Adi Parva: Chapter 186

ಆದಿ ಪರ್ವ: ವೈವಾಹಿಕ ಪರ್ವ

೧೮೬

ದ್ರುಪದನ ಮನೆಗೆ ಪಾಂಡವರು ಔತಣಕ್ಕೆ ಹೋದುದು (೧-೪). ಪಾಂಡವರನ್ನು ಗುರುತಿಸಲು ದ್ರುಪದನು ಅನೇಕ ವಸ್ತುಗಳನ್ನು ಒಟ್ಟುಹಾಕಿಸಿದುದು (೫-೧೫).

01186001 ದೂತ ಉವಾಚ|

01186001a ಜನ್ಯಾರ್ಥಮನ್ನಂ ದ್ರುಪದೇನ ರಾಜ್ಞಾ|

        ವಿವಾಹಹೇತೋರುಪಸಂಸ್ಕೃತಂ ಚ|

01186001c ತದಾಪ್ನುವಧ್ವಂ ಕೃತಸರ್ವಕಾರ್ಯಾಃ|

        ಕೃಷ್ಣಾ ಚ ತತ್ರೈವ ಚಿರಂ ನ ಕಾರ್ಯಂ||

ದೂತನು ಹೇಳಿದನು: “ವರನ ಕಡೆಯವರಿಗಾಗಿ ರಾಜ ದ್ರುಪದನು ಔತಣವನ್ನು ಏರ್ಪಡಿಸಿದ್ದಾನೆ. ಸರ್ವಕಾರ್ಯಗಳನ್ನೂ ಪೂರೈಸಿ ನೀವು ಕೃಷ್ಣೆಯೊಡನೆ ದ್ರುಪದನ ಅರಮನೆಗೆ ಬರಬೇಕು. ತಡಮಾಡಬಾರದು.

01186002a ಇಮೇ ರಥಾಃ ಕಾಂಚನಪದ್ಮಚಿತ್ರಾಃ|

        ಸದಶ್ವಯುಕ್ತಾ ವಸುಧಾಧಿಪಾರ್ಹಾಃ|

01186002c ಏತಾನ್ಸಮಾರುಹ್ಯ ಪರೈತ ಸರ್ವೇ|

        ಪಾಂಚಾಲರಾಜಸ್ಯ ನಿವೇಶನಂ ತತ್||

ಕಾಂಚನಪದ್ಮಚಿತ್ರಗಳಿಂದ ಅಲಂಕೃತ ಅಶ್ವಗಳು ಎಳೆಯುವ, ವಸುಧಾಧಿಪರಿಗೆ ಅರ್ಹ ರಥಗಳು ಇಲ್ಲಿವೆ. ನೀವೆಲ್ಲರೂ ಅವುಗಳನ್ನು ಏರಿ ಪಾಂಚಾಲರಾಜನ ನಿವೇಶನಕ್ಕೆ ಬನ್ನಿ.””

01186003 ವೈಶಂಪಾಯನ ಉವಾಚ|

01186003a ತತಃ ಪ್ರಯಾತಾಃ ಕುರುಪುಂಗವಾಸ್ತೇ|

        ಪುರೋಹಿತಂ ತಂ ಪ್ರಥಮಂ ಪ್ರಯಾಪ್ಯ|

01186003c ಆಸ್ಥಾಯ ಯಾನಾನಿ ಮಹಾಂತಿ ತಾನಿ|

        ಕುಂತೀ ಚ ಕೃಷ್ಣಾ ಚ ಸಹೈವ ಯಾತೇ||

ವೈಶಂಪಾಯನನು ಹೇಳಿದನು: “ನಂತರ ಕುರುಪುಂಗವರು ಆ ವಿಶಾಲ ರಥದಲ್ಲಿ ಮುಂದೆ ಪುರೋಹಿತನನ್ನು ಕೂರಿಸಿ ತಾವೂ ಕುಳಿತುಕೊಂಡು ಹೊರಟರು. ಕುಂತಿ ಮತ್ತು ಕೃಷ್ಣೆ ಇಬ್ಬರೂ ಇನ್ನೊಂದು ರಥದಲ್ಲಿ ಒಟ್ಟಿಗೆ ಕುಳಿತರು.

01186004a ಶ್ರುತ್ವಾ ತು ವಾಕ್ಯಾನಿ ಪುರೋಹಿತಸ್ಯ|

        ಯಾನ್ಯುಕ್ತವಾನ್ಭಾರತ ಧರ್ಮರಾಜಃ|

01186004c ಜಿಜ್ಞಾಸಯೈವಾಥ ಕುರೂತ್ತಮಾನಾಂ|

        ದ್ರವ್ಯಾಣ್ಯನೇಕಾನ್ಯುಪಸಂಜಹಾರ||

ಭಾರತ! ಧರ್ಮರಾಜನು ಹೇಳಿದ್ದುದನ್ನು ಪುರೋಹಿತನಿಂದ ಕೇಳಿದ ನಂತರ ದ್ರುಪದನು ಕುರುಗಳನ್ನು ಗುರುತಿಸುವುದಕ್ಕಾಗಿ ಅನೇಕ ದ್ರವ್ಯಗಳನ್ನು ಒಟ್ಟುಹಾಕಿಸಿದನು.

01186005a ಫಲಾನಿ ಮಾಲ್ಯಾನಿ ಸುಸಂಸ್ಕೃತಾನಿ|

        ಚರ್ಮಾಣಿ ವರ್ಮಾಣಿ ತಥಾಸನಾನಿ|

01186005c ಗಾಶ್ಚೈವ ರಾಜನ್ನಥ ಚೈವ ರಜ್ಜೂರ್-

        ದ್ರವ್ಯಾಣಿ ಚಾನ್ಯಾನಿ ಕೃಷೀನಿಮಿತ್ತಂ||

ರಾಜನ್! ಫಲಗಳು, ಸುಂದರವಾಗಿ ಹೆಣೆದ ಮಾಲೆಗಳು, ಚರ್ಮ, ವರ್ಮ, ಆಸನಗಳು, ಹಸುಗಳು, ಹಗ್ಗಗಳು, ಮತ್ತು ಕೃಷಿಗೆ ಸಂಬಂಧಿಸಿದ ಇತರ ದ್ರವ್ಯಗಳನ್ನು ತರಿಸಿದ್ದನು.

01186006a ಅನ್ಯೇಷು ಶಿಲ್ಪೇಷು ಚ ಯಾನ್ಯಪಿ ಸ್ಯುಃ|

        ಸರ್ವಾಣಿ ಕಲ್ಪಾನ್ಯಖಿಲೇನ ತತ್ರ|

01186006c ಕ್ರೀಡಾನಿಮಿತ್ತಾನಿ ಚ ಯಾನಿ ತಾನಿ|

        ಸರ್ವಾಣಿ ತತ್ರೋಪಜಹಾರ ರಾಜಾ||

ಶಿಲ್ಪ ಮತ್ತು ವ್ಯಾಪಾರಗಳಲ್ಲಿ ಬಳಸುವ ಅನ್ಯ ಸರ್ವ ವಸ್ತುಗಳನ್ನೂ, ಕ್ರೀಡೆಗಳಲ್ಲಿ ಬಳಸುವ ಸರ್ವವಸ್ತುಗಳನ್ನೂ ರಾಜನು ತರಿಸಿದ್ದನು.

01186007a ರಥಾಶ್ವವರ್ಮಾಣಿ ಚ ಭಾನುಮಂತಿ|

        ಖಡ್ಗಾ ಮಹಾಂತೋಽಶ್ವರಥಾಶ್ಚ ಚಿತ್ರಾಃ|

01186007c ಧನೂಂಷಿ ಚಾಗ್ರ್ಯಾಣಿ ಶರಾಶ್ಚ ಮುಖ್ಯಾಃ|

        ಶಕ್ತ್ಯೃಷ್ಟಯಃ ಕಾಂಚನಭೂಷಿತಾಶ್ಚ||

ಹೊಳೆಯುತ್ತಿರುವ ರಥ, ಅಶ್ವ, ಕವಚಗಳು, ಮಹಾ ಖಡ್ಗಗಳು, ಚಿತ್ರಣಗಳಿಂದ ಕೂಡಿದ ರಥಾಶ್ವಗಳು, ಆರಿಸಿದ್ದ ಬಿಲ್ಲುಗಳು, ಮುಖ್ಯ ಬಾಣಗಳು, ಭಲ್ಲಗಳು, ಮತ್ತು ಕಾಂಚನಭೂಷಿತ ಶಕ್ತಿ ಮುಂತಾದವುಗಳನ್ನೂ ತರಿಸಿದ್ದನು.

01186008a ಪ್ರಾಸಾ ಭುಶುಂಡ್ಯಶ್ಚ ಪರಶ್ವಧಾಶ್ಚ|

        ಸಾಂಗ್ರಾಮಿಕಂ ಚೈವ ತಥೈವ ಸರ್ವಂ|

01186008c ಶಯ್ಯಾಸನಾನ್ಯುತ್ತಮಸಂಸ್ಕೃತಾನಿ|

        ತಥೈವ ಚಾಸನ್ವಿವಿಧಾನಿ ತತ್ರ||

ಪ್ರಾಸಗಳು, ಭುಷುಂಡಗಳು, ಪರಶುಗಳು, ಮತ್ತು ಎಲ್ಲ ತರಹದ ಸಂಗ್ರಾಮ ಸಾಮಗ್ರಿಗಳನ್ನೂ, ಹಾಗೆಯೇ ಉತ್ತಮವಾಗಿ ತಯಾರಿಸಲ್ಪಟ್ಟ ವಿವಿಧ ಶಯ್ಯಾಸನಗಳನ್ನೂ ತರಿಸಿದ್ದನು.

01186009a ಕುಂತೀ ತು ಕೃಷ್ಣಾಂ ಪರಿಗೃಹ್ಯ ಸಾಧ್ವೀಂ|

        ಅಂತಃಪುರಂ ದ್ರುಪದಸ್ಯಾವಿವೇಷ|

01186009c ಸ್ತ್ರಿಯಶ್ಚ ತಾಂ ಕೌರವರಾಜಪತ್ನೀಂ|

        ಪ್ರತ್ಯರ್ಚಯಾಂ ಚಕ್ರುರದೀನಸತ್ತ್ವಾಃ||

ಕುಂತಿಯು ಸಾಧ್ವಿ ಕೃಷ್ಣೆಯನ್ನು ಕರೆದುಕೊಂಡು ದ್ರುಪದನ ಅಂತಃಪುರವನ್ನು ಪ್ರವೇಶಿಸಿದಳು. ಅಲ್ಲಿ ಉತ್ಸುಕ ಸ್ತ್ರೀಯರು ಕೌರವರಾಜಪತ್ನಿಯ ಉಪಚಾರದಲ್ಲಿ ತೊಡಗಿದರು.

01186010a ತಾನ್ಸಿಂಹವಿಕ್ರಾಂತಗತೀನವೇಕ್ಷ್ಯ|

        ಮಹರ್ಷಭಾಕ್ಷಾನಜಿನೋತ್ತರೀಯಾನ್|

01186010c ಗೂಢೋತ್ತರಾಂಸಾನ್ಭುಜಗೇಂದ್ರಭೋಗ|

        ಪ್ರಲಂಬಬಾಹೂನ್ಪುರುಷಪ್ರವೀರಾನ್||

01186011a ರಾಜಾ ಚ ರಾಜ್ಞಃ ಸಚಿವಾಶ್ಚ ಸರ್ವೇ|

        ಪುತ್ರಾಶ್ಚ ರಾಜ್ಞಃ ಸುಹೃದಸ್ತಥೈವ|

01186011c ಪ್ರೇಷ್ಯಾಶ್ಚ ಸರ್ವೇ ನಿಖಿಲೇನ ರಾಜನ್|

        ಹರ್ಷಂ ಸಮಾಪೇತುರತೀವ ತತ್ರ||

ರಾಜನ್! ಭುಜಗೇಂದ್ರನಂತೆ ಕೆತ್ತಿದ್ದ ನೀಳ ಬಾಹುಗಳ ಎಡಭುಜಗಳನ್ನು ಜಿನದ ಉತ್ತರೀಯದಿಂದ ಮುಚ್ಚಿ ಸಿಂಹವಿಕ್ರಾಂತರಂತೆ ನಡೆದು ಬರುತ್ತಿದ್ದ ಆ ಮಹರ್ಷಭ ಪುರುಷವೀರರನ್ನು ತಾವು ಇದ್ದಲ್ಲಿಂದಲೇ ನೋಡಿದ ರಾಜ ಮತ್ತು ರಾಜನ ಸರ್ವ ಸಚಿವರೂ, ರಾಜಪುತ್ರರೂ, ಸುಹೃದಯರೂ, ಸರ್ವ ನಿಖಿಲ ಪರಿಚಾರಕರೂ ಅತೀವ ಹರ್ಷಿತರಾದರು.

01186012a ತೇ ತತ್ರ ವೀರಾಃ ಪರಮಾಸನೇಷು|

        ಸಪಾದಪೀಠೇಷ್ವವಿಶಂಕಮಾನಾಃ|

01186012c ಯಥಾನುಪೂರ್ವ್ಯಾ ವಿವಿಶುರ್ನರಾಗ್ರ್ಯಾಸ್-

        ತದಾ ಮಹಾರ್ಹೇಷು ನ ವಿಸ್ಮಯಂತಃ||

ಆ ನರಾಗ್ರ ವೀರರು ಅಲ್ಲಿಯ ಮಹಾ ವೈಭವವನ್ನು ನೋಡಿ ಸ್ವಲ್ಪವೂ ವಿಸ್ಮಿತರಾಗದೇ ವಿಶಂಕರಾಗಿ ಪಾದಪೀಠಗಳನ್ನು ಹೊಂದಿದ್ದ ಉತ್ತಮ ಆಸನಗಳಲ್ಲಿ ವಯಸ್ಸಿಗನುಗುಣವಾಗಿ ಕುಳಿತುಕೊಂಡರು.

01186013a ಉಚ್ಚಾವಚಂ ಪಾರ್ಥಿವಭೋಜನೀಯಂ|

        ಪಾತ್ರೀಷು ಜಾಂಬೂನದರಾಜತೀಷು|

01186013c ದಾಸಾಶ್ಚ ದಾಸ್ಯಶ್ಚ ಸುಮೃಷ್ಟವೇಷಾಃ|

        ಭೋಜಾಪಕಾಶ್ಚಾಪ್ಯುಪಜಹ್ರುರನ್ನಂ||

ಸುಂದರ ಶುಭ್ರವಸ್ತ್ರಗಳನ್ನು ಧರಿಸಿದ ಅಡುಗೆಯವರು ತಯಾರಿಸಿದ ಪಾರ್ಥಿವರ ಭೋಜನಕ್ಕೆ ಯೋಗ್ಯ ಎಲ್ಲಾ ತರಹದ ಆಹಾರವನ್ನು ಚಿನ್ನ ಮತ್ತು ಬಂಗಾರದ ಪಾತ್ರೆಗಳಲ್ಲಿ ಸುಂದರ ಉಡುಪುಗಳನ್ನು ಧರಿಸಿದ್ದ ದಾಸ ದಾಸಿಯರು ನೀಡಿದರು.

01186014a ತೇ ತತ್ರ ಭುಕ್ತ್ವಾ ಪುರುಷಪ್ರವೀರಾ|

        ಯಥಾನುಕಾಮಂ ಸುಭೃಶಂ ಪ್ರತೀತಾಃ|

01186014c ಉತ್ಕ್ರಮ್ಯ ಸರ್ವಾಣಿ ವಸೂನಿ ತತ್ರ|

        ಸಾಂಗ್ರಾಮಿಕಾನ್ಯಾವಿವಿಶುರ್ನೃವೀರಾಃ||

ಆ ಪುರುಷಪ್ರವೀರರು ಭೋಜನವನ್ನು ಮುಗಿಸಿ, ಮನೋಕಾಮದಂತೆ ವಿಶ್ರಾಂತಿಪಡೆದು ಅಲ್ಲಿರಿಸಿದ್ದ ಸರ್ವ ವಸ್ತುಗಳನ್ನೂ ನೋಡುತ್ತಾ ಸಾಂಗ್ರಾಮಿಕ ವಸ್ತುಗಳ ಕಡೆಗೆ ಆ ವೀರರು ನಡೆದರು.

01186015a ತಲ್ಲಕ್ಷಯಿತ್ವಾ ದ್ರುಪದಸ್ಯ ಪುತ್ರೋ|

        ರಾಜಾ ಚ ಸರ್ವೈಃ ಸಹ ಮಂತ್ರಿಮುಖ್ಯೈಃ|

01186015c ಸಮರ್ಚಯಾಮಾಸುರುಪೇತ್ಯ ಹೃಷ್ಟಾಃ|

        ಕುಂತೀಸುತಾನ್ಪಾರ್ಥಿವಪುತ್ರಪೌತ್ರಾನ್||

ಅದನ್ನು ನೋಡಿದ ದ್ರುಪದನ ಪುತ್ರರು, ರಾಜ ಮತ್ತು ಜೊತೆಗಿದ್ದ ಸರ್ವ ಮಂತ್ರಿಪ್ರಮುಖರೂ ಹೃಷ್ಟರಾಗಿ ಪಾರ್ಥಿವ ಪುತ್ರಪೌತ್ರ ಕುಂತೀಸುತರನ್ನು ಉಪಚರಿಸಿದರು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ವೈವಾಹಿಕಪರ್ವಣಿ ಯುಧಿಷ್ಠಿರಾದಿಪರೀಕ್ಷಣೇ ಷಡಶೀತ್ಯಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ವೈವಾಹಿಕಪರ್ವದಲ್ಲಿ ಯುಧಿಷ್ಠಿರಾದಿಪರೀಕ್ಷಣದಲ್ಲಿ ನೂರಾಎಂಭತ್ತಾರನೆಯ ಅಧ್ಯಾಯವು.

Related image

Comments are closed.