ಉದ್ಯೋಗ ಪರ್ವ: ಸೇನೋದ್ಯೋಗ ಪರ್ವ
೪
ದ್ರುಪದನ ಮಾತು
ಸಾತ್ಯಕಿಯ ಮಾತುಗಳನ್ನು ಅನುಮೋದಿಸುತ್ತಾ ದ್ರುಪದನು ಮೃದುವಾಗಿ ಮಾತನಾಡುವವನು ಅಶಕ್ತನೆಂದು ತಿಳಿದುಕೊಳ್ಳುವ ದುರ್ಯೋಧನನೊಂದಿಗೆ ನಯವಾಗಿ ಮಾತನಾಡಬಾರದೆಂದೂ, ದುರ್ಯೋಧನನು ಅವರನ್ನು ಕೇಳಿಕೊಳ್ಳುವುದರ ಮೊದಲೇ ಮಿತ್ರರಲ್ಲಿ ಪ್ರಸ್ತಾವಿಸಿ ಸೇನೆಯನ್ನು ಒಟ್ಟುಗೂಡಿಸಬೇಕೆಂದೂ ಹೇಳಿ (೧-೯), ಮಿತ್ರ ರಾಜರ ಪಟ್ಟಿಯನ್ನು ಮಾಡಿದುದು (೧೦-೨೭).
05004001 ದ್ರುಪದ ಉವಾಚ|
05004001a ಏವಮೇತನ್ಮಹಾಬಾಹೋ ಭವಿಷ್ಯತಿ ನ ಸಂಶಯಃ|
05004001c ನ ಹಿ ದುರ್ಯೋಧನೋ ರಾಜ್ಯಂ ಮಧುರೇಣ ಪ್ರದಾಸ್ಯತಿ||
05004002a ಅನುವರ್ತ್ಸ್ಯತಿ ತಂ ಚಾಪಿ ಧೃತರಾಷ್ಟ್ರಃ ಸುತಪ್ರಿಯಃ|
05004002c ಭೀಷ್ಮದ್ರೋಣೌ ಚ ಕಾರ್ಪಣ್ಯಾನ್ಮೌರ್ಖ್ಯಾದ್ರಾಧೇಯಸೌಬಲೌ||
ದ್ರುಪದನು ಹೇಳಿದನು: “ಮಹಾಬಾಹೋ! ನೀನು ಹೇಳಿದಂತೆಯೇ ಆಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ದುರ್ಯೋಧನನು ಒಳ್ಳೆಯ ಮಾತುಗಳಿಗೆ ರಾಜ್ಯವನ್ನು ಬಿಟ್ಟುಕೊಡುವುದಿಲ್ಲ. ಮಗನ ಮೇಲಿನ ಪ್ರೀತಿಯಿಂದ ಧೃತರಾಷ್ಟ್ರ, ಕಾರ್ಪಣ್ಯತೆಯಿಂದ ಭೀಷ್ಮ-ದ್ರೋಣರು ಮತ್ತು ಮೂರ್ಖತನದಿಂದ ರಾಧೇಯ-ಸೌಬಲರು ಅವನನ್ನೇ ಅನುಸರಿಸುತ್ತಾರೆ.
05004003a ಬಲದೇವಸ್ಯ ವಾಕ್ಯಂ ತು ಮಮ ಜ್ಞಾನೇ ನ ಯುಜ್ಯತೇ|
05004003c ಏತದ್ಧಿ ಪುರುಷೇಣಾಗ್ರೇ ಕಾರ್ಯಂ ಸುನಯಮಿಚ್ಚತಾ||
ಬಲದೇವನ ಮಾತಾದರೋ ನನ್ನ ಜ್ಞಾನಕ್ಕೆ ಸಿಲುಕುವುದಿಲ್ಲ. ಅವನು ಹೇಳಿದುದನ್ನು ಸುನಯರಾಗಿರಲು ಬಯಸುವ ಪುರುಷರ ಮುಂದೆ ಮಾಡಬೇಕು.
05004004a ನ ತು ವಾಚ್ಯೋ ಮೃದು ವಚೋ ಧಾರ್ತರಾಷ್ಟ್ರಃ ಕಥಂ ಚನ|
05004004c ನ ಹಿ ಮಾರ್ದವಸಾಧ್ಯೋಽಸೌ ಪಾಪಬುದ್ಧಿರ್ಮತೋ ಮಮ||
ಆದರೆ ಧಾರ್ತರಾಷ್ಟ್ರನನ್ನು ಮೃದುವಾದ ವಚನಗಳಲ್ಲಿ ಎಂದೂ ಮಾತನಾಡಿಸಬಾರದು. ಪಾಪಬುದ್ಧಿಯ ಅವನನ್ನು ನಯಮಾತುಗಳಿಂದ ಬದಲಾಯಿಸುವುದು ಅಸಾಧ್ಯ ಎಂದು ನನಗನ್ನಿಸುತ್ತದೆ.
05004005a ಗರ್ದಭೇ ಮಾರ್ದವಂ ಕುರ್ಯಾದ್ಗೋಷು ತೀಕ್ಷ್ಣಂ ಸಮಾಚರೇತ್|
05004005c ಮೃದು ದುರ್ಯೋಧನೇ ವಾಕ್ಯಂ ಯೋ ಬ್ರೂಯಾತ್ಪಾಪಚೇತಸಿ||
05004006a ಮೃದು ವೈ ಮನ್ಯತೇ ಪಾಪೋ ಭಾಷ್ಯಮಾಣಮಶಕ್ತಿಜಂ|
05004006c ಜಿತಮರ್ಥಂ ವಿಜಾನೀಯಾದಬುಧೋ ಮಾರ್ದವೇ ಸತಿ||
ಕತ್ತೆಗಳೊಂದಿಗೆ ಸೌಮ್ಯವಾಗಿ ನಡೆದುಕೊಳ್ಳಬೇಕು. ಗೋವುಗಳೊಂದಿಗೆ ತೀಕ್ಷ್ಣವಾಗಿ ನಡೆದುಕೊಳ್ಳಬೇಕು. ಒಂದುವೇಳೆ ದುರ್ಯೋಧನನೊಡನೆ ಮೃದುವಾಗಿ ಮಾತನಾಡಿದರೆ ಆ ಪಾಪಿ ಪಾಪಚೇತಸಿಯು ಮೃದುವಾಗಿ ಮಾತನಾಡುವವನು ಅಶಕ್ತನೆಂದು ತಿಳಿದುಕೊಳ್ಳುತ್ತಾನೆ. ಮೃದುವಾಗಿ ನಡೆದುಕೊಂಡರೆ ಆ ಮೂಢನು ತಾನೇ ಗೆದ್ದೆನೆಂದು ತಿಳಿದುಕೊಂಡುಬಿಡುತ್ತಾನೆ.
05004007a ಏತಚ್ಚೈವ ಕರಿಷ್ಯಾಮೋ ಯತ್ನಶ್ಚ ಕ್ರಿಯತಾಮಿಹ|
05004007c ಪ್ರಸ್ಥಾಪಯಾಮ ಮಿತ್ರೇಭ್ಯೋ ಬಲಾನ್ಯುದ್ಯೋಜಯಂತು ನಃ||
ನಾವು ಇದನ್ನೂ ಮಾಡೋಣ; ತಯಾರಿಯನ್ನೂ ಮಾಡೋಣ! ನಮ್ಮ ಮಿತ್ರರಲ್ಲಿ ಪ್ರಸ್ತಾವಿಸಿ ಸೇನೆಯನ್ನು ಒಟ್ಟುಗೂಡಿಸೋಣ!
05004008a ಶಲ್ಯಸ್ಯ ಧೃಷ್ಟಕೇತೋಶ್ಚ ಜಯತ್ಸೇನಸ್ಯ ಚಾಭಿಭೋಃ|
05004008c ಕೇಕಯಾನಾಂ ಚ ಸರ್ವೇಷಾಂ ದೂತಾ ಗಚ್ಚಂತು ಶೀಘ್ರಗಾಃ||
ಶೀಘ್ರವಾಗಿ ಹೋಗಬಲ್ಲ ದೂತರನ್ನು ಶಲ್ಯ, ದೃಷ್ಟಕೇತು, ಜಯತ್ಸೇನ, ಮತ್ತು ಕೇಕಯ ರಾಜರೆಲ್ಲರ ಬಳಿ ಕಳುಹಿಸೋಣ.
05004009a ಸ ತು ದುರ್ಯೋಧನೋ ನೂನಂ ಪ್ರೇಷಯಿಷ್ಯತಿ ಸರ್ವಶಃ|
05004009c ಪೂರ್ವಾಭಿಪನ್ನಾಃ ಸಂತಶ್ಚ ಭಜಂತೇ ಪೂರ್ವಚೋದಕಂ||
ದುರ್ಯೋಧನನೂ ಕೂಡ ಎಲ್ಲೆಡೆ ದೂತರನ್ನು ಕಳುಹಿಸುತ್ತಾನೆ. ಆದರೆ ಒಳ್ಳೆಯವರು ಮೊದಲು ಬಂದು ಕೇಳಿಕೊಂಡವರ ಕಡೆ ಹೋಗುತ್ತಾರೆ.
05004010a ತತ್ತ್ವರಧ್ವಂ ನರೇಂದ್ರಾಣಾಂ ಪೂರ್ವಮೇವ ಪ್ರಚೋದನೇ|
05004010c ಮಹದ್ಧಿ ಕಾರ್ಯಂ ವೋಢವ್ಯಮಿತಿ ಮೇ ವರ್ತತೇ ಮತಿಃ||
ಆದುದರಿಂದ ಅವಸರ ಮಾಡಿ ಮೊದಲೇ ನರೇಂದ್ರರನ್ನು ಕೇಳಿಕೊಳ್ಳೋಣ. ಮಹಾಕಾರ್ಯವೊಂದು ಕಾಯುತ್ತಿದೆ ಎಂದು ನನಗನ್ನಿಸುತ್ತಿದೆ.
05004011a ಶಲ್ಯಸ್ಯ ಪ್ರೇಷ್ಯತಾಂ ಶೀಘ್ರಂ ಯೇ ಚ ತಸ್ಯಾನುಗಾ ನೃಪಾಃ|
05004011c ಭಗದತ್ತಾಯ ರಾಜ್ಞೇ ಚ ಪೂರ್ವಸಾಗರವಾಸಿನೇ||
05004012a ಅಮಿತೌಜಸೇ ತಥೋಗ್ರಾಯ ಹಾರ್ದಿಕ್ಯಾಯಾಹುಕಾಯ ಚ|
05004012c ದೀರ್ಘಪ್ರಜ್ಞಾಯ ಮಲ್ಲಾಯ ರೋಚಮಾನಾಯ ಚಾಭಿಭೋ||
ಶೀಘ್ರದಲ್ಲಿಯೇ ಶಲ್ಯ ಮತ್ತು ಅವನ ಅನುಯಾಯಿ ನೃಪರಿಗೆ, ಪೂರ್ವಸಾಗರದಲ್ಲಿ ವಾಸಿಸುವ ಅಮಿತೌಜಸ ರಾಜ ಭಗದತ್ತನಿಗೆ, ಉಗ್ರ ಹಾರ್ದಿಕ್ಯ ಮತ್ತು ಆಹುಕರಿಗೆ, ದೀರ್ಘಪ್ರಜ್ಞ, ಮಲ್ಲ, ವಿಭೂ ರೋಚಮಾನನಿಗೆ ಹೇಳಿ ಕಳುಹಿಸೋಣ.
05004013a ಆನೀಯತಾಂ ಬೃಹಂತಶ್ಚ ಸೇನಾಬಿಂದುಶ್ಚ ಪಾರ್ಥಿವಃ|
05004013c ಪಾಪಜಿತ್ಪ್ರತಿವಿಂಧ್ಯಶ್ಚ ಚಿತ್ರವರ್ಮಾ ಸುವಾಸ್ತುಕಃ||
05004014a ಬಾಹ್ಲೀಕೋ ಮುಂಜಕೇಶಶ್ಚ ಚೈದ್ಯಾಧಿಪತಿರೇವ ಚ|
05004014c ಸುಪಾರ್ಶ್ವಶ್ಚ ಸುಬಾಹುಶ್ಚ ಪೌರವಶ್ಚ ಮಹಾರಥಃ||
05004015a ಶಕಾನಾಂ ಪಹ್ಲವಾನಾಂ ಚ ದರದಾನಾಂ ಚ ಯೇ ನೃಪಾಃ|
05004015c ಕಾಂಬೋಜಾ ಋಷಿಕಾ ಯೇ ಚ ಪಶ್ಚಿಮಾನೂಪಕಾಶ್ಚ ಯೇ||
05004016a ಜಯತ್ಸೇನಶ್ಚ ಕಾಶ್ಯಶ್ಚ ತಥಾ ಪಂಚನದಾ ನೃಪಾಃ|
05004016c ಕ್ರಾಥಪುತ್ರಶ್ಚ ದುರ್ಧರ್ಷಃ ಪಾರ್ವತೀಯಾಶ್ಚ ಯೇ ನೃಪಾಃ||
05004017a ಜಾನಕಿಶ್ಚ ಸುಶರ್ಮಾ ಚ ಮಣಿಮಾನ್ಪೌತಿಮತ್ಸ್ಯಕಃ|
05004017c ಪಾಂಸುರಾಷ್ಟ್ರಾಧಿಪಶ್ಚೈವ ಧೃಷ್ಟಕೇತುಶ್ಚ ವೀರ್ಯವಾನ್||
05004018a ಔಡ್ರಶ್ಚ ದಂಡಧಾರಶ್ಚ ಬೃಹತ್ಸೇನಶ್ಚ ವೀರ್ಯವಾನ್|
05004018c ಅಪರಾಜಿತೋ ನಿಷಾದಶ್ಚ ಶ್ರೇಣಿಮಾನ್ವಸುಮಾನಪಿ||
05004019a ಬೃಹದ್ಬಲೋ ಮಹೌಜಾಶ್ಚ ಬಾಹುಃ ಪರಪುರಂಜಯಃ|
05004019c ಸಮುದ್ರಸೇನೋ ರಾಜಾ ಚ ಸಹ ಪುತ್ರೇಣ ವೀರ್ಯವಾನ್||
05004020a ಅದಾರಿಶ್ಚ ನದೀಜಶ್ಚ ಕರ್ಣವೇಷ್ಟಶ್ಚ ಪಾರ್ಥಿವಃ|
05004020c ಸಮರ್ಥಶ್ಚ ಸುವೀರಶ್ಚ ಮಾರ್ಜಾರಃ ಕನ್ಯಕಸ್ತಥಾ||
05004021a ಮಹಾವೀರಶ್ಚ ಕದ್ರುಶ್ಚ ನಿಕರಸ್ತುಮುಲಃ ಕ್ರಥಃ|
05004021c ನೀಲಶ್ಚ ವೀರಧರ್ಮಾ ಚ ಭೂಮಿಪಾಲಶ್ಚ ವೀರ್ಯವಾನ್||
05004022a ದುರ್ಜಯೋ ದಂತವಕ್ತ್ರಶ್ಚ ರುಕ್ಮೀ ಚ ಜನಮೇಜಯಃ|
05004022c ಆಷಾಢೋ ವಾಯುವೇಗಶ್ಚ ಪೂರ್ವಪಾಲೀ ಚ ಪಾರ್ಥಿವಃ||
05004023a ಭೂರಿತೇಜಾ ದೇವಕಶ್ಚ ಏಕಲವ್ಯಸ್ಯ ಚಾತ್ಮಜಃ|
05004023c ಕಾರೂಷಕಾಶ್ಚ ರಾಜಾನಃ ಕ್ಷೇಮಧೂರ್ತಿಶ್ಚ ವೀರ್ಯವಾನ್||
05004024a ಉದ್ಭವಃ ಕ್ಷೇಮಕಶ್ಚೈವ ವಾಟಧಾನಶ್ಚ ಪಾರ್ಥಿವಃ|
05004024c ಶ್ರುತಾಯುಶ್ಚ ದೃಢಾಯುಶ್ಚ ಶಾಲ್ವಪುತ್ರಶ್ಚ ವೀರ್ಯವಾನ್||
05004025a ಕುಮಾರಶ್ಚ ಕಲಿಂಗಾನಾಮೀಶ್ವರೋ ಯುದ್ಧದುರ್ಮದಃ|
ಇವರೆಲ್ಲರನ್ನೂ ಕರೆಸೋಣ: ಬೃಹಂತ, ಪಾರ್ಥಿವ ಸೇನಾಬಿಂದು, ಪಾಪಜಿತ್, ಪ್ರತಿವಿಂಧ್ಯ, ಚಿತ್ರವರ್ಮ, ಸುವಾಸ್ತುಕ, ಬಾಹ್ಲೀಕ, ಚೈದ್ಯಾಧಿಪತಿ, ಮುಂಜಕೇಶ, ಸುಪಾರ್ಶ್ವ, ಸುಬಾಹು, ಮಹಾರಥಿ ಪೌರವ, ಶಕ-ಪಹ್ಲ- ಮತ್ತು ದರದರ ನೃಪರು, ಕಾಂಬೋಜಾ, ಋಷಿಕಾ, ಪಶ್ಚಿಮ ಅನೂಪಕಾ, ಜಯತ್ಸೇನ, ಕಾಶಿ, ಮತ್ತು ಪಂಚನದದ ನೃಪರು, ಜಾನಕಿ, ಸುಶರ್ಮ, ಮಣಿಮಾನ್, ಪೌತಿಪತ್ಸಕ, ಪಾಂಸುರಾಷ್ಟ್ರಾಧಿಪ, ವೀರ್ಯವಾನ್ ದೃಷ್ಟಕೇತು, ಔಡ್ರ, ದಂಡಧಾರ, ವೀರ್ಯವಾನ್ ಬೃಹತ್ಸೇನ, ಅಪರಾಜಿತ, ನಿಷಾದ, ಶ್ರೇನಿಮತ್, ವಸುಮತ್, ಮಹೌಜಸ ಬೃಹದ್ಬಲ, ಪರಪುರಂಜಯ ಬಾಹು, ಪುತ್ರರೊಂದಿಗೆ ವೀರ್ಯವಾನ ರಾಜ ಸಮುದ್ರಸೇನ, ಅದಾರಿ, ನದೀಜ, ರಾಜ ಕರ್ಣವೇಷ್ಟ, ಸಮರ್ಥ, ಸುವೀರ, ಮಾರ್ಜಾರ, ಕನ್ಯಕ, ಮಹಾವೀರ ಕದ್ರು, ನಿಕರಸ್ತುಮುಲ, ಕ್ರಥ, ವೀರಧರ್ಮ ನೀಲ, ವೀರ್ಯವಾನ್ ಭೂಮಿಪಾಲ, ದುರ್ಜಯ ದಂತವಕ್ತ್ರ, ರುಕ್ಮಿ, ಜನಮೇಜಯ, ಆಷಾಢ, ವಾಯುವೇಗ, ಪಾರ್ಥಿವ ಪೂರ್ವಪಾಲೀ, ಭೂರಿತೇಜ ದೇವಕ, ಅವನ ಮಗ ಏಕಲವ್ಯ, ರಾಜ ಕಾರೂಷಕ, ವೀರ್ಯವಾನ ಕ್ಷೇಮಧೂರ್ತಿ, ಉದ್ಭವ, ಕ್ಷೇಮಕ, ಪಾರ್ಥಿವ ವಾಟದಾನ, ಶ್ರುತಾಯು, ದೃಢಾಯು, ವೀರ್ಯವಾನ್ ಶಾಲ್ವಪುತ್ರ, ಕಲಿಂಗರ ರಾಜ ಯುದ್ಧ ಧುರ್ಮದ ಕುಮಾರ.
05004025c ಏತೇಷಾಂ ಪ್ರೇಷ್ಯತಾಂ ಶೀಘ್ರಮೇತದ್ಧಿ ಮಮ ರೋಚತೇ||
05004026a ಅಯಂ ಚ ಬ್ರಾಹ್ಮಣಃ ಶೀಘ್ರಂ ಮಮ ರಾಜನ್ಪುರೋಹಿತಃ|
05004026c ಪ್ರೇಷ್ಯತಾಂ ಧೃತರಾಷ್ಟ್ರಾಯ ವಾಕ್ಯಮಸ್ಮಿನ್ಸಮರ್ಪ್ಯತಾಂ||
05004027a ಯಥಾ ದುರ್ಯೋಧನೋ ವಾಚ್ಯೋ ಯಥಾ ಶಾಂತನವೋ ನೃಪಃ|
05004027c ಧೃತರಾಷ್ಟ್ರೋ ಯಥಾ ವಾಚ್ಯೋ ದ್ರೋಣಶ್ಚ ವಿದುಷಾಂ ವರಃ||
ಇವರೆಲ್ಲರಿಗೂ ಶೀಘ್ರದಲ್ಲಿ ಹೇಳಿಕಳುಹಿಸಬೇಕೆಂದು ನನ್ನ ಬದ್ಧಿಗೆ ಹೊಳೆಯುತ್ತದೆ. ರಾಜನ್! ನನ್ನ ಈ ಪುರೋಹಿತ ಬ್ರಾಹ್ಮಣನನ್ನು ಶೀಘ್ರದಲ್ಲಿಯೇ ಧೃತರಾಷ್ಟ್ರನಲ್ಲಿಗೆ ಕಳುಹಿಸೋಣ. ದುರ್ಯೋಧನನಿಗೆ ಏನು ಹೇಳಬೇಕೆನ್ನುವುದನ್ನೂ, ಶಾಂತನವ, ನೃಪ ಧೃತರಾಷ್ಟ್ರ ಮತ್ತು ವಿದುಷರಲ್ಲಿ ಶ್ರೇಷ್ಠ ದ್ರೋಣನಿಗೆ ಏನು ಹೇಳಬೇಕೆನ್ನುವುದನ್ನೂ ಅವನಿಗೆ ತಿಳಿಸಿಕೊಡು.”
ಇತಿ ಶ್ರೀ ಮಹಾಭಾರತೇ ಉದ್ಯೋಗ ಪರ್ವಣಿ ಸೇನೋದ್ಯೋಗ ಪರ್ವಣಿ ದ್ರುಪದವಾಕ್ಯೇ ಚತುರ್ಥೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ಉದ್ಯೋಗ ಪರ್ವದಲ್ಲಿ ಸೇನೋದ್ಯೋಗ ಪರ್ವದಲ್ಲಿ ದ್ರುಪದವಾಕ್ಯ ಎನ್ನುವ ನಾಲ್ಕನೆಯ ಅಧ್ಯಾಯವು|