ಮಹಾಭಾರತ ರಚನೆ
ನೈಮಿಷಾರಣ್ಯ ವಾಸೀ ಮುನಿಗಳಿಗೆ ಸೂತ ಪುರಾಣಿಕ ಉಗ್ರಶ್ರವನು ವರ್ಣಿಸಿದ ಮಹಾಭಾರತ ರಚನೆ [ಆದಿಪರ್ವ, ಅನುಕ್ರಮಣಿಕಾ ಪರ್ವ, ಶ್ಲೋಕ ೪೬-೬೪].
01001046a ಭೂತಸ್ಥಾನಾನಿ ಸರ್ವಾಣಿ ರಹಸ್ಯಂ ತ್ರಿವಿಧಂ ಚ ಯತ್ |
01001046c ವೇದಯೋಗಂ ಸವಿಜ್ಞಾನಂ ಧರ್ಮೋಽರ್ಥಃ ಕಾಮ ಏವ ಚ||
01001047a ಧರ್ಮಕಾಮಾರ್ಥಶಾಸ್ತ್ರಾಣಿ ಶಾಸ್ತ್ರಾಣಿ ವಿವಿಧಾನಿ ಚ |
01001047c ಲೋಕಯಾತ್ರಾವಿಧಾನಂ ಚ ಸಂಭೂತಂ ದೃಷ್ಟವಾನೃಷಿಃ ||
01001048a ಇತಿಹಾಸಾಃ ಸವೈಯಾಖ್ಯಾ ವಿವಿಧಾಃ ಶ್ರುತಯೋಽಪಿ ಚ |
01001048c ಇಹ ಸರ್ವಮನುಕ್ರಾಂತಮುಕ್ತಂ ಗ್ರಂಥಸ್ಯ ಲಕ್ಷಣಂ ||
01001049a ವಿಸ್ತೀರ್ಯೈತನ್ಮಹಜ್ಞಾನಂ ಋಷಿಃ ಸಂಕ್ಷೇಪಮಬ್ರವೀತ್ |
01001049c ಇಷ್ಟಂ ಹಿ ವಿದುಷಾಂ ಲೋಕೇ ಸಮಾಸವ್ಯಾಸಧಾರಣಂ ||
ಋಷಿಯು ತನ್ನ ದಿವ್ಯದೃಷ್ಠಿಯಿಂದ ಸರ್ವ ಭೂತಸ್ಥಾನಗಳನ್ನೂ ತ್ರಿವಿಧ ರಹಸ್ಯವನ್ನೂ, ವೇದ, ಯೋಗ, ಸವಿಜ್ಞಾನ, ಧರ್ಮ, ಅರ್ಥ, ಕಾಮ, ಧರ್ಮಕಾಮಾರ್ಥ ಶಾಸ್ತ್ರಗಳೇ ಮೊದಲಾದ ವಿವಿಧ ಶಾಸ್ತ್ರಗಳನ್ನೂ, ಮತ್ತು ಲೋಕಯಾತ್ರಾವಿಧಾನಗಳನ್ನೂ ಕಂಡಿದ್ದಾನೆ. ವ್ಯಾಖ್ಯಾಸಹಿತವಾದ ಎಲ್ಲ ಇತಿಹಾಸ ಮತ್ತು ಶೃತಿಗಳ ರಹಸ್ಯಗಳನ್ನೂ ವಿವರಿಸಿದ್ದಾನೆ. ಇದೇ ಈ ಗ್ರಂಥದ ವಿಶಿಷ್ಠ ಗುಣವೆಂದು ಹೇಳಲ್ಪಟ್ಟಿದೆ. ಋಷಿಯು ಮಹಾ ಜ್ಞಾನವನ್ನು ವಿವರವಾಗಿಯೂ ಮತ್ತು ಸಂಕ್ಷಿಪ್ತವಾಗಿಯೂ ನಿರೂಪಿಸಿದ್ದಾನೆ. ಯಾಕೆಂದರೆ ಲೋಕದಲ್ಲಿ ವಿದುಷರು ಸಮಾಸ ಮತ್ತು ವ್ಯಾಸ ಇವೆರಡನ್ನೂ ಇಷ್ಟಪಡುತ್ತಾರೆ.
01001050a ಮನ್ವಾದಿ ಭಾರತಂ ಕೇಚಿದಾಸ್ತೀಕಾದಿ ತಥಾಪರೇ |
01001050c ತಥೋಪರಿಚರಾದ್ಯನ್ಯೇ ವಿಪ್ರಾಃ ಸಮ್ಯಗಧೀಯತೇ ||
ಭಾರತವನ್ನು ಕೆಲವರು ಆದಿಪರ್ವದಿಂದ, ಇನ್ನು ಕೆಲವರು ಆಸ್ತೀಕಪರ್ವದಿಂದ, ಹಾಗೆಯೇ ಇನ್ನೂ ಕೆಲವರು ಉಪರಿಚರನ ಕಥೆಯಿಂದ ಪ್ರಾರಂಭಿಸುತ್ತಾರೆ. ವಿಪ್ರರು ಇದನ್ನು ಸಂಪೂರ್ಣವಾಗಿ ತಿಳಿಯುತ್ತಾರೆ.
01001051a ವಿವಿಧಂ ಸಂಹಿತಾಜ್ಞಾನಂ ದೀಪಯಂತಿ ಮನೀಷಿಣಃ |
01001051c ವ್ಯಾಖ್ಯಾತುಂ ಕುಶಲಾಃ ಕೇಚಿದ್ಗ್ರಂಥಂ ಧಾರಯಿತುಂ ಪರೇ ||
ಮಹಾಭಾರತವನ್ನು ವ್ಯಾಖ್ಯಾನಮಾಡುವುದರ ಮೂಲಕ ಕೆಲವರು ತಮ್ಮ ವಿವಿಧ ಸಂಹಿತ ಜ್ಞಾನವನ್ನು ಪ್ರಕಾಶಿಸುತ್ತಾರೆ. ಇನ್ನು ಕೆಲವರು ಇದನ್ನು ಕಂಠಪಾಠ ಮಾಡುವುದರ ಮೂಲಕ ತಮ್ಮ ಕುಶಲತೆಯನ್ನು ಪ್ರಕಾಶಿಸುತ್ತಾರೆ.
01001052a ತಪಸಾ ಬ್ರಹ್ಮಚರ್ಯೇಣ ವ್ಯಸ್ಯ ವೇದಂ ಸನಾತನಂ |
01001052c ಇತಿಹಾಸಮಿಮಂ ಚಕ್ರೇ ಪುಣ್ಯಂ ಸತ್ಯವತೀಸುತಃ ||
ಸನಾತನ ವೇದವನ್ನು ವಿವರಿಸುವ ಪುಣ್ಯಕರವಾದ ಈ ಇತಿಹಾಸವನ್ನು ಸತ್ಯವತೀಸುತನು ತನ್ನ ತಪಸ್ಸು ಮತ್ತು ಬ್ರಹ್ಮಚರ್ಯಗಳಿಂದ ರಚಿಸಿದನು.
01001053a ಪರಾಶರಾತ್ಮಜೋ ವಿದ್ವಾನ್ಬ್ರಹ್ಮರ್ಷಿಃ ಸಂಶಿತವ್ರತಃ |
[1]01001053c ಮಾತುರ್ನಿಯೋಗಾದ್ಧರ್ಮಾತ್ಮಾ ಗಾಂಗೇಯಸ್ಯ ಚ ಧೀಮತಃ||
01001054a ಕ್ಷೇತ್ರೇ ವಿಚಿತ್ರವೀರ್ಯಸ್ಯ ಕೃಷ್ಣದ್ವೈಪಾಯನಃ ಪುರಾ |
01001054c ತ್ರೀನಗ್ನೀನಿವ ಕೌರವ್ಯಾನ್ಜನಯಾಮಾಸ ವೀರ್ಯವಾನ್ ||
01001055a ಉತ್ಪಾದ್ಯ ಧೃತರಾಷ್ಟ್ರಂ ಚ ಪಾಂಡುಂ ವಿದುರಮೇವ ಚ |
01001055c ಜಗಾಮ ತಪಸೇ ಧೀಮಾನ್ಪುನರೇವಾಶ್ರಮಂ ಪ್ರತಿ ||
01001056a ತೇಷು ಜಾತೇಷು ವೃದ್ಧೇಷು ಗತೇಷು ಪರಮಾಂ ಗತಿಂ |
01001056c ಅಬ್ರವೀದ್ಭಾರತಂ ಲೋಕೇ ಮಾನುಷೇಽಸ್ಮಿನ್ಮಹಾನೃಷಿಃ||
01001057a ಜನಮೇಜಯೇನ ಪೃಷ್ಟಃ ಸನ್ಬ್ರಾಹ್ಮಣೈಶ್ಚ ಸಹಸ್ರಶಃ |
01001057c ಶಶಾಸ ಶಿಷ್ಯಮಾಸೀನಂ ವೈಶಂಪಾಯನಮಂತಿಕೇ ||
01001058a ಸ ಸದಸ್ಯೈಃ ಸಹಾಸೀನಃ ಶ್ರಾವಯಾಮಾಸ ಭಾರತಂ |
01001058c ಕರ್ಮಾಂತರೇಷು ಯಜ್ಞಸ್ಯ ಚೋದ್ಯಮಾನಃ ಪುನಃ ಪುನಃ ||
ಪರಾಶರಾತ್ಮಜ ವಿದ್ವಾನ್ ಬ್ರಹ್ಮರ್ಷಿ ಸಂಶಿತವ್ರತ ಧೀಮಂತ ಕೃಷ್ಣದ್ವೈಪಾಯನನು ತಾಯಿ ಮತ್ತು ಧರ್ಮಾತ್ಮ ಧೀಮಂತ ಗಾಂಗೇಯನ ಸೂಚನೆಯಂತೆ ವಿಚಿತ್ರವೀರ್ಯನ ಪತ್ನಿಯರಲ್ಲಿ ಮೂವರು ಅಗ್ನಿಸದೃಶರೂ ವೀರರೂ ಆದ ಧೃತರಾಷ್ಟ್ರ, ಪಾಂಡು ಮತ್ತು ವಿದುರರಿಗೆ ಜನ್ಮವನ್ನಿತ್ತು ತಪಸ್ಸಿಗೋಸ್ಕರ ಪುನಃ ತನ್ನ ಆಶ್ರಮಕ್ಕೆ ತೆರಳಿದನು. ತನ್ನ ಮಕ್ಕಳು ವೃದ್ಧರಾಗಿ ಪರಮ ಗತಿಯನ್ನು ಹೊಂದಿದ ಬಳಿಕ ಆ ಮಹಾನೃಷಿಯು ಭಾರತವನ್ನು ಮನುಷ್ಯಲೋಕಕ್ಕೆ ಹೇಳಿದನು. ಯಜ್ಞ ಕರ್ಮಾಂತರಗಳಲ್ಲಿ ಸೇರಿದ್ದ ಸಹಸ್ರಾರು ಬ್ರಾಹ್ಮಣರ ಜೊತೆ ಕುಳಿತಿದ್ದ ಜನಮೇಜಯನು ಪುನಃ ಪುನಃ ಕೇಳಿಕೊಂಡಾಗ ಅವನು ಸದಸ್ಯರೊಂದಿಗೆ ಕುಳಿತಿದ್ದ ಶಿಷ್ಯ ವೈಶಂಪಾಯನಿಗೆ ಭಾರತವನ್ನು ಹೇಳಲು ಅಪ್ಪಣೆಯನ್ನಿತ್ತನು.
01001059a ವಿಸ್ತರಂ ಕುರುವಂಶಸ್ಯ ಗಾಂಧಾರ್ಯಾ ಧರ್ಮಶೀಲತಾಂ |
01001059c ಕ್ಷತ್ತುಃ ಪ್ರಜ್ಞಾಂ ಧೃತಿಂ ಕುಂತ್ಯಾಃ ಸಮ್ಯಗ್ದ್ವೈಪಾಯನೋಽಬ್ರವೀತ್||
01001060a ವಾಸುದೇವಸ್ಯ ಮಾಹಾತ್ಮ್ಯಂ ಪಾಂಡವಾನಾಂ ಚ ಸತ್ಯತಾಂ|
01001060c ದುರ್ವೃತ್ತಂ ಧಾರ್ತರಾಷ್ಟ್ರಾಣಾಮುಕ್ತವಾನ್ ಭಗವಾನೃಷಿಃ||
[2]01001061a ಚತುರ್ವಿಂಶತಿಸಾಹಸ್ರೀಂ ಚಕ್ರೇ ಭಾರತಸಂಹಿತಾಂ |
01001061c ಉಪಾಖ್ಯಾನೈರ್ವಿನಾ ತಾವದ್ಭಾರತಂ ಪ್ರೋಚ್ಯತೇ ಬುಧೈಃ||
01001062a ತತೋಽಧ್ಯರ್ಧಶತಂ ಭೂಯಃ ಸಂಕ್ಷೇಪಂ ಕೃತವಾನೃಷಿಃ |
01001062c ಅನುಕ್ರಮಣಿಮಧ್ಯಾಯಂ ವೃತ್ತಾಂತಾನಾಂ ಸಪರ್ವಣಾಂ ||
ಇದರಲ್ಲಿ ಭಗವಾನ್ ಋಷಿ ದ್ವೈಪಾಯನನು ಕುರುವಂಶ ವಿಸ್ತಾರ, ಗಾಂಧಾರಿಯ ಧರ್ಮಶೀಲತೆ, ಕ್ಷತ್ತ[3]ನ ಪ್ರಜ್ಞೆ, ಕುಂತಿಯ ಧೃತಿ, ವಾಸುದೇವನ ಮಹಾತ್ಮೆ, ಪಾಂಡವರ ಸತ್ಯತೆ, ಮತ್ತು ಧಾರ್ತರಾಷ್ಟ್ರರ ದುರ್ವೃತ್ತಿ ಎಲ್ಲವನ್ನೂ ಹೇಳಿದ್ದಾನೆ. ಭಾರತ ಸಂಹಿತದಲ್ಲಿರುವ ಉಪಾಖ್ಯಾನಗಳನ್ನು ಬಿಟ್ಟು ಉಳಿದ ೨೪,೦೦೦ ಶ್ಲೋಕಗಳನ್ನು ಭಾರತವೆಂದು ತಿಳಿದವರು ಪರಿಗಣಿಸುತ್ತಾರೆ. ಕ್ರಮೇಣವಾಗಿ ಋಷಿಯು ಎಲ್ಲ ಪರ್ವಗಳನ್ನು ಸಂಕ್ಷೇಪವಾಗಿ ಪರಿಚಯಿಸುವ ೧೫೦ ಶ್ಲೋಕಗಳ ಅನುಕ್ರಮಣಿಕಾ ಅಧ್ಯಾಯವನ್ನು ಸೇರಿಸಿದನು.
01001063a ಇದಂ ದ್ವೈಪಾಯನಃ ಪೂರ್ವಂ ಪುತ್ರಮಧ್ಯಾಪಯಚ್ಛುಕಂ |
01001063c ತತೋಽನ್ಯೇಭ್ಯೋಽನುರೂಪೇಭ್ಯಃ ಶಿಷ್ಯೇಭ್ಯಃ ಪ್ರದದೌ ಪ್ರಭುಃ ||
[4]01001064a ನಾರದೋಽಶ್ರಾವಯದ್ದೇವಾನಸಿತೋ ದೇವಲಃ ಪಿತೄನ್ |
01001064c ಗಂಧರ್ವಯಕ್ಷರಕ್ಷಾಂಸಿ ಶ್ರಾವಯಾಮಾಸ ವೈ ಶುಕಃ ||
ಪ್ರಭು ದ್ವೈಪಾಯನನು ಪೂರ್ವದಲ್ಲಿ ಇದನ್ನು ಪುತ್ರ ಶುಕನಿಗೆ ಉಪದೇಶಿಸಿದನು ಮತ್ತು ನಂತರ ಇತರ ಅನುರೂಪ ಶಿಷ್ಯರಿಬ್ಬರಿಗೆ ಹೇಳಿಕೊಟ್ಟನು. ನಾರದನು ಇದನ್ನು ದೇವತೆಗಳಿಗೆ ಹೇಳಿದನು. ಅಸಿತ ದೇವಲನು ಪಿತೃಗಳಿಗೆ ಮತ್ತು ಶುಕನು ಗಂಧರ್ವ-ಯಕ್ಷ-ರಾಕ್ಷಸರಿಗೆ ಹೇಳಿದನು.
***
[1] ನೀಲಕಂಠೀಯದಲ್ಲಿ ಸಂಗ್ರಹಾಧ್ಯಾಯವೆನ್ನುವ ಮಹಾಭಾರತ ರಚನೆಗೊಂಡ ಕುರಿತಾದ ವರ್ಣನೆಯಿದೆ. ಇದು ಪುಣೆಯ ವಿಶೇಷ ಸಂಪುಟದಲ್ಲಿ ಸೇರಿಸಿಲ್ಲ. ಪರಿಶಿಷ್ಠದಲ್ಲಿ ಈ ೩೯ ಶ್ಲೋಕಗಳನ್ನು ನೀಡಲಾಗಿದೆ.
[2] ನೀಲಕಂಠೀಯದಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿದೆ: ಇದಂ ಶತಸಹಸ್ರಂ ತು ಲೋಕಾನಾಂ ಪುಣ್ಯಕರ್ಮಣಾಂ| ಉಪಾಖ್ಯಾನೈಃ ಸಹ ಜ್ಞೇಯಮಾದ್ಯಂ ಭಾರತಮುತ್ತಮಂ|| ಅರ್ಥಾತ್: ಲೋಕದ ಪುಣ್ಯಶಾಲಿಗಳ ಉಪಾಖ್ಯಾನಗಳಿಂದ ಕೂಡಿರುವ ಈ ಆದ್ಯಭಾರತವು ಒಂದು ಲಕ್ಷ ಶ್ಲೋಕಗಳಿಂದ ಕೂಡಿರುವುದೆಂದು ತಿಳಿಯಬೇಕು.
[3] ವಿದುರ
[4] ನೀಲಕಂಠೀಯದಲ್ಲಿ ಇದಕ್ಕೆ ಮೊದಲು ಈ ಶ್ಲೋಕವಿದೆ: ಷಷ್ಠಿಂ ಶತ ಸಹಸ್ರಾಣಿ ಚಕಾರಾನ್ಯಾಂ ಸ ಸಂಹಿತಾಂ| ತ್ರಿಂಶಚ್ಛತಸಹಸ್ರಂ ಚ ದೇವಲೋಕೇ ಪ್ರತಿಷ್ಠಿತಂ|| ಪಿತ್ರ್ಯೇ ಪಂಚದಶ ಪ್ರೋಕ್ತಂ ಗಂಧರ್ವೇಷು ಚದುರ್ದಶ| ಏಕಂ ಶತಸಹಸ್ರಂ ತು ಮಾನುಷೇಶು ಪ್ರತಿಷ್ಠಿತಂ|| ಅರ್ಥಾತ್: ಅನಂತರ ಅವನು ೬೦ ಲಕ್ಷ ಶ್ಲೋಕಗಳುಳ್ಳ ಮತ್ತೊಂದು ಮಹಾಗ್ರಂಥವನ್ನು ರಚಿಸಿದನು. ಅದರಲ್ಲಿಯ ೩೦ ಲಕ್ಷ ಶ್ಲೋಕಗಳು ದೇವಲೋಕದಲ್ಲಿಯೂ, ೧೫ ಲಕ್ಷ ಶ್ಲೋಕಗಳು ಪಿತೃಲೋಕದಲ್ಲಿಯೂ, ೧೪ ಲಕ್ಷ ಶ್ಲೋಕಗಳು ಗಂಧರ್ವಲೋಕದಲ್ಲಿಯೂ, ಉಳಿದ ೧ ಲಕ್ಷ ಶ್ಲೋಕಗಳು ಮನುಷ್ಯಲೋಕದಲ್ಲಿಯೂ ಪ್ರಚಾರದಲ್ಲಿವೆ.