Udyoga Parva: Chapter 157

|| ಓಂ ಓಂ ನಮೋ ನಾರಾಯಣಾಯ|| ಶ್ರೀ ವೇದವ್ಯಾಸಾಯ ನಮಃ ||

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಉದ್ಯೋಗ ಪರ್ವ: ಉಲೂಕದೂತಾಗಮನ ಪರ್ವ

೧೫೭

ದುರ್ಯೋಧನನು ಶಕುನಿಯ ಮಗ ಉಲೂಕನ ಮೂಲಕ ಪಾಂಡವರಿಗೆ ಅಪಮಾನಕಾರಕ ಸಂದೇಶವನ್ನು ಹೇಳಿ ಕಳುಹಿಸಿದುದು (೧-೧೮).

05157001 ಸಂಜಯ ಉವಾಚ|

05157001a ಹಿರಣ್ವತ್ಯಾಂ ನಿವಿಷ್ಟೇಷು ಪಾಂಡವೇಷು ಮಹಾತ್ಮಸು|

05157001c ದುರ್ಯೋಧನೋ ಮಹಾರಾಜ ಕರ್ಣೇನ ಸಹ ಭಾರತ||

05157002a ಸೌಬಲೇನ ಚ ರಾಜೇಂದ್ರ ತಥಾ ದುಃಶಾಸನೇನ ಚ|

05157002c ಆಹೂಯೋಪಹ್ವರೇ ರಾಜನ್ನುಲೂಕಮಿದಮಬ್ರವೀತ್||

ಸಂಜಯನು ಹೇಳಿದನು: “ಭಾರತ! ರಾಜನ್! ಹಿರಣ್ವತೀ ತೀರದಲ್ಲಿ ಮಹಾತ್ಮ ಪಾಂಡವರು ಬೀಡು ಬಿಟ್ಟಿರಲು ಮಹಾರಾಜ ದುರ್ಯೋಧನನು ಕರ್ಣನೊಂದಿಗೆ, ರಾಜೇಂದ್ರ ಸೌಬಲನೊಂದಿಗೆ ಮತ್ತು ದುಃಶಾಸನನೊಂದಿಗೆ ಇರುವಾಗ ಉಲೂಕನನ್ನು ಕರೆಯಿಸಿ ಹೀಗೆಂದನು:

05157003a ಉಲೂಕ ಗಚ್ಚ ಕೈತವ್ಯ ಪಾಂಡವಾನ್ಸಹಸೋಮಕಾನ್|

05157003c ಗತ್ವಾ ಮಮ ವಚೋ ಬ್ರೂಹಿ ವಾಸುದೇವಸ್ಯ ಶೃಣ್ವತಃ||

“ಉಲೂಕ! ಕೈತವ್ಯ[1]! ಸೋಮಕರೊಂದಿಗಿರುವ ಪಾಂಡವರಲ್ಲಿಗೆ ಹೋಗು!  ಹೋಗಿ ವಾಸುದೇವನು ಕೇಳುವಂತೆ ನನ್ನ ಮಾತುಗಳನ್ನು ಹೇಳು.

05157004a ಇದಂ ತತ್ಸಮನುಪ್ರಾಪ್ತಂ ವರ್ಷಪೂಗಾಭಿಚಿಂತಿತಂ|

05157004c ಪಾಂಡವಾನಾಂ ಕುರೂಣಾಂ ಚ ಯುದ್ಧಂ ಲೋಕಭಯಂಕರಂ||

“ಬಹಳ ವರ್ಷಗಳಿಂದ ಕಾದುಕೊಂಡಿರುವ ಲೋಕಭಯಂಕರವಾದ, ಪಾಂಡವರ ಮತ್ತು ಕುರುಗಳ ನಡುವಿನ ಯುದ್ಧವು ಬಂದೊದಗಿದೆ.

05157005a ಯದೇತತ್ಕತ್ಥನಾವಾಕ್ಯಂ ಸಂಜಯೋ ಮಹದಬ್ರವೀತ್|

05157005c ಮಧ್ಯೇ ಕುರೂಣಾಂ ಕೌಂತೇಯ ತಸ್ಯ ಕಾಲೋಽಯಮಾಗತಃ|

05157005e ಯಥಾ ವಃ ಸಂಪ್ರತಿಜ್ಞಾತಂ ತತ್ಸರ್ವಂ ಕ್ರಿಯತಾಮಿತಿ||

ಕೌಂತೇಯ! ಕುರುಗಳ ಮಧ್ಯೆ ಸಂಜಯನು ಹೇಳಿದ ನೀವು ಜೋರಾಗಿ ಕೊಚ್ಚಿಕೊಂಡಿರುವವುಗಳನ್ನು ತೋರಿಸುವ ಕಾಲವು ಬಂದೊದಗಿದೆ. ನೀವು ಹೇಗೆ ಪ್ರತಿಜ್ಞೆ ಮಾಡಿದ್ದಿರೋ ಅವೆಲ್ಲವನ್ನೂ ಮಾಡಿತೋರಿಸಿ.

05157006a ಅಮರ್ಷಂ ರಾಜ್ಯಹರಣಂ ವನವಾಸಂ ಚ ಪಾಂಡವ|

05157006c ದ್ರೌಪದ್ಯಾಶ್ಚ ಪರಿಕ್ಲೇಶಂ ಸಂಸ್ಮರನ್ಪುರುಷೋ ಭವ||

ಪಾಂಡವ! ಕ್ರೂರವಾದ ರಾಜ್ಯಹರಣ, ವನವಾಸ, ಮತ್ತು ದ್ರೌಪದಿಯ ಪರಿಕ್ಲೇಶಗಳನ್ನು ಸ್ಮರಿಸಿಕೊಂಡು ಪುರುಷರಾಗಿರಿ.

05157007a ಯದರ್ಥಂ ಕ್ಷತ್ರಿಯಾ ಸೂತೇ ಗರ್ಭಂ ತದಿದಮಾಗತಂ|

05157007c ಬಲಂ ವೀರ್ಯಂ ಚ ಶೌರ್ಯಂ ಚ ಪರಂ ಚಾಪ್ಯಸ್ತ್ರಲಾಘವಂ|

05157007e ಪೌರುಷಂ ದರ್ಶಯನ್ ಯುದ್ಧೇ ಕೋಪಸ್ಯ ಕುರು ನಿಷ್ಕೃತಿಂ||

ಒಂದುವೇಳೆ ಕ್ಷತ್ರಿಯ ಗರ್ಭದಿಂದ ಹುಟ್ಟಿ ಬಂದಿರುವುದೇ ಆಗಿದ್ದರೆ ಬಲವನ್ನೂ, ಶೌರ್ಯವನ್ನೂ, ಉತ್ತಮ ಅಸ್ತ್ರಲಾಘವವನ್ನೂ, ಪೌರುಷವನ್ನೂ ಪ್ರದರ್ಶಿಸಿ ಕೋಪಕ್ಕೆ ಮುಕ್ತಾಯವನ್ನು ಮಾಡು.

05157008a ಪರಿಕ್ಲಿಷ್ಟಸ್ಯ ದೀನಸ್ಯ ದೀರ್ಘಕಾಲೋಷಿತಸ್ಯ ಚ|

05157008c ನ ಸ್ಫುಟೇದ್ಧೃದಯಂ ಕಸ್ಯ ಐಶ್ವರ್ಯಾದ್ಭ್ರಂಶಿತಸ್ಯ ಚ||

ಐಶ್ವರ್ಯದಿಂದ ಭ್ರಂಶಿತನಾಗಿ ದೀರ್ಘಕಾಲದವರೆಗೆ ದೀನನಾಗಿ, ಪರಿಕ್ಲಿಷ್ಟಗಳನ್ನು ಅನುಭವಿಸಿರುವ ಯಾರ ಹೃದಯವು ತಾನೇ ಒಡೆಯುವುದಿಲ್ಲ?

05157009a ಕುಲೇ ಜಾತಸ್ಯ ಶೂರಸ್ಯ ಪರವಿತ್ತೇಷು ಗೃಧ್ಯತಃ|

05157009c ಆಚ್ಚಿನ್ನಂ ರಾಜ್ಯಮಾಕ್ರಮ್ಯ ಕೋಪಂ ಕಸ್ಯ ನ ದೀಪಯೇತ್||

ಉತ್ತಮ ಕುಲದಲ್ಲಿ ಜನಿಸಿ, ಪರರ ವಿತ್ತವನ್ನು ಬಯಸುವವನು ರಾಜ್ಯವನ್ನೇ ಚೂರುಮಾಡಿ ಆಕ್ರಮಿಸಿರುವಾಗ ಯಾರು ತಾನೇ ಕೋಪದಿಂದ ಉರಿಯುವುದಿಲ್ಲ?

05157010a ಯತ್ತದುಕ್ತಂ ಮಹದ್ವಾಕ್ಯಂ ಕರ್ಮಣಾ ತದ್ವಿಭಾವ್ಯತಾಂ|

05157010c ಅಕರ್ಮಣಾ ಕತ್ಥಿತೇನ ಸಂತಃ ಕುಪುರುಷಂ ವಿದುಃ||

ನೀನು ಹೇಳುವ ಮಹಾವಾಕ್ಯವನ್ನು ಕರ್ಮದ ಮೂಲಕ ಮಾಡಿ ತೋರಿಸು! ಕೆಲಸಮಾಡದೇ ಜಂಬಕೊಚ್ಚಿಕೊಳ್ಳುವವನನ್ನು ಸಂತರು ಕುಪುರುಷನೆಂದು ತಿಳಿಯುತ್ತಾರೆ.

05157011a ಅಮಿತ್ರಾಣಾಂ ವಶೇ ಸ್ಥಾನಂ ರಾಜ್ಯಸ್ಯ ಚ ಪುನರ್ಭವಃ|

05157011c ದ್ವಾವರ್ಥೌ ಯುಧ್ಯಮಾನಸ್ಯ ತಸ್ಮಾತ್ಕುರುತ ಪೌರುಷಂ||

ಯುದ್ದಮಾಡುವವರು ಈ ಎರಡಕ್ಕಾಗಿ ಯುದ್ಧಮಾಡುತ್ತಾರೆ - ಶತ್ರುಗಳಿಂದ ಸ್ಥಾನವನ್ನು ಪಶಪಡಿಸಿಕೊಳ್ಳಲು ಮತ್ತು ರಾಜ್ಯವನ್ನು ಪುನಃ ಪಡೆದುಕೊಳ್ಳಲು. ಆದುದರಂತೆ ಪುರುಷನಂತೆ ನಡೆದುಕೋ.

05157012a ಅಸ್ಮಾನ್ವಾ ತ್ವಂ ಪರಾಜಿತ್ಯ ಪ್ರಶಾಧಿ ಪೃಥಿವೀಮಿಮಾಂ|

05157012c ಅಥ ವಾ ನಿಹತೋಽಸ್ಮಾಭಿರ್ವೀರಲೋಕಂ ಗಮಿಷ್ಯಸಿ||

ನಾವು ಅಥವಾ ನೀನು ಗೆದ್ದು ಈ ಪೃಥ್ವಿಯನ್ನು ಆಳೋಣ. ಅಥವಾ ನಮ್ಮಿಂದ ಕೊಲ್ಲಲ್ಪಟ್ಟು ವೀರಸ್ವರ್ಗಕ್ಕೆ ಹೋಗುತ್ತೀಯೆ.

05157013a ರಾಷ್ಟ್ರಾತ್ಪ್ರವ್ರಾಜನಂ ಕ್ಲೇಶಂ ವನವಾಸಂ ಚ ಪಾಂಡವ|

05157013c ಕೃಷ್ಣಾಯಾಶ್ಚ ಪರಿಕ್ಲೇಶಂ ಸಂಸ್ಮರನ್ಪುರುಷೋ ಭವ||

ಪಾಂಡವ! ರಾಷ್ಟ್ರದಿಂದ ಹೊರಗಟ್ಟಿದುದನ್ನು, ವನವಾಸದ ಕ್ಲೇಶವನ್ನು, ಕೃಷ್ಣೆಯ ಪರಿಕ್ಲೇಶವನ್ನು ನೆನಪಿಸಿಕೊಂಡು ಪುರುಷನಾಗು.

05157014a ಅಪ್ರಿಯಾಣಾಂ ಚ ವಚನೇ ಪ್ರವ್ರಜತ್ಸು ಪುನಃ ಪುನಃ|

05157014c ಅಮರ್ಷಂ ದರ್ಶಯಾದ್ಯ ತ್ವಮಮರ್ಷೋ ಹ್ಯೇವ ಪೌರುಷಂ||

ಪುನಃ ಪುನಃ ಬಂದು ಚುಚ್ಚುವ ಅಪ್ರಿಯರ ವಚನಗಳಿಗೆ ಸಿಟ್ಟನ್ನು ತೋರಿಸು. ಏಕೆಂದರೆ ಸಿಟ್ಟೇ ಪೌರುಷದ ಲಕ್ಷಣ.

05157015a ಕ್ರೋಧೋ ಬಲಂ ತಥಾ ವೀರ್ಯಂ ಜ್ಞಾನಯೋಗೋಽಸ್ತ್ರಲಾಘವಂ|

05157015c ಇಹ ತೇ ಪಾರ್ಥ ದೃಶ್ಯಂತಾಂ ಸಂಗ್ರಾಮೇ ಪುರುಷೋ ಭವ||

ಪಾರ್ಥ! ಸಂಗ್ರಾಮದಲ್ಲಿ ನಿನ್ನ ಕ್ರೋಧ, ಬಲ, ವೀರ್ಯ, ಜ್ಞಾನಯೋಗ ಮತ್ತು ಅಸ್ತ್ರಲಾಘವವನ್ನು ತೋರಿಸು. ಪುರುಷನಾಗು.”

05157016a ತಂ ಚ ತೂಬರಕಂ ಮೂಢಂ ಬಹ್ವಾಶಿನಮವಿದ್ಯಕಂ|

05157016c ಉಲೂಕ ಮದ್ವಚೋ ಬ್ರೂಯಾ ಅಸಕೃದ್ ಭೀಮಸೇನಕಂ||

ಉಲೂಕ! ಆ ಶಂಡ, ಮೂಢ, ತುಂಬಾ ತಿನ್ನುವ, ಅವಿದ್ಯಕ ಭೀಮಸೇನನಿಗೆ ನನ್ನ ಮಾತುಗಳನ್ನು ಮತ್ತೊಮ್ಮೆ ಹೇಳು.

05157017a ಅಶಕ್ತೇನೈವ ಯಚ್ಚಪ್ತಂ ಸಭಾಮಧ್ಯೇ ವೃಕೋದರ|

05157017c ದುಃಶಾಸನಸ್ಯ ರುಧಿರಂ ಪೀಯತಾಂ ಯದಿ ಶಕ್ಯತೇ||

“ವೃಕೋದರ! ಅಶಕ್ತನಂತೆ ಸಭಾಮಧ್ಯದಲ್ಲಿ ಶಪಿಸಿರುವಂತೆ, ಒಂದುವೇಳೆ ಶಕ್ಯನಾದರೆ ದುಃಶಾಸನನ ರಕ್ತವನ್ನು ಕುಡಿ!

05157018a ಲೋಹಾಭಿಹಾರೋ ನಿರ್ವೃತ್ತಃ ಕುರುಕ್ಷೇತ್ರಮಕರ್ದಮಂ|

05157018c ಪುಷ್ಟಾಸ್ತೇಽಶ್ವಾ ಭೃತಾ ಯೋಧಾಃಽಶ್ವೋ ಯುಧ್ಯಸ್ವ ಸಕೇಶವಃ||

ಆಯುಧಗಳಿಗೆ ಅರಕವಿಟ್ಟಾಗಿದೆ, ನಿನ್ನ ಸೈನಿಕರು ಮತ್ತು ಕುದುರೆಗಳು ದಷ್ಟಪುಷ್ಟವಾಗಿವೆ. ಕೇಶವನೊಂದಿಗೆ ಕುರುಕ್ಷೇತ್ರಕ್ಕೆ ಬಂದು ಯುದ್ಧಮಾಡು!”””

ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಉಲೂಕದೂತಾಗಮನ ಪರ್ವಣಿ ದುರ್ಯೋಧನವಾಕ್ಯೇ ಸಪ್ತಪಂಚಾಶದಧಿಕಶತತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಉಲೂಕದೂತಾಗಮನ ಪರ್ವದಲ್ಲಿ ದುರ್ಯೋಧನವಾಕ್ಯದಲ್ಲಿ ನೂರಾಐವತ್ತೇಳನೆಯ ಅಧ್ಯಾಯವು.

Image result for indian motifs

[1] ಜೂಜಾಡುವುದರಲ್ಲಿ ಕುಶಲನಾದವನ ಮಗ

Comments are closed.