ಆರುಣಿ ಪಾಂಚಾಲ
ಈ ಕಥೆಯನ್ನು ಸೂತ ಪುರಾಣಿಕ ಉಗ್ರಶ್ರವನು ನೈಮಿಷಾರಣ್ಯ ವಾಸೀ ಋಷಿಗಳಿಗೆ ಮಹಾಭಾರತ ಕಥೆಯ ಪ್ರಾರಂಭದಲ್ಲಿ ಹೇಳುತ್ತಾನೆ [ಆದಿ ಪರ್ವ, ಪೌಷ್ಯ ಪರ್ವ, ಅಧ್ಯಾಯ ೩, ಶ್ಲೋಕ ೧೯-೩೧]
01003019A ಏತಸ್ಮಿನ್ನಂತರೇ ಕಶ್ಚಿದೃಷಿರ್ಧೌಮ್ಯೋ ನಾಮಾಯೋದಃ|
01003019B ತಸ್ಯ ಶಿಷ್ಯಾಸ್ತ್ರಯೋ ಭೂವುರುಪಮನ್ಯುರಾರುಣಿರ್ವೇದಶ್ಚೇತಿ||
ಈ ಮದ್ಯದಲ್ಲಿ ಧೌಮ್ಯ ಎನ್ನುವ ಹೆಸರಿನ ಋಷಿಯೋರ್ವನು ಉಪಮನ್ಯು, ಆರುಣಿ ಮತ್ತು ವೇದ ಎಂಬ ಹೆಸರಿನ ಮೂವರು ಶಿಷ್ಯರೊಂದಿಗಿದ್ದನು.
01003020A ಸ ಏಕಂ ಶಿಷ್ಯಮಾರುಣಿಂ ಪಾಂಚಾಲ್ಯಂ ಪ್ರೇಷಯಾಮಾಸ|
01003020B ಗಚ್ಛ ಕೇದಾರಖಂಡಂ ಬಧಾನೇತಿ||
ಒಂದು ದಿನ ಅವನು ಶಿಷ್ಯ ಆರುಣಿ ಪಾಂಚಾಲನನ್ನು “ಹೋಗು. ಭತ್ತದ ಗದ್ದೆಗೆ ಒಡ್ಡನ್ನು ಕಟ್ಟು!” ಎಂದು ಕಳುಹಿಸಿದನು.
01003021A ಸ ಉಪಾಧ್ಯಾಯೇನ ಸಂದಿಷ್ಟ ಆರುಣಿಃ ಪಾಂಚಾಲ್ಯಸ್ತತ್ರ ಗತ್ವಾ ತತ್ಕೇದಾರಖಂಡಂ ಬದ್ಧುಂ ನಾಶಕ್ನೋತ್||
01003022A ಸ ಕ್ಲಿಶ್ಯಮಾನೋಽಪಶ್ಯದುಪಾಯಂ|
01003022B ಭವತ್ವೇವಂ ಕರಿಷ್ಯಾಮೀತಿ||
01003023A ಸ ತತ್ರ ಸಂವಿವೇಶ ಕೇದಾರಖಂಡೇ|
01003023B ಶಯಾನೇ ತಸ್ಮಿಂಸ್ತದುದಕಂ ತಸ್ಥೌ||
ಉಪಾಧ್ಯಾಯನಿಂದ ಈ ರೀತಿ ಆದೇಶಪಡೆದ ಪಾಂಚಾಲ ಆರುಣಿಯು ಅಲ್ಲಿಗೆ ಹೋದನು. ಆದರೆ ಭತ್ತದ ಗದ್ದೆಗೆ ಒಡ್ಡನ್ನು ಹಾಕಲು ಅವನಿಗೆ ಸಾದ್ಯವಾಗಲಿಲ್ಲ. “ಕಷ್ಟವಾಯಿತಲ್ಲ!” ಎಂದು ಯೋಚಿಸುತ್ತಿರುವಾಗ ಒಂದು ಉಪಾಯವನ್ನು ಕಂಡನು. “ಈ ರೀತಿ ಮಾಡುತ್ತೇನೆ” ಎಂದು ಅವನು ಭತ್ತದ ಗದ್ದೆಯಲ್ಲಿ ನೀರು ಹರಿಯುವಲ್ಲಿ ಅಡ್ಡಾಗಿ ಮಲಗಿಕೊಂಡನು.
01003024A ತತಃ ಕದಾಚಿದುಪಾಧ್ಯಾಯ ಆಯೋದೋ ಧೌಮ್ಯಃ ಶಿಷ್ಯಾನಪೃಚ್ಛತ್|
01003024B ಕ್ವ ಆರುಣಿಃ ಪಾಂಚಾಲ್ಯೋ ಗತ ಇತಿ||
ಸ್ವಲ್ಪ ಸಮಯದ ನಂತರ ಅಯೋದ ಧೌಮ್ಯನು ಶಿಷ್ಯರನ್ನು ಕೇಳಿದನು: “ಪಾಂಚಾಲ ಆರುಣಿಯು ಎಲ್ಲಿ ಹೋಗಿದ್ದಾನೆ?”
01003025A ತೇ ಪ್ರತ್ಯೂಚುಃ|
01003025B ಭಗವತೈವ ಪ್ರೇಷಿತೋ ಗಚ್ಛ ಕೇದಾರಖಂಡಂ ಬಧಾನೇತಿ||
ಅವರು ಉತ್ತರಿಸಿದರು: “ನೀವೇ ಕಳುಹಿಸಿದಂತೆ ಅವನು ಭತ್ತದ ಗದ್ದೆಗೆ ಒಡ್ಡನ್ನು ಕಟ್ಟಲು ಹೋಗಿದ್ದಾನೆ.”
01003026A ಸ ಏವಮುಕ್ತಸ್ತಾಂ ಶಿಷ್ಯಾನ್ ಪ್ರತ್ಯುವಾಚ|
01003026B ತಸ್ಮಾತ್ಸರ್ವೇ ತತ್ರ ಗಚ್ಛಾಮೋ ಯತ್ರ ಸ ಇತಿ||
01003027A ಸ ತತ್ರ ಗತ್ವಾ ತಸ್ಯಾಹ್ವಾನಾಯ ಶಬ್ದಂ ಚಕಾರ|
01003027B ಭೋ ಆರುಣೇ ಪಾಂಚಾಲ್ಯ ಕ್ವಾಸಿ|
01003027C ವತ್ಸೈಹೀತಿ||
ಶಿಷ್ಯರ ಈ ಮಾತಿಗೆ “ನಾವೆಲ್ಲರೂ ಅವನು ಇದ್ದಲ್ಲಿಗೆ ಹೋಗೋಣ” ಎಂದು ಹೇಳಿ ಅವನು ಅಲ್ಲಿಗೆ ಹೋಗಿ ಗಟ್ಟಿ ಧ್ವನಿಯಲ್ಲಿ ಕೂಗಿ ಕರೆದನು: “ಪಾಂಚಾಲ ಆರುಣ! ಎಲ್ಲಿದ್ದೀಯೆ? ವತ್ಸ! ಇಲ್ಲಿ ಬಾ.”
01003028A ಸ ತಚ್ಛ್ರುತ್ವಾ ಆರುಣಿರುಪಾಧ್ಯಾಯವಾಕ್ಯಂ ತಸ್ಮಾತ್ಕೇದಾರಖಂಡಾತ್ಸಹಸೋತ್ಥಾಯ ತಮುಪಾಧ್ಯಾಯಮುಪತಸ್ಥೇ|
01003028B ಪ್ರೋವಾಚ ಚೈನಂ|
01003028C ಅಯಮಸ್ಮ್ಯತ್ರ ಕೇದಾರಖಂಡೇ ನಿಃಸರಮಾಣಮುದಕಮವಾರಣೀಯಂ ಸಂರೋದ್ಧುಂ ಸಂವಿಷ್ಠೋ ಭಗವಚ್ಛಬ್ದಂ ಶ್ರುತ್ವೈವ ಸಹಸಾ ವಿದಾರ್ಯ ಕೇದಾರಖಂಡಂ ಭವಂತಮುಪಸ್ಥಿತಃ|
01003028D ತದಭಿವಾದಯೇ ಭಗವಂತಂ|
01003028E ಆಜ್ಞಾಪಯತು ಭವಾನ್|
01003028F ಕಿಂ ಕರವಾಣೀತಿ||
ಉಪಾದ್ಯಾಯನ ಮಾತುಗಳನ್ನು ಕೇಳಿ ಆರುಣಿಯು ಭತ್ತದ ಗದ್ದೆಯಿಂದ ಮೇಲೆ ಬಂದು ಉಪಾದ್ಯಾಯನ ಎದುರು ನಿಂತು ನಮಸ್ಕರಿಸಿ ಹೇಳಿದನು: “ನಾನು ನೀರು ಹರಿಯುವ ಕಾಲುವೆಯಲ್ಲಿದ್ದೆನು. ಬೇರೆ ಯಾವರೀತಿಯಿಂದಲೂ ನೀರನ್ನು ತಡೆಗಟ್ಟಲು ಅಸಮರ್ಥನಾಗಿ ನಾನೇ ಸ್ವತಃ ಕಾಲುವೆಯ ಅಡ್ಡ ಮಲಗಿಕೊಂಡು ನೀರು ಹರಿಯದಂತೆ ತಡೆಗಟ್ಟಿದೆ. ನಿಮ್ಮ ಧ್ವನಿಯನ್ನು ಕೇಳಿ ಎದ್ದು ನೀರುಹರಿಯಲು ಬಿಟ್ಟೆ. ಭಗವನ್! ನಿಮಗೆ ಅಭಿವಾದಿಸುತ್ತೇನೆ. ಆಜ್ಞೆಯನ್ನು ನೀಡಿ. ನಾನೀಗ ಏನು ಮಾಡಲಿ?”
01003029A ತಮುಪಾಧ್ಯಾಯೋಽಬ್ರವೀತ್|
01003029B ಯಸ್ಮಾದ್ಭವಾನ್ಕೇದಾರಖಂಡಮವದಾರ್ಯೋತ್ಥಿತಸ್ತಸ್ಮಾದ್ ಭವಾನುದ್ದಾಲಕ ಏವ ನಾಮ್ನಾ ಭವಿಷ್ಯತೀತಿ||
ಆಗ ಉಪಾದ್ಯಾಯನು ಹೇಳಿದನು: “ನೀನು ಭತ್ತದ ಗದ್ದೆಯ ಕಾಲುವೆಯಲ್ಲಿ ಅಡ್ಡ ಮಲಗಿ ನೀರು ಹರಿಯುವುದನ್ನು ನಿಲ್ಲಿಸಿದ್ದೀಯೆ. ಆದುದರಿಂದ ನಿನ್ನ ಹೆಸರು ಇನ್ನು ಮುಂದೆ ಉದ್ದಾಲಕ[1] ಎಂದಾಗಲಿ.”
01003030A ಸ ಉಪಾಧ್ಯಾಯೇನಾನುಗೃಹೀತಃ|
01003030B ಯಸ್ಮಾತ್ತ್ವಯಾ ಮದ್ವಚೋಽನುಷ್ಥಿತಂ ತಸ್ಮಾಚ್ಛ್ರೇಯೋಽವಾಪ್ಸ್ಯಸೀತಿ|
ಉಪಾದ್ಯಾಯನು ಅವನಿಗೆ ಈ ರೀತಿ ಅನುಗ್ರಹವಿತ್ತನು: “ನನ್ನ ವಚನವನ್ನು ಪರಿಪಾಲಿಸಿದುದಕ್ಕಾಗಿ ನಿನಗೆ ಶ್ರೇಯಸ್ಸು ದೊರೆಯುತ್ತದೆ. ಸರ್ವ ವೇದಗಳು ಮತ್ತು ಸರ್ವ ಧರ್ಮಶಾಸ್ತ್ರಗಳು ನಿನ್ನಲ್ಲಿ ಪ್ರತಿಭೆಗೊಳ್ಳುತ್ತವೆ.”
01003030C ಸರ್ವೇ ಚ ತೇ ವೇದಾಃ ಪ್ರತಿಭಾಸ್ಯಂತಿ ಸರ್ವಾಣಿ ಚ ಧರ್ಮಶಾಸ್ತ್ರಾಣೀತಿ||
01003031A ಸ ಏವಮುಕ್ತ ಉಪಾಧ್ಯಾಯೇನೇಷಂ ದೇಶಂ ಜಗಾಮ||
ಉಪಾದ್ಯಾಯನ ಈ ಮಾತುಗಳನ್ನು ಕೇಳಿ ಅವನು ತನಗೆ ಇಷ್ಟಬಂದ ದೇಶಕ್ಕೆ ಹೊರಟುಹೋದನು.
[1] ಪಾಂಚಾಲ ಆರುಣಿ ಉದ್ದಾಲಕನು ಮುಂದೆ ಮಹಾ ಜ್ಞಾನಿಯಾಗಿ ಬೃಹದಾರಣ್ಯಕ ಮತ್ತು ಛಾಂದೋಗ್ಯ ಉಪನಿಷತ್ತುಗಳಲ್ಲಿ ಅವನ ಚಿಂತನೆ-ಉಪದೇಶಗಳನ್ನು ನೀಡಿದನು. “ತತ್ವಮಸಿ” ಎನ್ನುವ ಸೂತ್ರವನ್ನು ಉದ್ದಾಲಕನು ನೀಡಿದನೆಂದು ಹೇಳುತ್ತಾರೆ. ಅವನ ಮಗ ಮತ್ತು ಶಿಷ್ಯನ ಹೆಸರು ಶ್ವೇತಕೇತು. ಅನೇಕ ಸಾಮುದಾಯಿಕ ಅನ್ನದಾನಗಳನ್ನು ನೆರವೇರಿಸಿದುದರಿಂದ ಇವನಿಗೆ ವಾಜಶ್ರವಸ ಎಂಬ ಹೆಸರೂ ಇತ್ತು. ಬಹಳ ಮುಂಗೋಪಿಯಾಗಿದ್ದ ಆ ವಾಜಶ್ರವಸನ ಮಗನೇ ನಚಿಕೇತ ಎಂದು ಕಠೋಪನಿಷತ್ತಿನಲ್ಲಿ ಬರುತ್ತದೆ.