ವಿರಾಟ ಪರ್ವ: ಗೋಹರಣ ಪರ್ವ
೬೨
ಅಳಿದುಳಿದ ಕುರುಯೋಧರಿಗೆ ಅರ್ಜುನನು ಅಭಯವನ್ನು ನೀಡಿ (೧-೫), ನಗರಕ್ಕೆ ವಿಜಯದ ವಿಷಯವನ್ನು ತಿಳಿಸುವಂತೆ ಗೋಪಾಲಕರನ್ನು ಕಳಿಸೆಂದು ಉತ್ತರನಿಗೆ ಹೇಳುವುದು (೬-೧೧).
04062001 ವೈಶಂಪಾಯನ ಉವಾಚ|
04062001a ತತೋ ವಿಜಿತ್ಯ ಸಂಗ್ರಾಮೇ ಕುರೂನ್ಗೋವೃಷಭೇಕ್ಷಣಃ|
04062001c ಸಮಾನಯಾಮಾಸ ತದಾ ವಿರಾಟಸ್ಯ ಧನಂ ಮಹತ್||
ವೈಶಂಪಾಯನನು ಹೇಳಿದನು: “ಅನಂತರ ಯುದ್ಧದಲ್ಲಿ ಕೌರವರನ್ನು ಗೆದ್ದು ಗೂಳಿಗಣ್ಣಿನ ಅರ್ಜುನನು ವಿರಾಟನ ದೊಡ್ಡ ಗೋಧನವನ್ನು ಮರಳಿ ತಂದನು.
04062002a ಗತೇಷು ಚ ಪ್ರಭಗ್ನೇಷು ಧಾರ್ತರಾಷ್ಟ್ರೇಷು ಸರ್ವಶಃ|
04062002c ವನಾನ್ನಿಷ್ಕ್ರಮ್ಯ ಗಹನಾದ್ಬಹವಃ ಕುರುಸೈನಿಕಾಃ||
04062003a ಭಯಾತ್ಸಂತ್ರಸ್ತಮನಸಃ ಸಮಾಜಗ್ಮುಸ್ತತಸ್ತತಃ|
04062003c ಮುಕ್ತಕೇಶಾ ವ್ಯದೃಶ್ಯಂತ ಸ್ಥಿತಾಃ ಪ್ರಾಂಜಲಯಸ್ತದಾ||
ಕೌರವರು ಎಲ್ಲರೀತಿಯಿಂದ ಭಗ್ನರಾಗಿ ಹೋಗಲು ಬಹುಮಂದಿ ಕುರುಸೈನಿನಿಕರು ಅಡಗಿದ್ದ ಕಾಡಿನಿಂದ ಹೊರಬಿದ್ದು ಭಯಗೊಂಡ ಮನಸ್ಸುಳ್ಳವರಾಗಿ ಬೇರೆಬೇರೆ ಕಡೆಯಿಂದ ಪಾರ್ಥನ ಬಳಿ ಬಂದರು. ಕೆರಳಿದ ತಲೆಯವರಾಗಿ ಕಂಡುಬಂದ ಅವರು ಆಗ ಕೈಜೋಡಿಸಿ ನಿಂತರು.
04062004a ಕ್ಷುತ್ಪಿಪಾಸಾಪರಿಶ್ರಾಂತಾ ವಿದೇಶಸ್ಥಾ ವಿಚೇತಸಃ|
04062004c ಊಚುಃ ಪ್ರಣಮ್ಯ ಸಂಭ್ರಾಂತಾಃ ಪಾರ್ಥ ಕಿಂ ಕರವಾಮ ತೇ||
ಹಸಿವು ಬಾಯಾರಿಕೆಗಳಿಂದ ಬಳಲಿದ್ದವರೂ ವಿದೇಶದಲ್ಲಿದ್ದವರೂ ಚೈತನ್ಯಹೀನರೂ ಆಗಿದ್ದ ಅವರು ನಮಸ್ಕರಿಸಿ “ಪಾರ್ಥ! ನಾವು ನಿನಗೆ ಏನು ಮಾಡಬೇಕು?” ಎಂದು ದಿಗ್ಭ್ರಾಂತರಾಗಿ ಕೇಳಿದರು.
04062005 ಅರ್ಜುನ ಉವಾಚ|
04062005a ಸ್ವಸ್ತಿ ವ್ರಜತ ಭದ್ರಂ ವೋ ನ ಭೇತವ್ಯಂ ಕಥಂ ಚನ|
04062005c ನಾಹಮಾರ್ತಾಂ ಜಿಘಾಂಸಾಮಿ ಭೃಶಮಾಶ್ವಾಸಯಾಮಿ ವಃ||
ಅರ್ಜುನನು ಹೇಳಿದನು: “ಒಳ್ಳೆಯದು! ಹೋಗಿ! ನಿಮಗೆ ಮಂಗಳವಾಗಲಿ! ಯಾವಕಾರಣದಿಂದಲೂ ಹೆದರಬೇಕಾಗಿಲ್ಲ. ಆರ್ತರನ್ನು ನಾನು ಕೊಲ್ಲಬಯಸುವುದಿಲ್ಲ. ನಿಮಗೆ ಬಹಳವಾಗಿ ಭರವಸೆಯನ್ನು ಕೊಡುತ್ತೇನೆ.””
04062006 ವೈಶಂಪಾಯನ ಉವಾಚ|
04062006a ತಸ್ಯ ತಾಮಭಯಾಂ ವಾಚಂ ಶ್ರುತ್ವಾ ಯೋಧಾಃ ಸಮಾಗತಾಃ|
04062006c ಆಯುಃಕೀರ್ತಿಯಶೋದಾಭಿಸ್ತಮಾಶಿರ್ಭಿರನಂದಯನ್||
ವೈಶಂಪಾಯನನು ಹೇಳಿದನು: “ಬಂದಿದ್ದ ಯೋಧರು ಅವನ ಆ ಅಭಯವಾಕ್ಯವನ್ನು ಕೇಳಿ ಅವನಿಗೆ ಆಯುಷ್ಯ, ಕೀರ್ತಿ, ಯಶಸ್ಸುಗಳನ್ನು ಹಾರೈಸಿ ಅವನನ್ನು ಅಭಿನಂದಿಸಿದರು.
04062007a ತತೋ ನಿವೃತ್ತಾಃ ಕುರವಃ ಪ್ರಭಗ್ನಾ ವಶಮಾಸ್ಥಿತಾಃ|
04062007c ಪಂಥಾನಮುಪಸಂಗಮ್ಯ ಫಲ್ಗುನೋ ವಾಕ್ಯಮಬ್ರವೀತ್||
ಅನಂತರ ಆ ಭಗ್ನ ಕುರುಯೋಧರು ಹಿಂದಿರುಗಿದರು. ತನ್ನ ದಾರಿಹಿಡಿದ ಅರ್ಜುನನನು ಉತ್ತರನಿಗೆ ಈ ಮಾತನ್ನಾಡಿದನು.
04062008a ರಾಜಪುತ್ರ ಪ್ರತ್ಯವೇಕ್ಷ ಸಮಾನೀತಾನಿ ಸರ್ವಶಃ|
04062008c ಗೋಕುಲಾನಿ ಮಹಾಬಾಹೋ ವೀರ ಗೋಪಾಲಕೈಃ ಸಹ||
04062009a ತತೋಽಪರಾಹ್ಣೇ ಯಾಸ್ಯಾಮೋ ವಿರಾಟನಗರಂ ಪ್ರತಿ|
04062009c ಆಶ್ವಾಸ್ಯ ಪಾಯಯಿತ್ವಾ ಚ ಪರಿಪ್ಲಾವ್ಯ ಚ ವಾಜಿನಃ||
“ರಾಜಪುತ್ರ! ಮಹಾಬಾಹೋ! ವೀರ! ಗೋಪಾಲಕರೊಡನೆ ಗೋಸಮೂಹವನ್ನೆಲ್ಲ ಹಿಂದಕ್ಕೆ ತಂದಿದ್ದೀವೆಯೋ ನೋಡು. ಕುದುರೆಗಳನ್ನು ಸಾಂತ್ವನಗೊಳಿಸಿ, ನೀರು ಕುಡಿಯಿಸಿ, ಮೀಯಿಸಿ, ಅನಂತರ ಸಾಯಂಕಾಲ ವಿರಾಟನಗರಕ್ಕೆ ಹೋಗೋಣ.
04062010a ಗಚ್ಛಂತು ತ್ವರಿತಾಶ್ಚೈವ ಗೋಪಾಲಾಃ ಪ್ರೇಷಿತಾಸ್ತ್ವಯಾ|
04062010c ನಗರೇ ಪ್ರಿಯಮಾಖ್ಯಾತುಂ ಘೋಷಯಂತು ಚ ತೇ ಜಯಂ||
ನೀನು ಕಳುಹಿಸುವ ಈ ಗೋಪಾಲಕರು ಬೇಗ ನಗರಕ್ಕೆ ಹೋಗಲಿ. ಪ್ರಿಯವನ್ನು ಹೇಳುವುದಕ್ಕಾಗಿ ನಿನ್ನ ಜಯಘೋಷ ಮಾಡಲಿ.””
04062011 ವೈಶಂಪಾಯನ ಉವಾಚ|
04062011a ಉತ್ತರಸ್ತ್ವರಮಾಣೋಽಥ ದೂತಾನಾಜ್ಞಾಪಯತ್ತತಃ|
04062011c ವಚನಾದರ್ಜುನಸ್ಯೈವ ಆಚಕ್ಷಧ್ವಂ ಜಯಂ ಮಮ||
ವೈಶಂಪಾಯನನು ಹೇಳಿದನು: “ಬಳಿಕ ಉತ್ತರನು ಅರ್ಜುನನ ಮಾತಿನಂತೆ “ನನ್ನ ವಿಜಯವನ್ನು ಸಾರಿ!” ಎಂದು ಶೀಘ್ರವಾಗಿ ದೂತರಿಗೆ ಅಪ್ಪಣೆ ಮಾಡಿದನು.”
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಾಗಮನೇ ದ್ವಿಷಷ್ಟಿತಮೋಽಧ್ಯಾಯಃ|
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಾಗಮನದಲ್ಲಿ ಅರವತ್ತೆರಡನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಃ|
ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-೩/೧೮, ಉಪಪರ್ವಗಳು-೪೭/೧೦೦, ಅಧ್ಯಾಯಗಳು-೬೫೮/೧೯೯೫, ಶ್ಲೋಕಗಳು-೨೧೫೩೯/೭೩೭೮೪