Aranyaka Parva: Chapter 108

ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ

೧೦೮

ಹರನು ಒಪ್ಪಿಕೊಂಡು ಗಣಗಳೊಂದಿಗೆ ಹಿಮಾಲಯದ ಮೇಲೆ ನಿಂತು ಗಂಗೆಯನ್ನು ಧರಿಸಿದುದು (೧-೧೦). ಗಂಗೆಯು ಸಮುದ್ರವನ್ನು ತುಂಬಿಸಿದುದು; ಸಾಗರರನ್ನು ಪಾವನಗೊಳಿಸಿದುದು (೧೧-೧೯).

Image result for gangavatarana03108001 ಲೋಮಶ ಉವಾಚ|

03108001a ಭಗೀರಥವಚಃ ಶ್ರುತ್ವಾ ಪ್ರಿಯಾರ್ಥಂ ಚ ದಿವೌಕಸಾಂ|

03108001c ಏವಮಸ್ತ್ವಿತಿ ರಾಜಾನಂ ಭಗವಾನ್ಪ್ರತ್ಯಭಾಷತ||

ಲೋಮಶನು ಹೇಳಿದನು: “ಭಗೀರಥನ ಮಾತನ್ನು ಕೇಳಿ ಮತ್ತು ದೇವತೆಗಳ ಹಿತಕ್ಕಾಗಿ ಭಗವಂತನು ರಾಜನಿಗೆ ಈ ರೀತಿ ಉತ್ತರಿಸಿದನು.

03108002a ಧಾರಯಿಷ್ಯೇ ಮಹಾಬಾಹೋ ಗಗನಾತ್ಪ್ರಚ್ಯುತಾಂ ಶಿವಾಂ|

03108002c ದಿವ್ಯಾಂ ದೇವನದೀಂ ಪುಣ್ಯಾಂ ತ್ವತ್ಕೃತೇ ನೃಪಸತ್ತಮ||

“ಮಹಾಬಾಹೋ! ನೃಪಸತ್ತಮ! ಗಗನದಿಂದ ಕೆಳಬೀಳುವ ಶಿವೆ, ಪುಣ್ಯೆ, ದಿವ್ಯ ದೇವನದಿಯನ್ನು ನಿನಗೋಸ್ಕರ ಧರಿಸುತ್ತೇನೆ.”

03108003a ಏವಮುಕ್ತ್ವಾ ಮಹಾಬಾಹೋ ಹಿಮವಂತಮುಪಾಗಮತ್|

03108003c ಸಂವೃತಃ ಪಾರ್ಷದೈರ್ಘೋರೈರ್ನಾನಾಪ್ರಹರಣೋದ್ಯತೈಃ||

ಮಹಾಬಾಹೋ! ಹೀಗೆ ಹೇಳಿ ಅವನು ನಾನಾ ತರಹದ ಘೋರ ಆಯುಧಗಳನ್ನು ಹಿಡಿದ ಗಣಗಳಿಂದ ಸುತ್ತುವರೆಯಲ್ಪಟ್ಟು ಹಿಮಾಲಯಕ್ಕೆ ಹೋದನು.

03108004a ತತಃ ಸ್ಥಿತ್ವಾ ನರಶ್ರೇಷ್ಠಂ ಭಗೀರಥಮುವಾಚ ಹ|

03108004c ಪ್ರಯಾಚಸ್ವ ಮಹಾಬಾಹೋ ಶೈಲರಾಜಸುತಾಂ ನದೀಂ|

03108004e ಪತಮಾನಾಂ ಸರಿಚ್ಛ್ರೇಷ್ಠಾಂ ಧಾರಯಿಷ್ಯೇ ತ್ರಿವಿಷ್ಟಪಾತ್||

ಅಲ್ಲಿ ನಿಂತು ನರಶ್ರೇಷ್ಠ ಭಗೀರಥನಿಗೆ ಹೇಳಿದನು: “ಮಹಾಬಾಹೋ! ಈಗ ಶೈಲರಾಜಸುತೆ ನದಿಯಲ್ಲಿ ಪ್ರಾರ್ಥನೆಮಾಡು. ಸ್ವರ್ಗದಿಂದ ಬೀಳುತ್ತಿರುವ ಆ ನದಿಶ್ರೇಷ್ಠೆಯನ್ನು ಧರಿಸುತ್ತೇನೆ.”

03108005a ಏತಚ್ಛೃತ್ವಾ ವಚೋ ರಾಜಾ ಶರ್ವೇಣ ಸಮುದಾಹೃತಂ|

03108005c ಪ್ರಯತಃ ಪ್ರಣತೋ ಭೂತ್ವಾ ಗಂಗಾಂ ಸಮನುಚಿಂತಯತ್||

ಶರ್ವನ ಈ ಮಾತನ್ನು ಕೇಳಿ ರಾಜನು ಸಂತೋಷದಿಂದ ವಿನೀತನಾಗಿ, ತಲೆಬಾಗಿ ನಮಸ್ಕರಿಸಿ ತನ್ನ ಮನಸ್ಸಿನೊಂದಿಗೆ ಗಂಗೆಯನ್ನು ನೆನೆದನು.

03108006a ತತಃ ಪುಣ್ಯಜಲಾ ರಮ್ಯಾ ರಾಜ್ಞಾ ಸಮನುಚಿಂತಿತಾ|

03108006c ಈಶಾನಂ ಚ ಸ್ಥಿತಂ ದೃಷ್ಟ್ವಾ ಗಗನಾತ್ಸಹಸಾ ಚ್ಯುತಾ||

ಆಗ ತನ್ನನ್ನೇ ಚಿಂತಿಸುತ್ತಿರುವ ರಾಜ ಮತ್ತು ಅಲ್ಲೇ ನಿಂತಿರುವ ಈಶಾನನನ್ನು ನೋಡಿ ರಮ್ಯ ಪುಣ್ಯಜಲೆಯು ಒಮ್ಮೆಗೇ ಜೋರಾಗಿ ಗಗನದಿಂದ ಕಳಚಿ ಧುಮುಕಿದಳು.

03108007a ತಾಂ ಪ್ರಚ್ಯುತಾಂ ತತೋ ದೃಷ್ಟ್ವಾ ದೇವಾಃ ಸಾರ್ಧಂ ಮಹರ್ಷಿಭಿಃ|

03108007c ಗಂಧರ್ವೋರಗರಕ್ಷಾಂಸಿ ಸಮಾಜಗ್ಮುರ್ದಿದೃಕ್ಷಯಾ||

ಧುಮುಕಿ ಬರುತ್ತಿದ್ದ ಅವಳನ್ನು ನೋಡಿ ದೇವತೆಗಳೊಂದಿಗೆ ಮಹರ್ಷಿಗಳೂ, ಗಂಧರ್ವ-ಉರಗ-ರಾಕ್ಷಸರೂ ಕೂಡ ನೋಡಲು ಬಂದು ಸೇರಿದರು.

03108008a ತತಃ ಪಪಾತ ಗಗನಾದ್ಗಂಗಾ ಹಿಮವತಃ ಸುತಾ|

03108008c ಸಮುದ್ಭ್ರಾಂತಮಹಾವರ್ತಾ ಮೀನಗ್ರಾಹಸಮಾಕುಲಾ||

ಆಗ ಮೀನು-ಮೊಸಳೆಗಳ ಮಹಾ ಸಂಕುಲಗಳೆಲ್ಲವನ್ನೂ ತನ್ನಲ್ಲಿಟ್ಟುಕೊಂಡ ಹಿಮವಂತನ ಮಗಳು ಗಂಗೆಯು ಗಗನದಿಂದ ಧುಮುಕಿ ಬಿದ್ದಳು.

03108009a ತಾಂ ದಧಾರ ಹರೋ ರಾಜನ್ಗಂಗಾಂ ಗಗನಮೇಖಲಾಂ|

03108009c ಲಲಾಟದೇಶೇ ಪತಿತಾಂ ಮಾಲಾಂ ಮುಕ್ತಾಮಯೀಮಿವ||

ರಾಜನ್! ಆಗ ಹರನು ತನ್ನ ಲಲಾಟದ ಮೇಲೆ ಬೀಳುತ್ತಿದ್ದ ಗಗನಮೇಖಲೆ ಗಂಗೆಯನ್ನು ಮುತ್ತುಗಳನ್ನು ಹಾರದಲ್ಲಿ ಪೋಣಿಸುವಂತೆ ಧರಿಸಿದನು. 

Image result for gangavatarana03108010a ಸಾ ಬಭೂವ ವಿಸರ್ಪಂತೀ ತ್ರಿಧಾ ರಾಜನ್ಸಮುದ್ರಗಾ|

03108010c ಫೇನಪುಂಜಾಕುಲಜಲಾ ಹಂಸಾನಾಮಿವ ಪಂಕ್ತ್ತಯಃ||

ರಾಜನ್! ಪ್ರವಾಹವನ್ನು ಕಟ್ಟಿಹಿಡಿದುದರಿಂದುಂಟಾದ ನೊರೆಯಿಂದ ಅಲ್ಲಿ ಆ ಸಮುದ್ರಗೆಯು ಹಂಸಗಳ ಸಾಲಿನಂತೆ ಕಂಡಳು. ಅವಳು ಹೊರಬರಲು ಪ್ರಯತ್ನಿಸುತ್ತಾ[1] ಮೂರು ಧಾರೆಗಳಾಗಿ ಚಿಮ್ಮಿದಳು. 

03108011a ಕ್ವ ಚಿದಾಭೋಗಕುಟಿಲಾ ಪ್ರಸ್ಖಲಂತೀ ಕ್ವ ಚಿತ್ಕ್ವ ಚಿತ್|

03108011c ಸ್ವಫೇನಪಟಸಂವೀತಾ ಮತ್ತೇವ ಪ್ರಮದಾವ್ರಜತ್||

03108011e ಕ್ವ ಚಿತ್ಸಾ ತೋಯನಿನದೈರ್ನದಂತೀ ನಾದಮುತ್ತಮಂ||

ಅವಳು ಒಮ್ಮೆಮ್ಮೆ ಸಿಟ್ಟಿನಿಂದ ಭುಸುಗುಟ್ಟಿ ರೋಷದಲ್ಲಿ ಮುನ್ನುಗ್ಗುವವಳಂತೆ ಮತ್ತು ಇನ್ನೊಮ್ಮೆ ತನ್ನದೇ ನೊರೆಯ ಸೀರೆಯನ್ನುಟ್ಟು, ಅಮಲಿನಲ್ಲಿ ಜೋಲಾಡಿಬರುವ ಸ್ತ್ರೀಯಂತೆ ತೋರುತ್ತಿದ್ದಳು. ಇನ್ನೊಮ್ಮೆ ಅವಳ ಪ್ರವಾಹದಲ್ಲಿ ಇಂಪಾದ ನಾದವನ್ನು ಮಾಡುತ್ತಾ ಬರುವವಳಂತೆ ಕಂಡು ಬರುತ್ತಿದ್ದಳು. 

03108012a ಏವಂ ಪ್ರಕಾರಾನ್ಸುಬಹೂನ್ಕುರ್ವಂತೀ ಗಗನಾಚ್ಚ್ಯುತಾ|

03108012c ಪೃಥಿವೀತಲಮಾಸಾದ್ಯ ಭಗೀರಥಮಥಾಬ್ರವೀತ್||

ಈ ರೀತಿ ಹಲವು ಪ್ರಕಾರಗಳಲ್ಲಿ ಹಲವನ್ನು ಮಾಡುತ್ತಾ ಗಗನವನ್ನು ಬಿಟ್ಟು ಭೂಮಿಯ ತಲವನ್ನು ತಲುಪಿದ ಅವಳು ಭಗೀರಥನಿಗೆ ಹೇಳಿದಳು:

03108013a ದರ್ಶಯಸ್ವ ಮಹಾರಾಜ ಮಾರ್ಗಂ ಕೇನ ವ್ರಜಾಮ್ಯಹಂ|

03108013c ತ್ವದರ್ಥಮವತೀರ್ಣಾಸ್ಮಿ ಪೃಥಿವೀಂ ಪೃಥಿವೀಪತೇ||

“ಮಹಾರಾಜ! ನಾನು ಯಾವ ಮಾರ್ಗದಲ್ಲಿ ಹೋಗಬೇಕೆನ್ನುವುದನ್ನು ನೀನೇ ತೋರಿಸು. ಭೂಪತೀ! ನಿನಗೋಸ್ಕರವೇ ನಾನು ಭೂಮಿಗೆ ಇಳಿದು ಬಂದಿದ್ದೇನೆ.”

03108014a ಏತಚ್ಛೃತ್ವಾ ವಚೋ ರಾಜಾ ಪ್ರಾತಿಷ್ಠತ ಭಗೀರಥಃ|

03108014c ಯತ್ರ ತಾನಿ ಶರೀರಾಣಿ ಸಾಗರಾಣಾಂ ಮಹಾತ್ಮನಾಂ||

03108014e ಪಾವನಾರ್ಥಂ ನರಶ್ರೇಷ್ಠ ಪುಣ್ಯೇನ ಸಲಿಲೇನ ಹ||

ನರಶ್ರೇಷ್ಠ! ಈ ಮಾತುಗಳನ್ನು ಕೇಳಿದ ರಾಜ ಭಗೀರಥನು ಆ ಪುಣ್ಯ ಜಲದಿಂದ ಪಾವನಗೊಳಿಸಲು ಮಹಾತ್ಮ ಸಾಗರರ ಶರೀರಗಳಿರುವಲ್ಲಿ ಹೋದನು.

03108015a ಗಂಗಾಯಾ ಧಾರಣಂ ಕೃತ್ವಾ ಹರೋ ಲೋಕನಮಸ್ಕೃತಃ|

03108015c ಕೈಲಾಸಂ ಪರ್ವತಶ್ರೇಷ್ಠಂ ಜಗಾಮ ತ್ರಿದಶೈಃ ಸಹ||

ಗಂಗೆಯನ್ನು ಧರಿಸಿ ಲೋಕಮಸ್ಕೃತ ಹರನು ದೇವತೆಗಳೊಂದಿಗೆ ಪರ್ವತಶ್ರೇಷ್ಠ ಕೈಲಾಸಕ್ಕೆ ಹೋದನು.

03108016a ಸಮುದ್ರಂ ಚ ಸಮಾಸಾದ್ಯ ಗಂಗಯಾ ಸಹಿತೋ ನೃಪಃ|

03108016c ಪೂರಯಾಮಾಸ ವೇಗೇನ ಸಮುದ್ರಂ ವರುಣಾಲಯಂ||

ಗಂಗೆಯೊಡನೆ ನೃಪನು ಸಮುದ್ರವನ್ನು ತಲುಪಿದೊಡನೆಯೇ ವರುಣಾಲಯ ಸಮುದ್ರವು ತುಂಬಿಕೊಂಡಿತು.

03108017a ದುಹಿತೃತ್ವೇ ಚ ನೃಪತಿರ್ಗಂಗಾಂ ಸಮನುಕಲ್ಪಯತ್|

03108017c ಪಿತೄಣಾಂ ಚೋದಕಂ ತತ್ರ ದದೌ ಪೂರ್ಣಮನೋರಥಃ||

ನೃಪತಿಯಾದರೋ ಅಲ್ಲಿ ಗಂಗೆಯನ್ನು ತನ್ನ ಮಗಳಾಗಿ ಮಾಡಿಕೊಂಡನು ಮತ್ತು ಪಿತೃಗಳಿಗೆ ನೀರನ್ನಿತ್ತು ಪೂರ್ಣಮನೋರಥನಾದನು.

03108018a ಏತತ್ತೇ ಸರ್ವಮಾಖ್ಯಾತಂ ಗಂಗಾ ತ್ರಿಪಥಗಾ ಯಥಾ|

03108018c ಪೂರಣಾರ್ಥಂ ಸಮುದ್ರಸ್ಯ ಪೃಥಿವೀಮವತಾರಿತಾ||

03108019a ಸಮುದ್ರಶ್ಚ ಯಥಾ ಪೀತಃ ಕಾರಣಾರ್ಥೇ ಮಹಾತ್ಮನಾ|

03108019c ವಾತಾಪಿಶ್ಚ ಯಥಾ ನೀತಃ ಕ್ಷಯಂ ಸ ಬ್ರಹ್ಮಹಾ ಪ್ರಭೋ||

03108019e ಅಗಸ್ತ್ಯೇನ ಮಹಾರಾಜ ಯನ್ಮಾಂ ತ್ವಂ ಪರಿಪೃಚ್ಚಸಿ||

ಪ್ರಭೋ! ಮಹಾರಾಜ! ಗಂಗೆಯು ಸಮುದ್ರವನ್ನು ತುಂಬಿಸಲು ಧರೆಗಿಳಿದು ತ್ರಿಪಥೆಯಾದದ್ದು ಹೇಗೆ, ಯಾವ ಕಾರಣಕ್ಕೆ ಮಹಾತ್ಮ ಅಗಸ್ತ್ಯನು ಬ್ರಾಹ್ಮಣರ ಅನ್ನವಾದ ವಾತಾಪಿಯನ್ನು ನಾಶಗೊಳಿಸಿದ ಮತ್ತು ಸಮುದ್ರವನ್ನು ಕುಡಿದ ಎಂಬ ನಿನ್ನ ಪ್ರಶ್ನೆಗಳಿಗೆ ಇವೆಲ್ಲವನ್ನೂ ಹೇಳಿದೆ.””

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಸಗರಸಂತತಿಕಥನೇ ಅಷ್ಟಾಧಿಕಶತತಮೋಽಧ್ಯಾಯಃ|

ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಸಗರಸಂತತಿಕಥನದಲ್ಲಿ ನೂರಾಎಂಟನೆಯ ಅಧ್ಯಾಯವು.

Related image

[1]ಸರ್ಪಗಳಂತೆ ಕೋಪದಿಂದ ಕಷ್ಟದಲ್ಲಿ ನುಸುಳಿಬರುತ್ತಾ

Comments are closed.