Adi Parva: Chapter 12

ಆದಿ ಪರ್ವ: ಪೌಲೋಮ ಪರ್ವ

೧೨

ಆಸ್ತೀಕನ ಕುರಿತು ರುರುವು ತನ್ನ ತಂದೆಯನ್ನು ಪ್ರಶ್ನಿಸುವುದು (೧-೫).

01012001 ರುರುರುವಾಚ

01012001a ಕಥಂ ಹಿಂಸಿತವಾನ್ಸರ್ಪಾನ್ ಕ್ಷತ್ರಿಯೋ ಜನಮೇಜಯ|

01012001c ಸರ್ಪಾ ವಾ ಹಿಂಸಿತಾಸ್ತಾತ ಕಿಮರ್ಥಂ ದ್ವಿಜಸತ್ತಮ||

ರುರುವು ಹೇಳಿದನು: “ದ್ವಿಜಸತ್ತಮ! ಕ್ಷತ್ರಿಯ ಜನಮೇಜಯನು ಸರ್ಪಗಳನ್ನು ಹೇಗೆ ಮತ್ತು ಯಾವ ಕಾರಣಕ್ಕಾಗಿ ಹಿಂಸಿಸಿದನು?

01012002a ಕಿಮರ್ಥಂ ಮೋಕ್ಷಿತಾಶ್ಚೈವ ಪನ್ನಗಾಸ್ತೇನ ಶಂಸ ಮೇ|

01012002c ಆಸ್ತೀಕೇನ ತದಾಚಕ್ಷ್ವ ಶ್ರೋತುಮಿಚ್ಛಾಮ್ಯಶೇಷತಃ||

ಆ ಪನ್ನಗಗಳು ಏಕೆ ಆಸ್ತೀಕನಿಂದ ರಕ್ಷಿಸಲ್ಪಟ್ಟವು ವಿವರಿಸು. ಏನನ್ನೂ ಬಿಡದೇ ಕೇಳಲು ಇಚ್ಛಿಸುತ್ತೇನೆ.”

01012003 ಋಷಿರುವಾಚ

01012003a ಶ್ರೋಷ್ಯಸಿ ತ್ವಂ ರುರೋ ಸರ್ವಮಾಸ್ತೀಕಚರಿತಂ ಮಹತ್|

0112003c ಬ್ರಾಹ್ಮಣಾನಾಂ ಕಥಯತಾಮಿತ್ಯುಕ್ತ್ವಾಂತರಧೀಯತ||

ಋಷಿಯು ಹೇಳಿದನು: “ರುರು! ಬ್ರಾಹ್ಮಣರು ಕಥೆಯನ್ನು ಹೇಳುವಾಗ ನೀನು ಮಹತ್ತರ ಆಸ್ತೀಕಚರಿತವನ್ನು ಸಂಪೂರ್ಣವಾಗಿ ಕೇಳುತ್ತೀಯೆ” ಹೀಗೆ ಹೇಳಿ ಅವನು ಅಂತರ್ಧಾನನಾದನು.”

01012004 ಸೂತ ಉವಾಚ

01012004a ರುರುಶ್ಚಾಪಿ ವನಂ ಸರ್ವಂ ಪರ್ಯಧಾವತ್ಸಮಂತತಃ|

01012004c ತಂ ಋಷಿಂ ದ್ರಷ್ಟುಮನ್ವಿಚ್ಛನ್ಸಂಶ್ರಾಂತೋ ನ್ಯಪತದ್ಭುವಿ||

ಸೂತನು ಹೇಳಿದನು: “ರುರುವು ಆ ಋಷಿಗಾಗಿ ವನವನ್ನೆಲ್ಲಾ ಹುಡುಕಿದನು. ಹುಡುಕಾಡಿ ಬಳಲಿದ ಅವನು ಮೂರ್ಛಿತನಾಗಿ ನೆಲದ ಮೇಲೆ ಬಿದ್ದನು.

01012005a ಲಬ್ಧಸಂಜ್ಞೋ ರುರುಶ್ಚಾಯಾತ್ತಚ್ಚಾಚಖ್ಯೌ ಪಿತುಸ್ತದಾ|

01012005c ಪಿತಾ ಚಾಸ್ಯ ತದಾಖ್ಯಾನಂ ಪೃಷ್ಟಃ ಸರ್ವಂ ನ್ಯವೇದಯತ್||

ಎಚ್ಚೆತ್ತ ರುರುವು ತನ್ನ ತಂದೆಗೆ ಆ ಕಥೆಯನ್ನು ಹೇಳಲು ಕೇಳಿಕೊಂಡನು. ಆಗ ಅವನ ತಂದೆಯು ಆ ಕಥೆಯನ್ನು ಸಂಪೂರ್ಣವಾಗಿ ಹೇಳಿದನು.”

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಪೌಲೋಮಪರ್ವಣಿ ಸರ್ಪಸತ್ರಪ್ರಸ್ತಾವನೋ ನಾಮ ದ್ವಾದಶೋಽಧ್ಯಾಯಃ||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಪೌಲೋಮಪರ್ವದಲ್ಲಿ ಸರ್ಪಸತ್ರಪಸ್ತಾವನವೆಂಬ ಹನ್ನೆರಡನೆಯ ಅಧ್ಯಾಯವು.

ಇತಿ ಶ್ರೀ ಮಹಾಭಾರತೇ ಆದಿಪರ್ವಣಿ ಪೌಲೋಮಪರ್ವಃ||

ಇದು ಶ್ರೀ ಮಹಾಭಾರತದಲ್ಲಿ ಆದಿಪರ್ವದಲ್ಲಿ ಪೌಲೋಮಪರ್ವವು.

ಇದೂವರೆಗಿನ ಒಟ್ಟು ಮಹಾಪರ್ವಗಳು-೦/೧೮, ಉಪಪರ್ವಗಳು-೪/೧೦೦, ಅಧ್ಯಾಯಗಳು-೧೨/೧೯೯೫, ಶ್ಲೋಕಗಳು-೭೯೮/೭೩೭೮೪

Leave a Reply

Your email address will not be published. Required fields are marked *