ಉದ್ಯೋಗ ಪರ್ವ: ಭಗವದ್ಯಾನ ಪರ್ವ
೯೯
ನಾರದನು ಮಾತಲಿಗೆ ಪಕ್ಷಿಗಳ ಲೋಕವನ್ನು ತೋರಿಸಿದುದು (೧-೧೬).
05099001 ನಾರದ ಉವಾಚ|
05099001a ಅಯಂ ಲೋಕಃ ಸುಪರ್ಣಾನಾಂ ಪಕ್ಷಿಣಾಂ ಪನ್ನಗಾಶಿನಾಂ|
05099001c ವಿಕ್ರಮೇ ಗಮನೇ ಭಾರೇ ನೈಷಾಮಸ್ತಿ ಪರಿಶ್ರಮಃ||
ನಾರದನು ಹೇಳಿದನು: “ಈ ಲೋಕವು ಪನ್ನಗಗಳನ್ನು ತಿನ್ನುವ ಸುಪರ್ಣ ಪಕ್ಷಿಗಳದ್ದು. ಅವರಿಗೆ ವಿಕ್ರಮವನ್ನು ತೋರಿಸುವಲ್ಲಿ, ಸಂಚಾರದಲ್ಲಿ ಮತ್ತು ಭಾರವನ್ನು ಹೊರುವುದರಲ್ಲಿ ಪರಿಶ್ರಮವೆನ್ನುವುದೇ ಇಲ್ಲ.
05099002a ವೈನತೇಯಸುತೈಃ ಸೂತ ಷಡ್ಭಿಸ್ತತಮಿದಂ ಕುಲಂ|
05099002c ಸುಮುಖೇನ ಸುನಾಮ್ನಾ ಚ ಸುನೇತ್ರೇಣ ಸುವರ್ಚಸಾ||
05099003a ಸುರೂಪಪಕ್ಷಿರಾಜೇನ ಸುಬಲೇನ ಚ ಮಾತಲೇ|
ಸೂತ! ಮಾತಲಿ! ಈ ಕುಲವು ವೈನತೇಯನ ಆರು ಪುತ್ರರಿಂದ ನಡೆದಿದೆ: ಸುಮುಖ, ಸುನಾಮ, ಸುನೇತ್ರ, ಸುವರ್ಚಸ, ಸುರೂಪ ಮತ್ತು ಪಕ್ಷಿರಾಜ ಸುಬಲ.
05099003c ವರ್ಧಿತಾನಿ ಪ್ರಸೂತ್ಯಾ ವೈ ವಿನತಾಕುಲಕರ್ತೃಭಿಃ||
05099004a ಪಕ್ಷಿರಾಜಾಭಿಜಾತ್ಯಾನಾಂ ಸಹಸ್ರಾಣಿ ಶತಾನಿ ಚ|
05099004c ಕಶ್ಯಪಸ್ಯ ತತೋ ವಂಶೇ ಜಾತೈರ್ಭೂತಿವಿವರ್ಧನೈಃ||
ವಿನತೆಯ ಕುಲಕರ್ತೃಗಳಾಗಿ ಹುಟ್ಟಿ ಈ ಪಕ್ಷಿರಾಜರು ತಮ್ಮ ಜಾತಿಯನ್ನು ಸಹಸ್ರಾರು ನೂರಾರು ಸಂಖ್ಯೆಗಳಲ್ಲಿ ವರ್ಧಿಸಿದರು. ಹಾಗೆ ವಿವಿಧ ಜಾತಿಗಳ ಕಶ್ಯಪನ ವಂಶವನ್ನು ವೃದ್ಧಿಸಿದರು.
05099005a ಸರ್ವೇ ಹ್ಯೇತೇ ಶ್ರಿಯಾ ಯುಕ್ತಾಃ ಸರ್ವೇ ಶ್ರೀವತ್ಸಲಕ್ಷಣಾಃ|
05099005c ಸರ್ವೇ ಶ್ರಿಯಮಭೀಪ್ಸಂತೋ ಧಾರಯಂತಿ ಬಲಾನ್ಯುತ||
ಇವರೆಲ್ಲರೂ ಶ್ರೀಯಿಂದ ಕೂಡಿದವರು, ಎಲ್ಲರೂ ಶ್ರೀವತ್ಸಲಕ್ಷಣರು, ಎಲ್ಲರೂ ಶ್ರೀಯನ್ನು ಬಯಸುವವರು ಮತ್ತು ಅತಿ ಉನ್ನತ ಭಾರವನ್ನು ಹೊರಬಲ್ಲವರು.
05099006a ಕರ್ಮಣಾ ಕ್ಷತ್ರಿಯಾಶ್ಚೈತೇ ನಿರ್ಘೃಣಾ ಭೋಗಿಭೋಜಿನಃ|
05099006c ಜ್ಞಾತಿಸಂಕ್ಷಯಕರ್ತೃತ್ವಾದ್ಬ್ರಾಹ್ಮಣ್ಯಂ ನ ಲಭಂತಿ ವೈ||
ಕರ್ಮದಲ್ಲಿ ಅವರು ಕ್ಷತ್ರಿಯರೆನಿಸಿಕೊಂಡರೂ ಕರುಣೆಯಿಲ್ಲದೇ ನಾಗಗಳನ್ನು ಭೋಜಿಸುತ್ತಾರೆ. ತಮ್ಮ ದಾಯಾದಿಗಳ ನಾಶಕ್ಕೆ ಕರ್ತೃಗಳಾಗಿರುವುದರಿಂದ ಅವರಿಗೆ ಬ್ರಾಹ್ಮಣ್ಯವು ದೊರೆಯುವುದಿಲ್ಲ.
05099007a ನಾಮಾನಿ ಚೈಷಾಂ ವಕ್ಷ್ಯಾಮಿ ಯಥಾ ಪ್ರಾಧಾನ್ಯತಃ ಶೃಣು|
05099007c ಮಾತಲೇ ಶ್ಲಾಘ್ಯಮೇತದ್ಧಿ ಕುಲಂ ವಿಷ್ಣುಪರಿಗ್ರಹಂ||
ಮಾತಲಿ! ಇವರಲ್ಲಿ ಪ್ರಧಾನರಾದವರ ಹೆಸರುಗಳನ್ನು ಹೇಳುತ್ತೇನೆ. ಕೇಳು. ವಿಷ್ಣುವಿನ ಪರಿಗ್ರಹವನ್ನು ಪಡೆದಿದೆಯೆಂದು ಈ ಕುಲವು ಶ್ಲಾಘನೀಯವಾಗಿದೆ.
05099008a ದೈವತಂ ವಿಷ್ಣುರೇತೇಷಾಂ ವಿಷ್ಣುರೇವ ಪರಾಯಣಂ|
05099008c ಹೃದಿ ಚೈಷಾಂ ಸದಾ ವಿಷ್ಣುರ್ವಿಷ್ಣುರೇವ ಗತಿಃ ಸದಾ||
ವಿಷ್ಣುವೇ ಇವರ ದೇವತೆ. ವಿಷ್ಣುವೇ ಇವರ ಪರಾಯಣ. ಅವರ ಹೃದಯದಲ್ಲಿ ಸದಾ ವಿಷ್ಣುವಿರುತ್ತಾನೆ. ವಿಷ್ಣುವೇ ಇವರ ಸದಾ ಗತಿ.
05099009a ಸುವರ್ಣಚೂಡೋ ನಾಗಾಶೀ ದಾರುಣಶ್ಚಂಡತುಂಡಕಃ|
05099009c ಅನಲಶ್ಚಾನಿಲಶ್ಚೈವ ವಿಶಾಲಾಕ್ಷೋಽಥ ಕುಂಡಲೀ||
05099010a ಕಾಶ್ಯಪಿರ್ಧ್ವಜವಿಷ್ಕಂಭೋ ವೈನತೇಯೋಽಥ ವಾಮನಃ|
05099010c ವಾತವೇಗೋ ದಿಶಾಚಕ್ಷುರ್ನಿಮೇಷೋ ನಿಮಿಷಸ್ತಥಾ||
05099011a ತ್ರಿವಾರಃ ಸಪ್ತವಾರಶ್ಚ ವಾಲ್ಮೀಕಿರ್ದ್ವೀಪಕಸ್ತಥಾ|
05099011c ದೈತ್ಯದ್ವೀಪಃ ಸರಿದ್ದ್ವೀಪಃ ಸಾರಸಃ ಪದ್ಮಕೇಸರಃ||
05099012a ಸುಮುಖಃ ಸುಖಕೇತುಶ್ಚ ಚಿತ್ರಬರ್ಹಸ್ತಥಾನಘಃ|
05099012c ಮೇಘಕೃತ್ಕುಮುದೋ ದಕ್ಷಃ ಸರ್ಪಾಂತಃ ಸೋಮಭೋಜನಃ||
05099013a ಗುರುಭಾರಃ ಕಪೋತಶ್ಚ ಸೂರ್ಯನೇತ್ರಶ್ಚಿರಾಂತಕಃ|
05099013c ವಿಷ್ಣುಧನ್ವಾ ಕುಮಾರಶ್ಚ ಪರಿಬರ್ಹೋ ಹರಿಸ್ತಥಾ||
05099014a ಸುಸ್ವರೋ ಮಧುಪರ್ಕಶ್ಚ ಹೇಮವರ್ಣಸ್ತಥೈವ ಚ|
05099014c ಮಲಯೋ ಮಾತರಿಶ್ವಾ ಚ ನಿಶಾಕರದಿವಾಕರೌ||
ಸುವರ್ಣಚೂಡ, ನಾಗಾಶೀ, ದಾರುಣ, ಚಂಡತುಂಡಕ, ಅನಲ, ಅನಿಲ, ವಿಶಾಲಾಕ್ಷ, ಕುಂಡಲೀ, ಕಾಶ್ಯಪಿ. ದ್ವಜವಿಷ್ಕಂಭ, ವೈನತೇಯ, ವಾಮನ, ವಾತವೇಗ, ದಿಶಾಚಕ್ಷು, ನಿಮೇಷ, ನಿಮಿಷ, ತ್ರಿವಾರ, ಸಪ್ತವಾರ, ವಾಲ್ಮೀಕಿ, ದ್ವೀಪಕ, ದೈತ್ಯದ್ವೀಪ, ಸರಿದ್ವೀಪ, ಸರಸ, ಪದ್ಮಕೇಸರ, ಸುಮುಖ, ಸುಖಕೇತು, ಚಿತ್ರಬರ್ಹ, ಅನಘ, ಮೇಘಕೃತ್, ಕುಮುದ, ದಕ್ಷ, ಸರ್ಪಾಂತ, ಸೋಮಭೋಜನ, ಗುರುಭಾರ, ಕಪೋತ, ಸೂರ್ಯನೇತ್ರ, ಚಿರಾಂತಕ, ವಿಷ್ಣುಧನ್ವಾ, ಕುಮಾರ, ಪರಿಬರ್ಹ, ಹರಿ, ಸುಸ್ವರ, ಮಧುಪರ್ಕ, ಹೇಮವರ್ಣ, ಮಲಯ, ಮಾತರಿ, ನಿಶಾಕರ, ಮತ್ತು ದಿವಾಕರ.
05099015a ಏತೇ ಪ್ರದೇಶಮಾತ್ರೇಣ ಮಯೋಕ್ತಾ ಗರುಡಾತ್ಮಜಾಃ|
05099015c ಪ್ರಾಧಾನ್ಯತೋಽಥ ಯಶಸಾ ಕೀರ್ತಿತಾಃ ಪ್ರಾಣತಶ್ಚ ತೇ||
ನಾನು ಹೇಳಿದ ಗರುಡನ ಈ ಮಕ್ಕಳು ಇದೇ ಪ್ರದೇಶದಲ್ಲಿ ವಾಸಿಸುತ್ತಾರೆ. ಯಸಸ್ಸು, ಕೀರ್ತಿ ಮತ್ತು ಶಕ್ತಿಯಲ್ಲಿ ಪ್ರಧಾನರಾಗಿರುವವರ ಹೆಸರುಗಳನ್ನು ಮಾತ್ರ ಹೇಳಿದ್ದೇನೆ.
05099016a ಯದ್ಯತ್ರ ನ ರುಚಿಃ ಕಾ ಚಿದೇಹಿ ಗಚ್ಚಾವ ಮಾತಲೇ|
05099016c ತಂ ನಯಿಷ್ಯಾಮಿ ದೇಶಂ ತ್ವಾಂ ರುಚಿಂ ಯತ್ರೋಪಲಪ್ಸ್ಯಸೇ||
ಮಾತಲೀ! ಇಲ್ಲಿ ನಿನಗೆ ಯಾರೂ ಇಷ್ಟವಾಗದೇ ಇದ್ದರೆ ಬಾ ಹೋಗೋಣ. ನಿನ್ನನ್ನು ಇನ್ನೊಂದು ದೇಶಕ್ಕೆ ಕರೆದುಕೊಂಡು ಹೋಗುತ್ತೇನೆ. ಅಲ್ಲಿ ನಿನ್ನ ಮಗಳಿಗೆ ಇಷ್ಟವಾಗುವ ವರನು ಸಿಗಬಹುದು.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಭಗವದ್ಯಾನ ಪರ್ವಣಿ ಮಾತಲಿವರಾನ್ವೇಷಣೇ ಏಕೋನಶತತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಭಗವದ್ಯಾನ ಪರ್ವದಲ್ಲಿ ಮಾತಲಿವರಾನ್ವೇಷಣೆಯಲ್ಲಿ ತೊಂಭತ್ತೊಂಭತ್ತನೆಯ ಅಧ್ಯಾಯವು.