Virata Parva: Chapter 59

ವಿರಾಟ ಪರ್ವ: ಗೋಹರಣ ಪರ್ವ

೫೯

ಭೀಷ್ಮಾರ್ಜುನರ ಯುದ್ಧ

ಭೀಷ್ಮಾರ್ಜುನರ ಯುದ್ಧದ ವರ್ಣನೆ, ಅರ್ಜುನನ ಬಾಣಗಳಿಂದ ಮೂರ್ಛಿತನಾದ ಭೀಷ್ಮನನ್ನು ಸಾರಥಿಯು ರಣದಿಂದ ಆಚೆ ಕೊಂಡೊಯ್ದುದು (೧-೪೪).

04059001 ವೈಶಂಪಾಯನ ಉವಾಚ|

04059001a ತತಃ ಶಾಂತನವೋ ಭೀಷ್ಮೋ ದುರಾಧರ್ಷಃ ಪ್ರತಾಪವಾನ್|

04059001c ವಧ್ಯಮಾನೇಷು ಯೋಧೇಷು ಧನಂಜಯಮುಪಾದ್ರವತ್||

ವೈಶಂಪಾಯನನು ಹೇಳಿದನು: “ಆಗ ಯೋಧರು ಹತರಾಗುತ್ತಿರಲು, ದುರಾಧರ್ಷ ಪ್ರತಾಪವಾನ್ ಶಾಂತನವ ಭೀಷ್ಮನು ಧನಂಜಯನೆಡೆಗೆ ನುಗ್ಗಿದನು.

04059002a ಪ್ರಗೃಹ್ಯ ಕಾರ್ಮುಕಶ್ರೇಷ್ಠಂ ಜಾತರೂಪಪರಿಷ್ಕೃತಂ|

04059002c ಶರಾನಾದಾಯ ತೀಕ್ಷ್ಣಾಗ್ರಾನ್ಮರ್ಮಭೇದಪ್ರಮಾಥಿನಃ||

04059003a ಪಾಂಡುರೇಣಾತಪತ್ರೇಣ ಧ್ರಿಯಮಾಣೇನ ಮೂರ್ಧನಿ|

04059003c ಶುಶುಭೇ ಸ ನರವ್ಯಾಘ್ರೋ ಗಿರಿಃ ಸೂರ್ಯೋದಯೇ ಯಥಾ||

ಸುವರ್ಣಖಚಿತ ಶ್ರೇಷ್ಠ ಧನುಸ್ಸನ್ನು ಹಿಡಿದು, ಹರಿತ ಮೊನೆಗಳ ಮತ್ತು ಮರ್ಮಭೇದಕ ಶಕ್ತಿಯ ಬಾಣಗಳನ್ನು ಹಿಡಿದು, ತಲೆಯಮೇಲೆ ಬೆಳ್ಗೊಡೆಯನ್ನು ತಳೆದ ಆ ನರಶ್ರೇಷ್ಠನು ಸೂರ್ಯೋದಯದಲ್ಲಿ ಪರ್ವತದಂತೆ ಶೋಭಿಸುತ್ತಿದ್ದನು.

04059004a ಪ್ರಧ್ಮಾಯ ಶಂಖಂ ಗಾಂಗೇಯೋ ಧಾರ್ತರಾಷ್ಟ್ರಾನ್ಪ್ರಹರ್ಷಯನ್|

04059004c ಪ್ರದಕ್ಷಿಣಮುಪಾವೃತ್ಯ ಬೀಭತ್ಸುಂ ಸಮವಾರಯತ್||

ಆ ಗಾಂಗೇಯನು ಶಂಖವನ್ನೂದಿ ಕೌರವರಿಗೆ ಹರ್ಷವನ್ನುಂಟುಮಾಡಿ, ಬಲಕ್ಕೆ ತಿರುಗಿ ಬೀಭತ್ಸುವನ್ನು ಎದುರಿಸಿದನು.

04059005a ತಮುದ್ವೀಕ್ಷ್ಯ ತಥಾಯಾಂತಂ ಕೌಂತೇಯಃ ಪರವೀರಹಾ|

04059005c ಪ್ರತ್ಯಗೃಹ್ಣಾತ್ಪ್ರಹೃಷ್ಟಾತ್ಮಾ ಧಾರಾಧರಮಿವಾಚಲಃ||

ಹಾಗೆ ಬರುತ್ತಿರುವ ಅವನನ್ನು ಕಂಡು ಪರವೀರಹ ಕೌಂತೇಯನು ಸಂತೋಷಗೊಂಡು ಮೋಡವನ್ನು ಪರ್ವತದಂತೆ ಎದುರಿಸಿದನು.

04059006a ತತೋ ಭೀಷ್ಮಃ ಶರಾನಷ್ಟೌ ಧ್ವಜೇ ಪಾರ್ಥಸ್ಯ ವೀರ್ಯವಾನ್|

04059006c ಸಮಪರ್ಯನ್ಮಹಾವೇಗಾಂ ಶ್ವಸಮಾನಾನಿವೋರಗಾನ್||

ಆಗ ವೀರ್ಯವಂತ ಭೀಷ್ಮನು ಭುಸುಗುಡುವ ಸರ್ಪಗಳಂತಿರುವ ಮಹಾವೇಗವುಳ್ಳ ಎಂಟು ಬಾಣಗಳನ್ನು ಪಾರ್ಥನ ಧ್ವಜದ ಮೇಲೆ ಪ್ರಯೋಗಿಸಿದನು.

04059007a ತೇ ಧ್ವಜಂ ಪಾಂಡುಪುತ್ರಸ್ಯ ಸಮಾಸಾದ್ಯ ಪತತ್ರಿಣಃ|

04059007c ಜ್ವಲಂತಃ ಕಪಿಮಾಜಘ್ನುರ್ಧ್ವಜಾಗ್ರನಿಲಯಾಂಶ್ಚ ತಾನ್||

ಉರಿಯುತ್ತಿದ ಆ ಬಾಣವು ಪಾಂಡುಪುತ್ರನ ಧ್ವಜಕ್ಕೆ ತಾಗಿ ಕಪಿಯನ್ನೂ ಧ್ವಜಾಗ್ರದಲ್ಲಿ ನೆಲೆಗೊಂಡಿದ್ದವನ್ನೂ ಹೊಡೆದವು.

04059008a ತತೋ ಭಲ್ಲೇನ ಮಹತಾ ಪೃಥುಧಾರೇಣ ಪಾಂಡವಃ|

04059008c ಚತ್ರಂ ಚಿಚ್ಛೇದ ಭೀಷ್ಮಸ್ಯ ತೂರ್ಣಂ ತದಪತದ್ಭುವಿ||

ಆಗ ಪಾಂಡವನು ಅಗಲ ಅಲಗನ್ನುಳ್ಳ ದೊಡ್ಡ ಭಲ್ಲೆಯಿಂದ ಭೀಷ್ಮನ ಕೊಡೆಯನ್ನು ಕತ್ತರಿದನು ಮತ್ತು ಅದು ತಕ್ಷಣವೇ ನೆಲದಮೇಲೆ ಬಿದ್ದಿತು.

04059009a ಧ್ವಜಂ ಚೈವಾಸ್ಯ ಕೌಂತೇಯಃ ಶರೈರಭ್ಯಹನದ್ದೃಢಂ|

04059009c ಶೀಘ್ರಕೃದ್ರಥವಾಹಾಂಶ್ಚ ತಥೋಭೌ ಪಾರ್ಷ್ಣಿಸಾರಥೀ||

ಶೀಘ್ರಕರ್ಮಿ ಕೌಂತೇಯನು ಅವನ ದೃಢ ಧ್ವಜವನ್ನೂ, ರಥದ ಕುದುರೆಗಳನ್ನೂ, ಪಕ್ಕದಲ್ಲಿದ್ದ ಇಬ್ಬರು ಸಾರಥಿಗಳನ್ನೂ ಬಾಣಗಳಿಂದ ಹೊಡೆದನು.

04059010a ತಯೋಸ್ತದಭವದ್ಯುದ್ಧಂ ತುಮುಲಂ ಲೋಮಹರ್ಷಣ|

04059010c ಭೀಷ್ಮಸ್ಯ ಸಹ ಪಾರ್ಥೇನ ಬಲಿವಾಸವಯೋರಿವ||

ಬಲಿ ಮತ್ತು ವಾಸವನಿಗೆ ನಡೆದಂತೆ ಭೀಷ್ಮ ಪಾರ್ಥರಿಗೆ ರೋಮಾಂಚನಕಾರಿ ತುಮುಲ ಯುದ್ಧವು ನಡೆಯಿತು.

04059011a ಭಲ್ಲೈರ್ಭಲ್ಲಾಃ ಸಮಾಗಮ್ಯ ಭೀಷ್ಮಪಾಂಡವಯೋರ್ಯುಧಿ|

04059011c ಅಂತರಿಕ್ಷೇ ವ್ಯರಾಜಂತ ಖದ್ಯೋತಾಃ ಪ್ರಾವೃಷೀವ ಹಿ||

ಭೀಷ್ಮಾರ್ಜುನರಿಗೆ ನಡೆದ ಯುದ್ಧದಲ್ಲಿ ಭಲ್ಲೆಗಳು ಭಲ್ಲೆಗಳಿಗೆ ತಾಗಿ ಮಳೆಗಾಲದ ಮಿಣುಕು ಹುಳುಗಳಂತೆ ಆಕಾಶದಲ್ಲಿ ಹೊಳೆದವು.

04059012a ಅಗ್ನಿಚಕ್ರಮಿವಾವಿದ್ಧಂ ಸವ್ಯದಕ್ಷಿಣಮಸ್ಯತಃ|

04059012c ಗಾಂಡೀವಮಭವದ್ರಾಜನ್ಪಾರ್ಥಸ್ಯ ಸೃಜತಃ ಶರಾನ್||

ರಾಜನ್! ಎಡಗೈ ಮತ್ತು ಬಲಗೈ ಎರಡರಿಂದಲೂ ಶರಗಳನ್ನು ಬಿಡುತ್ತಿದ್ದ ಪಾರ್ಥನ ಗಾಂಡೀವವು ಅಗ್ನಿಚಕ್ರದಂತಿತ್ತು.

04059013a ಸ ತೈಃ ಸಂಚಾದಯಾಮಾಸ ಭೀಷ್ಮಂ ಶರಶತೈಃ ಶಿತೈಃ|

04059013c ಪರ್ವತಂ ವಾರಿಧಾರಾಭಿಶ್ಚಾದಯನ್ನಿವ ತೋಯದಃ||

ಮಳೆಯಿಂದ ಪರ್ವತವನ್ನು ಮುಚ್ಚಿಬಿಡುವ ಮೋಡದಂತೆ ಅವನು ಆ ಹರಿತ ನೂರು ಬಾಣಗಳಿಂದ ಭೀಷ್ಮನನ್ನು ಮುಚ್ಚಿಬಿಟ್ಟನು.

04059014a ತಾಂ ಸ ವೇಲಾಮಿವೋದ್ಧೂತಾಂ ಶರವೃಷ್ಟಿಂ ಸಮುತ್ಥಿತಾಂ|

04059014c ವ್ಯಧಮತ್ಸಾಯಕೈರ್ಭೀಷ್ಮೋ ಅರ್ಜುನಂ ಸಂನಿವಾರಯತ್||

ಮೇಲೆದ್ದು ಬರುವ ಅಲೆಯನ್ನು ತಡೆಯುವಂತೆ ಎರಗುವ ಆ ಬಾಣಗಳ ಮಳೆಯನ್ನು ಭೀಷ್ಮನು ಬಾಣಗಳಿಂದ ಕತ್ತರಿಸಿ ಅರ್ಜುನನನ್ನು ತಡೆದನು.

04059015a ತತಸ್ತಾನಿ ನಿಕೃತ್ತಾನಿ ಶರಜಾಲಾನಿ ಭಾಗಶಃ|

04059015c ಸಮರೇಽಭಿವ್ಯಶೀರ್ಯಂತ ಫಲ್ಗುನಸ್ಯ ರಥಂ ಪ್ರತಿ||

ಸಮರದಲ್ಲಿ ತುಂಡುತುಂಡಾಗಿ ಕತ್ತರಿಸಲ್ಪಟ್ಟ ಆ ಬಾಣಸಮೂಹಗಳು ಅರ್ಜುನನ ರಥದ ಮೇಲೆ ಉದುರಿಬಿದ್ದವು.

04059016a ತತಃ ಕನಕಪುಂಖಾನಾಂ ಶರವೃಷ್ಟಿಂ ಸಮುತ್ಥಿತಾಂ|

04059016c ಪಾಂಡವಸ್ಯ ರಥಾತ್ತೂರ್ಣಂ ಶಲಭಾನಾಮಿವಾಯತಿಂ|

04059016e ವ್ಯಧಮತ್ತಾಂ ಪುನಸ್ತಸ್ಯ ಭೀಷ್ಮಃ ಶರಶತೈಃ ಶಿತೈಃ||

ಆಗ ಪಾಂಡವನ ರಥದಿಂದ ಮಿಡಿತೆಗಳ ಹಿಂಡಿನಂತೆ ಚಿನ್ನದ ಗರಿಗಳನ್ನುಳ್ಳ ಬಾಣಗಳ ಮಳೆಯು ಶೀಘ್ರವಾಗಿ ಹೊಮ್ಮಿತು. ಭೀಷ್ಮನು ಪುನಃ ಅದನ್ನು ನೂರಾರು ಹರಿತ ಬಾಣಗಳಿಂದ ಕತ್ತರಿಸಿದನು.

04059017a ತತಸ್ತೇ ಕುರವಃ ಸರ್ವೇ ಸಾಧು ಸಾಧ್ವಿತಿ ಚಾಬ್ರುವನ್|

04059017c ದುಷ್ಕರಂ ಕೃತವಾನ್ಭೀಷ್ಮೋ ಯದರ್ಜುನಮಯೋಧಯತ್||

ಆಗ ಕೌರವರೆಲ್ಲರು ನುಡಿದರು: “ಸಾಧು! ಸಾಧು! ಅರ್ಜುನನೊಡನೆ ಯುದ್ಧಮಾಡುತ್ತಿರುವ ಭೀಷ್ಮನು ಅಸಾಧ್ಯವಾದುದನ್ನು ಮಾಡಿದನು.

04059018a ಬಲವಾಂಸ್ತರುಣೋ ದಕ್ಷಃ ಕ್ಷಿಪ್ರಕಾರೀ ಚ ಪಾಂಡವಃ|

04059018c ಕೋಽನ್ಯಃ ಸಮರ್ಥಃ ಪಾರ್ಥಸ್ಯ ವೇಗಂ ಧಾರಯಿತುಂ ರಣೇ||

04059019a ಋತೇ ಶಾಂತನವಾದ್ಭೀಷ್ಮಾತ್ಕೃಷ್ಣಾದ್ವಾ ದೇವಕೀಸುತಾತ್|

04059019c ಆಚಾರ್ಯಪ್ರವರಾದ್ವಾಪಿ ಭಾರದ್ವಾಜಾನ್ಮಹಾಬಲಾತ್||

ಅರ್ಜುನನು ಬಲಶಾಲಿ, ತರುಣ, ದಕ್ಷ ಮತ್ತು ಶೀಘ್ರಕಾರಿ. ಶಂತನುಪುತ್ರ ಭೀಷ್ಮ, ದೇವಕೀಸುತ ಕೃಷ್ಣ, ಮಹಾಬಲಶಾಲಿ ಆಚಾರ್ಯಶೇಷ್ಠ ಭಾರದ್ವಾಜನನ್ನು ಬಿಟ್ಟರೆ ಬೇರೆಯಾರು ತಾನೇ ರಣದಲ್ಲಿ ಪಾರ್ಥನ ವೇಗವನ್ನು ಸಹಿಸಿಕೊಳ್ಳಬಲ್ಲರು?”

04059020a ಅಸ್ತ್ರೈರಸ್ತ್ರಾಣಿ ಸಂವಾರ್ಯ ಕ್ರೀಡತಃ ಪುರುಷರ್ಷಭೌ|

04059020c ಚಕ್ಷೂಂಷಿ ಸರ್ವಭೂತಾನಾಂ ಮೋಹಯಂತೌ ಮಹಾಬಲೌ||

ಮಹಾಬಲಶಾಲಿಗಳಾಗಿದ್ದ ಆ ಪುರುಷಶ್ರೇಷ್ಠರೀರ್ವರೂ ಅಸ್ತ್ರಗಳಿಂದ ಅಸ್ತ್ರಗಳನ್ನು ತಡೆಗಟ್ಟುತ್ತಾ ಯುದ್ಧಕ್ರೀಡೆಯನ್ನಾಡುತ್ತಾ ಎಲ್ಲ ಜೀವಿಗಳ ಕಣ್ಣುಗಳನ್ನೂ ಮರುಳುಗೊಳಿಸಿದರು.

04059021a ಪ್ರಾಜಾಪತ್ಯಂ ತಥೈವೈಂದ್ರಮಾಗ್ನೇಯಂ ಚ ಸುದಾರುಣಂ|

04059021c ಕೌಬೇರಂ ವಾರುಣಂ ಚೈವ ಯಾಮ್ಯಂ ವಾಯವ್ಯಮೇವ ಚ|

04059021e ಪ್ರಯುಂಜಾನೌ ಮಹಾತ್ಮಾನೌ ಸಮರೇ ತೌ ವಿಚೇರತುಃ||

ಬ್ರಹ್ಮ, ಇಂದ್ರ, ಅಗ್ನಿ, ಕುಬೇರ, ವರುಣ, ಯಮ, ವಾಯು ಇವರಿಂದ ಪಡೆದ ಭಯಂಕರ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದ ಆ ಮಹಾತ್ಮರು ರಣರಂಗದಲ್ಲಿ ಚರಿಸುತ್ತಿದ್ದರು.

04059022a ವಿಸ್ಮಿತಾನ್ಯಥ ಭೂತಾನಿ ತೌ ದೃಷ್ಟ್ವಾ ಸಂಯುಗೇ ತದಾ|

04059022c ಸಾಧು ಪಾರ್ಥ ಮಹಾಬಾಹೋ ಸಾಧು ಭೀಷ್ಮೇತಿ ಚಾಬ್ರುವನ್||

ಆಗ ಅವರಿಬ್ಬರೂ ಯುದ್ಧದಲ್ಲಿ ತೊಡಗಿರುವುದನ್ನು ಕಂಡು ಎಲ್ಲ ಜೀವಿಗಳೂ ವಿಸ್ಮಯಗೊಂಡು “ಮಹಾಬಾಹು ಪಾರ್ಥ! ಲೇಸು! ಭೀಷ್ಮ! ಲೇಸು!” ಎಂದು ನುಡಿದವು.

04059023a ನೇದಂ ಯುಕ್ತಂ ಮನುಷ್ಯೇಷು ಯೋಽಯಂ ಸಂದೃಶ್ಯತೇ ಮಹಾನ್|

04059023c ಮಹಾಸ್ತ್ರಾಣಾಂ ಸಂಪ್ರಯೋಗಃ ಸಮರೇ ಭೀಷ್ಮಪಾರ್ಥಯೋಃ||

“ಭೀಷ್ಮ-ಪಾರ್ಥರ ಯುದ್ಧದಲ್ಲಿ ಕಂಡುಬರುತ್ತಿರುವ ಈ ಮಹಾಸ್ತ್ರಗಳ ಮಹಾಪ್ರಯೋಗವು ಮನುಷ್ಯರಲ್ಲಿ ಕಾಣತಕ್ಕದ್ದಲ್ಲ!”

04059024a ಏವಂ ಸರ್ವಾಸ್ತ್ರವಿದುಷೋರಸ್ತ್ರಯುದ್ಧಮವರ್ತತ|

04059024c ಅಥ ಜಿಷ್ಣುರುಪಾವೃತ್ಯ ಪೃಥುಧಾರೇಣ ಕಾರ್ಮುಕಂ|

04059024e ಚಕರ್ತ ಭೀಷ್ಮಸ್ಯ ತದಾ ಜಾತರೂಪಪರಿಷ್ಕೃತಂ||

ಹೀಗೆ ಸರ್ವಾಸ್ತ್ರಕೋವಿದರ ನಡುವೆ ಅಸ್ತ್ರಯುದ್ಧವು ನಡೆಯಿತು. ಆಗ ಅರ್ಜುನನು ಪಕ್ಕಕ್ಕೆ ಸರಿದು ಅಗಲ ಅಲಗುಗಳನ್ನುಳ್ಳ ಬಾಣಗಳಿಂದ ಭೀಷ್ಮನ ಸ್ವರ್ಣಖಚಿತ ಬಿಲ್ಲನ್ನು ಕತ್ತರಿಸಿದನು.

04059025a ನಿಮೇಷಾಂತರಮಾತ್ರೇಣ ಭೀಷ್ಮೋಽನ್ಯತ್ಕಾರ್ಮುಕಂ ರಣೇ|

04059025c ಸಮಾದಾಯ ಮಹಾಬಾಹುಃ ಸಜ್ಯಂ ಚಕ್ರೇ ಮಹಾಬಲಃ|

04059025e ಶರಾಂಶ್ಚ ಸುಬಹೂನ್ಕ್ರುದ್ಧೋ ಮುಮೋಚಾಶು ಧನಂಜಯೇ||

ಮಹಾಬಾಹು ಮಹಾಬಲಶಾಲಿ ಭೀಷ್ಮನು ಎವೆಯಿಕ್ಕುವಷ್ಟರಲ್ಲಿ ಬೇರೊಂದು ಬಿಲ್ಲನ್ನು ತೆಗೆದುಕೊಂಡು ಹೆದೆಯೇರಿಸಿ, ಕೋಪದಿಂದ ಯುದ್ಧದಲ್ಲಿ ಧನಂಜಯನ ಮೇಲೆ ಬೇಗ ಬಾಣಗಳನ್ನು ಬಿಟ್ಟನು.

04059026a ಅರ್ಜುನೋಽಪಿ ಶರಾಂಶ್ಚಿತ್ರಾನ್ಭೀಷ್ಮಾಯ ನಿಶಿತಾನ್ಬಹೂನ್|

04059026c ಚಿಕ್ಷೇಪ ಸುಮಹಾತೇಜಾಸ್ತಥಾ ಭೀಷ್ಮಶ್ಚ ಪಾಂಡವೇ||

ಮಹಾತೇಜಸ್ವಿ ಅರ್ಜುನನೂ ಕೂಡ ಭೀಷ್ಮನ ಮೇಲೆ ವಿಚಿತ್ರವೂ ಹರಿತವೂ ಆದ ಅನೇಕ ಬಾಣಗಳನ್ನು ಬಿಟ್ಟನು. ಹಾಗೆಯೇ ಭೀಷ್ಮನೂ ಕೂಡ ಅರ್ಜುನನ ಮೇಲೆ ಬಿಟ್ಟನು.

04059027a ತಯೋರ್ದಿವ್ಯಾಸ್ತ್ರವಿದುಷೋರಸ್ಯತೋರನಿಶಂ ಶರಾನ್|

04059027c ನ ವಿಶೇಷಸ್ತದಾ ರಾಜನ್ಲಕ್ಷ್ಯತೇ ಸ್ಮ ಮಹಾತ್ಮನೋಃ||

ರಾಜನ್! ನಿರಂತರವಾಗಿ ಬಾಣಗಳನ್ನು ಬಿಡುತ್ತಿದ್ದ ಆ ದಿವ್ಯಾಸ್ತ್ರವಿದ ಮಹಾತ್ಮರಲ್ಲಿ ವ್ಯತ್ಯಾಸವೇ ಕಾಣುತ್ತಿರಲಿಲ್ಲ.

04059028a ಅಥಾವೃಣೋದ್ದಶ ದಿಶಃ ಶರೈರತಿರಥಸ್ತದಾ|

04059028c ಕಿರೀಟಮಾಲೀ ಕೌಂತೇಯಃ ಶೂರಃ ಶಾಂತನವಸ್ತಥಾ||

ಆಗ ಕಿರೀಟಮಾಲೀ ಅತಿರಥ ಕುಂತೀಪುತ್ರನು ಹತ್ತು ದಿಕ್ಕುಗಳನ್ನೂ ಬಾಣಗಳಿಂದ ಮುಚ್ಚಿದನು. ಶಾಂತನವನೂ ಹಾಗೆಯೇ ಮಾಡಿದನು.

04059029a ಅತೀವ ಪಾಂಡವೋ ಭೀಷ್ಮಂ ಭೀಷ್ಮಶ್ಚಾತೀವ ಪಾಂಡವಂ|

04059029c ಬಭೂವ ತಸ್ಮಿನ್ಸಂಗ್ರಾಮೇ ರಾಜನ್ಲೋಕೇ ತದದ್ಭುತಂ||

ರಾಜನ್! ಆ ಯುದ್ದದಲ್ಲಿ ಅರ್ಜುನನನ್ನು ಭೀಷ್ಮನೂ, ಭೀಷ್ಮನನ್ನು ಅರ್ಜುನನೂ ಮೀರಿಸಿದಂತಿತ್ತು. ಅದು ಲೋಕದಲ್ಲಿ ಅದ್ಭುತವಾಯಿತು.

04059030a ಪಾಂಡವೇನ ಹತಾಃ ಶೂರಾ ಭೀಷ್ಮಸ್ಯ ರಥರಕ್ಷಿಣಃ|

04059030c ಶೇರತೇ ಸ್ಮ ತದಾ ರಾಜನ್ಕೌಂತೇಯಸ್ಯಾಭಿತೋ ರಥಂ||

ರಾಜನ್! ಆಗ ಭೀಷ್ಮನ ಶೂರ ರಥರಕ್ಷಕರು ಅರ್ಜುನನಿಂದ ಹತರಾಗಿ ಅವನ ರಥದೆಡೆಯಲ್ಲಿ ಬಿದ್ದರು.

04059031a ತತೋ ಗಾಂಡೀವನಿರ್ಮುಕ್ತಾ ನಿರಮಿತ್ರಂ ಚಿಕೀರ್ಷವಃ|

04059031c ಆಗಚ್ಛನ್ಪುಂಖಸಂಶ್ಲಿಷ್ಟಾಃ ಶ್ವೇತವಾಹನಪತ್ರಿಣಃ||

ಆಗ ಅರ್ಜುನನ ಗಾಂಡೀವದಿಂದ ಹೊರಬಂದ ಗರಿಸಹಿತ ಬಾಣಗಳು ಹಗೆಯನ್ನು ಇಲ್ಲದಂತೆ ಮಾಡುವ ಬಯಕೆಯಿಂದ ಮುನ್ನುಗ್ಗಿದವು.

04059032a ನಿಷ್ಪತಂತೋ ರಥಾತ್ತಸ್ಯ ಧೌತಾ ಹೈರಣ್ಯವಾಸಸಃ|

04059032c ಆಕಾಶೇ ಸಮದೃಶ್ಯಂತ ಹಂಸಾನಾಮಿವ ಪಂಕ್ತಯಃ||

ಅವನ ರಥದಿಂದ ಹೊಮ್ಮುತ್ತಿದ್ದ, ಬೆಳಗುತ್ತಿದ್ದ ಸುವರ್ಣಖಚಿತ ಬಾಣಗಳು ಆಕಾಶದಲ್ಲಿ ಹಂಸಗಳ ಸಾಲಿನಂತೆ ಕಾಣುತ್ತಿದ್ದವು.

04059033a ತಸ್ಯ ತದ್ದಿವ್ಯಮಸ್ತ್ರಂ ಹಿ ಪ್ರಗಾಢಂ ಚಿತ್ರಮಸ್ಯತಃ|

04059033c ಪ್ರೇಕ್ಷಂತೇ ಸ್ಮಾಂತರಿಕ್ಷಸ್ಥಾಃ ಸರ್ವೇ ದೇವಾಃ ಸವಾಸವಾಃ||

ಬಲವಾಗಿ ಪ್ರಯೋಗಿಸಲಾದ ಅವನ ಆ ವಿಚಿತ್ರ ದಿವ್ಯಾಸ್ತ್ರವನ್ನು ಇಂದ್ರಸಹಿತರಾಗಿ ಆಕಾಶದಲ್ಲಿ ದೇವತೆಗಳು ನೋಡುತ್ತಿದ್ದರು.

04059034a ತದ್ದೃಷ್ಟ್ವಾ ಪರಮಪ್ರೀತೋ ಗಂಧರ್ವಶ್ಚಿತ್ರಮದ್ಭುತಂ|

04059034c ಶಶಂಸ ದೇವರಾಜಾಯ ಚಿತ್ರಸೇನಃ ಪ್ರತಾಪವಾನ್||

ವಿಚಿತ್ರವೂ ಅದ್ಭುತವೂ ಆದ ಅದನ್ನು ನೋಡಿ ಬಹಳ ಸಂತೋಷಗೊಂಡ ಪತಾಪಿ ಗಂಧರ್ವ ಚಿತ್ರಸೇನನು ದೇವೇಂದ್ರನ ಮುಂದೆ ಅರ್ಜುನನನ್ನು ಹೊಗಳಿದನು.

04059035a ಪಶ್ಯೇಮಾನರಿನಿರ್ದಾರಾನ್ಸಂಸಕ್ತಾನಿವ ಗಚ್ಛತಃ|

04059035c ಚಿತ್ರರೂಪಮಿದಂ ಜಿಷ್ಣೋರ್ದಿವ್ಯಮಸ್ತ್ರಮುದೀರ್ಯತಃ||

“ಒಂದಕ್ಕೊಂದು ಅಂಟಿಕೊಂಡಂತೆ ಹೋಗುತ್ತಿರುವ ಶತ್ರುಗಳನ್ನು ಸೀಳುವ ಈ ಬಾಣಗಳನ್ನು ನೋಡು. ಅರ್ಜುನನ ಈ ದಿವ್ಯಾಸ್ತ್ರಪ್ರಯೋಗವು ಅದ್ಭುತವಾಗಿದೆ.

04059036a ನೇದಂ ಮನುಷ್ಯಾಃ ಶ್ರದ್ದಧ್ಯುರ್ನ ಹೀದಂ ತೇಷು ವಿದ್ಯತೇ|

04059036c ಪೌರಾಣಾನಾಂ ಮಹಾಸ್ತ್ರಾಣಾಂ ವಿಚಿತ್ರೋಽಯಂ ಸಮಾಗಮಃ||

ಇದನ್ನು ಮಾನವರು ನಂಬುವುದಿಲ್ಲ. ಇದು ಅವರಲ್ಲಿಲ್ಲ. ಪ್ರಾಚೀನ ಕಾಲದ ಈ ಮಹಾಸ್ತ್ರಗಳ ಕೂಟವು ವಿಚಿತ್ರವಾದುದು.

04059037a ಮಧ್ಯಂದಿನಗತಂ ಸೂರ್ಯಂ ಪ್ರತಪಂತಮಿವಾಂಬರೇ|

04059037c ನ ಶಕ್ನುವಂತಿ ಸೈನ್ಯಾನಿ ಪಾಂಡವಂ ಪ್ರತಿವೀಕ್ಷಿತುಂ||

ಆಕಾಶದಲ್ಲಿ ಜ್ವಲಿಸುತ್ತಿರುವ ಮಧ್ಯಾಹ್ನದ ಸೂರ್ಯನಂತಿರುವ ಅರ್ಜುನನನ್ನು ಸೈನ್ಯಗಳು ಕಣ್ಣೆತ್ತಿ ನೋಡಲಾರವು.

04059038a ಉಭೌ ವಿಶ್ರುತಕರ್ಮಾಣಾವುಭೌ ಯುದ್ಧವಿಶಾರದೌ|

04059038c ಉಭೌ ಸದೃಶಕರ್ಮಾಣಾವುಭೌ ಯುಧಿ ದುರಾಸದೌ||

ಇವರಿಬ್ಬರೂ ತಮ್ಮ ಕಾರ್ಯಗಳಲ್ಲಿ ಪ್ರಸಿದ್ಧರು. ಇಬ್ಬರೂ ಯುದ್ಧವಿಶಾರದರು. ಇಬ್ಬರೂ ಕೆಲಸದಲ್ಲಿ ಸಮಾನರು. ಇಬ್ಬರೂ ಯುದ್ಧದಲ್ಲಿ ಎದುರಿಸಲಾಗದವರು.”

04059039a ಇತ್ಯುಕ್ತೋ ದೇವರಾಜಸ್ತು ಪಾರ್ಥಭೀಷ್ಮಸಮಾಗಮಂ|

04059039c ಪೂಜಯಾಮಾಸ ದಿವ್ಯೇನ ಪುಷ್ಪವರ್ಷೇಣ ಭಾರತ||

ಭಾರತ! ಚಿತ್ರಸೇನನು ಹೀಗೆ ಹೇಳಲು ದೇವೇಂದ್ರನು ದಿವ್ಯ ಹೂಮಳೆಯಿಂದ ಆ ಪಾರ್ಥ-ಭೀಷ್ಮರ ಕೂಟವನ್ನು ಗೌರವಿಸಿದನು.

04059040a ತತೋ ಭೀಷ್ಮಃ ಶಾಂತನವೋ ವಾಮೇ ಪಾರ್ಶ್ವೇ ಸಮರ್ಪಯತ್|

04059040c ಅಸ್ಯತಃ ಪ್ರತಿಸಂಧಾಯ ವಿವೃತಂ ಸವ್ಯಸಾಚಿನಃ||

ಆಗ ಶಾಂತನವ ಭೀಷ್ಮನು ಬಾಣಪ್ರಯೋಗಮಾಡುತ್ತಿದ್ದ ಅರ್ಜುನನನಲ್ಲಿ ಆಸ್ಪದವನ್ನು ಕಂಡು ಎಡಬದಿಗೆ ಹೊಡೆದನು.

04059041a ತತಃ ಪ್ರಹಸ್ಯ ಬೀಭತ್ಸುಃ ಪೃಥುಧಾರೇಣ ಕಾರ್ಮುಕಂ|

04059041c ನ್ಯಕೃಂತದ್ಗಾರ್ಧ್ರಪತ್ರೇಣ ಭೀಷ್ಮಸ್ಯಾಮಿತತೇಜಸಃ||

ಆಗ ಅರ್ಜುನನು ನಕ್ಕು ಬಹು ತೇಜಸ್ವಿ ಭೀಷ್ಮನ ಬಿಲ್ಲನ್ನು ಹದ್ದಿನ ಗರಿಗಳನ್ನುಳ್ಳ ಅಗಲವಾದ ಅಲಗಿನ ಬಾಣದಿಂದ ಕತ್ತರಿಸಿದನು.

04059042a ಅಥೈನಂ ದಶಭಿರ್ಬಾಣೈಃ ಪ್ರತ್ಯವಿಧ್ಯತ್ಸ್ತನಾಂತರೇ|

04059042c ಯತಮಾನಂ ಪರಾಕ್ರಾಂತಂ ಕುಂತೀಪುತ್ರೋ ಧನಂಜಯಃ||

ಹಾಗೆಯೇ ಕುಂತೀಪುತ್ರ ಧನಂಜಯನು ಪರಾಕ್ರಮದಿಂದ ಪ್ರಯತ್ನಿಸುತ್ತಿದ್ದ ಅವನ ಎದೆಗೆ ಹತ್ತು ಬಾಣಗಳಿಂದ ಹೊಡೆದನು.

04059043a ಸ ಪೀಡಿತೋ ಮಹಾಬಾಹುರ್ಗೃಹೀತ್ವಾ ರಥಕೂಬರಂ|

04059043c ಗಾಂಗೇಯೋ ಯುಧಿ ದುರ್ಧರ್ಷಸ್ತಸ್ಥೌ ದೀರ್ಘಮಿವಾತುರಃ||

ಯದ್ಧದಲ್ಲಿ ಎದುರಿಸಲಾಗದ ಮಹಾಬಾಹು ಗಾಂಗೇಯನು ಪೀಡಿತನಾಗಿ ರಥದ ದಂಡವನ್ನು ಹಿಡಿದು ಅಸ್ವಸ್ಥನಂತೆ ಬಹಳ ಹೊತ್ತು ಕುಳಿತುಬಿಟ್ಟನು.

04059044a ತಂ ವಿಸಂಜ್ಞಮಪೋವಾಹ ಸಮ್ಯಂತಾ ರಥವಾಜಿನಾಂ|

04059044c ಉಪದೇಶಮನುಸ್ಮೃತ್ಯ ರಕ್ಷಮಾಣೋ ಮಹಾರಥಂ||

ಪ್ರಜ್ಞೆತಪ್ಪಿದ ಆ ಮಹಾರಥನನ್ನು ರಕ್ಷಿಸುವುದಕ್ಕಾಗಿ ರಥಾಶ್ವಗಳ ಸಾರಥಿಯು ಉಪದೇಶವನ್ನು ನೆನೆದು ಅವನನ್ನು ಕೊಂಡೊಯ್ದನು.”

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ಉತ್ತರಗೋಗ್ರಹೇ ಭೀಷ್ಮಾಪಯಾನೇ ಏಕೋನಷಷ್ಟಿತಮೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ಉತ್ತರಗೋಗ್ರಹದಲ್ಲಿ ಭೀಷ್ಮಾಪಯಾನದಲ್ಲಿ ಐವತ್ತೊಂಭತ್ತನೆಯ ಅಧ್ಯಾಯವು.

Related image

Comments are closed.