ಆರಣ್ಯಕ ಪರ್ವ: ಮಾರ್ಕಂಡೇಯಸಮಸ್ಯಾ ಪರ್ವ
೨೧೬
ಸ್ಕಂದನ ಮೇಲೆ ಆಕ್ರಮಣ ಮಾಡಲು ದೇವಸೇನೆಯೊಂದಿಗೆ ಇಂದ್ರನು ಬರಲು ಅಗ್ನಿಯು ತಡೆದುದು; ದೇವಸೇನೆಯು ಅಗ್ನಿಯ ಪಕ್ಷವನ್ನು ಸೇರಿದುದು (೧-೧೧). ಒಬ್ಬಂಟಿಗನಾದ ಇಂದ್ರನು ವಜ್ರವನ್ನು ಸ್ಕಂದನ ಮೇಲೆಸೆಯಲು, ಅವನಿಂದ ವಿಶಾಖನು ಜನಿಸಲು, ಇಂದ್ರನು ಭಯದಿಂದ ಸ್ಕಂದನನ್ನು ಸ್ತುತಿಸಿದುದು (೧೨-೧೫).
03216001 ಮಾರ್ಕಂಡೇಯ ಉವಾಚ|
03216001a ಗ್ರಹಾಃ ಸೋಪಗ್ರಹಾಶ್ಚೈವ ಋಷಯೋ ಮಾತರಸ್ತಥಾ|
03216001c ಹುತಾಶನಮುಖಾಶ್ಚಾಪಿ ದೀಪ್ತಾಃ ಪಾರಿಷದಾಂ ಗಣಾಃ||
03216002a ಏತೇ ಚಾನ್ಯೇ ಚ ಬಹವೋ ಘೋರಾಸ್ತ್ರಿದಿವವಾಸಿನಃ|
03216002c ಪರಿವಾರ್ಯ ಮಹಾಸೇನಂ ಸ್ಥಿತಾ ಮಾತೃಗಣೈಃ ಸಹ||
ಮಾರ್ಕಂಡೇಯನು ಹೇಳಿದನು: “ಗ್ರಹಗಳು, ಉಪಗ್ರಹಗಳು, ಋಷಿಗಳು, ಮಾತೃಗಳು, ಹುತಾಶನನೇ ಮೊದಲಾದ ಉರಿಯುವವು, ಪಾರಿಷದ ಗಣಗಳು ಮತ್ತು ಇನ್ನೂ ಅನ್ಯ ಬಹುಸಂಖ್ಯೆಯ ಘೋರ ತ್ರಿದಿವವಾಸಿಗಳು ಮಾತೃಗಣಗಳೊಂದಿಗೆ ಮಹಾಸೇನನನ್ನು ಸುತ್ತುವರೆದು ನಿಂತರು.
03216003a ಸಂದಿಗ್ಧಂ ವಿಜಯಂ ದೃಷ್ಟ್ವಾ ವಿಜಯೇಪ್ಸುಃ ಸುರೇಶ್ವರಃ|
03216003c ಆರುಹ್ಯೈರಾವತಸ್ಕಂಧಂ ಪ್ರಯಯೌ ದೈವತೈಃ ಸಹ|
ವಿಜಯವು ಸಂದಿಗ್ಧವೆಂದು ನೋಡಿ ವಿಜಯವನ್ನು ಬಯಸಿದ ಸುರೇಶ್ವರನು ಐರಾವತವನ್ನೇರಿ ದೇವತೆಗಳ ಸಹಿತ ಸ್ಕಂದನಲ್ಲಿಗೆ ಮುಂದುವರೆದನು.
03216003e ವಿಜಿಘಾಂಸುರ್ಮಹಾಸೇನಮಿಂದ್ರಸ್ತೂರ್ಣತರಂ ಯಯೌ||
03216004a ಉಗ್ರಂ ತಚ್ಚ ಮಹಾವೇಗಂ ದೇವಾನೀಕಂ ಮಹಾಪ್ರಭಂ|
03216004c ವಿಚಿತ್ರಧ್ವಜಸನ್ನಾಹಂ ನಾನಾವಾಹನಕಾರ್ಮುಕಂ|
ಮಹಾಸೇನನನ್ನು ಕೊಲ್ಲಲು ಇಂದ್ರನ ಉತ್ತಮ ಮಹಾಪ್ರಭೆಯುಳ್ಳ, ವಿಚಿತ್ರ ಧ್ವಜಗಳಿಂದ ಸನ್ನಿದ್ಧವಾದ, ನಾನಾ ವಾಹನ-ಕಾರ್ಮುಕಗಳಿಂದ ಕೂಡಿದ ದೇವತೆಗಳ ಸೇನೆಯು ಉಗ್ರವಾಗಿ ಕೂಗುತ್ತಾ ಮಹಾವೇಗದಿಂದ ಹೊರಟಿತು.
03216004e ಪ್ರವರಾಂಬರಸಂವೀತಂ ಶ್ರಿಯಾ ಜುಷ್ಟಮಲಂಕೃತಂ||
03216005a ವಿಜಿಘಾಂಸುಂ ತದಾಯಾಂತಂ ಕುಮಾರಃ ಶಕ್ರಮಭ್ಯಯಾತ್|
ಶ್ರೇಷ್ಠವಾದ ಬಟ್ಟೆಗಳನ್ನು ಧರಿಸಿದ್ದ, ಆಭರಣಗಳಿಂದ ಸುಂದರವಾಗಿ ಅಲಂಕೃತನಾಗಿ ಕೊಲ್ಲಲು ಅಲ್ಲಿಗೆ ಬರುತ್ತಿದ್ದ ಶಕ್ರನನ್ನು ಕುಮಾರನು ಎದುರಿಸಿದನು.
03216005c ವಿನದನ್ಪಥಿ ಶಕ್ರಸ್ತು ದ್ರುತಂ ಯಾತಿ ಮಹಾಬಲಃ|
03216005e ಸಂಹರ್ಷಯನ್ದೇವಸೇನಾಂ ಜಿಘಾಂಸುಃ ಪಾವಕಾತ್ಮಜಂ||
ದಾರಿಯಲ್ಲಿ ಶಕ್ರನು ಮಹಾಬಲವನ್ನುಪಯೋಗಿಸಿ ಜೋರಾಗಿ ಕೂಗಲು ಪಾವಕಾತ್ಮಜನನ್ನು ಕೊಲ್ಲಲು ಬರುತ್ತಿದ್ದ ದೇವಸೇನೆಯು ಹರ್ಷಗೊಂಡಿತು.
03216006a ಸಂಪೂಜ್ಯಮಾನಸ್ತ್ರಿದಶೈಸ್ತಥೈವ ಪರಮರ್ಷಿಭಿಃ|
03216006c ಸಮೀಪಮುಪಸಂಪ್ರಾಪ್ತಃ ಕಾರ್ತ್ತಿಕೇಯಸ್ಯ ವಾಸವಃ||
ತ್ರಿದಶಸ್ತರಿಂದ ಮತ್ತು ಪರಮಋಷಿಗಳಿಂದ ಸಂಪೂಜ್ಯನಾಗಿ ವಾಸವನು ಕಾರ್ತಿಕೇಯನ ಸಮೀಪಕ್ಕೆ ಬಂದನು.
03216007a ಸಿಂಹನಾದಂ ತತಶ್ಚಕ್ರೇ ದೇವೇಶಃ ಸಹಿತಃ ಸುರೈಃ|
03216007c ಗುಹೋಽಪಿ ಶಬ್ದಂ ತಂ ಶ್ರುತ್ವಾ ವ್ಯನದತ್ಸಾಗರೋ ಯಥಾ||
ಆಗ ಸುರರೊಂದಿಗೆ ದೇವೇಶನು ಸಿಂಹನಾದವನ್ನು ಗೈದನು. ಅದನ್ನು ಕೇಳಿ ಗುಹನೂ ಕೂಡ ಸಾಗರದಂತೆ ಜೋರಾಗಿ ಕೂಗಿದನು.
03216008a ತಸ್ಯ ಶಬ್ದೇನ ಮಹತಾ ಸಮುದ್ಧೂತೋದಧಿಪ್ರಭಂ|
03216008c ಬಭ್ರಾಮ ತತ್ರ ತತ್ರೈವ ದೇವಸೈನ್ಯಮಚೇತನಂ||
ಅವನ ಆ ಮಹಾ ಶಬ್ಧದಿಂದ ದೇವಸೇನೆಯು ಸಮುದ್ರದಂತೆ ಕ್ಷೋಭೆಗೊಂಡಿತು ಮತ್ತು ಎಲ್ಲರೂ ಎಲ್ಲಿದ್ದರೋ ಅಲ್ಲಿಯೇ ಅಚೇತನರಾಗಿ ನಿಂತರು.
03216009a ಜಿಘಾಂಸೂನುಪಸಂಪ್ರಾಪ್ತಾನ್ದೇವಾನ್ದೃಷ್ಟ್ವಾ ಸ ಪಾವಕಿಃ|
03216009c ವಿಸಸರ್ಜ ಮುಖಾತ್ಕ್ರುದ್ಧಃ ಪ್ರವೃದ್ಧಾಃ ಪಾವಕಾರ್ಚಿಷಃ|
03216009e ತಾ ದೇವಸೈನ್ಯಾನ್ಯದಹನ್ವೇಷ್ಟಮಾನಾನಿ ಭೂತಲೇ||
ತನ್ನನ್ನು ಕೊಲ್ಲಲು ಬಂದ ದೇವತೆಗಳನ್ನು ನೋಡಿ ಆ ಪಾವಕಿಯು ಕೃದ್ಧನಾಗಿ ಬಾಯಿಯಿಂದ ಜೋರಾಗಿ ಉರಿಯುತ್ತಿರುವ ಅಗ್ನಿಯ ಜ್ವಾಲೆಗಳನ್ನು ಹೊರಹಾಕಿದನು. ಅದು ದೇವಸೇನೆಯನ್ನು ಸುಟ್ಟು ನೆಲದಮೇಲೆ ಬೀಳಿಸಿತು.
03216010a ತೇ ಪ್ರದೀಪ್ತಶಿರೋದೇಹಾಃ ಪ್ರದೀಪ್ತಾಯುಧವಾಹನಾಃ|
03216010c ಪ್ರಚ್ಯುತಾಃ ಸಹಸಾ ಭಾಂತಿ ಚಿತ್ರಾಸ್ತಾರಾಗಣಾ ಇವ||
ಅವರ ಶಿರಗಳು, ದೇಹಗಳು, ಆಯುಧ, ವಾಹನಗಳು ಆ ಬೆಂಕಿಯಲ್ಲಿ ಹತ್ತಿ ಉರಿಯತೊಡಗಿದವು. ಕ್ಷಣದಲ್ಲಿಯೇ ಅವರು ಮಂಡಲಗಳಿಂದ ಕಿತ್ತುಬಿದ್ದ ನಕ್ಷತ್ರಗಳ ಗುಂಪುಗಳಂತೆ ತೋರಿದರು.
03216011a ದಹ್ಯಮಾನಾಃ ಪ್ರಪನ್ನಾಸ್ತೇ ಶರಣಂ ಪಾವಕಾತ್ಮಜಂ|
03216011c ದೇವಾ ವಜ್ರಧರಂ ತ್ಯಕ್ತ್ವಾ ತತಃ ಶಾಂತಿಮುಪಾಗತಾಃ||
ಉರಿಯುತ್ತಿದ್ದ ದೇವತೆಗಳು ವಜ್ರಧರನನ್ನು ತ್ಯಜಿಸಿ ಪಾವಕಾತ್ಮಜನನ್ನು ಶರಣು ಹೊಕ್ಕರು. ಹಾಗೆ ಅಲ್ಲಿ ಶಾಂತಿಯುಂಟಾಯಿತು.
03216012a ತ್ಯಕ್ತೋ ದೇವೈಸ್ತತಃ ಸ್ಕಂದೇ ವಜ್ರಂ ಶಕ್ರೋಽಭ್ಯವಾಸೃಜತ್|
03216012c ತದ್ವಿಸೃಷ್ಟಂ ಜಘಾನಾಶು ಪಾರ್ಶ್ವಂ ಸ್ಕಂದಸ್ಯ ದಕ್ಷಿಣಂ|
03216012e ಬಿಭೇದ ಚ ಮಹಾರಾಜ ಪಾರ್ಶ್ವಂ ತಸ್ಯ ಮಹಾತ್ಮನಃ||
ದೇವತೆಗಳಿಂದ ತ್ಯಜಿಸಲ್ಪಟ್ಟ ಶಕ್ರನು ವಜ್ರವನ್ನು ಸ್ಕಂದನ ಮೇಲೆ ಎಸೆದನು. ಅದು ಸ್ಕಂದನ ಬಲಪಾರ್ಶ್ವವನ್ನು ಹೊಕ್ಕು ಆ ಮಹಾತ್ಮನ ಪಾರ್ಶ್ವವನ್ನು ಕತ್ತರಿಸಿತು.
03216013a ವಜ್ರಪ್ರಹಾರಾತ್ಸ್ಕಂದಸ್ಯ ಸಂಜಾತಃ ಪುರುಷೋಽಪರಃ|
03216013c ಯುವಾ ಕಾಂಚನಸನ್ನಾಹಃ ಶಕ್ತಿಧೃಗ್ದಿವ್ಯಕುಂಡಲಃ|
03216013e ಯದ್ವಜ್ರವಿಶನಾಜ್ಜಾತೋ ವಿಶಾಖಸ್ತೇನ ಸೋಽಭವತ್||
ವಜ್ರಪ್ರಹಾರದಿಂದ ಸ್ಕಂದನಲ್ಲಿ ಇನ್ನೊಬ್ಬ ಪುರುಷನು ಹುಟ್ಟಿದನು. ಆ ಯುವಕನು ಕಾಂಚನದ ಪ್ರಭೆಯನ್ನು ಹೊಂದಿದ್ದು, ಶಕ್ತಿಯನ್ನು ಹಿಡಿದಿದ್ದನು ಮತ್ತು ದಿವ್ಯಕುಂಡಲಗಳನ್ನು ಧರಿಸಿದ್ದನು. ವಜ್ರದ ಹೊಡೆತಕ್ಕೆ ಸಿಕ್ಕು ಹುಟ್ಟಿದುದರಿಂದ ಅವನು ವಿಶಾಖ ಎಂದಾದನು.
03216014a ತಂ ಜಾತಮಪರಂ ದೃಷ್ಟ್ವಾ ಕಾಲಾನಲಸಮದ್ಯುತಿಂ|
03216014c ಭಯಾದಿಂದ್ರಸ್ತತಃ ಸ್ಕಂದಂ ಪ್ರಾಂಜಲಿಃ ಶರಣಂ ಗತಃ||
ಕಾಲಾನಲಸಮದ್ಯುತಿಯಾಗಿದ್ದ ಇನ್ನೊಬ್ಬನು ಹುಟ್ಟಿದ್ದುದನ್ನು ನೋಡಿ ಇಂದ್ರನು ಭಯದಿಂದ ಕೈಮುಗಿದು ಸ್ತುತಿಸಿ ಸ್ಕಂದನ ಶರಣು ಹೋದನು.
03216015a ತಸ್ಯಾಭಯಂ ದದೌ ಸ್ಕಂದಃ ಸಹಸೈನ್ಯಸ್ಯ ಸತ್ತಮ|
03216015c ತತಃ ಪ್ರಹೃಷ್ಟಾಸ್ತ್ರಿದಶಾ ವಾದಿತ್ರಾಣ್ಯಭ್ಯವಾದಯನ್||
ಆಗ ಸತ್ತಮ ಸ್ಕಂದನು ಸೈನ್ಯದೊಂದಿಗೆ ಅವನಿಗೆ ಅಭಯವನ್ನಿತ್ತನು. ತ್ರಿದಶರು ಪ್ರಹೃಷ್ಠರಾಗಿ ಕೈಗಳನ್ನು ಮೇಲೆತ್ತಿ ನಮಸ್ಕರಿಸಿದರು.”
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಅಂಗೀರಸೋಪಾಖ್ಯಾನೇ ಇಂದ್ರಸ್ಕಂದಸಮಾಗಮೇ ಷಷ್ಟದಶಾಧಿಕದ್ವಿಶತತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಅಂಗೀರಸೋಪಾಖ್ಯಾನದಲ್ಲಿ ಇಂದ್ರಸ್ಕಂದಸಮಾಗಮದಲ್ಲಿ ಇನ್ನೂರಾಹದಿನಾರನೆಯ ಅಧ್ಯಾಯವು.