ಭೀಷ್ಮ ಪರ್ವ: ಭಗವದ್ಗೀತಾ ಪರ್ವ
೨೨
ಪಾಂಡವ ಸೇನೆಯ ವರ್ಣನೆ (೧-೧೪). ಕೃಷ್ಣನು ಅರ್ಜುನನಿಗೆ ಹೇಳಿದ ಮಾತು (೧೫-೧೬). ಧೃತರಾಷ್ಟ್ರ-ಸಂಜಯರ ಸಂವಾದ (೧೭-೨೨).
06022001 ಸಂಜಯ ಉವಾಚ|
06022001a ತತೋ ಯುಧಿಷ್ಠಿರೋ ರಾಜಾ ಸ್ವಾಂ ಸೇನಾಂ ಸಮಚೋದಯತ್|
06022001c ಪ್ರತಿವ್ಯೂಹನ್ನನೀಕಾನಿ ಭೀಷ್ಮಸ್ಯ ಭರತರ್ಷಭ||
ಸಂಜಯನು ಹೇಳಿದನು: “ಭರತರ್ಷಭ! ಆಗ ರಾಜಾ ಯುಧಿಷ್ಠಿರನು ತನ್ನ ಸೇನೆಯನ್ನೂ ಭೀಷ್ಮನ ಸೇನೆಗಳಿಗೆ ಪ್ರತಿವ್ಯೂಹವಾಗಿ ರಚಿಸಿ ಪ್ರತಿಚೋದಿಸಿದನು.
06022002a ಯಥೋದ್ದಿಷ್ಟಾನ್ಯನೀಕಾನಿ ಪ್ರತ್ಯವ್ಯೂಹಂತ ಪಾಂಡವಾಃ|
06022002c ಸ್ವರ್ಗಂ ಪರಮಭೀಪ್ಸಂತಃ ಸುಯುದ್ಧೇನ ಕುರೂದ್ವಹಾಃ||
“ಪಾಂಡವರು ಶಾಸ್ತ್ರಗಳಲ್ಲಿ ಹೇಳಿರುವಂತೆ ಸೇನೆಗಳನ್ನು ಪ್ರತಿವ್ಯೂಹವಾಗಿ ರಚಿಸಿದ್ದಾರೆ. ಕುರೂದ್ವಹರೇ! ಒಳ್ಳೆಯ ಯುದ್ಧವನ್ನು ಮಾಡಿ ಸ್ವರ್ಗವನ್ನು ಪಡೆಯಿರಿ!”
06022003a ಮಧ್ಯೇ ಶಿಖಂಡಿನೋಽನೀಕಂ ರಕ್ಷಿತಂ ಸವ್ಯಸಾಚಿನಾ|
06022003c ಧೃಷ್ಟದ್ಯುಮ್ನಸ್ಯ ಚ ಸ್ವಯಂ ಭೀಮೇನ ಪರಿಪಾಲಿತಂ||
ಮಧ್ಯದಲ್ಲಿ ಶಿಖಂಡಿಯ ಸೇನೆಯನ್ನು ಸವ್ಯಸಾಚಿಯು ರಕ್ಷಿಸುತ್ತಿದ್ದನು. ಧೃಷ್ಟದ್ಯುಮ್ನನ ಸೇನೆಯನ್ನು ಸ್ವಯಂ ಭೀಮನು ಪರಿಪಾಲಿಸುತ್ತಿದ್ದನು.
06022004a ಅನೀಕಂ ದಕ್ಷಿಣಂ ರಾಜನ್ಯುಯುಧಾನೇನ ಪಾಲಿತಂ|
06022004c ಶ್ರೀಮತಾ ಸಾತ್ವತಾಗ್ರ್ಯೇಣ ಶಕ್ರೇಣೇವ ಧನುಷ್ಮತಾ||
ರಾಜನ್! ದಕ್ಷಿಣಭಾಗದ ಸೇನೆಯನ್ನು ಸುಂದರ, ಸಾತ್ವತಾಗ್ರ್ಯ, ಶಕ್ರನಂತಿರುವ ಧನುಷ್ಮತ ಯುಯುಧಾನನು ಪಾಲಿಸುತ್ತಿದ್ದನು.
06022005a ಮಹೇಂದ್ರಯಾನಪ್ರತಿಮಂ ರಥಂ ತು
ಸೋಪಸ್ಕರಂ ಹಾಟಕರತ್ನಚಿತ್ರಂ|
06022005c ಯುಧಿಷ್ಠಿರಃ ಕಾಂಚನಭಾಂಡಯೋಕ್ತ್ರಂ
ಸಮಾಸ್ಥಿತೋ ನಾಗಕುಲಸ್ಯ ಮಧ್ಯೇ||
ಆನೆಗಳ ಹಿಂಡಿನ ಮಧ್ಯೆ ಯುಧಿಷ್ಠಿರನು ಮಹೇಂದ್ರನ ಯಾನದಂತಿದ್ದ ಉತ್ತಮ ಧ್ವಜಸ್ಥಂಭವಿರುವ, ಚಿನ್ನ-ರತ್ನಗಳಿಂದ ಅಲಂಕರಿಸಲ್ಪಟ್ಟಿದ್ದ, ಕಾಂಚನದಂತಿದ್ದ ಕುದುರೆಗಳನ್ನು ಕಟ್ಟಿದ ರಥದಲ್ಲಿ ಕುಳಿತಿದ್ದನು.
06022006a ಸಮುಚ್ಛ್ರಿತಂ ದಾಂತಶಲಾಕಮಸ್ಯ
ಸುಪಾಂಡುರಂ ಚತ್ರಮತೀವ ಭಾತಿ|
06022006c ಪ್ರದಕ್ಷಿಣಂ ಚೈನಮುಪಾಚರಂತಿ
ಮಹರ್ಷಯಃ ಸಂಸ್ತುತಿಭಿರ್ನರೇಂದ್ರಂ||
ಮೇಲೆ ಎತ್ತಿ ಹಿಡಿದ ದಂತದ ಸ್ಥಂಭಕ್ಕೆ ಕಟ್ಟಿದ್ದ ಶ್ವೇತ ಛತ್ರವು ಅತೀವವಾಗಿ ಬೆಳಗುತ್ತಿರಲು, ಆ ನರೇಂದ್ರನನ್ನು ಸಂಸ್ತುತಿಸುತ್ತಾ ಮಹರ್ಷಿಗಳು ಪ್ರದಕ್ಷಿಣೆ ಹಾಕಿ ನಡೆಯುತ್ತಿದ್ದರು.
06022007a ಪುರೋಹಿತಾಃ ಶತ್ರುವಧಂ ವದಂತೋ
ಮಹರ್ಷಿವೃದ್ಧಾಃ ಶ್ರುತವಂತ ಏವ|
06022007c ಜಪ್ಯೈಶ್ಚ ಮಂತ್ರೈಶ್ಚ ತಥೌಷಧೀಭಿಃ
ಸಮಂತತಃ ಸ್ವಸ್ತ್ಯಯನಂ ಪ್ರಚಕ್ರುಃ||
ಪುರೋಹಿತರು, ಮಹರ್ಷಿ-ವೃದ್ಧರು, ಮತ್ತು ಸಿದ್ಧರೂ ಕೂಡ ಜಪ, ಮಂತ್ರ, ಔಷಧಿಗಳಿಂದ ಅವನನ್ನು ಸುತ್ತುವರೆದು ಶತ್ರುವಧೆಯನ್ನು ಹೇಳುತ್ತಾ ಸ್ವಸ್ತಿವಾಚನ ಮಾಡಿದರು.
06022008a ತತಃ ಸ ವಸ್ತ್ರಾಣಿ ತಥೈವ ಗಾಶ್ಚ
ಫಲಾನಿ ಪುಷ್ಪಾಣಿ ತಥೈವ ನಿಷ್ಕಾನ್|
06022008c ಕುರೂತ್ತಮೋ ಬ್ರಾಹ್ಮಣಸಾನ್ಮಹಾತ್ಮಾ
ಕುರ್ವನ್ಯಯೌ ಶಕ್ರ ಇವಾಮರೇಭ್ಯಃ||
ಆಗ ಆ ಕುರೂತ್ತಮ ಮಹಾತ್ಮನು ಬ್ರಾಹ್ಮಣರಿಗೆ ವಸ್ತ್ರಗಳು, ಗೋವುಗಳು, ಫಲ-ಪುಷ್ಪಗಳು ಮತ್ತು ನಾಣ್ಯಗಳನ್ನಿತ್ತು ಅಮರರೊಂದಿಗೆ ಶಕ್ರನಂತೆ ಮುಂದುವರೆದನು.
06022009a ಸಹಸ್ರಸೂರ್ಯಃ ಶತಕಿಂಕಿಣೀಕಃ
ಪರಾರ್ಧ್ಯಜಾಂಬೂನದಹೇಮಚಿತ್ರಃ|
06022009c ರಥೋಽರ್ಜುನಸ್ಯಾಗ್ನಿರಿವಾರ್ಚಿಮಾಲೀ
ವಿಭ್ರಾಜತೇ ಶ್ವೇತಹಯಃ ಸುಚಕ್ರಃ||
ನೂರು ಗಂಟೆಗಳನ್ನು ಕಟ್ಟಿದ್ದ, ಉತ್ತಮ ಜಾಂಬೂನದ ಚಿನ್ನದ ಚಿತ್ರಗಳನ್ನು ಪಡೆದಿದ್ದ, ಶ್ವೇತ ಹಯ ಮತ್ತು ಚಕ್ರಗಳ ಅರ್ಜುನನ ರಥವು ಅಗ್ನಿಯ ತೇಜಸ್ಸನ್ನು ಪಡೆದು ಸಹಸ್ರ ಸೂರ್ಯರಂತೆ ವಿಭ್ರಾಜಿಸುತ್ತಿತ್ತು.
06022010a ತಮಾಸ್ಥಿತಃ ಕೇಶವಸಂಗೃಹೀತಂ
ಕಪಿಧ್ವಜಂ ಗಾಂಡಿವಬಾಣಹಸ್ತಃ|
06022010c ಧನುರ್ಧರೋ ಯಸ್ಯ ಸಮಃ ಪೃಥಿವ್ಯಾಂ
ನ ವಿದ್ಯತೇ ನೋ ಭವಿತಾ ವಾ ಕದಾ ಚಿತ್||
ಕೇಶವನು ಹಿಡಿದಿದ್ದ ಆ ಕಪಿಧ್ವಜ ರಥದಲ್ಲಿ ಯಾರ ಸಮನಾದ ಧನುರ್ಧರನು ಈ ಪೃಥ್ವಿಯಲ್ಲಿಯೇ ಇಲ್ಲವೋ, ಇರಲಿಲ್ಲವೋ ಮತ್ತು ಮುಂದೆ ಎಂದೂ ಇರುವುದಿಲ್ಲವೋ ಅವನು ಗಾಂಡೀವ ಬಾಣಗಳನ್ನು ಕೈಯಲ್ಲಿ ಹಿಡಿದು ನಿಂತಿದ್ದನು.
06022011a ಉದ್ವರ್ತಯಿಷ್ಯಂಸ್ತವ ಪುತ್ರಸೇನಾಂ
ಅತೀವ ರೌದ್ರಂ ಸ ಬಿಭರ್ತಿ ರೂಪಂ|
06022011c ಅನಾಯುಧೋ ಯಃ ಸುಭುಜೋ ಭುಜಾಭ್ಯಾಂ
ನರಾಶ್ವನಾಗಾನ್ಯುಧಿ ಭಸ್ಮ ಕುರ್ಯಾತ್||
06022012a ಸ ಭೀಮಸೇನಃ ಸಹಿತೋ ಯಮಾಭ್ಯಾಂ
ವೃಕೋದರೋ ವೀರರಥಸ್ಯ ಗೋಪ್ತಾ|
ನಿನ್ನ ಪುತ್ರನ ಸೇನೆಯನ್ನು ಪುಡಿಮಾಡುವನೋ ಅಂತಿರುವ, ಅತೀವ ರೌದ್ರ, ಭಯವನ್ನುಂಟುಮಾಡುವ ರೂಪವುಳ್ಳ, ಅನಾಯುಧನಾಗಿಯೂ ತನ್ನ ಉತ್ತಮ ಭುಜಗಳಿಂದ ನರ, ಅಶ್ವ, ಆನೆಗಳನ್ನು ಭಸ್ಮಮಾಡಬಲ್ಲ ಭುಜದ್ವಯಗಳ ಆ ಭೀಮಸೇನನು ಯಮಳರಿಬ್ಬರೊಂದಿಗೆ ವೀರರಥರ ಸೇನೆಯನ್ನು ರಕ್ಷಿಸುತ್ತಿದ್ದನು.
06022012c ತಂ ಪ್ರೇಕ್ಷ್ಯ ಮತ್ತರ್ಷಭಸಿಂಹಖೇಲಂ
ಲೋಕೇ ಮಹೇಂದ್ರಪ್ರತಿಮಾನಕಲ್ಪಂ||
06022013a ಸಮೀಕ್ಷ್ಯ ಸೇನಾಗ್ರಗತಂ ದುರಾಸದಂ
ಪ್ರವಿವ್ಯಥುಃ ಪಂಕಗತಾ ಇವೋಷ್ಟ್ರಾಃ|
06022013c ವೃಕೋದರಂ ವಾರಣರಾಜದರ್ಪಂ
ಯೋಧಾಸ್ತ್ವದೀಯಾ ಭಯವಿಗ್ನಸತ್ತ್ವಾಃ||
ಮತ್ತಿನಲ್ಲಿರುವ ಸಿಂಹದ ಆಟದ ನಡುಗೆಯುಳ್ಳ, ಲೋಕದಲ್ಲಿ ಮಹೇಂದ್ರನ ಹಾಗಿರುವ, ಸೇನೆಯ ಮುಂದೆ ಹೋಗುತ್ತಿರುವ ಆ ದುರಾಸದ, ವಾರಣರಾಜದರ್ಪ, ವೃಕೋದರನನ್ನು ನೋಡಿ ನಿನ್ನ ಯೋಧರು ಭಯವಿಗ್ನರಾಗಿ ಸತ್ವವನ್ನು ಕಳೆದುಕೊಂಡು ಕೆಸರಿನಲ್ಲಿ ಸಿಕ್ಕಿಕೊಂಡ ಆನೆಗಳಂತೆ ಭಯಭೀತರಾಗಿದ್ದರು.
06022014a ಅನೀಕಮಧ್ಯೇ ತಿಷ್ಠಂತಂ ರಾಜಪುತ್ರಂ ದುರಾಸದಂ|
06022014c ಅಬ್ರವೀದ್ ಭರತಶ್ರೇಷ್ಠಂ ಗುಡಾಕೇಶಂ ಜನಾರ್ದನಃ||
ಅನೀಕಮಧ್ಯದಲ್ಲಿ ನಿಂತಿದ್ದ ರಾಜಪುತ್ರ, ದುರಾಸದ, ಭರತಶ್ರೇಷ್ಠ, ಗುಡಾಕೇಶನಿಗೆ ಜನಾರ್ದನನು ಹೇಳಿದನು.
06022015 ವಾಸುದೇವ ಉವಾಚ|
06022015a ಯ ಏಷ ಗೋಪ್ತಾ ಪ್ರತಪನ್ಬಲಸ್ಥೋ
ಯೋ ನಃ ಸೇನಾಂ ಸಿಂಹ ಇವೇಕ್ಷತೇ ಚ|
06022015c ಸ ಏಷ ಭೀಷ್ಮಃ ಕುರುವಂಶಕೇತುರ್
ಯೇನಾಹೃತಾಸ್ತ್ರಿಂಶತೋ ವಾಜಿಮೇಧಾಃ||
ವಾಸುದೇವನು ಹೇಳಿದನು: “ತನ್ನ ಸಿಟ್ಟಿನಿಂದ ನಮ್ಮ ಸೇನೆಯನ್ನು ಸುಡುತ್ತಿರುವ, ನಮ್ಮ ಸೇನೆಯನ್ನು ಸಿಂಹದಂತೆ ನೋಡುತ್ತಿರುವ ಅವನೇ ಮೂರುನೂರು ಅಶ್ವಮೇಧಗಳನ್ನು ಮಾಡಿದ ಕುರುವಂಶಧ್ವಜ ಭೀಷ್ಮ.
06022016a ಏತಾನ್ಯನೀಕಾನಿ ಮಹಾನುಭಾವಂ
ಗೂಹಂತಿ ಮೇಘಾ ಇವ ಘರ್ಮರಶ್ಮಿಂ|
06022016c ಏತಾನಿ ಹತ್ವಾ ಪುರುಷಪ್ರವೀರ
ಕಾಂಕ್ಷಸ್ವ ಯುದ್ಧಂ ಭರತರ್ಷಭೇಣ||
ಈ ಸೇನೆಗಳು ಆ ಮಹಾನುಭಾವನನ್ನು ಉರಿಯುತ್ತಿರುವ ಸೂರ್ಯನನ್ನು ಮೋಡಗಳು ಹೇಗೋ ಹಾಗೆ ಸುತ್ತುವರೆದಿವೆ. ಪುರುಷಪವೀರ! ಇವರನ್ನು ಕೊಂದು ಭರತರ್ಷಭನಿಂದ ಯುದ್ಧವನ್ನು ಬಯಸು.””
06022017 ಧೃತರಾಷ್ಟ್ರ ಉವಾಚ|
06022017a ಕೇಷಾಂ ಪ್ರಹೃಷ್ಟಾಸ್ತತ್ರಾಗ್ರೇ ಯೋಧಾ ಯುಧ್ಯಂತಿ ಸಂಜಯ|
06022017c ಉದಗ್ರಮನಸಃ ಕೇಽತ್ರ ಕೇ ವಾ ದೀನಾ ವಿಚೇತಸಃ||
ಧೃತರಾಷ್ಟ್ರನು ಹೇಳಿದನು: “ಸಂಜಯ! ಮೊದಲು ಯಾರ ಸೇನೆಯ ಯೋಧರು ಸಂತೋಷದಿಂದ ಯುದ್ಧಮಾಡಿದರು? ಅಲ್ಲಿ ಯಾರ ಮನಸ್ಸು ಸ್ಥೈರ್ಯದಿಂದ ತುಂಬಿತ್ತು ಮತ್ತು ಯಾರ ಮನಸ್ಸು ದೀನವಾಗಿ ಚೇತನವನ್ನು ಕಳೆದುಕೊಂಡಿತ್ತು?
06022018a ಕೇ ಪೂರ್ವಂ ಪ್ರಾಹರಂಸ್ತತ್ರ ಯುದ್ಧೇ ಹೃದಯಕಂಪನೇ|
06022018c ಮಾಮಕಾಃ ಪಾಂಡವಾನಾಂ ವಾ ತನ್ಮಮಾಚಕ್ಷ್ವ ಸಂಜಯ||
ಸಂಜಯ! ಹೃದಯವನ್ನು ಕಂಪಿಸುವ ಆ ಯುದ್ಧದಲ್ಲಿ ಮೊದಲು ಯಾರು ಹೊಡೆಯಲು ಪ್ರಾರಂಭಿಸಿದರು? ನನ್ನವರೇ ಅಥವಾ ಪಾಂಡವರೇ? ಅದನ್ನು ನನಗೆ ಹೇಳು.
06022019a ಕಸ್ಯ ಸೇನಾಸಮುದಯೇ ಗಂಧಮಾಲ್ಯಸಮುದ್ಭವಃ|
06022019c ವಾಚಃ ಪ್ರದಕ್ಷಿಣಾಶ್ಚೈವ ಯೋಧಾನಾಮಭಿಗರ್ಜತಾಂ||
ಯಾರ ಸೇನೆಯಲ್ಲಿ ಮಾಲೆಗಳ ಸುಗಂಧವು ಮೇಲೆದ್ದು ಪಸರಿಸಿತು? ಮತ್ತು ಯಾರ ಯೋಧರು ಗರ್ಜಿಸುತ್ತಾ, ಕೂಗುತ್ತಾ ಪ್ರದಕ್ಷಿಣೆ ಹಾಕಿದರು?”
06022020 ಸಂಜಯ ಉವಾಚ|
06022020a ಉಭಯೋಃ ಸೇನಯೋಸ್ತತ್ರ ಯೋಧಾ ಜಹೃಷಿರೇ ಮುದಾ|
06022020c ಸ್ರಗ್ಧೂಪಪಾನಗಂಧಾನಾಮುಭಯತ್ರ ಸಮುದ್ಭವಃ||
ಸಂಜಯನು ಹೇಳಿದನು: “ಅಲ್ಲಿ ಎರಡೂ ಸೇನೆಗಳಲ್ಲಿ ಯೋಧರು ಸಂತೋಷಗೊಂಡು ಹರ್ಷಿಸಿದರು. ಇಬ್ಬರಲ್ಲಿಯೂ ಹೂವಿನ ಮಾಲೆಗಳ ಮತ್ತು ಸುಗಂಧಗಳ ಸುವಾಸನೆಯು ಹೊರಬರುತ್ತಿತ್ತು.
06022021a ಸಂಹತಾನಾಮನೀಕಾನಾಂ ವ್ಯೂಢಾನಾಂ ಭರತರ್ಷಭ|
06022021c ಸಂಸರ್ಪತಾಮುದೀರ್ಣಾನಾಂ ವಿಮರ್ದಃ ಸುಮಹಾನಭೂತ್||
ಭರತರ್ಷಭ! ಹೋರಾಡಲು ಸೇರಿದ್ದ ಸೇನೆಗಳ ವ್ಯೂಹಗಳು ಪರಸ್ಪರರನ್ನು ಎದುರಿಸಿ ಮರ್ದಿಸುವುದು ತುಂಬಾ ಜೋರಾಗಿತ್ತು.
06022022a ವಾದಿತ್ರಶಬ್ದಸ್ತುಮುಲಃ ಶಂಖಭೇರೀವಿಮಿಶ್ರಿತಃ|
06022022c ಕುಂಜರಾಣಾಂ ಚ ನದತಾಂ ಸೈನ್ಯಾನಾಂ ಚ ಪ್ರಹೃಷ್ಯತಾಂ||
ವಾದ್ಯಗಳ ಶಬ್ಧ, ಶಂಖ-ಭೇರಿಗಳ ತುಮುಲಗಳು ಆನೆಗಳ ಮತ್ತು ಹರ್ಷಗೊಂಡಿದ್ದ ಸೈನಿಕರ ಕೂಗಿನೊಂದಿಗೆ ಸೇರಿತು.”
ಇತಿ ಶ್ರೀ ಮಹಾಭಾರತೇ ಭೀಷ್ಮಪರ್ವಣಿ ಭಗವದ್ಗೀತಾಪರ್ವಣಿ ಶ್ರೀಕೃಷ್ಣಾರ್ಜುನಸಂವಾದೇ ದ್ವಾವಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಭೀಷ್ಮಪರ್ವದಲ್ಲಿ ಭಗವದ್ಗೀತಾಪರ್ವದಲ್ಲಿ ಶ್ರೀಕೃಷ್ಣಾರ್ಜುನಸಂವಾದವೆಂಬ ಇಪ್ಪತ್ತೆರಡನೇ ಅಧ್ಯಾಯವು.
***
ಅನೇಕ ಸಂಪುಟಗಳಲ್ಲಿ ಈ ಸಂದರ್ಭದಲ್ಲಿ ಅರ್ಜುನನು ದುರ್ಗಾಸ್ತೋತ್ರದಿಂದ ದೇವಿಯನ್ನು ಪ್ರಾರ್ಥಿಸಿದ ಪ್ರಕರಣವನ್ನು ವರ್ಣಿಸಲಾಗಿದೆ.
ಈ ಸಮಯದಲ್ಲಿ ಯುದ್ಧಸನ್ನದ್ಧರಾದ ಧೃತರಾಷ್ಟ್ರನ ಮಕ್ಕಳ ಅಪಾರ ಸೇನೆಯನ್ನು ನೋಡಿ ಅರ್ಜುನನ ಹಿತಾರ್ಥವಾಗಿ ಕೃಷ್ಣನು ಹೇಳುತ್ತಾನೆ:
ಶುಚಿರ್ಭೂತ್ವಾ ಮಹಾಬಾಹೋ ಸಂಗ್ರಾಮಾಭಿಮುಖೇ ಸ್ಥಿತಃ|
ಪರಾಜಯಾಯ ಶತ್ರೂಣಾಂ ದುರ್ಗಾಸ್ತೋತ್ರಮುದೀರಯ||
ಆಗ ಪಾರ್ಥನು ರಥದಿಂದಿಳಿದು ಬದ್ಧಾಂಜಲಿಯಾಗಿ ದುರ್ಗೆಯನ್ನು ಸ್ತುತಿಸಿದನು:
ನಮಸ್ತೇ ಸಿದ್ಧಸೇನಾನಿ ಆರ್ಯೇ ಮಂದರವಾಸಿನಿ|
ಕುಮಾರೀ ಕಾಲಿ ಕಾಪಾಲೀ ಕಪಿಲೇ ಕೃಷ್ಣಪಿಂಗಲೇ||೧||
ಭದ್ರಕಾಲಿ ನಮಸ್ತುಭ್ಯಂ ಮಹಾಕಾಲಿ ನಮೋಸ್ತುತೇ|
ಚಂಡಿ ಚಂಡೇ ನಮಸ್ತುಭ್ಯಂ ತಾರಿಣೀ ವರವರ್ಣಿನೀ||೨||
ಕಾತ್ಯಾಯಿನೀ ಮಹಾಭಾಗೇ ಕರಾಲಿ ವಿಜಯೇ ಜಯೇ|
ಶಿಖಿಪಿಚ್ಛಧ್ವಜಧರೇ ನಾನಾಭರಣಭೂಷಿತೇ||೩||
ಆಟ್ಟಶೂಲಪ್ರಹರಣೇ ಖಡ್ಗಖೇಟಕಧಾರಿಣೀ|
ಗೋಪೇಂದ್ರಸ್ಯಾನುಜೇ ಜ್ಯೇಷ್ಠೇ ನಂದಗೋಪಕುಲೋದ್ಭವೇ||೪||
ಮಹಿಷಾಸೃಕ್ಪ್ರಿಯೇ ನಿತ್ಯಂ ಕೌಶಿಕೀ ಪೀತವಾಸಿನೀ|
ಅಟ್ಟಹಾಸೇ ಕೋಕಮುಖೇ ನಮಸ್ತೇಽಸ್ತು ರಣಪ್ರಿಯೇ||೫||
ಉಮೇ ಶಾಕಂಭರೀ ಶ್ವೇತೇ ಕೃಷ್ಣೇ ಕೈಟಭನಾಶಿನೀ|
ಹಿರಣ್ಯಾಕ್ಷೀ ವಿರೂಪಾಕ್ಷೀ ಸುಧೂಮಾಕ್ಷಿ ನಮೋಸ್ತು ತೇ||೬||
ವೇದಶ್ರುತಿ ಮಹಾಪುಣ್ಯೇ ಬ್ರಹ್ಮಣ್ಯೇ ಜಾತವೇದಸಿ|
ಜಂಬೂಕಟಕಚೈತ್ಯೇಷು ನಿತ್ಯಂ ಸನ್ನಿಹಿತಾಲಯೇ||೭||
ತ್ವಂ ಬ್ರಹ್ಮವಿದ್ಯಾ ವಿದ್ಯಾನಾಂ ಮಹಾನಿದ್ರಾ ಚ ದೇಹಿನಾಂ|
ಸ್ಕಂದಮಾತರ್ಭಗವತೀ ದುರ್ಗೇ ಕಾಂತಾರವಾಸಿನೀ||೮||
ಸ್ವಾಹಾಕಾರಃ ಸ್ವಧಾ ಚೈವ ಕಲಾ ಕಾಷ್ಠಾ ಸರಸ್ವತೀ|
ಸಾವಿತ್ರೀ ವೇದಮಾತಾ ಚ ತಥಾ ವೇದಾಂತ ಉಚ್ಯತೇ||೯||
ಸ್ತುತಾಸಿ ತ್ವಂ ಮಹಾದೇವೀ ವಿಶುದ್ಧೇನಾಂತರಾತ್ಮನಾ|
ಜಯೋ ಭವತು ಮೇ ನಿತ್ಯಂ ತ್ವತ್ಪ್ರಸಾದಾದ್ರಣಾಜಿರೇ||೧೦||
ಕಾಂತಾರಭಯದುರ್ಗೇಷು ಭಕ್ತಾನಾಂ ಚಾಲಯೇಷು ಚ|
ನಿತ್ಯಂ ವಸಸಿ ಪಾತಾಲೇ ಯುದ್ಧೇ ಜಯಸಿ ದಾನವಾನ್||೧೧||
ತ್ವಂ ಜಂಭನೀ ಮೋಹಿನೀ ಚ ಮಾಯಾ ಹ್ರೀಃ ಶ್ರೀಸ್ತಥೈವ ಚ|
ಸಂಧ್ಯಾ ಪ್ರಭಾವತೀ ಚೈವ ಸಾವಿತ್ರೀ ಜನನೀ ತಥಾ|| ೧೨||
ತುಷ್ಟಿಃ ಪುಷ್ಟಿರ್ಧೃತಿರ್ದೀಪ್ತಿಶ್ಚಂದ್ರಾದಿತ್ಯವಿವರ್ಧಿನೀ|
ಭೂತಿರ್ಭೂತಿಮತಾಂ ಸಂಖ್ಯೇ ವೀಕ್ಷ್ಯಸೇ ಸಿದ್ಧಚಾರಣೈಃ||೧೩||
ಆಗ ದೇವಿಯು ಪ್ರತ್ಯಕ್ಷಳಾಗಿ –
ಸ್ವಲ್ಪೇನೈವ ತು ಕಾಲೇನ ಶತ್ರೂಂಜೇಷ್ಯಸಿ ಪಾಂಡವ|
ನರಸ್ತ್ವಮಸಿ ದುರ್ಧರ್ಷ ನಾರಾಯಣಸಹಾಯವಾನ್|
ಅಜೇಯಸ್ತ್ವಂ ರಣೇಽರೀಣಾಮಪಿ ವಜ್ರಭೃತಃ ಸ್ವಯಂ||
ಎಂದು ಹೇಳಿ ಅಂತರ್ಹಿತಳಾದಳು. ಈ ಸನ್ನಿವೇಶವು ಪುಣೆಯ ಪರಿಷ್ಕೃತ ಸಂಪುಟದಲ್ಲಿ ಇಲ್ಲ.