Aranyaka Parva: Chapter 288

ಆರಣ್ಯಕ ಪರ್ವ: ಕುಂಡಲಾಹರಣ ಪರ್ವ

೨೮೮

ಕುಂತಿಯು ಒಪ್ಪಿಕೊಳ್ಳಲು ರಾಜನು ಅವಳನ್ನು ಮುನಿಸೇವೆಗೆ ನಿಯೋಜಿಸಿದ್ದು (೧-೧೯).

03288001 ಕುಂತ್ಯುವಾಚ|

03288001a ಬ್ರಾಹ್ಮಣಂ ಯಂತ್ರಿತಾ ರಾಜನುಪಸ್ಥಾಸ್ಯಾಮಿ ಪೂಜಯಾ|

03288001c ಯಥಾಪ್ರತಿಜ್ಞಂ ರಾಜೇಂದ್ರ ನ ಚ ಮಿಥ್ಯಾ ಬ್ರವೀಮ್ಯಹಂ||

ಕುಂತಿಯು ಹೇಳಿದಳು: “ರಾಜನ್! ರಾಜೇಂದ್ರ! ಪ್ರಯತ್ನಿಸಿ ಬ್ರಾಹ್ಮಣನನ್ನು ನಿನ್ನ ಪ್ರತಿಜ್ಞೆಯಂತೆ ಪೂಜಿಸಿ ಸೇವಿಸುತ್ತೇನೆ. ನಾನು ಸುಳ್ಳನ್ನಾಡುವುದಿಲ್ಲ.

03288002a ಏಷ ಚೈವ ಸ್ವಭಾವೋ ಮೇ ಪೂಜಯೇಯಂ ದ್ವಿಜಾನಿತಿ|

03288002c ತವ ಚೈವ ಪ್ರಿಯಂ ಕಾರ್ಯಂ ಶ್ರೇಯಶ್ಚೈತತ್ಪರಂ ಮಮ||

ದ್ವಿಜರನ್ನು ಪೂಜಿಸುವುದೇ ನನ್ನ ಸ್ವಭಾವ. ನಿನಗೆ ಪ್ರಿಯವಾದುದನ್ನು ಮಾಡುವುದೂ ನನ್ನ ಪರಮ ಶ್ರೇಯಸ್ಸು.

03288003a ಯದ್ಯೇವೈಷ್ಯತಿ ಸಾಯಾಹ್ನೇ ಯದಿ ಪ್ರಾತರಥೋ ನಿಶಿ|

03288003c ಯದ್ಯರ್ಧರಾತ್ರೇ ಭಗವಾನ್ನ ಮೇ ಕೋಪಂ ಕರಿಷ್ಯತಿ||

ಈ ಭಗವಾನನು ಸಾಯಂಕಾಲ ಅಥವಾ ಬೆಳಿಗ್ಗೆ ಅಥವಾ ರಾತ್ರಿ ಅಥವಾ ಮಧ್ಯರಾತ್ರಿಯಲ್ಲಿಯೇ ಬರಲಿ ಅವನು ನನ್ನ ಮೇಲೆ ಕುಪಿತನಾಗುವಂತೆ ಮಾಡುವುದಿಲ್ಲ.

03288004a ಲಾಭೋ ಮಮೈಷ ರಾಜೇಂದ್ರ ಯದ್ವೈ ಪೂಜಯತೀ ದ್ವಿಜಾನ್|

03288004c ಆದೇಶೇ ತವ ತಿಷ್ಠಂತೀ ಹಿತಂ ಕುರ್ಯಾಂ ನರೋತ್ತಮ||

ರಾಜೇಂದ್ರ! ನಿನ್ನ ಆದೇಶದಂತೆ ದ್ವಿಜರನ್ನು ಪೂಜಿಸುವುದು ನನ್ನ ಲಾಭದಲ್ಲಿದೆ. ನರೋತ್ತಮ! ನಾನು ಹಿತವಾದುದನ್ನೇ ಮಾಡಲು ನಿಂತಿದ್ದೇನೆ.

03288005a ವಿಸ್ರಬ್ಧೋ ಭವ ರಾಜೇಂದ್ರ ನ ವ್ಯಲೀಕಂ ದ್ವಿಜೋತ್ತಮಃ|

03288005c ವಸನ್ಪ್ರಾಪ್ಸ್ಯತಿ ತೇ ಗೇಹೇ ಸತ್ಯಮೇತದ್ಬ್ರವೀಮಿ ತೇ||

ರಾಜೇಂದ್ರ! ಚಿಂತೆಯಿಲ್ಲದವನಾಗಿರು. ನಿನ್ನ ಮನೆಯಲ್ಲಿ ವಾಸಿಸಿರುವಾಗ ಈ ದ್ವಿಜೋತ್ತಮನು ಎಂದೂ ಕಡೆಗಣಿಸಲ್ಪಡುವುದಿಲ್ಲ. ಸತ್ಯವನ್ನೇ ನಿನಗೆ ಹೇಳುತ್ತಿದ್ದೇನೆ.

03288006a ಯತ್ಪ್ರಿಯಂ ಚ ದ್ವಿಜಸ್ಯಾಸ್ಯ ಹಿತಂ ಚೈವ ತವಾನಘ|

03288006c ಯತಿಷ್ಯಾಮಿ ತಥಾ ರಾಜನ್ವ್ಯೇತು ತೇ ಮಾನಸೋ ಜ್ವರಃ||

ಅನಘ! ದ್ವಿಜನಿಗೆ ಪ್ರಿಯವಾದುದನ್ನೂ ನಿನಗೆ ಹಿತವಾದುದನ್ನೂ ಮಾಡಲು ಪ್ರಯತ್ನಿಸುತ್ತೇನೆ. ರಾಜನ್! ನಿನ್ನ ಈ ಮಾನಸಿಕ ಜ್ವರವನ್ನು ತೊರೆ.

03288007a ಬ್ರಾಹ್ಮಣಾ ಹಿ ಮಹಾಭಾಗಾಃ ಪೂಜಿತಾಃ ಪೃಥಿವೀಪತೇ|

03288007c ತಾರಣಾಯ ಸಮರ್ಥಾಃ ಸ್ಯುರ್ವಿಪರೀತೇ ವಧಾಯ ಚ||

ಪೃಥಿವೀಪತೇ! ಮಹಾಭಾಗ ಬ್ರಾಹ್ಮಣರು ಪೂಜಿತರಾದರೆ ದಾಟಿಸಲು ಮತ್ತು ವಿಪರೀತವಾದರೆ ವಧಿಸಲು ಸಮರ್ಥರು.

03288008a ಸಾಹಮೇತದ್ವಿಜಾನಂತೀ ತೋಷಯಿಷ್ಯೇ ದ್ವಿಜೋತ್ತಮಂ|

03288008c ನ ಮತ್ಕೃತೇ ವ್ಯಥಾಂ ರಾಜನ್ಪ್ರಾಪ್ಸ್ಯಸಿ ದ್ವಿಜಸತ್ತಮಾತ್||

ಈ ವಿಷಯವನ್ನು ತಿಳಿದುಕೊಂಡೇ ನಾನು ದ್ವಿಜೋತ್ತಮನನ್ನು ತೃಪ್ತಿಗೊಳಿಸುತ್ತೇನೆ. ರಾಜನ್! ನನ್ನಿಂದಾಗಿ ಈ ದ್ವಿಜಸತ್ತಮನಿಂದ ನಿನಗೆ ವ್ಯಥೆಯನ್ನು ತರುವುದಿಲ್ಲ.

03288009a ಅಪರಾಧೇ ಹಿ ರಾಜೇಂದ್ರ ರಾಜ್ಞಾಮಶ್ರೇಯಸೇ ದ್ವಿಜಾಃ|

03288009c ಭವಂತಿ ಚ್ಯವನೋ ಯದ್ವತ್ಸುಕನ್ಯಾಯಾಃ ಕೃತೇ ಪುರಾ||

ರಾಜೇಂದ್ರ! ಹಿಂದೆ ಸುಕನ್ಯೆಯಿಂದ ಚ್ಯವನನು[1] ಹೇಗೋ ಹಾಗೆ ಅಪರಾಧದಿಂದ ದ್ವಿಜರು ರಾಜರಿಗೆ ಅಶ್ರೇಯಸ್ಸನ್ನು ತರುತ್ತಾರೆ.

03288010a ನಿಯಮೇನ ಪರೇಣಾಹಮುಪಸ್ಥಾಸ್ಯೇ ದ್ವಿಜೋತ್ತಮಂ|

03288010c ಯಥಾ ತ್ವಯಾ ನರೇಂದ್ರೇದಂ ಭಾಷಿತಂ ಬ್ರಾಹ್ಮಣಂ ಪ್ರತಿ||

ನರೇಂದ್ರ! ನೀನು ಬ್ರಾಹ್ಮಣನಿಗೆ ಮಾತುಕೊಟ್ಟಂತೆ ನಾನು ಪರಮ ನಿಯಮದಿಂದ ಈ ದ್ವಿಜೋತ್ತಮನ ಸೇವೆಯನ್ನು ಮಾಡುತ್ತೇನೆ.”

03288011 ರಾಜೋವಾಚ|

03288011a ಏವಮೇತತ್ತ್ವಯಾ ಭದ್ರೇ ಕರ್ತವ್ಯಮವಿಶಂಕಯಾ|

03288011c ಮದ್ಧಿತಾರ್ಥಂ ಕುಲಾರ್ಥಂ ಚ ತಥಾತ್ಮಾರ್ಥಂ ಚ ನಂದಿನಿ||

ರಾಜನು ಹೇಳಿದನು: “ಭದ್ರೇ! ನಂದಿನೀ! ಹೌದು. ನೀನು ಶಂಕೆಯಿಲ್ಲದೇ ನನಗಾಗಿ, ನನ್ನ ಕುಲಕ್ಕಾಗಿ ಮತ್ತು ನಿನಗಾಗಿಯೂ ಈ ಕರ್ತವ್ಯವನ್ನು ಮಾಡಬೇಕು.””

03288012 ವೈಶಂಪಾಯನ ಉವಾಚ|

03288012a ಏವಮುಕ್ತ್ವಾ ತು ತಾಂ ಕನ್ಯಾಂ ಕುಂತಿಭೋಜೋ ಮಹಾಯಶಾಃ|

03288012c ಪೃಥಾಂ ಪರಿದದೌ ತಸ್ಮೈ ದ್ವಿಜಾಯ ಸುತವತ್ಸಲಃ||

ವೈಶಂಪಾಯನನು ಹೇಳಿದನು: “ಹೀಗೆ ಹೇಳಿ, ಸುತವತ್ಸಲ ಮಹಾಯಶ ಕುಂತಿಭೋಜನು ತನ್ನ ಕನ್ಯೆ ಪೃಥೆಯನ್ನು ಆ ದ್ವಿಜನಿಗೆ ದಾಸಿಯಾಗಿ ಕೊಟ್ಟನು.

03288013a ಇಯಂ ಬ್ರಹ್ಮನ್ಮಮ ಸುತಾ ಬಾಲಾ ಸುಖವಿವರ್ಧಿತಾ|

03288013c ಅಪರಾಧ್ಯೇತ ಯತ್ಕಿಂ ಚಿನ್ನ ತತ್ಕಾರ್ಯಂ ಹೃದಿ ತ್ವಯಾ||

“ಬ್ರಹ್ಮನ್! ಇವಳು ನನ್ನ ಮಗಳು ಬಾಲಕಿಯು ಸುಖದಿಂದ ಬೆಳೆಯುತ್ತಿದ್ದಾಳೆ. ಅವಳಿಂದ ಏನಾದರೂ ಅಪರಾಧವಾದರೆ ನಿನ್ನ ಹೃದಯಕ್ಕೆ ತೆಗೆದುಕೊಳ್ಳಬೇಡ.

03288014a ದ್ವಿಜಾತಯೋ ಮಹಾಭಾಗಾ ವೃದ್ಧಬಾಲತಪಸ್ವಿಷು|

03288014c ಭವಂತ್ಯಕ್ರೋಧನಾಃ ಪ್ರಾಯೋ ವಿರುದ್ಧೇಷ್ವಪಿ ನಿತ್ಯದಾ||

ಮಹಾಭಾಗ ದ್ವಿಜರು ನಿತ್ಯವೂ ವೃದ್ಧ, ಬಾಲ ಮತ್ತು ತಪಸ್ವಿಗಳು ವಿರುದ್ಧವಾಗಿ ನಡೆದುಕೊಂಡರೂ ಅವರ ಮೇಲೆ ಕೋಪಗೊಳ್ಳುವುದಿಲ್ಲ.

03288015a ಸುಮಹತ್ಯಪರಾಧೇಽಪಿ ಕ್ಷಾಂತಿಃ ಕಾರ್ಯಾ ದ್ವಿಜಾತಿಭಿಃ|

03288015c ಯಥಾಶಕ್ತಿ ಯಥೋತ್ಸಾಹಂ ಪೂಜಾ ಗ್ರಾಹ್ಯಾ ದ್ವಿಜೋತ್ತಮ||

ದ್ವಿಜೋತ್ತಮ! ಅಪರಾಧವು ಅತೀ ದೊಡ್ಡದಾದರೂ ದ್ವಿಜರು ಕ್ಷಮಿಸುತ್ತಾರೆ. ಯಥಾಶಕ್ತಿಯ ಈ ಪೂಜೆಯನ್ನು ಯಥೋತ್ಸಾಹದಿಂದ ಸ್ವೀಕರಿಸು.”

03288016a ತಥೇತಿ ಬ್ರಾಹ್ಮಣೇನೋಕ್ತೇ ಸ ರಾಜಾ ಪ್ರೀತಮಾನಸಃ|

03288016c ಹಂಸಚಂದ್ರಾಂಶುಸಂಕಾಶಂ ಗೃಹಮಸ್ಯ ನ್ಯವೇದಯತ್||

“ಹಾಗೆಯೇ ಆಗಲಿ!” ಎಂದು ಅವನು ಹೇಳಲು ರಾಜನು ಪ್ರೀತನಾಗಿ ಹಂಸ ಮತ್ತು ಚಂದ್ರನ ಕಿರಣಗಳಿಗೆ ಸಮಾನ ಬಣ್ಣದ ಗೃಹವನ್ನು ನಿವೇದಿಸಿದನು.

03288017a ತತ್ರಾಗ್ನಿಶರಣೇ ಕೃಛ್ರಮಾಸನಂ ತಸ್ಯ ಭಾನುಮತ್|

03288017c ಆಹಾರಾದಿ ಚ ಸರ್ವಂ ತತ್ತಥೈವ ಪ್ರತ್ಯವೇದಯತ್||

ಅಲ್ಲಿ ಅಗ್ನಿಯ ಪಕ್ಕದಲ್ಲಿ ಅವನಿಗೆ ಸುಂದರ ಪೀಠವನ್ನು ಒದಗಿಸಿದನು. ಅಹಾರಾದಿ ಸರ್ವವನ್ನೂ ಹಾಗೆಯೇ ಒದಗಿಸಿದನು.

03288018a ನಿಕ್ಷಿಪ್ಯ ರಾಜಪುತ್ರೀ ತು ತಂದ್ರೀಂ ಮಾನಂ ತಥೈವ ಚ|

03288018c ಆತಸ್ಥೇ ಪರಮಂ ಯತ್ನಂ ಬ್ರಾಹ್ಮಣಸ್ಯಾಭಿರಾಧನೇ||

ರಾಜಪುತ್ರಿಯು ಆಲಸ್ಯ ಮತ್ತು ಜಂಬವನ್ನು ಬದಿಗಿಟ್ಟು ಬ್ರಾಹ್ಮಣನ ಆರಾಧನೆಯಲ್ಲಿ ಪರಮ ಪ್ರಯತ್ನದಿಂದ ತನ್ನನ್ನು ತೊಡಗಿಸಿಕೊಂಡಳು.

03288019a ತತ್ರ ಸಾ ಬ್ರಾಹ್ಮಣಂ ಗತ್ವಾ ಪೃಥಾ ಶೌಚಪರಾ ಸತೀ|

03288019c ವಿಧಿವತ್ಪರಿಚಾರಾರ್ಹಂ ದೇವವತ್ಪರ್ಯತೋಷಯತ್||

ಅಲ್ಲಿ ಆ ಸತೀ ಪೃಥಾಳು ಶುಚಿಯಾಗಿದ್ದುಕೊಂಡು ವಿಧಿವತ್ತಾಗಿ ದೇವನನ್ನು ಸಂತೋಷಗೊಳಿಸುವಂತೆ ಅವನ ಪರಿಚಾರಿಕೆಯಾಗಿದ್ದಳು.”

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಕುಂಡಲಾಹರಣ ಪರ್ವಣಿ ಪೃಥಾದ್ವಿಜಪರಿಚರ್ಯಾಯಾಂ ಅಷ್ಟಶೀತ್ಯಧಿಕದ್ವಿಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಕುಂಡಲಾಹರಣ ಪರ್ವದಲ್ಲಿ ಪೃಥಾದ್ವಿಜಪರಿಚರ್ಯೆಯಲ್ಲಿ ಇನ್ನೂರಾಎಂಭತ್ತೆಂಟನೆಯ ಅಧ್ಯಾಯವು.

Related image

[1] ಚ್ಯವನನ ವಿಷಯದಲ್ಲಿ ಸುಕನ್ಯೆಯು ಎಸಗಿದ ಅಪರಾಧದ ಕುರಿತು ಆರಣ್ಯಕ ಪರ್ವದ ಅಧ್ಯಾಯ ೧೨೨ರಲ್ಲಿ ಬಂದಿದೆ.

Comments are closed.