ಭಾನುಮಂತ

ಕಲಿಂಗ ದೇಶದ ರಾಜಕುಮಾರ. ಮಹಾಭಾರತ ಯುದ್ಧದ ಎರಡನೇ ದಿನ ಭೀಮಸೇನನಿಂದ ವಧಿಸಲ್ಪಟ್ಟನು (ಭೀಷ್ಮ ಪರ್ವ, ಅಧ್ಯಾಯ ೫0). ಆ ಯುದ್ಧದ ವರ್ಣನೆಯು ಈ ರೀತಿಯಿದೆ:

ಭಾನುಮಂತಮಭಿಪ್ರೇಕ್ಷ್ಯ ಪ್ರಾದ್ರವತ್ಪುರುಷರ್ಷಭಃ||

ಭಾನುಮಾಂಸ್ತು ತತೋ ಭೀಮಂ ಶರವರ್ಷೇಣ ಚಾದಯನ್|

ನನಾದ ಬಲವನ್ನಾದಂ ನಾದಯಾನೋ ನಭಸ್ತಲಂ||

ನ ತಂ ಸ ಮಮೃಷೇ ಭೀಮಃ ಸಿಂಹನಾದಂ ಮಹಾರಣೇ|

ತತಃ ಸ್ವರೇಣ ಮಹತಾ ವಿನನಾದ ಮಹಾಸ್ವನಂ||

ತೇನ ಶಬ್ದೇನ ವಿತ್ರಸ್ತಾ ಕಲಿಂಗಾನಾಂ ವರೂಥಿನೀ|

ನ ಭೀಮಂ ಸಮರೇ ಮೇನೇ ಮಾನುಷಂ ಭರತರ್ಷಭ||

ತತೋ ಭೀಮೋ ಮಹಾರಾಜ ನದಿತ್ವಾ ವಿಪುಲಂ ಸ್ವನಂ|

ಸಾಸಿರ್ವೇಗಾದವಪ್ಲುತ್ಯ ದಂತಾಭ್ಯಾಂ ವಾರಣೋತ್ತಮಂ||

ಆರುರೋಹ ತತೋ ಮಧ್ಯಂ ನಾಗರಾಜಸ್ಯ ಮಾರಿಷ|

ಖಡ್ಗೇನ ಪೃಥುನಾ ಮಧ್ಯೇ ಭಾನುಮಂತಮಥಾಚ್ಛಿನತ್||

ಸೋಽಂತರಾಯುಧಿನಂ ಹತ್ವಾ ರಾಜಪುತ್ರಮರಿಂದಮಃ|

ಗುರುಭಾರಸಹಸ್ಕಂಧೇ ನಾಗಸ್ಯಾಸಿಮಪಾತಯತ್||

ಪುರುರ್ಷಭ ಭೀಮನು ಭಾನುಮಂತನನ್ನು ನೋಡಿ ಧಾವಿಸಿ ಬಂದನು. ಆಗ ಭಾನುಮಂತನು ಭೀಮನನ್ನು ಶರವರ್ಷಗಳಿಂದ ಹೊಡೆದು ನಭಸ್ಥಲವನ್ನೂ ಮೊಳಗಿಸುವ ಬಲವತ್ತಾದ ಸಿಂಹನಾದವನ್ನು ಕೂಗಿದನು. ಮಹಾರಣದಲ್ಲಿ ಅವನ ಸಿಂಹನಾದವನ್ನು ಸಹಿಸದೇ ಭೀಮನು ಮಹಾ ಸ್ವರದಲ್ಲಿ ಮಹಾಸ್ವನ ಸಿಂಹನಾದವನ್ನು ಮಾಡಿದನು. ಭರತರ್ಷಭ! ಅವನ ಶಬ್ಧದಿಂದ ವಿತ್ರಸ್ತರಾದ ಕಲಿಂಗರ ಸೇನೆಯು ಸಮರದಲ್ಲಿ ಭೀಮನು ಮನುಷ್ಯನಲ್ಲವೆಂದು ಅಭಿಪ್ರಾಯಪಟ್ಟಿತು. ಮಹಾರಾಜ! ಆಗ ಭೀಮನು ವಿಪುಲ ಸ್ವರದಲ್ಲಿ ಕೂಗಿ, ವೇಗವಾಗಿ ಉತ್ತಮ ಆನೆಯ ಎರಡೂ ದಂತಗಳನ್ನು ಬಲವಾಗಿ ಹಿಡಿದು ಛಂಗನೆ ಗಜರಾಜನ ಮೇಲೆ ಹಾರಿ ಹೋಗಿ ಮಹಾ ಖಡ್ಗದಿಂದ ಭಾನುಮಂತನನ್ನು ಮಧ್ಯದಲ್ಲಿಯೇ ಕತ್ತರಿಸಿದನು. ಆ ಯೋಧ ರಾಜಪುತ್ರನನ್ನು ಸಂಹರಿಸಿದ ಅರಿಂದಮನು ಅತಿಭಾರವಾದ ಖಡ್ಗವನ್ನು ಆನೆಯ ಮೇಲೆ ಪ್ರಯೋಗಿಸಿ ಅದನ್ನೂ ಬೀಳಿಸಿದನು.

 

Comments are closed.