Adi Parva: Chapter 154

ಆದಿ ಪರ್ವ: ಚೈತ್ರರಥ ಪರ್ವ

೧೫೪

ದ್ರುಪದ-ದ್ರೋಣರ ಸಖ್ಯ (೧-೭). ದ್ರೋಣನು ಪರಶುರಾಮನಿಂದ ಅಸ್ತ್ರಗಳನ್ನು ಪಡೆದುದು (೮-೧೩). ದ್ರುಪದನಿಂದ ದ್ರೋಣನ ಅಪಮಾನ (೧೪-೧೬). ದ್ರೋಣನು ಕೌರವ-ಪಾಂಡವರಿಂದ ಗುರುದಕ್ಷಿಣೆಯನ್ನಾಗಿ ದ್ರುಪದನನ್ನು ಕೇಳಿದುದು (೧೭-೨೨). ಸೆರೆಯಾಗಿ ಬಂದ ದ್ರುಪದನ ಅರ್ಧರಾಜ್ಯವನ್ನು ಇಟ್ಟುಕೊಂಡು ಉಳಿದರ್ಧವನ್ನು ಹಿಂದಿರುಗಿ ಕೊಟ್ಟಿದ್ದುದು (೨೩-೨೫).

01154001 ಬ್ರಾಹ್ಮಣ ಉವಾಚ|

01154001a ಗಂಗಾದ್ವಾರಂ ಪ್ರತಿ ಮಹಾನ್ಬಭೂವರ್ಷಿರ್ಮಹಾತಪಾಃ|

01154001c ಭರದ್ವಾಜೋ ಮಹಾಪ್ರಾಜ್ಞಃ ಸತತಂ ಸಂಶಿತವ್ರತಃ||

ಬ್ರಾಹ್ಮಣನು ಹೇಳಿದನು: “ಗಂಗಾದ್ವಾರದ ಬಳಿಯಲ್ಲಿ ಮಹಾತಪಸ್ವಿ, ಮಹಾನೃಷಿ, ಮಹಾಪ್ರಾಜ್ಞ, ಸತತ ಸಂಶಿತವ್ರತ ಭರದ್ವಾಜನಿದ್ದನು.

01154002a ಸೋಽಭಿಷೇಕ್ತುಂ ಗತೋ ಗಂಗಾಂ ಪೂರ್ವಮೇವಾಗತಾಂ ಸತೀಂ|

01154002c ದದರ್ಶಾಪ್ಸರಸಂ ತತ್ರ ಘೃತಾಚೀಮಾಪ್ಲುತಾಮೃಷಿಃ||

ಒಮ್ಮೆ ಅವನು ಗಂಗೆಯಲ್ಲಿ ಸ್ನಾನಕ್ಕೆಂದು ಹೋದಾಗ ಅಲ್ಲಿಗೆ ಮೊದಲೇ ಬಂದು ಅಷ್ಟೇ ಸ್ನಾನವನ್ನು ಮುಗಿಸಿದ್ದ ಸತಿ ಅಪ್ಸರೆ ಘೃತಾಚಿಯನ್ನು ನೋಡಿದನು.

01154003a ತಸ್ಯಾ ವಾಯುರ್ನದೀತೀರೇ ವಸನಂ ವ್ಯಹರತ್ತದಾ|

01154003c ಅಪಕೃಷ್ಟಾಂಬರಾಂ ದೃಷ್ಟ್ವಾ ತಾಮೃಷಿಶ್ಚಕಮೇ ತತಃ||

ನದೀತೀರದಲ್ಲಿ ನಿಂತಿರುವಾಗ ವಾಯುವು ಅವಳ ವಸ್ತ್ರವನ್ನು ಹಾರಿಸಿದನು ಮತ್ತು ನಗ್ನಳಾದವಳನ್ನು ನೋಡಿ ಋಷಿಯು ಅವಳನ್ನು ಕಾಮಿಸಿದನು.

01154004a ತಸ್ಯಾಂ ಸಂಸಕ್ತಮನಸಃ ಕೌಮಾರಬ್ರಹ್ಮಚಾರಿಣಃ|

01154004c ಹೃಷ್ಟಸ್ಯ ರೇತಶ್ಚಸ್ಕಂದ ತದೃಷಿರ್ದ್ರೋಣ ಆದಧೇ||

ಮನಸ್ಸನ್ನು ಅವಳಲ್ಲೇ ಅನುರಕ್ತಗೊಳಿಸಿದ ಆ ಕೌಮಾರ ಬ್ರಹ್ಮಚಾರಿಯು ಹೃಷ್ಟನಾಗಿ ರೇತಸ್ಖಲನವಾಯಿತು. ಅದನ್ನು ಋಷಿಯು ಒಂದು ದೊನ್ನೆಯಲ್ಲಿ ಇರಿಸಿದನು.

01154005a ತತಃ ಸಮಭವದ್ದ್ರೋಣಃ ಕುಮಾರಸ್ತಸ್ಯ ಧೀಮತಃ|

01154005c ಅಧ್ಯಗೀಷ್ಟ ಸ ವೇದಾಂಶ್ಚ ವೇದಾಂಗಾನಿ ಚ ಸರ್ವಶಃ||

ಅಲ್ಲಿಂದಲೇ ಅವನಿಗೆ ಧೀಮಂತ ಕುಮಾರ ದ್ರೋಣನು ಹುಟ್ಟಿದನು. ಅವನು ವೇದ ಮತ್ತು ವೇದಾಂಗಗಳೆಲ್ಲವನ್ನೂ ಅಧ್ಯಯನ ಮಾಡಿದನು.

01154006a ಭರದ್ವಾಜಸ್ಯ ತು ಸಖಾ ಪೃಷತೋ ನಾಮ ಪಾರ್ಥಿವಃ|

01154006c ತಸ್ಯಾಪಿ ದ್ರುಪದೋ ನಾಮ ತದಾ ಸಮಭವತ್ಸುತಃ||

ಪೃಷತ ಎಂಬ ಹೆಸರಿನ ಪಾರ್ಥಿವನು ಭರದ್ವಾಜನ ಸಖನಾಗಿದ್ದನು. ಅವನಿಗೂ ದ್ರುಪದ ಎಂಬ ಹೆಸರಿನ ಸುತನಿದ್ದನು.

01154007a ಸ ನಿತ್ಯಮಾಶ್ರಮಂ ಗತ್ವಾ ದ್ರೋಣೇನ ಸಹ ಪಾರ್ಷತಃ|

01154007c ಚಿಕ್ರೀಡಾಧ್ಯಯನಂ ಚೈವ ಚಕಾರ ಕ್ಷತ್ರಿಯರ್ಷಭಃ||

ಆ ಕ್ಷತ್ರಿಯರ್ಷಭ ಪಾರ್ಷತನು ನಿತ್ಯವೂ ಆಶ್ರಮಕ್ಕೆ ಹೋಗಿ ದ್ರೋಣನ ಸಹಿತ ಅಧ್ಯಯನ ಮಾಡುತ್ತಿದ್ದನು ಮತ್ತು ಆಟವಾಡುತ್ತಿದ್ದನು. 

01154008a ತತಸ್ತು ಪೃಷತೇಽತೀತೇ ಸ ರಾಜಾ ದ್ರುಪದೋಽಭವತ್|

01154008c ದ್ರೋಣೋಽಪಿ ರಾಮಂ ಶುಶ್ರಾವ ದಿತ್ಸಂತಂ ವಸು ಸರ್ವಶಃ||

01154009a ವನಂ ತು ಪ್ರಸ್ಥಿತಂ ರಾಮಂ ಭರದ್ವಾಜಸುತೋಽಬ್ರವೀತ್|

01154009c ಆಗತಂ ವಿತ್ತಕಾಮಂ ಮಾಂ ವಿದ್ಧಿ ದ್ರೋಣಂ ದ್ವಿಜರ್ಷಭ||

ಪೃಷತನ ಅತೀತದ ನಂತರ ದ್ರುಪದನು ರಾಜನಾದನು. ರಾಮನು ತನ್ನ ಸರ್ವ ಸಂಪತ್ತನ್ನೂ ಕೊಡುತ್ತಿದ್ದಾನೆ ಎಂದು ಕೇಳಿದ ಭರದ್ವಾಜಸುತ ದ್ರೋಣನು ವನಕ್ಕೆ ತೆರಳುತ್ತಿದ್ದ ರಾಮನಿಗೆ ಹೇಳಿದನು: “ದ್ವಿಜರ್ಷಭ! ವಿತ್ತವನ್ನು ಅಪೇಕ್ಷಿಸಿ ಬಂದಿರುವ ನನ್ನನ್ನು ದ್ರೋಣನೆಂದು ತಿಳಿ.”

01154010 ರಾಮ ಉವಾಚ|

01154010a ಶರೀರಮಾತ್ರಮೇವಾದ್ಯ ಮಯೇದಮವಶೇಷಿತಂ|

01154010c ಅಸ್ತ್ರಾಣಿ ವಾ ಶರೀರಂ ವಾ ಬ್ರಹ್ಮನ್ನನ್ಯತರಂ ವೃಣು||

ರಾಮನು ಹೇಳಿದನು: “ನನ್ನ ಈ ದೇಹವೊಂದೇ ಇಂದು ಉಳಿದಿದೆ. ಬ್ರಾಹ್ಮಣ! ನನ್ನ ಅಸ್ತ್ರಗಳನ್ನು ಅಥವಾ ನನ್ನ ಈ ಶರೀರವನ್ನು ವರವನ್ನಾಗಿ ಕೇಳಿಕೋ.”

01154011 ದ್ರೋಣ ಉವಾಚ|

01154011a ಅಸ್ತ್ರಾಣಿ ಚೈವ ಸರ್ವಾಣಿ ತೇಷಾಂ ಸಂಹಾರಮೇವ ಚ|

01154011c ಪ್ರಯೋಗಂ ಚೈವ ಸರ್ವೇಷಾಂ ದಾತುಮರ್ಹತಿ ಮೇ ಭವಾನ್||

ದ್ರೋಣನು ಹೇಳಿದನು: “ನಿನ್ನ ಸರ್ವ ಅಸ್ತ್ರಗಳನ್ನೂ ನೀಡು. ಅವುಗಳ ಪ್ರಯೋಗ ಮತ್ತು ಸಂಹಾರಗಳ ಕುರಿತು ಸರ್ವವನ್ನೂ ನನಗೆ ನೀಡಬೇಕು.””

01154012 ಬ್ರಾಹ್ಮಣ ಉವಾಚ|

01154012a ತಥೇತ್ಯುಕ್ತ್ವಾ ತತಸ್ತಸ್ಮೈ ಪ್ರದದೌ ಭೃಗುನಂದನಃ|

01154012c ಪ್ರತಿಗೃಹ್ಯ ತತೋ ದ್ರೋಣಃ ಕೃತಕೃತ್ಯೋಽಭವತ್ತದಾ||

ಬ್ರಾಹ್ಮಣನು ಹೇಳಿದನು: “ಹಾಗೆಯೇ ಆಗಲಿ ಎಂದು ಆ ಭೃಗುನಂದನನು ಅವುಗಳನ್ನು ನೀಡಲು ಒಪ್ಪಿದನು. ದ್ರೋಣನು ಅವುಗಳನ್ನು ಪಡೆದು ಕೃತಕೃತ್ಯನಾದನು.

01154013a ಸಂಪ್ರಹೃಷ್ಟಮನಾಶ್ಚಾಪಿ ರಾಮಾತ್ಪರಮಸಮ್ಮತಂ|

01154013c ಬ್ರಹ್ಮಾಸ್ತ್ರಂ ಸಮನುಪ್ರಾಪ್ಯ ನರೇಷ್ವಭ್ಯಧಿಕೋಽಭವತ್||

ರಾಮನಿಂದ ಅವನು ನರರಲ್ಲಿರುವುದೆಲ್ಲಕ್ಕಿಂತಲೂ ಅಧಿಕ ಪರಮ ಸಮ್ಮತ ಬ್ರಹ್ಮಾಸ್ತ್ರವನ್ನು ಸಂಪ್ರಹೃಷ್ಟಮನಸ್ಕನಾಗಿ ಸ್ವೀಕರಿಸಿದನು.

01154014a ತತೋ ದ್ರುಪದಮಾಸಾದ್ಯ ಭಾರದ್ವಾಜಃ ಪ್ರತಾಪವಾನ್|

01154014c ಅಬ್ರವೀತ್ಪುರುಷವ್ಯಾಘ್ರಃ ಸಖಾಯಂ ವಿದ್ಧಿ ಮಾಮಿತಿ||

ನಂತರ ಪ್ರತಾಪಿ ಭಾರದ್ವಾಜನು ದ್ರುಪದನ ಬಳಿ ಹೋಗಿ “ಪುರುಷವ್ಯಾಘ್ರ! ನನ್ನನ್ನು ನಿನ್ನ ಸಖನೆಂದು ತಿಳಿ” ಎಂದನು.

01154015 ದ್ರುಪದ ಉವಾಚ|

01154015a ನಾಶ್ರೋತ್ರಿಯಃ ಶ್ರೋತ್ರಿಯಸ್ಯ ನಾರಥೀ ರಥಿನಃ ಸಖಾ|

01154015c ನಾರಾಜಾ ಪಾರ್ಥಿವಸ್ಯಾಪಿ ಸಖಿಪೂರ್ವಂ ಕಿಮಿಷ್ಯತೇ||

ದ್ರುಪದನು ಹೇಳಿದನು: “ಅಶ್ರೋತ್ರಿಯು ಶ್ರೋತ್ರಿಯ, ಅರಥಿಯು ರಥಿಯ, ಮತ್ತು ಪಾರ್ಥಿವನೋರ್ವನು ರಾಜನಲ್ಲದವನ ಸಖನಾಗಲು ಸಾಧ್ಯವಿಲ್ಲ. ಹಳೆಯ ಸಖನು ಯಾರಿಗೆ ತಾನೇ ಬೇಕು?””

01154016 ಬ್ರಾಹ್ಮಣ ಉವಾಚ|

01154016a ಸ ವಿನಿಶ್ಚಿತ್ಯ ಮನಸಾ ಪಾಂಚಾಲ್ಯಂ ಪ್ರತಿ ಬುದ್ಧಿಮಾನ್|

01154016c ಜಗಾಮ ಕುರುಮುಖ್ಯಾನಾಂ ನಗರಂ ನಾಗಸಾಹ್ವಯಂ||

ಬ್ರಾಹ್ಮಣನು ಹೇಳಿದನು: “ಆ ಬುದ್ಧಿವಂತನು ಮನಸ್ಸಿನಲ್ಲಿಯೇ ಪಾಂಚಾಲ್ಯನ ವಿರುದ್ಧ ನಿಶ್ಚಯಿಸಿ ಕುರುಮುಖ್ಯರ ನಗರ ನಾಗಸಾಹ್ವಯಕ್ಕೆ ಹೋದನು.

01154017a ತಸ್ಮೈ ಪೌತ್ರಾನ್ಸಮಾದಾಯ ವಸೂನಿ ವಿವಿಧಾನಿ ಚ|

01154017c ಪ್ರಾಪ್ತಾಯ ಪ್ರದದೌ ಭೀಷ್ಮಃ ಶಿಷ್ಯಾನ್ದ್ರೋಣಾಯ ಧೀಮತೇ||

ಆಗಮಿಸಿದ ಧೀಮಂತ ದ್ರೋಣನಿಗೆ ಭೀಷ್ಮನು ವಿವಿಧ ಸಂಪತ್ತುಗಳನ್ನು ಕೊಟ್ಟು ತನ್ನ ಮೊಮ್ಮಕ್ಕಳನ್ನು ಶಿಷ್ಯರನ್ನಾಗಿ ಒಪ್ಪಿಸಿದನು.

01154018a ದ್ರೋಣಃ ಶಿಷ್ಯಾಂಸ್ತತಃ ಸರ್ವಾನಿದಂ ವಚನಮಬ್ರವೀತ್|

01154018c ಸಮಾನೀಯ ತದಾ ವಿದ್ವಾನ್ದ್ರುಪದಸ್ಯಾಸುಖಾಯ ವೈ||

ದ್ರುಪದನಿಗೆ ಕೇಡನ್ನು ಬಯಸಿದ ವಿದ್ವಾನ್ ದ್ರೋಣನು ಎಲ್ಲ ಶಿಷ್ಯರನ್ನೂ ಕರೆದು ಈ ಮಾತುಗಳನ್ನಾಡಿದನು:

01154019a ಆಚಾರ್ಯವೇತನಂ ಕಿಂ ಚಿದ್ಧೃದಿ ಸಂಪರಿವರ್ತತೇ|

01154019c ಕೃತಾಸ್ತ್ರೈಸ್ತತ್ಪ್ರದೇಯಂ ಸ್ಯಾತ್ತದೃತಂ ವದತಾನಘಾಃ||

“ಗುರುದಕ್ಷಿಣೆಯಾಗಿ ಪಡೆಯಬೇಕೆಂದು ನನ್ನ ಮನಸ್ಸಿನಲ್ಲಿ ಒಂದು ವಿಚಾರವಿದೆ. ಅನಘರೇ! ಕೃತಾಸ್ತ್ರರಾದನಂತರ ನೀವು ನನಗೆ ಅದನ್ನು ನಿಜವಾಗಿಯೂ ಕೊಡುತ್ತೀರಿ ಎಂದು ಭರವಸೆಯನ್ನು ನೀಡಿ.”

01154020a ಯದಾ ಚ ಪಾಂಡವಾಃ ಸರ್ವೇ ಕೃತಾಸ್ತ್ರಾಃ ಕೃತನಿಶ್ರಮಾಃ|

01154020c ತತೋ ದ್ರೋಣೋಽಬ್ರವೀದ್ಭೂಯೋ ವೇತನಾರ್ಥಮಿದಂ ವಚಃ||

ಪಾಂಡವರೆಲ್ಲರೂ ಕೃತಾಸ್ತ್ರರೂ ಕೃತನಿಶ್ರಮರೂ ಆದ ನಂತರ ದ್ರೋಣನು ಪುನಃ ವೇತನದ ಕುರಿತು ಕೇಳಿದನು.

01154021a ಪಾರ್ಷತೋ ದ್ರುಪದೋ ನಾಮ ಚತ್ರವತ್ಯಾಂ ನರೇಶ್ವರಃ|

01154021c ತಸ್ಯಾಪಕೃಷ್ಯ ತದ್ರಾಜ್ಯಂ ಮಮ ಶೀಘ್ರಂ ಪ್ರದೀಯತಾಂ||

“ಚತ್ರವತಿಯಲ್ಲಿ ಪಾರ್ಷತ ದ್ರುಪದನೆಂಬ ಹೆಸರಿನ ನರೇಶ್ವರನಿದ್ದಾನೆ. ಶೀಘ್ರದಲ್ಲಿಯೇ ಅವನ ರಾಜ್ಯವನ್ನು ಅವನಿಂದ ಗೆದ್ದು ನನಗೆ ನೀಡಿ!”

01154022a ತತಃ ಪಾಂಡುಸುತಾಃ ಪಂಚ ನಿರ್ಜಿತ್ಯ ದ್ರುಪದಂ ಯುಧಿ|

01154022c ದ್ರೋಣಾಯ ದರ್ಶಯಾಮಾಸುರ್ಬದ್ಧ್ವಾ ಸಸಚಿವಂ ತದಾ||

ಆಗ ಪಂಚ ಪಾಂಡುಸುತರು ದ್ರುಪದನನ್ನು ಯುದ್ಧದಲ್ಲಿ ನಿರ್ಜಯಿಸಿ ಸಚಿವ ಸಹಿತ ಅವನನ್ನು ಬಂಧಿಸಿ ದ್ರೋಣನಲ್ಲಿಗೆ ಕರೆತಂದರು.

01154023 ದ್ರೋಣ ಉವಾಚ|

01154023a ಪ್ರಾರ್ಥಯಾಮಿ ತ್ವಯಾ ಸಖ್ಯಂ ಪುನರೇವ ನರಾಧಿಪ|

01154023c ಅರಾಜಾ ಕಿಲ ನೋ ರಾಜ್ಞಃ ಸಖಾ ಭವಿತುಮರ್ಹತಿ||

ದ್ರೋಣನು ಹೇಳಿದನು: “ನರಾಧಿಪ! ನಿನ್ನಿಂದ ಸಖ್ಯವನ್ನು ಪುನಃ ಪ್ರಾರ್ಥಿಸುತ್ತಿದ್ದೇನೆ. ಯಾವ ರಾಜನೂ ರಾಜನಲ್ಲದವನ ಸಖ್ಯನಾಗಲಾರ ಎಂದು ನಿನಗೆ ತಿಳಿದೇ ಇದೆ.

01154024a ಅತಃ ಪ್ರಯತಿತಂ ರಾಜ್ಯೇ ಯಜ್ಞಸೇನ ಮಯಾ ತವ|

01154024c ರಾಜಾಸಿ ದಕ್ಷಿಣೇ ಕೂಲೇ ಭಾಗೀರಥ್ಯಾಹಮುತ್ತರೇ||

ಆದುದರಿಂದ ಯಜ್ಞಸೇನ! ನಾನು ನಿನ್ನ ರಾಜ್ಯಕ್ಕಾಗಿ ಪ್ರಯತ್ನಿಸಿದೆ. ನೀನು ಭಾಗೀರಥಿಯ ದಕ್ಷಿಣದಲ್ಲಿ ರಾಜನಾಗಿರು ಮತ್ತು ನಾನು ಉತ್ತರದಲ್ಲಿ ರಾಜನಾಗಿರುತ್ತೇನೆ.””

01154025 ಬ್ರಾಹ್ಮಣ ಉವಾಚ|

01154025a ಅಸತ್ಕಾರಃ ಸ ಸುಮಹಾನ್ಮುಹೂರ್ತಮಪಿ ತಸ್ಯ ತು|

01154025c ನ ವ್ಯೇತಿ ಹೃದಯಾದ್ರಾಜ್ಞೋ ದುರ್ಮನಾಃ ಸ ಕೃಶೋಽಭವತ್||

ಬ್ರಾಹ್ಮಣನು ಹೇಳಿದನು: “ಅಷ್ಟು ದೊಡ್ಡ ಅಪಮಾನವು ಅವನ ಹೃದಯವನ್ನು ಒಂದು ಕ್ಷಣವೂ ಬಿಡಲಿಲ್ಲ ಮತ್ತು ರಾಜನು ದುರ್ಮನಸ್ಕನೂ ಕೃಶನೂ ಆದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಚೈತ್ರರಥಪರ್ವಣಿ ದ್ರೌಪದೀಸಂಭವೇ ಚತುಷ್ಪಂಚಾದಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಚೈತ್ರಪರ್ವದಲ್ಲಿ ದ್ರೌಪದೀಸಂಭವದಲ್ಲಿ ನೂರಾಐವತ್ತ್ನಾಲ್ಕನೆಯ ಅಧ್ಯಾಯವು.

Image result for indian motifs

Comments are closed.