Virata Parva: Chapter 26

ವಿರಾಟ ಪರ್ವ: ಗೋಹರಣ ಪರ್ವ

೨೬

ದ್ರೋಣನ ಸಲಹೆ

ಬ್ರಾಹ್ಮಣರ, ಚಾರರ, ಸಿದ್ಧರ ಮತ್ತು ಪಾಂಡವರನ್ನು ಬಲ್ಲ ಇತರ ಜನರ ಮೂಲಕ ಮತ್ತೊಮ್ಮೆ ಅವರನ್ನು ಹುಡುಕೋಣವೆಂದು ದ್ರೋಣನು ಸೂಚಿಸಿದುದು (೧-೧೦).

04026001 ವೈಶಂಪಾಯನ ಉವಾಚ|

04026001a ಅಥಾಬ್ರವೀನ್ಮಹಾವೀರ್ಯೋ ದ್ರೋಣಸ್ತತ್ತ್ವಾರ್ಥದರ್ಶಿವಾನ್|

04026001c ನ ತಾದೃಶಾ ವಿನಶ್ಯಂತಿ ನಾಪಿ ಯಾಂತಿ ಪರಾಭವಂ||

ವೈಶಂಪಾಯನನು ಹೇಳಿದನು: “ಆಗ ಮಹಾವೀರ್ಯ ತತ್ವಾರ್ಥದರ್ಶಿ ದ್ರೋಣನು ನುಡಿದನು: “ಅಂಥವರು ನಾಶಹೊಂದುವುದಿಲ್ಲ ಅಥವಾ ಪರಾಭವಹೊಂದುವುದಿಲ್ಲ.

04026002a ಶೂರಾಶ್ಚ ಕೃತವಿದ್ಯಾಶ್ಚ ಬುದ್ಧಿಮಂತೋ ಜಿತೇಂದ್ರಿಯಾಃ|

04026002c ಧರ್ಮಜ್ಞಾಶ್ಚ ಕೃತಜ್ಞಾಶ್ಚ ಧರ್ಮರಾಜಮನುವ್ರತಾಃ||

ಅವರು ಶೂರರು. ವಿದ್ಯಾಪಾರಂಗತರು. ಬುದ್ದಿವಂತರು. ಜಿತೇಂದ್ರಿಯರು. ಧರ್ಮಜ್ಞರು. ಕೃತಜ್ಞರು. ಮತ್ತು ಧರ್ಮರಾಜನಿಗೆ ಅನುವ್ರತರು.

04026003a ನೀತಿಧರ್ಮಾರ್ಥತತ್ತ್ವಜ್ಞಂ ಪಿತೃವಚ್ಚ ಸಮಾಹಿತಂ|

04026003c ಧರ್ಮೇ ಸ್ಥಿತಂ ಸತ್ಯಧೃತಿಂ ಜ್ಯೇಷ್ಠಂ ಜ್ಯೇಷ್ಠಾಪಚಾಯಿನಂ||

04026004a ಅನುವ್ರತಾ ಮಹಾತ್ಮಾನಂ ಭ್ರಾತರಂ ಭ್ರಾತರೋ ನೃಪ|

04026004c ಅಜಾತಶತ್ರುಂ ಹ್ರೀಮಂತಂ ತಂ ಚ ಭ್ರಾತೄನನುವ್ರತಂ||

ರಾಜ! ನೀತಿಧರ್ಮಾರ್ಥ ತತ್ತ್ವಜ್ಞನೂ, ತಂದೆಯಂತೆ ಅತ್ಯಾಸಕ್ತನೂ, ಧರ್ಮಸ್ಥಿತನೂ, ದೃಢಸತ್ಯನೂ, ಹಿರಿಯರನ್ನು ಪೂಜಿಸುವವನೂ, ಅಜಾತಶತ್ರುವೂ, ಸಂಕೋಚಶೀಲನೂ, ಮಹಾತ್ಮನೂ ಆದ ಹಿರಿಯಣ್ಣನಿಗೆ ಆ ಸೋದರರು ನಿಷ್ಠೆಯುಳ್ಳವರು. ಅವನೂ ಸೋದರರಿಗೆ ನಿಷ್ಠೆಯುಳ್ಳವನು.

04026005a ತೇಷಾಂ ತಥಾ ವಿಧೇಯಾನಾಂ ನಿಭೃತಾನಾಂ ಮಹಾತ್ಮನಾಂ|

04026005c ಕಿಮರ್ಥಂ ನೀತಿಮಾನ್ಪಾರ್ಥಃ ಶ್ರೇಯೋ ನೈಷಾಂ ಕರಿಷ್ಯತಿ||

ಹಾಗೆ ವಿಧೇಯರೂ ವಿನಯಶೀಲರೂ ಮಹಾತ್ಮರೂ ಆದವರಿಗೆ ಆ ನೀತಿವಂತ ಯುಧಿಷ್ಠಿರನಿಂದ ಶ್ರೇಯಸ್ಸುಂಟಾಗದೇ ಇರುವುದೆಂತು?

04026006a ತಸ್ಮಾದ್ಯತ್ನಾತ್ಪ್ರತೀಕ್ಷಂತೇ ಕಾಲಸ್ಯೋದಯಮಾಗತಂ|

04026006c ನ ಹಿ ತೇ ನಾಶಮೃಚ್ಛೇಯುರಿತಿ ಪಶ್ಯಾಮ್ಯಹಂ ಧಿಯಾ||

ಆದ್ದರಿಂದ ಕಾಲಬರುವುದನ್ನು ಅವರು ಯತ್ನಪೂರ್ವಕವಾಗಿ ಕಾಯುತ್ತಿದ್ದಾರೆ. ಅವರು ನಾಶಗೊಳ್ಳುವುದಿಲ್ಲವೆಂದು ನನ್ನ ಬುದ್ಧಿಗೆ ತೋರುತ್ತದೆ.

04026007a ಸಾಂಪ್ರತಂ ಚೈವ ಯತ್ಕಾರ್ಯಂ ತಚ್ಚ ಕ್ಷಿಪ್ರಮಕಾಲಿಕಂ|

04026007c ಕ್ರಿಯತಾಂ ಸಾಧು ಸಂಚಿಂತ್ಯ ವಾಸಶ್ಚೈಷಾಂ ಪ್ರಚಿಂತ್ಯತಾಂ||

04026008a ಯಥಾವತ್ಪಾಂಡುಪುತ್ರಾಣಾಂ ಸರ್ವಾರ್ಥೇಷು ಧೃತಾತ್ಮನಾಂ|

04026008c ದುರ್ಜ್ಞೇಯಾಃ ಖಲು ಶೂರಾಸ್ತೇ ಅಪಾಪಾಸ್ತಪಸಾ ವೃತಾಃ||

ಈಗ ಏನು ಮಾಡಬೇಕೆಂಬುದನ್ನು ಚೆನ್ನಾಗಿ ಆಲೋಚಿಸಿ, ಕಾಲ ಮೀರುವುದಕ್ಕೆ ಮೊದಲೇ ಬೇಗ ಮಾಡು. ಅಂತೆಯೇ, ಸರ್ವಾರ್ಥಗಳಲ್ಲೂ ಆತ್ಮಧೃತರಾದ ಪಾಂಡುಪುತ್ರರ ವಾಸಸ್ಥಾನದ ಕುರಿತು ಆಲೋಚಿಸು. ಶೂರರೂ ಪಾಪರಹಿತರೂ ತಪಸ್ವಿಗಳೂ ಆದ ಅವರನ್ನು ಪತ್ತೆ ಹಚ್ಚುವುದು ಅಸಾಧ್ಯ.

04026009a ಶುದ್ಧಾತ್ಮಾ ಗುಣವಾನ್ಪಾರ್ಥಃ ಸತ್ಯವಾನ್ನೀತಿಮಾಂ ಶುಚಿಃ|

04026009c ತೇಜೋರಾಶಿರಸಂಖ್ಯೇಯೋ ಗೃಹ್ಣೀಯಾದಪಿ ಚಕ್ಷುಷೀ||

ಯುಧಿಷ್ಠಿರನು ಶುದ್ಧಾತ್ಮ, ಗುಣವಂತ, ಸತ್ಯವಂತ, ನೀತಿವಂತ, ಶುಚಿ, ತೇಜೋರಾಶಿ, ಎದುರಿಸಲಾಗದವನು ಮತ್ತು ಕಣ್ಣುಗಳನ್ನೂ ಸೆರೆಹಿಡಿವುವಂಥವನು.

04026010a ವಿಜ್ಞಾಯ ಕ್ರಿಯತಾಂ ತಸ್ಮಾದ್ಭೂಯಶ್ಚ ಮೃಗಯಾಮಹೇ|

04026010c ಬ್ರಾಹ್ಮಣೈಶ್ಚಾರಕೈಃ ಸಿದ್ಧೈರ್ಯೇ ಚಾನ್ಯೇ ತದ್ವಿದೋ ಜನಾಃ||

ಆದಕಾರಣ, ಇವೆಲ್ಲವನ್ನೂ ತಿಳಿದು ಅಗತ್ಯವಾದುದನ್ನು ಮಾಡು. ಬ್ರಾಹ್ಮಣರ, ಚಾರರ, ಸಿದ್ಧರ ಮತ್ತು ಅವರನ್ನು ಬಲ್ಲ ಇತರ ಜನರ ಮೂಲಕ ಮತ್ತೊಮ್ಮೆ ಅವರನ್ನು ಹುಡುಕೋಣ.””

ಇತಿ ಶ್ರೀ ಮಹಾಭಾರತೇ ವಿರಾಟ ಪರ್ವಣಿ ಗೋಹರಣ ಪರ್ವಣಿ ದ್ರೋಣವಾಕ್ಯೇ ಷಡ್‌ವಿಂಶೋಽಧ್ಯಾಯಃ|

ಇದು ಶ್ರೀ ಮಹಾಭಾರತದಲ್ಲಿ ವಿರಾಟ ಪರ್ವದಲ್ಲಿ ಗೋಹರಣ ಪರ್ವದಲ್ಲಿ ದ್ರೋಣವಾಕ್ಯದಲ್ಲಿ ಇಪ್ಪತ್ತಾರನೆಯ ಅಧ್ಯಾಯವು.

Related image

Comments are closed.