Shanti Parva: Chapter 344

ಶಾಂತಿ ಪರ್ವ: ಮೋಕ್ಷಧರ್ಮ ಪರ್ವ

೩೪೪

12344001 ಬ್ರಾಹ್ಮಣ ಉವಾಚ|

12344001a ಅತಿಭಾರೋದ್ಯತಸ್ಯೈವ ಭಾರಾಪನಯನಂ ಮಹತ್|

12344001c ಪರಾಶ್ವಾಸಕರಂ ವಾಕ್ಯಮಿದಂ ಮೇ ಭವತಃ ಶ್ರುತಮ್||

ಬ್ರಾಹ್ಮಣನು ಹೇಳಿದನು: “ಇದು ನನಗೊಂದು ಅತಿಭಾರವಾಗಿತ್ತು. ಇಂದು ನೀನು ಆ ಮಹಾ ಭಾರವನ್ನು ಹಗುರಗೊಳಿಸಿರುವೆ. ನಾನು ಕೇಳಿದ ಈ ಮಾತು ಇತರರನ್ನೂ ಸಂತೈಸಲು ಸಮರ್ಥವಾಗಿದೆ.

12344002a ಅಧ್ವಕ್ಲಾಂತಸ್ಯ ಶಯನಂ ಸ್ಥಾನಕ್ಲಾಂತಸ್ಯ ಚಾಸನಮ್|

12344002c ತೃಷಿತಸ್ಯ ಚ ಪಾನೀಯಂ ಕ್ಷುಧಾರ್ತಸ್ಯ ಚ ಭೋಜನಮ್||

12344003a ಈಪ್ಸಿತಸ್ಯೇವ ಸಂಪ್ರಾಪ್ತಿರನ್ನಸ್ಯ ಸಮಯೇಽತಿಥೇಃ|

12344003c ಏಷಿತಸ್ಯಾತ್ಮನಃ ಕಾಲೇ ವೃದ್ಧಸ್ಯೇವ ಸುತೋ ಯಥಾ||

12344004a ಮನಸಾ ಚಿಂತಿತಸ್ಯೇವ ಪ್ರೀತಿಸ್ನಿಗ್ಧಸ್ಯ ದರ್ಶನಮ್|

12344004c ಪ್ರಹ್ರಾದಯತಿ ಮಾಂ ವಾಕ್ಯಂ ಭವತಾ ಯದುದೀರಿತಮ್||

ನೀನು ಹೇಳಿದ ಈ ಮಾತು ಪ್ರಯಾಣಿಸಿ ಬಳಲಿದವನಿಗೆ ಶಯನವು ಹೇಗೋ, ನಿಂತು ಆಯಾಸಗೊಂಡಿರುವವನಿಗೆ ಆಸನವು ಹೇಗೋ, ಬಾಯಾರಿದವನಿಗೆ ನೀರು ಹೇಗೋ, ಹಸಿವೆಯಿಂದ ಬಳಲಿದವನಿಗೆ ಭೋಜನವು ಹೇಗೋ, ಅತಿಥಿಗೆ ಬಯಸಿದ ಸಮಯಕ್ಕೆ ಸರಿಯಾಗಿ ಭೋಜನವು ಹೇಗೋ, ತಾನು ಬಯಸಿದುದು ಕಾಲಕ್ಕೆ ಸರಿಯಾಗಿ ದೊರೆತರೆ ಹೇಗೋ, ವೃದ್ಧಾಪ್ಯದಲ್ಲಿ ಮಗನು ಹೇಗೋ, ಮತ್ತು ಮನಸ್ಸಿನಲ್ಲಿ ಯೋಚಿಸುತ್ತಿರುವಾಗಲೇ ಪ್ರೀತಿಯ ಸ್ನೇಹಿತನ ದರ್ಶನವು ಹೇಗೋ ಹಾಗೆ ನನ್ನ ಮನಸ್ಸಿಗೆ ಆನಂದವನ್ನುಂಟುಮಾಡಿದೆ.

12344005a ದತ್ತಚಕ್ಷುರಿವಾಕಾಶೇ ಪಶ್ಯಾಮಿ ವಿಮೃಶಾಮಿ ಚ|

12344005c ಪ್ರಜ್ಞಾನವಚನಾದ್ಯೋಽಯಮುಪದೇಶೋ ಹಿ ಮೇ ಕೃತಃ|

12344005e ಬಾಢಮೇವಂ ಕರಿಷ್ಯಾಮಿ ಯಥಾ ಮಾಂ ಭಾಷತೇ ಭವಾನ್||

ಈ ಪ್ರಜ್ಞಾನವಚನದಿಂದ ನನಗೆ ನೀನು ಏನು ಉಪದೇಶ ಮಾಡಿದ್ದೀಯೋ ಅದು ಕುರುಡನಾದವನಿಗೆ ಜ್ಞಾನದೃಷ್ಟಿಯನ್ನು ಕೊಟ್ಟಂತಾಗಿದೆ. ಸಾಧೋ! ಒಳ್ಳೆಯದು! ನೀನು ಹೇಳಿದಂತೆಯೇ ಮಾಡುತ್ತೇನೆ.

12344006a ಇಹೇಮಾಂ ರಜನೀಂ ಸಾಧೋ ನಿವಸಸ್ವ ಮಯಾ ಸಹ|

12344006c ಪ್ರಭಾತೇ ಯಾಸ್ಯತಿ ಭವಾನ್ ಪರ್ಯಾಶ್ವಸ್ತಃ ಸುಖೋಷಿತಃ|

12344006e ಅಸೌ ಹಿ ಭಗವಾನ್ ಸೂರ್ಯೋ ಮಂದರಶ್ಮಿರವಾಙ್ಮುಖಃ||

ಇಗೋ! ಭಗವಾನ್ ಸೂರ್ಯನು ಪಶ್ಚಿಮಾಭಿಮುಖನಾಗಿ ಮಂದರಶ್ಮಿಯಾಗಿದ್ದಾನೆ. ಈ ರಾತ್ರಿ ನೀನು ನನ್ನೊಡನೆಯೇ ತಂಗಿರು. ಸುಖವಾಗಿ ವಿಶ್ರಾಂತಿಯನ್ನು ಪಡೆದು ದಣಿವಾರಿಸಿಕೊಂಡು ಪ್ರಭಾತವಾಗುತ್ತಲೇ ಪ್ರಯಾಣಮಾಡು.””

12344007 ಭೀಷ್ಮ ಉವಾಚ|

12344007a ತತಸ್ತೇನ ಕೃತಾತಿಥ್ಯಃ ಸೋಽತಿಥಿಃ ಶತ್ರುಸೂದನ|

12344007c ಉವಾಸ ಕಿಲ ತಾಂ ರಾತ್ರಿಂ ಸಹ ತೇನ ದ್ವಿಜೇನ ವೈ||

ಭೀಷ್ಮನು ಹೇಳಿದನು: “ಶತ್ರುಸೂದನ! ಆಗ ಅವನು ಅವನಿಗೆ ಆತಿಥ್ಯವನ್ನು ಮಾಡಿದನು. ಅತಿಥಿಯಾದರೋ ಆ ರಾತ್ರಿ ದ್ವಿಜನೊಡನೆಯೇ ಉಳಿದುಕೊಂಡನು.

12344008a ತತ್ತಚ್ಚ ಧರ್ಮಸಂಯುಕ್ತಂ ತಯೋಃ ಕಥಯತೋಸ್ತದಾ|

12344008c ವ್ಯತೀತಾ ಸಾ ನಿಶಾ ಕೃತ್ಸ್ನಾ ಸುಖೇನ ದಿವಸೋಪಮಾ||

ಧರ್ಮಸಂಯುಕ್ತ ಮಾತುಗಳನ್ನು ಆಡುತಿದ್ದ ಅವರಿಬ್ಬರಿಗೂ ಇಡೀ ರಾತ್ರಿಯು ಹಗಲಿನಂತೆಯೇ ಸುಖವಾಗಿ ಕಳೆಯಿತು.

12344009a ತತಃ ಪ್ರಭಾತಸಮಯೇ ಸೋಽತಿಥಿಸ್ತೇನ ಪೂಜಿತಃ|

12344009c ಬ್ರಾಹ್ಮಣೇನ ಯಥಾಶಕ್ತ್ಯಾ ಸ್ವಕಾರ್ಯಮಭಿಕಾಂಕ್ಷತಾ||

ಪ್ರಭಾತಸಮಯದಲ್ಲಿ ತನ್ನ ಕಾರ್ಯಸಾಧನೆಯನ್ನೇ ಬಯಸಿದ ಬ್ರಾಹ್ಮಣನು ಯಥಾಶಕ್ತಿ ಅತಿಥಿಯನ್ನು ಪೂಜಿಸಿ ಕಳುಹಿಸಿಕೊಟ್ಟನು.

12344010a ತತಃ ಸ ವಿಪ್ರಃ ಕೃತಧರ್ಮನಿಶ್ಚಯಃ

ಕೃತಾಭ್ಯನುಜ್ಞಃ ಸ್ವಜನೇನ ಧರ್ಮವಿತ್|

12344010c ಯಥೋಪದಿಷ್ಟಂ ಭುಜಗೇಂದ್ರಸಂಶ್ರಯಂ

ಜಗಾಮ ಕಾಲೇ ಸುಕೃತೈಕನಿಶ್ಚಯಃ||

ಅನಂತರ ಆ ಧರ್ಮವಿದು ವಿಪ್ರನು ಧರ್ಮನಿಶ್ಚಯವನ್ನು ಮಾಡಿ ಸ್ವಜನರಿಂದ ಅನುಜ್ಞೆಯನ್ನು ಪಡೆದು ಉಪದೇಶಿಸಲ್ಪಟ್ಟಂತೆ, ಶುಭಸಂಕಲ್ಪವನ್ನು ಸಿದ್ಧಿಮಾಡಿಕೊಳ್ಳಬೇಕೆಂಬ ಏಕೈಕ ನಿಶ್ಚಯದಿಂದ, ಭುಜಗೇಂದ್ರನು ಇರುವಲ್ಲಿಗೆ ಹೋದನು.”

ಇತಿ ಶ್ರೀಮಹಾಭಾರತೇ ಶಾಂತಿ ಪರ್ವಣಿ ಮೋಕ್ಷಧರ್ಮ ಪರ್ವಣಿ ಉಂಚವೃತ್ಯುಪಾಖ್ಯಾನೇ ಚತುಶ್ಚತ್ವಾರಿಂಶಾಧಿಕತ್ರಿಶತತಮೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಶಾಂತಿ ಪರ್ವದಲ್ಲಿ ಮೋಕ್ಷಧರ್ಮ ಪರ್ವದಲ್ಲಿ ಉಂಚವೃತ್ಯುಪಾಖ್ಯಾನ ಎನ್ನುವ ಮುನ್ನೂರಾನಲ್ವತ್ನಾಲ್ಕನೇ ಅಧ್ಯಾಯವು.

Close-up of two pink gerbera flowers against white background Wall Mural • Pixers® • We live to change

Comments are closed.