Adi Parva: Chapter 82

ಆದಿ ಪರ್ವ: ಸಂಭವ ಪರ್ವ

೮೨

ಸ್ವರ್ಗದಲ್ಲಿ ಯಯಾತಿಯ ವಾಸ (೧-೨). ಇಂದ್ರನ ಪ್ರಶ್ನೆಗೆ ಯಯಾತಿಯು ಪೂರುವಿಗೆ ನೀಡಿದ ಉಪದೇಶದ ಮಾತುಗಳನ್ನು ಹೇಳಿದುದು (೩-೧೩).

01082001 ವೈಶಂಪಾಯನ ಉವಾಚ|

01082001a ಸ್ವರ್ಗತಃ ಸ ತು ರಾಜೇಂದ್ರೋ ನಿವಸನ್ದೇವಸದ್ಮನಿ|

01082001c ಪೂಜಿತಸ್ತ್ರಿದಶೈಃ ಸಾಧ್ಯೈರ್ಮರುದ್ಭಿರ್ವಸುಭಿಸ್ತಥಾ||

ವೈಶಂಪಾಯನನು ಹೇಳಿದನು: “ಸ್ವರ್ಗವನ್ನು ಸೇರಿದ ಆ ರಾಜೇಂದ್ರನು ಸಾಧ್ಯ, ಮರುತ್ತರು ಮತ್ತು ವಸುಗಳಿಂದ ಹಾಗೂ ತ್ರಿದಶರಿಂದ ಪೂಜಿತನಾಗಿ ದೇವಸದ್ಮನಿಯಲ್ಲಿ ವಾಸಿಸಿದನು.

01082002a ದೇವಲೋಕಾದ್ಬ್ರಹ್ಮಲೋಕಂ ಸಂಚರನ್ಪುಣ್ಯಕೃದ್ವಶೀ|

01082002c ಅವಸತ್ಪೃಥಿವೀಪಾಲೋ ದೀರ್ಘಕಾಲಮಿತಿ ಶ್ರುತಿಃ||

ಪುಣ್ಯಕರ್ಮಗಳಿಂದ ಅಧಿಕಾರವನ್ನು ಪಡೆದ ಆ ಪೃಥಿವೀಪಾಲನು ದೇವಲೋಕದಿಂದ ಬ್ರಹ್ಮಲೋಕಕ್ಕೂ ಹೋಗಿ ಅಲ್ಲಿ ದೀರ್ಘಕಾಲ ನೆಲೆಸಿದ್ದನೆಂದೂ ಕೇಳಿದ್ದೇವೆ.

01082003a ಸ ಕದಾ ಚಿನ್ನೃಪಶ್ರೇಷ್ಠೋ ಯಯಾತಿಃ ಶಕ್ರಮಾಗಮತ್|

01082003c ಕಥಾಂತೇ ತತ್ರ ಶಕ್ರೇಣ ಪೃಷ್ಟಃ ಸ ಪೃಥಿವೀಪತಿಃ||

ಒಮ್ಮೆ ಆ ನೃಪತಿಶ್ರೇಷ್ಠ ಯಯಾತಿಯು ಶಕ್ರನಲ್ಲಿಗೆ ಹೋಗಿ ಮಾತನಾಡುತ್ತಿರಲು ಶಕ್ರನು ಪೃಥಿವೀಪತಿಗೆ ಕೇಳಿದನು.

01082004 ಶಕ್ರ ಉವಾಚ|

01082004a ಯದಾ ಸ ಪೂರುಸ್ತವ ರೂಪೇಣ ರಾಜಂ|

                        ಜರಾಂ ಗೃಹೀತ್ವಾ ಪ್ರಚಚಾರ ಭೂಮೌ||

01082004c ತದಾ ರಾಜ್ಯಂ ಸಂಪ್ರದಾಯೈವ ತಸ್ಮೈ|

                        ತ್ವಯಾ ಕಿಮುಕ್ತಃ ಕಥಯೇಹ ಸತ್ಯ||

ಶಕ್ರನು ಹೇಳಿದನು: “ರಾಜನ್! ನಿನ್ನ ರೂಪ ಮತ್ತು ಮುಪ್ಪನ್ನು ತೆಗೆದುಕೊಂಡು ಭೂಮಿಯಲ್ಲಿ ಸಂಚರಿಸುತ್ತಿದ್ದ ಪೂರುವಿಗೆ ರಾಜ್ಯವನ್ನು ಕೊಡುವಾಗ ನೀನು ಏನು ಹೇಳಿದೆ? ಸತ್ಯವನ್ನು ಹೇಳು.”

01082005 ಯಯಾತಿರುವಾಚ|

01082005a ಗಂಗಾಯಮುನಯೋರ್ಮಧ್ಯೇ ಕೃತ್ಸ್ನೋಽಯಂ ವಿಷಯಸ್ತವ|

01082005c ಮಧ್ಯೇ ಪೃಥಿವ್ಯಾಸ್ತ್ವಂ ರಾಜಾ ಭ್ರಾತರೋಽಂತ್ಯ್ಯಾಧಿಪಾಸ್ತವ||

ಯಯಾತಿಯು ಹೇಳಿದನು: “ಗಂಗೆ ಮತ್ತು ಯಮುನೆಯರ ಮಧ್ಯದಲ್ಲಿರುವ ಎಲ್ಲವೂ ನಿನ್ನ ರಾಜ್ಯ. ಈ ಭೂಮಿಯ ಮಧ್ಯೆ ನೀನು ರಾಜನಾಗಿರು. ನಿನ್ನ ಅಣ್ಣಂದಿರು ಆಚೆಯಿರುವವುಗಳನ್ನು ಪಾಲಿಸಲಿ.

01082006a ಅಕ್ರೋಧನಃ ಕ್ರೋಧನೇಭ್ಯೋ ವಿಶಿಷ್ಟಃ|

                        ತಥಾ ತಿತಿಕ್ಷುರತಿತಿಕ್ಷೋರ್ವಿಶಿಷ್ಟಃ||

01082006c ಅಮಾನುಷೇಭ್ಯೋ ಮಾನುಷಾಶ್ಚ ಪ್ರಧಾನಾ|

                        ವಿದ್ವಾಂಸ್ತಥೈವಾವಿದುಷಃ ಪ್ರಧಾನಃ||

ಕ್ರೋಧಗೊಳ್ಳದವನು ಕ್ರೋಧಿಗಳನ್ನು, ಹಾಗೆಯೇ ಕ್ಷಮಿಸುವವನು ಕ್ಷಮೆಯಿಲ್ಲದವನನ್ನು ಮೀರಿಸುತ್ತಾನೆ. ಅಮಾನುಷರಲ್ಲಿ ಮನುಷ್ಯನು ಪ್ರಧಾನನು. ಅವಿದುಷರಲ್ಲಿ ವಿದ್ವಾಂಸರು ಪ್ರಧಾನರು.

01082007a ಆಕ್ರುಶ್ಯಮಾನೋ ನಾಕ್ರೋಶೇನ್ಮನ್ಯುರೇವ ತಿತಿಕ್ಷತಃ|

01082007c ಆಕ್ರೋಷ್ಟಾರಂ ನಿರ್ದಹತಿ ಸುಕೃತಂ ಚಾಸ್ಯ ವಿಂದತಿ||

ಇತರರು ದೂರುವಾಗ ದೂರಬಾರದು. ಕ್ಷಮಾವಂತನ ಸಿಟ್ಟೇ ನಿಂದಿಸುವವನನ್ನು ಸುಟ್ಟುಹಾಕುತ್ತದೆ ಮತ್ತು ಅವನ ಸುಕೃತಗಳನ್ನು ಗಳಿಸುತ್ತಾನೆ.

01082008a ನಾರುಂತುದಃ ಸ್ಯಾನ್ನ ನೃಶಂಸವಾದೀ|

                        ನ ಹೀನತಃ ಪರಮಭ್ಯಾದದೀತ||

01082008c ಯಯಾಸ್ಯ ವಾಚಾ ಪರ ಉದ್ವಿಜೇತ|

                        ನ ತಾಂ ವದೇದ್ರುಶತೀಂ ಪಾಪಲೋಕ್ಯಾಂ||

ಇತರರನ್ನು ಅಳಿಸಬೇಡ. ಕ್ರೂರವಾಗಿ ಮಾತನಾಡಬೇಡ. ಕಡುಬಡವನಿಂದ ಅವನ ಕೊನೆಯದನ್ನು ಕಸಿದುಕೊಳ್ಳಬೇಡ. ಗಾಯಗೊಳಿಸುವಂಥ ಮತ್ತು ನರಕವನ್ನು ದೊರಕಿಸುವಂಥ ಮಾತನಾಡಿದರೆ ಇತರರನ್ನು ನೋಯಿಸುವಂಥ ಮಾತುಗಳನ್ನಾಡಬೇಡ.

01082009a ಅರುಂತುದಂ ಪುರುಷಂ ರೂಕ್ಷವಾಚಂ|

                        ವಾಕ್ಕಂಟಕೈರ್ವಿತುದಂತಂ ಮನುಷ್ಯಾನ್||

01082009c ವಿದ್ಯಾದಲಕ್ಷ್ಮೀಕತಮಂ ಜನಾನಾಂ|

                        ಮುಖೇ ನಿಬದ್ಧಾಂ ನಿರೃತಿಂ ವಹಂತಂ||

ನೋಯಿಸುವ, ಭಿರುಸಾದ, ಕಟುಮಾತುಗಳನ್ನು ಆಡುವ, ಮಾತಿನ ಮುಳ್ಳಿನಿಂದ ಇತರರನ್ನು ಗಾಯಗೊಳಿಸುವವನು ಜನರಲ್ಲಿ ಅತ್ಯಂತ ಅಲಕ್ಷ್ಮೀವಂತನಾಗಿರುತ್ತಾನೆ. ಬಾಯಿಯಲ್ಲಿ ಪಾಪದ ಕಿಡಿಯನ್ನು ಇಟ್ಟುಕೊಂಡಿರುತ್ತಾನೆ.

01082010a ಸದ್ಭಿಃ ಪುರಸ್ತಾದಭಿಪೂಜಿತಃ ಸ್ಯಾತ್|

                        ಸದ್ಭಿಸ್ತಥಾ ಪೃಷ್ಠತೋ ರಕ್ಷಿತಃ ಸ್ಯಾತ್||

01082010c ಸದಾಸತಾಮತಿವಾದಾಂಸ್ತಿತಿಕ್ಷೇತ್|

                        ಸತಾಂ ವೃತ್ತಂ ಚಾದದೀತಾರ್ಯವೃತ್ತಃ||

ಎದುರಲ್ಲಿ ಒಳ್ಳೆಯುವರಿಂದ ಪೂಜಿತನಾಗಿರು. ಹಿಂದಿನಿಂದ ಒಳ್ಳೆಯವರ ರಕ್ಷಣೆಯಿರಲಿ. ಕೆಟ್ಟವರ ನಿಂದನೆಯ ಮಾತುಗಳನ್ನು ಸದಾ ಸಹಿಸಿಕೊಂಡಿರು. ಆರ್ಯನು ಸತ್ಯವಂತರ ನಡತೆಯನ್ನೇ ತನ್ನದಾಗಿಸಿಕೊಳ್ಳುತ್ತಾನೆ.

01082011a ವಾಕ್ಸಾಯಕಾ ವದನಾನ್ನಿಷ್ಪತಂತಿ|

                        ಯೈರಾಹತಃ ಶೋಚತಿ ರಾತ್ರ್ಯಹಾನಿ||

01082011c ಪರಸ್ಯ ವಾ ಮರ್ಮಸು ಯೇ ಪತಂತಿ|

                        ತಾನ್ಪಂಡಿತೋ ನಾವಸೃಜೇತ್ಪರೇಷು||

ಮಾತುಗಳು ಬಾಯಿಯಿಂದ ಬಾಣಗಳಂತೆ ಹೊರಬೀಳುತ್ತವೆ. ತಾಗಿದವನಿಗೆ ಅವು ಹಗಲು ರಾತ್ರಿ ನೋಯಿಸುತ್ತವೆ. ಇತರರಿಗೆ ತಾಗಿ ನೋಯಿಸುವಂಥವುಗಳನ್ನು ಪಂಡಿತನು ಪರರ ಮೇಲೆ ಪ್ರಯೋಗಿಸುವುದಿಲ್ಲ.

01082012a ನ ಹೀದೃಶಂ ಸಂವನನಂ ತ್ರಿಷು ಲೋಕೇಷು ವಿದ್ಯತೇ|

01082012c ಯಥಾ ಮೈತ್ರೀ ಚ ಭೂತೇಷು ದಾನಂ ಚ ಮಧುರಾ ಚ ವಾಕ್||

ಸಂವನನ, ಇರುವ ಎಲ್ಲದರೊಂದಿಗೆ ಮೈತ್ರಿ ಮತ್ತು ಮಧುರ ಮಾತು ಇವುಗಳಿಗಿಂತ ಹೆಚ್ಚಿನ ಯಾವುದೂ ಈ ಮೂರು ಲೋಕಗಳಲ್ಲಿಲ್ಲ.

01082013a ತಸ್ಮಾತ್ಸಾಂತ್ವಂ ಸದಾ ವಾಚ್ಯಂ ನ ವಾಚ್ಯಂ ಪರುಷಂ ಕ್ವ ಚಿತ್|

01082013c ಪೂಜ್ಯಾನ್ಸಂಪೂಜಯೇದ್ದದ್ಯಾನ್ನ ಚ ಯಾಚೇತ್ಕದಾ ಚನ||

ಆದುದರಿಂದ ಸದಾ ಸಾಂತ್ವನದ ಮಾತನ್ನಾಡಬೇಕು. ಎಂದೂ ಕಟುವಾಗಿ ಮಾತನಾಡಬಾರದು. ಪೂಜಿಸಲರ್ಹರಾದವರನ್ನು ಪೂಜಿಸು. ಕೊಡು. ಎಂದೂ ಕೇಳಬೇಡ.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ದ್ವ್ಯಶೀತಿತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಂಭತ್ತೆರಡನೆಯ ಅಧ್ಯಾಯವು.

Comments are closed.