ಆದಿ ಪರ್ವ: ಸಂಭವ ಪರ್ವ
೭೫
ದೇವಯಾನಿಯು ಶರ್ಮಿಷ್ಠೆಯನ್ನು ದಾಸಿಯನ್ನಾಗಿಸಿಕೊಳ್ಳುವುದು (೧-೧೫). ದೇವಯಾನಿಯು ಮದುವೆಯಾಗಿ ಎಲ್ಲಿ ಹೋಗುತ್ತಾಳೋ ಅಲ್ಲಿಗೂ ಬರುವೆನೆಂದು ಶರ್ಮಿಷ್ಠೆಯು ಒಪ್ಪಿಕೊಳ್ಳುವುದು (೧೬-೨೫).
01075001 ವೈಶಂಪಾಯನ ಉವಾಚ|
01075001a ತತಃ ಕಾವ್ಯೋ ಭೃಗುಶ್ರೇಷ್ಠಃ ಸಮನ್ಯುರುಪಗಮ್ಯ ಹ|
01075001c ವೃಷಪರ್ವಾಣಮಾಸೀನಮಿತ್ಯುವಾಚಾವಿಚಾರಯನ್||
ವೈಶಂಪಾಯನನು ಹೇಳಿದನು: “ಆಗ ಕುಪಿತನಾದ ಭೃಗುಶ್ರೇಷ್ಠ ಕಾವ್ಯನು ಆಸೀನನಾಗಿದ್ದ ವೃಷಪರ್ವನಲ್ಲಿಗೆ ಬಂದು ಏನನ್ನೂ ವಿಚಾರಮಾಡದೆಯೇ ಹೇಳಿದನು:
01075002a ನಾಧರ್ಮಶ್ಚರಿತೋ ರಾಜನ್ಸದ್ಯಃ ಫಲತಿ ಗೌರಿವ|
01075002c ಪುತ್ರೇಷು ವಾ ನಪ್ತೃಷು ವಾ ನ ಚೇದಾತ್ಮನಿ ಪಶ್ಯತಿ|
01075002e ಫಲತ್ಯೇವ ಧ್ರುವಂ ಪಾಪಂ ಗುರುಭುಕ್ತಮಿವೋದರೇ||
“ರಾಜನ್! ಅಧರ್ಮದ ನಡವಳಿಕೆಯು ಭೂಮಿಯಂತೆ ತಕ್ಷಣವೇ ಫಲವನ್ನೀಡುವುದಿಲ್ಲ. ಅದರ ಫಲವು ಕ್ರಮೇಣವಾಗಿ ತನ್ನಲ್ಲಿ ಅಥವಾ ಪುತ್ರನಲ್ಲಿ ಅಥವಾ ಮೊಮ್ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಒಳ್ಳೆಯದಾಗಿ ತಿಂದ ಊಟವನ್ನು ಹೊಟ್ಟೆಯು ಹೇಗೆ ಜೀರ್ಣಿಸಿಕೊಳ್ಳುತ್ತದೆಯೋ ಹಾಗೆ ಪಾಪದ ಫಲವನ್ನೂ ನಿಶ್ವಯವಾಗಿ ಜೀರ್ಣಿಸಿಕೊಳ್ಳಬೇಕಾಗುತ್ತದೆ.
01075003a ಯದಘಾತಯಥಾ ವಿಪ್ರಂ ಕಚಮಾಂಗಿರಸಂ ತದಾ|
01075003c ಅಪಾಪಶೀಲಂ ಧರ್ಮಜ್ಞಂ ಶುಶ್ರೂಷುಂ ಮದ್ಗೃಹೇ ರತಂ||
ನನ್ನ ಮನೆಯಲ್ಲಿದ್ದು ನನ್ನ ಶುಷ್ರೂಶೆಯಲ್ಲಿ ನಿರತನಾದ ಅಪಾಪಶೀಲ ಧರ್ಮಜ್ಞ ವಿಪ್ರ ಆಂಗೀರಸ ಕಚನನ್ನು ನೀನು ಕೊಲ್ಲಿಸಿದೆ.
01075004a ವಧಾದನರ್ಹತಸ್ತಸ್ಯ ವಧಾಚ್ಚ ದುಹಿತುರ್ಮಮ|
01075004c ವೃಷಪರ್ವನ್ನಿಬೋಧೇದಂ ತ್ಯಕ್ಷ್ಯಾಮಿ ತ್ವಾಂ ಸಬಾಂಧವಂ|
01075004e ಸ್ಥಾತುಂ ತ್ವದ್ವಿಷಯೇ ರಾಜನ್ನ ಶಕ್ಷ್ಯಾಮಿ ತ್ವಯಾ ಸಹ||
ವಧಾರ್ಹನಲ್ಲದವನ ವಧೆಗೈದುದಕ್ಕಾಗಿ ಮತ್ತು ನನ್ನ ಮಗಳನ್ನು ನೋಯಿಸಿದುದಕ್ಕಾಗಿ ವೃಷಪರ್ವ! ನಿನ್ನನ್ನು ಮತ್ತು ನಿನ್ನ ಬಂಧುಗಳನ್ನು ನಾನು ತ್ಯಜಿಸುತ್ತೇನೆ. ರಾಜನ್! ಇನ್ನು ನಿನ್ನ ಈ ರಾಜ್ಯದಲ್ಲಿ ಇರಲಾರೆ.
01075005a ಅಹೋ ಮಾಮಭಿಜಾನಾಸಿ ದೈತ್ಯ ಮಿಥ್ಯಾಪ್ರಲಾಪಿನಂ|
01075005c ಯಥೇಮಮಾತ್ಮನೋ ದೋಷಂ ನ ನಿಯಚ್ಛಸ್ಯುಪೇಕ್ಷಸೇ||
ದೈತ್ಯ! ನಾನು ಸುಳ್ಳು ಪ್ರಲಾಪನೆಮಾಡುತ್ತಿದ್ದೇನೆಂದು ತಿಳಿಯಬೇಡ. ನಿನ್ನ ತಪ್ಪುಗಳನ್ನು ತಡೆ ಹಿಡಿಯುವುದರ ಬದಲು ಮುಂದುವರಿಸಿಕೊಂಡು ಹೋಗುತ್ತಿದ್ದೀಯೆ.”
01075006 ವೃಷಪರ್ವೋವಾಚ|
01075006a ನಾಧರ್ಮಂ ನ ಮೃಷಾವಾದಂ ತ್ವಯಿ ಜಾನಾಮಿ ಭಾರ್ಗವ|
01075006c ತ್ವಯಿ ಧರ್ಮಶ್ಚ ಸತ್ಯಂ ಚ ತತ್ಪ್ರಸೀದತು ನೋ ಭವಾನ್||
ವೃಷಪರ್ವನು ಹೇಳಿದನು: “ಭಾರ್ಗವ! ನೀನು ಎಂದೂ ಅಧರ್ಮದ ಮತ್ತು ಸುಳ್ಳಿನ ಮಾತನಾಡಿದ್ದುದು ನನಗೆ ಗೊತ್ತಿಲ್ಲ. ನಿನ್ನಲ್ಲಿ ಧರ್ಮ ಮತ್ತು ಸತ್ಯ ಇವೆರಡೂ ಇವೆ. ಭಗವನ್! ನನ್ನ ಮೇಲೆ ಕರುಣೆತೋರು.
01075007a ಯದ್ಯಸ್ಮಾನಪಹಾಯ ತ್ವಮಿತೋ ಗಚ್ಛಸಿ ಭಾರ್ಗವ|
01075007c ಸಮುದ್ರಂ ಸಂಪ್ರವೇಕ್ಷ್ಯಾಮೋ ನಾನ್ಯದಸ್ತಿ ಪರಾಯಣಂ||
ಭಾರ್ಗವ! ನಿಜವಾಗಿಯೂ ನೀನು ನಮ್ಮನ್ನು ಬಿಟ್ಟು ಹೋದರೆ ನಮಗೆ ಸಮುದ್ರದ ಅಡಿಯನ್ನು ಸೇರುವುದರ ಹೊರತಾದ ಬೇರೆ ಮಾರ್ಗವೇ ಇಲ್ಲ.”
01075008 ಶುಕ್ರ ಉವಾಚ|
01075008a ಸಮುದ್ರಂ ಪ್ರವಿಶಧ್ವಂ ವಾ ದಿಶೋ ವಾ ದ್ರವತಾಸುರಾಃ|
01075008c ದುಹಿತುರ್ನಾಪ್ರಿಯಂ ಸೋದುಂ ಶಕ್ತೋಽಹಂ ದಯಿತಾ ಹಿ ಮೇ||
ಶುಕ್ರನು ಹೇಳಿದನು: “ಅಸುರರೇ! ಸಮುದ್ರದಲ್ಲಾದರೂ ಮುಳುಗಿ ಅಥವಾ ದಿಕ್ಕಾಪಾಲಾಗಿ ಓಡಿಹೋಗಿ. ನನ್ನ ಪ್ರೀತಿಯ ಮಗಳಿಗಾದ ನಿಂದನೆಯನ್ನು ನನಗೆ ಸಹಿಸಲಾಗುತ್ತಿಲ್ಲ.
01075009a ಪ್ರಸಾದ್ಯತಾಂ ದೇವಯಾನೀ ಜೀವಿತಂ ಹ್ಯತ್ರ ಮೇ ಸ್ಥಿತಂ|
01075009c ಯೋಗಕ್ಷೇಮಕರಸ್ತೇಽಹಮಿಂದ್ರಸ್ಯೇವ ಬೃಹಸ್ಪತಿಃ||
ದೇವಯಾನಿಯನ್ನು ಸಂತೋಷದಿಂದಿಡುವುದರ ಮೇಲೆಯೇ ನನ್ನ ಜೀವನವು ನಿಂತಿದೆ. ಬೃಹಸ್ಪತಿಯು ಇಂದ್ರನ ಯೋಗಕ್ಷೇಮವನ್ನು ಹೇಗೆ ನೋಡಿಕೊಳ್ಳುತ್ತಾನೋ ಹಾಗೆ ನಾನು ಸದಾ ನನ್ನ ಮಗಳ ಯೋಗಕ್ಷೇಮವನ್ನು ಬಯಸುತ್ತೇನೆ.”
01075010 ವೃಷಪರ್ವೋವಾಚ|
01075010a ಯತ್ಕಿಂ ಚಿದಸುರೇಂದ್ರಾಣಾಂ ವಿದ್ಯತೇ ವಸು ಭಾರ್ಗವ|
01075010c ಭುವಿ ಹಸ್ತಿಗವಾಶ್ವಂ ವಾ ತಸ್ಯ ತ್ವಂ ಮಮ ಚೇಶ್ವರಃ||
ವೃಷಪರ್ವನು ಹೇಳಿದನು: “ಭಾರ್ಗವ! ಈ ಅಸುರೇಂದ್ರರ ಎಲ್ಲ ಸಂಪತ್ತಿಗೂ - ನನ್ನನ್ನೂ ಸೇರಿ ಈ ಭೂಮಿ, ಆನೆಗಳು, ಕುದುರೆಗಳು, ಗೋವುಗಳೂ - ಎಲ್ಲಕ್ಕೂ ನೀನೇ ಒಡೆಯ.”
01075011 ಶುಕ್ರ ಉವಾಚ|
01075011a ಯತ್ಕಿಂ ಚಿದಸ್ತಿ ದ್ರವಿಣಂ ದೈತ್ಯೇಂದ್ರಾಣಾಂ ಮಹಾಸುರ|
01075011c ತಸ್ಯೇಶ್ವರೋಽಸ್ಮಿ ಯದಿ ತೇ ದೇವಯಾನೀ ಪ್ರಸಾದ್ಯತಾಂ||
ಶುಕ್ರನು ಹೇಳಿದನು: “ಮಹಾಸುರ! ದೈತ್ಯೇಂದ್ರರ ಎಲ್ಲ ಸಂಪತ್ತಿಗೂ ನಾನು ಒಡೆಯನೆಂದಾದರೆ ದೇವಯಾನಿಯನ್ನು ನೀನು ಸಂತುಷ್ಟಗೊಳಿಸಬೇಕು.”
01075012 ದೇವಯಾನ್ಯುವಾಚ|
01075012a ಯದಿ ತ್ವಮೀಶ್ವರಸ್ತಾತ ರಾಜ್ಞೋ ವಿತ್ತಸ್ಯ ಭಾರ್ಗವ|
01075012c ನಾಭಿಜಾನಾಮಿ ತತ್ತೇಽಹಂ ರಾಜಾ ತು ವದತು ಸ್ವಯಂ||
ದೇವಯಾನಿಯು ಹೇಳಿದಳು: “ಭಾರ್ಗವ! ತಂದೇ! ಒಂದುವೇಳೆ ನೀನೇ ರಾಜನ ಮತ್ತು ಅವನ ಸರ್ವಸ್ವದ ಒಡೆಯನೆಂದಾದರೆ ಅದನ್ನು ಸ್ವಯಂ ರಾಜನೇ ನನ್ನ ಮುಂದೆ ಬಂದು ಹೇಳಲಿ.”
01075013 ವೃಷಪರ್ವೋವಾಚ|
01075013a ಯಂ ಕಾಮಮಭಿಕಾಮಾಸಿ ದೇವಯಾನಿ ಶುಚಿಸ್ಮಿತೇ|
01075013c ತತ್ತೇಽಹಂ ಸಂಪ್ರದಾಸ್ಯಾಮಿ ಯದಿ ಚೇದಪಿ ದುರ್ಲಭಂ||
ವೃಶಪರ್ವನು ಹೇಳಿದನು: “ಶುಚಿಸ್ಮಿತೇ! ದೇವಯಾನೀ! ನೀನು ಬಯಸಿದ ಎಲ್ಲ ಬಯಕೆಗಳನ್ನೂ ಅದೆಷ್ಟೇ ದುರ್ಲಭವಾಗಿದ್ದರೂ ನಾನು ಪೂರೈಸುತ್ತೇನೆ.”
01075014 ದೇವಯಾನ್ಯುವಾಚ|
01075014a ದಾಸೀಂ ಕನ್ಯಾಸಹಸ್ರೇಣ ಶರ್ಮಿಷ್ಠಾಮಭಿಕಾಮಯೇ|
01075014c ಅನು ಮಾಂ ತತ್ರ ಗಚ್ಛೇತ್ಸಾ ಯತ್ರ ದಾಸ್ಯತಿ ಮೇ ಪಿತಾ||
ದೇವಯಾನಿಯು ಹೇಳಿದಳು: “ಒಂದು ಸಾವಿರ ದಾಸಿಯರೊಂದಿಗೆ ಶರ್ಮಿಷ್ಠೆಯೂ ನನ್ನ ದಾಸಿಯಾಗಲೆಂದು ಬಯಸುತ್ತೇನೆ. ನನ್ನ ತಂದೆಯು ನನ್ನನ್ನು ಕೊಟ್ಟಲ್ಲಿಗೂ ಅವಳು ನನ್ನನ್ನು ಅನುಸರಿಸಬೇಕು.”
01075015 ವೃಷಪರ್ವೋವಾಚ|
01075015a ಉತ್ತಿಷ್ಠ ಹೇ ಸಂಗ್ರಹೀತ್ರಿ ಶರ್ಮಿಷ್ಠಾಂ ಶೀಘ್ರಮಾನಯ|
01075015c ಯಂ ಚ ಕಾಮಯತೇ ಕಾಮಂ ದೇವಯಾನೀ ಕರೋತು ತಂ||
ವೃಷಪರ್ವನು ಹೇಳಿದನು: “ಸಂಗ್ರಹೀತ್ರಿ! ಎದ್ದು ಹೋಗಿ ಶರ್ಮಿಷ್ಠೆಯನ್ನು ಬೇಗನೆ ಕರೆದು ತಾ. ದೇವಯಾನಿಯು ಬಯಸಿದಂತೆ ಅವಳು ನಡೆದುಕೊಳ್ಳಲಿ.””
01075016 ವೈಶಂಪಾಯನ ಉವಾಚ|
01075016a ತತೋ ಧಾತ್ರೀ ತತ್ರ ಗತ್ವಾ ಶರ್ಮಿಷ್ಠಾಂ ವಾಕ್ಯಮಬ್ರವೀತ್|
01075016c ಉತ್ತಿಷ್ಠ ಭದ್ರೇ ಶರ್ಮಿಷ್ಠೇ ಜ್ಞಾತೀನಾಂ ಸುಖಮಾವಹ||
ವೈಶಂಪಾಯನನು ಹೇಳಿದನು: “ಆಗ ಆ ಧಾತ್ರಿಯು ಶರ್ಮಿಷ್ಠೆಯಲ್ಲಿ ಹೋಗಿ ಹೇಳಿದಳು: “ಭದ್ರೇ ಶರ್ಮಿಷ್ಠೇ! ಎದ್ದೇಳು. ನಿನ್ನವರಿಗೆ ಒಳಿತನ್ನು ಮಾಡು.
01075017a ತ್ಯಜತಿ ಬ್ರಾಹ್ಮಣಃ ಶಿಷ್ಯಾನ್ದೇವಯಾನ್ಯಾ ಪ್ರಚೋದಿತಃ|
01075017c ಸಾ ಯಂ ಕಾಮಯತೇ ಕಾಮಂ ಸ ಕಾರ್ಯೋಽದ್ಯ ತ್ವಯಾನಘೇ||
ದೇವಯಾನಿಯಿಂದ ಪ್ರಚೋದಿತ ಬ್ರಾಹ್ಮಣನು ತನ್ನ ಶಿಷ್ಯರನ್ನು ಬಿಟ್ಟು ಹೋಗುವುದರಲ್ಲಿದ್ದಾನೆ. ಅನಘೇ! ನೀನು ಅವಳು ಬಯಸಿದ ಹಾಗೆ ನಡೆದುಕೊಳ್ಳಬೇಕಾಗಿದೆ.”
01075018 ಶರ್ಮಿಷ್ಠೋವಾಚ|
01075018a ಸಾ ಯಂ ಕಾಮಯತೇ ಕಾಮಂ ಕರವಾಣ್ಯಹಮದ್ಯ ತಂ|
01075018c ಮಾ ತ್ವೇವಾಪಗಮಚ್ಶುಕ್ರೋ ದೇವಯಾನೀ ಚ ಮತ್ಕೃತೇ||
ಶರ್ಮಿಷ್ಠೆಯು ಹೇಳಿದಳು: “ಇಂದು ಅವಳು ಏನನ್ನೇ ಬಯಸಿದರೂ ಅದರಂತೆ ನಡೆದುಕೊಳ್ಳಲು ಸಿದ್ಧಳಿದ್ದೇನೆ. ನನ್ನ ಕಾರಣದಿಂದಾಗಿ ಶುಕ್ರ ಮತ್ತು ದೇವಯಾನಿಯರು ಹೊರಟು ಹೋಗಬಾರದು.””
01075019 ವೈಶಂಪಾಯನ ಉವಾಚ|
01075019a ತತಃ ಕನ್ಯಾಸಹಸ್ರೇಣ ವೃತಾ ಶಿಬಿಕಯಾ ತದಾ|
01075019c ಪಿತುರ್ನಿಯೋಗಾತ್ತ್ವರಿತಾ ನಿಶ್ಚಕ್ರಾಮ ಪುರೋತ್ತಮಾತ್||
ವೈಶಂಪಾಯನನು ಹೇಳಿದನು: “ತಕ್ಷಣವೇ ಅವಳು ತನ್ನ ತಂದೆಯ ಆಜ್ಞೆಯಂತೆ ಸಹಸ್ರ ದಾಸಿಕನ್ಯೆಯರೊಡಗೊಂಡು ಆ ಉತ್ತಮ ಅರಮನೆಯನ್ನು ಬಿಟ್ಟು ಬಂದಳು.”
01075020 ಶರ್ಮಿಷ್ಠೋವಾಚ|
01075020a ಅಹಂ ಕನ್ಯಾಸಹಸ್ರೇಣ ದಾಸೀ ತೇ ಪರಿಚಾರಿಕಾ|
01075020c ಅನು ತ್ವಾಂ ತತ್ರ ಯಾಸ್ಯಾಮಿ ಯತ್ರ ದಾಸ್ಯತಿ ತೇ ಪಿತಾ||
ಶರ್ಮಿಷ್ಠೆಯು ಹೇಳಿದಳು: “ಈ ಸಹಸ್ರ ದಾಸಿಕನ್ಯೆರೊಡನೆ ನಾನು ನಿನ್ನ ಪರಿಚಾರಿಕೆಯಾಗಿ ನಿನ್ನ ತಂದೆಯು ನಿನ್ನನ್ನು ಎಲ್ಲಿಗೆ ಕೊಡುತ್ತಾನೋ ಅಲ್ಲಿಗೂ ಹಿಂಬಾಲಿಸುತ್ತೇನೆ.”
01075021 ದೇವಯಾನ್ಯುವಾಚ|
01075021a ಸ್ತುವತೋ ದುಹಿತಾ ತೇಽಹಂ ಬಂದಿನಃ ಪ್ರತಿಗೃಹ್ಣತಃ|
01075021c ಸ್ತೂಯಮಾನಸ್ಯ ದುಹಿತಾ ಕಥಂ ದಾಸೀ ಭವಿಷ್ಯಸಿ||
ದೇವಯಾನಿಯು ಹೇಳಿದಳು: “ಬೇಡುವ, ಸ್ತುತಿಸುವ ಬಂದಿಯ ಮಗಳು ನಾನು. ಸ್ತುತಿಸಲ್ಪಡುವವನ ಮಗಳಾದ ನೀನು ಹೇಗೆ ನನ್ನ ದಾಸಿಯಾಗಬಲ್ಲೆ?”
01075022 ಶರ್ಮಿಷ್ಠೋವಾಚ|
01075022a ಯೇನ ಕೇನ ಚಿದಾರ್ತಾನಾಂ ಜ್ಞಾತೀನಾಂ ಸುಖಮಾವಹೇತ್|
01075022c ಅತಸ್ತ್ವಾಮನುಯಾಸ್ಯಾಮಿ ಯತ್ರ ದಾಸ್ಯತಿ ತೇ ಪಿತಾ||
ಶರ್ಮಿಷ್ಠೆಯು ಹೇಳಿದಳು: “ಏನಾದರೂ ಮಾಡಿ ಆರ್ತರಾದ ನನ್ನವರಿಗೆ ಸುಖವನ್ನು ತರಲು ಬಯಸುತ್ತೇನೆ. ಆದುದರಿಂದ ನಿನ್ನ ತಂದೆಯು ನಿನ್ನನ್ನು ಎಲ್ಲಿಗೆ ಕೊಡುತ್ತಾನೋ ಅಲ್ಲಿಗೆ ನಾನು ಅನುಸರಿಸುವೆ.””
01075023 ವೈಶಂಪಾಯನ ಉವಾಚ|
01075023a ಪ್ರತಿಶ್ರುತೇ ದಾಸಭಾವೇ ದುಹಿತ್ರಾ ವೃಷಪರ್ವಣಃ|
01075023c ದೇವಯಾನೀ ನೃಪಶ್ರೇಷ್ಠ ಪಿತರಂ ವಾಕ್ಯಮಬ್ರವೀತ್||
ವೈಶಂಪಾಯನನು ಹೇಳಿದನು: “ನೃಪಶ್ರೇಷ್ಠ! ಈ ರೀತಿ ವೃಷಪರ್ವನ ಮಗಳು ತನ್ನ ದಾಸಿಯಾದ ನಂತರ ದೇವಯಾನಿಯು ತನ್ನ ತಂದೆಗೆ ಹೇಳಿದಳು:
01075024a ಪ್ರವಿಶಾಮಿ ಪುರಂ ತಾತ ತುಷ್ಟಾಸ್ಮಿ ದ್ವಿಜಸತ್ತಮ|
01075024c ಅಮೋಘಂ ತವ ವಿಜ್ಞಾನಮಸ್ತಿ ವಿದ್ಯಾಬಲಂ ಚ ತೇ||
“ತಂದೆ ದ್ವಿಜಸತ್ತಮ! ನಾನು ಸಂತುಷ್ಠಳಾಗಿ ಪುರವನ್ನು ಪ್ರವೇಶಿಸುತ್ತಿದ್ದೇನೆ. ನಿನ್ನ ವಿದ್ಯಾಬಲ ಮತ್ತು ವಿಜ್ಞಾನವು ಅಮೋಘವೆಂದು ಈಗ ನನಗೆ ತಿಳಿಯಿತು.”
01075025a ಏವಮುಕ್ತೋ ದುಹಿತ್ರಾ ಸ ದ್ವಿಜಶ್ರೇಷ್ಠೋ ಮಹಾಯಶಾಃ|
01075025c ಪ್ರವಿವೇಶ ಪುರಂ ಹೃಷ್ಟಃ ಪೂಜಿತಃ ಸರ್ವದಾನವೈಃ||
ಮಗಳ ಈ ಮಾತುಗಳನ್ನು ಕೇಳಿ ಸಂತುಷ್ಠನಾದ ಮಹಾಯಶಸ್ವಿ ದ್ವಿಜಶ್ರೇಷ್ಠನು ತನ್ನ ಪುತ್ರಿಯೊಂದಿಗೆ ಸರ್ವ ದಾನವರಿಂದ ಆದರಗೊಂಡು ಪುರವನ್ನು ಪ್ರವೇಶಿಸಿದನು.”
ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಯಯಾತ್ಯುಪಾಖ್ಯಾನೇ ಪಂಚಸಪ್ತತಿತಮೋಽಧ್ಯಾಯ:||
ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಯಯಾತಿ-ಉಪಾಖ್ಯಾನದಲ್ಲಿ ಎಪ್ಪತ್ತೈದನೆಯ ಅಧ್ಯಾಯವು.