Virata Parva: Chapter 6

ವಿರಾಟ ಪರ್ವ: ವೈರಾಟ ಪರ್ವ 

ವಿರಾಟಸಭೆಗೆ ಯುಧಿಷ್ಠಿರನ ಪ್ರವೇಶ

ತನ್ನ ಆಸ್ಥಾನವನ್ನು ಪ್ರವೇಶಿಸಿದ ಯುಧಿಷ್ಠಿರನನ್ನು ಯಾರೆಂದು ರಾಜಾ ವಿರಾಟನು ತರ್ಕಿಸಿದುದು (೧-೬). ಯುಧಿಷ್ಠಿರ-ವಿರಾಟರ ಸಂಭಾಷಣೆ ಮತ್ತು ಯುಧಿಷ್ಠಿರನು ಕಂಕನೆಂಬ ಹೆಸರಿನಲ್ಲಿ ವಿರಾಟನ ಆಸ್ಥಾನದಲ್ಲಿರುವುದು (೭-೧೬).

Image result for yudhishthira as kanka04006001 ವೈಶಂಪಾಯನ ಉವಾಚ|

04006001a ತತೋ ವಿರಾಟಂ ಪ್ರಥಮಂ ಯುಧಿಷ್ಠಿರೋ|

         ರಾಜಾ ಸಭಾಯಾಮುಪವಿಷ್ಟಮಾವ್ರಜತ್|

04006001c ವೈಡೂರ್ಯರೂಪಾನ್ಪ್ರತಿಮುಚ್ಯ ಕಾಂಚನಾನ್|

         ಅಕ್ಷಾನ್ಸ ಕಕ್ಷೇ ಪರಿಗೃಹ್ಯ ವಾಸಸಾ||

ವೈಶಂಪಾಯನನು ಹೇಳಿದನು: “ಅನಂತರ ಮೊದಲು ವೈಡೂರ್ಯರೂಪದ ಚಿನ್ನದ ದಾಳಗಳನ್ನು ವಸ್ತ್ರದಲ್ಲಿ ಕಟ್ಟಿ ಕಂಕುಳಲ್ಲಿ ಇಟ್ಟುಕೊಂಡು ರಾಜ ಯುಧಿಷ್ಠಿರನು ಸಭೆಯಲ್ಲಿ ಕುಳಿತಿದ್ದ ವಿರಾಟನ ಬಳಿ ಬಂದನು.

04006002a ನರಾಧಿಪೋ ರಾಷ್ಟ್ರಪತಿಂ ಯಶಸ್ವಿನಂ|

         ಮಹಾಯಶಾಃ ಕೌರವವಂಶವರ್ಧನಃ|

04006002c ಮಹಾನುಭಾವೋ ನರರಾಜಸತ್ಕೃತೋ|

         ದುರಾಸದಸ್ತೀಕ್ಷ್ಣವಿಷೋ ಯಥೋರಗಃ||

ಆ ನರಾಧಿಪ, ರಾಷ್ಟ್ರಪತಿ, ಯಶಸ್ವಿನಿ, ಮಹಾಯಶ, ಕೌರವವಂಶವರ್ಧನ, ಮಹಾನುಭಾವ, ನರರಾಜಸತ್ಕೃತನು ಜಯಿಸಲಸಾಧ್ಯ ತೀಕ್ಷ್ಣವಿಷದ ಸರ್ಪದಂತಿದ್ದನು.

04006003a ಬಲೇನ ರೂಪೇಣ ನರರ್ಷಭೋ ಮಹಾನ್|

         ಅಥಾರ್ಚಿರೂಪೇಣ ಯಥಾಮರಸ್ತಥಾ|

04006003c ಮಹಾಭ್ರಜಾಲೈರಿವ ಸಂವೃತೋ ರವಿಃ|

         ಯಥಾನಲೋ ಭಸ್ಮವೃತಶ್ಚ ವೀರ್ಯವಾನ್||

ಅಮರರಂತೆ ಬಲದಲ್ಲಿ ವೀರ್ಯವಂತನೂ, ರೂಪದಲ್ಲಿ ಕಾಂತಿಯುಕ್ತನೂ ಆಗಿದ್ದ ಆ ಮಹಾ ನರರ್ಷಭನು ಭಾರಿ ಮೋಡಗಳಿಂದ ಆವೃತ ಸೂರ್ಯನಂತೆ ಮತ್ತು ಬೂದಿಮುಚ್ಚಿದ ಕೆಂಡದಂತಿದ್ದನು.

04006004a ತಮಾಪತಂತಂ ಪ್ರಸಮೀಕ್ಷ್ಯ ಪಾಂಡವಂ|

         ವಿರಾಟರಾಡಿಂದುಮಿವಾಭ್ರಸಂವೃತಂ|

04006004c ಮಂತ್ರಿದ್ವಿಜಾನ್ಸೂತಮುಖಾನ್ವಿಶಸ್ತಥಾ|

         ಯೇ ಚಾಪಿ ಕೇ ಚಿತ್ಪರಿಷತ್ಸಮಾಸತೇ||

04006004e ಪಪ್ರಚ್ಛ ಕೋಽಯಂ ಪ್ರಥಮಂ ಸಮೇಯಿವಾನ್|

         ಅನೇನ ಯೋಽಯಂ ಪ್ರಸಮೀಕ್ಷತೇ ಸಭಾಂ||

ಮೋಡಮುಸುಕಿದ ಚಂದ್ರನಂತೆ ಹತ್ತಿರ ಬರುತ್ತಿದ್ದ ಆ ಪಾಂಡವನನ್ನು ಕಂಡು “ಮೊದಲಬಾರಿ ಸಭೆಯಲ್ಲಿ ತೋರಿಸಿಕೊಂಡ ಇವನು ಯಾರು?” ಎಂದು ಸಭೆಯಲ್ಲಿ ಕುಳಿತಿದ್ದ ಮಂತ್ರಿದ್ವಿಜರನ್ನು, ಸೂತಮುಖ್ಯರನ್ನು ಮತ್ತು ಇತರ ಸಭಾಸದರನ್ನು ಕೇಳಿದನು.

04006005a ನ ತು ದ್ವಿಜೋಽಯಂ ಭವಿತಾ ನರೋತ್ತಮಃ|

         ಪತಿಃ ಪೃಥಿವ್ಯಾ ಇತಿ ಮೇ ಮನೋಗತಂ|

04006005c ನ ಚಾಸ್ಯ ದಾಸೋ ನ ರಥೋ ನ ಕುಂಡಲೇ|

         ಸಮೀಪತೋ ಭ್ರಾಜತಿ ಚಾಯಮಿಂದ್ರವತ್||

“ಈ ನರೋತ್ತಮನು ದ್ವಿಜನಿರಲಾರ. ಇವನು ರಾಜನೆಂದು ನನ್ನ ಅಭಿಪ್ರಾಯ. ಆದರೂ ಇವನಲ್ಲಿ ದಾಸರಿಲ್ಲ, ರಥವಿಲ್ಲ, ಕುಂಡಲಗಳಿಲ್ಲ! ಆದರೆ ಇವನು ಇಂದ್ರನಂತೆ ಹೊಳೆಯುತ್ತಿದ್ದಾನೆ.

04006006a ಶರೀರಲಿಂಗೈರುಪಸೂಚಿತೋ ಹ್ಯಯಂ|

         ಮೂರ್ಧಾಭಿಷಿಕ್ತೋಽಯಮಿತೀವ ಮಾನಸಂ|

04006006c ಸಮೀಪಮಾಯಾತಿ ಚ ಮೇ ಗತವ್ಯಥೋ|

         ಯಥಾ ಗಜಸ್ತಾಮರಸೀಂ ಮದೋತ್ಕಟಃ||

ಇವನು ಮೂರ್ಧಾಭಿಷಿಕ್ತನಾಗಿದ್ದಾನೆಂದು ಇವನ ಶರೀರ ಲಕ್ಷಣಗಳು ನನ್ನ ಮನಸ್ಸಿಗೆ ಸೂಚಿಸುತ್ತಿವೆ. ಮದೋತ್ಕಟ ಆನೆಯು ತಾವರೆಕೊಳಕ್ಕೆ ಬರುವಂತೆ ಇವನು ನಿಶ್ಚಿಂತನಾಗಿ ನನ್ನ ಕಡೆ ಬರುತ್ತಿದ್ದಾನೆ!

04006007a ವಿತರ್ಕಯಂತಂ ತು ನರರ್ಷಭಸ್ತದಾ|

         ಯುಧಿಷ್ಠಿರೋಽಭ್ಯೇತ್ಯ ವಿರಾಟಮಬ್ರವೀತ್|

04006007c ಸಮ್ರಾಡ್ವಿಜಾನಾತ್ವಿಹ ಜೀವಿತಾರ್ಥಿನಂ|

         ವಿನಷ್ಟಸರ್ವಸ್ವಮುಪಾಗತಂ ದ್ವಿಜಂ||

ಆಗ ಆ ನರರ್ಷಭ ಯುದಿಷ್ಠಿರನು ಹೀಗೆ ತರ್ಕಿಸುತ್ತಿರುವ ವಿರಾಟನಿಗೆ ಹೇಳಿದನು: “ಸಾಮ್ರಾಟ! ಸರ್ವವನ್ನೂ ಕಳೆದುಕೊಂಡು ಜೀವಿತಾರ್ಥಿಯಾಗಿ ಬಂದಿರುವ ದ್ವಿಜನೆಂದು ತಿಳಿ!

04006008a ಇಹಾಹಮಿಚ್ಛಾಮಿ ತವಾನಘಾಂತಿಕೇ|

         ವಸ್ತುಂ ಯಥಾ ಕಾಮಚರಸ್ತಥಾ ವಿಭೋ|

04006008c ತಮಬ್ರವೀತ್ಸ್ವಾಗತಮಿತ್ಯನಂತರಂ|

         ರಾಜಾ ಪ್ರಹೃಷ್ಟಃ ಪ್ರತಿಸಂಗೃಹಾಣ ಚ||

ವಿಭೋ! ಅನಘ! ಸ್ವತಂತ್ರವಾಗಿ ಇಲ್ಲಿ ನಿನ್ನಲ್ಲಿ ವಾಸಿಸಬಯಸುತ್ತೇನೆ!” ಅನಂತರ ಸಂತೋಷಗೊಂಡ ರಾಜನು “ಸ್ವಾಗತ!” ಎಂದು ಹೇಳಿ ಅವನನ್ನು ಪರಿಗ್ರಹಿಸಿದನು.

04006009a ಕಾಮೇನ ತಾತಾಭಿವದಾಮ್ಯಹಂ ತ್ವಾಂ|

         ಕಸ್ಯಾಸಿ ರಾಜ್ಞೋ ವಿಷಯಾದಿಹಾಗತಃ|

04006009c ಗೋತ್ರಂ ಚ ನಾಮಾಪಿ ಚ ಶಂಸ ತತ್ತ್ವತಃ|

         ಕಿಂ ಚಾಪಿ ಶಿಲ್ಪಂ ತವ ವಿದ್ಯತೇ ಕೃತಂ||

“ಮಗೂ! ಪ್ರೀತಿಯಿಂದ ನಾನು ನಿನ್ನನ್ನು ಕೇಳುತ್ತಿದ್ದೇನೆ - ಯಾವ ರಾಜನ ನಾಡಿನಿಂದ ನೀನು ಇಲ್ಲಿಗೆ ಬಂದಿದ್ದೀಯೆ? ನಿನ್ನ ನಿಜವಾದ ಗೋತ್ರವನ್ನೂ ಹೆಸರನ್ನೂ, ಮತ್ತು ನೀನು ಮಾಡಲು ಯಾವ ಉದ್ಯೋಗವನ್ನು ಬಲ್ಲೆ ಎನ್ನುವುದನ್ನೂ ಹೇಳು.”

04006010 ಯುಧಿಷ್ಠಿರ ಉವಾಚ|

04006010a ಯುಧಿಷ್ಠಿರಸ್ಯಾಸಮಹಂ ಪುರಾ ಸಖಾ|

         ವೈಯಾಘ್ರಪದ್ಯಃ ಪುನರಸ್ಮಿ ಬ್ರಾಹ್ಮಣಃ|

04006010c ಅಕ್ಷಾನ್ಪ್ರವಪ್ತುಂ ಕುಶಲೋಽಸ್ಮಿ ದೇವಿತಾ|

         ಕಂಕೇತಿ ನಾಮ್ನಾಸ್ಮಿ ವಿರಾಟ ವಿಶ್ರುತಃ||

ಯುಧಿಷ್ಠಿರನು ಹೇಳಿದನು: “ಹಿಂದೆ ನಾನು ಯುಧಿಷ್ಠಿರನ ಸಖನಾಗಿದ್ದೆ. ಮತ್ತು ವೈಯಾಘ್ರಪದ ಗೋತ್ರದ ಬ್ರಾಹ್ಮಣ. ಜೂಜಿನಲ್ಲಿ ದಾಳಗಳನ್ನು ಎಸೆಯುವುದರಲ್ಲಿ ಪರಿಣಿತನಾಗಿದ್ದೇನೆ. ವಿರಾಟ! ಕಂಕ ಎಂಬ ಹೆಸರಿನಿಂದ ಕರೆಯಲ್ಪಡುತ್ತೇನೆ.”

04006011 ವಿರಾಟ ಉವಾಚ|

04006011a ದದಾಮಿ ತೇ ಹಂತ ವರಂ ಯಮಿಚ್ಛಸಿ|

         ಪ್ರಶಾಧಿ ಮತ್ಸ್ಯಾನ್ವಶಗೋ ಹ್ಯಹಂ ತವ|

04006011c ಪ್ರಿಯಾ ಹಿ ಧೂರ್ತಾ ಮಮ ದೇವಿನಃ ಸದಾ|

         ಭವಾಂಶ್ಚ ದೇವೋಪಮ ರಾಜ್ಯಮರ್ಹತಿ||

ವಿರಾಟನು ಹೇಳಿದನು: “ಅಯ್ಯಾ! ನೀನು ಬಯಸಿದ ವರವನ್ನು ನಿನಗೆ ಕೊಡುತ್ತೇನೆ. ನಾನು ನಿನ್ನ ವಶನಾಗಿದ್ದೇನೆ. ಮತ್ಸ್ಯರನ್ನು ಆಳು! ಧೂರ್ತ ಜೂಜುಕೋರರು ನನಗೆ ಯಾವಾಗಲೂ ಪ್ರಿಯರು. ದೇವಸದೃಶನಾದ ನೀನು ರಾಜ್ಯಕ್ಕೆ ಅರ್ಹನಾಗಿದ್ದೀಯೆ!”

04006012 ಯುಧಿಷ್ಠಿರ ಉವಾಚ|

04006012a ಆಪ್ತೋ ವಿವಾದಃ ಪರಮೋ ವಿಶಾಂ ಪತೇ|

         ನ ವಿದ್ಯತೇ ಕಿಂ ಚನ ಮತ್ಸ್ಯ ಹೀನತಃ|

04006012c ನ ಮೇ ಜಿತಃ ಕಶ್ಚನ ಧಾರಯೇದ್ಧನಂ|

         ವರೋ ಮಮೈಷೋಽಸ್ತು ತವ ಪ್ರಸಾದತಃ||

ಯುಧಿಷ್ಠಿರನು ಹೇಳಿದನು: “ವಿಶಾಂಪತೇ! ನನ್ನಿಂದ ಸೋತವನು ನನ್ನೊಂದಿಗೆ ಎಂದೂ ಜಗಳವಾಡಬಾರದು ಮುತ್ತು ಗೆದ್ದವನು ಎಂದೂ ನನ್ನಿಂದ ಪಣವನ್ನು ಕೇಳಬಾರದು! ನಿನ್ನ ಕೃಪೆಯಿಂದ ಈ ವರವು ನನ್ನದಾಗಲಿ!” 

04006013 ವಿರಾಟ ಉವಾಚ|

04006013a ಹನ್ಯಾಮವಧ್ಯಂ ಯದಿ ತೇಽಪ್ರಿಯಂ ಚರೇತ್|

         ಪ್ರವ್ರಾಜಯೇಯಂ ವಿಷಯಾದ್ದ್ವಿಜಾಂಸ್ತಥಾ|

04006013c ಶೃಣ್ವಂತು ಮೇ ಜಾನಪದಾಃ ಸಮಾಗತಾಃ|

         ಕಂಕೋ ಯಥಾಹಂ ವಿಷಯೇ ಪ್ರಭುಸ್ತಥಾ||

ವಿರಾಟನು ಹೇಳಿದನು: ನಿನಗೆ ಅಪ್ರಿಯವಾಗಿ ನಡೆದುಕೊಂಡವರನ್ನು ಅವಧ್ಯರಾಗಿದ್ದರೂ ಕೊಲ್ಲುತ್ತೇನೆ! ಅಥವಾ ಅಂಥಹ ದ್ವಿಜರನ್ನು ದೇಶದ ಹೊರಹಾಕುತ್ತೇನೆ! ಇಲ್ಲಿ ನೆರೆದಿರುವ ಪ್ರಜೆಗಳೆಲ್ಲರೂ ಕೇಳಿಸಿಕೊಳ್ಳಿ! ನಾನು ಈ ದೇಶಕ್ಕೆ ಹೇಗೋ ಹಾಗೆ ಈ ಕಂಕನೂ ಪ್ರಭು!

04006014a ಸಮಾನಯಾನೋ ಭವಿತಾಸಿ ಮೇ ಸಖಾ|

         ಪ್ರಭೂತವಸ್ತ್ರೋ ಬಹುಪಾನಭೋಜನಃ|

04006014c ಪಶ್ಯೇಸ್ತ್ವಮಂತಶ್ಚ ಬಹಿಶ್ಚ ಸರ್ವದಾ|

         ಕೃತಂ ಚ ತೇ ದ್ವಾರಮಪಾವೃತಂ ಮಯಾ||

ನನ್ನ ಸಖನಾಗಿದ್ದು ವಾಹನಗಳಿಗೂ, ಉತ್ತಮ ವಸ್ತ್ರಗಳಿಗೂ, ಬಹಳಷ್ಟು ಪಾನ ಭೋಜನಗಳಿಗೂ ನೀನು ನನ್ನ ಸರಿಸಮನಾಗಿರುವೆ. ಯಾವಾಗಲೂ ನೀನು ನನ್ನ ಒಳಗಿನ ಮತ್ತು ಹೊರಗಿನ ವ್ಯವಹಾರಗಳಿಗೆ ಸಾಕ್ಷಿಯಾಗಿರುವೆ. ನಿನಗೆ ನನ್ನ ದ್ವಾರವು ತೆರೆದಿದೆ. 

04006015a ಯೇ ತ್ವಾನುವಾದೇಯುರವೃತ್ತಿಕರ್ಶಿತಾ|

         ಬ್ರೂಯಾಶ್ಚ ತೇಷಾಂ ವಚನೇನ ಮೇ ಸದಾ|

04006015c ದಾಸ್ಯಾಮಿ ಸರ್ವಂ ತದಹಂ ನ ಸಂಶಯೋ|

         ನ ತೇ ಭಯಂ ವಿದ್ಯತಿ ಸನ್ನಿಧೌ ಮಮ||

ಏನೂ ಮಾಡದೆಯೂ ತೊಂದರೆಗೊಳಗಾದವರು ನಿನ್ನಲ್ಲಿ ಹೇಳಿಕೊಂಡರೆ ಆ ಮಾತುಗಳನ್ನು ನನಗೆ ಯಾವಗಲೂ ನೀನು ಹೇಳಬೇಕು. ಆಗ ನಾನು ಎಲ್ಲವನ್ನೂ ಕೊಡುತ್ತೇನೆ ಎನ್ನುವುದರಲ್ಲಿ ಸಂಶಯವಿಲ್ಲದಿರಲಿ. ನನ್ನ ಸನ್ನಿಧಿಯಲ್ಲಿ ನಿನಗೆ ಭಯವೆನ್ನುವುದಿರುವುದಿಲ್ಲ.””

04006016 ವೈಶಂಪಾಯನ ಉವಾಚ|

04006016a ಏವಂ ಸ ಲಬ್ಧ್ವಾ ತು ವರಂ ಸಮಾಗಮಂ|

         ವಿರಾಟರಾಜೇನ ನರರ್ಷಭಸ್ತದಾ|

04006016c ಉವಾಸ ವೀರಃ ಪರಮಾರ್ಚಿತಃ ಸುಖೀ|

         ನ ಚಾಪಿ ಕಶ್ಚಿಚ್ಚರಿತಂ ಬುಬೋಧ ತತ್||

ವೈಶಂಪಾಯನನು ಹೇಳಿದನು: “ಹೀಗೆ ಆ ವೀರ ನರರ್ಷಭನು ವಿರಾಟರಾಜನನ್ನು ಸೇರಿ ವರವನ್ನು ಪಡೆದು ಪರಮ ಗೌರವದಿಂದ ಸುಖಿಯಾಗಿ ವಾಸಿಸಿದನು. ಅವನ ಕುರಿತು ಯಾರಿಗೂ ಏನೂ ತಿಳಿಯಲಿಲ್ಲ.”

ಇತಿ ಶ್ರೀಮಹಾಭಾರತೇ ವಿರಾಟಪರ್ವಣಿ ವೈರಾಟಪರ್ವಣಿ ಪುರಪ್ರವೇಶೇ ಯುಧಿಷ್ಠಿರಪ್ರವೇಶೋ ನಾಮ ಷಷ್ಠೋಽಧ್ಯಾಯಃ||

ಇದು ಶ್ರೀ ಮಹಾಭಾರತದ ವಿರಾಟಪರ್ವದಲ್ಲಿ ವೈರಾಟಪರ್ವದಲ್ಲಿ ಪುರಪ್ರವೇಶದಲ್ಲಿ ಯುಧಿಷ್ಠಿರಪ್ರವೇಶವೆನ್ನುವ ಆರನೆಯ ಅಧ್ಯಾಯವು.

Related image

Comments are closed.