ಸಭಾ ಪರ್ವ: ದಿಗ್ವಿಜಯ ಪರ್ವ
೨೫
ಉತ್ತರ ದಿಕ್ಕನ್ನು ಗೆದ್ದು ಅರ್ಜುನನು ಮರಳಿದುದು (೧-೨೦).
02025001 ವೈಶಂಪಾಯನ ಉವಾಚ|
02025001a ಸ ಶ್ವೇತಪರ್ವತಂ ವೀರಃ ಸಮತಿಕ್ರಮ್ಯ ಭಾರತ|
02025001c ದೇಶಂ ಕಿಂಪುರುಷಾವಾಸಂ ದ್ರುಮಪುತ್ರೇಣ ರಕ್ಷಿತಂ||
ವೈಶಂಪಾಯನನು ಹೇಳಿದನು: “ಭಾರತ! ಶ್ವೇತಪರ್ವತವನ್ನು ದಾಟಿ ಆ ವೀರನು ದ್ರುಮಪುತ್ರನಿಂದ ರಕ್ಷಿತ ಕಿಂಪುರುಷರು ವಾಸಿಸುತ್ತಿದ್ದ ದೇಶಕ್ಕೆ ಬಂದನು.
02025002a ಮಹತಾ ಸನ್ನಿಪಾತೇನ ಕ್ಷತ್ರಿಯಾಂತಕರೇಣ ಹ|
02025002c ವ್ಯಜಯತ್ಪಾಂಡವಶ್ರೇಷ್ಠಃ ಕರೇ ಚೈವ ನ್ಯವೇಶಯತ್||
ಹಲವಾರು ಕ್ಷತ್ರಿಯರು ತಮ್ಮ ಅಂತ್ಯವನ್ನು ಕಂಡ ಆ ಮಹಾ ಯುದ್ಧದಲ್ಲಿ ಪಾಂಡವಶ್ರೇಷ್ಠನು ಅದನ್ನು ಗೆದ್ದು ಕರವನ್ನು ಪಡೆದುಕೊಂಡನು.
02025003a ತಂ ಜಿತ್ವಾ ಹಾಟಕಂ ನಾಮ ದೇಶಂ ಗುಹ್ಯಕರಕ್ಷಿತಂ|
02025003c ಪಾಕಶಾಸನಿರವ್ಯಗ್ರಃ ಸಹಸೈನ್ಯಃ ಸಮಾಸದತ್||
ಗುಹ್ಯಕರಿಂದ ರಕ್ಷಿತ ಹಾಟಕ ಎಂಬ ಹೆಸರಿನ ದೇಶವನ್ನು ಗೆದ್ದು ನಿರವ್ಯಗ್ರ ಪಾಕಶಾಸನಿಯು ಸೈನ್ಯದೊಂದಿಗೆ ಅಲ್ಲಿ ನೆಲಸಿದನು.
02025004a ತಾಂಸ್ತು ಸಾಂತ್ವೇನ ನಿರ್ಜಿತ್ಯ ಮಾನಸಂ ಸರ ಉತ್ತಮಂ|
02025004c ಋಷಿಕುಲ್ಯಾಶ್ಚ ತಾಃ ಸರ್ವಾ ದದರ್ಶ ಕುರುನಂದನಃ||
ಸಾಂತ್ವನದಿಂದ ಅವರನ್ನು ಗೆದ್ದು ಕುರುನಂದನನು ಋಷಿಕುಂಜರಗಳಿಂದ ಕೂಡಿದ್ದ ಉತ್ತಮ ಮಾನಸ ಸರೋವರವನ್ನು ಕಂಡನು.
02025005a ಸರೋ ಮಾನಸಮಾಸಾದ್ಯ ಹಾಟಕಾನಭಿತಃ ಪ್ರಭುಃ|
02025005c ಗಂಧರ್ವರಕ್ಷಿತಂ ದೇಶಂ ವ್ಯಜಯತ್ಪಾಂಡವಸ್ತತಃ||
ಮಾನಸ ಸರೋವರವನ್ನು ತಲುಪಿ ಪ್ರಭು ಪಾಂಡವನು ಹಾಟಕದ ಬಳಿಯಿರುವ ಗಂಧರ್ವರಿಂದ ರಕ್ಷಿತ ದೇಶವನ್ನು ಗೆದ್ದನು.
02025006a ತತ್ರ ತಿತ್ತಿರಿಕಲ್ಮಾಷಾನ್ಮಂಡೂಕಾಕ್ಷಾನ್ ಹಯೋತ್ತಮಾನ್|
02025006c ಲೇಭೇ ಸ ಕರಮತ್ಯಂತಂ ಗಂಧರ್ವನಗರಾತ್ತದಾ||
ಅಲ್ಲಿ ಗಂಧರ್ವ ನಗರದಲ್ಲಿ ಅವನು ತಿತ್ತಿರಿ ಬಣ್ಣದ ಕಪ್ಪೆಯಂತೆ ಕಣ್ಣುಗಳನ್ನು ಹೊಂದಿದ್ದ ಉತ್ತಮ ಕುದುರೆಗಳನ್ನು ಇನ್ನೂ ಇತರ ಕಾಣಿಕೆಗಳನ್ನು ಪಡೆದನು.
02025007a ಉತ್ತರಂ ಹರಿವರ್ಷಂ ತು ಸಮಾಸಾದ್ಯ ಸ ಪಾಂಡವಃ|
02025007c ಇಯೇಷ ಜೇತುಂ ತಂ ದೇಶಂ ಪಾಕಶಾಸನನಂದನಃ||
ಅನಂತರ ಪಾಕಶಾಸನ ನಂದನ ಪಾಂಡವನು ಉತ್ತರ ಹರಿವರ್ಷವನ್ನು ತಲುಪಿ ಆ ದೇಶವನ್ನು ಗೆಲ್ಲಲು ಬಯಸಿದನು.
02025008a ತತ ಏನಂ ಮಹಾಕಾಯಾ ಮಹಾವೀರ್ಯಾ ಮಹಾಬಲಾಃ|
02025008c ದ್ವಾರಪಾಲಾಃ ಸಮಾಸಾದ್ಯ ಹೃಷ್ಟಾ ವಚನಮಬ್ರುವನ್||
ಅಲ್ಲಿ ಮಹಾಕಾಯ, ಮಹಾವೀರ, ಮಹಾಬಲ ದ್ವಾರಪಾಲಕರು ಅವನ ಹತ್ತಿರ ಬಂದು ಸಂತೋಷದಿಂದ ಈ ಮಾತುಗಳನ್ನಾಡಿದರು:
02025009a ಪಾರ್ಥ ನೇದಂ ತ್ವಯಾ ಶಕ್ಯಂ ಪುರಂ ಜೇತುಂ ಕಥಂ ಚನ|
02025009c ಉಪಾವರ್ತಸ್ವ ಕಲ್ಯಾಣ ಪರ್ಯಾಪ್ತಮಿದಮಚ್ಯುತ||
“ಪಾರ್ಥ! ಯಾವ ರೀತಿಯಿಂದಲೂ ಈ ಪುರವನ್ನು ಜಯಿಸಲು ನೀನು ಶಕ್ಯನಿಲ್ಲ. ಅಚ್ಯುತ! ಕಲ್ಯಾಣ! ಹಿಂದಿರುಗು! ಇದೇ ನಿನಗೆ ಒಳ್ಳೆಯದಾಗುತ್ತದೆ!
02025010a ಇದಂ ಪುರಂ ಯಃ ಪ್ರವಿಶೇದ್ಧ್ರುವಂ ಸ ನ ಭವೇನ್ನರಃ|
02025010c ಪ್ರೀಯಾಮಹೇ ತ್ವಯಾ ವೀರ ಪರ್ಯಾಪ್ತೋ ವಿಜಯಸ್ತವ||
ಈ ಪುರವನ್ನು ಪ್ರವೇಶಿಸುವ ಯಾವ ನರನೂ ಸಾಯಲೇ ಬೇಕು. ವೀರ! ನಾವು ನಿನ್ನ ಮೇಲೆ ಪ್ರೀತಿಯನ್ನು ತೋರಿಸುತ್ತಿದ್ದೇವೆ. ನಿನ್ನ ವಿಜಯವನ್ನು ಇನ್ನು ಸಾಕುಮಾಡು.
02025011a ನ ಚಾಪಿ ಕಿಂ ಚಿಜ್ಜೇತವ್ಯಮರ್ಜುನಾತ್ರ ಪ್ರದೃಶ್ಯತೇ|
02025011c ಉತ್ತರಾಃ ಕುರವೋ ಹ್ಯೇತೇ ನಾತ್ರ ಯುದ್ಧಂ ಪ್ರವರ್ತತೇ||
ಅರ್ಜುನ! ನೀನು ಜಯಿಸಬೇಕಾದ್ದುದು ಇನ್ನು ಯಾವುದೂ ಉಳಿದಿಲ್ಲ. ಇದು ಉತ್ತರ ಕುರುಗಳ ರಾಷ್ರ ಮತ್ತು ಇಲ್ಲಿ ಯುದ್ಧ ಯಾವುದೂ ನಡೆಯುವುದಿಲ್ಲ.
02025012a ಪ್ರವಿಷ್ಟಶ್ಚಾಪಿ ಕೌಂತೇಯ ನೇಹ ದ್ರಕ್ಷ್ಯಸಿ ಕಿಂ ಚನ|
02025012c ನ ಹಿ ಮಾನುಷದೇಹೇನ ಶಕ್ಯಮತ್ರಾಭಿವೀಕ್ಷಿತುಂ||
ಕೌಂತೇಯ! ಒಂದು ವೇಳೆ ನೀನು ಇದನ್ನು ಪ್ರವೇಶಿಸಿದರೂ ನಿನಗೆ ಏನೂ ಕಾಣುವುದಿಲ್ಲ. ಯಾಕೆಂದರೆ ಇಲ್ಲಿರುವ ಏನನ್ನು ನೋಡಲು ಮನುಷ್ಯನಿಗೆ ಶಕ್ಯವಿಲ್ಲ.
02025013a ಅಥೇಹ ಪುರುಷವ್ಯಾಘ್ರ ಕಿಂ ಚಿದನ್ಯಚ್ಚಿಕೀರ್ಷಸಿ|
02025013c ತದ್ಬ್ರವೀಹಿ ಕರಿಷ್ಯಾಮೋ ವಚನಾತ್ತವ ಭಾರತ||
ಆದರೆ ಭಾರತ! ಪುರುಷವ್ಯಾಘ್ರ! ಇಲ್ಲಿ ಇನ್ನೇನನ್ನಾದರನ್ನೂ ಮಾಡಲು ಬಯಸುವೆಯಾದರೆ ಹೇಳು. ನಿನ್ನ ಮಾತನ್ನು ನಡೆಸಿಕೊಡುತ್ತೇವೆ.”
02025014a ತತಸ್ತಾನಬ್ರವೀದ್ರಾಜನ್ನರ್ಜುನಃ ಪಾಕಶಾಸನಿಃ|
02025014c ಪಾರ್ಥಿವತ್ವಂ ಚಿಕೀರ್ಷಾಮಿ ಧರ್ಮರಾಜಸ್ಯ ಧೀಮತಃ||
ರಾಜನ್! ಈ ಮಾತುಗಳಿಗೆ ಪಾಕಶಾಸನಿ ಅರ್ಜುನನು ಹೇಳಿದನು: “ಧೀಮಂತ ಧರ್ಮರಾಜನು ಪಾರ್ಥಿವತ್ವವನ್ನು ಬಯಸಿದ್ದಾನೆ.
02025015a ನ ಪ್ರವೇಕ್ಷ್ಯಾಮಿ ವೋ ದೇಶಂ ಬಾಧ್ಯತ್ವಂ ಯದಿ ಮಾನುಷೈಃ|
02025015c ಯುಧಿಷ್ಠಿರಾಯ ಯತ್ಕಿಂ ಚಿತ್ಕರವನ್ನಃ ಪ್ರದೀಯತಾಂ||
ಮನುಷ್ಯರಿಗೆ ಬಾಧ್ಯತ ನಿಮ್ಮ ದೇಶವನ್ನು ನಾನು ಪ್ರವೇಶಿಸುವುದಿಲ್ಲ. ಆದರೆ ಯುಧಿಷ್ಠಿರನಿಗೆ ಕರದ ರೂಪದಲ್ಲಿ ಏನನ್ನಾದರೂ ಕೊಡಬೇಕು.”
02025016a ತತೋ ದಿವ್ಯಾನಿ ವಸ್ತ್ರಾಣಿ ದಿವ್ಯಾನ್ಯಾಭರಣಾನಿ ಚ|
02025016c ಮೋಕಾಜಿನಾನಿ ದಿವ್ಯಾನಿ ತಸ್ಮೈ ತೇ ಪ್ರದದುಃ ಕರಂ||
ಆಗ ಅವರು ದಿವ್ಯ ವಸ್ತ್ರಗಳನ್ನು, ದಿವ್ಯ ಆಭರಣಗಳನ್ನೂ, ದಿವ್ಯ ಚರ್ಮಗಳನ್ನೂ ಕರವಾಗಿ ಅವನಿಗೆ ನೀಡಿದರು.
02025017a ಏವಂ ಸ ಪುರುಷವ್ಯಾಘ್ರೋ ವಿಜಿಗ್ಯೇ ದಿಶಮುತ್ತರಾಂ|
02025017c ಸಂಗ್ರಾಮಾನ್ಸುಬಹೂನ್ಕೃತ್ವಾ ಕ್ಷತ್ರಿಯೈರ್ದಸ್ಯುಭಿಸ್ತಥಾ||
02025018a ಸ ವಿನಿರ್ಜಿತ್ಯ ರಾಜ್ಞಸ್ತಾನ್ಕರೇ ಚ ವಿನಿವೇಶ್ಯ ಹ|
02025018c ಧನಾನ್ಯಾದಾಯ ಸರ್ವೇಭ್ಯೋ ರತ್ನಾನಿ ವಿವಿಧಾನಿ ಚ||
02025019a ಹಯಾಂಸ್ತಿತ್ತಿರಿಕಲ್ಮಾಷಾಂ ಶುಕಪತ್ರನಿಭಾನಪಿ|
02025019c ಮಯೂರಸದೃಶಾಂಶ್ಚಾನ್ಯಾನ್ಸರ್ವಾನನಿಲರಂಹಸಃ||
ಈ ರೀತಿ ಪುರುಷವ್ಯಾಘ್ರನು ಉತ್ತರ ದಿಶವನ್ನು ಗೆದ್ದು, ಕ್ಷತ್ರಿಯರು ಮತ್ತು ದಸ್ಯುಗಳೊಂದಿಗೆ ಬಹಳಷ್ಟು ಸಂಗ್ರಾಮಗಳನ್ನು ನಡೆಸಿ ಆ ರಾಜರನ್ನು ಗೆದ್ದು ಅವರು ಕರವನ್ನು ಕೊಡುವಂತೆ ಮಾಡಿ, ಅವರೆಲ್ಲರಿಂದ ವಿವಿಧ ಧನ, ರತ್ನಗಳು, ಚಿಟ್ಟೆಗಳ ಬಣ್ಣಗಳ ನವಿಲು ಮತ್ತು ಗಿಳಿಗಳ ರೆಕ್ಕೆಗಳ ಬಣ್ಣಗಳ, ಎಲ್ಲವೂ ವಾಯುವೇಗದ ಕುದುರೆಗಳನ್ನು ಪಡೆದನು.
02025020a ವೃತಃ ಸುಮಹತಾ ರಾಜನ್ಬಲೇನ ಚತುರಂಗಿಣಾ|
02025020c ಆಜಗಾಮ ಪುನರ್ವೀರಃ ಶಕ್ರಪ್ರಸ್ಥಂ ಪುರೋತ್ತಮಂ||
ರಾಜನ್! ಮಹತ್ತರ ಚತುರಂಗ ಬಲದಿಂದೊಡಗೂಡಿ ಆ ವೀರನು ಉತ್ತಮ ಶಕ್ರಪ್ರಸ್ಥ ಪುರವನ್ನು ಪುನಃ ಪ್ರವೇಶಿಸಿದನು.”
ಇತಿ ಶ್ರೀ ಮಹಾಭಾರತೇ ಸಭಾಪರ್ವಣಿ ದಿಗ್ವಿಜಯಪರ್ವಣಿ ಅರ್ಜುನೋತ್ತರದಿಗ್ವಿಜಯೇ ಪಂಚವಿಂಶೋಽಧ್ಯಾಯಃ||
ಇದು ಶ್ರೀ ಮಹಾಭಾರತದಲ್ಲಿ ಸಭಾಪರ್ವದಲ್ಲಿ ದಿಗ್ವಿಜಯಪರ್ವದಲ್ಲಿ ಅರ್ಜುನೋತ್ತರದಿಗ್ವಿಜಯ ಎನ್ನುವ ಇಪ್ಪತ್ತೈದನೆಯ ಅಧ್ಯಾಯವು.