Adi Parva: Chapter 21

ಆದಿ ಪರ್ವ: ಆಸ್ತೀಕ ಪರ್ವ

೨೧

ವಿನತೆ ಮತ್ತು ಗರುಡರು ಕದ್ರು ಮತ್ತು ಸರ್ಪಗಳನ್ನು ಕೊಂಡೊಯ್ಯುತ್ತಿರುವಾಗ ಸರ್ಪಗಳು ಬಿಸಿಲಿನಿಂದ ಬಳಲುವುದು (೧-೫). ಕದ್ರುವು ಮಳೆಸುರಿಸೆಂದು ಇಂದ್ರನನ್ನು ಸ್ತುತಿಸಿದುದು (೬-೧೫).

[1]01021001 ಸೂತ ಉವಾಚ|

01021001a ತತಃ ಕಾಮಗಮಃ ಪಕ್ಷೀ ಮಹಾವೀರ್ಯೋ ಮಹಾಬಲಃ|

01021001c ಮಾತುರಂತಿಕಮಾಗಚ್ಛತ್ಪರಂ ತೀರಂ ಮಹೋದಧೇಃ||

ಸೂತನು ಹೇಳಿದನು: “ನಂತರ ಮಹಾವೀರ, ಮಹಾಬಲ, ಇಚ್ಛೆಯಿದ್ದಲ್ಲಿ ಹೋಗಬಲ್ಲ ಆ ಪಕ್ಷಿಯು ಸಾಗರದ ಇನ್ನೊಂದು ತೀರದಲ್ಲಿದ್ದ ತಾಯಿಯ ಬಳಿ ಬಂದನು.

01021002a ಯತ್ರ ಸಾ ವಿನತಾ ತಸ್ಮಿನ್ಪಣಿತೇನ ಪರಾಜಿತಾ|

01021002c ಅತೀವ ದುಃಖಸಂತಪ್ತಾ ದಾಸೀಭಾವಮುಪಾಗತಾ||

ಅಲ್ಲಿ ಪಣವನ್ನು ಸೋತು ದಾಸೀಭಾವವನ್ನು ಹೊಂದಿದ ವಿನತೆಯು ಅತೀವ ದುಃಖಸಂತಪ್ತಳಾಗಿದ್ದಳು.

01021003a ತತಃ ಕದಾಚಿದ್ವಿನತಾಂ ಪ್ರವಣಾಂ ಪುತ್ರಸನ್ನಿಧೌ|

01021003c ಕಾಲ ಆಹೂಯ ವಚನಂ ಕದ್ರೂರಿದಮಭಾಷತ||

ನಂತರ ಒಮ್ಮೆ ಕದ್ರುವು ವಿನತೆಯನ್ನು ಕರೆದು, ಪುತ್ರನ ಸನ್ನಿಧಿಯಲ್ಲಿ ನಮಸ್ಕರಿಸಿ ನಿಂತಿದ್ದ ಅವಳಿಗೆ ಹೇಳಿದಳು:

01021004a ನಾಗಾನಾಮಾಲಯಂ ಭದ್ರೇ ಸುರಮ್ಯಂ ರಮಣೀಯಕಂ|

01021004c ಸಮುದ್ರಕುಕ್ಷಾವೇಕಾಂತೇ ತತ್ರ ಮಾಂ ವಿನತೇ ವಹ||

“ಭದ್ರೇ ವಿನತೇ! ಸಮುದ್ರ ತಳದಲ್ಲಿರುವ ರಮ್ಯವೂ ರಮಣೀಯವೂ ಆದ ನಾಗಗಳ ಆಲಯದ ಏಕಾಂತಕ್ಕೆ ನನ್ನನ್ನು ಕರೆದೊಯ್ಯಿ.”

01021005a ತತಃ ಸುಪರ್ಣಮಾತಾ ತಾಮವಹತ್ಸರ್ಪಮಾತರಂ|

01021005c ಪನ್ನಗಾನ್ಗರುಡಶ್ಚಾಪಿ ಮಾತುರ್ವಚನಚೋದಿತಃ||

ಆಗ ಸುಪರ್ಣನ ಮಾತೆಯು ಸರ್ಪಗಳ ಮಾತೆಯನ್ನು ಹಾಗೂ ತಾಯಿಯ ಮಾತಿನಂತೆ ಗರುಡನು ಪನ್ನಗಗಳನ್ನೂ ಭುಜದ ಮೇಲೆ ಹೊತ್ತು ಹೊರಟರು.

01021006a ಸ ಸೂರ್ಯಸ್ಯಾಭಿತೋ ಯಾತಿ ವೈನತೇಯೋ ವಿಹಂಗಮಃ|

01021006c ಸೂರ್ಯರಶ್ಮಿಪರೀತಾಶ್ಚ ಮೂರ್ಚ್ಛಿತಾಃ ಪನ್ನಗಾಭವನ್|

01021006e ತದವಸ್ಥಾನ್ಸುತಾನ್ದೃಷ್ಟ್ವಾ ಕದ್ರೂಃ ಶಕ್ರಮಥಾಸ್ತುವತ್||

ಆ ವಿಹಂಗಮ ವೈನತೇಯನು ಸೂರ್ಯನ ಕಡೆ ಏರುತ್ತಿರುವಾಗ ಸೂರ್ಯನ ಕಿರಣಗಳು ತಾಗಿ ಪನ್ನಗಗಳೆಲ್ಲವೂ ಮೂರ್ಛಿತರಾದರು. ಮಕ್ಕಳ ಆ ಅವಸ್ಥೆಯನ್ನು ನೋಡಿ ಕದ್ರುವು ಶಕ್ರ ಇಂದ್ರನನ್ನು ಸ್ತುತಿಸಿದಳು:

01021007a ನಮಸ್ತೇ ದೇವದೇವೇಶ ನಮಸ್ತೇ ಬಲಸೂದನ|

01021007c ನಮುಚಿಘ್ನ ನಮಸ್ತೇಽಸ್ತು ಸಹಸ್ರಾಕ್ಷ ಶಚೀಪತೇ||

01021008a ಸರ್ಪಾಣಾಂ ಸೂರ್ಯತಪ್ತಾನಾಂ ವಾರಿಣಾ ತ್ವಂ ಪ್ಲವೋ ಭವ|

01021008c ತ್ವಮೇವ ಪರಮಂ ತ್ರಾಣಮಸ್ಮಾಕಮಮರೋತ್ತಮ||

01021009a ಈಶೋ ಹ್ಯಸಿ ಪಯಃ ಸ್ರಷ್ಟುಂ ತ್ವಮನಲ್ಪಂ ಪುರಂದರ|

01021009c ತ್ವಮೇವ ಮೇಘಸ್ತ್ವಂ ವಾಯುಸ್ತ್ವಮಗ್ನಿರ್ವೈದ್ಯುತೋಽಂಬರೇ||

01021010a ತ್ವಮಭ್ರಘನವಿಕ್ಷೇಪ್ತಾ ತ್ವಾಮೇವಾಹುಃ ಪುನರ್ಘನಂ|

01021010c ತ್ವಂ ವಜ್ರಮತುಲಂ ಘೋರಂ ಘೋಷವಾಂಸ್ತ್ವಂ ಬಲಾಹಕಃ||

01021011a ಸ್ರಷ್ಟಾ ತ್ವಮೇವ ಲೋಕಾನಾಂ ಸಂಹರ್ತಾ ಚಾಪರಾಜಿತಃ|

01021011c ತ್ವಂ ಜ್ಯೋತಿಃ ಸರ್ವಭೂತಾನಾಂ ತ್ವಮಾದಿತ್ಯೋ ವಿಭಾವಸುಃ||

01021012a ತ್ವಂ ಮಹದ್ಭೂತಮಾಶ್ಚರ್ಯಂ ತ್ವಂ ರಾಜಾ ತ್ವಂ ಸುರೋತ್ತಮಃ|

01021012c ತ್ವಂ ವಿಷ್ಣುಸ್ತ್ವಂ ಸಹಸ್ರಾಕ್ಷಸ್ತ್ವಂ ದೇವಸ್ತ್ವಂ ಪರಾಯಣಂ||

01021013a ತ್ವಂ ಸರ್ವಮಮೃತಂ ದೇವ ತ್ವಂ ಸೋಮಃ ಪರಮಾರ್ಚಿತಃ|

01021013c ತ್ವಂ ಮುಹೂರ್ತಸ್ತಿಥಿಶ್ಚ ತ್ವಂ ಲವಸ್ತ್ವಂ ವೈ ಪುನಃ ಕ್ಷಣಃ||

01021014a ಶುಕ್ಲಸ್ತ್ವಂ ಬಹುಲಶ್ಚೈವ ಕಲಾ ಕಾಷ್ಟಾ ತ್ರುಟಿಸ್ತಥಾ|

01021014c ಸಂವತ್ಸರರ್ತವೋ ಮಾಸಾ ರಜನ್ಯಶ್ಚ ದಿನಾನಿ ಚ||

01021015a ತ್ವಮುತ್ತಮಾ ಸಗಿರಿವನಾ ವಸುಂಧರಾ

         ಸಭಾಸ್ಕರಂ ವಿತಿಮಿರಮಂಬರಂ ತಥಾ|

01021015c ಮಹೋದಧಿಃ ಸತಿಮಿತಿಮಿಂಗಿಲಸ್ತಥಾ

         ಮಹೋರ್ಮಿಮಾನ್ಬಹುಮಕರೋ ಝಷಾಲಯಃ||

01021016a ಮಹದ್ಯಶಸ್ತ್ವಮಿತಿ ಸದಾಭಿಪೂಜ್ಯಸೇ

         ಮನೀಷಿಭಿರ್ಮುದಿತಮನಾ ಮಹರ್ಷಿಭಿಃ|

01021016c ಅಭಿಷ್ಟುತಃ ಪಿಬಸಿ ಚ ಸೋಮಮಧ್ವರೇ

         ವಷಟ್ಕೃತಾನ್ಯಪಿ ಚ ಹವೀಂಷಿ ಭೂತಯೇ||

01021017a ತ್ವಂ ವಿಪ್ರೈಃ ಸತತಮಿಹೇಜ್ಯಸೇ ಫಲಾರ್ಥಂ

         ವೇದಾಂಗೇಷ್ವತುಲಬಲೌಘ ಗೀಯಸೇ ಚ|

01021017c ತ್ವದ್ಧೇತೋರ್ಯಜನಪರಾಯಣಾ ದ್ವಿಜೇಂದ್ರಾ

         ವೇದಾಂಗಾನ್ಯಭಿಗಮಯಂತಿ ಸರ್ವವೇದೈಃ||

“ದೇವದೇವೇಶ! ನಿನಗೆ ನಮನಗಳು. ಬಲಸೂದನ! ನಿನಗೆ ನಮನಗಳು. ನಮೂಚಿಘ್ನ! ನಿನಗೆ ನಮನಗಳು. ಸಹಸ್ರಾಕ್ಷ! ಶಚೀಪತೇ! ನಿನಗೆ ನಮನಗಳು. ಮಳೆಸುರಿಸಿ ಸೂರ್ಯನಿಂದ ಸುಡುತ್ತಿರುವ ಸರ್ಪಗಳನ್ನು ಉಳಿಸು. ಅಮರೋತ್ತಮ! ನೀನೊಬ್ಬನೇ ನಮ್ಮ ಉತ್ಕೃಷ್ಟ ತ್ರಾಣ. ಪುರಂದರ! ನೀನು ಮಳೆಯ ಪ್ರಭು ಮತ್ತು ಬೇಕಾದಷ್ಟು ಮಳೆಯನ್ನು ನೀನು ಸುರಿಸಬಲ್ಲೆ. ನೀನೇ ಮೋಡ, ನೀನೇ ವಾಯು, ಮತ್ತು ಅಂಬರದಲ್ಲಿ ಬೆಳಗುವ ಮಿಂಚೂ ನೀನೇ. ಮೋಡಗಳನ್ನು ಚದುರಿಸುವವನೂ ನೀನೇ, ಮೋಡಗಳನ್ನು ಒಟ್ಟುಮಾಡುವವನೂ ನೀನೇ. ಘೋರವಾಗಿ ಗುಡುಗಿ ಘೋಷಗೈಯುವ ಮೋಡಗಳೂ ನೀನೇ. ಲೋಕಗಳನ್ನು ಸೃಷ್ಟಿಸುವವನೂ ಮತ್ತು ಸಂಹರಿಸುವವನೂ ನೀನೇ. ನೀನು ಅಪರಾಜಿತ. ಸರ್ವಭೂತಗಳಲ್ಲಿರುವ ಜ್ಯೋತಿ ನೀನು. ಮತ್ತು ನೀನೇ ಆದಿತ್ಯ, ವಿಭಾವಸು. ನೀನೊಂದು ಮಹಾ ಅದ್ಭುತ ಮತ್ತು ಆಶ್ಚರ್ಯ. ನೀನು ರಾಜ, ನೀನು ಸುರೋತ್ತಮ, ನೀನು ವಿಷ್ಣು, ನೀನು ಸಹಸ್ರಾಕ್ಷ, ನೀನು ದೇವ ಮತ್ತು ಪರಾಯಣನೂ ನೀನೇ. ದೇವ! ನಿನ್ನ ಸರ್ವವೂ ಅಮೃತ. ನೀನು ಪರಮಾರ್ಚಿತ ಸೋಮ. ಮುಹೂರ್ತ, ತಿಥಿ, ಲವ ಮತ್ತು ಕ್ಷಣ ಇವೆಲ್ಲವೂ ನೀನೇ. ಶುಕ್ಲವೂ ನೀನೇ, ಬಹುಲವೂ ನೀನೇ. ಕಾಲ, ಕಾಷ್ಠ ಮತ್ತು ತ್ರುಟಿಗಳೂ ನೀನೇ. ಸಂವತ್ಸರವೂ ನೀನೇ, ಮಾಸ, ರಾತ್ರಿ ಮತ್ತು ಹಗಲು ಕೂಡ ನೀನೇ. ಗಿರಿವನಗಳಿಂದ ಕೂಡಿದ ಉತ್ತಮ ವಸುಂಧರೆಯೂ ನೀನೇ. ಕತ್ತಲೆಯನ್ನು ದೂರಮಾಡುವ ಭಾಸ್ಕರನಿರುವ ಅಂಬರವೂ ನೀನೇ. ಮಹಾ ತಿಮಿಂಗಿಲಗಳ, ಮಕರಗಳ ಮತ್ತು ಅಂಥಹ ಇತರ ಜೀವಿಗಳ ಆಲಯ ಮಹಾ ಸಮುದ್ರವೂ ನೀನೇ. ಮುದಿತ ಮನಸ್ಕ ಮನೀಷಿ ಮಹರ್ಷಿಗಳಿಂದ ಸದಾ ಪೂಜಿಸಲ್ಪಡುತ್ತಿರುವ ಮಹಾ ಯಶಸ್ವಿ ನೀನು. ಅದ್ವರಗಳಲ್ಲಿ ವಷಟ್ಕರಣ ಮಾಡಿ ನೀಡುವ ಸೋಮದ ಹವಿಸ್ಸನ್ನು ಸೇವಿಸುವ ಅಗ್ರನು ನೀನು. ಫಲಾರ್ಥಿ ವಿಪ್ರರಿಂದ ಸತತವಾಗಿ ಯಾಜಿಸಿಕೊಳ್ಳುವವನು ನೀನು. ಅತುಲಬಲಶಾಲಿ! ವೇದಾಂಗಗಳಲ್ಲಿ ನೀನು ಕೀರ್ತಿಸಲ್ಪಟ್ಟಿದ್ದೀಯೆ ಮತ್ತು ನಿನ್ನನ್ನು ಅರಿತುಕೊಳ್ಳಲು ದ್ವಿಜೇಂದ್ರರು ಸರ್ವ ವೇದ ವೇದಾಂಗಗಳ ಪರಾಯಣ ಮಾಡುತ್ತಾರೆ.””

ಇತಿ ಶ್ರೀ ಮಹಾಭಾರತೇ ಆದಿ ಪರ್ವಣಿ ಆಸ್ತೀಕ ಪರ್ವಣಿ ಸೌಪರ್ಣೇ ಏಕವಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ಆದಿ ಪರ್ವದಲ್ಲಿ ಆಸ್ತೀಕ ಪರ್ವದಲ್ಲಿ ಸೌಪರ್ಣದಲ್ಲಿ ಇಪ್ಪತ್ತೊಂದನೆಯ ಅಧ್ಯಾಯವು.

[1] ಈ ಅಧ್ಯಾಯಕ್ಕೆ ಮೊದಲು ನೀಲಕಂಠೀಯದಲ್ಲಿ ಗರುಡನು ಅರುಣನನ್ನು ಸೂರ್ಯನ ಮುಂದೆ ಸಾರಥಿಯನ್ನಾಗಿ ಕೂರಿಸಿದುದು, ಮತ್ತು ಸೂರ್ಯನು ಜಗತ್ತನ್ನೇ ತನ್ನ ತೇಜಸ್ಸಿನಿಂದ ಸುಡಲು ಹೊರಟಿದ್ದುದನ್ನು ವಿವರಿಸುವ ಇನ್ನೊಂದು ಅಧ್ಯಾಯವಿದೆ. 

Leave a Reply

Your email address will not be published. Required fields are marked *