Ashvamedhika Parva: Chapter 31

ಅಶ್ವಮೇಧಿಕ ಪರ್ವ

೩೧

ಕೃಷ್ಣನು ಅರ್ಜುನನಿಗೆ ಬ್ರಾಹ್ಮಣ ದಂಪತಿಗಳ ಸಂವಾದವನ್ನು ಮುಂದುವರೆಸಿ ಹೇಳಿದುದು (೧-೧೩).

14031001 ಬ್ರಾಹ್ಮಣ ಉವಾಚ

14031001a ತ್ರಯೋ ವೈ ರಿಪವೋ ಲೋಕೇ ನವ ವೈ ಗುಣತಃ ಸ್ಮೃತಾಃ|

[1]14031001c ಹರ್ಷಃ ಸ್ತಂಭೋಽಭಿಮಾನಶ್ಚ ತ್ರಯಸ್ತೇ ಸಾತ್ತ್ವಿಕಾ ಗುಣಾಃ||

14031002a ಶೋಕಃ ಕ್ರೋಧೋಽತಿಸಂರಂಭೋ ರಾಜಸಾಸ್ತೇ ಗುಣಾಃ ಸ್ಮೃತಾಃ|

14031002c ಸ್ವಪ್ನಸ್ತಂದ್ರೀ ಚ ಮೋಹಶ್ಚ ತ್ರಯಸ್ತೇ ತಾಮಸಾ ಗುಣಾಃ||

ಬ್ರಾಹ್ಮಣನು ಹೇಳಿದನು: “ಲೋಕದಲ್ಲಿ ಮೂರು ಗುಣಗಳಿಂದ ಉಂಟಾದ ಒಂಭತ್ತು ಶತ್ರುಗಳಿದ್ದಾರೆ: ಹರ್ಷ, ಪ್ರೀತಿ ಮತ್ತು ಅಭಿಮಾನ ಈ ಮೂರು ಸತ್ತ್ವಗುಣದಿಂದ ಹುಟ್ಟಿದವು. ಶೋಕ, ಕ್ರೋಧ ಮತ್ತು ದ್ವೇಷ ಈ ಮೂರು ರಾಜಸ ಗುಣದಿಂದ ಹುಟ್ಟಿದವು. ಸ್ವಪ್ನ, ಆಲಸ್ಯ ಮತ್ತು ಮೋಹ ಇವು ಮೂರು ತಾಮಸ ಗುಣದಿಂದ ಹುಟ್ಟಿದವು.

14031003a ಏತಾನ್ನಿಕೃತ್ಯ ಧೃತಿಮಾನ್ಬಾಣಸಂಘೈರತಂದ್ರಿತಃ|

14031003c ಜೇತುಂ ಪರಾನುತ್ಸಹತೇ ಪ್ರಶಾಂತಾತ್ಮಾ ಜಿತೇಂದ್ರಿಯಃ||

ಪ್ರಶಾಂತಾತ್ಮನೂ ಜಿತೇಂದ್ರಿಯನೂ ಆಲಸ್ಯರಹಿತನೂ ಮತ್ತು ಧೈರ್ಯವಂತನೂ ಆದವನು ಬಾಣಸಂಘಗಳಿಂದ ಇವುಗಳನ್ನು ಕತ್ತರಿಸಿದರೆ ಇತರ ಶತ್ರುಗಳನ್ನು ಗೆಲ್ಲಬಲ್ಲನು.

14031004a ಅತ್ರ ಗಾಥಾಃ ಕೀರ್ತಯಂತಿ ಪುರಾಕಲ್ಪವಿದೋ ಜನಾಃ|

14031004c ಅಂಬರೀಷೇಣ ಯಾ ಗೀತಾ ರಾಜ್ಞಾ ರಾಜ್ಯಂ ಪ್ರಶಾಸತಾ||

ಈ ವಿಷಯದಲ್ಲಿ ಹಿಂದಿನ ಕಲ್ಪವನ್ನು ತಿಳಿದ ಜನರು ರಾಜ್ಯವನ್ನು ಆಳಿದ ರಾಜಾ ಅಂಬರೀಷನ ಈ ಗೀತೆಯನ್ನು ಹಾಡುತ್ತಾರೆ.

14031005a ಸಮುದೀರ್ಣೇಷು ದೋಷೇಷು ವಧ್ಯಮಾನೇಷು ಸಾಧುಷು|

14031005c ಜಗ್ರಾಹ ತರಸಾ ರಾಜ್ಯಮಂಬರೀಷ ಇತಿ ಶ್ರುತಿಃ||

ದೋಷಗಳು ಹೆಚ್ಚುತ್ತಿರಲು ಮತ್ತು ಸಾಧುಪುರುಷರ ವಧೆಗಳಾಗುತ್ತಿರಲು ಅಂಬರೀಷನು ಬೇಗನೇ ರಾಜ್ಯವನ್ನು ತೆಗೆದುಕೊಂಡನೆಂದು ಕೇಳಿದ್ದೇವೆ.

14031006a ಸ ನಿಗೃಹ್ಯ ಮಹಾದೋಷಾನ್ಸಾಧೂನ್ಸಮಭಿಪೂಜ್ಯ ಚ|

14031006c ಜಗಾಮ ಮಹತೀಂ ಸಿದ್ಧಿಂ ಗಾಥಾಂ ಚೇಮಾಂ ಜಗಾದ ಹ||

ಅವನು ಮಹಾದೋಷಗಳನ್ನು ಹೋಗಲಾಡಿಸಿ, ಸಾಧುಜನರನ್ನು ಗೌರವಿಸಿ ಮಹಾ ಸಿದ್ಧಿಯನ್ನು ಪಡೆದುಕೊಂಡನು. ಆಗ ಅವನು ಈ ಗೀತೆಯನ್ನು ಹಾಡಿದನು:

14031007a ಭೂಯಿಷ್ಠಂ ಮೇ ಜಿತಾ ದೋಷಾ ನಿಹತಾಃ ಸರ್ವಶತ್ರವಃ|

14031007c ಏಕೋ ದೋಷೋಽವಶಿಷ್ಟಸ್ತು ವಧ್ಯಃ ಸ ನ ಹತೋ ಮಯಾ||

“ನಾನು ಅನೇಕ ದೋಷಗಳನ್ನು ಜಯಿಸಿದ್ದೇನೆ. ಸರ್ವಶತ್ರುಗಳನ್ನೂ ಸಂಹರಿಸಿದ್ದೇನೆ. ಆದರೆ ಒಂದೇ ಒಂದು ವಧ್ಯವಾದ ದೋಷವು ಉಳಿದುಕೊಂಡುಬಿಟ್ಟಿದೆ. ಅದನ್ನು ನಾನು ಸಂಹರಿಸಲಾಗಲಿಲ್ಲ!

14031008a ಯೇನ ಯುಕ್ತೋ ಜಂತುರಯಂ ವೈತೃಷ್ಣ್ಯಂ ನಾಧಿಗಚ್ಚತಿ|

14031008c ತೃಷ್ಣಾರ್ತ ಇವ ನಿಮ್ನಾನಿ ಧಾವಮಾನೋ ನ ಬುಧ್ಯತೇ||

ಈ ದೋಷದಿಂದಾಗಿಯೇ ಜಂತುಗಳು ತೃಪ್ತಿಯನ್ನು ಹೊಂದುವುದಿಲ್ಲ. ತೃಷ್ಣಾರ್ತನಾಗಿ ನೀಚ ಕರ್ಮಗಳನ್ನು ಮಾಡುತ್ತಿರುವುದನ್ನೂ ತಿಳಿಯುವುದಿಲ್ಲ.

14031009a ಅಕಾರ್ಯಮಪಿ ಯೇನೇಹ ಪ್ರಯುಕ್ತಃ ಸೇವತೇ ನರಃ|

14031009c ತಂ ಲೋಭಮಸಿಭಿಸ್ತೀಕ್ಷ್ಣೈರ್ನಿಕೃಂತಂತಂ ನಿಕೃಂತತ||

ಇದರಿಂದಾಗಿ ಮಾಡಬಾರದ ಕಾರ್ಯಗಳನ್ನೂ ನರನು ಮಾಡುತ್ತಾನೆ. ಈ ಲೋಭವನ್ನು ತೀಕ್ಷ್ಣ ಖಡ್ಗದಿಂದ ಕತ್ತರಿಸುವವನು ಬಿಡುಗಡೆಯಾಗುತ್ತಾನೆ.

14031010a ಲೋಭಾದ್ಧಿ ಜಾಯತೇ ತೃಷ್ಣಾ ತತಶ್ಚಿಂತಾ ಪ್ರಸಜ್ಯತೇ|

14031010c ಸ ಲಿಪ್ಸಮಾನೋ ಲಭತೇ ಭೂಯಿಷ್ಠಂ ರಾಜಸಾನ್ಗುಣಾನ್||

ಲೋಭದಿಂದ ತೃಷ್ಣೆಯು ಹುಟ್ಟುತ್ತದೆ. ತೃಷ್ಣೆಯಿಂದ ಚಿಂತೆಯು ಹುಟ್ಟುತ್ತದೆ. ಅವುಗಳು ತಗಲಿಕೊಂಡವನಲ್ಲಿ ರಾಜಸ ಗುಣಗಳು ಹೆಚ್ಚಾಗುತ್ತವೆ.

14031011a ಸ ತೈರ್ಗುಣೈಃ ಸಂಹತದೇಹಬಂಧನಃ

ಪುನಃ ಪುನರ್ಜಾಯತಿ ಕರ್ಮ ಚೇಹತೇ|

14031011c ಜನ್ಮಕ್ಷಯೇ ಭಿನ್ನವಿಕೀರ್ಣದೇಹಃ

ಪುನರ್ಮೃತ್ಯುಂ ಗಚ್ಚತಿ ಜನ್ಮನಿ ಸ್ವೇ||

ಆ ಗುಣಗಳಿಂದಾಗಿಯೇ ಅವನು ದೇಹಬಂಧನಕ್ಕೊಳಗಾಗಿ ಪುನಃ ಪುನಃ ಹುಟ್ಟುತ್ತಾನೆ, ಕರ್ಮಗಳನ್ನು ಮಾಡುತ್ತಾನೆ ಮತ್ತು ಹತನಾಗುತ್ತಾನೆ. ಜನ್ಮವು ಕ್ಷಯವಾಗಲು ದೇಹವು ಭಿನ್ನವಾಗಿ ಹರಡಿಹೋದರೂ ಪುನಃ ಅವನು ಜನ್ಮವನ್ನು ತಾಳುತ್ತಾನೆ ಮತ್ತು ಮೃತ್ಯುವನ್ನು ಹೊಂದುತ್ತಾನೆ.

14031012a ತಸ್ಮಾದೇನಂ ಸಮ್ಯಗವೇಕ್ಷ್ಯ ಲೋಭಂ

ನಿಗೃಹ್ಯ ಧೃತ್ಯಾತ್ಮನಿ ರಾಜ್ಯಮಿಚ್ಚೇತ್|

14031012c ಏತದ್ರಾಜ್ಯಂ ನಾನ್ಯದಸ್ತೀತಿ ವಿದ್ಯಾದ್

ಯಸ್ತ್ವತ್ರ ರಾಜಾ ವಿಜಿತೋ ಮಮೈಕಃ||

ಆದುದರಿಂದ ಈ ಲೋಭವನ್ನು ಚೆನ್ನಾಗಿ ಅವಲೋಕಿಸಿ ಧೃತಿಯಿಂದ ಅದನ್ನು ನಿಗ್ರಹಿಸಿ ಆತ್ಮನ ರಾಜ್ಯವನ್ನು ಬಯಸಬೇಕು. ಇದೇ ರಾಜ್ಯವು. ಬೇರೆ ಯಾವುದೂ ಇಲ್ಲ. ಏಕೆಂದರೆ ಇಲ್ಲಿ ರಾಜನು ನನ್ನದು ಎನ್ನುವ ಒಂದನ್ನೇ ಗೆದ್ದಿರುತ್ತಾನೆ.”

14031013a ಇತಿ ರಾಜ್ಞಾಂಬರೀಷೇಣ ಗಾಥಾ ಗೀತಾ ಯಶಸ್ವಿನಾ|

14031013c ಆಧಿರಾಜ್ಯಂ ಪುರಸ್ಕೃತ್ಯ ಲೋಭಮೇಕಂ ನಿಕೃಂತತಾ||

ಇದೇ ಯಶಸ್ವಿ ರಾಜಾ ಅಂಬರೀಷನು ಲೋಭವೊಂದನ್ನೇ ಕಡಿದು ಆತ್ಮವೆನ್ನುವ ರಾಜ್ಯವನ್ನು ಗೌರವಿಸಿ ಹಾಡಿದ ಗೀತೆಯು.”

ಇತಿ ಶ್ರೀಮಹಾಭಾರತೇ ಅಶ್ವಮೇಧಿಕಪರ್ವಣಿ ಅನುಗೀತಾಯಾಂ ಬ್ರಾಹ್ಮಣಗೀತಾಸು ಏಕತ್ರಿಂಶೋಽಧ್ಯಾಯಃ||

ಇದು ಶ್ರೀಮಹಾಭಾರತದಲ್ಲಿ ಅಶ್ವಮೇಧಿಕಪರ್ವದಲ್ಲಿ ಅನುಗೀತಾಯಾಂ ಬ್ರಾಹ್ಮಣಗೀತಾ ಎನ್ನುವ ಮೂವತ್ತೊಂದನೇ ಅಧ್ಯಾಯವು.

[1] ಪ್ರಹರ್ಷಃ ಪ್ರೀತಿರಾನಂದಸ್ತ್ರಯಸ್ತೇ ಸಾತ್ವಿಕಾ ಗುಣಾಃ| ತುಷ್ಣಾ ಕ್ರೋಧೋಽಭಿಸಂರಬ್ಧೋ ರಾಜಸಾಸ್ತೇ ಗುಣಾಃ ಸ್ಮೃತಾಃ| ಶ್ರಮಸಂದ್ರಾ ಚ ಮೋಹಶ್ಚ ತ್ರಯಸ್ತೇ ತಾಮಸಾ ಗುಣಾಃ|| ಎಂಬ ಪಾಠಾಂತರವಿದೆ. ಅರ್ಥಾತ್ ಪ್ರಹರ್ಷ, ಪ್ರೀತಿ, ಆನಂದ ಈ ಮೂರು ಸತ್ತ್ವಗುಣದ ಪ್ರಭೇದಗಳು. ತೃಷ್ಣೆ, ಕ್ರೋಧ ಮತ್ತು ದ್ವೇಷಭಾವ ಈ ಮೂರು ರಾಜಸಗುಣದ ಪ್ರಭೇದಗಳು. ಶ್ರಮ, ಆಲಸ್ಯ ಮತ್ತು ಮೋಹ ಈ ಮೂರು ತಾಮಸಗುಣದ ಪ್ರಭೇದಗಳು (ಭರತದರ್ಶನ, ಸಂಪುಟ ೩೦).

Comments are closed.