Adi Parva: Chapter 131

ಆದಿ ಪರ್ವ: ಜತುಗೃಹ ಪರ್ವ

೧೩೧

ದುರ್ಯೋಧನನ ಪ್ರೇರಣೆಯಂತೆ ಪುರಜನರು ವಾರಣಾವತದ ಕುರಿತು ಪಾಂಡವರಲ್ಲಿ ಆಸಕ್ತಿಯನ್ನು ಹುಟ್ಟಿಸಿದುದು (೧-೫). ಧೃತರಾಷ್ಟ್ರನು ಪಾಂಡವರಿಗೆ ತಾಯಿಯೊಂದಿಗೆ ವಾರಣಾವತಕ್ಕೆ ಹೋಗಲು ಸೂಚಿಸುವುದು (೬-೧೦). ಪಾಂಡವರು ವಾರಣಾವತಕ್ಕೆ ಹೊರಟಿದುದು (೧೧-೧೮).

01131001 ವೈಶಂಪಾಯನ ಉವಾಚ|

01131001a ತತೋ ದುರ್ಯೋಧನೋ ರಾಜಾ ಸರ್ವಾಸ್ತಾಃ ಪ್ರಕೃತೀಃ ಶನೈಃ|

01131001c ಅರ್ಥಮಾನಪ್ರದಾನಾಭ್ಯಾಂ ಸಂಜಹಾರ ಸಹಾನುಜಃ||

ವೈಶಂಪಾಯನನು ಹೇಳಿದನು: “ನಂತರ ದುರ್ಯೋಧನನು ತನ್ನ ತಮ್ಮಂದಿರೊಡಗೂಡಿ ಹಣ ಮತ್ತು ಗೌರವಗಳನ್ನು ನೀಡುತ್ತಾ ಕ್ರಮೇಣವಾಗಿ ಎಲ್ಲ ಪ್ರಜೆಗಳನ್ನೂ ಗೆಲ್ಲ ತೊಡಗಿದನು.

01131002a ಧೃತರಾಷ್ಟ್ರಪ್ರಯುಕ್ತಾಸ್ತು ಕೇ ಚಿತ್ಕುಶಲಮಂತ್ರಿಣಃ|

01131002c ಕಥಯಾಂ ಚಕ್ರಿರೇ ರಮ್ಯಂ ನಗರಂ ವಾರಣಾವತಂ||

ಧೃತರಾಷ್ಟ್ರನ ಆದೇಶದಂತೆ ಕೆಲವು ಕುಶಲಮಂತ್ರಿಗಳು ವಾರಣಾವತ ನಗರದ ರಮ್ಯತೆಯ ಕುರಿತಾಗಿ ಕಥೆಗಳನ್ನು ಕಟ್ಟಿ ಹೇಳ ತೊಡಗಿದರು.

01131003a ಅಯಂ ಸಮಾಜಃ ಸುಮಹಾನ್ರಮಣೀಯತಮೋ ಭುವಿ|

01131003c ಉಪಸ್ಥಿತಃ ಪಶುಪತೇರ್ನಗರೇ ವಾರಣಾವತೇ||

“ಭುವಿಯಲ್ಲೆ ರಮಣೀಯತಮ ಪಶುಪತಿಯ ನಗರ ವಾರಣಾವತದಲ್ಲಿ ಅತಿ ದೊಡ್ಡ ಸಮ್ಮೇಳನವು ನಡೆಯಲಿದೆ.

01131004a ಸರ್ವರತ್ನಸಮಾಕೀರ್ಣೇ ಪುಂಸಾಂ ದೇಶೇ ಮನೋರಮೇ|

01131004c ಇತ್ಯೇವಂ ಧೃತರಾಷ್ಟ್ರಸ್ಯ ವಚನಾಚ್ಚಕ್ರಿರೇ ಕಥಾಃ||

ಮನೋರಮೆ ಆ ಶ್ರೇಷ್ಠ ನಗರವು ಸರ್ವರತ್ನ ಸಮಾಕೀರ್ಣವಾಗಿದೆ.” ಹೀಗೆಂದು ಧೃತರಾಷ್ಟ್ರನ ಜನರು ಕಥೆಗಳನ್ನು ಹರಡಿಸಿದರು.

01131005a ಕಥ್ಯಮಾನೇ ತಥಾ ರಮ್ಯೇ ನಗರೇ ವಾರಣಾವತೇ|

01131005c ಗಮನೇ ಪಾಂಡುಪುತ್ರಾಣಾಂ ಜಜ್ಞೇ ತತ್ರ ಮತಿರ್ನೃಪ||

ನೃಪ! ಈ ರೀತಿ ರಮ್ಯ ವಾರಣಾವತ ನಗರದ ಕುರಿತು ಹೇಳಿದ್ದುದನ್ನು ಕೇಳಿದ ಪಾಂಡುಪುತ್ರರಲ್ಲಿ ಅಲ್ಲಿಗೆ ಹೋಗುವ ಅಭಿಪ್ರಾಯವುಂಟಾಯಿತು.

01131006a ಯದಾ ತ್ವಮನ್ಯತ ನೃಪೋ ಜಾತಕೌತೂಹಲಾ ಇತಿ|

01131006c ಉವಾಚೈನಾನಥ ತದಾ ಪಾಂಡವಾನಂಬಿಕಾಸುತಃ||

ಅವರಲ್ಲಿ ಕುತೂಹಲ ಮೂಡಿದೆ ಎಂದು ತಿಳಿದ ನೃಪ ಅಂಬಿಕಾಸುತನು ಪಾಂಡವರನ್ನು ಕರೆಯಿಸಿ ಅವರಿಗೆ ಹೇಳಿದನು:

01131007a ಮಮೇಮೇ ಪುರುಷಾ ನಿತ್ಯಂ ಕಥಯಂತಿ ಪುನಃ ಪುನಃ|

01131007c ರಮಣೀಯತರಂ ಲೋಕೇ ನಗರಂ ವಾರಣಾವತಂ||

“ನನ್ನ ಜನರು ನಿತ್ಯವೂ ಪುನಃ ಪುನಃ ವಾರಾಣಾವತ ನಗರವು ಲೋಕದಲ್ಲೇ ರಮಣೀಯತರವಾದುದು ಎಂದು ಹೇಳುತ್ತಿರುತ್ತಾರೆ.

01131008a ತೇ ತಾತ ಯದಿ ಮನ್ಯಧ್ವಮುತ್ಸವಂ ವಾರಣಾವತೇ|

01131008c ಸಗಣಾಃ ಸಾನುಯಾತ್ರಾಶ್ಚ ವಿಹರಧ್ವಂ ಯಥಾಮರಾಃ||

ಮಗನೇ! ವಾರಣಾವತ ಉತ್ಸವವನ್ನು ನೋಡುವ ಮನಸ್ಸಿದ್ದರೆ ನಿನ್ನ ಅನುಯಾಯಿ ಗಣದೊಂದಿಗೆ ಅಲ್ಲಿ ಅಮರರಂತೆ ವಿಹರಿಸು.

01131009a ಬ್ರಾಹ್ಮಣೇಭ್ಯಶ್ಚ ರತ್ನಾನಿ ಗಾಯನೇಭ್ಯಶ್ಚ ಸರ್ವಶಃ|

01131009c ಪ್ರಯಚ್ಛಧ್ವಂ ಯಥಾಕಾಮಂ ದೇವಾ ಇವ ಸುವರ್ಚಸಃ||

ಸುವರ್ಚಸ ದೇವತೆಗಳಂತೆ ನಿನಗಿಷ್ಟಬಂದ ಹಾಗೆ ಬ್ರಾಹ್ಮಣರಿಗೆ ಮತ್ತು ಗಾಯಕರೆಲ್ಲರಿಗೂ ರತ್ನಗಳನ್ನು ಕೊಡು.

01131010a ಕಂ ಚಿತ್ಕಾಕಾಲಂ ವಿಹೃತ್ಯೈವಮನುಭೂಯ ಪರಾಂ ಮುದಂ|

01131010c ಇದಂ ವೈ ಹಾಸ್ತಿನಪುರಂ ಸುಖಿನಃ ಪುನರೇಷ್ಯಥ||

ಸ್ವಲ್ಪ ಕಾಲ ಅಲ್ಲಿದ್ದು ಸಂಪೂರ್ಣ ಸಂತೋಷವನ್ನು ಹೊಂದಿಯಾದ ನಂತರ ನೀನು ಸುಖದಿಂದ ಪುನಃ ಈ ಹಸ್ತಿನಾಪುರಕ್ಕೆ ಬರಬಹುದು.”

01131011a ಧೃತರಾಷ್ಟ್ರಸ್ಯ ತಂ ಕಾಮಮನುಬುದ್ಧ್ವಾ ಯುಧಿಷ್ಠಿರಃ|

01131011c ಆತ್ಮನಶ್ಚಾಸಹಾಯತ್ವಂ ತಥೇತಿ ಪ್ರತ್ಯುವಾಚ ತಂ||

ಇದು ಧೃತರಾಷ್ಟ್ರನ ಆಸೆ ಎಂದು ತಿಳಿದ ಯುಧಿಷ್ಠಿರನು ತನ್ನ ಅಸಹಾಯಕತೆಯನ್ನು ತಿಳಿದು ಹಾಗೆಯೇ ಆಗಲೆಂದು ಉತ್ತರಿಸಿದನು.

01131012a ತತೋ ಭೀಷ್ಮಂ ಮಹಾಪ್ರಾಜ್ಞಂ ವಿದುರಂ ಚ ಮಹಾಮತಿಂ|

01131012c ದ್ರೋಣಂ ಚ ಬಾಹ್ಲಿಕಂ ಚೈವ ಸೋಮದತ್ತಂ ಚ ಕೌರವಂ||

01131013a ಕೃಪಮಾಚಾರ್ಯಪುತ್ರಂ ಚ ಗಾಂಧಾರೀಂ ಚ ಯಶಸ್ವಿನೀಂ|

01131013c ಯುಧಿಷ್ಠಿರಃ ಶನೈರ್ದೀನಮುವಾಚೇದಂ ವಚಸ್ತದಾ||

ನಂತರ ಯುಧಿಷ್ಠಿರನು ದೀನನಾಗಿ ಮೆಲ್ಲಗೆ ಮಹಾಪ್ರಾಜ್ಞ ಭೀಷ್ಮ, ಮಹಾಮತಿ ವಿದುರ, ದ್ರೋಣ, ಬಾಹ್ಲೀಕ, ಕೌರವ ಸೋಮದತ್ತ, ಕೃಪ, ಆಚಾರ್ಯ ಪುತ್ರ ಮತ್ತು ಯಶಸ್ವಿನಿ ಗಾಂಧಾರಿಯಲ್ಲಿ ಹೇಳಿದನು:

01131014a ರಮಣೀಯೇ ಜನಾಕೀರ್ಣೇ ನಗರೇ ವಾರಣಾವತೇ|

01131014c ಸಗಣಾಸ್ತಾತ ವತ್ಸ್ಯಾಮೋ ಧೃತರಾಷ್ಟ್ರಸ್ಯ ಶಾಸನಾತ್||

“ಧೃತರಾಷ್ಟ್ರನ ಆದೇಶದಂತೆ ನಾವು ನಮ್ಮವರೊಂದಿಗೆ ಜನಸಂಧಣಿಯ ರಮಣೀಯ ವಾರಣಾವತ ನಗರದಲ್ಲಿ ಹೋಗಿ ವಾಸಿಸುತ್ತೇವೆ.

01131015a ಪ್ರಸನ್ನಮನಸಃ ಸರ್ವೇ ಪುಣ್ಯಾ ವಾಚೋ ವಿಮುಂಚತ|

01131015c ಆಶೀರ್ಭಿರ್ವರ್ಧಿತಾನಸ್ಮಾನ್ನ ಪಾಪಂ ಪ್ರಸಹಿಷ್ಯತಿ||

ಎಲ್ಲರೂ ಪ್ರಸನ್ನ ಮನಸ್ಕರಾಗಿ ಪುಣ್ಯ ಮಾತುಗಳಿಂದ ನೀವು ನೀಡಿದ ಆಶೀರ್ವಾದದ ಬಲದಿಂದ ನಮಗೆ ಯಾವುದೇ ರೀತಿಯ ಕಷ್ಟವೂ ಬರುವುದಿಲ್ಲ.”

01131016a ಏವಮುಕ್ತಾಸ್ತು ತೇ ಸರ್ವೇ ಪಾಂಡುಪುತ್ರೇಣ ಕೌರವಾಃ|

01131016c ಪ್ರಸನ್ನವದನಾ ಭೂತ್ವಾ ತೇಽಭ್ಯವರ್ತಂತ ಪಾಂಡವಾನ್||

ಪಾಂಡುಪುತ್ರನ ಈ ಮಾತುಗಳಿಗೆ ಸರ್ವ ಕೌರವರೂ ಪ್ರಸನ್ನವದನರಾಗಿ ಪಾಂಡವರನ್ನು ಬೀಳ್ಕೊಟ್ಟರು.

01131017a ಸ್ವಸ್ತ್ಯಸ್ತು ವಃ ಪಥಿ ಸದಾ ಭೂತೇಭ್ಯಶ್ಚೈವ ಸರ್ವಶಃ|

01131017c ಮಾ ಚ ವೋಽಸ್ತ್ವಶುಭಂ ಕಿಂ ಚಿತ್ಸರ್ವತಃ ಪಾಂಡುನಂದನಾಃ||

“ನಿನ್ನ ದಾರಿಯಲ್ಲಿ ಎಲ್ಲ ಭೂತಗಳಿಂದಲೂ ಮಂಗಳವುಂಟಾಗಲಿ. ಪಾಂಡುನಂದನ! ಯಾವ ಕಡೆಯಿಂದಲೂ ಯಾವುದರಿಂದಲೂ ನಿನಗೆ ಅಶುಭವು ಬಾರದಿರಲಿ!”

01131018a ತತಃ ಕೃತಸ್ವಸ್ತ್ಯಯನಾ ರಾಜ್ಯಲಾಭಾಯ ಪಾಂಡವಾಃ|

01131018c ಕೃತ್ವಾ ಸರ್ವಾಣಿ ಕಾರ್ಯಾಣಿ ಪ್ರಯಯುರ್ವಾರಣಾವತಂ||

ನಂತರ ಶುಭ ಪ್ರಯಾಣದ ಆಶೀರ್ವಾದಗಳನ್ನು ಹೊತ್ತ ಪಾಂಡವರು ರಾಜ್ಯಲಾಭಕ್ಕೆಂದು ಬೇಕಾದ ಎಲ್ಲ ಕಾರ್ಯಗಳನ್ನೂ ನೆರವೇರಿಸಿ ವಾರಣಾವತಕ್ಕೆ ಹೊರಟರು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಜತುಗೃಹಪರ್ವಣಿ ವಾರಣಾವತಯಾತ್ರಾಯಾಂ ಏಕತ್ರಿಂಶದಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಜತುಗೃಹ ಪರ್ವದಲ್ಲಿ ವಾರಣಾವತಯಾತ್ರ ಎನ್ನುವ ನೂರಾಮೂವತ್ತೊಂದನೆಯ ಅಧ್ಯಾಯವು.

Related image

Comments are closed.