Adi Parva: Chapter 106

ಆದಿ ಪರ್ವ: ಸಂಭವ ಪರ್ವ

೧೦೬

ಬೇಟೆಯಲ್ಲಿ ಆಸಕ್ತಿ ಹೊಂದಿದ್ದ ಪಾಂಡುವು ಪತ್ನಿಯರೊಂದಿಗೆ ಅರಣ್ಯದಲ್ಲಿ ವಾಸಿಸಿದುದು (೧-೧೧). ಭೀಷ್ಮನು ರಾಜ ದೇವಕನ ಮಗಳನ್ನು ವಿದುರನಿಗೆ ಕೊಡಿಸಿ ಮದುವೆ ಮಾಡಿಸುವುದು (೧೨-೧೩).

01106001 ವೈಶಂಪಾಯನ ಉವಾಚ|

01106001a ಧೃತರಾಷ್ಟ್ರಾಭ್ಯನುಜ್ಞಾತಃ ಸ್ವಬಾಹುವಿಜಿತಂ ಧನಂ|

01106001c ಭೀಷ್ಮಾಯ ಸತ್ಯವತ್ಯೈ ಚ ಮಾತ್ರೇ ಚೋಪಜಹಾರ ಸಃ||

ವೈಶಂಪಾಯನನು ಹೇಳಿದನು: “ಧೃತರಾಷ್ಟ್ರನ ಅನುಜ್ಞೆಯಂತೆ ಪಾಂಡುವು ತನ್ನ ಬಾಹುಬಲದಿಂದ ಗೆದ್ದಿದ್ದ ಧನವನ್ನು ಭೀಷ್ಮ, ಸತ್ಯವತಿ ಮತ್ತು ತಾಯಂದಿರಿಗೆ ಸಮರ್ಪಿಸಿದನು.

01106002a ವಿದುರಾಯ ಚ ವೈ ಪಾಂಡುಃ ಪ್ರೇಷಯಾಮಾಸ ತದ್ಧನಂ|

01106002c ಸುಹೃದಶ್ಚಾಪಿ ಧರ್ಮಾತ್ಮಾ ಧನೇನ ಸಮತರ್ಪಯತ್||

ಪಾಂಡುವು ಆ ಧನವನ್ನು ವಿದುರನಿಗೂ ಕಳುಹಿಸಿಕೊಟ್ಟನು. ಆ ಧರ್ಮಾತ್ಮನು ಧನವನ್ನಿತ್ತು ತನ್ನ ಸುಹೃದಯರನ್ನೂ ತೃಪ್ತಿಗೊಳಿಸಿದನು.

01106003a ತತಃ ಸತ್ಯವತೀಂ ಭೀಷ್ಮಃ ಕೌಸಲ್ಯಾಂ ಚ ಯಶಸ್ವಿನೀಂ|

01106003c ಶುಭೈಃ ಪಾಂಡುಜಿತೈ ರತ್ನೈಸ್ತೋಷಯಾಮಾಸ ಭಾರತ||

ಭಾರತ! ನಂತರ ಭೀಷ್ಮನು ಪಾಂಡುವು ಗೆದ್ದು ತಂದಿದ್ದ ರತ್ನಗಳಿಂದ ಸತ್ಯವತಿ ಮತ್ತು ಯಶಸ್ವಿನಿ ಶುಭೆ ಕೌಸಲ್ಯೆಯರನ್ನೂ ಸಂತುಷ್ಟಗೊಳಿಸಿದನು.

01106004a ನನಂದ ಮಾತಾ ಕೌಸಲ್ಯಾ ತಮಪ್ರತಿಮತೇಜಸಂ|

01106004c ಜಯಂತಮಿವ ಪೌಲೋಮೀ ಪರಿಷ್ವಜ್ಯ ನರರ್ಷಭಂ||

ಆನಂದಿತ ತಾಯಿ ಕೌಸಲ್ಯೆಯು ಆ ನರರ್ಷಭ ಅಪ್ರತಿಮ ತೇಜಸ್ವಿಯನ್ನು ಪೌಲೋಮಿಯು ಜಯಂತನನ್ನು ಹೇಗೋ ಹಾಗೆ ಆಲಂಗಿಸಿದಳು.

01106005a ತಸ್ಯ ವೀರಸ್ಯ ವಿಕ್ರಾಂತೈಃ ಸಹಸ್ರಶತದಕ್ಷಿಣೈಃ|

01106005c ಅಶ್ವಮೇಧಶತೈರೀಜೇ ಧೃತರಾಷ್ಟ್ರೋ ಮಹಾಮಖೈಃ||

ಆ ವೀರ ವಿಕ್ರಾಂತನು ಗೆದ್ದು ಬಂದಿದ್ದ ಧನದಿಂದ ಧೃತರಾಷ್ಟ್ರನು ನೂರು ಸಾವಿರ ದಕ್ಷಿಣೆಗಳನ್ನೊಡಗೂಡಿದ, ನೂರು ಅಶ್ವಮೇಧ ಯಜ್ಞಗಳಿಗೆ ಸರಿಸಾಟಿ ಮಹಾ ಯಜ್ಞಗಳನ್ನು ನೆರವೇರಿಸಿದನು.

01106006a ಸಂಪ್ರಯುಕ್ತಶ್ಚ ಕುಂತ್ಯಾ ಚ ಮಾದ್ರ್ಯಾ ಚ ಭರತರ್ಷಭ|

01106006c ಜಿತತಂದ್ರೀಸ್ತದಾ ಪಾಂಡುರ್ಬಭೂವ ವನಗೋಚರಃ||

ಬಿಡುವಿನ ವೇಳೆಯನ್ನು ಗಳಿಸಿದ್ದ ಭರತರ್ಷಭ ಪಾಂಡುವು ಕುಂತಿ ಮತ್ತು ಮಾದ್ರಿಗಳ ಜೊತೆ ವನವಿಹಾರಕ್ಕೆಂದು ಹೋದನು.

01106007a ಹಿತ್ವಾ ಪ್ರಾಸಾದನಿಲಯಂ ಶುಭಾನಿ ಶಯನಾನಿ ಚ|

01106007c ಅರಣ್ಯನಿತ್ಯಃ ಸತತಂ ಬಭೂವ ಮೃಗಯಾಪರಃ||

ಬೇಟೆಯಲ್ಲಿ ಆಸಕ್ತಿಯನ್ನು ಹೊಂದಿದ್ದ ಅವನು ಅರಮನೆ ಮತ್ತು ಸುಂದರ ಶಯನಗಳನ್ನು ಪರಿತ್ಯಜಿಸಿ, ಅರಣ್ಯದಲ್ಲಿಯೇ ವಾಸಿಸಿ ನಿತ್ಯವೂ ಬೇಟೆಯಾಡುತ್ತಿದ್ದನು.

01106008a ಸ ಚರನ್ದಕ್ಷಿಣಂ ಪಾರ್ಶ್ವಂ ರಮ್ಯಂ ಹಿಮವತೋ ಗಿರೇಃ|

01106008c ಉವಾಸ ಗಿರಿಪೃಷ್ಠೇಷು ಮಹಾಶಾಲವನೇಷು ಚ||

ಅವನು ರಮ್ಯ ಹಿಮಾಲಯ ಗಿರಿಯ ದಕ್ಷಿಣ ಇಳುಕಲಿನಲ್ಲಿ, ಗಿರಿಪೃಷ್ಟಗಳಲ್ಲಿ, ಮಹಾಶಾಲಗಳ ವನಗಳಲ್ಲಿ ವಾಸಿಸತೊಡಗಿದನು.

01106009a ರರಾಜ ಕುಂತ್ಯಾ ಮಾದ್ರ್ಯಾ ಚ ಪಾಂಡುಃ ಸಹ ವನೇ ವಸನ್|

01106009c ಕರೇಣ್ವೋರಿವ ಮಧ್ಯಸ್ಥಃ ಶ್ರೀಮಾನ್ಪೌರಂದರೋ ಗಜಃ||

ಆ ವನದಲ್ಲಿ ಕುಂತಿ ಮತ್ತು ಮಾದ್ರಿಗಳೊಡನೆ ವಾಸಿಸುತ್ತಿದ್ದ ಪಾಂಡುವು ಎರಡು ಹೆಣ್ಣಾನೆಗಳ ಮದ್ಯೆ ಇರುವ ಶ್ರೀಮಾನ್ ಗಜೇಂದ್ರನಂತೆ ರಂಜಿಸಿದನು.

01106010a ಭಾರತಂ ಸಹ ಭಾರ್ಯಾಭ್ಯಾಂ ಬಾಣಖಡ್ಗಧನುರ್ಧರಂ|

01106010c ವಿಚಿತ್ರಕವಚಂ ವೀರಂ ಪರಮಾಸ್ತ್ರವಿದಂ ನೃಪಂ|

01106010e ದೇವೋಽಯಮಿತ್ಯಮನ್ಯಂತ ಚರಂತಂ ವನವಾಸಿನಃ||

ಬಾಣ-ಖಡ್ಗ-ಧನುರ್ಧರನಾಗಿ, ವಿಚಿತ್ರಕವಚಧಾರಿಯಾಗಿ ದೇವನಂತೆ ತನ್ನ ಪತ್ನಿಯರೊಂದಿಗೆ ಚಲಿಸುತ್ತಿರುವ ಆ ವೀರ, ಪರಮಾಸ್ತ್ರಕೋವಿದ ನೃಪ ಭಾರತನನ್ನು ವನವಾಸಿಗಳು ಕಂಡರು.

01106011a ತಸ್ಯ ಕಾಮಾಂಶ್ಚ ಭೋಗಾಂಶ್ಚ ನರಾ ನಿತ್ಯಮತಂದ್ರಿತಾಃ|

01106011c ಉಪಜಹ್ರುರ್ವನಾಂತೇಷು ಧೃತರಾಷ್ಟ್ರೇಣ ಚೋದಿತಾಃ||

ಅವನ ಕಾಮ-ಭೋಗಗಳಿಗೆ ಬೇಕಾದುದೆಲ್ಲವನ್ನೂ, ಧೃತರಾಷ್ಟ್ರನ ಹೇಳಿಕೆಯಂತೆ, ಸ್ವಲ್ಪವೂ ಆಯಾಸ ಹೊಂದದ ಜನರು ನಿತ್ಯವೂ ಆ ವನಪ್ರದೇಶಕ್ಕೆ ತಂದು ಕೊಡುತ್ತಿದ್ದರು. 

01106012a ಅಥ ಪಾರಶವೀಂ ಕನ್ಯಾಂ ದೇವಕಸ್ಯ ಮಹೀಪತೇಃ|

01106012c ರೂಪಯೌವನಸಂಪನ್ನಾಂ ಸ ಶುಶ್ರಾವಾಪಗಾಸುತಃ||

ಆಗ ಆಪಗಸುತ ಭೀಷ್ಮನು ಮಹೀಪತಿ ದೇವಕನಿಗೆ ಬೇರೆಯವಳಲ್ಲಿ ಹುಟ್ಟಿದ್ದ ರೂಪಯೌವನಸಂಪನ್ನ ಕನ್ಯೆಯ ಕುರಿತು ಕೇಳಿದನು.

01106013a ತತಸ್ತು ವರಯಿತ್ವಾ ತಾಮಾನಾಯ್ಯ ಪುರುಷರ್ಷಭಃ|

01106013c ವಿವಾಹಂ ಕಾರಯಾಮಾಸ ವಿದುರಸ್ಯ ಮಹಾಮತೇಃ||

ಆ ಪುರುಷರ್ಷಭನು ಅವಳನ್ನು ವರಿಸಿ ಕರೆದುಕೊಂಡು ಬಂದು ಮಹಾಮತಿ ವಿದುರನಿಗೆ ವಿವಾಹ ಮಾಡಿಸಿದನು.

01106014a ತಸ್ಯಾಂ ಚೋತ್ಪಾದಯಾಮಾಸ ವಿದುರಃ ಕುರುನಂದನಃ|

01106014c ಪುತ್ರಾನ್ವಿನಯಸಂಪನ್ನಾನಾತ್ಮನಃ ಸದೃಶಾನ್ಗುಣೈಃ||

ಕುರುನಂದನ ವಿದುರನು ಅವಳಲ್ಲಿ, ಗುಣಗಳಲ್ಲಿ ತನ್ನ ಹಾಗೆಯೇ ಇದ್ದ, ವಿನಯಸಂಪನ್ನ ಪುತ್ರರಿಗೆ ಜನ್ಮವಿತ್ತನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ವಿದುರಪರಿಣಯೇ ಷಡಧಿಕಶತತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ವಿದುರಪರಿಣಯ ಎನ್ನುವ ನೂರಾಆರನೆಯ ಅಧ್ಯಾಯವು.

Comments are closed.