ಶಲ್ಯಪರ್ವ: ಸಾರಸ್ವತಪರ್ವ
೪೬
ವರುಣನ ಅಭಿಷೇಕ (೧-೧೧). ಅಗ್ನಿತೀರ್ಥದ ಚರಿತ್ರೆ (೧೨-೨೦). ಕುಬೇರ ತೀರ್ಥದ ವರ್ಣನೆ (೨೧-೨೯).
09046001 ಜನಮೇಜಯ ಉವಾಚ
09046001a ಅತ್ಯದ್ಭುತಮಿದಂ ಬ್ರಹ್ಮನ್ ಶ್ರುತವಾನಸ್ಮಿ ತತ್ತ್ವತಃ|
09046001c ಅಭಿಷೇಕಂ ಕುಮಾರಸ್ಯ ವಿಸ್ತರೇಣ ಯಥಾವಿಧಿ||
ಜನಮೇಜಯನು ಹೇಳಿದನು: “ಬ್ರಹ್ಮನ್! ನಿಜವಾಗಿಯೂ ನಾನು ವಿಸ್ತಾರವಾಗಿ ಯಥಾವಿಧಿಯಾಗಿ ಮಾಡಿದ ಕುಮಾರನ ಅಭಿಷೇಕದ ಕುರಿತು ಕೇಳಿದುದು ಅತಿ ಅದ್ಭುತವಾಗಿದೆ.
09046002a ಯಚ್ಚ್ರುತ್ವಾ ಪೂತಮಾತ್ಮಾನಂ ವಿಜಾನಾಮಿ ತಪೋಧನ|
09046002c ಪ್ರಹೃಷ್ಟಾನಿ ಚ ರೋಮಾಣಿ ಪ್ರಸನ್ನಂ ಚ ಮನೋ ಮಮ||
ತಪೋಧನ! ಅದನ್ನು ಕೇಳಿ ನಾನು ಪವಿತ್ರನಾದೆನೆಂದು ತಿಳಿಯುತ್ತೇನೆ. ಪ್ರಸನ್ನನಾಗಿ ನನ್ನ ರೋಮಗಳು ನಿಮಿರಿ ನಿಂತಿವೆ.
09046003a ಅಭಿಷೇಕಂ ಕುಮಾರಸ್ಯ ದೈತ್ಯಾನಾಂ ಚ ವಧಂ ತಥಾ|
09046003c ಶ್ರುತ್ವಾ ಮೇ ಪರಮಾ ಪ್ರೀತಿರ್ಭೂಯಃ ಕೌತೂಹಲಂ ಹಿ ಮೇ||
ಕುಮಾರನ ಅಭಿಷೇಕ ಮತ್ತು ದೈತ್ಯರ ವಧೆಯ ಕುರಿತು ಕೇಳಿ ನನಗೆ ಪರಮ ಪ್ರೀತಿಯುಂಟಾಯಿತು. ನನ್ನಲ್ಲಿ ಇನ್ನೂ ಕುತೂಹಲವಿದೆ.
09046004a ಅಪಾಂ ಪತಿಃ ಕಥಂ ಹ್ಯಸ್ಮಿನ್ನಭಿಷಿಕ್ತಃ ಸುರಾಸುರೈಃ|
09046004c ತನ್ಮೇ ಬ್ರೂಹಿ ಮಹಾಪ್ರಾಜ್ಞ ಕುಶಲೋ ಹ್ಯಸಿ ಸತ್ತಮ||
ನೀರಿನ ಒಡೆಯನು ಸುರಾಸುರರಿಂದ ಹೇಗೆ ಅಭಿಷಿಕ್ತನಾದನು? ಮಹಾಪ್ರಾಜ್ಞ! ಸತ್ತಮ! ಕುಶಲನಾಗಿರುವೆ. ಅದರ ಕುರಿತು ನನಗೆ ಹೇಳು!”
09046005 ವೈಶಂಪಾಯನ ಉವಾಚ
09046005a ಶೃಣು ರಾಜನ್ನಿದಂ ಚಿತ್ರಂ ಪೂರ್ವಕಲ್ಪೇ ಯಥಾತಥಂ|
09046005c ಆದೌ ಕೃತಯುಗೇ ತಸ್ಮಿನ್ವರ್ತಮಾನೇ ಯಥಾವಿಧಿ|
09046005e ವರುಣಂ ದೇವತಾಃ ಸರ್ವಾಃ ಸಮೇತ್ಯೇದಮಥಾಬ್ರುವನ್||
ವೈಶಂಪಾಯನನು ಹೇಳಿದನು: “ರಾಜನ್! ಹಿಂದಿನ ಕಲ್ಪದ ಮೊದಲನೆಯ ಕೃತಯುಗದಲ್ಲಿ ನಡೆದ ಈ ವಿಚಿತ್ರ ಘಟನೆಯನ್ನು ನಡೆದಹಾಗೆ ಯಥಾವಿಧಿಯಾಗಿ ಕೇಳು. ದೇವತೆಗಳೆಲ್ಲರೂ ಒಟ್ಟಾಗಿ ವರುಣನಿಗೆ ಹೇಳಿದರು:
09046006a ಯಥಾಸ್ಮಾನ್ಸುರರಾಟ್ ಶಕ್ರೋ ಭಯೇಭ್ಯಃ ಪಾತಿ ಸರ್ವದಾ|
09046006c ತಥಾ ತ್ವಮಪಿ ಸರ್ವಾಸಾಂ ಸರಿತಾಂ ವೈ ಪತಿರ್ಭವ||
“ಶಕ್ರನು ಹೇಗೆ ನಮ್ಮನ್ನು ಸರ್ವದಾ ಭಯದಿಂದ ರಕ್ಷಿಸುತ್ತಾನೋ ಹಾಗೆ ನೀನೂ ಕೂಡ ಸರ್ವ ಸರಿತ್ತುಗಳ ಒಡೆಯನಾಗು!
09046007a ವಾಸಶ್ಚ ತೇ ಸದಾ ದೇವ ಸಾಗರೇ ಮಕರಾಲಯೇ|
09046007c ಸಮುದ್ರೋಽಯಂ ತವ ವಶೇ ಭವಿಷ್ಯತಿ ನದೀಪತಿಃ||
ದೇವ! ಮಕರಾಲಯ ಸಾಗರದಲ್ಲಿಯೇ ನೀನು ಸದಾ ವಾಸವಾಗಿರು. ನದೀಪತಿ ಸಮುದ್ರನು ನಿನ್ನ ವಶನಾಗುತ್ತಾನೆ.
09046008a ಸೋಮೇನ ಸಾರ್ಧಂ ಚ ತವ ಹಾನಿವೃದ್ಧೀ ಭವಿಷ್ಯತಃ|
09046008c ಏವಮಸ್ತ್ವಿತಿ ತಾನ್ದೇವಾನ್ವರುಣೋ ವಾಕ್ಯಮಬ್ರವೀತ್||
ಸೋಮನೊಂದಿಗೆ ನಿನ್ನ ಹಾನಿ-ವೃದ್ಧಿಗಳು ಕೂಡ ನಡೆಯುತ್ತಿರುತ್ತವೆ.” “ಹಾಗೆಯೇ ಆಗಲಿ!” ಎಂದು ವರುಣನು ಆ ದೇವತೆಗಳಿಗೆ ಹೇಳಿದನು.
09046009a ಸಮಾಗಮ್ಯ ತತಃ ಸರ್ವೇ ವರುಣಂ ಸಾಗರಾಲಯಂ|
09046009c ಅಪಾಂ ಪತಿಂ ಪ್ರಚಕ್ರುರ್ಹಿ ವಿಧಿದೃಷ್ಟೇನ ಕರ್ಮಣಾ||
ಅನಂತರ ಅವರೆಲ್ಲರೂ ಸೇರಿ ವಿಧಿ-ದೃಷ್ಟ ಕರ್ಮಗಳಿಂದ ಸಾಗರಾಲಯ ವರುಣನನ್ನು ನೀರಿನ ಒಡೆಯನನ್ನಾಗಿ ಮಾಡಿದರು.
09046010a ಅಭಿಷಿಚ್ಯ ತತೋ ದೇವಾ ವರುಣಂ ಯಾದಸಾಂ ಪತಿಂ|
09046010c ಜಗ್ಮುಃ ಸ್ವಾನ್ಯೇವ ಸ್ಥಾನಾನಿ ಪೂಜಯಿತ್ವಾ ಜಲೇಶ್ವರಂ||
ವರುಣನನ್ನು ಜಲಾಧಿಪತಿಯ ಸ್ಥಾನದಲ್ಲಿ ಅಭಿಷೇಕಿಸಿ, ಜಲೇಶ್ವರನನ್ನು ಪೂಜಿಸಿ, ದೇವತೆಗಳು ತಮ್ಮ ತಮ್ಮ ಸ್ಥಾನಗಳಿಗೆ ಹೊರಟು ಹೋದರು.
09046011a ಅಭಿಷಿಕ್ತಸ್ತತೋ ದೇವೈರ್ವರುಣೋಽಪಿ ಮಹಾಯಶಾಃ|
09046011c ಸರಿತಃ ಸಾಗರಾಂಶ್ಚೈವ ನದಾಂಶ್ಚೈವ ಸರಾಂಸಿ ಚ|
09046011e ಪಾಲಯಾಮಾಸ ವಿಧಿನಾ ಯಥಾ ದೇವಾನ್ ಶತಕ್ರತುಃ||
ದೇವತೆಗಳಿಂದ ಅಭಿಷಿಕ್ತನಾದ ಮಹಾಯಶಸ್ವಿ ವರುಣನೂ ಕೂಡ ಸರಿತ್ತು-ಸಾಗರ-ನದೀ-ಸರೋವರಗಳನ್ನು ವಿಧಿವತ್ತಾಗಿ ಶತಕ್ರತುವು ದೇವತೆಗಳನ್ನು ಹೇಗೋ ಹಾಗೆ ಪಾಲಿಸತೊಡಗಿದನು.
09046012a ತತಸ್ತತ್ರಾಪ್ಯುಪಸ್ಪೃಶ್ಯ ದತ್ತ್ವಾ ಚ ವಿವಿಧಂ ವಸು|
09046012c ಅಗ್ನಿತೀರ್ಥಂ ಮಹಾಪ್ರಾಜ್ಞಃ ಸ ಜಗಾಮ ಪ್ರಲಂಬಹಾ|
09046012e ನಷ್ಟೋ ನ ದೃಶ್ಯತೇ ಯತ್ರ ಶಮೀಗರ್ಭೇ ಹುತಾಶನಃ||
ಮಹಾಪ್ರಾಜ್ಞ ಪ್ರಲಂಬಹ ರಾಮನು ಅಲ್ಲಿ ಕೂಡ ಸ್ನಾನಮಾಡಿ, ವಿವಿಧ ಸಂಪತ್ತುಗಳನ್ನು ದಾನವನ್ನಾಗಿತ್ತು, ಅಗ್ನಿಯು ಶಮೀ ಮರದಲ್ಲಿ ಕಾಣದಂತೆ ಅಡಗಿಕೊಂಡಿದ್ದ ಆ ಅಗ್ನಿತೀರ್ಥಕ್ಕೆ ಹೋದನು.
09046013a ಲೋಕಾಲೋಕವಿನಾಶೇ ಚ ಪ್ರಾದುರ್ಭೂತೇ ತದಾನಘ|
09046013c ಉಪತಸ್ಥುರ್ಮಹಾತ್ಮಾನಂ ಸರ್ವಲೋಕಪಿತಾಮಹಂ||
ಅನಘ! ಲೋಕಾಲೋಕಗಳು ವಿನಾಶವಾಗತೊಡಗಿದಾಗ ದೇವತೆಗಳೆಲ್ಲರೂ ಸೇರಿ ಸರ್ವಲೋಕಪಿತಾಮಹ ಮಹಾತ್ಮನ ಬಳಿಸಾರಿ ಹೇಳಿದರು:
09046014a ಅಗ್ನಿಃ ಪ್ರನಷ್ಟೋ ಭಗವಾನ್ಕಾರಣಂ ಚ ನ ವಿದ್ಮಹೇ|
09046014c ಸರ್ವಲೋಕಕ್ಷಯೋ ಮಾ ಭೂತ್ಸಂಪಾದಯತು ನೋಽನಲಂ||
“ಭಗವಾನ್! ಅಗ್ನಿಯು ಕಾಣದಂತಾಗಿದ್ದಾನೆ. ಕಾರಣವೇನೆಂದು ತಿಳಿಯದು! ಸರ್ವಲೋಕಗಳ ಕ್ಷಯವಾಗಬಾರದೆಂದು ಅಗ್ನಿಯನ್ನು ಹುಡುಕಿಕೊಡಬೇಕು!””
09046015 ಜನಮೇಜಯ ಉವಾಚ
09046015a ಕಿಮರ್ಥಂ ಭಗವಾನಗ್ನಿಃ ಪ್ರನಷ್ಟೋ ಲೋಕಭಾವನಃ|
09046015c ವಿಜ್ಞಾತಶ್ಚ ಕಥಂ ದೇವೈಸ್ತನ್ಮಮಾಚಕ್ಷ್ವ ತತ್ತ್ವತಃ||
ಜನಮೇಜಯನು ಹೇಳಿದನು: “ಲೋಕಭಾವನ ಭಗವಾನ್ ಅಗ್ನಿಯು ಯಾವ ಕಾರಣಕ್ಕಾಗಿ ಕಳೆದುಹೋಗಿದ್ದನು? ಅವನಿರುವ ಸ್ಥಳವು ದೇವತೆಗಳಿಗೆ ಹೇಗೆ ತಿಳಿಯಿತು? ಅದನ್ನು ಇದ್ದಹಾಗೆ ನನಗೆ ಹೇಳು!”
09046016 ವೈಶಂಪಾಯನ ಉವಾಚ
09046016a ಭೃಗೋಃ ಶಾಪಾದ್ಭೃಶಂ ಭೀತೋ ಜಾತವೇದಾಃ ಪ್ರತಾಪವಾನ್|
09046016c ಶಮೀಗರ್ಭಮಥಾಸಾದ್ಯ ನನಾಶ ಭಗವಾಂಸ್ತತಃ||
ವೈಶಂಪಾಯನನು ಹೇಳಿದನು: “ಭೃಗುವಿನ ಶಾಪದಿಂದ ಅತ್ಯಂತ ಭೀತನಾಗಿ ಪ್ರತಾಪವಾನ್ ಭಗವಾನ್ ಜಾತವೇದನು ಶಮೀವೃಕ್ಷದಲ್ಲಿ ಸೇರಿಕೊಂಡು ಅದೃಶ್ಯನಾಗಿಬಿಟ್ಟಿದ್ದನು.
09046017a ಪ್ರನಷ್ಟೇ ತು ತದಾ ವಹ್ನೌ ದೇವಾಃ ಸರ್ವೇ ಸವಾಸವಾಃ|
09046017c ಅನ್ವೇಷಂತ ತದಾ ನಷ್ಟಂ ಜ್ವಲನಂ ಭೃಶದುಃಖಿತಾಃ||
ವಹ್ನಿಯು ಹಾಗೆ ಪ್ರನಷ್ಟನಾಗಲು ವಾಸವನೊಂದಿಗೆ ಸರ್ವ ದೇವತೆಗಳೂ ತುಂಬಾ ದುಃಖಿತರಾಗಿ ನಷ್ಟನಾದ ಅಗ್ನಿಯನ್ನು ಹುಡುಕಿದರು.
09046018a ತತೋಽಗ್ನಿತೀರ್ಥಮಾಸಾದ್ಯ ಶಮೀಗರ್ಭಸ್ಥಮೇವ ಹಿ|
09046018c ದದೃಶುರ್ಜ್ವಲನಂ ತತ್ರ ವಸಮಾನಂ ಯಥಾವಿಧಿ||
ಅನಂತರ ಅಗ್ನಿತೀರ್ಥಕ್ಕೆ ಬಂದು ಅಲ್ಲಿ ಶಮೀವೃಕ್ಷದ ಪೊಟರೆಯಲ್ಲಿ ಯಥಾವಿಧಿಯಾಗಿ ವಾಸಿಸುತ್ತಿದ್ದ ಜ್ವಲನನನ್ನು ನೋಡಿದರು.
09046019a ದೇವಾಃ ಸರ್ವೇ ನರವ್ಯಾಘ್ರ ಬೃಹಸ್ಪತಿಪುರೋಗಮಾಃ|
09046019c ಜ್ವಲನಂ ತಂ ಸಮಾಸಾದ್ಯ ಪ್ರೀತಾಭೂವನ್ಸವಾಸವಾಃ|
ನರವ್ಯಾಘ್ರ! ವಾಸವನೊಂದಿಗೆ ಬೃಹಸ್ಪತಿಯೇ ಮೊದಲಾದ ಸರ್ವ ದೇವತೆಗಳೂ ಜ್ವಲನನನ್ನು ಕಂಡು ಹರ್ಷಿತರಾದರು.
09046019e ಪುನರ್ಯಥಾಗತಂ ಜಗ್ಮುಃ ಸರ್ವಭಕ್ಷಶ್ಚ ಸೋಽಭವತ್||
09046020a ಭೃಗೋಃ ಶಾಪಾನ್ಮಹೀಪಾಲ ಯದುಕ್ತಂ ಬ್ರಹ್ಮವಾದಿನಾ|
ಮಹೀಪಾಲ! ಅವರು ಪುನಃ ಹಿಂದಿರುಗಲು, ಬ್ರಹ್ಮವಾದಿ ಭೃಗುವು ಏನು ಹೇಳಿ ಶಾಪವನ್ನಿತ್ತಿದ್ದನೋ ಹಾಗೆಯೇ ಅಗ್ನಿಯು ಸರ್ವಭಕ್ಷಕನಾದನು.
09046020c ತತ್ರಾಪ್ಯಾಪ್ಲುತ್ಯ ಮತಿಮಾನ್ಬ್ರಹ್ಮಯೋನಿಂ ಜಗಾಮ ಹ||
09046021a ಸಸರ್ಜ ಭಗವಾನ್ಯತ್ರ ಸರ್ವಲೋಕಪಿತಾಮಹಃ|
ಮತಿಮಾನ್ ಬಲರಾಮನು ಅಲ್ಲಿ ಸ್ನಾನಮಾಡಿ ಎಲ್ಲಿ ಸರ್ವಲೋಕಪಿತಾಮಹ ಭಗವಾನನು ಸೃಷ್ಟಿಸಿದನೋ ಆ ಬ್ರಹ್ಮಯೋನಿಗೆ ಹೋದನು.
09046021c ತತ್ರಾಪ್ಲುತ್ಯ ತತೋ ಬ್ರಹ್ಮಾ ಸಹ ದೇವೈಃ ಪ್ರಭುಃ ಪುರಾ|
09046021e ಸಸರ್ಜ ಚಾನ್ನಾನಿ ತಥಾ ದೇವತಾನಾಂ ಯಥಾವಿಧಿ||
ಹಿಂದೆ ಪ್ರಭು ಬ್ರಹ್ಮನು ದೇವತೆಗಳೊಂದಿಗೆ ಅಲ್ಲಿ ಸ್ನಾನಮಾಡಿ ಯಥಾವಿಧಿಯಾಗಿ ದೇವತೆಗಳ ಆಹಾರಗಳನ್ನು ಸೃಷ್ಟಿಸಿದ್ದನು.
09046022a ತತ್ರ ಸ್ನಾತ್ವಾ ಚ ದತ್ತ್ವಾ ಚ ವಸೂನಿ ವಿವಿಧಾನಿ ಚ|
09046022c ಕೌಬೇರಂ ಪ್ರಯಯೌ ತೀರ್ಥಂ ತತ್ರ ತಪ್ತ್ವಾ ಮಹತ್ತಪಃ|
09046022e ಧನಾಧಿಪತ್ಯಂ ಸಂಪ್ರಾಪ್ತೋ ರಾಜನ್ನೈಲಬಿಲಃ ಪ್ರಭುಃ||
ಅಲ್ಲಿ ಸ್ನಾನಮಾಡಿ ವಿವಿಧ ಸಂಪತ್ತುಗಳನ್ನು ದಾನವಾಗಿತ್ತು ಬಲರಾಮನು ಕುಬೇರತೀರ್ಥಕ್ಕೆ ಹೋದನು. ರಾಜನ್! ಅಲ್ಲಿ ಪ್ರಭು ಐಲಬಿಲ ಕುಬೇರನು ಮಹಾ ತಪಸ್ಸನ್ನು ತಪಿಸಿ ಧನಾಧಿಪತ್ಯವನ್ನು ಪಡೆದಿದ್ದನು.
09046023a ತತ್ರಸ್ಥಮೇವ ತಂ ರಾಜನ್ಧನಾನಿ ನಿಧಯಸ್ತಥಾ|
09046023c ಉಪತಸ್ಥುರ್ನರಶ್ರೇಷ್ಠ ತತ್ತೀರ್ಥಂ ಲಾಂಗಲೀ ತತಃ|
09046023e ಗತ್ವಾ ಸ್ನಾತ್ವಾ ಚ ವಿಧಿವದ್ಬ್ರಾಹ್ಮಣೇಭ್ಯೋ ಧನಂ ದದೌ||
ರಾಜನ್! ನರಶ್ರೇಷ್ಠ! ಅಲ್ಲಿಯೇ ಧನ-ನಿಧಿಗಳು ಕುಬೇರನನ್ನು ಸೇವಿಸತೊಡಗಿದವು. ಲಾಂಗಲಿಯು ಅಲ್ಲಿ ಹೋಗಿ ಸ್ನಾನಮಾಡಿ ವಿಧಿವತ್ತಾಗಿ ಬ್ರಾಹ್ಮಣರಿಗೆ ಧನವನ್ನಿತ್ತನು.
09046024a ದದೃಶೇ ತತ್ರ ತತ್ ಸ್ಥಾನಂ ಕೌಬೇರೇ ಕಾನನೋತ್ತಮೇ|
09046024c ಪುರಾ ಯತ್ರ ತಪಸ್ತಪ್ತಂ ವಿಪುಲಂ ಸುಮಹಾತ್ಮನಾ||
ಅಲ್ಲಿಯೇ ಅವನು ಹಿಂದೆ ಸುಮಹಾತ್ಮ ಕುಬೇರನು ವಿಪುಲ ತಪಸ್ಸನ್ನು ತಪಿಸಿದ್ದ ಉತ್ತಮ ಕಾನನವನ್ನು ನೋಡಿದನು.
09046025a ಯತ್ರ ರಾಜ್ಞಾ ಕುಬೇರೇಣ ವರಾ ಲಬ್ಧಾಶ್ಚ ಪುಷ್ಕಲಾಃ|
09046025c ಧನಾಧಿಪತ್ಯಂ ಸಖ್ಯಂ ಚ ರುದ್ರೇಣಾಮಿತತೇಜಸಾ||
ಅಲ್ಲಿಯೇ ರಾಜಾ ಕುಬೇರನು ಧನಾಧಿಪತ್ಯವನ್ನೂ ಅಮಿತತೇಜಸ್ವಿ ರುದ್ರನೊಂದಿಗೆ ಸಖ್ಯವನ್ನೂ ಪಡೆದಿದ್ದನು.
09046026a ಸುರತ್ವಂ ಲೋಕಪಾಲತ್ವಂ ಪುತ್ರಂ ಚ ನಲಕೂಬರಂ|
09046026c ಯತ್ರ ಲೇಭೇ ಮಹಾಬಾಹೋ ಧನಾಧಿಪತಿರಂಜಸಾ||
ಅಲ್ಲಿಯೇ ಮಹಾಬಾಹು ಧನಪತಿಯು ಸುರತ್ವವನ್ನೂ, ಲೋಕಪಾಲತ್ವವನ್ನೂ, ನಲಕೂಬರನೆನ್ನುವ ಪುತ್ರನನ್ನೂ ಪಡೆದಿದ್ದನು.
09046027a ಅಭಿಷಿಕ್ತಶ್ಚ ತತ್ರೈವ ಸಮಾಗಮ್ಯ ಮರುದ್ಗಣೈಃ|
09046027c ವಾಹನಂ ಚಾಸ್ಯ ತದ್ದತ್ತಂ ಹಂಸಯುಕ್ತಂ ಮನೋರಮಂ|
09046027e ವಿಮಾನಂ ಪುಷ್ಪಕಂ ದಿವ್ಯಂ ನೈರೃತೈಶ್ವರ್ಯಮೇವ ಚ||
ಅಲ್ಲಿಯೇ ಮರುದ್ಗಣಗಳಿಂದ ಅಭಿಷಿಕ್ತನಾದ ಅವನು ನೈರುತ್ಯದ ಮತ್ತು ಐಶ್ವರ್ಯಗಳ ಅಧಿಪತ್ಯವನ್ನೂ, ಹಂಸಯುಕ್ತ-ಮನೋರಮ-ದಿವ್ಯ ಪುಷ್ಪಕ ವಿಮಾನವನ್ನು ಪಡೆದನು.
09046028a ತತ್ರಾಪ್ಲುತ್ಯ ಬಲೋ ರಾಜನ್ದತ್ತ್ವಾ ದಾಯಾಂಶ್ಚ ಪುಷ್ಕಲಾನ್|
09046028c ಜಗಾಮ ತ್ವರಿತೋ ರಾಮಸ್ತೀರ್ಥಂ ಶ್ವೇತಾನುಲೇಪನಃ||
ರಾಜನ್! ಶ್ವೇತಗಂಧಾನುಲಿಪ್ತ ಬಲರಾಮನು ಅಲ್ಲಿ ಸ್ನಾನಮಾಡಿ, ಪುಷ್ಕಲ ದಾನಗಳನ್ನಿತ್ತು ತ್ವರೆಮಾಡಿ ರಾಮತೀರ್ಥಕ್ಕೆ ಹೋದನು.
09046029a ನಿಷೇವಿತಂ ಸರ್ವಸತ್ತ್ವೈರ್ನಾಮ್ನಾ ಬದರಪಾಚನಂ|
09046029c ನಾನರ್ತುಕವನೋಪೇತಂ ಸದಾಪುಷ್ಪಫಲಂ ಶುಭಂ||
ಬದರಪಾಚನವೆಂಬ ಹೆಸರಿದ್ದ ಅದು ಸರ್ವ ಸತ್ತ್ವಗಳಿಂದ ಕೂಡಿತ್ತು. ಸದಾ ಶುಭ ಪುಷ್ಪ-ಫಲಬರಿತವಾಗಿದ್ದ ಆ ತೀರ್ಥವನ್ನು ಅವನು ಸೇರಿದನು.”
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತಿರ್ಥಯಾತ್ರಾಯಾಂ ಷಟ್ಚತ್ವಾರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರೆ ಎನ್ನುವ ನಲ್ವತ್ತಾರನೇ ಅಧ್ಯಾಯವು.
ಸಾರಸ್ವತ ಪರ್ವದ ಇತರ ಅಧ್ಯಾಯಗಳು:
- ಪಾಂಡವಾನಾಂ ಸರೋವರಾಗಮನ
- ಸುಯೋಧನಯುಧಿಷ್ಠಿರಸಂವಾದ
- ಸುಯೋಧನಯುಧಿಷ್ಠಿರಸಂವಾದ
- ಭೀಮಸೇನದುರ್ಯೋಧನಸಂವಾದ
- ಬಲದೇವಾಗಮನ
- ಬಲದೇವತೀರ್ಥಯಾತ್ರಾಯಾಂ ಪ್ರಭಾಸೋತ್ಪತ್ತಿಕಥನ
- ಬಲದೇವತೀರ್ಥಯಾತ್ರಾಯಾಂ ತ್ರಿತಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಕುಮಾರಾಭಿಷೇಕಕ್ರಮ
- ಬಲದೇವತೀರ್ಥಯಾತ್ರಾಯಾಂ ಸ್ಕಂದಾಭಿಷೇಕ
- ಬಲದೇವತೀರ್ಥಯಾತ್ರಾಯಾಂ ತಾರಕವಧ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾಯಾಂ ಬದರಪಾಚನತೀರ್ಥಕಥನ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾಯಾಂ ಕುರುಕ್ಷೇತ್ರಕಥನ
- ಬಲದೇವತೀರ್ಥಯಾತ್ರಾ