ಶಾಂತಿ ಪರ್ವ: ಮೋಕ್ಷಧರ್ಮ ಪರ್ವ
೩೪೬
12346001 ಭೀಷ್ಮ ಉವಾಚ|
12346001a ಅಥ ತೇನ ನರಶ್ರೇಷ್ಠ ಬ್ರಾಹ್ಮಣೇನ ತಪಸ್ವಿನಾ|
12346001c ನಿರಾಹಾರೇಣ ವಸತಾ ದುಃಖಿತಾಸ್ತೇ ಭುಜಂಗಮಾಃ||
ಭೀಷ್ಮನು ಹೇಳಿದನು: “ನರಶ್ರೇಷ್ಠ! ಆಗ ಆ ತಪಸ್ವಿ ಬ್ರಾಹ್ಮಣನು ನಿರಾಹಾರನಾಗಿ ವಾಸಿಸುತ್ತಿರಲು ಭುಜಂಗಮರು ದುಃಖಿತರಾದರು.
12346002a ಸರ್ವೇ ಸಂಭೂಯ ಸಹಿತಾಸ್ತಸ್ಯ ನಾಗಸ್ಯ ಬಾಂಧವಾಃ|
12346002c ಭ್ರಾತರಸ್ತನಯಾ ಭಾರ್ಯಾ ಯಯುಸ್ತಂ ಬ್ರಾಹ್ಮಣಂ ಪ್ರತಿ||
ಆ ನಾಗನ ಬಾಂಧವರು, ಸಹೋದರರು, ಮಕ್ಕಳು, ಪತ್ನಿ ಎಲ್ಲರೂ ಒಟ್ಟಾಗಿ ಸೇರಿ ಆ ಬ್ರಾಹ್ಮಣನ ಬಳಿ ಹೋದರು.
12346003a ತೇಽಪಶ್ಯನ್ ಪುಲಿನೇ ತಂ ವೈ ವಿವಿಕ್ತೇ ನಿಯತವ್ರತಮ್|
12346003c ಸಮಾಸೀನಂ ನಿರಾಹಾರಂ ದ್ವಿಜಂ ಜಪ್ಯಪರಾಯಣಮ್||
12346004a ತೇ ಸರ್ವೇ ಸಮಭಿಕ್ರಮ್ಯ ವಿಪ್ರಮಭ್ಯರ್ಚ್ಯ ಚಾಸಕೃತ್|
12346004c ಊಚುರ್ವಾಕ್ಯಮಸಂದಿಗ್ಧಮಾತಿಥೇಯಸ್ಯ ಬಾಂಧವಾಃ||
ಆ ನಿರ್ಜನ ನದೀತೀರದಲ್ಲಿ ಇಂದ್ರಿಯಗಳನ್ನು ನಿಗ್ರಹಿಸಿಕೊಂಡು ನಿರಾಹಾರನಾಗಿ ಜಪಪರಾಯಣನಾಗಿದ್ದ ಆ ನಿಯತವ್ರತನನ್ನು ನೋಡಿ ಆ ಬಾಂಧವರೆಲ್ಲರೂ ವಿಪ್ರನ ಬಳಿಸಾರಿ ಅರ್ಚಿಸಿ ಆತಿಥ್ಯದ ಈ ಸಂದಿಗ್ಧ ಮಾತುಗಳನ್ನಾಡಿದರು:
12346005a ಷಷ್ಠೋ ಹಿ ದಿವಸಸ್ತೇಽದ್ಯ ಪ್ರಾಪ್ತಸ್ಯೇಹ ತಪೋಧನ|
12346005c ನ ಚಾಭಿಲಷಸೇ ಕಿಂ ಚಿದಾಹಾರಂ ಧರ್ಮವತ್ಸಲ||
“ತಪೋಧನ! ನೀನು ಇಲ್ಲಿಗೆ ಬಂದು ಆರು ದಿವಸಗಳಾದವು. ಅದರೆ ಧರ್ಮವತ್ಸಲ! ನೀನು ಸ್ವಲ್ಪವೂ ಆಹಾರವನ್ನು ಸೇವಿಸಲು ಬಯಸುತ್ತಿಲ್ಲ.
12346006a ಅಸ್ಮಾನಭಿಗತಶ್ಚಾಸಿ ವಯಂ ಚ ತ್ವಾಮುಪಸ್ಥಿತಾಃ|
12346006c ಕಾರ್ಯಂ ಚಾತಿಥ್ಯಮಸ್ಮಾಭಿರ್ವಯಂ ಸರ್ವೇ ಕುಟುಂಬಿನಃ||
ನೀನು ನಮ್ಮಲ್ಲಿಗೆ ಆಗಮಿಸಿದ್ದೀಯೆ ಮತ್ತು ನಾವು ಇಲ್ಲಿ ನಿನ್ನ ಸೇವೆಗಾಗಿ ಉಪಸ್ಥಿತರಾಗಿದ್ದೇವೆ. ಕುಟುಂಬಿಗಳಾಗಿರುವ ನಮ್ಮೆಲ್ಲರಿಗೂ ನಿನಗೆ ಆತಿಥ್ಯವನ್ನು ನೀಡುವುದು ಕರ್ತವ್ಯವೇ ಆಗಿದೆ.
12346007a ಮೂಲಂ ಫಲಂ ವಾ ಪರ್ಣಂ ವಾ ಪಯೋ ವಾ ದ್ವಿಜಸತ್ತಮ|
12346007c ಆಹಾರಹೇತೋರನ್ನಂ ವಾ ಭೋಕ್ತುಮರ್ಹಸಿ ಬ್ರಾಹ್ಮಣ||
ದ್ವಿಜಸತ್ತಮ! ಬ್ರಾಹ್ಮಣ! ಮೂಲ-ಫಲ ಅಥವಾ ಎಲೆಗಳು ಅಥವಾ ನೀರು, ಅಥವಾ ಇತರ ಅನ್ನವನ್ನು ನೀನು ಆಹಾರವನ್ನಾಗಿ ಸೇವಿಸಬೇಕು.
12346008a ತ್ಯಕ್ತಾಹಾರೇಣ ಭವತಾ ವನೇ ನಿವಸತಾ ಸತಾ|
12346008c ಬಾಲವೃದ್ಧಮಿದಂ ಸರ್ವಂ ಪೀಡ್ಯತೇ ಧರ್ಮಸಂಕಟಾತ್||
ನೀನು ಆಹಾರವನ್ನು ತ್ಯಜಿಸಿ ಈ ವನದಲ್ಲಿ ವಾಸಿಸುತ್ತಿರುವುದು ಬಾಲವೃದ್ಧರಾದ ನಮ್ಮೆಲ್ಲರನ್ನೂ ಧರ್ಮಸಂಕಟದಿಂದ ಪೀಡಿಸುತ್ತಿದೆ.
12346009a ನ ಹಿ ನೋ ಭ್ರೂಣಹಾ ಕಶ್ಚಿದ್ರಾಜಾಪಥ್ಯೋಽನೃತೋಽಪಿ ವಾ|
12346009c ಪೂರ್ವಾಶೀ ವಾ ಕುಲೇ ಹ್ಯಸ್ಮಿನ್ ದೇವತಾತಿಥಿಬಂಧುಷು||
ಈ ನಮ್ಮ ಕುಲದಲ್ಲಿ ಭ್ರೂಣಹತ್ಯೆಯನ್ನು ಮಾಡಿದವನು ಅಥವ ರಾಜನ ನಿಯಮವನ್ನು ಉಲ್ಲಂಘಿಸಿದವನು ಅಥವಾ ಸುಳ್ಳಾಡಿದವನು ಅಥವಾ ದೇವತೆಗಳಿಗೆ ನಿವೇದನೆ ಮಾಡುವ ಮೊದಲು ಮತ್ತು ಅತಿಥಿ-ಬಂಧುಗಳು ಊಟಮಾಡುವ ಮೊದಲು ಭೋಜನ ಮಾಡುವವರು ಯಾರೂ ಇಲ್ಲ.”
12346010 ಬ್ರಾಹ್ಮಣ ಉವಾಚ|
12346010a ಉಪದೇಶೇನ ಯುಷ್ಮಾಕಮಾಹಾರೋಽಯಂ ಮಯಾ ವೃತಃ|
12346010c ದ್ವಿರೂನಂ ದಶರಾತ್ರಂ ವೈ ನಾಗಸ್ಯಾಗಮನಂ ಪ್ರತಿ||
ಬ್ರಾಹ್ಮಣನು ಹೇಳಿದನು: “ನಿಮ್ಮ ಈ ಉಪದೇಶದಿಂದ ನಾನು ಆಹಾರವನ್ನು ಸೇವಿಸಿದಂತೆಯೇ ಆಯಿತು. ನಾಗನ ಆಗಮನಕ್ಕೆ ಇನ್ನು ಎಂಟು ರಾತ್ರಿಗಳು ಮಾತ್ರವೇ ಉಳಿದಿವೆ.
12346011a ಯದ್ಯಷ್ಟರಾತ್ರೇ ನಿರ್ಯಾತೇ ನಾಗಮಿಷ್ಯತಿ ಪನ್ನಗಃ|
12346011c ತದಾಹಾರಂ ಕರಿಷ್ಯಾಮಿ ತನ್ನಿಮಿತ್ತಮಿದಂ ವ್ರತಮ್||
ಒಂದುವೇಳೆ ಎಂಟನೇ ರಾತ್ರಿಯೂ ಪನ್ನಗ ನಾಗನು ಹಿಂದಿರುಗದೇ ಇದ್ದರೆ ಆಗ ನಾನು ಆಹಾರವನ್ನು ಸೇವಿಸುತ್ತೇನೆ. ಅವನಿಗಾಗಿಯೇ ನನ್ನ ಈ ವ್ರತವು.
12346012a ಕರ್ತವ್ಯೋ ನ ಚ ಸಂತಾಪೋ ಗಮ್ಯತಾಂ ಚ ಯಥಾಗತಮ್|
12346012c ತನ್ನಿಮಿತ್ತಂ ವ್ರತಂ ಮಹ್ಯಂ ನೈತದ್ ಭೇತ್ತುಮಿಹಾರ್ಹಥ||
ಸಂತಾಪ ಪಡಬೇಡಿ. ಎಲ್ಲಿಂದ ಬಂದಿರೋ ಅಲ್ಲಿಗೆ ಹೋಗಬೇಕು. ಅವನ ನಿಮಿತ್ತವಾಗಿಯೇ ನಡೆಸುತ್ತಿರುವ ಈ ವ್ರತವನ್ನು ನೀವು ಭಂಗಗೊಳಿಸಬಾರದು.””
12346013 ಭೀಷ್ಮ ಉವಾಚ|
12346013a ತೇನ ತೇ ಸಮನುಜ್ಞಾತಾ ಬ್ರಾಹ್ಮಣೇನ ಭುಜಂಗಮಾಃ|
12346013c ಸ್ವಮೇವ ಭವನಂ ಜಗ್ಮುರಕೃತಾರ್ಥಾ ನರರ್ಷಭ||
ಭೀಷ್ಮನು ಹೇಳಿದನು: “ನರರ್ಷಭ! ಹೀಗೆ ಆ ಬ್ರಾಹ್ಮಣನಿಂದ ಅನುಜ್ಞಾತರಾಗಿ ಭುಜಂಗಮರು ಅಸಫಲರಾಗಿಯೇ ತಮ್ಮ ಮನೆಗಳಿಗೆ ತೆರಳಿದರು.”
ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಉಂಚವೃತ್ಯುಪಾಖ್ಯಾನೇ ಷಟ್ಚತ್ವಾರಿಂಶಾಧಿಕತ್ರಿಶತತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಉಂಚವೃತ್ಯುಪಾಖ್ಯಾನ ಎನ್ನುವ ಮುನ್ನೂರಾನಲ್ವತ್ತಾರನೇ ಅಧ್ಯಾಯವು.