ಶಾಂತಿ ಪರ್ವ: ರಾಜಧರ್ಮ ಪರ್ವ
೭೩
ಪುರೂರವ-ಪವನ ಸಂವಾದದ ಮೂಲಕ ಭೀಷ್ಮನು ಯುಧಿಷ್ಠಿರನಿಗೆ ರಾಜಪುರೋಹಿತನ ಮಹತ್ವವನ್ನು ವಿವರಿಸಿದುದು (೧-೨೬).
12073001 ಭೀಷ್ಮ ಉವಾಚ|
12073001a ಯ ಏವ ತು ಸತೋ ರಕ್ಷೇದಸತಶ್ಚ ನಿಬರ್ಹಯೇತ್|
12073001c ಸ ಏವ ರಾಜ್ಞಾ ಕರ್ತವ್ಯೋ ರಾಜನ್ರಾಜಪುರೋಹಿತಃ||
ಭೀಷ್ಮನು ಹೇಳಿದನು: “ರಾಜನ್! ರಾಜನ ಸತ್ಕರ್ಮಗಳನ್ನು ರಕ್ಷಿಸುವುದು ಮತ್ತು ಅವನ ದುಷ್ಕರ್ಮಗಳನ್ನು ಕ್ಷೀಣಿಸುವುದೇ ರಾಜಪುರೋಹಿತನ ಕರ್ತವ್ಯ.
12073002a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಮ್|
12073002c ಪುರೂರವಸ ಐಲಸ್ಯ ಸಂವಾದಂ ಮಾತರಿಶ್ವನಃ||
ಇದಕ್ಕೆ ಸಂಬಂಧಿಸಿದಂತೆ ಪುರಾತನ ಇತಿಹಾಸವಾಗಿರುವ ಇಲನ ಮಗ ಪುರೂರವ ಮತ್ತು ವಾಯುವಿನ ನಡುವೆ ನಡೆದ ಸಂವಾದವನ್ನು ಉದಾಹರಿಸುತ್ತಾರೆ.
12073003 ಐಲ ಉವಾಚ|
12073003a ಕುತಃ ಸ್ವಿದ್ಬ್ರಾಹ್ಮಣೋ ಜಾತೋ ವರ್ಣಾಶ್ಚಾಪಿ ಕುತಸ್ತ್ರಯಃ|
12073003c ಕಸ್ಮಾಚ್ಚ ಭವತಿ ಶ್ರೇಯಾನೇತದ್ವಾಯೋ ವಿಚಕ್ಷ್ವ ಮೇ||
ಐಲನು ಹೇಳಿದನು: “ಬ್ರಾಹ್ಮಣರು ಎಲ್ಲಿಂದ ಹುಟ್ಟಿದರು? ಉಳಿದ ಮೂರು ವರ್ಣದವರೂ ಎಲ್ಲಿಂದ ಹುಟ್ಟಿದವು? ಯಾವ ಕಾರಣದಿಂದ ಬ್ರಾಹ್ಮಣನು ಉಳಿದ ಮೂರು ವರ್ಣದವರಿಗಿಂತಲೂ ಶ್ರೇಷ್ಠನೆನಿಸಿಕೊಂಡಿದ್ದಾನೆ? ಅದನ್ನು ನನಗೆ ಸ್ಪಷ್ಟೀಕರಿಸು.”
12073004 ವಾಯುರುವಾಚ
12073004a ಬ್ರಹ್ಮಣೋ ಮುಖತಃ ಸೃಷ್ಟೋ ಬ್ರಾಹ್ಮಣೋ ರಾಜಸತ್ತಮ|
12073004c ಬಾಹುಭ್ಯಾಂ ಕ್ಷತ್ರಿಯಃ ಸೃಷ್ಟ ಊರುಭ್ಯಾಂ ವೈಶ್ಯ ಉಚ್ಯತೇ||
ವಾಯುವು ಹೇಳಿದನು: “ರಾಜಸತ್ತಮ! ಬ್ರಾಹ್ಮಣನು ಬ್ರಹ್ಮನ ಮುಖದಿಂದ ಹುಟ್ಟಿದನು. ಅವನ ಎರಡು ಬಾಹುಗಳಿಂದ ಕ್ಷತ್ರಿಯನು ಹುಟ್ಟಿದನು ಮತ್ತು ತೊಡೆಗಳಿಂದ ವೈಶ್ಯನು ಹುಟ್ಟಿದನು ಎಂದು ಹೇಳುತ್ತಾರೆ.
12073005a ವರ್ಣಾನಾಂ ಪರಿಚರ್ಯಾರ್ಥಂ ತ್ರಯಾಣಾಂ ಪುರುಷರ್ಷಭ|
12073005c ವರ್ಣಶ್ಚತುರ್ಥಃ ಪಶ್ಚಾತ್ತು ಪದ್ಭ್ಯಾಂ ಶೂದ್ರೋ ವಿನಿರ್ಮಿತಃ||
ಪುರುಷರ್ಷಭ! ಈ ಮೂರುವರ್ಣಗಳದವರ ಪರಿಚರ್ಯೆಗಾಗಿ ನಾಲ್ಕನೆಯದಾದ ಶೂದ್ರವರ್ಣವು ಬ್ರಹ್ಮನ ಪಾದಗಳಿಂದ ನಿರ್ಮಿತವಾಯಿತು.
12073006a ಬ್ರಾಹ್ಮಣೋ ಜಾತಮಾತ್ರಸ್ತು ಪೃಥಿವೀಮನ್ವಜಾಯತ|
12073006c ಈಶ್ವರಃ ಸರ್ವಭೂತಾನಾಂ ಧರ್ಮಕೋಶಸ್ಯ ಗುಪ್ತಯೇ||
ಹುಟ್ಟಿದ ಕೂಡಲೇ ಬ್ರಾಹ್ಮಣನು ಧರ್ಮಕೋಶವನ್ನು ರಕ್ಷಿಸಲೋಸುಗ ಸರ್ವಭೂತಗಳ ಈಶ್ವರನಾಗಿ ಪೃಥ್ವಿಯನ್ನು ಆಳತೊಡಗಿದನು.
12073007a ತತಃ ಪೃಥಿವ್ಯಾ ಗೋಪ್ತಾರಂ ಕ್ಷತ್ರಿಯಂ ದಂಡಧಾರಿಣಮ್|
12073007c ದ್ವಿತೀಯಂ ವರ್ಣಮಕರೋತ್ಪ್ರಜಾನಾಮನುಗುಪ್ತಯೇ||
ಪೃಥ್ವಿಯನ್ನು ರಕ್ಷಿಸಲು ಮತ್ತು ಪ್ರಜೆಗಳನ್ನು ರಕ್ಷಿಸಲು ಎರಡನೆಯ ವರ್ಣವಾದ ದಂಡಧಾರೀ ಕ್ಷತ್ರಿಯನ ಉತ್ಪನ್ನವಾಯಿತು.
12073008a ವೈಶ್ಯಸ್ತು ಧನಧಾನ್ಯೇನ ತ್ರೀನ್ವರ್ಣಾನ್ಬಿಭೃಯಾದಿಮಾನ್|
12073008c ಶೂದ್ರೋ ಹ್ಯೇನಾನ್ಪರಿಚರೇದಿತಿ ಬ್ರಹ್ಮಾನುಶಾಸನಮ್||
ವೈಶ್ಯನು ಧನ-ಧಾನ್ಯಗಳಿಂದ ಉಳಿದ ಮೂರೂ ವರ್ಣದವರ ಪೋಷಣೆಯನ್ನು ಮಾಡಬೇಕೆಂದೂ ಶೂದ್ರನು ಇವರ ಸೇವೆಯಲ್ಲಿ ತೊಡಗಿರಬೇಕೆಂದೂ ಬ್ರಹ್ಮನ ಅನುಶಾಸನವಿದೆ.”
12073009 ಐಲ ಉವಾಚ
12073009a ದ್ವಿಜಸ್ಯ ಕ್ಷತ್ರಬಂಧೋರ್ವಾ ಕಸ್ಯೇಯಂ ಪೃಥಿವೀ ಭವೇತ್|
12073009c ಧರ್ಮತಃ ಸಹ ವಿತ್ತೇನ ಸಮ್ಯಗ್ವಾಯೋ ಪ್ರಚಕ್ಷ್ವ ಮೇ||
ಐಲನು ಹೇಳಿದನು: “ವಾಯೋ! ವಿತ್ತದಿಂದ ಕೂಡಿರುವ ಈ ಪೃಥ್ವಿಯು ಧರ್ಮದ ಪ್ರಕಾರ ಯಾರದ್ದಾಗುತ್ತದೆ? ಬ್ರಾಹ್ಮಣನದ್ದೋ ಅಥವಾ ಕ್ಷತ್ರಬಂದುವಿನದೋ? ಅದನ್ನು ನನಗೆ ಬಿಡಿಸಿ ಹೇಳು.”
12073010 ವಾಯುರುವಾಚ
12073010a ವಿಪ್ರಸ್ಯ ಸರ್ವಮೇವೈತದ್ಯತ್ಕಿಂ ಚಿಜ್ಜಗತೀಗತಮ್|
12073010c ಜ್ಯೇಷ್ಠೇನಾಭಿಜನೇನೇಹ ತದ್ಧರ್ಮಕುಶಲಾ ವಿದುಃ||
ವಾಯುವು ಹೇಳಿದನು: “ಜ್ಯೇಷ್ಠನಾಗಿ ಬ್ರಹ್ಮನ ಮುಖದಿಂದ ಹುಟ್ಟಿದುದರಿಂದ ಏನೆಲ್ಲ ಈ ಜಗತ್ತಿದೆಯೋ ಅವೆಲ್ಲವೂ ಬ್ರಾಹ್ಮಣನದ್ದು ಎಂದು ಧರ್ಮಕುಶಲರು ತಿಳಿದಿರುತ್ತಾರೆ.
12073011a ಸ್ವಮೇವ ಬ್ರಾಹ್ಮಣೋ ಭುಂಕ್ತೇ ಸ್ವಂ ವಸ್ತೇ ಸ್ವಂ ದದಾತಿ ಚ|
12073011c ಗುರುರ್ಹಿ ಸರ್ವವರ್ಣಾನಾಂ ಜ್ಯೇಷ್ಠಃ ಶ್ರೇಷ್ಠಶ್ಚ ವೈ ದ್ವಿಜಃ||
ಬ್ರಾಹ್ಮಣನು ಊಟಮಾಡುವುದು ಅವನದ್ದೇ. ಯಾವುದನ್ನು ಹೊದೆದುಕೊಳ್ಳುತ್ತಾನೋ ಅದು ಅವನದ್ದೇ. ಯಾವುದನ್ನು ಅವನು ಕೊಡುತ್ತಾನೋ ಅದೂ ಅವನದೇ ಆಗಿರುತ್ತದೆ. ಸರ್ವವರ್ಣದವರಿಗೆ ಬ್ರಾಹ್ಮಣನೇ ಗುರು, ಜ್ಯೇಷ್ಠ ಮತ್ತು ಶ್ರೇಷ್ಠ.
12073012a ಪತ್ಯಭಾವೇ ಯಥಾ ಸ್ತ್ರೀ ಹಿ ದೇವರಂ ಕುರುತೇ ಪತಿಮ್|
12073012c ಆನಂತರ್ಯಾತ್ತಥಾ ಕ್ಷತ್ರಂ ಪೃಥಿವೀ ಕುರುತೇ ಪತಿಮ್||
ಪತಿಯು ಇಲ್ಲದಿರುವಾಗ ಸ್ತ್ರೀಯು ಹೇಗೆ ಮೈದುನನನ್ನು ಪತಿಯನ್ನಾಗಿ ಮಾಡಿಕೊಳ್ಳುತ್ತಾಳೋ ಹಾಗೆ ಬ್ರಾಹ್ಮಣರು ಬಿಟ್ಟನಂತರ ಭೂಮಿಯು ಕ್ಷತ್ರಿಯನನ್ನೇ ಪತಿಯನ್ನಾಗಿಸಿಕೊಂಡಳು.
12073013a ಏಷ ತೇ ಪ್ರಥಮಃ ಕಲ್ಪ ಆಪದ್ಯನ್ಯೋ ಭವೇದತಃ|
12073013c ಯದಿ ಸ್ವರ್ಗೇ ಪರಂ ಸ್ಥಾನಂ ಧರ್ಮತಃ ಪರಿಮಾರ್ಗಸಿ||
12073014a ಯಃ ಕಶ್ಚಿದ್ವಿಜಯೇದ್ಭೂಮಿಂ ಬ್ರಾಹ್ಮಣಾಯ ನಿವೇದಯೇತ್|
12073014c ಶ್ರುತವೃತ್ತೋಪಪನ್ನಾಯ ಧರ್ಮಜ್ಞಾಯ ತಪಸ್ವಿನೇ||
12073015a ಸ್ವಧರ್ಮಪರಿತೃಪ್ತಾಯ ಯೋ ನ ವಿತ್ತಪರೋ ಭವೇತ್|
ಇದು ಪ್ರಥಮ ಕಲ್ಪ. ಆಪತ್ಕಾಲಗಳಲ್ಲಿ ಬೇರೆಯದೇ ಆಗಬಹುದು. ಒಂದು ವೇಳೆ ನೀನು ಧರ್ಮತಃ ಸ್ವರ್ಗದ ಪರಮಸ್ಥಾನವನ್ನು ಬಯಸುವೆಯಾದರೆ ನೀನು ಜಯಿಸಿರುವ ಎಷ್ಟು ಭೂಮಿಯಿದೆಯೋ ಅಷ್ಟನ್ನೂ ಓರ್ವ ವಿದ್ವಾಂಸ, ಸ್ವವೃತ್ತಿಯಲ್ಲಿರುವ, ಸ್ವಧರ್ಮದಲ್ಲಿ ಪರಿತೃಪ್ತನಾಗಿರುವ, ವಿತ್ತವನ್ನು ಬಯಸಿರದ ಧರ್ಮಜ್ಞ, ತಪಸ್ವೀ ಬ್ರಾಹ್ಮಣನಿಗೆ ನಿವೇದಿಸು.
12073015c ಯೋ ರಾಜಾನಂ ನಯೇದ್ಬುದ್ಧ್ಯಾ ಸರ್ವತಃ ಪರಿಪೂರ್ಣಯಾ||
12073016a ಬ್ರಾಹ್ಮಣೋ ಹಿ ಕುಲೇ ಜಾತಃ ಕೃತಪ್ರಜ್ಞೋ ವಿನೀತವಾಕ್|
12073016c ಶ್ರೇಯೋ ನಯತಿ ರಾಜಾನಂ ಬ್ರುವಂಶ್ಚಿತ್ರಾಂ ಸರಸ್ವತೀಮ್||
12073017a ರಾಜಾ ಚರತಿ ಯಂ ಧರ್ಮಂ ಬ್ರಾಹ್ಮಣೇನ ನಿದರ್ಶಿತಮ್|
ಸತ್ಕುಲಪ್ರಸೂತ, ಕೃತಪ್ರಜ್ಞ, ವಿನೀತವಾದೀ ಬ್ರಾಹ್ಮಣನು ತನ್ನ ಸರ್ವ ಪರಿಪೂರ್ಣ ಬುದ್ಧಿಯಿಂದ ರಾಜನನ್ನು ಸನ್ಮಾರ್ಗಪ್ರವೃತ್ತನನ್ನಾಗಿ ಮಾಡುತ್ತಾನೆ. ಚಿತ್ರತರ ಮಾತುಗಳ ಮೂಲಕ ರಾಜನಿಗೆ ಬುದ್ಧಿಹೇಳುತ್ತಾ ಅವನು ರಾಜನಿಗೆ ಶ್ರೇಯಸ್ಸನ್ನು ತರುತ್ತಾನೆ. ಬ್ರಾಹ್ಮಣನು ನಿದರ್ಶಿಸಿದ ಧರ್ಮದಲ್ಲಿ ರಾಜನು ನಡೆಯುತ್ತಾನೆ.
12073017c ಶುಶ್ರೂಷುರನಹಂವಾದೀ ಕ್ಷತ್ರಧರ್ಮವ್ರತೇ ಸ್ಥಿತಃ||
12073018a ತಾವತಾ ಸ ಕೃತಪ್ರಜ್ಞಶ್ಚಿರಂ ಯಶಸಿ ತಿಷ್ಠತಿ|
12073018c ತಸ್ಯ ಧರ್ಮಸ್ಯ ಸರ್ವಸ್ಯ ಭಾಗೀ ರಾಜಪುರೋಹಿತಃ||
ಹೇಳಿದ್ದನ್ನು ಕೇಳುವ, ಅಹಂಕಾರವಾದಿಯಲ್ಲದ ಮತ್ತು ಕ್ಷತ್ರಧರ್ಮದಲ್ಲಿ ಸ್ಥಿತನಾಗಿರುವವನು ಅವರಿಂದ ಕೃತಪ್ರಜ್ಞನಾಗಿ ಬಹುಕಾಲ ಯಶೋವಂತನಾಗಿರುತ್ತಾನೆ. ಅವನ ಸರ್ವ ಧರ್ಮದಳಲ್ಲಿ ರಾಜಪುರೋಹಿತನು ಭಾಗಿಯಾಗುತ್ತಾನೆ.
12073019a ಏವಮೇವ ಪ್ರಜಾಃ ಸರ್ವಾ ರಾಜಾನಮಭಿಸಂಶ್ರಿತಾಃ|
12073019c ಸಮ್ಯಗ್ವೃತ್ತಾಃ ಸ್ವಧರ್ಮಸ್ಥಾ ನ ಕುತಶ್ಚಿದ್ಭಯಾನ್ವಿತಾಃ||
ಹೀಗೆಯ ರಾಜನನ್ನು ಅವಲಂಬಿಸಿರುವ ಸರ್ವ ಪ್ರಜೆಗಳೂ ಸನ್ಮಾರ್ಗದಲ್ಲಿ ನಡೆದುಕೊಂಡು, ಸ್ವಧರ್ಮಗಳಲ್ಲಿಯೇ ಇದ್ದುಕೊಂಡು ಯಾವುದೇ ಭಯವಿಲ್ಲದೇ ಇರುತ್ತಾರೆ.
12073020a ರಾಷ್ಟ್ರೇ ಚರಂತಿ ಯಂ ಧರ್ಮಂ ರಾಜ್ಞಾ ಸಾಧ್ವಭಿರಕ್ಷಿತಾಃ|
12073020c ಚತುರ್ಥಂ ತಸ್ಯ ಧರ್ಮಸ್ಯ ರಾಜಾ ಭಾಗಂ ಸ ವಿಂದತಿ||
ರಾಜನಿಂದ ರಕ್ಷಿತರಾದ ಸಾಧುಜನರು ಯಾವ ಧರ್ಮವನ್ನು ಆಚರಿಸುತ್ತಾರೋ ಆ ಧರ್ಮದ ನಾಲ್ಕನೇ ಒಂದು ಭಾಗವು ರಾಜನಿಗೆ ಸೇರುತ್ತದೆ.
12073021a ದೇವಾ ಮನುಷ್ಯಾಃ ಪಿತರೋ ಗಂಧರ್ವೋರಗರಾಕ್ಷಸಾಃ|
12073021c ಯಜ್ಞಮೇವೋಪಜೀವಂತಿ ನಾಸ್ತಿ ಚೇಷ್ಟಮರಾಜಕೇ||
ದೇವತೆಗಳು, ಮನುಷ್ಯರು, ಪಿತೃಗಳು ಮತ್ತು ಗಂಧರ್ವ-ಉರಗ-ರಾಕ್ಷಸರು ಯಜ್ಞವನ್ನೇ ಅವಲಂಬಿಸಿ ಜೀವಿಸುವವು. ರಾಜನಿಲ್ಲದ ರಾಷ್ಟ್ರದಲ್ಲಿ ಇವುಗಳು ನಡೆಯುವುದೆಂತು?
12073022a ಇತೋ ದತ್ತೇನ ಜೀವಂತಿ ದೇವತಾಃ ಪಿತರಸ್ತಥಾ|
12073022c ರಾಜನ್ಯೇವಾಸ್ಯ ಧರ್ಮಸ್ಯ ಯೋಗಕ್ಷೇಮಃ ಪ್ರತಿಷ್ಠಿತಃ||
ಇಲ್ಲಿ ಮಾಡುವ ದಾನಗಳನ್ನು ಅವಲಂಬಿಸಿಯೇ ದೇವತೆಗಳು ಮತ್ತು ಪಿತೃಗಳು ಜೀವಿಸುತ್ತಾರೆ. ಈ ಯೋಗ-ಕ್ಷೇಮಗಳು ಧರ್ಮಿಷ್ಠ ರಾಜನಲ್ಲಿಯೇ ಪ್ರತಿಷ್ಠಿತವಾಗಿವೆ.
12073023a ಚಾಯಾಯಾಮಪ್ಸು ವಾಯೌ ಚ ಸುಖಮುಷ್ಣೇಽಧಿಗಚ್ಚತಿ|
12073023c ಅಗ್ನೌ ವಾಸಸಿ ಸೂರ್ಯೇ ಚ ಸುಖಂ ಶೀತೇಽಧಿಗಚ್ಚತಿ||
ಬೇಸಗೆಯ ಬಿಸಿಯನ್ನು ನೆರಳಿನಲ್ಲಿ ಹೋಗಿಯೋ, ನೀರಿನಲ್ಲಿ ಮುಳುಗಿಯೋ ಮತ್ತು ಗಾಳಿಬೀಸಿಕೊಳ್ಳುವುದರಿಂದಲೋ ಸುಖವಾಗಿ ತಡೆದುಕೊಳ್ಳಬಹುದು. ಬೆಂಕಿ ಕಾಯಿಸುವುದರಿಂದ ಮತ್ತು ಬಿಸಿಲಿನಲ್ಲಿ ನಿಲ್ಲುವುದರಿಂದ ಛಳಿಯನ್ನು ಸುಖವಾಗಿ ತಡೆದುಕೊಳ್ಳಬಹುದು.
12073024a ಶಬ್ದೇ ಸ್ಪರ್ಶೇ ರಸೇ ರೂಪೇ ಗಂಧೇ ಚ ರಮತೇ ಮನಃ|
12073024c ತೇಷು ಭೋಗೇಷು ಸರ್ವೇಷು ನಭೀತೋ ಲಭತೇ ಸುಖಮ್||
ಶಬ್ಧ-ಸ್ಪರ್ಶ-ರಸ-ರೂಪ-ಗಂಧಗಳಲ್ಲಿ ಮನಸ್ಸು ರಮಿಸುತ್ತದೆ. ಆದರೆ ಭಯದಲ್ಲಿರುವವನಿಗೆ ಈ ಎಲ್ಲ ಭೋಗಗಳಿಂದಲೂ ಸುಖವು ದೊರೆಯುವುದಿಲ್ಲ.
12073025a ಅಭಯಸ್ಯೈವ ಯೋ ದಾತಾ ತಸ್ಯೈವ ಸುಮಹತ್ಫಲಮ್|
12073025c ನ ಹಿ ಪ್ರಾಣಸಮಂ ದಾನಂ ತ್ರಿಷು ಲೋಕೇಷು ವಿದ್ಯತೇ||
ಅಂಥವನಿಗೆ ಅಭಯವನ್ನು ನೀಡುವವನಿಗೆ ಮಹಾ ಫಲವು ಲಭಿಸುತ್ತದೆ. ಪ್ರಾಣಸಮವಾದ ದಾನವು ಮೂರು ಲೋಕಗಳಲ್ಲಿಯೂ ಬೇರೆ ಇಲ್ಲ.
12073026a ಇಂದ್ರೋ ರಾಜಾ ಯಮೋ ರಾಜಾ ಧರ್ಮೋ ರಾಜಾ ತಥೈವ ಚ|
12073026c ರಾಜಾ ಬಿಭರ್ತಿ ರೂಪಾಣಿ ರಾಜ್ಞಾ ಸರ್ವಮಿದಂ ಧೃತಮ್||
ರಾಜನಾದವನು ಇಂದ್ರ. ರಾಜನಾದವನು ಯಮ. ರಾಜನಾದವನು ಧರ್ಮ ಕೂಡ. ರಾಜನಾದವನು ನಾನಾ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾನೆ. ಈ ಎಲ್ಲವೂ ರಾಜನ ಮೇಲೆಯೇ ನಿಂತಿವೆ.”
ಇತಿ ಶ್ರೀ ಮಹಾಭಾರತೇ ಶಾಂತಿ ಪರ್ವಣಿ ರಾಜಧರ್ಮ ಪರ್ವಣಿ ಪುರೂರವಪವನಸಂವಾದೇ ತ್ರಿಸಪ್ತತಿತಮೋಽಧ್ಯಾಯಃ||
ಇದು ಶ್ರೀ ಮಹಾಭಾರತ ಶಾಂತಿ ಪರ್ವದ ರಾಜಧರ್ಮ ಪರ್ವದಲ್ಲಿ ಪುರೂರವಪವನಸಂವಾದ ಎನ್ನುವ ಎಪ್ಪತ್ಮೂರನೇ ಅಧ್ಯಾಯವು.