ಶಲ್ಯಪರ್ವ: ಸಾರಸ್ವತಪರ್ವ
೫೨
ಕುರುಕ್ಷೇತ್ರ ಮಹಾತ್ಮೆ (೧-೨೧).
09052001 ಋಷಯ ಊಚುಃ
09052001a ಪ್ರಜಾಪತೇರುತ್ತರವೇದಿರುಚ್ಯತೇ
ಸನಾತನಾ ರಾಮ ಸಮಂತಪಂಚಕಂ|
09052001c ಸಮೀಜಿರೇ ಯತ್ರ ಪುರಾ ದಿವೌಕಸೋ
ವರೇಣ ಸತ್ರೇಣ ಮಹಾವರಪ್ರದಾಃ||
ಋಷಿಗಳು ಹೇಳಿದರು: “ರಾಮ! ಸನಾತನ ಸಮಂತಪಂಚಕವನ್ನು ಪ್ರಜಾಪತಿಯ ಉತ್ತರವೇದಿಯೆಂದು ಕರೆಯುತ್ತಾರೆ. ಮಹಾವರಪ್ರದ ದಿವೌಕಸರೇ ಹಿಂದೆ ಇಲ್ಲಿ ಶ್ರೇಷ್ಠ ಸತ್ರಗಳನ್ನು ಯಾಜಿಸಿದ್ದರು.
09052002a ಪುರಾ ಚ ರಾಜರ್ಷಿವರೇಣ ಧೀಮತಾ
ಬಹೂನಿ ವರ್ಷಾಣ್ಯಮಿತೇನ ತೇಜಸಾ|
09052002c ಪ್ರಕೃಷ್ಟಮೇತತ್ಕುರುಣಾ ಮಹಾತ್ಮನಾ
ತತಃ ಕುರುಕ್ಷೇತ್ರಮಿತೀಹ ಪಪ್ರಥೇ||
ಹಿಂದೆ ರಾಜರ್ಷಿಶ್ರೇಷ್ಠ ಧೀಮತ ಅಮಿತ ತೇಜಸ್ವಿ ಮಹಾತ್ಮ ಕುರುವು ಅನೇಕ ವರ್ಷಗಳು ಹೂಳುತ್ತಿದ್ದುದರಿಂದ ಈ ಪ್ರದೇಶವು ಕುರುಕ್ಷೇತ್ರವೆಂದು ಪ್ರಸಿದ್ಧವಾಯಿತು.”
09052003 ರಾಮ ಉವಾಚ
09052003a ಕಿಮರ್ಥಂ ಕುರುಣಾ ಕೃಷ್ಟಂ ಕ್ಷೇತ್ರಮೇತನ್ಮಹಾತ್ಮನಾ|
09052003c ಏತದಿಚ್ಚಾಮ್ಯಹಂ ಶ್ರೋತುಂ ಕಥ್ಯಮಾನಂ ತಪೋಧನಾಃ||
ರಾಮನು ಹೇಳಿದನು: “ಮಹಾತ್ಮ ಕುರುವು ಈ ಪ್ರದೇಶವನ್ನು ಏಕೆ ಹೂಳಿದನು? ಇದನ್ನು ಕೇಳಲು ಬಯಸುತ್ತೇನೆ. ತಪೋಧನರು ಹೇಳಬೇಕು!”
09052004 ಋಷಯ ಊಚುಃ
09052004a ಪುರಾ ಕಿಲ ಕುರುಂ ರಾಮ ಕೃಷಂತಂ ಸತತೋತ್ಥಿತಂ|
09052004c ಅಭ್ಯೇತ್ಯ ಶಕ್ರಸ್ತ್ರಿದಿವಾತ್ಪರ್ಯಪೃಚ್ಚತ ಕಾರಣಂ||
ಋಷಿಗಳು ಹೇಳಿದರು: “ರಾಮ! ಹಿಂದೆ ಸತತವೂ ನಿಂತು ಉಳುತ್ತಿದ್ದ ಕುರುವನ್ನು ಶಕ್ರನು ತ್ರಿದಿವದಿಂದ ಬಂದು ಭೇಟಿಮಾಡಿ ಇದರ ಕಾರಣವನ್ನು ಕೇಳಿದ್ದನು:
09052005a ಕಿಮಿದಂ ವರ್ತತೇ ರಾಜನ್ಪ್ರಯತ್ನೇನ ಪರೇಣ ಚ|
09052005c ರಾಜರ್ಷೇ ಕಿಮಭಿಪ್ರೇತಂ ಯೇನೇಯಂ ಕೃಷ್ಯತೇ ಕ್ಷಿತಿಃ||
“ರಾಜನ್! ಯಾವ ಕಾರಣದಿಂದ ಈ ಮಹಾಪ್ರಯತ್ನವನ್ನು ಮಾಡುತ್ತಿದ್ದೀಯೆ? ರಾಜರ್ಷೇ! ಈ ಭೂಮಿಯನ್ನು ಸತತವಾಗಿ ಉಳುತ್ತಿರುವ ಉದ್ದೇಶವಾದರೂ ಏನು?”
09052006 ಕುರುರುವಾಚ
09052006a ಇಹ ಯೇ ಪುರುಷಾಃ ಕ್ಷೇತ್ರೇ ಮರಿಷ್ಯಂತಿ ಶತಕ್ರತೋ|
09052006c ತೇ ಗಮಿಷ್ಯಂತಿ ಸುಕೃತಾಽಲ್ಲೋಕಾನ್ಪಾಪವಿವರ್ಜಿತಾನ್||
ಕುರುವು ಹೇಳಿದನು: “ಶತಕ್ರತೋ! ಈ ಕ್ಷೇತ್ರದಲ್ಲಿ ಯಾರು ಮರಣಹೊಂದುತ್ತಾರೋ ಅವರು ಪಾಪಗಳನ್ನು ಕಳೆದುಕೊಂಡು ಸುಕೃತ ಲೋಕಗಳಿಗೆ ಹೋಗುತ್ತಾರೆ.”
09052007a ಅವಹಸ್ಯ ತತಃ ಶಕ್ರೋ ಜಗಾಮ ತ್ರಿದಿವಂ ಪ್ರಭುಃ|
09052007c ರಾಜರ್ಷಿರಪ್ಯನಿರ್ವಿಣ್ಣಃ ಕರ್ಷತ್ಯೇವ ವಸುಂಧರಾಂ||
ಆಗ ಪ್ರಭು ಶಕ್ರನು ಅಪಹಾಸ್ಯಮಾಡಿ ತ್ರಿದಿವಕ್ಕೆ ತೆರಳಿದನು. ರಾಜರ್ಷಿಯಾದರೋ ಸ್ವಲ್ಪವೂ ನಿರ್ವಿಣ್ಣನಾಗದೇ ಭೂಮಿಯನ್ನು ಉಳುತ್ತಲೇ ಇದ್ದನು.
09052008a ಆಗಮ್ಯಾಗಮ್ಯ ಚೈವೈನಂ ಭೂಯೋ ಭೂಯೋಽವಹಸ್ಯ ಚ|
09052008c ಶತಕ್ರತುರನಿರ್ವಿಣ್ಣಂ ಪೃಷ್ಟ್ವಾ ಪೃಷ್ಟ್ವಾ ಜಗಾಮ ಹ||
ಶತಕ್ರತುವು ಪುನಃ ಪುನಃ ಬಂದು ಅವನನ್ನು ಅಪಹಾಸ್ಯಮಾಡಿ ಕೇಳುತ್ತಿದ್ದನು. ಅವನು ನಿರ್ವಿಣ್ಣನಾಗದೇ ಮತ್ತೆ ಮತ್ತೆ ಅದೇ ಉತ್ತರವನ್ನು ನೀಡುತ್ತಿದ್ದನು.
09052009a ಯದಾ ತು ತಪಸೋಗ್ರೇಣ ಚಕರ್ಷ ವಸುಧಾಂ ನೃಪಃ|
09052009c ತತಃ ಶಕ್ರೋಽಬ್ರವೀದ್ದೇವಾನ್ರಾಜರ್ಷೇರ್ಯಚ್ಚಿಕೀರ್ಷಿತಂ||
ನೃಪನಾದರೋ ಉಗ್ರ ತಪಸ್ಸಿನಂತೆ ಭೂಮಿಯನ್ನು ಉಳುತ್ತಿದ್ದನು. ಆಗ ಶಕ್ರನು ರಾಜರ್ಷಿಯ ಉದ್ದೇಶವನ್ನು ದೇವತೆಗಳಿಗೆ ತಿಳಿಸಿದನು.
09052010a ತಚ್ಚ್ರುತ್ವಾ ಚಾಬ್ರುವನ್ದೇವಾಃ ಸಹಸ್ರಾಕ್ಷಮಿದಂ ವಚಃ|
09052010c ವರೇಣ ಚ್ಚಂದ್ಯತಾಂ ಶಕ್ರ ರಾಜರ್ಷಿರ್ಯದಿ ಶಕ್ಯತೇ||
ಅದನ್ನು ಕೇಳಿ ದೇವತೆಗಳು ಸಹಸ್ರಾಕ್ಷನಿಗೆ ಈ ಮಾತನ್ನಾಡಿದರು: “ಶಕ್ರ! ಸಾಧ್ಯವಾದರೆ ರಾಜರ್ಷಿಗೆ ವರದಾನವನ್ನಿತ್ತು ಅವನನ್ನು ಒಲಿಸಿಕೋ!
09052011a ಯದಿ ಹ್ಯತ್ರ ಪ್ರಮೀತಾ ವೈ ಸ್ವರ್ಗಂ ಗಚ್ಚಂತಿ ಮಾನವಾಃ|
09052011c ಅಸ್ಮಾನನಿಷ್ಟ್ವಾ ಕ್ರತುಭಿರ್ಭಾಗೋ ನೋ ನ ಭವಿಷ್ಯತಿ||
ಒಂದುವೇಳೆ ಮಾನವರು ಇಲ್ಲಿ ಮರಣಹೊಂದಿ ಸ್ವರ್ಗಕ್ಕೆ ಹೋಗುತ್ತಾರೆಂದಾದರೆ ನಮಗೆ ಕ್ರತುಗಳಲ್ಲಿ ಭಾಗವು ದೊರೆಯದಂತಾಗುತ್ತದೆ.”
09052012a ಆಗಮ್ಯ ಚ ತತಃ ಶಕ್ರಸ್ತದಾ ರಾಜರ್ಷಿಮಬ್ರವೀತ್|
09052012c ಅಲಂ ಖೇದೇನ ಭವತಃ ಕ್ರಿಯತಾಂ ವಚನಂ ಮಮ||
ಆಗ ಶಕ್ರನು ರಾಜರ್ಷಿಯಲ್ಲಿಗೆ ಬಂದು ಹೇಳಿದನು: “ಇನ್ನು ನೀನು ಕಷ್ಟಪಡಬೇಡ! ನನ್ನ ಮಾತಿನಂತೆ ಮಾಡು!
09052013a ಮಾನವಾ ಯೇ ನಿರಾಹಾರಾ ದೇಹಂ ತ್ಯಕ್ಷ್ಯಂತ್ಯತಂದ್ರಿತಾಃ|
09052013c ಯುಧಿ ವಾ ನಿಹತಾಃ ಸಮ್ಯಗಪಿ ತಿರ್ಯಗ್ಗತಾ ನೃಪ||
ನೃಪ! ಇಲ್ಲಿ ಯಾವ ಮಾನವರು ನಿರಾಹಾರರಾಗಿ ಅತಂದ್ರಿತರಾಗಿ ದೇಹತ್ಯಾಗಮಾಡುತ್ತಾರೋ ಅಥವಾ ಯುದ್ಧದಲ್ಲಿ ಹತರಾಗುತ್ತಾರೋ ಅವರೆಲ್ಲರೂ ಸ್ವರ್ಗಕ್ಕೆ ಹೋಗುತ್ತಾರೆ.
09052014a ತೇ ಸ್ವರ್ಗಭಾಜೋ ರಾಜೇಂದ್ರ ಭವಂತ್ವಿತಿ ಮಹಾಮತೇ|
09052014c ತಥಾಸ್ತ್ವಿತಿ ತತೋ ರಾಜಾ ಕುರುಃ ಶಕ್ರಮುವಾಚ ಹ||
ರಾಜೇಂದ್ರ! ಮಹಾಮತೇ! ಅವರೆಲ್ಲರೂ ಸ್ವರ್ಗಕ್ಕೆ ಭಾಗಿಗಳಾಗುತ್ತಾರೆ.” ಅನಂತರ ಹಾಗೆಯೇ ಆಗಲೆಂದು ರಾಜ ಕುರುವು ಶಕ್ರನಿಗೆ ಹೇಳಿದನು.
09052015a ತತಸ್ತಮಭ್ಯನುಜ್ಞಾಪ್ಯ ಪ್ರಹೃಷ್ಟೇನಾಂತರಾತ್ಮನಾ|
09052015c ಜಗಾಮ ತ್ರಿದಿವಂ ಭೂಯಃ ಕ್ಷಿಪ್ರಂ ಬಲನಿಷೂದನಃ||
ಆಗ ಅವನಿಂದ ಅನುಮತಿಯನ್ನು ಪಡೆದು ಒಳಗಿಂದೊಳಗೇ ಪ್ರಹೃಷ್ಟನಾಗಿ ಬಲನಿಷೂದನನು ಬೇಗನೆ ತ್ರಿದಿವಕ್ಕೆ ತೆರಳಿದನು.
09052016a ಏವಮೇತದ್ಯದುಶ್ರೇಷ್ಠ ಕೃಷ್ಟಂ ರಾಜರ್ಷಿಣಾ ಪುರಾ|
09052016c ಶಕ್ರೇಣ ಚಾಪ್ಯನುಜ್ಞಾತಂ ಪುಣ್ಯಂ ಪ್ರಾಣಾನ್ವಿಮುಂಚತಾಂ||
ಯದುಶ್ರೇಷ್ಠ! ಹೀಗೆ ಹಿಂದೆ ಉಳುತ್ತಿದ್ದ ರಾಜರ್ಷಿಯು ಶಕ್ರನಿಂದ ಅನುಜ್ಞಾತನಾಗಿ ಪುಣ್ಯ ಪ್ರಾಣಗಳನ್ನು ತೊರೆದನು.
09052017a ಅಪಿ ಚಾತ್ರ ಸ್ವಯಂ ಶಕ್ರೋ ಜಗೌ ಗಾಥಾಂ ಸುರಾಧಿಪಃ|
09052017c ಕುರುಕ್ಷೇತ್ರೇ ನಿಬದ್ಧಾಂ ವೈ ತಾಂ ಶೃಣುಷ್ವ ಹಲಾಯುಧ||
ಹಲಾಯುಧ! ಕುರುಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ್ವಯಂ ಸುರಾಧಿಪನೇ ಹಾಡಿದ ಈ ಶ್ಲೋಕಗಳನ್ನು ಕೇಳು!
09052018a ಪಾಂಸವೋಽಪಿ ಕುರುಕ್ಷೇತ್ರಾದ್ವಾಯುನಾ ಸಮುದೀರಿತಾಃ|
09052018c ಅಪಿ ದುಷ್ಕೃತಕರ್ಮಾಣಂ ನಯಂತಿ ಪರಮಾಂ ಗತಿಂ||
“ಗಾಳಿಯಿಂದ ತೂರಿಕೊಂಡೊಯ್ಯಲ್ಪಟ್ಟ ಕುರುಕ್ಷೇತ್ರದ ಧೂಳು ಕೂಡ ದುಷ್ಕರ್ಮಿಗಳಾಗಿದ್ದವರನ್ನು ಪರಮ ಗತಿಗೆ ಕೊಂಡೊಯ್ಯುತ್ತದೆ.
09052019a ಸುರರ್ಷಭಾ ಬ್ರಾಹ್ಮಣಸತ್ತಮಾಶ್ಚ
ತಥಾ ನೃಗಾದ್ಯಾ ನರದೇವಮುಖ್ಯಾಃ|
09052019c ಇಷ್ಟ್ವಾ ಮಹಾರ್ಹೈಃ ಕ್ರತುಭಿರ್ನೃಸಿಂಹ
ಸಂನ್ಯಸ್ಯ ದೇಹಾನ್ಸುಗತಿಂ ಪ್ರಪನ್ನಾಃ||
ಸುರರ್ಷಭರೇ! ನರಸಿಂಹರಾದ ಬ್ರಾಹ್ಮಣಸತ್ತಮರೂ ಮತ್ತು ನೃಗಾದಿ ನರದೇವಮುಖ್ಯರೂ ಮಹಾವೆಚ್ಚದ ಇಷ್ಟಿ-ಕ್ರತುಗಳನ್ನು ಮಾಡಿ ದೇಹಗಳನ್ನು ತೊರೆದು ಸರ್ಗವನ್ನು ಪಡೆದರು.
09052020a ತರಂತುಕಾರಂತುಕಯೋರ್ಯದಂತರಂ
ರಾಮಹ್ರದಾನಾಂ ಚ ಮಚಕ್ರುಕಸ್ಯ|
09052020c ಏತತ್ಕುರುಕ್ಷೇತ್ರಸಮಂತಪಂಚಕಂ
ಪ್ರಜಾಪತೇರುತ್ತರವೇದಿರುಚ್ಯತೇ||
ತರಂತುಕ, ಕಾರಂತುಕ, ರಾಮಹ್ರದ ಮತ್ತು ಮಚಕ್ರುಕಗಳ ಮಧ್ಯದಲ್ಲಿರುವ ಇದೇ ಕುರುಕ್ಷೇತ್ರ ಸಮಂತಪಂಚಕವನ್ನು ಪ್ರಜಾಪತಿಯ ಉತ್ತರವೇದಿ ಎಂದು ಕರೆಯಲ್ಪಡುತ್ತದೆ.
09052021a ಶಿವಂ ಮಹತ್ಪುಣ್ಯಮಿದಂ ದಿವೌಕಸಾಂ
ಸುಸಮ್ಮತಂ ಸ್ವರ್ಗಗುಣೈಃ ಸಮನ್ವಿತಂ|
09052021c ಅತಶ್ಚ ಸರ್ವೇಽಪಿ ವಸುಂಧರಾಧಿಪಾ
ಹತಾ ಗಮಿಷ್ಯಂತಿ ಮಹಾತ್ಮನಾಂ ಗತಿಂ||
ಮಹಾಪುಣ್ಯವೂ ಮಂಗಳಕರವೂ ಆಗಿರುವ ಇದು ಸ್ವರ್ಗದ ಗುಣಗಳನ್ನು ಹೊಂದಿದ್ದು ದಿವೌಕಸರಿಗೆ ಸುಸಮ್ಮತವಾಗಿದೆ. ಆದುದರಿಂದ ಅಲ್ಲಿ ಹತರಾದ ಸರ್ವ ರಾಜರೂ ಮಹಾತ್ಮರ ಗತಿಯನ್ನು ಹೊಂದುತ್ತಾರೆ.””
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತೀರ್ಥಯಾತ್ರಾಯಾಂ ಕುರುಕ್ಷೇತ್ರಕಥನೇ ದ್ವಿಪಂಚಾಶತ್ತಮೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರಾಯಾಂ ಕುರುಕ್ಷೇತ್ರಕಥನ ಎನ್ನುವ ಐವತ್ತೆರಡನೇ ಅಧ್ಯಾಯವು.
ಸಾರಸ್ವತ ಪರ್ವದ ಇತರ ಅಧ್ಯಾಯಗಳು:
- ಪಾಂಡವಾನಾಂ ಸರೋವರಾಗಮನ
- ಸುಯೋಧನಯುಧಿಷ್ಠಿರಸಂವಾದ
- ಸುಯೋಧನಯುಧಿಷ್ಠಿರಸಂವಾದ
- ಭೀಮಸೇನದುರ್ಯೋಧನಸಂವಾದ
- ಬಲದೇವಾಗಮನ
- ಬಲದೇವತೀರ್ಥಯಾತ್ರಾಯಾಂ ಪ್ರಭಾಸೋತ್ಪತ್ತಿಕಥನ
- ಬಲದೇವತೀರ್ಥಯಾತ್ರಾಯಾಂ ತ್ರಿತಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಕುಮಾರಾಭಿಷೇಕಕ್ರಮ
- ಬಲದೇವತೀರ್ಥಯಾತ್ರಾಯಾಂ ಸ್ಕಂದಾಭಿಷೇಕ
- ಬಲದೇವತೀರ್ಥಯಾತ್ರಾಯಾಂ ತಾರಕವಧ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾಯಾಂ ಬದರಪಾಚನತೀರ್ಥಕಥನ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾಯಾಂ ಕುರುಕ್ಷೇತ್ರಕಥನ
- ಬಲದೇವತೀರ್ಥಯಾತ್ರಾ