ಆರಣ್ಯಕ ಪರ್ವ: ತೀರ್ಥಯಾತ್ರಾ ಪರ್ವ
೯೪
ಅಗಸ್ತ್ಯೋಪಾಽಖ್ಯಾನ
ಅಗಸ್ತ್ಯಾಶ್ರಮಕ್ಕೆ ಹೋದುದು; ಲೋಮಶನು ಅಗಸ್ತ್ಯೋಪಾಖ್ಯಾನವನ್ನು ಪ್ರಾರಂಭಿಸಿದುದು (೧-೩). ದೈತ್ಯ ಸಹೋದರರಾದ ವಾತಾಪಿ-ಇಲ್ವಲರು ಬ್ರಾಹ್ಮಣರನ್ನು ಪೀಡಿಸುತ್ತಿರುವುದು (೪-೧೦). ಅಗಸ್ತ್ಯನು ತನ್ನ ಪಿತೃಗಳಿಗೆ ಸಂತಾನವನ್ನು ಪಡೆಯುತ್ತೇನೆಂದು ಭರವಸೆಯನ್ನು ನೀಡುವುದು (೧೧-೧೫). ತನ್ನ ಸಂತಾನವನ್ನು ಹಡೆಯಬಲ್ಲ ಯಾವ ಸ್ತ್ರೀಯನ್ನೂ ಕಾಣದೇ ಅಗಸ್ತ್ಯನು ಬೇರೆ ಬೇರೆ ಪ್ರಾಣಿಗಳಿಂದ ಅನುತ್ತಮ ಅಂಗಗಳನ್ನು ಒಟ್ಟುಗೂಡಿಸಿ ಓರ್ವ ಸ್ತ್ರೀಯನ್ನು ನಿರ್ಮಿಸಿ, ಮಕ್ಕಳನ್ನು ಬಯಸಿದ್ದ ವಿದರ್ಭರಾಜನಿಗೆ ಕೇಳಿದಾಗ ಕೊಡು ಎಂದು ಒಪ್ಪಿಸುವುದು; ಕನ್ಯೆಗೆ ಲೋಪಾಮುದ್ರ ಎಂಬ ಹೆಸರು (೧೬-೨೭).
03094001 ವೈಶಂಪಾಯನ ಉವಾಚ|
03094001a ತತಃ ಸಂಪ್ರಸ್ಥಿತೋ ರಾಜಾ ಕೌಂತೇಯೋ ಭೂರಿದಕ್ಷಿಣಃ|
03094001c ಅಗಸ್ತ್ಯಾಶ್ರಮಮಾಸಾದ್ಯ ದುರ್ಜಯಾಯಾಮುವಾಸ ಹ||
ವೈಶಂಪಾಯನನು ಹೇಳಿದನು: “ನಂತರ ಭೂರಿದಕ್ಷಿಣ ರಾಜ ಕೌಂತೇಯನು ಅಲ್ಲಿಂದ ಹೊರಟು ಅಗಸ್ತ್ಯಾಶ್ರಮವನ್ನು ತಲುಪಿ ದುರ್ಜಯದಲ್ಲಿ ತಂಗಿದನು.
03094002a ತತ್ರ ವೈ ಲೋಮಶಂ ರಾಜಾ ಪಪ್ರಚ್ಚ ವದತಾಂ ವರಃ|
03094002c ಅಗಸ್ತ್ಯೇನೇಹ ವಾತಾಪಿಃ ಕಿಮರ್ಥಮುಪಶಾಮಿತಃ||
03094003a ಆಸೀದ್ವಾ ಕಿಂಪ್ರಭಾವಶ್ಚ ಸ ದೈತ್ಯೋ ಮಾನವಾಂತಕಃ|
03094003c ಕಿಮರ್ಥಂ ಚೋದ್ಗತೋ ಮನ್ಯುರಗಸ್ತ್ಯಸ್ಯ ಮಹಾತ್ಮನಃ||
ಅಲ್ಲಿ ಮಾತನಾಡುವರಲ್ಲಿ ಶ್ರೇಷ್ಠ ರಾಜನು ಲೋಮಶನಿಗೆ ಕೇಳಿದನು: “ಯಾವ ಕಾರಣಕ್ಕಾಗಿ ಅಗಸ್ತ್ಯನು ವಾತಾಪಿಯನ್ನು ಸಂಹರಿಸಿದನು ಮತ್ತು ಆ ಮಾನವಾಂತಕ ದೈತ್ಯನ ಪ್ರಭಾವವಾದರೂ ಏನಿತ್ತು? ಯಾವ ವಿಷಯವು ಮಹಾತ್ಮ ಅಗಸ್ತ್ಯನಿಗೆ ಸಿಟ್ಟುಬರುವಂತೆ ಮಾಡಿತು?”
03094004 ಲೋಮಶ ಉವಾಚ|
03094004a ಇಲ್ವಲೋ ನಾಮ ದೈತೇಯ ಆಸೀತ್ಕೌರವನಂದನ|
03094004c ಮಣಿಮತ್ಯಾಂ ಪುರಿ ಪುರಾ ವಾತಾಪಿಸ್ತಸ್ಯ ಚಾನುಜಃ||
ಲೋಮಶನು ಹೇಳಿದನು: “ಕೌರವನಂದನ! ಹಿಂದೆ ಮಣಿಮತಿ ಪುರದಲ್ಲಿ ಇಲ್ವಲ ಎಂಬ ಹೆಸರಿನ ದೈತ್ಯನಿದ್ದನು. ವಾತಾಪಿಯು ಅವನ ಅನುಜ.
03094005a ಸ ಬ್ರಾಹ್ಮಣಂ ತಪೋಯುಕ್ತಮುವಾಚ ದಿತಿನಂದನಃ|
03094005c ಪುತ್ರಂ ಮೇ ಭಗವಾನೇಕಮಿಂದ್ರತುಲ್ಯಂ ಪ್ರಯಚ್ಚತು||
ಆ ದಿತಿನಂದನನು ಒಮ್ಮೆ ತಪೋಯುಕ್ತನಾದ ಓರ್ವ ಬ್ರಾಹ್ಮಣನಲ್ಲಿ ಕೇಳಿಕೊಂಡನು: “ಭಗವನ್! ನನಗೆ ಇಂದ್ರನಿಗೆ ಸಮಾನ ಪುತ್ರನೋರ್ವನನ್ನು ಪರಿಪಾಲಿಸು.”
03094006a ತಸ್ಮೈ ಸ ಬ್ರಾಹ್ಮಣೋ ನಾದಾತ್ಪುತ್ರಂ ವಾಸವಸಮ್ಮಿತಂ|
03094006c ಚುಕ್ರೋಧ ಸೋಽಸುರಸ್ತಸ್ಯ ಬ್ರಾಹ್ಮಣಸ್ಯ ತತೋ ಭೃಶಂ||
ವಾಸವನ ಸಮನಾದ ಪುತ್ರನನ್ನು ಅವನಿಗೆ ಆ ಬ್ರಾಹ್ಮಣನು ಕೊಡದೇ ಇರಲು ಆ ಅಸುರನು ಬ್ರಾಹ್ಮಣನ ಮೇಲೆ ಅತ್ಯಂತ ಕೋಪಗೊಂಡನು.
03094007a ಸಮಾಹ್ವಯತಿ ಯಂ ವಾಚಾ ಗತಂ ವೈವಸ್ವತಕ್ಷಯಂ|
03094007c ಸ ಪುನರ್ದೇಹಮಾಸ್ಥಾಯ ಜೀವನ್ಸ್ಮ ಪ್ರತಿದೃಶ್ಯತೇ||
ಅವನು ವೈವಸ್ವತಕ್ಷಯಕ್ಕೆ ಹೋಗಿದ್ದ ಯಾರನ್ನು ಕರೆದರೂ ಅವನು ಪುನಃ ದೇಹವನ್ನು ಧರಿಸಿ ಜೀವಂತನಾಗಿ ಬಂದು ಕಾಣಿಸಿಕೊಳ್ಳುತ್ತಿದ್ದನು.
03094008a ತತೋ ವಾತಾಪಿಮಸುರಂ ಚಾಗಂ ಕೃತ್ವಾ ಸುಸಂಸ್ಕೃತಂ|
03094008c ತಂ ಬ್ರಾಹ್ಮಣಂ ಭೋಜಯಿತ್ವಾ ಪುನರೇವ ಸಮಾಹ್ವಯತ್||
ಅವನು ಅಸುರ ವಾತಾಪಿಯನ್ನು ಆಡನ್ನಾಗಿ ಮಾಡಿ, ಅದನ್ನೇ ರುಚಿಯಾಗಿ ಬೇಯಿಸಿ ಆ ಬ್ರಾಹ್ಮಣನಿಗೆ ತಿನ್ನಿಸಿ ಪುನಃ ಅವನನ್ನು ಕೂಗಿ ಕರೆದನು.
03094009a ತಸ್ಯ ಪಾರ್ಶ್ವಂ ವಿನಿರ್ಭಿದ್ಯ ಬ್ರಾಹ್ಮಣಸ್ಯ ಮಹಾಸುರಃ|
03094009c ವಾತಾಪಿಃ ಪ್ರಹಸನ್ರಾಜನ್ನಿಶ್ಚಕ್ರಾಮ ವಿಶಾಂ ಪತೇ||
ರಾಜನ್! ವಿಶಾಂಪತೇ! ಆಗ ಆ ಮಹಾಸುರ ವಾತಾಪಿಯು ಬ್ರಾಹ್ಮಣನ ಪಾರ್ಶ್ವವನ್ನು ಸೀಳಿ ನಗುತ್ತಾ ಹೊರಬಂದನು.
03094010a ಏವಂ ಸ ಬ್ರಾಹ್ಮಣಾನ್ರಾಜನ್ಭೋಜಯಿತ್ವಾ ಪುನಃ ಪುನಃ|
03094010c ಹಿಂಸಯಾಮಾಸ ದೈತೇಯ ಇಲ್ವಲೋ ದುಷ್ಟಚೇತನಃ||
ರಾಜನ್! ಈ ರೀತಿಯಲ್ಲಿ ಆ ದುಷ್ಟಚೇತನ ದೈತ್ಯ ಇಲ್ವಲನು ಬ್ರಾಹ್ಮಣರಿಗೆ ಪುನಃ ಪುನಃ ಭೋಜನವನ್ನಿತ್ತು ಹಿಂಸಿಸತೊಡಗಿದನು.
03094011a ಅಗಸ್ತ್ಯಶ್ಚಾಪಿ ಭಗವಾನೇತಸ್ಮಿನ್ಕಾಲ ಏವ ತು|
03094011c ಪಿತೄನ್ದದರ್ಶ ಗರ್ತೇ ವೈ ಲಂಬಮಾನಾನಧೋಮುಖಾನ್||
ಇದೇ ಸಮಯದಲ್ಲಿ ಭಗವಾನ್ ಅಗಸ್ತ್ಯನು ಒಂದು ಬಾವಿಯಲ್ಲಿ ತಲೆಕೆಳಗಾಗಿ ನೇತಾಡುತ್ತಿರುವ ತನ್ನ ಪಿತೃಗಳನ್ನು ಕಂಡನು.
03094012a ಸೋಽಪೃಚ್ಚಲ್ಲಂಬಮಾನಾಂಸ್ತಾನ್ಭವಂತ ಇಹ ಕಿಂಪರಾಃ|
03094012c ಸಂತಾನಹೇತೋರಿತಿ ತೇ ತಮೂಚುರ್ಬ್ರಹ್ಮವಾದಿನಃ||
ಆ ರೀತಿಯಾಗಿ ನೇತಾಡುತ್ತಿರುವ ಅವರನ್ನು ಕೇಳಿದನು: “ನಿಮ್ಮ ತೊಂದರೆಯೇನು?” ಆಗ ಆ ಬ್ರಹ್ಮವಾದಿಗಳು “ಸಂತಾನ!” ಎಂದು ಹೇಳಿದರು.
03094013a ತೇ ತಸ್ಮೈ ಕಥಯಾಮಾಸುರ್ವಯಂ ತೇ ಪಿತರಃ ಸ್ವಕಾಃ|
03094013c ಗರ್ತಮೇತಮನುಪ್ರಾಪ್ತಾ ಲಂಬಾಮಃ ಪ್ರಸವಾರ್ಥಿನಃ||
ಅವನಿಗೆ ಹೇಳಿದರು: “ನಾವು ನಿನ್ನ ಸ್ವಂತ ಪಿತೃಗಳು. ಪ್ರಸವಾರ್ಥಿಗಳಾದ ನಾವು ಈ ಕೂಪದಲ್ಲಿ ನೇತಾಡುವ ಪರಿಸ್ಥಿತಿಗೆ ಬಂದಿಳಿದಿದ್ದೇವೆ.
03094014a ಯದಿ ನೋ ಜನಯೇಥಾಸ್ತ್ವಮಗಸ್ತ್ಯಾಪತ್ಯಮುತ್ತಮಂ|
03094014c ಸ್ಯಾನ್ನೋಽಸ್ಮಾನ್ನಿರಯಾನ್ಮೋಕ್ಷಸ್ತ್ವಂ ಚ ಪುತ್ರಾಪ್ನುಯಾ ಗತಿಂ||
ಅಗಸ್ತ್ಯ! ನೀನು ಉತ್ತಮ ಮಕ್ಕಳನ್ನೇನಾದರೂ ಪಡೆದರೆ ನಾವು ಈ ನರಕದಿಂದ ಮೋಕ್ಷಹೊಂದುತ್ತೇವೆ ಮತ್ತು ಪುತ್ರರಿಂದ ನೀನೂ ಕೂಡ ಗತಿಯನ್ನು ಹೊಂದುತ್ತೀಯೆ.”
03094015a ಸ ತಾನುವಾಚ ತೇಜಸ್ವೀ ಸತ್ಯಧರ್ಮಪರಾಯಣಃ|
03094015c ಕರಿಷ್ಯೇ ಪಿತರಃ ಕಾಮಂ ವ್ಯೇತು ವೋ ಮಾನಸೋ ಜ್ವರಃ||
ಆ ತೇಜಸ್ವೀ ಸತ್ಯಧರ್ಮಪರಾಯಣನು ಅವರಿಗೆ ಹೇಳಿದನು: “ಪಿತೃಗಳೇ! ನಿಮ್ಮ ಇಚ್ಛೆಯಂತೆಯೇ ಮಾಡುತ್ತೇನೆ. ನಿಮ್ಮ ಮನಸ್ಸಿನ ಜ್ವರವನ್ನು ತೊರೆಯಿರಿ.”
03094016a ತತಃ ಪ್ರಸವಸಂತಾನಂ ಚಿಂತಯನ್ಭಗವಾನೃಷಿಃ|
03094016c ಆತ್ಮನಃ ಪ್ರಸವಸ್ಯಾರ್ಥೇ ನಾಪಶ್ಯತ್ಸದೃಶೀಂ ಸ್ತ್ರಿಯಂ||
ಆಗ ಪ್ರಸವ ಸಂತಾನದ ಕುರಿತು ಚಿಂತಿಸುತ್ತಾ ಆ ಭಗವಾನ್ ಋಷಿಯು ತನ್ನ ಮಗುವನ್ನು ಹಡೆಯಬಲ್ಲಂಥ ಯಾವ ಸ್ತ್ರೀಯನ್ನೂ ಕಾಣಲಿಲ್ಲ.
03094017a ಸ ತಸ್ಯ ತಸ್ಯ ಸತ್ತ್ವಸ್ಯ ತತ್ತದಂಗಮನುತ್ತಮಂ|
03094017c ಸಂಭೃತ್ಯ ತತ್ಸಮೈರಂಗೈರ್ನಿರ್ಮಮೇ ಸ್ತ್ರಿಯಮುತ್ತಮಾಂ||
ಆಗ ಅವನು ಬೇರೆ ಬೇರೆ ಪ್ರಾಣಿಗಳಿಂದ ಅನುತ್ತಮವಾದ ಬೇರೆ ಬೇರೆ ಅಂಗಗಳನ್ನು ಒಟ್ಟುಹಾಕಿ, ಆ ಅಂಗಗಳಿಂದ ಒಂದು ಉತ್ತಮ ಸ್ತ್ರೀಯನ್ನು ನಿರ್ಮಿಸಿದನು.
03094018a ಸ ತಾಂ ವಿದರ್ಭರಾಜಾಯ ಪುತ್ರಕಾಮಾಯ ತಾಮ್ಯತೇ|
03094018c ನಿರ್ಮಿತಾಮಾತ್ಮನೋಽರ್ಥಾಯ ಮುನಿಃ ಪ್ರಾದಾನ್ಮಹಾತಪಾಃ||
ಆಗ ಆ ಮಹಾತಪಸ್ವಿ ಮುನಿಯು ಅವಳನ್ನು ತನಗಾಗಿ ಸುರಕ್ಷಿತವಾಗಿ ಇಟ್ಟುಕೊಳ್ಳುವಂತೆ ಪುತ್ರರನ್ನು ಬಯಸುತ್ತಿದ್ದ ವಿದರ್ಭರಾಜನಿಗೆ ಕೊಟ್ಟನು.
03094019a ಸಾ ತತ್ರ ಜಜ್ಞೇ ಸುಭಗಾ ವಿದ್ಯುತ್ಸೌದಾಮಿನೀ ಯಥಾ|
03094019c ವಿಭ್ರಾಜಮಾನಾ ವಪುಸಾ ವ್ಯವರ್ಧತ ಶುಭಾನನಾ||
ಅಲ್ಲಿ ಆ ಸುಭಗೆ ವಿದ್ಯುತ್ತಿನ ಮಾಲೆಯು ಜನಿಸಿದಳು ಮತ್ತು ಆ ಶುಭಾನನೆಯು ವಿಭ್ರಾಜಿಸುವ ಸೌಂದರ್ಯದಿಂದ ವೃದ್ಧಿಸಿದಳು.
03094020a ಜಾತಮಾತ್ರಾಂ ಚ ತಾಂ ದೃಷ್ಟ್ವಾ ವೈದರ್ಭಃ ಪೃಥಿವೀಪತಿಃ|
03094020c ಪ್ರಹರ್ಷೇಣ ದ್ವಿಜಾತಿಭ್ಯೋ ನ್ಯವೇದಯತ ಭಾರತ||
ಭಾರತ! ಅವಳು ಹುಟ್ಟಿದೊಡನೆಯೇ ಆ ಪೃಥ್ವೀಪತಿ ವೈದರ್ಭನು ಸಂತೋಷದಿಂದ ದ್ವಿಜರಿಗೆ ಅವಳನ್ನು ನಿವೇದಿಸಿದನು.
03094021a ಅಭ್ಯನಂದಂತ ತಾಂ ಸರ್ವೇ ಬ್ರಾಹ್ಮಣಾ ವಸುಧಾಧಿಪ|
03094021c ಲೋಪಾಮುದ್ರೇತಿ ತಸ್ಯಾಶ್ಚ ಚಕ್ರಿರೇ ನಾಮ ತೇ ದ್ವಿಜಾಃ||
ವಸುಧಾಧಿಪ! ಸರ್ವ ಬ್ರಾಹ್ಮಣರೂ ಅವಳನ್ನು ಸ್ವಾಗತಿಸಿದರು ಮತ್ತು ಆ ದ್ವಿಜರು ಅವಳಿಗೆ ಲೋಪಾಮುದ್ರ ಎನ್ನುವ ಹೆಸರನ್ನು ಇಟ್ಟರು.
03094022a ವವೃಧೇ ಸಾ ಮಹಾರಾಜ ಬಿಭ್ರತೀ ರೂಪಮುತ್ತಮಂ|
03094022c ಅಪ್ಸ್ವಿವೋತ್ಪಲಿನೀ ಶೀಘ್ರಮಗ್ನೇರಿವ ಶಿಖಾ ಶುಭಾ||
ಮಹಾರಾಜ! ಅವಳು ಅನುತ್ತಮ ರೂಪವಂತಳಾಗಿ ಕಾಂತಿಯುಕ್ತಳಾಗಿ, ನೀರಿನಲ್ಲಿ ತಾವರೆಯಂತೆ ಅಥವಾ ಶುಭ ಅಗ್ನಿಯ ಶಿಖೆಯಂತೆ ಬೇಗನೆ ಬೆಳೆದಳು.
03094023a ತಾಂ ಯೌವನಸ್ಥಾಂ ರಾಜೇಂದ್ರ ಶತಂ ಕನ್ಯಾಃ ಸ್ವಲಂಕೃತಾಃ|
03094023c ದಾಶೀಶತಂ ಚ ಕಲ್ಯಾಣೀಮುಪತಸ್ಥುರ್ವಶಾನುಗಾಃ||
ರಾಜೇಂದ್ರ! ಅವಳಿಗೆ ಯೌವನಪ್ರಾಪ್ತಿಯಾದಾಗ ಸ್ವಲಂಕೃತರಾದ ನೂರು ಕನ್ಯೆಯರು ಮತ್ತು ನೂರು ದಾಸಿಯರು ಆ ಕಲ್ಯಾಣಿಯ ಬೇಕುಬೇಡಗಳನ್ನು ನೋಡಿಕೊಳ್ಳುತ್ತಾ ಸೇವಿಸುತ್ತಿದ್ದರು.
03094024a ಸಾ ಸ್ಮ ದಾಸೀಶತವೃತಾ ಮಧ್ಯೇ ಕನ್ಯಾಶತಸ್ಯ ಚ|
03094024c ಆಸ್ತೇ ತೇಜಸ್ವಿನೀ ಕನ್ಯಾ ರೋಹಿಣೀವ ದಿವಿ ಪ್ರಭೋ||
ಪ್ರಭೋ! ಸುತ್ತುವರೆದ ನೂರು ದಾಸಿಯರ ಮತ್ತು ನೂರು ಕನ್ಯೆಯರ ಮಧ್ಯೆ ಆ ಕನ್ಯೆಯು ಆಕಾಶದಲ್ಲಿ ರೋಹಿಣಿಯಂತೆ ಬೆಳಗುತ್ತಿದ್ದಳು.
03094025a ಯೌವನಸ್ಥಾಮಪಿ ಚ ತಾಂ ಶೀಲಾಚಾರಸಮನ್ವಿತಾಂ|
03094025c ನ ವವ್ರೇ ಪುರುಷಃ ಕಶ್ಚಿದ್ಭಯಾತ್ತಸ್ಯ ಮಹಾತ್ಮನಃ||
ಯೌವನಸ್ಥೆಯಾಗಿದ್ದರೂ, ಶೀಲಾಚಾರ ಸಮನ್ವಿತಳಾಗಿದ್ದರೂ ಕೂಡ ಆ ಮಹಾತ್ಮನ ಭಯದಿಂದ ಯಾವ ಪುರುಷನೂ ಅವಳನ್ನು ವರಿಸಲಿಲ್ಲ.
03094026a ಸಾ ತು ಸತ್ಯವತೀ ಕನ್ಯಾ ರೂಪೇಣಾಪ್ಸರಸೋಽಪ್ಯತಿ|
03094026c ತೋಷಯಾಮಾಸ ಪಿತರಂ ಶೀಲೇನ ಸ್ವಜನಂ ತಥಾ||
ಆದರೂ ರೂಪದಲ್ಲಿ ಅಪ್ಸರೆಯರನ್ನೂ ಮೀರಿಸಿದ್ದ ಆ ಸತ್ಯವತಿ ಕನ್ಯೆಯು ತನ್ನ ಶೀಲದಿಂದ ತಂದೆ ಮತ್ತು ಸ್ವಜನರಿಗೆ ಸಂತೋಷವನ್ನು ತಂದಳು.
03094027a ವೈದರ್ಭೀಂ ತು ತಥಾಯುಕ್ತಾಂ ಯುವತೀಂ ಪ್ರೇಕ್ಷ್ಯ ವೈ ಪಿತಾ|
03094027c ಮನಸಾ ಚಿಂತಯಾಮಾಸ ಕಸ್ಮೈ ದದ್ಯಾಂ ಸುತಾಮಿತಿ||
ಆ ವೈದರ್ಭಿಯು ಹೀಗೆ ಯುವತಿಯಾಗಿದ್ದುದನ್ನು ನೊಡಿದ ಅವಳ ತಂದೆಯು ಈ ನನ್ನ ಮಗಳನ್ನು ಯಾರಿಗೆ ಕೊಡಲಿ? ಎಂದು ಮನಸ್ಸಿನಲ್ಲಿಯೇ ಚಿಂತಿಸಿದನು.”
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ತೀರ್ಥಯಾತ್ರಾಪರ್ವಣಿ ಲೋಮಶತೀರ್ಥಯಾತ್ರಾಯಾಂ ಅಗಸ್ತ್ಯೋಪಾಖ್ಯಾನೇ ಚತುರ್ನವತಿತಮೋಽಧ್ಯಾಯಃ|
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ತೀರ್ಥಯಾತ್ರಾಪರ್ವದಲ್ಲಿ ಲೋಮಶತೀರ್ಥಯಾತ್ರೆಯಲ್ಲಿ ಅಗಸ್ತ್ಯೋಪಾಖ್ಯಾನದಲ್ಲಿ ತೊಂಭತ್ನಾಲ್ಕನೆಯ ಅಧ್ಯಾಯವು.
Kannada translation of Tirthayatra Parva, by Chapter:
- ಪಾರ್ಥನಾರದಸಂವಾದ
- ಪುಲಸ್ತ್ಯತೀರ್ಥಯಾತ್ರಾ-೧
- ಪುಲಸ್ತ್ಯತೀರ್ಥಯಾತ್ರಾ-೨
- ಪುಲಸ್ತ್ಯತೀರ್ಥಯಾತ್ರಾ-೩
- ಧೌಮ್ಯತೀರ್ಥಯಾತ್ರಾ-೧
- ಧೌಮ್ಯತೀರ್ಥಯಾತ್ರಾ-೨
- ಧೌಮ್ಯತೀರ್ಥಯಾತ್ರಾ-೩
- ಧೌಮ್ಯತೀರ್ಥಯಾತ್ರಾ-೪
- ಧೌಮ್ಯತೀರ್ಥಯಾತ್ರಾ-೫
- ಲೋಮಶಸಂವಾದ-೧
- ಲೋಮಶಸಂವಾದ-೨
- ಲೋಮಶತೀರ್ಥಯಾತ್ರಾ
- ಲೋಮಶತೀರ್ಥಯಾತ್ರಾ
- ಲೋಮಶತೀರ್ಥಯಾತ್ರಾ
- ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೧
- ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೨
- ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೩
- ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೪
- ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೫
- ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೬
- ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೭
- ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೮
- ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೯
- ಲೋಮಶತೀರ್ಥಯಾತ್ರಾ – ಅಗಸ್ತ್ಯೋಪಾಖ್ಯಾನ-೧೦
- ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೧
- ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೨
- ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೩
- ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೪
- ಲೋಮಶತೀರ್ಥಯಾತ್ರಾ – ಸಗರಸಂತತಿಕಥನ-೫
- ಲೋಮಶತೀರ್ಥಯಾತ್ರಾ
- ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೧
- ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೨
- ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೩
- ಲೋಮಶತೀರ್ಥಯಾತ್ರಾ – ಋಷ್ಯಶೃಂಗೋಪಾಖ್ಯಾನ-೪
- ಲೋಮಶತೀರ್ಥಯಾತ್ರಾ - ಮಹೇಂದ್ರಾಚಲಗಮನ
- ಲೋಮಶತೀರ್ಥಯಾತ್ರಾ – ಕಾರ್ತವೀರ್ಯೋಪಾಖ್ಯಾನ-೧
- ಲೋಮಶತೀರ್ಥಯಾತ್ರಾ – ಕಾರ್ತವೀರ್ಯೋಪಾಖ್ಯಾನ-೨
- ಲೋಮಶತೀರ್ಥಯಾತ್ರಾ – ಕಾರ್ತವೀರ್ಯೋಪಾಖ್ಯಾನ-೩
- ಲೋಮಶತೀರ್ಥಯಾತ್ರಾ – ಪ್ರಭಾಸೇಯಾದವಪಾಂಡವಸಮಾಗಮ-೧
- ಲೋಮಶತೀರ್ಥಯಾತ್ರಾ – ಪ್ರಭಾಸೇಯಾದವಪಾಂಡವಸಮಾಗಮ-೨
- ಲೋಮಶತೀರ್ಥಯಾತ್ರಾ – ಪ್ರಭಾಸೇಯಾದವಪಾಂಡವಸಮಾಗಮ-೩
- ಲೋಮಶತೀರ್ಥಯಾತ್ರಾ – ಸುಕನ್ಯಾ-೧
- ಲೋಮಶತೀರ್ಥಯಾತ್ರಾ – ಸುಕನ್ಯಾ-೨
- ಲೋಮಶತೀರ್ಥಯಾತ್ರಾ – ಸುಕನ್ಯಾ-೩
- ಲೋಮಶತೀರ್ಥಯಾತ್ರಾ – ಸುಕನ್ಯಾ-೪
- ಲೋಮಶತೀರ್ಥಯಾತ್ರಾ – ಸುಕನ್ಯಾ-೫
- ಲೋಮಶತೀರ್ಥಯಾತ್ರಾ – ಮಾಂಧಾತೋಪಾಖ್ಯಾನ
- ಲೋಮಶತೀರ್ಥಯಾತ್ರಾ – ಜಂತೂಪಾಖ್ಯಾನ-೧
- ಲೋಮಶತೀರ್ಥಯಾತ್ರಾ – ಜಂತೂಪಾಖ್ಯಾನ-೨
- ಲೋಮಶತೀರ್ಥಯಾತ್ರಾ
- ಲೋಮಶತೀರ್ಥಯಾತ್ರಾ-ಶ್ಯೇನಕಪೋತೀಯ-೧
- ಲೋಮಶತೀರ್ಥಯಾತ್ರಾ-ಶ್ಯೇನಕಪೋತೀಯ-೨
- ಲೋಮಶತೀರ್ಥಯಾತ್ರಾ-ಅಷ್ಟಾವಕ್ರೀಯ-೧
- ಲೋಮಶತೀರ್ಥಯಾತ್ರಾ-ಅಷ್ಟಾವಕ್ರೀಯ-೨
- ಲೋಮಶತೀರ್ಥಯಾತ್ರಾ-ಅಷ್ಟಾವಕ್ರೀಯ-೩
- ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೧
- ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೨
- ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೩
- ಲೋಮಶತೀರ್ಥಯಾತ್ರಾ-ಯವಕ್ರೀತೋಪಾಖ್ಯಾನ-೪
- ಲೋಮಶತೀರ್ಥಯಾತ್ರಾ-ಕೈಲಾಸಾದಿಗಿರಿಪ್ರವೇಶ
- ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೧
- ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೨
- ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೩
- ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೪
- ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೫
- ಲೋಮಶತೀರ್ಥಯಾತ್ರಾ-ಗಂಧಮಾದನಪ್ರವೇಶ-೬
- ಲೋಮಶತೀರ್ಥಯಾತ್ರಾ-ಭೀಮಕದಲೀಶಂಡಪ್ರವೇಶ
- ಲೋಮಶತೀರ್ಥಯಾತ್ರಾ-ಹನುಮದ್ಭೀಮಸಂವಾದ-೧
- ಲೋಮಶತೀರ್ಥಯಾತ್ರಾ-ಹನುಮದ್ಭೀಮಸಂವಾದ-೨
- ಲೋಮಶತೀರ್ಥಯಾತ್ರಾ-ಹನುಮದ್ಭೀಮಸಂವಾದ-೩
- ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೧
- ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೨
- ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೩
- ಲೋಮಶತೀರ್ಥಯಾತ್ರಾ-ಸೌಗಂಧಿಕಾಹರಣ-೪