ಶಲ್ಯಪರ್ವ: ಸಾರಸ್ವತಪರ್ವ
೩೯
ಸಿಂಧುದ್ವೀಪದಲ್ಲಿ ಆರ್ಷ್ಟಿಷೇಣನು ಸಿದ್ಧನಾದ ಕಥೆ (೧-೯). ಬ್ರಹ್ಮಯೋನಿಯಲ್ಲಿ ವಿಶ್ವಾಮಿತ್ರನಿಗೆ ಬ್ರಾಹ್ಮಣತ್ವ ಪ್ರಾಪ್ತಿ (೧೦-೩೨).
09039001 ಜನಮೇಜಯ ಉವಾಚ
09039001a ಕಥಮಾರ್ಷ್ಟಿಷೇಣೋ ಭಗವಾನ್ವಿಪುಲಂ ತಪ್ತವಾಂಸ್ತಪಃ|
09039001c ಸಿಂಧುದ್ವೀಪಃ ಕಥಂ ಚಾಪಿ ಬ್ರಾಹ್ಮಣ್ಯಂ ಲಬ್ಧವಾಂಸ್ತದಾ||
ಜನಮೇಜಯನು ಹೇಳಿದನು: “ಭಗವಾನ್ ಆರ್ಷ್ಟಿಷೇಣನು ಹೇಗೆ ವಿಪುಲ ತಪಸ್ಸನ್ನು ತಪಿಸಿದನು? ಸಿಂಧುದ್ವೀಪನೂ ಕೂಡ ಹೇಗೆ ಬ್ರಾಹ್ಮಣ್ಯವನ್ನು ಪಡೆದನು?
09039002a ದೇವಾಪಿಶ್ಚ ಕಥಂ ಬ್ರಹ್ಮನ್ವಿಶ್ವಾಮಿತ್ರಶ್ಚ ಸತ್ತಮ|
09039002c ತನ್ಮಮಾಚಕ್ಷ್ವ ಭಗವನ್ಪರಂ ಕೌತೂಹಲಂ ಹಿ ಮೇ||
ಬ್ರಹ್ಮನ್! ಸತ್ತಮ! ಹೇಗೆ ದೇವಾಪಿ ಮತ್ತು ವಿಶ್ವಾಮಿತ್ರರು ಬ್ರಾಹ್ಮಣ್ಯವನ್ನು ಪಡೆದರು? ಭಗವನ್! ಅದರಕುರಿತು ನನಗೆ ಹೇಳು. ಅತ್ಯಂತ ಕುತೂಹಲವಾಗುತ್ತಿದೆ.”
09039003 ವೈಶಂಪಾಯನ ಉವಾಚ
09039003a ಪುರಾ ಕೃತಯುಗೇ ರಾಜನ್ನಾರ್ಷ್ಟಿಷೇಣೋ ದ್ವಿಜೋತ್ತಮಃ|
09039003c ವಸನ್ಗುರುಕುಲೇ ನಿತ್ಯಂ ನಿತ್ಯಮಧ್ಯಯನೇ ರತಃ||
ವೈಶಂಪಾಯನನು ಹೇಳಿದನು: “ರಾಜನ್! ಹಿಂದೆ ಕೃತಯುಗದಲ್ಲಿ ದ್ವಿಜೋತ್ತಮ ಆರ್ಷ್ಟಿಷೇಣನು ಗುರುಕುಲದಲ್ಲಿ ವಾಸಿಸಿಕೊಂಡು ನಿತ್ಯವೂ ಅಧ್ಯಯನದಲ್ಲಿ ತೊಡಗುತ್ತಿದ್ದನು.
09039004a ತಸ್ಯ ರಾಜನ್ಗುರುಕುಲೇ ವಸತೋ ನಿತ್ಯಮೇವ ಹ|
09039004c ಸಮಾಪ್ತಿಂ ನಾಗಮದ್ವಿದ್ಯಾ ನಾಪಿ ವೇದಾ ವಿಶಾಂ ಪತೇ||
ರಾಜನ್! ವಿಶಾಂಪತೇ! ನಿತ್ಯವೂ ಗುರುಕುಲದಲ್ಲಿ ವಾಸಿಸಿಕೊಂಡಿದ್ದರೂ ಅವನ ವೇದ-ಆಗಮಗಳ ವಿದ್ಯೆಯು ಸಂಪೂರ್ಣವಾಗಲೇ ಇಲ್ಲ.
09039005a ಸ ನಿರ್ವಿಣ್ಣಸ್ತತೋ ರಾಜಂಸ್ತಪಸ್ತೇಪೇ ಮಹಾತಪಾಃ|
09039005c ತತೋ ವೈ ತಪಸಾ ತೇನ ಪ್ರಾಪ್ಯ ವೇದಾನನುತ್ತಮಾನ್||
ರಾಜನ್! ನಿರ್ವಿಣ್ಣನಾದ ಅವನು ಮಹಾತಪಸ್ಸನ್ನು ತಪಿಸಿದನು. ಅವನ ಆ ತಪಸ್ಸಿನಿಂದ ಅವನಿಗೆ ಅನುತ್ತಮ ವೇದಗಳು ಪ್ರಾಪ್ತವಾದವು.
09039006a ಸ ವಿದ್ವಾನ್ವೇದಯುಕ್ತಶ್ಚ ಸಿದ್ಧಶ್ಚಾಪ್ಯ ಋಷಿಸತ್ತಮಃ|
09039006c ತತ್ರ ತೀರ್ಥೇ ವರಾನ್ಪ್ರಾದಾತ್ತ್ರೀನೇವ ಸುಮಹಾತಪಾಃ||
ಆ ಋಷಿಸತ್ತಮನು ವಿದ್ವಾಂಸನೂ, ವೇದಯುಕ್ತನೂ ಸಿದ್ಧನೂ ಆದನು. ಅಲ್ಲಿದ್ದ ತೀರ್ಥಕ್ಕೆ ಆ ಸುಮಹಾತಪಸ್ವಿಯು ಈ ಮೂರು ವರಗಳನ್ನಿತ್ತನು:
09039007a ಅಸ್ಮಿಂಸ್ತೀರ್ಥೇ ಮಹಾನದ್ಯಾ ಅದ್ಯಪ್ರಭೃತಿ ಮಾನವಃ|
09039007c ಆಪ್ಲುತೋ ವಾಜಿಮೇಧಸ್ಯ ಫಲಂ ಪ್ರಾಪ್ನೋತಿ ಪುಷ್ಕಲಂ||
“ಇಂದಿನಿಂದ ಮಹಾನದಿಯ ಈ ತೀರ್ಥದಲ್ಲಿ ಸ್ನಾನಮಾಡುವ ಮನುಷ್ಯನು ಅಶ್ವಮೇಧದ ಪುಷ್ಕಲ ಫಲವನ್ನು ಪಡೆಯುತ್ತಾನೆ.
09039008a ಅದ್ಯಪ್ರಭೃತಿ ನೈವಾತ್ರ ಭಯಂ ವ್ಯಾಲಾದ್ಭವಿಷ್ಯತಿ|
09039008c ಅಪಿ ಚಾಲ್ಪೇನ ಯತ್ನೇನ ಫಲಂ ಪ್ರಾಪ್ಸ್ಯತಿ ಪುಷ್ಕಲಂ||
ಇಂದಿನಿಂದ ಇಲ್ಲಿ ಸರ್ಪಭಯವು ಇರುವುದಿಲ್ಲ. ಮತ್ತು ಅಲ್ಪ ಯತ್ನದಿಂದಲೇ ಪುಷ್ಕಲ ಫಲವು ಪ್ರಾಪ್ತವಾಗುತ್ತದೆ.”
09039009a ಏವಮುಕ್ತ್ವಾ ಮಹಾತೇಜಾ ಜಗಾಮ ತ್ರಿದಿವಂ ಮುನಿಃ|
09039009c ಏವಂ ಸಿದ್ಧಃ ಸ ಭಗವಾನಾರ್ಷ್ಟಿಷೇಣಃ ಪ್ರತಾಪವಾನ್||
ಹೀಗೆ ಹೇಳಿ ಆ ಮಹಾತೇಜಸ್ವಿ ಮುನಿಯು ತ್ರಿದಿವಕ್ಕೆ ತೆರಳಿದನು. ಹೀಗೆ ಆ ಭಗವಾನ್ ಪ್ರತಾಪವಾನ್ ಆರ್ಷ್ಟಿಷೇಣನು ಸಿದ್ಧನಾದನು.
09039010a ತಸ್ಮಿನ್ನೇವ ತದಾ ತೀರ್ಥೇ ಸಿಂಧುದ್ವೀಪಃ ಪ್ರತಾಪವಾನ್|
09039010c ದೇವಾಪಿಶ್ಚ ಮಹಾರಾಜ ಬ್ರಾಹ್ಮಣ್ಯಂ ಪ್ರಾಪತುರ್ಮಹತ್||
ಮಹಾರಾಜ! ಅದೇ ತೀರ್ಥದಲ್ಲಿ ಪ್ರತಾಪವಾನ್ ಸಿಂಧುದ್ವೀಪ ಮತ್ತು ದೇವಾಪಿಗಳು ಮಹಾ ಬ್ರಾಹ್ಮಣ್ಯವನ್ನು ಪಡೆದರು.
09039011a ತಥಾ ಚ ಕೌಶಿಕಸ್ತಾತ ತಪೋನಿತ್ಯೋ ಜಿತೇಂದ್ರಿಯಃ|
09039011c ತಪಸಾ ವೈ ಸುತಪ್ತೇನ ಬ್ರಾಹ್ಮಣತ್ವಮವಾಪ್ತವಾನ್||
ಮಗೂ! ಅಲ್ಲಿಯೇ ಜಿತೇಂದ್ರಿಯ ಕೌಶಿಕನೂ ಕೂಡ ತಪೋನಿರತನಾಗಿದ್ದು, ಉತ್ತಮವಾಗಿ ತಪಿಸಿದ ತಪಸ್ಸಿನಿಂದ ಬ್ರಾಹ್ಮಣತ್ವವನ್ನು ಪಡೆದುಕೊಂಡನು.
09039012a ಗಾಧಿರ್ನಾಮ ಮಹಾನಾಸೀತ್ ಕ್ಷತ್ರಿಯಃ ಪ್ರಥಿತೋ ಭುವಿ|
09039012c ತಸ್ಯ ಪುತ್ರೋಽಭವದ್ರಾಜನ್ವಿಶ್ವಾಮಿತ್ರಃ ಪ್ರತಾಪವಾನ್||
ರಾಜನ್! ಭೂಮಿಯ ಮೇಲೆ ಗಾಧಿ ಎಂಬ ಹೆಸರಿನ ಪ್ರಸಿದ್ಧ ಕ್ಷತ್ರಿಯನಿದ್ದನು. ಅವನ ಪುತ್ರನೇ ಪ್ರತಾಪವಾನ್ ವಿಶ್ವಾಮಿತ್ರನಾಗಿದ್ದನು.
09039013a ಸ ರಾಜಾ ಕೌಶಿಕಸ್ತಾತ ಮಹಾಯೋಗ್ಯಭವತ್ಕಿಲ|
09039013c ಸ ಪುತ್ರಮಭಿಷಿಚ್ಯಾಥ ವಿಶ್ವಾಮಿತ್ರಂ ಮಹಾತಪಾಃ||
ಮಹಾತಪಸ್ವಿಯೂ ಮಹಾಯೋಗಿಯೂ ಆಗಿದ್ದ ಆ ಕೌಶಿಕ ರಾಜನು ಮಗ ವಿಶ್ವಾಮಿತ್ರನನ್ನು ಅಭಿಷೇಕಿಸಿದನು.
09039014a ದೇಹನ್ಯಾಸೇ ಮನಶ್ಚಕ್ರೇ ತಂ ಊಚುಃ ಪ್ರಣತಾಃ ಪ್ರಜಾಃ|
09039014c ನ ಗಂತವ್ಯಂ ಮಹಾಪ್ರಾಜ್ಞ ತ್ರಾಹಿ ಚಾಸ್ಮಾನ್ಮಹಾಭಯಾತ್||
ದೇಹನ್ಯಾಸದ ಮನಸ್ಸು ಮಾಡಿದ್ದ ಅವನಿಗೆ ಪ್ರೀತಿಯಿಂದ ಪ್ರಜೆಗಳು ಹೇಳಿದರು: “ಮಹಾಪ್ರಾಜ್ಞ! ಹೋಗಬೇಡ! ಮಹಾಭಯದಿಂದ ನಮ್ಮನ್ನು ಕಾಪಾಡು!”
09039015a ಏವಮುಕ್ತಃ ಪ್ರತ್ಯುವಾಚ ತತೋ ಗಾಧಿಃ ಪ್ರಜಾಸ್ತದಾ|
09039015c ವಿಶ್ವಸ್ಯ ಜಗತೋ ಗೋಪ್ತಾ ಭವಿಷ್ಯತಿ ಸುತೋ ಮಮ||
ಅದಕ್ಕೆ ಪ್ರತಿಯಾಗಿ ಗಾಧಿಯು ಪ್ರಜೆಗಳಿಗೆ ಹೇಳಿದನು: “ನನ್ನ ಮಗನು ವಿಶ್ವದ ರಕ್ಷಕನಾಗುತ್ತಾನೆ!”
09039016a ಇತ್ಯುಕ್ತ್ವಾ ತು ತತೋ ಗಾಧಿರ್ವಿಶ್ವಾಮಿತ್ರಂ ನಿವೇಶ್ಯ ಚ|
09039016c ಜಗಾಮ ತ್ರಿದಿವಂ ರಾಜನ್ವಿಶ್ವಾಮಿತ್ರೋಽಭವನ್ನೃಪಃ||
09039016e ನ ಚ ಶಕ್ನೋತಿ ಪೃಥಿವೀಂ ಯತ್ನವಾನಪಿ ರಕ್ಷಿತುಂ||
ಹೀಗೆ ಹೇಳಿ ಗಾಧಿಯು ವಿಶ್ವಾಮಿತ್ರನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿ ತ್ರಿದಿವಕ್ಕೆ ಹೊರಟುಹೋದನು. ರಾಜನ್! ಆಗ ವಿಶ್ವಾಮಿತ್ರನು ರಾಜನಾದನು. ಆದರೆ ಪ್ರಯತ್ನಪಟ್ಟರೂ ಅವನಿಗೆ ಪೃಥ್ವಿಯನ್ನು ರಕ್ಷಿಸಲು ಆಗಲಿಲ್ಲ.
09039017a ತತಃ ಶುಶ್ರಾವ ರಾಜಾ ಸ ರಾಕ್ಷಸೇಭ್ಯೋ ಮಹಾಭಯಂ|
09039017c ನಿರ್ಯಯೌ ನಗರಾಚ್ಚಾಪಿ ಚತುರಂಗಬಲಾನ್ವಿತಃ||
ಒಮ್ಮೆ ಆ ರಾಜನು ರಾಕ್ಷಸರ ಮಹಾಭಯದ ಕುರಿತು ಕೇಳಿ, ಚತುರಂಗಬಲಾನ್ವಿತನಾಗಿ ನಗರದಿಂದ ಹೊರಟನು.
09039018a ಸ ಗತ್ವಾ ದೂರಮಧ್ವಾನಂ ವಸಿಷ್ಠಾಶ್ರಮಮಭ್ಯಯಾತ್|
09039018c ತಸ್ಯ ತೇ ಸೈನಿಕಾ ರಾಜಂಶ್ಚಕ್ರುಸ್ತತ್ರಾನಯಾನ್ಬಹೂನ್||
ಬಹಳ ದೂರ ಗಮಿಸಿ ಅವನು ವಸಿಷ್ಠನ ಆಶ್ರಮದ ಬಳಿ ಹೋದನು. ರಾಜನ್! ಅಲ್ಲಿ ಅವನ ಸೈನಿಕರು ಅನೀತಿಯಿಂದ ಅನೇಕ ಅಪಚಾರಗಳನ್ನೆಸಗಿದರು.
09039019a ತತಸ್ತು ಭಗವಾನ್ವಿಪ್ರೋ ವಸಿಷ್ಠೋಽಶ್ರಮಮಭ್ಯಯಾತ್|
09039019c ದದೃಶೇ ಚ ತತಃ ಸರ್ವಂ ಭಜ್ಯಮಾನಂ ಮಹಾವನಂ||
ಭಗವಾನ್ ವಿಪ್ರ ವಸಿಷ್ಠನು ಆಶ್ರಮಕ್ಕೆ ಹಿಂದಿರುಗಲು ಅಲ್ಲಿ ಮಹಾವನವೆಲ್ಲವೂ ಧ್ವಂಸವಾದುದನ್ನು ನೋಡಿದನು.
09039020a ತಸ್ಯ ಕ್ರುದ್ಧೋ ಮಹಾರಾಜ ವಸಿಷ್ಠೋ ಮುನಿಸತ್ತಮಃ|
09039020c ಸೃಜಸ್ವ ಶಬರಾನ್ಘೋರಾನಿತಿ ಸ್ವಾಂ ಗಾಮುವಾಚ ಹ||
ಮಹಾರಾಜ! ಅದರಿಂದ ಕ್ರುದ್ಧನಾದ ಮುನಿಸತ್ತಮ ವಸಿಷ್ಠನು “ಘೋರ ಶಬರರನ್ನು ಸೃಷ್ಟಿಸು!” ಎಂದು ತನ್ನ ಗೋವಿಗೆ ಹೇಳಿದನು.
09039021a ತಥೋಕ್ತಾ ಸಾಸೃಜದ್ಧೇನುಃ ಪುರುಷಾನ್ಘೋರದರ್ಶನಾನ್|
09039021c ತೇ ಚ ತದ್ಬಲಮಾಸಾದ್ಯ ಬಭಂಜುಃ ಸರ್ವತೋದಿಶಂ||
ಹಾಗೆ ಹೇಳಲು ಆ ಹಸುವು ಘೋರರಾಗಿ ಕಾಣುತ್ತಿದ್ದ ಪುರುಷರನ್ನು ಸೃಷ್ಟಿಸಿದಳು. ಅವರು ವಿಶ್ವಾಮಿತ್ರನ ಸೇನೆಯನ್ನು ಎಲ್ಲಕಡೆಗಳಿಂದ ಆಕ್ರಮಣಿಸಿ ನಾಶಪಡಿಸಿದರು.
09039022a ತದ್ದೃಷ್ಟ್ವಾ ವಿದ್ರುತಂ ಸೈನ್ಯಂ ವಿಶ್ವಾಮಿತ್ರಸ್ತು ಗಾಧಿಜಃ|
09039022c ತಪಃ ಪರಂ ಮನ್ಯಮಾನಸ್ತಪಸ್ಯೇವ ಮನೋ ದಧೇ||
ಪಲಾಯನಮಾಡುತ್ತಿದ್ದ ತನ್ನ ಸೇನೆಯನ್ನು ನೋಡಿ ಗಾಧಿಯ ಮಗ ವಿಶ್ವಾಮಿತ್ರನು ತಪೋಬಲವೇ ಹೆಚ್ಚಿನದೆಂದು ತಿಳಿದು ತಪಸ್ಸನ್ನಾಚರಿಸಲು ಮನಸ್ಸುಮಾಡಿದನು.
09039023a ಸೋಽಸ್ಮಿಂಸ್ತೀರ್ಥವರೇ ರಾಜನ್ಸರಸ್ವತ್ಯಾಃ ಸಮಾಹಿತಃ|
09039023c ನಿಯಮೈಶ್ಚೋಪವಾಸೈಶ್ಚ ಕರ್ಶಯನ್ದೇಹಮಾತ್ಮನಃ||
ರಾಜನ್! ಅವನು ಸರಸ್ವತಿಯ ಆ ಶ್ರೇಷ್ಠ ತೀರ್ಥಕ್ಕೆ ಹೋಗಿ ಅಲ್ಲಿ ಉಪವಾಸ ನಿಯಮಗಳಿಂದ ತನ್ನ ದೇಹವನ್ನು ಕೃಶಗೊಳಿಸಿದನು.
09039024a ಜಲಾಹಾರೋ ವಾಯುಭಕ್ಷಃ ಪರ್ಣಾಹಾರಶ್ಚ ಸೋಽಭವತ್|
09039024c ತಥಾ ಸ್ಥಂಡಿಲಶಾಯೀ ಚ ಯೇ ಚಾನ್ಯೇ ನಿಯಮಾಃ ಪೃಥಕ್||
ಜಲಾಹಾರಿಯಾಗಿ, ವಾಯುಭಕ್ಷಕನಾಗಿ, ಪರ್ಣಾಹಾರಿಯಾಗಿದ್ದನು. ಹಾಗೆಯೇ ನೆಲದ ಮೇಲೆಯೇ ಮಲಗುವುದು ಮುಂತಾದ ಅನ್ಯ ಅನೇಕ ನಿಯಮಗಳನ್ನೂ ಆಚರಿಸಿದನು.
09039025a ಅಸಕೃತ್ತಸ್ಯ ದೇವಾಸ್ತು ವ್ರತವಿಘ್ನಂ ಪ್ರಚಕ್ರಿರೇ|
09039025c ನ ಚಾಸ್ಯ ನಿಯಮಾದ್ಬುದ್ಧಿರಪಯಾತಿ ಮಹಾತ್ಮನಃ||
ದೇವತೆಗಳಾದರೋ ಅವನ ವ್ರತವಿಘ್ನವನ್ನುಂಟು ಮಾಡಲು ಬಹಳವಾಗಿ ಪ್ರಯತ್ನಿಸಿದರು. ಆದರೂ ಆ ಮಹಾತ್ಮನ ಬುದ್ಧಿಯು ನಿಯಮಗಳಿಂದ ವಿಚಲಿತಗೊಳ್ಳಲಿಲ್ಲ.
09039026a ತತಃ ಪರೇಣ ಯತ್ನೇನ ತಪ್ತ್ವಾ ಬಹುವಿಧಂ ತಪಃ|
09039026c ತೇಜಸಾ ಭಾಸ್ಕರಾಕಾರೋ ಗಾಧಿಜಃ ಸಮಪದ್ಯತ||
ಆಗ ಪರಮ ಪ್ರಯತ್ನದಿಂದ ಬಹುವಿಧದ ತಪಸ್ಸನ್ನು ತಪಿಸಿ ಗಾಧಿಜನು ತೇಜಸ್ಸಿನಲ್ಲಿ ಭಾಸ್ಕರಾಕಾರನಾಗಿ ಬೆಳೆದನು.
09039027a ತಪಸಾ ತು ತಥಾ ಯುಕ್ತಂ ವಿಶ್ವಾಮಿತ್ರಂ ಪಿತಾಮಹಃ|
09039027c ಅಮನ್ಯತ ಮಹಾತೇಜಾ ವರದೋ ವರಮಸ್ಯ ತತ್||
ಹಾಗೆ ತಪಸ್ಸಿನಲ್ಲಿ ಯುಕ್ತನಾಗಿದ್ದ ವಿಶ್ವಾಮಿತ್ರನಿಗೆ ಮಹಾತೇಜಸ್ವಿ ವರದ ಪಿತಾಮಹನು ವರವನ್ನೀಯಲು ನಿಶ್ಚಯಿಸಿದನು.
09039028a ಸ ತು ವವ್ರೇ ವರಂ ರಾಜನ್ಸ್ಯಾಮಹಂ ಬ್ರಾಹ್ಮಣಸ್ತ್ವಿತಿ|
09039028c ತಥೇತಿ ಚಾಬ್ರವೀದ್ಬ್ರಹ್ಮಾ ಸರ್ವಲೋಕಪಿತಾಮಹಃ||
ರಾಜನ್! “ನಾನು ಬ್ರಾಹ್ಮಣನಾಗಬೇಕು!” ಎಂದು ಅವನು ವರವನ್ನು ಕೇಳಿಕೊಳ್ಳಲು ಸರ್ವಲೋಕಪಿತಾಮಹ ಬ್ರಹ್ಮನು “ಹಾಗೆಯೇ ಆಗಲಿ!” ಎಂದನು.
09039029a ಸ ಲಬ್ಧ್ವಾ ತಪಸೋಗ್ರೇಣ ಬ್ರಾಹ್ಮಣತ್ವಂ ಮಹಾಯಶಾಃ|
09039029c ವಿಚಚಾರ ಮಹೀಂ ಕೃತ್ಸ್ನಾಂ ಕೃತಕಾಮಃ ಸುರೋಪಮಃ||
ಉಗ್ರತಪಸ್ಸಿನಿಂದ ಬಾಹ್ಮಣತ್ವವನ್ನು ಪಡೆದು ಆ ಮಹಾಯಶಸ್ವಿಯು ಸುರರಂತೆ ಆಸೆಯನ್ನೀಡೇರಿಸಿಕೊಂಡು ಇಡೀ ಪೃಥ್ವಿಯಲ್ಲಿ ಸಂಚರಿಸಿದನು.
09039030a ತಸ್ಮಿಂಸ್ತೀರ್ಥವರೇ ರಾಮಃ ಪ್ರದಾಯ ವಿವಿಧಂ ವಸು|
09039030c ಪಯಸ್ವಿನೀಸ್ತಥಾ ಧೇನೂರ್ಯಾನಾನಿ ಶಯನಾನಿ ಚ||
ಆ ಶ್ರೇಷ್ಠ ತೀರ್ಥದಲ್ಲಿ ರಾಮನು ವಿವಿಧ ಸಂಪತ್ತುಗಳನ್ನು – ಹಾಲುನೀಡುವ ಹಸುಗಳನ್ನೂ, ವಾಹನಗಳನ್ನೂ, ಹಾಸಿಗೆಗಳನ್ನೂ, ದಾನವನ್ನಾಗಿತ್ತನು.
09039031a ತಥಾ ವಸ್ತ್ರಾಣ್ಯಲಂಕಾರಂ ಭಕ್ಷ್ಯಂ ಪೇಯಂ ಚ ಶೋಭನಂ|
09039031c ಅದದಾನ್ಮುದಿತೋ ರಾಜನ್ಪೂಜಯಿತ್ವಾ ದ್ವಿಜೋತ್ತಮಾನ್||
ರಾಜನ್! ಹಾಗೆಯೇ ದ್ವಿಜೋತ್ತಮರನ್ನು ಪೂಜಿಸಿ ಅವನು ಶೋಭಿಸುವ ವಸ್ತ್ರಾಲಂಕಾರಗಳನ್ನೂ, ಭಕ್ಷ್ಯ-ಪಾನೀಯಗಳನ್ನೂ ಸಂತೋಷದಿಂದ ದಾನವಿತ್ತನು.
09039032a ಯಯೌ ರಾಜಂಸ್ತತೋ ರಾಮೋ ಬಕಸ್ಯಾಶ್ರಮಮಂತಿಕಾತ್|
09039032c ಯತ್ರ ತೇಪೇ ತಪಸ್ತೀವ್ರಂ ದಾಲ್ಭ್ಯೋ ಬಕ ಇತಿ ಶ್ರುತಿಃ||
ರಾಜನ್! ಅನಂತರ ರಾಮನು ಬಕನ ಆಶ್ರಮದ ಬಳಿ ಬಂದನು. ಅಲ್ಲಿ ದಾಲ್ಭ್ಯ ಬಕನು ತೀವ್ರ ತಪಸ್ಸನ್ನಾಚರಿಸಿದನು ಎಂದು ಕೇಳಿದ್ದೇವೆ.”
ಇತಿ ಶ್ರೀಮಹಾಭಾರತೇ ಶಲ್ಯಪರ್ವಣಿ ಸಾರಸ್ವತಪರ್ವಣಿ ಬಲದೇವತಿರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನೇ ಏಕೋನಚತ್ವಾರಿಂಶೋಽಧ್ಯಾಯಃ||
ಇದು ಶ್ರೀಮಹಾಭಾರತದಲ್ಲಿ ಶಲ್ಯಪರ್ವದಲ್ಲಿ ಸಾರಸ್ವತಪರ್ವದಲ್ಲಿ ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ ಎನ್ನುವ ಮೂವತ್ತೊಂಭತ್ತನೇ ಅಧ್ಯಾಯವು.
ಸಾರಸ್ವತ ಪರ್ವದ ಇತರ ಅಧ್ಯಾಯಗಳು:
- ಪಾಂಡವಾನಾಂ ಸರೋವರಾಗಮನ
- ಸುಯೋಧನಯುಧಿಷ್ಠಿರಸಂವಾದ
- ಸುಯೋಧನಯುಧಿಷ್ಠಿರಸಂವಾದ
- ಭೀಮಸೇನದುರ್ಯೋಧನಸಂವಾದ
- ಬಲದೇವಾಗಮನ
- ಬಲದೇವತೀರ್ಥಯಾತ್ರಾಯಾಂ ಪ್ರಭಾಸೋತ್ಪತ್ತಿಕಥನ
- ಬಲದೇವತೀರ್ಥಯಾತ್ರಾಯಾಂ ತ್ರಿತಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಸಾರಸ್ವತೋಪಾಖ್ಯಾನ
- ಬಲದೇವತೀರ್ಥಯಾತ್ರಾಯಾಂ ಕುಮಾರಾಭಿಷೇಕಕ್ರಮ
- ಬಲದೇವತೀರ್ಥಯಾತ್ರಾಯಾಂ ಸ್ಕಂದಾಭಿಷೇಕ
- ಬಲದೇವತೀರ್ಥಯಾತ್ರಾಯಾಂ ತಾರಕವಧ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾಯಾಂ ಬದರಪಾಚನತೀರ್ಥಕಥನ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾ
- ಬಲದೇವತೀರ್ಥಯಾತ್ರಾಯಾಂ ಕುರುಕ್ಷೇತ್ರಕಥನ
- ಬಲದೇವತೀರ್ಥಯಾತ್ರಾ