Adi Parva: Chapter 64

ಆದಿ ಪರ್ವ: ಸಂಭವ ಪರ್ವ

೬೪

ದುಃಷಂತನು ಕಣ್ವಾಶ್ರಮವನ್ನು ಕಂಡು ಪ್ರವೇಶಿಸಿದುದು (೧-೨೫). ಆಶ್ರಮ ವರ್ಣನೆ (೨೬-೪೦).

01064001 ವೈಶಂಪಾಯನ ಉವಾಚ|

01064001a ತತೋ ಮೃಗಸಹಸ್ರಾಣಿ ಹತ್ವಾ ವಿಪುಲವಾಹನಃ|

01064001c ರಾಜಾ ಮೃಗಪ್ರಸಂಗೇನ ವನಮನ್ಯದ್ವಿವೇಶ ಹ||

ವೈಶಂಪಾಯನನು ಹೇಳಿದನು: “ಸಹಸ್ರಾರು ಮೃಗಗಳನ್ನು ಬೇಟೆಯಾಡಿದ ಆ ವಿಪುಲವಾಹನ ರಾಜನು ಬೇಟೆಯಾಡುತ್ತಾ ಇನ್ನೊಂದು ವನವನ್ನು ಪ್ರವೇಶಿಸಿದನು.

01064002a ಏಕ ಏವೋತ್ತಮಬಲಃ ಕ್ಷುತ್ಪಿಪಾಸಾಸಮನ್ವಿತಃ|

01064002c ಸ ವನಸ್ಯಾನ್ತಮಾಸಾದ್ಯ ಮಹದೀರಿಣಮಾಸದತ್||

ಹಸಿವು ಬಾಯಾರಿಕೆಗಳಿಂದ ಬಳಲಿದ ಆ ಉತ್ತಮ ಬಲಶಾಲಿಯು ಒಬ್ಬನೇ ವನದ ಅಂಚಿನಲ್ಲಿದ್ದ ಒಂದು ಮೈದಾನ ಪ್ರದೇಶವನ್ನು ಸೇರಿದನು.

01064003a ತಚ್ಚಾಪ್ಯತೀತ್ಯ ನೃಪತಿರುತ್ತಮಾಶ್ರಮಸಮ್ಯುತಂ|

01064003c ಮನಃಪ್ರಹ್ಲಾದಜನನಂ ದೃಷ್ಟಿಕಾಂತಮತೀವ ಚ|

01064003e ಶೀತಮಾರುತಸಂಯುಕ್ತಂ ಜಗಾಮಾನ್ಯನ್ಮಹದ್ವನಂ||

ಅದನ್ನು ದಾಟಿದ ನೃಪತಿಯು ಉತ್ತಮ ಆಶ್ರಮಗಳಿಂದ ಕೂಡಿದ, ಅತೀವ ಸುಂದರವಾಗಿದ್ದು ಮನಸ್ಸಿಗೆ ಸಂತೋಷವನ್ನುಂಟುಮಾಡುವ, ತಂಗಾಳಿ ಬೀಸುತ್ತಿದ್ದ ಇನ್ನೊಂದು ಮಹಾ ವನವನ್ನು ಪ್ರವೇಶಿಸಿದನು.

01064004a ಪುಷ್ಪಿತೈಃ ಪಾದಪೈಃ ಕೀರ್ಣಮತೀವ ಸುಖಶಾದ್ವಲಂ|

01064004c ವಿಪುಲಂ ಮಧುರಾರಾವೈರ್ನಾದಿತಂ ವಿಹಗೈಸ್ತಥಾ||

ಹೂತುಂಬಿದ ಮರಗಳು ಮತ್ತು ವಿಶಾಲ ಸಮೃದ್ಧ ಹುಲ್ಲಿನ ಹಾಸಿಗೆಯನ್ನು ಹೊಂದಿದ್ದ ಅಲ್ಲಿ ಪಕ್ಷಿಗಳ ಮಧುರ ಕಲರವಗಳು ಪ್ರತಿಧ್ವನಿಸುತ್ತಿದ್ದವು.

01064005a ಪ್ರವೃದ್ಧವಿಟಪೈರ್ವೃಕ್ಷೈಃ ಸುಖಚ್ಚಾಯೈಃ ಸಮಾವೃತಂ|

01064005c ಷಟ್ಪದಾಘೂರ್ಣಿತಲತಂ ಲಕ್ಷ್ಮ್ಯಾ ಪರಮಯಾ ಯುತಂ||

ಅಲ್ಲಿ ಸುಖಛಾಯೆಯನ್ನು ನೀಡುವ ವಿಶಾಲ ರೆಂಬೆಗಳನ್ನು ಹೊಂದಿ ಪ್ರವೃದ್ಧವಾಗಿ ಬೆಳೆದಿದ್ದ ವೃಕ್ಷಗಳಿದ್ದವು. ಸುಂದರ ಪೊದೆಗಳು ಮತ್ತು ಹೂವಿನ ಬಳ್ಳಿಗಳನ್ನು ದುಂಬಿಗಳು ಸುತ್ತುವರೆದಿದ್ದವು.

01064006a ನಾಪುಷ್ಪಃ ಪಾದಪಃ ಕಶ್ಚಿನ್ನಾಫಲೋ ನಾಪಿ ಕಂಟಕೀ|

01064006c ಷಟ್ಪದೈರ್ವಾಪ್ಯನಾಕೀರ್ಣಸ್ತಸ್ಮಿನ್ವೈ ಕಾನನೇಽಭವತ್||

ಆ ಕಾನನದಲ್ಲಿ ಹೂ-ಫಲಗಳಿಲ್ಲದ ಮರವೇ ಇರಲಿಲ್ಲ, ಮುಳ್ಳುಗಳಿಂದ ಕೂಡಿದ ಪೊದೆಯೇ ಇರಲಿಲ್ಲ, ಮತ್ತು ದುಂಬಿಗಳು ಮುತ್ತಿಕೊಂಡಿರದ ಯಾವ ಗಿಡವೂ ಇರಲಿಲ್ಲ.

01064007a ವಿಹಗೈರ್ನಾದಿತಂ ಪುಷ್ಪೈರಲಂಕೃತಮತೀವ ಚ|

01064007c ಸರ್ವರ್ತುಕುಸುಮೈರ್ವೃಕ್ಷೈರತೀವ ಸುಖಶಾದ್ವಲಂ|

01064007e ಮನೋರಮಂ ಮಹೇಷ್ವಾಸೋ ವಿವೇಶ ವನಮುತ್ತಮಂ||

ಪಕ್ಷಿಗಳ ನಾದದಿಂದ ತುಂಬಿದ್ದ, ಬಹಳಷ್ಟು ಪುಷ್ಪಗಳಿಂದ ಅಲಂಕೃತವಾಗಿದ್ದ, ಸರ್ವ‌ಋತುಗಳಲ್ಲಿ ಕಂಡುಬರುವ ಸುಮವೃಕ್ಷಗಳ ಸುಖ ನೆರಳಿನಿಂದ ಮನೋರಮ ಆ ಉತ್ತಮ ವನವನ್ನು ಮಹೇಷ್ವಾಸನು ಪ್ರವೇಶಿಸಿದನು.

01064008a ಮಾರುತಾಗಲಿತಾಸ್ತತ್ರ ದ್ರುಮಾಃ ಕುಸುಮಶಾಲಿನಃ|

01064008c ಪುಷ್ಪವೃಷ್ಟಿಂ ವಿಚಿತ್ರಾಂ ಸ್ಮ ವ್ಯಸೃಜಂಸ್ತೇ ಪುನಃ ಪುನಃ||

ಗಾಳಿಯಿಂದ ಅಲುಗಾಡುತ್ತಿದ್ದ ಕುಸುಮದ್ರುಮಗಳಿಂದ ಪುನಃ ಪುನಃ ಪುಷ್ಪವೃಷ್ಟಿಯಾಗುತ್ತಿತ್ತು.

01064009a ದಿವಸ್ಪೃಶೋಽಥ ಸಂಘುಷ್ಟಾಃ ಪಕ್ಷಿಭಿರ್ಮಧುರಸ್ವರೈಃ|

01064009c ವಿರೇಜುಃ ಪಾದಪಾಸ್ತತ್ರ ವಿಚಿತ್ರಕುಸುಮಾಂಬರಾಃ||

01064010a ತೇಷಾಂ ತತ್ರ ಪ್ರವಾಲೇಷು ಪುಷ್ಪಭಾರಾವನಾಮಿಷು|

01064010c ರುವಂತಿ ರಾವಂ ವಿಹಗಾಃ ಷಟ್ಪದೈಃ ಸಹಿತಾ ಮೃದು||

ಸ್ವರ್ಗವನ್ನು ಮುಟ್ಟುತ್ತಿವೆಯೋ ಎನ್ನುವಷ್ಟು ಎತ್ತರ ಬೆಳೆದಿದ್ದ ಪಕ್ಷಿಗಳ ಮಧುರ ಸ್ವರಗಳಿಂದ ವಿರಾಜಿಸುತ್ತಿದ್ದ ಅಲ್ಲಿಯ ಮರಗಳ ರೆಂಬೆಗಳು ವಿಚಿತ್ರ ಕುಸುಮಗಳನ್ನು ಹೊತ್ತು ಆ ಪುಷ್ಪಗಳ ಭಾರದಿಂದಲೋ ಎಂಬಂತೆ ಕೆಳಗೆ ಚಾಚಿ ಸುತ್ತುವರೆದ ಪಕ್ಷಿ-ದುಂಬಿಗಳ ನಾದಸಮೂಹದಲ್ಲಿ ಮುದಿತವಾಗಿದ್ದವು.

01064011a ತತ್ರ ಪ್ರದೇಶಾಂಶ್ಚ ಬಹೂನ್ಕುಸುಮೋತ್ಕರಮಂಡಿತಾನ್|

01064011c ಲತಾಗೃಹಪರಿಕ್ಷಿಪ್ತಾನ್ ಮನಸಃ ಪ್ರೀತಿವರ್ಧನಾನ್|

01064011e ಸಂಪಶ್ಯನ್ಸ ಮಹಾತೇಜಾ ಬಭೂವ ಮುದಿತಸ್ತದಾ||

ಆ ಪ್ರದೇಶದಲ್ಲಿ ಹೂವಿನ ಗೊಂಚಲುಗಳನ್ನು ಹೊಂದಿದ್ದ ಹಲವಾರು ಬಳ್ಳಿಗಳಿದ್ದವು. ಮನಸ್ಸಿನ ಸಂತೋಷವನ್ನು ಹೆಚ್ಚಿಸುವ ಲತಾಗೃಹಗಳಿದ್ದವು. ಇದನ್ನೆಲ್ಲಾ ನೋಡಿದ ಮಹಾತೇಜಸ್ವಿಯು ಆನಂದಿತನಾದನು.

01064012a ಪರಸ್ಪರಾಶ್ಲಿಷ್ಟಶಾಖೈಃ ಪಾದಪೈಃ ಕುಸುಮಾಚಿತೈಃ|

01064012c ಅಶೋಭತ ವನಂ ತತ್ತೈರ್ಮಹೇಂದ್ರಧ್ವಜಸನ್ನಿಭೈಃ||

ತಮ್ಮ ತಮ್ಮ ಕುಸುಮಾಚ್ಛಾದಿತ ರೆಂಬೆಗಳಿಂದ ಪರಸ್ಪರ ಅಪ್ಪಿಕೊಂಡಂತಿದ್ದ ವೃಕ್ಷಗಳಿಂದ ಕೂಡಿದ ಆ ವನವು ಅನೇಕ ಸುಂದರ ಕಾಮನಬಿಲ್ಲುಗಳಂತೆ ಶೋಭಿಸುತ್ತಿತ್ತು. 

01064013a ಸುಖಶೀತಃ ಸುಗಂಧೀ ಚ ಪುಷ್ಪರೇಣುವಹೋಽನಿಲಃ|

01064013c ಪರಿಕ್ರಾಮನ್ವನೇ ವೃಕ್ಷಾನುಪೈತೀವ ರಿರಂಸಯಾ||

ಹೂವುಗಳ ಪರಾಗವನ್ನು ಹೊತ್ತ ಸುಗಂಧಿತ ಸುಖಶೀತಲ ಗಾಳಿಯು ಅಲ್ಲಿಯ ಮರಗಳೊಂದಿಗೆ ಆಟವಾಡುತ್ತಿದೆಯೋ ಎನ್ನುವಂತೆ ವನದ ಸುತ್ತಲೂ ಬೀಸುತ್ತಿತ್ತು.

01064014a ಏವಂಗುಣಸಮಾಯುಕ್ತಂ ದದರ್ಶ ಸ ವನಂ ನೃಪಃ|

01064014c ನದೀಕಚ್ಚೋದ್ಭವಂ ಕಾಂತಮುಚ್ಚ್ರಿತಧ್ವಜಸನ್ನಿಭಂ||

ಈ ರೀತಿ ಗುಣಸಮಾಯುಕ್ತ ಆ ವನವು ನದಿಯೊಂದರ ತೀರದಲ್ಲಿ ಇಂದ್ರನ ಗೌರವಾರ್ಥ ನೆಟ್ಟಿದ್ದ ಧ್ವಜದಂತಿದೆ ಎನ್ನುವುದನ್ನು ನೃಪನು ಗಮನಿಸಿದನು.

01064015a ಪ್ರೇಕ್ಷಮಾಣೋ ವನಂ ತತ್ತು ಸುಪ್ರಹೃಷ್ಟವಿಹಂಗಮಂ|

01064015c ಆಶ್ರಮಪ್ರವರಂ ರಮ್ಯಂ ದದರ್ಶ ಚ ಮನೋರಮಂ||

ಆ ವನದಲ್ಲಿ ಸದಾ ಸಂತಸದಿಂದ ಚಿಲಿಪಿಲಿಗುಡುತ್ತಿದ್ದ ಪಕ್ಷಿಗಳನ್ನು ಮತ್ತು ಮನೋರಮ ರಮ್ಯ ಆಶ್ರಮಸಂಕುಲವನ್ನು ಕಂಡನು.

01064016a ನಾನಾವೃಕ್ಷಸಮಾಕೀರ್ಣಂ ಸಂಪ್ರಜ್ವಲಿತಪಾವಕಂ|

01064016c ಯತಿಭಿರ್ವಾಲಖಿಲ್ಯೈಶ್ಚ ವೃತಂ ಮುನಿಗಣಾನ್ವಿತಂ||

ಅದು ನಾನಾ ವೃಕ್ಷಗಳಿಂದ ಸುತ್ತುವರೆದಿತ್ತು ಮತ್ತು ಮಧ್ಯದಲ್ಲಿ ಪುಣ್ಯ ಪಾವಕವು ಉರಿಯುತ್ತಿತ್ತು. ವಾಲಖಿಲ್ಯಧಾರಿ ಯತಿ ಮತ್ತು ಮುನಿಗಣಗಳಿಂದ ಕೂಡಿತ್ತು.

01064017a ಅಗ್ನ್ಯಾಗಾರೈಶ್ಚ ಬಹುಭಿಃ ಪುಷ್ಪಸಂಸ್ತರಸಂಸ್ತೃತಂ|

01064017c ಮಹಾಕಚ್ಚೈರ್ಬೃಹದ್ಭಿಶ್ಚ ವಿಭ್ರಾಜಿತಮತೀವ ಚ||

ಬಹಳ ಅಗ್ನ್ಯಾಗಾರಗಳಿದ್ದವು, ನೆಲದ ಮೇಲೆ ಮರಗಳಿಂದ ಕೆಳಗೆ ಬಿದ್ದ ಪುಷ್ಪಗಳ ದರಿಯೇ ಹಾಸಿತ್ತು. ಮಹಾ ರೆಂಬೆಗಳನ್ನು ಹೊಂದಿದ್ದ ಸುಂದರ ಮರಗಳಿಂದ ಅತೀವ ಸುಂದರವಾಗಿ ಕಾಣುತ್ತಿತ್ತು.

01064018a ಮಾಲಿನೀಮಭಿತೋ ರಾಜನ್ನದೀಂ ಪುಣ್ಯಾಂ ಸುಖೋದಕಾಂ|

01064018c ನೈಕಪಕ್ಷಿಗಣಾಕೀರ್ಣಾಂ ತಪೋವನಮನೋರಮಾಂ||

01064018e ತತ್ರ ವ್ಯಾಲಮೃಗಾನ್ಸೌಮ್ಯಾನ್ಪಶ್ಯನ್ಪ್ರೀತಿಮವಾಪ ಸಃ||

ರಾಜನ್! ಸುಖೋದಕವನ್ನು ಹೊಂದಿದ್ದ ಪುಣ್ಯಕರ ಮಾಲಿನೀ ನದಿಯು ಅಲ್ಲಿ ಹರಿಯುತ್ತಿತ್ತು.

01064019a ತಂ ಚಾಪ್ಯತಿರಥಃ ಶ್ರೀಮಾನಾಶ್ರಮಂ ಪ್ರತ್ಯಪದ್ಯತ|

01064019c ದೇವಲೋಕಪ್ರತೀಕಾಶಂ ಸರ್ವತಃ ಸುಮನೋಹರಂ||

ಹೀಗೆಯೇ ಆ ಶ್ರೀಮಾನ್ ಅತಿರಥನು ಸರ್ವತವೂ ಸುಮನೋಹರವಾಗಿದ್ದ ದೇವಲೋಕದಂತಿದ್ದ ಅಶ್ರಮವನ್ನು ಪ್ರವೇಶಿಸಿದನು.

01064020a ನದೀಮಾಶ್ರಮಸಂಶ್ಲಿಷ್ಟಾಂ ಪುಣ್ಯತೋಯಾಂ ದದರ್ಶ ಸಃ|

01064020c ಸರ್ವಪ್ರಾಣಭೃತಾಂ ತತ್ರ ಜನನೀಮಿವ ವಿಷ್ಟಿತಾಂ||

ಅಲ್ಲಿರುವ ಸರ್ವ ಪ್ರಾಣಿಗಳಿಗೂ ಜನನಿಯಂತೆ ಹರಿಯುತ್ತಿರುವ ಪುಣ್ಯ ನದಿಯ ದಂಡೆಯ ಮೇಲೆ ನಿಂತಿದ್ದ ಆ ಆಶ್ರಮವನ್ನು ನೋಡಿದನು.

01064021a ಸಚಕ್ರವಾಕಪುಲಿನಾಂ ಪುಷ್ಪಫೇನಪ್ರವಾಹಿನೀಂ|

01064021c ಸಕಿನ್ನರಗಣಾವಾಸಾಂ ವಾನರರ್ಕ್ಷನಿಶೇವಿತಾಂ||

ಪುಷ್ಪ-ನೊರೆಗಳೊಡನೆ ಪ್ರವಾಹಿಸುತ್ತಿದ್ದ ಅದರ ದಂಡೆಯ ಮೇಲೆ ಚಕ್ರವಾಕಗಳು ಆಟವಾಡುತ್ತಿದ್ದವು, ತಮ್ಮ ಗಣಗಳೊಂದಿಗೆ ಕಿನ್ನರರು ವಾಸಿಸುತ್ತಿದ್ದರು ಮತ್ತು ವಾನರ-ಕರಡಿಗಳು ಅಲ್ಲಿಗೆ ಬರುತ್ತಿದ್ದವು.

01064022a ಪುಣ್ಯಸ್ವಾಧ್ಯಾಯಸಂಘುಷ್ಟಾಂ ಪುಲಿನೈರುಪಶೋಭಿತಾಂ|

01064022c ಮತ್ತವಾರಣಶಾರ್ದೂಲಭುಜಗೇಂದ್ರನಿಶೇವಿತಾಂ||

ಸ್ವಾಧ್ಯಾಯ ನಿರತ ಪುಣ್ಯಪುರುಷರು ಆ ಸುಂದರ ದಂಡೆಯ ಮೇಲೆ ವಾಸಿಸುತ್ತಿದ್ದರು. ಮದಿಸಿದ ಆನೆಗಳೂ, ಹುಲಿಗಳೂ, ಸರ್ಪಗಳೂ ಅಲ್ಲಿಗೆ ಬರುತ್ತಿದ್ದವು.

01064023a ನದೀಮಾಶ್ರಮಸಂಬದ್ಧಾಂ ದೃಷ್ಟ್ವಾಶ್ರಮಪದಂ ತಥಾ|

01064023c ಚಕಾರಾಭಿಪ್ರವೇಶಾಯ ಮತಿಂ ಸ ನೃಪತಿಸ್ತದಾ||

ನದಿಯ ದಂಡೆಗೇ ಹೊಂದಿಕೊಂಡಿದ್ದ ಆಶ್ರಮಪದವನ್ನು ನೋಡಿದ ನೃಪತಿಯು ಅದನ್ನು ಪ್ರವೇಶಿಸುವ ಮನಸ್ಸುಮಾಡಿದನು.

01064024a ಅಲಂಕೃತಂ ದ್ವೀಪವತ್ಯಾ ಮಾಲಿನ್ಯಾ ರಮ್ಯತೀರಯಾ|

01064024c ನರನಾರಾಯಣಸ್ಥಾನಂ ಗಂಗಯೇವೋಪಶೋಭಿತಂ||

ಮಾಲಿನೀ ನದಿಯು ದ್ವೀಪಗಳಿಂದ ಮತ್ತು ರಮ್ಯ ತೀರಗಳಿಂದ ಅಲಂಕೃತವಾಗಿದ್ದು, ಗಂಗಾ ತೀರದಲ್ಲಿದ್ದ ನರನಾರಾಯಣರ ಆಶ್ರಮದಂತೆ ಶೋಭಿಸುತ್ತಿತ್ತು.

01064024e ಮತ್ತಬರ್ಹಿಣಸಂಘುಷ್ಟಂ ಪ್ರವಿವೇಶ ಮಹದ್ವನಂ||

01064025a ತತ್ಸ ಚೈತ್ರರಥಪ್ರಖ್ಯಂ ಸಮುಪೇತ್ಯ ನರೇಶ್ವರಃ|

ಚೈತ್ರರಥನ ವನದಂತಿರುವ, ಮತ್ತು ನವಿಲು ಸಂಕುಲಗಳಿಂದ ಕೂಡಿದ ಆ ಮಹಾವನವನ್ನು ನರೇಶ್ವರನು ಪ್ರವೇಶಿಸಿದನು.

01064025c ಅತೀವ ಗುಣಸಂಪನ್ನಮನಿರ್ದೇಶ್ಯಂ ಚ ವರ್ಚಸಾ||

01064025e ಮಹರ್ಷಿಂ ಕಾಶ್ಯಪಂ ದ್ರಷ್ಟುಮಥ ಕಣ್ವಂ ತಪೋಧನಂ||

ಅತೀವ ಗುಣಸಂಪನ್ನ ಅನಿರ್ದೇಶ್ಯ ವರ್ಚಸ ಮಹರ್ಷಿ ತಪೋಧನ ಕಾಶ್ಯಪ ಕಣ್ವನನ್ನು ನೋಡಲು ಬಯಸಿದನು.

01064026a ರಥಿನೀಂ ಅಶ್ವಸಂಬಾಧಾಂ ಪದಾತಿಗಣಸಂಕುಲಾಂ|

01064026c ಅವಸ್ಥಾಪ್ಯ ವನದ್ವಾರಿ ಸೇನಾಮಿದಮುವಾಚ ಸಃ||

ರಥಿಗಳನ್ನು, ಅಶ್ವಸವಾರಿಗಳನ್ನು ಮತ್ತು ಪದಾತಿಗಣಸಂಕುಲಗಳ ಸೇನೆಯನ್ನು ವನದ ದಾರಿಯಲ್ಲಿಯೇ ನಿಲ್ಲಿಸಿ ಈ ಮಾತುಗಳನ್ನಾಡಿದನು:

01064027a ಮುನಿಂ ವಿರಜಸಂ ದ್ರಷ್ಟುಂ ಗಮಿಷ್ಯಾಮಿ ತಪೋಧನಂ|

01064027c ಕಾಶ್ಯಪಂ ಸ್ಥೀಯತಾಮತ್ರ ಯಾವದಾಗಮನಂ ಮಮ||

“ನಾನು ಮುನಿ ವಿರಜಸ ತಪೋಧನ ಕಾಶ್ಯಪನನ್ನು ಕಾಣಲು ಹೋಗುತ್ತಿದ್ದೇನೆ. ನಾನು ಬರುವವರೆಗೆ ಇಲ್ಲಿಯೇ ನಿಂತಿರಿ.”

01064028a ತದ್ವನಂ ನಂದನಪ್ರಖ್ಯಮಾಸಾದ್ಯ ಮನುಜೇಶ್ವರಃ|

01064028c ಕ್ಷುತ್ಪಿಪಾಸೇ ಜಹೌ ರಾಜಾ ಹರ್ಷಂ ಚಾವಾಪ ಪುಷ್ಕಲಂ||

ನಂದನವನದಂತಿರುವ ಆ ವನವನ್ನು ಪ್ರವೇಶಿಸುತ್ತಿದ್ದಂತೆಯೇ ಮನುಜೇಶ್ವರ ರಾಜನು ಹಸಿವು ಬಯಾರಿಕೆಗಳನ್ನು ಕಳೆದುಕೊಂಡು ಅತ್ಯಂತ ಹರ್ಷಿತನಾದನು.

01064029a ಸಾಮಾತ್ಯೋ ರಾಜಲಿಂಗಾನಿ ಸೋಽಪನೀಯ ನರಾಧಿಪಃ|

01064029c ಪುರೋಹಿತಸಹಾಯಶ್ಚ ಜಗಾಮಾಶ್ರಮಮುತ್ತಮಂ|

01064029e ದಿದೃಕ್ಷುಸ್ತತ್ರ ತಂ ಋಷಿಂ ತಪೋರಾಶಿಮಥಾವ್ಯಯಂ||

ರಾಜಚಿಹ್ನೆಗಳನ್ನು ಕಳಚಿಟ್ಟು ಅಮಾತ್ಯರು ಮತ್ತು ಪುರೋಹಿತರೊಂದಿಗೆ ಆ ನರಾಧಿಪನು ಉತ್ತಮ ಋಷಿ ತಪೋ ರಾಶಿ ಅವ್ಯಯನನ್ನು ನೋಡಲು ಹೊರಟನು.

01064030a ಬ್ರಹ್ಮಲೋಕಪ್ರತೀಕಾಶಮಾಶ್ರಮಂ ಸೋಽಭಿವೀಕ್ಷ್ಯ ಚ|

01064030c ಷಟ್ಪದೋದ್ಗೀತಸಂಘುಷ್ಟಂ ನಾನಾದ್ವಿಜ ಗಣಾಯುತಂ||

ಆ ಬ್ರಹ್ಮಲೋಕಪ್ರತೀಕಾಶ ಆಶ್ರಮವನ್ನು ನೋಡಿದನು. ಅಲ್ಲಿ ನಾನಾ ದ್ವಿಜಗಣಗಳ ಮಂತ್ರೋಚ್ಛಾರಣೆಯು ದುಂಬಿಗಳ ಝೇಂಕಾರದಂತೆ ಕೇಳಿಬರುತ್ತಿತ್ತು.

01064031a ಋಚೋ ಬಹ್ವೃಚಮುಖ್ಯೈಶ್ಚ ಪ್ರೇರ್ಯಮಾಣಾಃ ಪದಕ್ರಮೈಃ|

01064031c ಶುಶ್ರಾವ ಮನುಜವ್ಯಾಘ್ರೋ ವಿತತೇಷ್ವಿಹ ಕರ್ಮಸು||

ಆಶ್ರಮದ ಒಂದೆಡೆಯಿಂದ ಸುಸ್ವರವಾಗಿ ಕೇಳಿಬರುತ್ತಿದ್ದ ಬ್ರಾಹ್ಮಣ ಪ್ರಮುಖರ ಪದಕ್ರಮ ಪ್ರಕಾರ ಋಕ್ಕುಗಳನ್ನು ಆ ಮನುಜವ್ಯಾಘ್ರನು ಆಲಿಸಿದನು.

01064032a ಯಜ್ಞವಿದ್ಯಾಂಗವಿದ್ಭಿಶ್ಚ ಕ್ರಮದ್ಭಿಶ್ಚ ಕ್ರಮಾನಪಿ|

01064032c ಅಮಿತಾತ್ಮಭಿಃ ಸುನಿಯತೈಃ ಶುಶುಭೇ ಸ ತದಾಶ್ರಮಃ||

ಯಜ್ಞವಿಂದ್ಯಾಂಗಗಳನ್ನು ಮತ್ತು ಕ್ರಮಗಳನ್ನು ತಿಳಿದಿದ್ದ ಅಮಿತಾತ್ಮರಿಂದೊಡಗೂಡಿದ ಯಜ್ಞಮಂಟಪಗಳು ಆ ಅಶ್ರಮದಲ್ಲಿ ಶೋಭಿಸುತ್ತಿದ್ದವು. 

01064033a ಅಥರ್ವವೇದಪ್ರವರಾಃ ಪೂಗಯಾಜ್ಞಿಕ ಸಮ್ಮತಾಃ|

01064033c ಸಂಹಿತಾಮೀರಯಂತಿ ಸ್ಮ ಪದಕ್ರಮಯುತಾಂ ತು ತೇ||

ಪದಕ್ರಮಗಳನ್ನನುಸರಿಸಿ ಅಥರ್ವವೇದಪ್ರವರರು ಸಂಹಿತೆಗಳನ್ನು ಪಠಿಸುತ್ತಿದ್ದರು.

01064034a ಶಬ್ದಸಂಸ್ಕಾರಸಂಯುಕ್ತಂ ಬ್ರುವದ್ಭಿಶ್ಚಾಪರೈರ್ದ್ವಿಜೈಃ|

01064034c ನಾದಿತಃ ಸ ಬಭೌ ಶ್ರೀಮಾನ್ ಬ್ರಹ್ಮಲೋಕ ಇವಾಶ್ರಮಃ||

ಇನ್ನೊಂದೆಡೆ ದ್ವಿಜರ ಶಬ್ಧಸಂಸ್ಕಾರಗಳಿಂದೊಡಗೂಡಿದ ಮಂತ್ರನಾದವು ಕೇಳಿಬರುತ್ತಿದ್ದು ಆ ಶ್ರೀಮಂತ ಆಶ್ರಮವು ಬ್ರಹ್ಮಲೋಕದಂತೆ ತೋರಿಬರುತ್ತಿತ್ತು.

01064035a ಯಜ್ಞಸಂಸ್ಕಾರವಿದ್ಭಿಶ್ಚ ಕ್ರಮಶಿಕ್ಷಾ ವಿಶಾರದೈಃ|

01064035c ನ್ಯಾಯತತ್ತ್ವಾರ್ಥವಿಜ್ಞಾನಸಂಪನ್ನೈರ್ವೇದಪಾರಗೈಃ||

ಅಲ್ಲಿ ಯಜ್ಞಸಂಸ್ಕಾರಗಳನ್ನು ತಿಳಿದವರೂ, ಕ್ರಮಶಿಕ್ಷಾ ವಿಶಾರದರೂ, ನ್ಯಾಯ ತತ್ವಾರ್ಥ ವಿಜ್ನಾನ ಸಂಪನ್ನರೂ, ವೇದ ಪಾರಂಗತರೂ ಇದ್ದರು.

01064036a ನಾನಾವಾಕ್ಯಸಮಾಹಾರಸಮವಾಯವಿಶಾರದೈಃ|

01064036c ವಿಶೇಷಕಾರ್ಯವಿದ್ಭಿಶ್ಚ ಮೋಕ್ಷಧರ್ಮಪರಾಯಣೈಃ||

ಅಲ್ಲಿ ನಾನಾ ವಾಕ್ಯ ಸಮಾಹಾರ ಸಮವಾಯ ವಿಶಾರದರಿದ್ದರು, ವಿಶೇಷ ಕಾರ್ಯವಿದ್ವತ್ತರಿದ್ದರು, ಮತ್ತು ಮೋಕ್ಷಧರ್ಮ ಪರಾಯಣರಿದ್ದರು.

01064037a ಸ್ಥಾಪನಾಕ್ಷೇಪಸಿದ್ಧಾಂತಪರಮಾರ್ಥಜ್ಞತಾಂ ಗತೈಃ|

01064037c ಲೋಕಾಯತಿಕಮುಖ್ಯೈಶ್ಚ ಸಮನ್ತಾದನುನಾದಿತಂ||

01064038a ತತ್ರ ತತ್ರ ಚ ವಿಪ್ರೇಂದ್ರಾನ್ನಿಯತಾನ್ಸಂಶಿತವ್ರತಾನ್|

01064038c ಜಪಹೋಮಪರಾನ್ಸಿದ್ಧಾನ್ದದರ್ಶ ಪರವೀರಹಾ||

ಪರವೀರಹ ವಿಪ್ರೇಂದ್ರನು ಎಲ್ಲೆಡೆಯಲ್ಲಿಯೂ ಜಪ ಹೋಮಾದಿಗಳಲ್ಲಿ ನಿರತ ನಿಯತ ಸಂಶಿತವ್ರತ ಸಿದ್ಧರನ್ನು ನೋಡಿದನು.

01064039a ಆಸನಾನಿ ವಿಚಿತ್ರಾಣಿ ಪುಷ್ಪವಂತಿ ಮಹೀಪತಿಃ|

01064039c ಪ್ರಯತ್ನೋಪಹಿತಾನಿ ಸ್ಮ ದೃಷ್ಟ್ವಾ ವಿಸ್ಮಯಮಾಗಮತ್||

ಪುಷ್ಪಗಳಿಂದ ತುಂಬಾ ಜಾಗರೂಕತೆಯಿಂದ ರಚಿಸಿದ್ದ ವಿಚಿತ್ರ ಆಸನಗಳನ್ನು ನೋಡಿದ ಮಹೀಪತಿಯು ವಿಸ್ಮಿತನಾದನು.

01064040a ದೇವತಾಯತನಾನಾಂ ಚ ಪೂಜಾಂ ಪ್ರೇಕ್ಷ್ಯ ಕೃತಾಂ ದ್ವಿಜೈಃ|

01064040c ಬ್ರಹ್ಮಲೋಕಸ್ಥಮಾತ್ಮಾನಂ ಮೇನೇ ಸ ನೃಪಸತ್ತಮಃ||

ದ್ವಿಜರಿಂದ ನಡೆಯುತ್ತಿದ್ದ ದೇವತಾ ಪೂಜೆಗಳನ್ನು ನೋಡಿದ ಆ ನೃಪಸತ್ತಮನು ತಾನು ಬ್ರಹ್ಮಲೋಕದಲ್ಲಿದ್ದೇನೋ ಎಂದು ಭಾವಿಸಿದನು.

01064041a ಸ ಕಾಶ್ಯಪತಪೋಗುಪ್ತಮಾಶ್ರಮಪ್ರವರಂ ಶುಭಂ|

01064041c ನಾತೃಪ್ಯತ್ ಪ್ರೇಕ್ಷಮಾಣೋ ವೈ ತಪೋಧನಗಣೈರ್ಯುತಂ||

ಕಾಶ್ಯಪನ ತಪೋಬಲದಿಂದ ರಕ್ಷಿಸಲ್ಪಟ್ಟ, ತಪೋಧನ ಗಣಗಳಿಂದ ಕೂಡಿದ್ದ ಶುಭ ಆಶ್ರಮ ಸಂಕುಲವನ್ನು ಎಷ್ಟು ನೋಡಿದರು ಅವನಿಗೆ ತೃಪ್ತಿಯಾಗಲಿಲ್ಲ.

01064042a ಸ ಕಾಶ್ಯಪಸ್ಯಾಯತನಂ ಮಹಾವ್ರತೈಃ|

        ವೃತಂ ಸಮನ್ತಾದೃಷಿಭಿಸ್ತಪೋಧನೈಃ||

01064042c ವಿವೇಶ ಸಾಮಾತ್ಯಪುರೋಹಿತೋಽರಿಹಾ|

        ವಿವಿಕ್ತಂ ಅತ್ಯರ್ಥಮನೋಹರಂ ಶಿವಂ||

ಆ ಅರಿಮರ್ದನನು ತನ್ನ ಅಮಾತ್ಯ ಮತ್ತು ಪುರೋಹಿತನ ಸಹಿತ ಮನೋಹರ, ಮಂಗಳಕರ, ತಪೋಧನ ಋಷಿ ಮಹಾವ್ರತರಿಂದ ಕೂಡಿದ್ದ ಕಾಶ್ಯಪನ ಆ ತಪೋ ಆಶ್ರಮವನ್ನು ಪ್ರವೇಶಿಸಿದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಸಂಭವಪರ್ವಣಿ ಶಕುಂತಲೋಪಾಖ್ಯಾನೇ ಚತುಷಷ್ಟಿತಮೋಽಧ್ಯಾಯ:||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಸಂಭವ ಪರ್ವದಲ್ಲಿ ಶಕುಂತಲೋಪಾಖ್ಯಾನದಲ್ಲಿ ಅರವತ್ನಾಲ್ಕನೆಯ ಅಧ್ಯಾಯವು.

Comments are closed.