ಪರ್ವಸಂಗ್ರಹ
ನೈಮಿಷಾರಣ್ಯವಾಸೀ ಋಷಿಗಳಿಗೆ ಸೂತ ಉಗ್ರಶ್ರವನು ವ್ಯಾಸನು ರಚಿಸಿದ ಮಹಾಭಾರತದ ೧೦೦ ಉಪಪರ್ವಗಳ ಹೆಸರುಗಳ ಪರ್ವಸಂಗ್ರಹವನ್ನು ಹೇಳಿದುದು [ಆದಿಪರ್ವ, ಪರ್ವಸಂಗ್ರಹ ಪರ್ವ, ಅಧ್ಯಾಯ ೨, ಶ್ಲೋಕ ೩೪-೭೧].
[1]01002034a ಪರ್ವಾನುಕ್ರಮಣೀ ಪೂರ್ವಂ ದ್ವಿತೀಯಂ ಪರ್ವಸಂಗ್ರಹಃ|
01002034c ಪೌಷ್ಯಂ ಪೌಲೋಮಮಾಸ್ತೀಕಮಾದಿವಂಶಾವತಾರಣಂ[2]||
01002035a ತತಃ ಸಂಭವಪರ್ವೋಕ್ತಮದ್ಭುತಂ ದೇವನಿರ್ಮಿತಂ|
01002035c ದಾಹೋ ಜತುಗೃಹಸ್ಯಾತ್ರ ಹೈಡಿಂಬಂ ಪರ್ವ ಚೋಚ್ಯತೇ||
01002036a ತತೋ ಬಕವಧಃ ಪರ್ವ ಪರ್ವ ಚೈತ್ರರಥಂ ತತಃ|
01002036c ತತಃ ಸ್ವಯಂವರಂ ದೇವ್ಯಾಃ ಪಾಂಚಾಲ್ಯಾಃ ಪರ್ವ ಚೋಚ್ಯತೇ||
01002037a ಕ್ಷತ್ರಧರ್ಮೇಣ ನಿರ್ಜಿತ್ಯ ತತೋ ವೈವಾಹಿಕಂ ಸ್ಮೃತಂ|
01002037c ವಿದುರಾಗಮನಂ ಪರ್ವ ರಾಜ್ಯಲಂಭಸ್ತಥೈವ ಚ||
01002038a ಅರ್ಜುನಸ್ಯ ವನೇ ವಾಸಃ ಸುಭದ್ರಾಹರಣಂ ತತಃ|
01002038c ಸುಭದ್ರಾಹರಣಾದೂರ್ಧ್ವಂ ಜ್ಞೇಯಂ ಹರಣಹಾರಿಕಂ||
01002039a ತತಃ ಖಾಂಡವದಾಹಾಖ್ಯಂ ತತ್ರೈವ ಮಯದರ್ಶನಂ|
01002039c ಸಭಾಪರ್ವ ತತಃ ಪ್ರೋಕ್ತಂ ಮಂತ್ರಪರ್ವ ತತಃ ಪರಂ||
01002040a ಜರಾಸಂದವಧಃ ಪರ್ವ ಪರ್ವ ದಿಗ್ವಿಜಯಸ್ತಥಾ|
01002040c ಪರ್ವ ದಿಗ್ವಿಜಯಾದೂರ್ಧ್ವಂ ರಾಜಸೂಯಿಕಮುಚ್ಯತೇ||
01002041a ತತಶ್ಚಾರ್ಘಾಭಿಹರಣಂ ಶಿಶುಪಾಲವಧಸ್ತತಃ|
01002041c ದ್ಯೂತಪರ್ವ ತತಃ ಪ್ರೋಕ್ತಮನುದ್ಯೂತಮತಃ ಪರಂ||
01002042a ತತ ಆರಣ್ಯಕಂ ಪರ್ವ ಕಿರ್ಮೀರವಧ ಏವ ಚ|
[3]01002042c ಈಶ್ವರಾರ್ಜುನಯೋರ್ಯುದ್ಧಂ ಪರ್ವ ಕೈರಾತಸಂಜ್ಞಿತಂ||
01002043a ಇಂದ್ರಲೋಕಾಭಿಗಮನಂ ಪರ್ವ ಜ್ಞೇಯಮತಃ ಪರಂ|
[4]01002043c ತೀರ್ಥಯಾತ್ರಾ ತತಃ ಪರ್ವ ಕುರುರಾಜಸ್ಯ ಧೀಮತಃ||
01002044a ಜಟಾಸುರವಧಃ ಪರ್ವ ಯಕ್ಷಯುದ್ಧಮತಃ ಪರಂ|
01002044c ತಥೈವಾಜಗರಂ ಪರ್ವ ವಿಜ್ಞೇಯಂ ತದನಂತರಂ||[5]
01002045a ಮಾರ್ಕಂಡೇಯಸಮಸ್ಯಾ ಚ ಪರ್ವೋಕ್ತಂ ತದನಂತರಂ|
01002045c ಸಂವಾದಶ್ಚ ತತಃ ಪರ್ವ ದ್ರೌಪದೀಸತ್ಯಭಾಮಯೋಃ||
01002046a ಘೋಷಯಾತ್ರಾ ತತಃ ಪರ್ವ ಮೃಗಸ್ವಪ್ನಭಯಂ[6] ತತಃ|
01002046c ವ್ರೀಹಿದ್ರೌಣಿಕಮಾಖ್ಯಾನಂ ತತೋಽನಂತರಮುಚ್ಯತೇ||[7]
01002047a ದ್ರೌಪದೀಹರಣಂ ಪರ್ವ ಸೈಂಧವೇನ ವನಾತ್ತತಃ|
[8]01002047c ಕುಂಡಲಾಹರಣಂ ಪರ್ವ ತತಃ ಪರಮಿಹೋಚ್ಯತೇ||
01002048a ಆರಣೇಯಂ ತತಃ ಪರ್ವ ವೈರಾಟಂ ತದನಂತರಂ|
[9]01002048c ಕೀಚಕಾನಾಂ ವಧಃ ಪರ್ವ ಪರ್ವ ಗೋಗ್ರಹಣಂ ತತಃ||
01002049a ಅಭಿಮನ್ಯುನಾ ಚ ವೈರಾಟ್ಯಾಃ ಪರ್ವ ವೈವಾಹಿಕಂ ಸ್ಮೃತಂ|
01002049c ಉದ್ಯೋಗಪರ್ವ ವಿಜ್ಞೇಯಮತಊರ್ಧ್ವಂ ಮಹಾದ್ಭುತಂ||
01002050a ತತಃ ಸಂಜಯಯಾನಾಖ್ಯಂ ಪರ್ವ ಜ್ಞೇಯಮತಃ ಪರಂ|
01002050c ಪ್ರಜಾಗರಂ ತತಃ ಪರ್ವ ಧೃತರಾಷ್ಟ್ರಸ್ಯ ಚಿಂತಯಾ||
01002051a ಪರ್ವ ಸಾನತ್ಸುಜಾತಂ ಚ ಗುಹ್ಯಮಧ್ಯಾತ್ಮದರ್ಶನಂ|
01002051c ಯಾನಸಂದಿಸ್ತತಃ ಪರ್ವ ಭಗವದ್ಯಾನಮೇವ ಚ||
[10]01002052a ಜ್ಞೇಯಂ ವಿವಾದಪರ್ವಾತ್ರ ಕರ್ಣಸ್ಯಾಪಿ ಮಹಾತ್ಮನಃ|
01002052c ನಿರ್ಯಾಣಂ ಪರ್ವ ಚ ತತಃ ಕುರುಪಾಂಡವಸೇನಯೋಃ||
01002053a ರಥಾತಿರಥಸಂಖ್ಯಾ ಚ ಪರ್ವೋಕ್ತಂ ತದನಂತರಂ|
01002053c ಉಲೂಕದೂತಾಗಮನಂ ಪರ್ವಾಮರ್ಷವಿವರ್ಧನಂ||
01002054a ಅಂಬೋಪಾಖ್ಯಾನಮಪಿ ಚ ಪರ್ವ ಜ್ಞೇಯಮತಃ ಪರಂ|
01002054c ಭೀಷ್ಮಾಭಿಷೇಚನಂ ಪರ್ವ ಜ್ಞೇಯಮದ್ಭುತಕಾರಣಂ||
01002055a ಜಂಬೂಖಂಡವಿನಿರ್ಮಾಣಂ ಪರ್ವೋಕ್ತಂ ತದನಂತರಂ|
01002055c ಭೂಮಿಪರ್ವ ತತೋ ಜ್ಞೇಯಂ ದ್ವೀಪವಿಸ್ತರಕೀರ್ತನಂ||
01002056a ಪರ್ವೋಕ್ತಂ ಭಗವದ್ಗೀತಾ ಪರ್ವ ಭೀಷ್ಮವಧಸ್ತತಃ|
01002056c ದ್ರೋಣಾಭಿಷೇಕಃ ಪರ್ವೋಕ್ತಂ ಸಂಶಪ್ತಕವಧಸ್ತತಃ||
01002057a ಅಭಿಮನ್ಯುವಧಃ ಪರ್ವ ಪ್ರತಿಜ್ಞಾಪರ್ವ ಚೋಚ್ಯತೇ|
01002057c ಜಯದ್ರಥವಧಃ ಪರ್ವ ಘಟೋತ್ಕಚವಧಸ್ತತಃ||
01002058a ತತೋ ದ್ರೋಣವಧಃ ಪರ್ವ ವಿಜ್ಞೇಯಂ ಲೋಮಹರ್ಷಣಂ|
01002058c ಮೋಕ್ಷೋ ನಾರಾಯಣಾಸ್ತ್ರಸ್ಯ ಪರ್ವಾನಂತರಮುಚ್ಯತೇ||
01002059a ಕರ್ಣಪರ್ವ ತತೋ ಜ್ಞೇಯಂ ಶಲ್ಯಪರ್ವ ತತಃ ಪರಂ|
01002059c ಹ್ರದಪ್ರವೇಶನಂ ಪರ್ವ ಗದಾಯುದ್ಧಮತಃ ಪರಂ||
01002060a ಸಾರಸ್ವತಂ ತತಃ ಪರ್ವ ತೀರ್ಥವಂಶಗುಣಾನ್ವಿತಂ|
01002060c ಅತ ಊರ್ಧ್ವಂ ತು ಬೀಭತ್ಸಂ ಪರ್ವ ಸೌಪ್ತಿಕಮುಚ್ಯತೇ||
01002061a ಐಷೀಕಂ ಪರ್ವ ನಿರ್ದಿಷ್ಠಮತ ಊರ್ಧ್ವಂ ಸುದಾರುಣಂ|
01002061c ಜಲಪ್ರದಾನಿಕಂ ಪರ್ವ ಸ್ತ್ರೀಪರ್ವ ಚ ತತಃ ಪರಂ||
01002062a ಶ್ರಾದ್ಧಪರ್ವ ತತೋ ಜ್ಞೇಯಂ ಕುರೂಣಾಮೌರ್ಧ್ವದೇಹಿಕಂ|
01002062c ಆಭಿಷೇಚನಿಕಂ ಪರ್ವ ಧರ್ಮರಾಜಸ್ಯ ಧೀಮತಃ||
01002063a ಚಾರ್ವಾಕನಿಗ್ರಹಃ ಪರ್ವ ರಕ್ಷಸೋ ಬ್ರಹ್ಮರೂಪಿಣಃ|
01002063c ಪ್ರವಿಭಾಗೋ ಗೃಹಾಣಾಂ ಚ ಪರ್ವೋಕ್ತಂ ತದನಂತರಂ||
01002064a ಶಾಂತಿಪರ್ವ ತತೋ ಯತ್ರ ರಾಜಧರ್ಮಾನುಕೀರ್ತನಂ|
01002064c ಆಪದ್ಧರ್ಮಶ್ಚ ಪರ್ವೋಕ್ತಂ ಮೋಕ್ಷಧರ್ಮಸ್ತತಃ ಪರಂ||
[11]01002065a ತತಃ ಪರ್ವ ಪರಿಜ್ಞೇಯಂ ಆನುಶಾಸನಿಕಂ ಪರಂ|
01002065c ಸ್ವರ್ಗಾರೋಹಣಿಕಂ ಪರ್ವ ತತೋ ಭೀಷ್ಮಸ್ಯ ಧೀಮತಃ||
01002066a ತತೋಽಶ್ವಮೇಧಿಕಂ ಪರ್ವ ಸರ್ವಪಾಪಪ್ರಣಾಶನಂ|
01002066c ಅನುಗೀತಾ ತತಃ ಪರ್ವ ಜ್ಞೇಯಮಧ್ಯಾತ್ಮವಾಚಕಂ||
01002067a ಪರ್ವ ಚಾಶ್ರಮವಾಸಾಖ್ಯಂ ಪುತ್ರದರ್ಶನಮೇವ ಚ|
01002067c ನಾರದಾಗಮನಂ ಪರ್ವ ತತಃ ಪರಮಿಹೋಚ್ಯತೇ||
01002068a ಮೌಸಲಂ ಪರ್ವ ಚ ತತೋ ಘೋರಂ ಸಮನುವರ್ಣ್ಯತೇ|
01002068c ಮಹಾಪ್ರಸ್ಥಾನಿಕಂ ಪರ್ವ ಸ್ವರ್ಗಾರೋಹಣಿಕಂ ತತಃ||
01002069a ಹರಿವಂಶಸ್ತತಃ ಪರ್ವ ಪುರಾಣಂ ಖಿಲಸಂಜ್ಞಿತಂ|
[12]01002069c ಭವಿಷ್ಯತ್ಪರ್ವ ಚಾಪ್ಯುಕ್ತಂ ಖಿಲೇಷ್ವೇವಾದ್ಭುತಂ ಮಹತ್||
ಮಹಾಭಾರತದ ಪರ್ವಸಂಗ್ರಹವು ಈ ರೀತಿಯಿದೆ: (೧) ಅನುಕ್ರಮಣಿಕಾ ಪರ್ವ (೨) ಪರ್ವಸಂಗ್ರಹ ಪರ್ವ (೩) ಪೌಷ್ಯ ಪರ್ವ (೪) ಪೌಲೋಮ ಪರ್ವ (೫) ಆಸ್ತೀಕಪರ್ವ (೬) ಆದಿವಂಶಾವತರಣ ಪರ್ವ (೭) ಸಂಭವ ಪರ್ವ (೮) ಜತುಗೃಹ ಪರ್ವ (೯) ಹಿಡಿಂಬ ಪರ್ವ (೧೦) ಬಕವಧ ಪರ್ವ (೧೧) ಚೈತ್ರರಥ ಪರ್ವ (೧೨) ಸ್ವಯಂವರ ಪರ್ವ (೧೩) ವೈವಾಹಿಕ ಪರ್ವ (೧೪) ವಿದುರಾಗಮನ ಪರ್ವ (೧೫) ರಾಜ್ಯಲಂಭ ಪರ್ವ (೧೬) ಅರ್ಜುನವನವಾಸ ಪರ್ವ (೧೭) ಸುಭದ್ರಾಹರಣ ಪರ್ವ (೧೮) ಹರಣಹಾರಿಕ ಪರ್ವ (೧೯) ಖಾಂಡವದಾಹ ಪರ್ವ (೨೦) ಸಭಾಪರ್ವ (೨೧) ಮಂತ್ರಪರ್ವ (೨೨) ಜರಾಸಂಧವಧ ಪರ್ವ (೨೩) ದಿಗ್ವಿಜಯ ಪರ್ವ (೨೪) ರಾಜಸೂಯಿಕ ಪರ್ವ (೨೫) ಅರ್ಘ್ಯಾಭಿಹರಣ ಪರ್ವ (೨೬) ಶಿಶುಪಾಲವಧ ಪರ್ವ (೨೭) ದ್ಯೂತಪರ್ವ (೨೮) ಅನುದ್ಯೂತ ಪರ್ವ (೨೯) ಆರಣ್ಯಕ ಪರ್ವ (೩೦) ಕಿರ್ಮೀರವಧ ಪರ್ವ (೩೧) ಕೈರಾತಪರ್ವ (೩೨) ಇಂದ್ರಲೋಕಾಭಿಗಮನ ಪರ್ವ (೩೩) ತೀರ್ಥಯಾತ್ರಾಪರ್ವ (೩೪) ಜಟಾಸುರವಧ ಪರ್ವ (೩೫) ಯಕ್ಷಯುದ್ಧ ಪರ್ವ (೩೬) ಅಜಗರಪರ್ವ (೩೭) ಮಾರ್ಕಂಡೇಯಸಮಸ್ಯ ಪರ್ವ (೩೮) ದ್ರೌಪದೀಸತ್ಯಭಾಮಾಸಂವಾದ ಪರ್ವ (೩೯) ಘೋಷಯಾತ್ರಾ ಪರ್ವ (೪೦) ಮೃಗಸ್ವಪ್ನಭಯ ಪರ್ವ (೪೧) ವ್ರೀಹಿದ್ರೌಣಿಕ ಪರ್ವ (೪೨) ದ್ರೌಪದೀಹರಣ ಪರ್ವ (೪೩) ಕುಂಡಲಾಹರಣ ಪರ್ವ (೪೪) ಆರಣೇಯ ಪರ್ವ (೪೫) ವೈರಾಟ ಪರ್ವ (೪೬) ಕೀಚಕವಧ ಪರ್ವ (೪೭) ಗೋಗ್ರಹಣ ಪರ್ವ (೪೮) ವೈವಾಹಿಕ ಪರ್ವ (೪೯) ಉದ್ಯೋಗಪರ್ವ (೫೦) ಸಂಜಯಯಾನ ಪರ್ವ (೫೧) ಪ್ರಜಾಗರ ಪರ್ವ (೫೨) ಸನತ್ಸುಜಾತ ಪರ್ವ (೫೩) ಯಾನಸಂಧಿ ಪರ್ವ (೫೪) ಭಗವದ್ಯಾನ ಪರ್ವ (೫೫) ಕರ್ಣ ವಿವಾದಪರ್ವ (೫೬) ನಿರ್ಯಾಣ ಪರ್ವ (೫೭) ರಥಾಥಿರಥಸಂಖ್ಯಾ ಪರ್ವ (೫೮) ಉಲೂಕದೂತಾಗಮನ ಪರ್ವ (೫೯) ಅಂಬೋಪಾಖ್ಯಾನ ಪರ್ವ (೬೦) ಭೀಷ್ಮಾಭಿಷೇಚನ ಪರ್ವ (೬೧) ಜಂಬೂಖಂಡ ವಿನಿರ್ಮಾಣ ಪರ್ವ (೬೨) ಭೂಮಿ ಪರ್ವ (೬೩) ಭಗವದ್ಗೀತಾ ಪರ್ವ (೬೪) ಭೀಷ್ಮವಧ ಪರ್ವ (೬೫) ದ್ರೋಣಾಭಿಷೇಕ ಪರ್ವ (೬೬) ಸಂಶಪ್ತಕವಧ ಪರ್ವ (೬೭) ಅಭಿಮನ್ಯುವಧ ಪರ್ವ (೬೮) ಪ್ರತಿಜ್ಞಾ ಪರ್ವ (೬೯) ಜಯದ್ರಥವಧ ಪರ್ವ (೭೦) ಘಟೋತ್ಕಚವಧ ಪರ್ವ (೭೧) ದ್ರೋಣವಧ ಪರ್ವ (೭೨) ನಾರಾಯಣಾಸ್ತ್ರಮೋಕ್ಷ ಪರ್ವ (೭೩) ಕರ್ಣ ಪರ್ವ (೭೪) ಶಲ್ಯ ಪರ್ವ (೭೫) ಹೃದಪ್ರವೇಶ ಪರ್ವ (೭೬) ಸಾರಸ್ವತ ಪರ್ವ (೭೭) ಗದಾಯುದ್ಧ ಪರ್ವ (೭೮) ಸೌಪ್ತಿಕ ಪರ್ವ (೭೯) ಐಷೀಕ ಪರ್ವ (೮೦) ಜಲಪ್ರದಾನಿಕ ಪರ್ವ (೮೧) ಸ್ತ್ರೀ ಪರ್ವ (೮೨) ಶ್ರಾದ್ಧ ಪರ್ವ (೮೩) ಅಭಿಷೇಚನಿಕ ಪರ್ವ (೮೪) ಚಾರ್ವಾಕನಿಗ್ರಹ ಪರ್ವ (೮೫) ಗೃಹಪ್ರವಿಭಾಗ ಪರ್ವ (೮೬) ರಾಜಧರ್ಮ ಪರ್ವ (೮೭) ಆಪದ್ಧರ್ಮ ಪರ್ವ (೮೮) ಮೋಕ್ಷಧರ್ಮ ಪರ್ವ (೮೯) ಅನುಶಾಸನ ಪರ್ವ (೯೦) ಭೀಷ್ಮಸ್ವರ್ಗಾರೋಹಣ ಪರ್ವ (೯೧) ಅಶ್ವಮೇಧಿಕ ಪರ್ವ (೯೨) ಅನುಗೀತಾ ಪರ್ವ (೯೩) ಆಶ್ರಮವಾಸಿಕ ಪರ್ವ (೯೪) ಪುತ್ರದರ್ಶನಪರ್ವ (೯೫) ನಾರದಾಗಮನ ಪರ್ವ (೯೬) ಮೌಸಲ ಪರ್ವ (೯೭) ಮಹಾಪ್ರಸ್ಥಾನಿಕ ಪರ್ವ (೯೮) ಸ್ವರ್ಗಾರೋಹಣ ಪರ್ವ (೯೯) ಹರಿವಂಶ ಪರ್ವ (೧೦೦) ಭವಿಷ್ಯ ಪರ್ವ[13].
01002070a ಏತತ್ಪರ್ವಶತಂ ಪೂರ್ಣಂ ವ್ಯಾಸೇನೋಕ್ತಂ ಮಹಾತ್ಮನಾ|
01002070c ಯಥಾವತ್ಸೂತಪುತ್ರೇಣ ಲೋಮಹರ್ಷಣಿನಾ ಪುನಃ||
01002071a ಕಥಿತಂ ನೈಮಿಷಾರಣ್ಯೇ ಪರ್ವಾಣ್ಯಷ್ಟಾದಶೈವ ತು|
01002071c ಸಮಾಸೋ ಭಾರತಸ್ಯಾಯಂ ತತ್ರೋಕ್ತಃ ಪರ್ವಸಂಗ್ರಹಃ||
ಹೀಗೆ ಮಹಾತ್ಮ ವ್ಯಾಸನು ಸಂಪೂರ್ಣವಾಗಿ ಒಂದು ನೂರು ಪರ್ವಗಳನ್ನು ರಚಿಸಿದ್ದಾನೆ. ನಂತರ ನೈಮಿಷಾರಣ್ಯದಲ್ಲಿ ಸೂತಪುತ್ರ ಲೋಮಹರ್ಷಣನು ಇದನ್ನೇ ೧೮ ಪರ್ವಗಳಲ್ಲಿ ಹೇಳಿದನು. ಅವನು ಹೇಳಿದ ಪರ್ವಗಳ ವಿಷಯ ಸಾರಾಂಶವು ಈ ರೀತಿ ಇದೆ.
[1] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕಾರ್ಧವಿದೆ: ಭಾರತಸ್ಯೇತಿಹಾಸಸ್ಯ ಶ್ರೂಯತಾಂ ಪರ್ವಸಂಗ್ರಹಃ| ಅರ್ಥಾತ್: ಭಾರತ ಇತಿಹಾಸದ ಪರ್ವಸಂಗ್ರಹವನ್ನು ಕೇಳಿರಿ.
[2] ನೀಲಕಂಠೀಯದಲ್ಲಿ ಪೌಷ್ಯಂಪೌಲೋಮಮಾಸ್ತೀಕಮಾದಿರಂಶಾವತಾರಣಂ ಎಂದಿದ್ದು ವಂಶಾವತಾರಣಕ್ಕೆ ಬದಲಾಗಿ ಅಂಶಾವತಾರಣ ಪರ್ವ ಎಂದು ಹೇಳುತ್ತದೆ.
[3] ನೀಲಕಂಠೀಯದಲ್ಲಿ ಅರ್ಜುನಸ್ಯಾಭಿಗಮನಂ ಪರ್ವ ಜ್ಞೇಯಮತಃ ಪರಂ| ಎಂದಿದ್ದು ಕಿರಾತಪರ್ವಕ್ಕೆ ಮೊದಲು ಅರ್ಜುನಾಭಿಗಮನ ಪರ್ವವಿದೆಯೆಂದು ಹೇಳುತ್ತದೆ.
[4] ನೀಲಕಂಠೀಯದಲ್ಲಿ ನಲೋಪಾಖ್ಯಾನಮಪಿ ಚ ಧಾರ್ಮಿಕಂ ಕರುಣೋದಯಂ| ಎಂದಿದ್ದು ತೀರ್ಥಯಾತ್ರಾಪರ್ವಕ್ಕೆ ಮೊದಲು ನಲೋಪಾಖ್ಯಾನ ಪರ್ವವಿದೆಯೆಂದು ಹೇಳುತ್ತದೆ.
[5] ನೀಲಕಂಠೀಯದಲ್ಲಿ ನಿವಾತಕವಚೈರ್ಯುದ್ಧಂ ಪರ್ವ ಚಾಜಗರಂ ತತಃ| ಎಂದಿದ್ದು ಅಜಗರಪರ್ವಕ್ಕೆ ಮೊದಲು ನಿವಾತಕವಚಯುದ್ಧ ಪರ್ವವಿದೆಯೆಂದು ಹೇಳುತ್ತದೆ.
[6] ನೀಲಕಂಠೀಯದಲ್ಲಿ ಮೃಗಸ್ವಪ್ನೋದ್ಭವ ಎಂದಿದೆ.
[7] ನೀಲಕಂಠೀಯದಲ್ಲಿ ವ್ರೀಹಿದ್ರೌಣಿಕಮಾಖ್ಯಾನಮೈಂದ್ರದ್ಯುಮ್ನಂ ತಥೈವ ಚ| ಎಂದಿದ್ದು ದ್ರೌಪದೀಹರಣಪರ್ವಕ್ಕೆ ಮೊದಲು ಇಂದ್ರದ್ಯುಮ್ನಪರ್ವವಿದೆಯೆಂದು ಹೇಳುತ್ತದೆ.
[8] ನೀಲಕಂಠೀಯದಲ್ಲಿ ದ್ರೌಪದೀಹರಣಂ ಪರ್ವಂ ಜಯದ್ರಥವಿಮೋಕ್ಷಣಂ| ಪತಿವ್ರತಾಯಾ ಮಾಹಾತ್ಮ್ಯಂ ಸಾವಿತ್ರ್ಯಾಶ್ಚೈವಮದ್ಭುತಂ| ರಾಮೋಪಾಖ್ಯಾನಮತ್ರೈವ ಪರ್ವ ಶ್ರೇಯಮತಃ ಪರಂ|| ಎಂದಿದ್ದು ಕುಂಡಲಹರಣ ಪರ್ವಕ್ಕೆ ಮೊದಲು ಪತಿವ್ರತಾಮಹಾತ್ಮೆ ಮತ್ತು ರಾಮೋಪಾಖ್ಯಾನಪರ್ವಗಳಿವೆಯೆಂದು ಹೇಳುತ್ತದೆ.
[9] ನೀಲಕಂಠೀಯದಲ್ಲಿ ಪಾಂಡವಾನಾಂ ಪ್ರವೇಶಶ್ಚ ಸಮಯಸ್ಯ ಚ ಪಾಲನಂ| ಎಂದಿದ್ದು ಕೀಚಕವಧ ಪರ್ವಕ್ಕೆ ಮೊದಲು ಪಾಂಡವ ಪ್ರವೇಶ ಮತ್ತು ಸಮಯಪಾಲನಪರ್ವಗಳಿವೆಯೆಂದು ಹೇಳುತ್ತದೆ.
[10] ಇದಕ್ಕೆ ಮೊದಲು ನೀಲಕಂಠೀಯದಲ್ಲಿ ಈ ಶ್ಲೋಕಗಳಿವೆ: ಮಾತಲೀಯಮುಖ್ಯಾನಂ ಚರಿತಂ ಗಾಲವಸ್ಯ ಚ| ಸಾವಿತ್ರಂ ವಾಮದೇವಂ ಚ ವೈನ್ಯೋಪಾಖ್ಯಾನಮೇವ ಚ| ಜಾಮದಗ್ನಮುಖ್ಯಾನಂ ಪರ್ವ ಷೋಡಶರಾಜಿಕಂ| ಸಭಾಪ್ರವೇಶಃ ಕೃಷ್ಣಸ್ಯ ವಿದುಲಾಪುತ್ರಶಾಸನಂ| ಉದ್ಯೋಗಃ ಸೈನ್ಯನಿರ್ಯಾಣಂ ವಿಶ್ವೋಪಾಖ್ಯಾನವೇವ ಚ| ಅರ್ಥಾತ್: ಇದರಲ್ಲಿ ಮಾತಲಿಯ ಉಪಾಖ್ಯಾನ, ಗಾಲವ ಚರಿತ, ಸಾವಿತ್ರಿ, ವಾಮದೇವ ಮತ್ತು ವೈನ್ಯರ ಉಪಾಖ್ಯಾನಗಳಿವೆ. ಜಮದಗ್ನಿ ಮತ್ತು ಹದಿನಾರು ರಾಜರ ಉಪಾಖ್ಯಾನಗಳೂ ಇವೆ. ಶ್ರೀಕೃಷ್ಣನ ಸಭಾಪ್ರವೇಶ, ವಿದುಲೆಯು ತನ್ನ ಮಗನಿಗೆ ಮಾಡಿದ ಉಪದೇಶ, ಯುದ್ಧೋದ್ಯೋಗ, ಸೈನ್ಯನಿರ್ಯಾಣ ಮತ್ತು ವಿಶ್ವೋಪಾಖ್ಯಾನಗಳೂ ಕ್ರಮಶಃ ಇಲ್ಲಿ ಹೇಳಲ್ಪಟ್ಟಿವೆ.
[11] ನೀಲಕಂಠೀಯದಲ್ಲಿ ಇದಕ್ಕೆ ಮೊದಲು ಶುಕಪ್ರಶ್ನಾಭಿಗಮನಂ ಬ್ರಹ್ಮಪ್ರಶ್ನಾನುಶಾಸನಂ| ಪ್ರಾದುರ್ಭಾವಶ್ಚ ದುರ್ವಾಸಃ ಸಂವಾದಶ್ಚೈವ ಮಾಯಯಾ|| ಎಂದಿದ್ದು ಅನುಶಾಸನಿಕ ಪರ್ವಕ್ಕೆ ಮೊದಲು ಶುಕಪ್ರಶ್ನಾಭಿಗಮನ, ಬ್ರಹ್ಮಪ್ರಶ್ನಾನುಶಾಸನ, ದುರ್ವಾಸ ಪ್ರಾದುರ್ಭವ ಮತ್ತು ಮಾಯಾಸಂವಾದವೆನ್ನುವ ಪರ್ವಗಳಿವೆಯೆಂದು ಹೇಳುತ್ತದೆ.
[12] ನೀಲಕಂಠೀಯದಲ್ಲಿ ಇದಕ್ಕೆ ಮೊದಲು ಈ ಶ್ಲೋಕಾರ್ಧವಿದೆ: ವಿಷ್ಣುಪರ್ವಂ ಶಿಶೋಶ್ಚರ್ಯಾಂ ವಿಷ್ಣೋಃ ಕಂಸವಧಸ್ತಥಾ| ಅರ್ಥಾತ್: ಇದರಲ್ಲಿ ವಿಷ್ಣುಪರ್ವ, ಕೃಷ್ಣನ ಬಾಲಲೀಲೆಗಳು ಮತ್ತು ವಿಷ್ಣುವಿನಿಂದ ಕಂಸವಧೆ ಇವುಗಳ ವಿವರಣೆಯಿದೆ.
[13] ಪುಣೆಯ ವಿಶೇಷ ಸಂಪುಟಕ್ಕೂ ನೀಲಕಂಠೀಯಕ್ಕೂ ಮಹಾಭಾರತದಲ್ಲಿರುವ ಉಪಪರ್ವಗಳ ಪಟ್ಟಿಯಲ್ಲಿ ವ್ಯತ್ಯಾಸಗಳಿವೆ. ನೀಲಕಂಠೀಯದಲ್ಲಿ ಈ ೧೦೦ ಉಪ ಪರ್ವಗಳ ಹೆಸರುಗಳು ಈ ಕೆಳಗಿನಂತಿವೆ. ಕರ್ಣ ಮತ್ತು ಶಲ್ಯ ಪರ್ವಗಳು ಹಾಗೂ ಹರಿವಂಶ ಮತ್ತು ಭವಿಷ್ಯಪರ್ವಗಳನ್ನು ನೀಲಕಂಠೀಯ ಸಂಪುಟವು ಉಪಪರ್ವಗಳೆಂದು ಪರಿಗಣಿಸುವುದಿಲ್ಲವೆನ್ನುವುದನ್ನು ಇಲ್ಲಿ ಗಮನಿಸಬೇಕು. (೧) ಅನುಕ್ರಮಣಿಕಾ (೨) ಪರ್ವಸಂಗ್ರಹ (೩) ಪೌಷ್ಯ (೪) ಪೌಲೋಮ (೫) ಆಸ್ತೀಕ (೬) ಆದಿ-ವಂಶಾವತರಣ (೭) ಸಂಭವ (೮) ಜತುಗೃಹದಾಹ (೯) ಹಿಂಡಿಂಬವಧ (೧೦) ಬಕವಧ (೧೧) ಚೈತ್ರರಥ (೧೨) ಸ್ವಯಂವರ (೧೩) ವೈವಾಹಿಕ (೧೪) ವಿದುರಾಗಮನ (೧೫) ರಾಜ್ಯಲಂಭ (೧೬) ಅರ್ಜುನವನವಾಸ (೧೭) ಸುಭದ್ರಾಹರಣ (೧೮) ಹರಣಾಹರಣ (೧೯) ಖಾಂಡವದಾಹ (೨೦) ಮಯದರ್ಶನ (೨೧) ಮಂತ್ರ ಅಥವಾ ಸಭಾಕ್ರಿಯಾ (೨೨) ಲೋಕಪಾಲಸಭಾಖ್ಯಾನ (೨೩) ರಾಜಸೂಯಾರಂಭ (೨೪) ಜರಾಸಂಧವಧ (೨೫) ದಿಗ್ವಿಜಯ (೨೬) ರಾಜಸೂಯ (೨೭) ಅರ್ಘ್ಯಾಭಿಹರಣ (೨೮) ಶಿಶುಪಾಲವಧ (೨೯) ದ್ಯೂತ (೩೦) ಅನುದ್ಯೂತ (೩೧) ಆರಣ್ಯ (೩೨) ಕಿರ್ಮೀರವಧ (೩೩) ಅರ್ಜುನಾಭಿಗಮನ (೩೪) ಕೈರಾತ (೩೫) ಇಂದ್ರಲೋಕಾಭಿಗಮನ (೩೬) ನಲೋಪಾಖ್ಯಾನ (೩೭) ತೀರ್ಥಯಾತ್ರಾ (೩೮) ಜಟಾಸುರವಧ (೩೯) ಯಕ್ಷಯುದ್ಧ (೪೦) ನಿವಾತಕವಚಯುದ್ಧ (೪೧) ಅಜಗರ (೪೨) ಮಾರ್ಕಂಡೇಯಸಮಸ್ಯಾ (೪೩) ದ್ರೌಪದೀ-ಸತ್ಯಭಾಮಾಸಂವಾದ (೪೪) ಘೋಷಯಾತ್ರಾ (೪೫) ಮೃಗಸ್ವಪ್ನೋದ್ಭವ (೪೬) ವ್ರೀಹಿದ್ರೌಣಿಕ (೪೭) ದ್ರೌಪದೀಹರಣ (೪೮) ಜಯದ್ರಥವಿಮೋಕ್ಷಣ (೪೯) ರಾಮೋಪಾಖ್ಯಾನ (೫೦) ಪತಿವ್ರತಾಮಹಾತ್ಮ್ಯ (೫೧) ಕುಂಡಲಾಹರಣ (೫೨) ಅರಣೇಯ (೫೩) ಪಾಂಡವಪ್ರವೇಶ (೫೪) ಸಮಯಪಾಲನ (೫೫) ಕೀಚಕವಧ (೫೬) ಗೋಹರಣ (೫೭) ವೈವಾಹಿಕ (೫೮) ಸೇನೋದ್ಯೋಗ (೫೯) ಸಂಜಯಯಾನ (೬೦) ಪ್ರಜಾಗರ (೬೧) ಸನತ್ಸುಜಾತ (೬೨) ಯಾನಸಂಧಿ (೬೩) ಭಗವದ್ಯಾನ (೬೪) ಸೇನಾನಿರ್ಯಾಣ (೬೫) ಉಲೂಕದೂತಾಗಮನ (೬೬) ರಥಾತಿರಥಸಂಖ್ಯಾನ (೬೭) ಅಂಬೋಪಾಖ್ಯಾನ (೬೮) ಜಂಬೂಖಂಡವಿನಿರ್ಮಾಣ (೬೯) ಭೂಮಿ (೭೦) ಭಗವದ್ಗೀತಾ (೭೧) ಭೀಷ್ಮವಧ (೭೨) ದ್ರೋಣಾಭಿಷೇಚನ (೭೩) ಸಂಶಪ್ತಕವಧ (೭೪) ಅಭಿಮನ್ಯುವಧ (೭೫) ಪ್ರತಿಜ್ಞಾ (೭೬) ಜಯದ್ರಥವಧ (೭೭) ಘಟೋತ್ಕಚವಧ (೭೮) ದ್ರೋಣವಧ (೭೯) ನಾರಾಯಣಾಸ್ತ್ರಮೋಚನ (೮೦) ಹ್ರದಪ್ರವೇಶ (೮೧) ಗದಾಯುದ್ಧ (೮೨) ಸೌಪ್ತಿಕ (೮೩) ಐಷೀಕ (೮೪) ಜಲಪ್ರದಾನಿಕ (೮೫) ಸ್ತ್ರೀವಿಲಾಪ (೮೬) ಶ್ರಾದ್ಧ (೮೭) ರಾಜಧರ್ಮಾನುಷಾಸನ (೮೮) ಆಪದ್ಧರ್ಮ (೮೯) ಮೋಕ್ಷಧರ್ಮ (೯೦) ದಾನಧರ್ಮ (೯೧) ಭೀಷ್ಮಸ್ವರ್ಗಾರೋಹಣ (೯೨) ಅಶ್ವಮೇಧ (೯೩) ಅನುಗೀತಾ (೯೪) ವೈಷ್ಣವಧರ್ಮ (೯೫) ಆಶ್ರಮವಾಸ (೯೬) ಪುತ್ರದರ್ಶನ (೯೭) ನಾರದಾಗಮನ (೯೮) ಮೌಸಲ (೯೯) ಮಹಾಪ್ರಸ್ಥಾನಿಕ (೧೦೦) ಸ್ವರ್ಗಾರೋಹಣ.