಹೀಗೆ ಪುನಃ ಪುನಃ ತನ್ನನ್ನು ನಿಂದಿಸಿಕೊಳ್ಳುತ್ತಾ ಹೀಗೆ ಹೇಳಿದನು: “ಸದಾ ಮೋಸವನ್ನೇ ನಿಶ್ಚಯಿಸಿರುವ ನನ್ನಂಥಹ ಅತಿ ದುರ್ಬುದ್ಧಿಗೆ ಧಿಕ್ಕಾರ!
12143003e ಶುಭಂ ಕರ್ಮ ಪರಿತ್ಯಜ್ಯ ಯೋಽಹಂ ಶಕುನಿಲುಬ್ಧಕಃ||
12143004a ನೃಶಂಸಸ್ಯ ಮಮಾದ್ಯಾಯಂ ಪ್ರತ್ಯಾದೇಶೋ ನ ಸಂಶಯಃ|
12143004c ದತ್ತಃ ಸ್ವಮಾಂಸಂ ದದತಾ ಕಪೋತೇನ ಮಹಾತ್ಮನಾ||
ಶುಭಕರ್ಮವನ್ನು ಪರಿತ್ಯಜಿಸಿ ನಾನು ಪಕ್ಷಿಗಳನ್ನು ಹಿಡಿಯುವ ವ್ಯಾಧನಾದೆ. ಇಂದು ಕ್ರೂರನಾಗಿರುವ ನನಗೆ ತನ್ನ ಮಾಂಸವನ್ನಿತ್ತು ಮಹಾತ್ಮ ಪಾರಿವಾಳವು ಉಪದೇಶವನ್ನು ನೀಡಿದೆ ಎನ್ನುವುದರಲ್ಲಿ ಸಂಶಯವಿಲ್ಲ.
12143005a ಸೋಽಹಂ ತ್ಯಕ್ಷ್ಯೇ ಪ್ರಿಯಾನ್ ಪ್ರಾಣಾನ್ ಪುತ್ರದಾರಂ ವಿಸೃಜ್ಯ ಚ|
12143005c ಉಪದಿಷ್ಟೋ ಹಿ ಮೇ ಧರ್ಮಃ ಕಪೋತೇನಾತಿಧರ್ಮಿಣಾ||
ಈಗ ನಾನು ಪತ್ನೀ ಪುತ್ರರನ್ನು ಬಿಟ್ಟು ನನ್ನ ಪ್ರಾಣಗಳನ್ನೂ ತ್ಯಜಿಸುತ್ತೇನೆ. ಅತಿಧರ್ಮಿ ಪಾರಿವಾಳವು ನನಗೆ ಧರ್ಮವನ್ನು ಉಪದೇಶಿಸಿದೆ.
12143006a ಅದ್ಯ ಪ್ರಭೃತಿ ದೇಹಂ ಸ್ವಂ ಸರ್ವಭೋಗೈರ್ವಿವರ್ಜಿತಮ್|
12143006c ಯಥಾ ಸ್ವಲ್ಪಂ ಜಲಂ ಗ್ರೀಷ್ಮೇ ಶೋಷಯಿಷ್ಯಾಮ್ಯಹಂ ತಥಾ||
ಇಂದಿನಿಂದ ನಾನು ಸರ್ವಭೋಗಗಳನ್ನೂ ವರ್ಜಿಸಿ ನನ್ನ ದೇಹವನ್ನು ಗ್ರೀಷ್ಮಋತುವಿನಲ್ಲಿ ಸಣ್ಣ ಕೊಳದಲ್ಲಿ ಸ್ವಲ್ಪವೇ ನೀರಿರುವಂತೆ ಶೋಷಿಸುತ್ತೇನೆ.
12143007a ಕ್ಷುತ್ಪಿಪಾಸಾತಪಸಹಃ ಕೃಶೋ ಧಮನಿಸಂತತಃ|
12143007c ಉಪವಾಸೈರ್ಬಹುವಿಧೈಶ್ಚರಿಷ್ಯೇ ಪಾರಲೌಕಿಕಮ್||
ಹಸಿವು-ಬಾಯಾರಿಕೆ-ಬಿಸಿಲನ್ನು ಸಹಿಸಿಕೊಂಡು ನರಗಳು ಕಾಣಿಸಿಕೊಳ್ಳುವಷ್ಟು ಕೃಶನಾಗುತ್ತೇನೆ. ಪಾರಲೌಕಿಕ ಸುಖವನ್ನು ನೀಡುವ ಬಹುವಿಧದ ಉಪವಾಸಗಳನ್ನಾಚರಿಸುತ್ತೇನೆ.
12143008a ಅಹೋ ದೇಹಪ್ರದಾನೇನ ದರ್ಶಿತಾತಿಥಿಪೂಜನಾ|
12143008c ತಸ್ಮಾದ್ಧರ್ಮಂ ಚರಿಷ್ಯಾಮಿ ಧರ್ಮೋ ಹಿ ಪರಮಾ ಗತಿಃ|
12143008e ದೃಷ್ಟೋ ಹಿ ಧರ್ಮೋ ಧರ್ಮಿಷ್ಠೈರ್ಯಾದೃಶೋ ವಿಹಗೋತ್ತಮೇ||
ಆಹಾ! ಈ ಪಕ್ಷಿಯು ತನ್ನ ದೇಹವನ್ನಿತ್ತು ಅತಿಥಿಪೂಜನೆಯನ್ನು ತೋರಿಸಿಕೊಟ್ಟಿದೆ. ಆದುದರಿಂದ ನಾನೂ ಕೂಡ ಧರ್ಮದ ಆಚರಣೆಯನ್ನು ಮಾಡುತ್ತೇನೆ. ಏಕೆಂದರೆ ಧರ್ಮವೇ ಪರಮ ಗತಿಯು. ಆ ಧರ್ಮಿಷ್ಠ ಶ್ರೇಷ್ಠ ಪಕ್ಷಿಯು ಯಾವ ಧರ್ಮವನ್ನು ತೋರಿಸಿದೆಯೋ ಅದೇ ಧರ್ಮವನ್ನು ನಾನೂ ಕೂಡ ನಡೆಸುತ್ತೇನೆ.”
12143009a ಏವಮುಕ್ತ್ವಾ ವಿನಿಶ್ಚಿತ್ಯ ರೌದ್ರಕರ್ಮಾ ಸ ಲುಬ್ಧಕಃ|
12143009c ಮಹಾಪ್ರಸ್ಥಾನಮಾಶ್ರಿತ್ಯ ಪ್ರಯಯೌ ಸಂಶಿತವ್ರತಃ||
ಹೀಗೆ ಹೇಳಿ ಧರ್ಮಾಚರಣೆಯ ನಿಶ್ಚಯವನ್ನು ಮಾಡಿ ಆ ರೌದ್ರ ಕರ್ಮಿ ವ್ಯಾಧನು ಕಠೋರ ವ್ರತವನ್ನು ಆಶ್ರಯಿಸಿ ಮಹಾಪ್ರಸ್ಥಾನದ ಪಥದಲ್ಲಿ ಹೊರಟುಹೋದನು.
12143010a ತತೋ ಯಷ್ಟಿಂ ಶಲಾಕಾಶ್ಚ ಕ್ಷಾರಕಂ ಪಂಜರಂ ತಥಾ|
12143010c ತಾಂಶ್ಚ ಬದ್ಧಾ ಕಪೋತಾನ್ ಸ ಸಂಪ್ರಮುಚ್ಯೋತ್ಸಸರ್ಜ ಹ||
ಹೊರಡುವಾಗ ಅವನು ತನ್ನ ಪಂಜರದಲ್ಲಿ ಬಂಧಿಯಾಗಿದ್ದ ಪಾರಿವಾಳವನ್ನು ಮುಕ್ತಗೊಳಿಸಿ ತನ್ನ ಕೋಲು, ಈಟಿ, ಬಲೆ ಮತ್ತು ಪಂಚರಗಳನ್ನು ಅಲ್ಲಿಯೇ ಬಿಟ್ಟುಬಿಟ್ಟನು.”
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಆಪದ್ಧರ್ಮ ಪರ್ವಣಿ ಲುಬ್ಧಕೋಪರತೌ ತ್ರಿಸ್ಚತ್ವಾರಿಂಶದಧಿಕಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಆಪದ್ಧರ್ಮ ಪರ್ವದಲ್ಲಿ ಲುಬ್ಧಕೋಪರತಿ ಎನ್ನುವ ನೂರಾನಲ್ವತ್ಮೂರನೇ ಅಧ್ಯಾಯವು.
[1] ಕೃತಜೀವಿನಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್, ಗೋರಖಪುರ ಸಂಪುಟ).
[2] ಅವಿಶ್ವಾಸ್ಯಃ ಎಂಬ ಪಾಠಾಂತರವಿದೆ (ಗೀತಾ ಪ್ರೆಸ್).