Adi Parva: Chapter 156

ಆದಿ ಪರ್ವ: ಚೈತ್ರರಥ ಪರ್ವ

೧೫೬

ಕುಂತಿ ಮತ್ತು ಪಾಂಡವರು ಪಾಂಚಾಲನಗರಿಯ ಕಡೆ ಹೊರಡುವುದು (೧-೧೧).

01156001 ವೈಶಂಪಾಯನ ಉವಾಚ|

01156001a ಏತಚ್ಛೃತ್ವಾ ತು ಕೌಂತೇಯಾಃ ಶಲ್ಯವಿದ್ಧಾ ಇವಾಭವನ್|

01156001c ಸರ್ವೇ ಚಾಸ್ವಸ್ಥಮನಸೋ ಬಭೂವುಸ್ತೇ ಮಹಾರಥಾಃ||

ವೈಶಂಪಾಯನನು ಹೇಳಿದನು: “ಇದನ್ನು ಕೇಳಿದ ಮಹಾರಥಿ ಕೌಂತೇಯರು ಎಲ್ಲರೂ ಈಟಿ ಚುಚ್ಚಿದಂತವರಾಗಿ ಅಸ್ವಸ್ಥಮನಸ್ಕರಾದರು.

01156002a ತತಃ ಕುಂತೀ ಸುತಾನ್ದೃಷ್ಟ್ವಾ ವಿಭ್ರಾಂತಾನ್ಗತಚೇತಸಃ|

01156002c ಯುಧಿಷ್ಠಿರಮುವಾಚೇದಂ ವಚನಂ ಸತ್ಯವಾದಿನೀ||

ವಿಭ್ರಾಂತರಾಗಿ ಗತಚೇತಸರಾದ ಮಕ್ಕಳನ್ನು ನೋಡಿ ಸತ್ಯವಾದಿನೀ ಕುಂತಿಯು ಯುಧಿಷ್ಠಿರನಿಗೆ ಹೇಳಿದಳು:

01156003a ಚಿರರಾತ್ರೋಷಿತಾಃ ಸ್ಮೇಹ ಬ್ರಾಹ್ಮಣಸ್ಯ ನಿವೇಶನೇ|

01156003c ರಮಮಾಣಾಃ ಪುರೇ ರಮ್ಯೇ ಲಬ್ಧಭೈಕ್ಷಾ ಯುಧಿಷ್ಠಿರ||

“ಯುಧಿಷ್ಠಿರ! ಈ ಬ್ರಾಹ್ಮಣನ ಮನೆಯಲ್ಲಿದ್ದುಕೊಂಡು ಈ ರಮ್ಯ ಪುರದಲ್ಲಿ ಭಿಕ್ಷೆಬೇಡಿಕೊಂಡು ನಾವು ಬಹಳ ದಿನಗಳನ್ನು ಸುಖವಾಗಿ ಕಳೆದಿದ್ದೇವೆ. 

01156004a ಯಾನೀಹ ರಮಣೀಯಾನಿ ವನಾನ್ಯುಪವನಾನಿ ಚ|

01156004c ಸರ್ವಾಣಿ ತಾನಿ ದೃಷ್ಟಾನಿ ಪುನಃ ಪುನರರಿಂದಮ||

ಅರಿಂದಮ! ಇಲ್ಲಿರುವ ರಮಣೀಯ ವನ ಉಪವನಗಳೆಲ್ಲವನ್ನೂ ಪುನಃ ಪುನಃ ನೋಡಿಯಾಗಿದೆ.

01156005a ಪುನರ್ದೃಷ್ಟಾನಿ ತಾನ್ಯೇವ ಪ್ರೀಣಯಂತಿ ನ ನಸ್ತಥಾ|

01156005c ಭೈಕ್ಷಂ ಚ ನ ತಥಾ ವೀರ ಲಭ್ಯತೇ ಕುರುನಂದನ||

ಅವುಗಳನ್ನೇ ಪುನಃ ನೋಡಲು ಮನಸ್ಸಾಗಲಿಕ್ಕಿಲ್ಲ. ವೀರ ಕುರುನಂದನ! ನಮಗೆ ಇಲ್ಲಿ ಇನ್ನು ಭಿಕ್ಷವೂ ಅಷ್ಟೊಂದು ದೊರೆಯಲಿಕ್ಕಿಲ್ಲ.

01156006a ತೇ ವಯಂ ಸಾಧು ಪಾಂಚಾಲಾನ್ಗಚ್ಛಾಮ ಯದಿ ಮನ್ಯಸೇ|

01156006c ಅಪೂರ್ವದರ್ಶನಂ ತಾತ ರಮಣೀಯಂ ಭವಿಷ್ಯತಿ||

ಮಗು! ನೀನು ಒಪ್ಪಿಕೊಂಡರೆ ನಾವು ಅಪೂರ್ವದರ್ಶನವೂ ರಮಣೀಯವೂ ಆದ ಪಾಂಚಾಲರಲ್ಲಿಗೆ ಹೋಗುವುದು ಒಳ್ಳೆಯದೆನಿಸುತ್ತದೆ.

01156007a ಸುಭಿಕ್ಷಾಶ್ಚೈವ ಪಾಂಚಾಲಾಃ ಶ್ರೂಯಂತೇ ಶತ್ರುಕರ್ಶನ|

01156007c ಯಜ್ಞಸೇನಶ್ಚ ರಾಜಾಸೌ ಬ್ರಹ್ಮಣ್ಯ ಇತಿ ಶುಶ್ರುಮಃ||

ಶತ್ರುಕರ್ಶನ! ಪಾಂಚಾಲರಲ್ಲಿ ಸುಭಿಕ್ಷವಾಗಿದೆ ಎಂದು ಕೇಳಿದ್ದೇನೆ. ರಾಜ ಯಜ್ಞಸೇನನು ಬ್ರಹ್ಮಣ್ಯ ಎಂದೂ ಕೇಳಿದ್ದೇನೆ.

01156008a ಏಕತ್ರ ಚಿರವಾಸೋ ಹಿ ಕ್ಷಮೋ ನ ಚ ಮತೋ ಮಮ|

01156008c ತೇ ತತ್ರ ಸಾಧು ಗಚ್ಛಾಮೋ ಯದಿ ತ್ವಂ ಪುತ್ರ ಮನ್ಯಸೇ||

ಒಂದೇ ಸ್ಥಳದಲ್ಲಿ ಬಹಳ ಕಾಲ ವಾಸಮಾಡುವುದು ಸರಿಯಲ್ಲವೆಂದು ನನ್ನ ಅಭಿಪ್ರಾಯ. ಪುತ್ರ! ನೀನು ಒಪ್ಪಿಕೊಳ್ಳುವೆಯಾದರೆ ನಾವು ಅಲ್ಲಿಗೆ ಹೋಗುವುದು ನಮಗೆ ಒಳ್ಳೆಯದಾಗುತ್ತದೆ.”

01156009 ಯುಧಿಷ್ಠಿರ ಉವಾಚ|

01156009a ಭವತ್ಯಾ ಯನ್ಮತಂ ಕಾರ್ಯಂ ತದಸ್ಮಾಕಂ ಪರಂ ಹಿತಂ|

01156009c ಅನುಜಾಂಸ್ತು ನ ಜಾನಾಮಿ ಗಚ್ಛೇಯುರ್ನೇತಿ ವಾ ಪುನಃ||

ಯುಧಿಷ್ಠಿರನು ಹೇಳಿದನು: “ನೀನು ಬಯಸಿದ ಕಾರ್ಯವು ನಮಗೆ ಪರಮಹಿತವಾಗುತ್ತದೆ. ಆದರೆ ನನ್ನ ಅನುಜರು ಹೋಗಲು ಬಯಸುತ್ತಾರೋ ಇಲ್ಲವೋ ಗೊತ್ತಿಲ್ಲ.””

01156010 ವೈಶಂಪಾಯನ ಉವಾಚ|

01156010a ತತಃ ಕುಂತೀ ಭೀಮಸೇನಮರ್ಜುನಂ ಯಮಜೌ ತಥಾ|

01156010c ಉವಾಚ ಗಮನಂ ತೇ ಚ ತಥೇತ್ಯೇವಾಬ್ರುವಂಸ್ತದಾ||

ವೈಶಂಪಾಯನನು ಹೇಳಿದನು: “ಆಗ ಕುಂತಿಯು ಹೊರಡುವುದರ ಕುರಿತು ಭೀಮಸೇನ, ಅರ್ಜುನ ಮತ್ತು ಯಮಳರಿಗೆ ಹೇಳಿದಾಗ, ಅವರೆಲ್ಲರೂ ಹಾಗೆಯೇ ಆಗಲಿ ಎಂದರು.

01156011a ತತ ಆಮಂತ್ರ್ಯ ತಂ ವಿಪ್ರಂ ಕುಂತೀ ರಾಜನ್ಸುತೈಃ ಸಹ|

01156011c ಪ್ರತಸ್ಥೇ ನಗರೀಂ ರಮ್ಯಾಂ ದ್ರುಪದಸ್ಯ ಮಹಾತ್ಮನಃ||

ರಾಜನ್! ಆ ವಿಪ್ರನನ್ನು ಬೀಳ್ಕೊಂಡು ಪುತ್ರರ ಸಹಿತ ಕುಂತಿಯು ಮಹಾತ್ಮ ದ್ರುಪದನ ರಮ್ಯ ನಗರಿಗೆ ಹೊರಟಳು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ಪಾಂಚಾಲದೇಶಯಾತ್ರಾಯಾಂ ಷಟ್‌ಪಂಚಾದಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ಪಾಂಚಾಲದೇಶಯಾತ್ರೆಯಲ್ಲಿ ನೂರಾಐವತ್ತಾರನೆಯ ಅಧ್ಯಾಯವು.

Related image

Comments are closed.